ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

October 6, 2007 - 12:46pm — shreekant.mishrikoti

ಮೊಟ್ಟ ಮೊದಲು ಅಕ್ಷರಮಾಲೆಯಿಂದ ಸುರು ಮಾಡೋಣ ! ( ಸುರು=ಶುರು , ಪ್ರಾರಂಭ )
ಅಕ್ಷರಮಾಲೆ ಹೀಗಿದೆ ..... ಅ,ಆ,ಇ,ಈ .....
ಅದರಲ್ಲೇನು ವಿಶೇಷ ಅಂದ್ರಾ ....
ತಡೀರಿ , ಹೇಳ್ತೀನಿ ....
ನಾವು ’ಅ’ ಅನ್ನು ’ಅ’ ಎಂದು ಉಚ್ಚಾರ ಮಾಡುತ್ತೇವೆ .
ಅದರಲ್ಲೇನು ? ಎಲ್ರೂ ಹಾಗೇ ಮಾಡೋದು ಅಂತೀರಾ ?
ಇದೊಳ್ಳೆ ತಮಾಷೆ ... ( ನಾನು 'ಟ'ಗೆ 'ಟ' ಅನ್ನೋದು --> http://sampada.net/blog/shreekant_mishrikoti/15/02/2007/3192 ನೋಡಿ)

ನಾನು ಹೇಳ್ತಾ ಇರೋದು ಏನಂದ್ರೆ ...
ಈಗ ಒಂದು ಶಬ್ದವನ್ನು ತೆಗೆದುಕೊಳ್ಳಿ - ಅರಸ ... ಇದನ್ನು ಉಚ್ಚರಿಸೋವಾಗ ಈ ಶಬ್ದದ ಒಳಗಡೆ ’ಅ’ ಅನ್ನು ಹೇಗೆ ಉಚ್ಚರಿಸ್ತೇವೋ ಹಾಗೆ ಒಂಟಿ ಅಕ್ಷರ ’ಅ’ ಅನ್ನೂ ಹಾಗೇ ಉಚ್ಚರಿಸೋದು .....
ಈಗಲೂ ನಿಮಗೆ ತಿಳಿಯದಿದ್ದರೆ ಬೆಂಗಳೂರು ಕಡೆಗಳಲ್ಲಿ ಅ , ಆ , ಇ , ಈ ಅನ್ನು ಹೇಗೆ ಉಚ್ಚರಿಸ್ತಾರೆ ಗಮನಿಸಿ ..ಅಲ್ಲಿ ಆ, ಆಆ , ಇ , ಈ ಅಂತಾರೆ .....( ಉಳಿದ ಕಡೆ ಹೇಗೋ ? ನಾನು ಗಮನಿಸಿಲ್ಲ)

ಇದೇ ರೀತಿ ಕ, ಖ , ಗ, ಘ ಇತ್ಯಾದಿ ವ್ಯಂಜನಗಳನ್ನು ಅಕಾರಾಂತವಾಗೇ ಹ್ರಸ್ವವಾಗಿ ಉಚ್ಚರಿಸ್ತೀವಿ .

ಮುಂದಿನ ಕಂತಿನಲ್ಲಿ ... ಅ , ಆ ನಡುವಿನ ಇನ್ನೊಂದು ಸ್ವರ ? ಕುರಿತು ತಿಳಿಸುವೆ .

  • ಆಡುಭಾಷೆ
  • ಕನ್ನಡ
  • ಪ್ರಾದೇಶಿಕ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 531 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 6, 2007 - 3:18pm — mahesha

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

mahesha's picture

ಅಣ್ಣೋ... ಏನ್ ಹಿಂಗಂತೀರಿ.. !!

ನಾವ್ ಅ ಅನ್ನ ಅ ನೇ ಅನ್ನೋದು.. ಆದ್ರೇ.. ನೀವು

ಬೆಂಗಳೂರ್‍ ಅನ್ನು ಬೆಂಗಳೂರ ಅಂತ ಬರೆಯ್ತೀರಿ. ನೀವು ತುಸು ಹಿಂದಿಯೊರಂಗೆ.. ಅರೆ-ವ್ಯಂಜನವನ್ನ ಕ್)ನಾವು ಹೇಳೋ ಹಂಗೆ, ನೀವು ಅ, ಕ, ಖ, ಗ ಅನ್ನು ಹೇಳ್ತೀರಿ..

ಇನ್ನೊಂದು...

ಒಮ್ಮೆ ದ್ರಾವಿಡ ನುಡಿಬಗೆ, phonotics ಬಗ್ಗೆ ತುಸು ಓದಿಕೊಳ್ಳಿ ಬುದ್ದಿ.. ಕನ್ನಡ ದ್ರಾವಿಡ-ಕುಟುಂಬದ್ದು.. ನಾವು ತೆಂಕರ ಕನ್ನಡದಾಗೇ ದ್ರಾವಿಡತನ ಹೆಚ್ಚಿರೊದು.. ಅತ್ತ ಬಡಗಿನೊರು ಕನ್ನಡವನ್ನ ಮರಾಟಿ, ಉರ್ದು, ಹಿಂದಿಯ ನೆರಳಲ್ಲಿ ಉಲಿಯ್ತಾರೆ, ಅಂತ ನಮಗೆ ಅನ್ನಿಸ್ತದೆ. ನಾವು ಉಲಿಯೋ ಹಂಗೇ ತಮಿಳರು-ತೆಂಕಣದ ತೆಲುಗರೂ ನುಡಿಯೋದು.

ಇನ್ನೊಂದು ನಾವು ವ/ಒ, ಎ/ಯ ಇದಕ್ಕೆ ಹೆಚ್ಚು ಅಂತರ ತೋರಲ್ಲ. ಒಂದು=ವಂದು, ಎಲೆ=ಯಲೆ, ಎಂಟು=ಯಂಟು.. ಹಿಂಗೆ.. ಗಮನಿಸಿ.. ಕನ್ನಡದಾಗೆ ವಇಂದ, ಯ ಇಂದ ಮೊದಲಾಗುವ ಒರೆಗಳು ಬಲು ಕಡಮೆ ಅವೆ.

ಇಲ್ಲಿ ಒಂದು ಸಂಗತಿ.. Sanskritized/ಸಕ್ಕದದಂತೆ ಮತ್ತು ಪಾಗದದಂತೆ/Prakritized ಉಲಿಕೆ ಇರುವ ಕಡೆ, ಮಾದರಿ ಕೇರಳದಲ್ಲಿ ಇರೋ ಮಳಯಾಳ ಸಕ್ಕದಿಸಿದ ತಮಿಳೇ..., ಇರುವ ಉಲಿಕೆಯಲ್ಲಿ ಮೂಲದ ದ್ರಾವಿಡತನ( ಅಂದ್ರೆ native way)ಕಡಮೆ.

ಮೂಲ ದ್ರಾವಿಡರು ಮಹಾಪ್ರಾಣವನ್ನು ಉಲಿಯಲ್ಲ. ಆದ್ರೆ ಧಾರವಾಡ, ಇಲ್ಲಿ ಧಾ ಅನ್ನೋದು ಸಕ್ಕದ/ಪಾಗತದ ನೆರಳೇ ಹೊರತು ಕನ್ನಡದ ಗುಣವಲ್ಲ.
................

ನಾನು ಹೇಳಿದ್ದು ತಪ್ಪು-ಸರಿಯ ಬಗ್ಗೆ ಅಲ್ಲ. ಹಾಗೆ ಮಿಶ್ರಕೋಟಿಗಳೂ ನಾವು ತೆಂಕರು ’ಅ’ ಅನ್ನು ಎಳೆದು ತಪ್ಪಾಗಿ ಉಲಿಯುವೆವು ಎಂದಿಲ್ಲ ಎಂದೇ ಅಂದುಕೊಂಡಿವ್ನಿ. ಆದ್ರೆ ನುಡಿಯ ಮೂಲಗುಣ ಮತ್ತು ಅದಕ್ಕೆ ಹೊರಗಡೆಯಿಂದ ಬಂದ ಪ್ರಭಾವದ ಬಗ್ಗೆ ನಿಗ ಮಾಡಿದಾಗ.. ಯಾಕೆ ಯಾವ ಯಾವ ಜಾಗದ ಕಿರುನುಡಿ/ನುಡಿಬಗೆ ಬೇರೆ ಎಂದು ತಿಳಿಯುವುದು.

ನಾವು ತೆಂಕರ ಉಲಿಯು ಸಾಮಾನಿಯವಾಗೇ ತಮಿಳು-ತೆಲುಗು( ಆದ್ರೂ ನೋಡಿ ಬರೀ ದ್ರಾವಿಡನುಡಿಗಳಿಂದಲೇ) ಮುಂತಾದವುಗಳ ನೆರಳಿದೆ. ಹಾಗೆ ಕರಾವಳಿಯವರ ಉಲಿಕೆಯ ಮೇಲೆ ತುಳು, ಮಳಯಾಳಿ, ಕೊಂಕಣಿಯ ನೆರಳಿದೆ.. ಬಳ್ಳಾರಿ ಕನ್ನಡ ಮತ್ತು ಅದರ ಪಕ್ಕದ ಅನಂತಪುರದ ತೆಲುಗು ಬಲು ಹತ್ತಿರವಿದೆ..

ಹೀಗೇಏಎಎಎ ಧಾರವಾಡ, ಬೆಳಗಾವಿ ಕನ್ನಡವೂ ಮರಾಟಿ/ಪಾಗದ ನೆರಳನ್ನು ಹೊಂದಿದೆ. ಆದ್ರೆ.. ಈ ಮರಾಟಿ/ಪಾಗದ ದ್ರಾವಿಡದವಲ್ಲ... ಅದಕ್ಕೆ ಅದು ಬೇರೆಯಾಗಿದೆ..

ಕನ್ನಡ ಅಂದ್ರೆ ಅದು ಎಂದಿದ್ರೂ ದ್ರಾವಿಡಕುಟುಂಬದ್ದೇ, ಹಾಗು ಅದರ ಸಹಜ ಉಲಿಕೆ ತಮಿಳು-ತೆಲುಗುಗಳಿಗೆ ಹೊಂದುವುದೇ ಹೊರತು, ಸಕ್ಕದ/ಪಾಗದ/ಮರಾಟಿಗಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2007 - 3:21pm — mahesha

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

mahesha's picture

"ಮೂಲ ದ್ರಾವಿಡರು ಮಹಾಪ್ರಾಣವನ್ನು "

ಇಲ್ಲಿ ದ್ರಾವಿಡರು ಅನ್ನೋದನ್ನು ದಯವಿಟ್ಟು ’ದ್ರಾವಿಡನುಡಿಗರು’ ಎಂದು ತಿದ್ದಿ ಓದಿಕೊಳ್ರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 12:54pm — Khavi

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

Khavi's picture

ಮಹೇಶರೆ,

'ಅ' ಅನ್ನು 'ಅ' ಅನ್ನುವಾಗ ಬಡಗನ್ನಡದಲ್ಲಿ ಸಕ್ಕದ/ಪಾಗದದ/ಮರಾಟಿಯಂತ ಆರಿಯ ನುಡಿಯ ಅನುಕರಣೆ ಇದೆ ಎಂದು ಹೇಗೆ ಹೇಳ್ತೀರಿ...?
ಹಾಗೆನೇ 'ಅ' ಅನ್ನು 'ಆ' ಅಂತ ಅಂದರೆ ಅದು ದ್ರಾವಿಡ ಹೇಗಾಯ್ತು... ?

ಬೆಂಗಳೂರು ಬೆಂಗಳೂರ್ ಹೇಗಾಯ್ತು.... ?
ನಾವು ಹೇಳೋವಾಗ "ಬೆಂಗಳೂರು ಬಾಳ ಚೆಂದ ಅದ" ಅಂತಲೇ ಹೇಳೋದು... "ಬೆಂಗಳೂರ ಬಾಳ ಚೆಂದ ಅದ" ಅಂತ ಹೇಳಂಗಿಲ್ಲ

Quote:
ಮೂಲ ದ್ರಾವಿಡರು ಮಹಾಪ್ರಾಣವನ್ನು ಉಲಿಯಲ್ಲ. ಆದ್ರೆ ಧಾರವಾಡ, ಇಲ್ಲಿ ಧಾ ಅನ್ನೋದು ಸಕ್ಕದ/ಪಾಗತದ ನೆರಳೇ ಹೊರತು ಕನ್ನಡದ ಗುಣವಲ್ಲ.

ನಿಮ್ಮ ಊರು.. ಭೋಗಾದಿ ತಾನೆ.. ಇಲ್ಲಿ "ಭ"ಗೆ ಯಾವ ನೆರಳಿದೆ..? Smiling :)

ಮಿಶ್ರಿಕೋಟಿಗಳು ಹೇಳಿದ್ದು ನಿಜ ಏಕೆಂದರೆ.. ನಾನು ಹೊಸಕೋಟೆಗೆ ಹೋದಾಗ ಅಲ್ಲಿರೋ ಮಕ್ಕಳು (ನಮ್ಮ ಮಾಮನ ಮಕ್ಕಳು) ಅ ಅನ್ನು "ಆ" ಎಂದೇ ಉಲಿಯುತ್ತಿದ್ದರು...
ಇದನ್ನ ಅವರಿಗೆ ನಾನು ತಿದ್ದಲಿಕ್ಕೆ ಹೋಗಿ Fail ಆಗಿದ್ದು ಉಂಟು...

ಸಕ್ಕದ/ಪಾಗದದ/ಮರಾಟಿಯಂತ ಆರಿಯ ನುಡಿಯ ನೆರಳು ಬಡಗಣದವರಿಗೆ ಇರಬಾರದು ನಿಜ..
ಆದರೆ "ಕನ್ನಡ ದ್ರಾವಿಡ-ಕುಟುಂಬದ್ದು" ಅಂತ ತೆಂಕಣದಲ್ಲಿ ತಮಿಳು/ತೆಲಗು ಇವುಗಳ ನೆರಳಿನಲ್ಲಿ ಬಾಳಬಾರದು.....
ಇದೆಲ್ಲ ಅಗೋದು ಸಹಜ.. ಅದನ್ನು ತಪ್ಪಿಸೋದು ತುಸು ಎಡರು... ಆದರೆ ಹಾಗೆ ಎಡರು ಅಂತ ಬಿಡಲಿಕ್ಕೆ ಬರೋದಿಲ್ಲ..
ಒಟ್ಟಿನಲ್ಲಿ ಅಚ್ಚಕನ್ನಡದಲ್ಲೆ ಬಾಳೆಹಣ್ಣನ್ನು ತಿಂದಂತೆ ... ಹುಲುಸಾಗಿ ಉಲಿಯಬೇಕು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 1:22pm — mahesha

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

mahesha's picture

ಕವಿ...

ನಾನು ಹೇಳಿದರಲ್ಲಿ ಕೆಲವು ಗೋಜಲುಗಳಿರಬೇಕು..

ಸಡಕ ಎಂದು ಬರೆದು ಸಡಕ್ ಎನ್ನೋದು ಹಿಂದಿ/ಮರಾಟಿ ಬಗೆ ಅಲ್ವಾ? ಹಾಗೇ ಶಾಪ್ ಅನ್ನು ಶಾಪ ಎಂದು ಬರೇತಾರೆ ಎಂದು ವೀಣಾ ಅವರು ಹೇಳಿದ್ದಾರೆ. ನಾನು ಇರ ಬಗ್ಗೇ ಹೇಳಿದ್ದು...

ಇಲ್ಲಿ ನೀವೇ ಗಮನಿಸಿಕೊಳ್ರಿ....

ದ್ರಾವಿಡನುಡಿಗಳಾದ ಕನ್ನಡ-ತೆಲುಗು-ತಮಿಳು ಇವಲ್ಲಿ ಈ ತೆರದವು ಇಲ್ಲ. ಅದಕ್ಕೆ ನಾನು ಹೇಳಿದ್ದು..

'ಭೋಗಾದಿ' ಕನ್ನಡವಲ್ಲ. ಮಹೇಶದಲ್ಲಿ 'ಶ' ಹೇಗೋ ಹಾಗೆ.. ಮಹೇಶ ಕನ್ನಡದ ಒರೆಯಲ್ಲ.

ಒಟ್ಟು: ದಿಡೀರೆಂದು ನಿಲ್ಲುವ 'ಅ' ಇದು ಹಿಂದಿ ಮುಂದಾದ ನುಡಿಗಳಲ್ಲಿ ಸಾಮಾನಿಯ. ಆದ್ರೆ.. ದಿಡೀರೆಂದು ನಿಲ್ಲದೇ ಎಳೆದು ನಿಲ್ಲಿಸುವುದು ತಮಿಳು-ತೆಲುಗು-ಕನ್ನಡದಂತಹ ದ್ರಾವಿಡನುಡಿಗಳಲ್ಲಿ ಸಾಮಾನಿಯ. ಇಷ್ಟೇ...

ಹಾಗಂತ ದಾರವಾಡದ ಕನ್ನಡ ತಪ್ಪು/ಕೀಳೂ ಎಂದಲ್ಲ. ಆದ್ರೆ ಅದಕ್ಕೆ ಕೆಲವು ನೆರೆಹೊರೆಯ ಪ್ರಭಾವ/ನೆರಳಿದೆ ಎಂದೆನಷ್ಟೆ. ಹಾಗೆ ನಮ್ಮ ಕನ್ನಡದಲ್ಲೂ ತಮಿಳಿನ ನೆರಳಿದೆ.. ನಾವು ಹಲವು ಸರತಿ 'ಗ', 'ಚ', ಇವುಗಳನ್ನು ಸರಿಯಾಗಿ ಹೇಳಲ್ಲ..ಮಾದರಿ 'ಹಸ್ಸು'(ಹಚ್ಚಿಸು)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 1:41pm — shreekant.mishrikoti

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

shreekant.mishrikoti's picture

ನಾನು ಧಾರವಾಡ ಕನ್ನಡ ಸರಿ ಎಂದಾಗಲಿ , ಬೇರೆಯದು ಸರಿಯಲ್ಲ ಎಂದಾಗಲೀ ಹೇಳುತ್ತಿಲ್ಲ

ಧಾರವಾಡ ಕನ್ನಡದ ಕುರಿತು ಒಂದಿಷ್ಟು ವಿಷಯ ತಿಳಿಸ ಬಯಸುತ್ತೇನೆ .
ಅದನ್ನು ಕಲಿತು ಆಡಬಯಸುವವರಿಗೆ , ಆಸಕ್ತರಿಗೆ
ಸರಿಯಾದ ವಿಷಯ ತಿಳಿಸುವದು ನನ್ನ ಉದ್ದೇಶ ಅಷ್ಟೇ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 2:24pm — savithru

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

savithru's picture

ನಾವು ಯಾರೂ ಈ ವಿಷಯವನ್ನು ಮೇಲೂ-ಕೀಳು ಎಂಬ ಭಾವದಿಂದ ನೋಡುತ್ತಿಲ್ಲ... ಕನ್ನಡದ ಬಗ್ಗೆ ತಿಳಿವಳಿಕೆಗಾಗಿ ಅಷ್ಟೇ ನಮ್ಮ ಪ್ರತಿಕ್ರಿಯೆ...

ಮುಂದುವರೆಸಿ... ಚೆನ್ನಾಗಿದೆ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 3:08pm — mahesha

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

mahesha's picture

ಸವಿತಾ ಮಾತಿಗೆ ಸರಿ.. ಬೇಸರಬೇಡ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 9:34am — savithru

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

savithru's picture

ನಮ್ಮ ಊರು ಮಲೆನಾಡು ( ಚಿಕ್ಕಮಗಳೂರು ) ಜಿಲ್ಲೆ ಯ ಬಯಲು ಸೀಮೆ!

ನನಗೆ ನೆನಪಿರುವ ಮಟ್ಟಿಗೆ ( ನನ್ನ ಬಾಲ್ಯದ ಶಿಕ್ಷಣ - ಕನ್ನಡ ಮಾಧ್ಯಮ) ನಾವು ಹೇಳುತ್ತಾ ಇದ್ದದ್ದು ಅ , ಆ ಎಂದೇ!..

ಮೇಷ್ಟ್ರು ಚಿಕ್ಕ ಮಕ್ಕಳಿಗೆ ಬಾಯೀ ಪಾಠ ಮಾಡಿಸುವಾಗ ಅಥ್ವಾ ಜೋರಾಗಿ ಹೇಳಿಕೊಡುವಾಗ ಆ, ಆಆ , ಈ ಈಈ ಆಗಬಹುದು. ಇದು ತಿಳಿಯದೇ, ಗಮನಕ್ಕೆ ಬಾರದೇ ಆಗುವ, ಕೆಲವು ಮೇಷ್ಟ್ರುಗಳಿಂದ ಮಾತ್ರ ( ಅಂದರೆ ಒಂದು ಭಾಗದ ಎಲ್ಲರಿಂದಲೂ ಆಗದ) ಆಗುವ ತಪ್ಪು.

ಅ ಆ ಎನ್ನುವುದಕ್ಕಿಂತಲೂ .. ಆ, ಆಆ ಎನ್ನುವುದರಲ್ಲೇ ಏನೋ ಮಜ!!?.. ಅ ಅನ್ನಬೇಕಾದರೆ ಉಸಿರನ್ನು ಆರ್ದಕ್ಕೆ ನಿಲ್ಲಿಸಬೇಕು... ಸ್ವಲ್ಪ ಪ್ರಯತ್ನವನ್ನು ಬೇಡುತ್ತೆ! ಆದ್ರೆ ಆ, ಆಆ ಎನ್ನಬೇಕಾದರೆ ಮನಸ್ಸು ನಿರಮ್ಮಳ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 12:11pm — veena

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

veena's picture

veena.

ಧಾರವಾಡದಲ್ಲಿ ಕೆಲವೊಂದು ಅಂಗಡಿಗಳ ತಲೆಬರಹವನ್ನು ನೋಡಿ ಈ ರೀತಿ ಇರುತ್ತದೆ.
ಮಧು ಪಾನ ಶಾಪ (ಮದು ಪಾನ್ ಶಾಪ್)
ಪ್ರೀತಿಸ ಬೇಕರಿ (ಪ್ರೀತೀಸ್ ಬೇಕರಿ) ಈ ಬರಹ ಬಸ್ ಸ್ಟ್ಯಾಂಡ್ ಪಕ್ಕ ಇದೆ.
ಹೋಟೆಲ ಸಿಲ್ವರ ಪ್ಲೇಟ (ಹೋಟೆಲ್ ಸಿಲ್ವರ್ ಪ್ಲೇಟ್)
ಅಷ್ಟೇ ಅಲ್ಲ್ ಇಲ್ಲಿಯ ಜನ ತರಂಗವನ್ನು ತರಂಗ್ ಎಂದೂ ಕರ್ಮವೀರ, ನಾಟಕ, ಕನ್ನಡವನ್ನು
ಕರ್ಮವೀರ್, ನಾಟಕ್ , ಕನ್ನಡ್ ಎಂದೂ ಹೇಳುತ್ತಾರೆ. ಈ ವಿಷಯವಾಗಿ ನನ್ನ ಸಹೋದ್ಯೋಗಿಗಳಲ್ಲಿ
ಸಾಕಷ್ಟು ಬಾರಿ ಚರ್ಚೆಗೆ ಇಳಿದಿದ್ದು ಇದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 1:57pm — mahesha

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

mahesha's picture

"ಅಷ್ಟೇ ಅಲ್ಲ್ ಇಲ್ಲಿಯ ಜನ ತರಂಗವನ್ನು ತರಂಗ್ ಎಂದೂ ಕರ್ಮವೀರ, ನಾಟಕ, ಕನ್ನಡವನ್ನು
ಕರ್ಮವೀರ್, ನಾಟಕ್ , ಕನ್ನಡ್ ಎಂದೂ ಹೇಳುತ್ತಾರೆ. ಈ ವಿಷಯವಾಗಿ ನನ್ನ ಸಹೋದ್ಯೋಗಿಗಳಲ್ಲಿ
ಸಾಕಷ್ಟು ಬಾರಿ ಚರ್ಚೆಗೆ ಇಳಿದಿದ್ದು ಇದೆ."

Kavi.. ವೀಣಾರು ಹೇಳಿದಂತೆ ...

ಗಮನಿಸಿರಿ.. ಹೀಗೆ ನಾಟಕ್, ಕನ್ನಡ್ ಅನ್ನೋದು ಹಿಂದಿ, ಮರಾಟಿಯವರು ಅಲ್ವಾ!! ಅದೇ ತೆಲುಗು/ತಮಿಳರು ಹಾಗೆ ಹೇಳಲ್ಲ..

ತೆಲುಗನ್ನು Italian of east ಅಂತಾರೆ, ಏಕೆಂದ್ರೆ ತೆಲುಗಲ್ಲಿ ಸಾಮಾನಿಯ ಎಲ್ಲ ಒರೆಗಳು vowel ending. ಹಾಗೇ ಹೆಚ್ಚು ಕನ್ನಡದ ಬಗೆಗಳಲ್ಲೂ ಕೂಡ.

ಬೆಂಗಳೂರಲ್ಲಿ ಇರುವ ಈ ಹೆಸರುಹಲಗೇ ನೋಡಿದ್ದೀರ? "ಕನ್ನಡ ಸಾಹಿತ್ಯ ಪರಿಷತ್ತು"
ಇಲ್ಲಿ 'ಪರಿಷತ್' ಇದು ಸಕ್ಕದ ಆದ್ರೇ, 'ಪರಿಷತ್ತು' ಎನ್ನೋದು ಪೂರ ಕನ್ನಡಯಿಸಿಕೆ.! ಹೀಗೆ ಸಾಮಾನಿಯ(ಹೆಚ್ಚು ಮಂದಿ) ಕನ್ನಡದಲ್ಲಿ ನಾವು ವ್ಯಂಜನದಿಂದ ಕೊನೆ ಮಾಡಲ್ಲ, ಬದಲು ಸ್ವರದಿಂದ ಕೊನೆಮಾಡ್ತೀವಿ( ತೆಲುಗವಿನಂತೆ )

ಇದಕ್ಕಿಂತ ಹೊರತಾಗಿ ಇರುವುದರಿಂದಲೇ "ಧಾರವಾಡ್ ಕನ್ನಡ್ ವಿಶೇಷ್ ಐತ್ರಿ" Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 6:46pm — kpbolumbu

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

kpbolumbu's picture

ಮಹೇಶ,
"ನಾಟಕ್, ಕನ್ನಡ್ ಅನ್ನೋದು ಹಿಂದಿ, ಮರಾಟಿಯವರು ಅಲ್ವಾ!! ಅದೇ ತೆಲುಗು/ತಮಿಳರು ಹಾಗೆ ಹೇಳಲ್ಲ.."

ತೆಲುಗಿನವರು ಹಾಗೆ ಹೇಳದಿದ್ದರೂ ತೆಲುಗಿನ ಮೇಲೆ ಉರ್ದು, ಹಿ೦ದಿ ಸೇರಿದ೦ತೆ ಉಳಿದ ನುಡಿಗಳ ಪ್ರಭಾವ ಹೆಚ್ಚು. ಹಲವು ಒರೆಗಳನ್ನು ಹಿ೦ದಿಯಿ೦ದ ಹಾಗೇ ಎತ್ತಿಕೊಳ್ಳುತ್ತಾರೆ. ಉದಾ: ರೋಜು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 7:01pm — mahesha

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

mahesha's picture

ಬೊಳುಂಬು..

ಉದಾ: ರೋಜು.

ಗಮನಿಸಿ.. ಹಿಂದಿಯಲ್ಲಿ ಅದು ರೋz(ಜ್), ಆದ್ರೆ ತೆಲುಗು ಅದನ್ನು ರೋಜು/zu ಮಾಡಿಕೊಂಡಿದೆ... ಇಲ್ಲಿ ಉರ್ದು ಒರೆವನ್ನು ತೆಲುಗುಯಿಸುವಿಕೆ ಮಾಡಿದ್ದಾರೆ. ಇಲ್ಲಿ ಬರೀ ಒರೆಯನ್ನು ಪಡೆದಿದೆ ಹೊರತು, ಅದನ್ನೂ ಉರ್ದು ಮಾದರಿಯಲ್ಲೇ ಉಲಿಯುವುದಿಲ್ಲ...

ಹಾಗೆ...

ಅಸಲ್ = ಅಸಲು
ನಕಲ್ = ನಕಲು
shop = ಷಾಪು ( ಮಂದುಲ ಷಾಪು = drug store )

ನಾನು ಈ ಅಸ'ಲು', ನಕ'ಲು', ಷಾ'ಪು' ಇದರ ಬಗ್ಗೆ ಹೇಳಿದ್ದು.. ಈ ಬಗೆಯ ಮಾರ್ಪು ಕನ್ನಡದಾಗೂ ಐತಲ್ಲ... ಇದು ತಮಿಳಲ್ಲೂ ಇದೆ ಎಂದು ಹೇಳಬೋದು.

ಹೈದರಾಬಾದನ್ನು ಅವರು ಹೈದರಾಬಾದು ಅಂತವೇ ಹೇಳೋದು..

ಹೀಗೇ
ಷರತ್ = ಷರತ್ತು
ಖದ್ = ಖದ್ದು
ನುಕ್ಸಾನ್ = ನುಕಸಾನು
zOರ್‍ = ಜೋರು
ನೀಯತ್ = ನೀಯತ್ತು
ಕೀಮತ್ = ಕೀಮತ್ತು
ನಮಾz = ನಮಾಜು( ಇದು ಇದೆಯಲ್ಲ )

ಹೀಗೆ ಸ್ವರದಿಂದ ಕೊನೆಮಾಡುವುದು ಕನ್ನಡ-ತೆಲುಗುವಿನ ಗುಣ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 11:45pm — hamsanandi

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

hamsanandi's picture

ಇದೇ ರೀತಿ ತಾನೇ, ನಾವು ಹಲವಾರು ಇಂಗ್ಲಿಶ್ ಪದಗಳನ್ನು ಕನ್ನಡಯಿಸಿರುವುದು ?

ಸ್ಕೂಲು, ರೈಲು, ಬಸ್ಸು. ಗೇಟು, ಸೂಟು, ಬ್ರೆಡ್ಡು ...ಮೊದಲಾದುವು !

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 6:56pm — Khavi

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

Khavi's picture

ನೀವು ಹೇಳಿದ್ದು ಸರಿ..

ಆದರ ಕನ್ನಡ್ , ನಾಟಕ್ ಅನ್ನೋರು.. ತುಸು ಮರಾಟಿ ಹತ್ತಿರ ಇದ್ದೋರು...
ಹೆಚ್ಚಾಗಿ ಎರಡೂ ನುಡಿ (ಕನ್ನಡ/ಮರಾಟಿ) ಯಾವ ಊರಿನಲ್ಲಿ ಬಳಸುತ್ತಾರೋ ಅಲ್ಲಿ ಇದು ಕಂಡು ಬರುವುದು..

ನಾವೆಲ್ಲ ಕನ್ನಡಾ, ನಾಟಕಾ ಅಂತ 'ಆ' ಸೇರಿ ಹೇಳ್ತೀವಿ.. ಮಾದರಿ..

ಅವನಿಗಿ.. ಕನ್ನಡಾ ಬರಂಗಿಲ್ಲ..
ಇವತ್ತು.. ನಾಟಕಾ ನೋಡಲಾಕ ಹೋಗಿದ್ದ್ಯಾ..

ಹಿಂಗ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 7:08pm — mahesha

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

mahesha's picture

ಕವಿ ಅಣ್ಣ..

ನೀವು ಮುದುವೊಳಲು ಅಂದ್ರೆ ಕೊಪ್ಪಳ, ಬಾಗಲಕೋಟೆಯವರು ಅಂತ ನನ್ನ ನೆನೆಪು.. ನೀವು ಹೇಳೊದ್ರಾಗೂ ನೋಡಿ, ನಾವು ದಿಡೀರಂತ ಅರೆ-ವ್ಯಂಜನದಲ್ಲಿ ನಿಲ್ಲಿಸೊಲ್ಲೆವು..

ಇದನ್ನೇ ನಾ ಆಗಿನಿಂದ ಹೇಳಿದ್ದು.

"ಅವನಿಗಿ.. ಕನ್ನಡಾ ಬರಂಗಿಲ್ಲ..
ಇವತ್ತು.. ನಾಟಕಾ ನೋಡಲಾಕ ಹೋಗಿದ್ದ್ಯಾ.."

ಇವನ್ನು ಇತ್ತ

ಪಟ್ಟಣದೊರು
"ಅವನ್ಗೆ ಕನ್ನಡ-ಬರೊಲ್ಲ/ಬರಲ್ಲ"
"ಇವೊತ್ತು/ಇವತ್ತು ನಾಟಕ-ನೋಡಕ್ಕೆ ಹೋಗಿದ್ಯಾ?"

ಹಳ್ಳಿಯೊರು( ನನಗೆ ಗೊತ್ತಿರುವ )
"ಅವಂಗೆ ಕನ್ನಡ ಬರಕ್ಕಿಲ್ಲ"
"ಇವೊತ್ತು ನಾಟಕ ನೋಡಕ್ಕೆ ವೋಗಿದ್ಯ?"

ಪಟ್ಟಣದವರು ಸಾಮಾನಿಯ ತುಸು ಬಿಡಿಸಿ ಬಿಡಿಸಿ ಮಾತಾಡೊದುಂಟು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 7:58pm — kpbolumbu

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

kpbolumbu's picture

'ನುಕಸಾನು' ಎನ್ನುವುದಕ್ಕಿ೦ತ 'ಲುಕ್ಸಾನು' ಎನ್ನುವುದೇ ಹೆಚ್ಚು, ಮತ್ತು ಇದನ್ನು ಒಳನಾಡಿನಲ್ಲಿ ಬಳಸುತ್ತಾರೆ. ಉದಾ: ಭೈರಪ್ಪನವರ ಕಾದ೦ಬರಿಗಳು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 8, 2007 - 8:05pm — kpbolumbu

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

kpbolumbu's picture

ಮಹೇಶ,

"ಇವೊತ್ತು/ಇವತ್ತು ನಾಟಕ-ನೋಡಕ್ಕೆ ಹೋಗಿದ್ಯಾ?"

ನಾನು ಕ೦ಡ೦ತೆ ಅದು " ಇವತ್ತು ನಾಟ್ಕಾ ನೋಡಕ್ ಹೋಗಿದ್ದಾ?"
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 9, 2007 - 12:24am — ವೈಭವ

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

ವೈಭವ's picture

ನಮ್ಮ ಮೈಸೂರು/ಬೆಂಗಳೂರಿನ ಕಡೆ ಒರೆಗಳು ಬೆಂಜನದಿಂದ ಕೊನೆಗೊಳ್ಳುತ್ತದಲ್ಲ.!!!
ಮಾದರಿ:
೧) ಸುಮ್ನೆ 'ಕಿರಿಕ್' ಮಾಡ್ತಾವನ್ ನೋಡು
೨) ಈ ಹಾಡು ಗವನಿಸು ಮಾಯ್ಸ

"ಕೂರಕ್ ಕುಕ್ರಳ್ಳಿ ಕೆರೆ , ತೇಲಕ್ ಕಾರಂಜಿ ಕೆರೆ.... ಲವ್ವಿಗೆ ( ಇದು ಕನ್ನಡನೆ 'ಒಲವು' ನಲ್ಲಿ 'ಒ' ತೆಗೆದು ಇಂಗಲೀಸನವರು 'ಲವು' ಅಂತ ಮಾಡ್ಕಂಡವ್ರೆ Smiling )... ಸಿಹಿ ಲವ್ವಿಗೆ...."

ಇಲ್ಲಿ 'ಕೂರಕ್' , 'ತೇಲಕ್' ಬೆಂಜನದಲ್ಲಿ ಕೊನೆಗೊಳ್ಳುತ್ತಿದಿಯಲ್ಲ.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 9, 2007 - 8:19am — mahesha

ಉ: ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)

mahesha's picture

ಬರತ..

ಆದ್ರೆ ಮಾತನ್ನು ನಾವು ಯಾವಾಗಲೂ ಸೊರದಿಂದಲೇ ಮುಗಿಸೋದು..

ಸಕ್ಕದಲ್ಲಿ.. "ದಧ್ಮೌ ಪೃಥಕ್ ಪೃಥಕ್" ಹೀಗೆ ಒಂದು ವಾಕ್ಯ ಮುಗೀತದೆ. ಇದನ್ನೇ ಕನ್ನಡದೊರು ಹೇಳಿದ್ರೇ "ದಧ್ಮೌ ಪೃಥಕ್ ಪೃಥಕ್ಕು" ಎಂದು..

ಒಮ್ಮೆ "ಕೂರಕ್" ಇದನ್ನು ಒಂಟಿಯಾಗಿ ನಾವು "ಕೂರಕ್ಕೆ" ಎಂದೇ ಉಲಿಯೋದು.

ಇಲ್ಲಿ ವಾಕ್ಯದ ನುಡುವಲ್ಲಿ ಸೊರಗಳು ಬಿದ್ದು ಹೋಗುವುದು ಬೇರೆ ಸಂಗತಿ...

ತೆಲುಗಲ್ಲೂ ಹೀಗ ಆಯ್ತದೆ. "ನೇನ್ ಚಪ್ಯಾನ್ ಕದಾ"( ನೇನು ಚಪ್ಯಾನು ಕದಾ/ ನಾನ್ ಹೇಳಿದ್ನಲ್ಲ ) ).. ಆದ್ರೆ ಸಾಲು ಮುಗಿಯೋದು ಯಾವಾಗಲೂ ಸೊರದಿಂದ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)
  • ಅಂವ , ಇಂವ , ಅಕಿ , ಇಕಿ ........ (ಧಾರವಾಡ ಕನ್ನಡ- ೩)
  • ನಾನು 'ಟ'ಗೆ 'ಟ' ಅನ್ನೋದು!
  • ನಾನೂ ಉಬುಂಟು ಹಾಕ್ಕೊಂಡೆ ( ಕನ್ನಡದಲ್ಲಿ ಕಂಪ್ಯುಟರ್ ಪಾಠ! )
  • ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 549 ಅತಿಥಿಗಳು ಆನ್ಲೈನ್ ಇರುವರು.


ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator