ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? ನಿಮ್ಮ ಅಂಬೋಣ ಏನು?
ಕನ್ನಡಕ್ಕೆ ಅನುವಾದ ಕುರಿತು ಹೊಸ ಆಲೋಚನೆ
ನಾನು ಕುವೆಂಪುರವರ 'ಮಲೆಗಳಲ್ಲಿ ಮದುಮಗಳು' ಮತ್ತು 'ಕಾನೂರು ಹೆಗ್ಗಡಿತಿ' ಓದಿಲ್ಲ ( ಅಷ್ಟೇ ಏಕೆ , ಭೈರಪ್ಪ , ಕಾರಂತರ ಕಾದಂಬರಿಗಳನ್ನೂ ಓದಿಲ್ಲ) .
ವರ್ಷಕ್ಕೊಮ್ಮೆ ಮುಂಬೈಯಲ್ಲಿ Strand Book exhibiTion and Sale ನಡೆಯುತ್ತದೆ . ಭಾರೀ ಪ್ರಮಾಣದಲ್ಲಿ ರಿಯಾಯಿತಿ ಕೊಡುವದರಿಂದ ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳು ಮಾರಾಟವಾಗುತ್ತವೆ . ( ನಿಮಗೆ ಗೊತ್ತಿರಬಹುದು . ಈ Strand Book stall ಬಹಳ ಹೆಸರುವಾಸಿ . ಅತಿ ಗಣ್ಯ ವ್ಯಕ್ತಿಗಳು ಹಿಂದೆ ಭೇಟಿ ಕೊಡುತ್ತಿದ್ದರಂತೆ . ಇದನ್ನು ಆರಂಭಿಸಿದವರು ಶ್ಯಾನುಭಾಗ್ ಎಂಬ ಕನ್ನಡಿಗರು. ಪುಸ್ತಕ ಸಂಸ್ಕೃತಿ ಬೆಳೆಸುವಲ್ಲಿನ ಅವರ ಕೆಲಸಕ್ಕೆ ಪದ್ಮಭೂಷಣವೋ ಪದ್ಮಶ್ರೀಯೋ ಬಂದಿದೆ. ಅಂತರ್ಜಲದಲ್ಲಿ Strand Book ಎಂದು ಹುದುಕಿದರೆ ಈ ಬಗ್ಗೆ ನಿಮಗೆ ಮಾಹಿತಿ ಸಿಗುತ್ತದೆ)
ಈ ಸಲ ನಾನು ಹೋದಾಗ ಅಲ್ಲಿ 'ಕಾನೂರು ಹೆಗ್ಗಡಿತಿ'ಯ ಇಂಗ್ಲೀಷ್ ಅನುವಾದ (ಪೆಂಗ್ವಿನ್ ಪುಸ್ತಕ) ನೋಡಿ ಖರೀದಿಸಿದೆ. ಕನ್ನಡ ಕಾದಂಬರಿಯನ್ನು ಇಂಗ್ಲೀಷಿನಲ್ಲಿ ಓದುತ್ತಿದ್ದೇನೆ. (ಅಲ್ಲಿ ನಾನು ಬೆಂಗಳೂರಿನಿಂದ ಮುನ್ನೂರು ಕೊಟ್ಟು ತರಿಸಿದ ಜಯಂತ್ ಕಾಯ್ಕಿಣಿಯವರ Dots and Lines ಕೂಡ ಇತ್ತು. ಬೆಲೆ ಬರೀ ಎರಡು ನೂರು!)
House of kanooru ಹೆಸರಿನಲ್ಲಿರುವ ಈ ಕಾದಂಬರಿಯನ್ನು ಓದುವಾಗ ಗಮನಿಸಿದೆ . ಗುಲಗಂಜಿ , ಹರಿವೆ, ಹೆಗ್ಗಡಿತಿ, ತುಳಸಿ ಇಂಥ ಶಬ್ದಗಳನ್ನು ಹಾಗೆಯೇ ಬಳಸಿದ್ದಾರೆ. ಅಯ್ಯೋ , ಮಾರಾಯಾ ಎಂಬ ಉದ್ಗಾರಗಳನ್ನೂ ಹಾಗೆಯೇ ಇಟ್ಟಿದ್ದಾರೆ.
ಬಹುಶ: ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿದ್ದರೆ ಸರಿಯೆನಿಸುತ್ತದೆ - ಒಂದು ಭಾಷೆಯಿಂದ ಇನ್ನೊಂದಕ್ಕೆ ಅನುವಾದಿಸುವಾಗ - ಸಾಧ್ಯವಿದ್ದಲ್ಲಿ ಮತ್ತು ಸಾಧ್ಯವಿದ್ದಷ್ಟು ಮಟ್ಟಿಗೆ ಎರಡನೆಯ ಭಾಷೆಯ ಶಬ್ದಗಳನ್ನೇ ಉಪಯೋಗಿಸಬೇಕು. ಸರಿಯಾದ ಶಬ್ದಗಳಿಲ್ಲದಿದ್ದರೆ ಮೂಲ ಭಾಷೆಯ ಶಬ್ದಗಳನ್ನೇ ತೆಗೆದುಕೊಳ್ಳಬೇಕು. ಅನಗತ್ಯವಾಗಿ ಹೊಸ ಶಬ್ದ ರಚನೆಮಾಡಿ ಬಳಕೆಗೆ ತರುವ ಅಗತ್ಯ ಇದೆಯೇ ? ಹಾಗೆ ತರುವದಾದರೂ ಅಂಥ ಹೊಸಶಬ್ದಗಳ ಪ್ರಮಾಣ ಮಿತಿ ಮೀರಬಾರದು. ಮಿತಿ ಮೀರದೆ ಇದ್ದಲ್ಲಿ ಬಳಕೆಗೆ ಬರುವ ಸಾಧ್ಯತೆ ಇರುತ್ತದೆ. ಇಲ್ಲದಿದ್ದರೆ ಜನ ಸಂಪೂರ್ಣವಾಗಿಯೇ ತಿರಸ್ಕರಿಸಿಯಾರು.
ತಂತ್ರಾಂಶವನ್ನು ಅನುವಾದಿಸುವಾಗ ಹೊಸ ಶಬ್ದಗಳಾದ ಡೌನ್ಲೋಡ್ , ರ್‍ಯಾಂಡಂ , ಅಪ್ಲೋಡ್ , ಟ್ಯಾಬ್ ಗಳನ್ನು ಹಾಗೆಯೇ ಬರೆಯುವದು ಸರಿಯೆನಿಸುತ್ತದೆ.ಅದೇ ಅರ್ಥ ಕೊಡುವ ಕನ್ನಡ ಶಬ್ದ ಇದ್ದಲ್ಲಿ ಮಾತ್ರ ಕನ್ನಡ ಶಬ್ದವನ್ನೇ ಬಳಸಬೇಕು. ಹೊಸದೇ ಆದ ಶಬ್ದ ರಚನೆ ಮಾತ್ರ ಬಲು ಅಪರೂಪವಾಗಿ ಮಾಡಬೇಕು.
ಏನೋ ನನ್ನ ಅಲ್ಪ ಬುದ್ಧಿಗೆ ತೋಚಿದ್ದನ್ನು ಹೇಳಿದ್ದೇನೆ ? ನಿಮ್ಮ ಅಂಬೋಣ ಏನು? ಏನಂತೀರಿ?
[ ಅಂದ ಹಾಗೆ ಒಂದಿಷ್ಟು ಹಳೆಯ 'ಹೊಸ ಶಬ್ದಗಳು '
೧. ಗ್ರಾಮಾಫೋನ್ ರೆಕಾರ್ಡುಗಳಿಗೆ , ಗಾನ ದೋಸೆ , ಗಾನ ತಟ್ಟೆ ಶಬ್ದ ಕಾಯಿನ್ ಮಾಡಿದ್ದರು! ಕೊನೆಗೆ ಧ್ವನಿಮುದ್ರಿಕೆ ಉಳಿಯಿತು - ಗ್ರಾಂಥಿಕ ಭಾಷೆಯಲ್ಲಿ . ಆಡುಮಾತಿನಲ್ಲಿ ರೆಕಾರ್ಡೇ ಉಳಿಯಿತು.
೨. ಅವನು ತನ್ನ ಮೋಟಾರಿನ ಕೊಂಬನ್ನು ಮೊಳಗಿಸಿದನು - ಕಾರಿನ ಹಾರ್ನು ಮಾಡಿದನು ಎಂಬುದಕ್ಕೆ!
೩. ಕ್ಯಾಸೆಟ್ಟಿಗೆ - ಧ್ವನಿಕರಂಡಿಕೆ ! ಕೊನೆಗೆ ಗ್ರಾಂಥಿಕ ಭಾಷೆಯಲ್ಲಿ ಧ್ವನಿಸುರಳಿಯೂ ಆಡುಮಾತಿನಲ್ಲಿ ಕ್ಯಾಸೆಟ್ಟು ಉಳಿದಿದೆ]

- shreekant.mishrikoti ರವರ ಬ್ಲಾಗ್
- Login or register to post comments
- 555 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ?
ಇಸ್ಮಾಯಿಲ್ ಇದೇ ಕುರಿತು ಸಂಪದ ಪ್ರಾರಂಭವಾದ ಹೊಸತರಲ್ಲಿ ಭಾಷಾ ಶುದ್ಧಿಯ ನಟ್ಟು ಬೋಲ್ಟುಗಳು ಎಂಬ ಲೇಖನ ಬರೆದಿದ್ದರು.
ಓ ಎಲ್ ಎನ್ ಸ್ವಾಮಿಯವರು ಇದೇ ಕುರಿತು:
* ಶುದ್ಧ ಕನ್ನಡ?
* ಭಾಷೆಯಲ್ಲಿ ಸರಿ ಮತ್ತು ತಪ್ಪು
ಎಂಬ ಲೇಖನಗಳನ್ನು ಬರೆದಿದ್ದರು.
ಮಾತಿನಲ್ಲಿ ಎಷ್ಟೋ ಇಂಗ್ಲೀಷ್ ಪದಗಳು ರೂಢಿಯಾಗಿ ಹೋಗಿವೆ. ಕಂಪ್ಯೂಟರ್ ಮುಂದೆ ಕುಳಿತು - "ಸರಿ ಆ ಬ್ರೌಸರ್ ವಿಂಡೋ ಕ್ಲೋಸ್ ಮಾಡು" ಅಂತೀವೆ ಹೊರತು "ಸರಿ, ಆ ಜಾಲವೀಕ್ಷಕ ಕಿಟಕಿ ಮುಚ್ಚು" ಅನ್ನೋದಿಲ್ಲವಲ್ಲ
ಫೀಲ್ಡರ್ ಕ್ಯಾಚ್ ಹಿಡಿಯುತ್ತಾನೆ. ಬಸ್ಸು ಬಸ್ ಸ್ಟಾಂಡಿನಲ್ಲಿ ನಿಲ್ಲತ್ತೆ. ಕಾರಿನಲ್ಲಿ ಬ್ರೇಕ್ ಹಿಡಿಯುತ್ತೇವೆ. ಅಲ್ವೆ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ...
ನನ್ನ ಅನಿಸಿಕೆ ಕೆಳಕಂಡಂತಿದೆ. ಚರ್ಚೆಯನ್ನು "ಉದ್ದಿಸುವ" ಉದ್ದೇಶ ನನ್ನದಲ್ಲ; ಆದರೆ ಕೆಲವೊಂದು ಸಂದೇಹಗಳು ಹಾಗೇ ಉಳಿದಿವೆ. ಹಾಗಾಗಿ ಬರೆಯುತ್ತಿದ್ದೇನೆ. ನಿಮಗೇನನ್ನಿಸಿತು ಅಂತ ಹೇಳಿ.
೧. ಹೌದು, ಕೆಲವೊಂದು ಪದಗಳಿಗೆ ಬದಲಾಗಿ, ಸುಮ್ಮನೆ ತರಲೇಬೇಕೂಂತ ನಾವು ಕನ್ನಡ ಪದಗಳನ್ನು ತಂದರೂ, ಜನ ಅವನ್ನು ತಿರಸ್ಕರಿಸಿದಲ್ಲಿ ನಮ್ಮ ಪ್ರಯತ್ನವೆಲ್ಲ ನೀರಿನಲ್ಲಿ ಹೋಮ ಮಾಡಿದಂತೆಯೇ ಸರಿ. ಹಾಗೆಂದು ಎಲ್ಲಾ ಪದಗಳನ್ನೂ, "ಇದೇ, ಈಗಿರುವುದೇ ಸುಲಭ" ಅಂತ ಒಪ್ಪಿಕೊಂಡಲ್ಲಿ ಕೊನೆಗೆ ಕನ್ನಡೀಕರಣ, ಕನ್ನಡದ ಕಂಪ್ಯೂಟರ್ ಅನ್ನುವುದರ ಅರ್ಥ ಏನು? ಇಂಗ್ಲಿಷ್ ಪದಗಳನ್ನು ಕನ್ನಡದಲ್ಲಿ ಬರೆದ ಮಾತ್ರಕ್ಕೆ ಅವು ಕನ್ನಡದ್ದೇ ಆಗುತ್ತವೆಯೇ? ಅಲ್ಲದೇ ಇದರಿಂದ ನಾವು ಕನ್ನಡ ಬಳಕೆಯನ್ನು ಇನ್ನಷ್ಟು ಹಿಂದೆ ನೂಕಿದಂತೆ ಆಗುವುದಿಲ್ಲವೇ? ನಾನು ಮೊದಲೇ ಹೇಳಿದಂತೆ, ಇದು ಎಲ್ಲಾ ಪದಗಳಿಗೂ ಅನ್ವಯಿಸುವುದಿಲ್ಲ. ಕೆಲವೊಂದು ಪದಗಳನ್ನು ಹಾಗೆಯೇ (ಈಗಿರುವ ಇಂಗ್ಲಿಷ್ ಪದಗಳಂತೆ) ಬಳಸುವುದು ಖಂಡಿತ ಒಳ್ಳೆಯದು. ಆದರೆ ಈ ಒಂದು "ಆರೋಗ್ಯಕರ ಮಿಶ್ರಣ"ವನ್ನು (healthy mix of English and Kannada words) ಹೇಗೆ ಹದಕ್ಕೆ ತರೋದು? ಇದು ನಮ್ಮ ಮುಂದಿನ ದೊಡ್ಡ ಪ್ರಶ್ನೆ ಅಂತ ನನ್ನ ಅನಿಸಿಕೆ.
೨. ಕೆಲವು ಕನ್ನಡ ಪದಗಳನ್ನು, ಕೆಲವೊಮ್ಮೆ, ಕನ್ನಡಕ್ಕಾಗಿಯಾದರೂ ಬಳಕೆಗೆ ತರಬೇಕಾಗುತ್ತದೆ. ಇಲ್ಲವಾದಲ್ಲಿ ಈಗ ಪುಸ್ತಕಗಳಲ್ಲಿ ಮಾತ್ರ ಉಳಿದಿರುವ ಆ ಪದಗಳು ನಾಳೆ ಎಲ್ಲೂ ಕಣ್ಣಿಗೂ ಸಿಕ್ಕೋದಿಲ್ಲ.
೩. ಪುಸ್ತಕದ ಅನುವಾದ ತಲುಪುವುದಕ್ಕಿಂತ ಹೆಚ್ಚು ಜನರನ್ನು ಕಂಪ್ಯೂಟರಿನ ಅನುವಾದ ತಲುಪುತ್ತೆ ಅಲ್ಲವೇ? (ನಾಳೆ ಕನ್ನಡದ ಕಂಪ್ಯೂಟರ್ ಎಲ್ಲೆಡೆ ಬಳಕೆಗೆ ಬಂದಾಗ) ಹಾಗಿದ್ದಾಗ, ಇಂತಹ ಕಡೆ ನಾವು ಆದಷ್ಟೂ ಹೆಚ್ಚು ಕನ್ನಡ ಪದಗಳನ್ನು (ಸರಳವಾದ ಪದಗಳನ್ನು) ಬಳಸಿದರೆ ಒಳ್ಳೆಯದಲ್ಲವೇ? ಇದರಿಂದ ಕನ್ನಡದ ಬಳಕೆಗೆ ಇನ್ನಷ್ಟು ಬಲ ಬರುತ್ತದೆ ಅಲ್ಲವೇ?
ಹೆಚ್ಚು ಜನ ತಮ್ಮ ಅಭಿಪ್ರಾಯಗಳನ್ನು ತಿಳಿಸಿದಲ್ಲಿ ಅನುವಾದಕರಿಗೂ ಒಂದು "ಗೊತ್ತು-ಗುರಿ" ಸಿಕ್ಕಿದಂತಾಗುತ್ತದೆ. ಜನಾಭಿಪ್ರಾಯ ಯಾವ ಕಡೆಗಿದೆ ಅನ್ನುವುದು ಸ್ಪಷ್ಟವಾಗುತ್ತದೆ. ಹಾಗಾಗಿ, ನಿಮ್ಮ ಅಭಿಪ್ರಾಯವನ್ನು, ಒಂದೆರಡು ಸಾಲುಗಳಲ್ಲಾದರೂ ಪರವಾಗಿಲ್ಲ, ತಪ್ಪದೇ ಬರೆಯಿರಿ.
- ಶ್ಯಾಮ್ ಕಿಶೋರ್
ಉ: ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ.
ಹೌದು, ಯಾವುದೇ ಆಗಲಿ extreme ಚೆಂದವಿರೋದಿಲ್ಲ. ನೀವು ಹೇಳಿದಂತೆ ಒಂದು "balance" ಕಂಡುಕೊಳ್ಳಬೇಕು.
>>> ನಿಮ್ಮ ಅಭಿಪ್ರಾಯವನ್ನು, ಒಂದೆರಡು ಸಾಲುಗಳಲ್ಲಾದರೂ ಪರವಾಗಿಲ್ಲ, ತಪ್ಪದೇ ಬರೆಯಿರಿ
ಸರಿಯಾದ ಮಾತು. ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ದಾಖಲಿಸಬೇಕು. ಈಗ ಅಭಿಪ್ರಾಯ ತಿಳಿಸದೆ ಅನುವಾದ ಹೊರಬಂದ ಮೇಲೆ ತಿಳಿಸಿದರೆ "ವೋಟು ಹಾಕದೆ ರಾಜಕಾರಣಿಯನ್ನು ಗೆಲ್ಲಿಸಿ ಕೊನೆಯಲ್ಲಿ ಕೂಗಾಡಿದಂತೆ" ಆಗುವುದು!
ನಿಮ್ಮ ಅಭಿಪ್ರಾಯ ಕೆಲವೇ ಪದಗಳಲ್ಲಿದ್ದರೂ ಪರವಾಗಿಲ್ಲ. ಎಲ್ಲರೂ ಭಾಗವಹಿಸಿ!
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
re: random ಅಂತಹ ಪದ ಕನ್ನಡವಾಗಬಾರದು
ಬೆಂಗಳೂರಿನಲ್ಲಿ ಜನರು ಮಾತನಾಡುವ ಕನ್ನಡವು ನಮಗೆ ಆದರ್ಶವಾಗದಿರಲಿ.ಹಾಗಾದರೆ ಕನ್ನಡ ಕನ್ನಡವಾಗಿ ಉಳಿಯದೆ ಆಂಗ್ಲಮಯವಾದೀತು. ಗ್ರಾಂಥಿಕ ಕನ್ನಡ ಮತ್ತು ಮಾತನಾಡುವ ಕನ್ನಡದ ನಡುವೆ ಅಂತರ ಇದ್ದೇ ಇರುತ್ತದೆ. ಹಾಗೆಂದು ತಂತ್ರಾಂಶದಂತಹ ಹೆಚ್ಚು ಜನರು ಬಳಸುವ,ದಾಖಲೆಯಲ್ಲಿ ಉಳಿಯುವೆಡೆ ಹೆಚ್ಚು ಹೆಚ್ಚು ಶುದ್ಧ ಕನ್ನಡ ಪದಗಳ ಬಳಕೆ ಮಾಡುವುದು ಅನಿವಾರ್ಯ.ಸರಳ,ಸೂಕ್ತ ಕನ್ನಡ ಪದಗಳಿದ್ದರೆ ಅವಕ್ಕೆ ಆದ್ಯತೆ ನೀಡೋಣ. randomನಂತಹ ಕನ್ನಡಕ್ಕೆ ಅಪರಿಚಿತ ಪದಗಳನ್ನು ಬಳಸುವುದು ಅರ್ಥಹೀನ.
ಉ: random ಅಂತಹ ಪದ ಕನ್ನಡವಾಗಬಾರದು
ಮತ್ತೆ "random" ಪುರಾಣವೆ?
ಅದು ಕನ್ನಡ ಪದವಾಗಲಿ ಎಂದು ಹೇಳಿದವರಾರು?
ಗಮನಿಸಿ: ಇಲ್ಲಿ ಯಾವುದೋ ಒಂದು ಪದದ ಬಗ್ಗೆ ತರ್ಕ ಮಾಡುತ್ತ ಕುಳಿತರೆ ಮತ್ತೊಮ್ಮೆ ನೀರಿನಲ್ಲಿ ಹೋಮ ಮಾಡಿದಂತೆ. ಯಾವುದೇ ಪದದ ಅನುವಾದದ ಬಗ್ಗೆ ನಿಮ್ಮ ಅಭಿಪ್ರಾಯ ಬೇರೆಡೆ ದಾಖಲಿಸಬಹುದು - ಇಲ್ಲಿ ಮಾತ್ರ ನಿಮ್ಮ general ಅಭಿಪ್ರಾಯವನ್ನು ತಿಳಿಸಿ.
ಒಬ್ಬೊಬ್ಬರಿಗೆ ಒಂದೊಂದು ಪದ ಸರಿಯೆನಿಸುತ್ತದೆ. ಅದರ ಬಗ್ಗೆ ಏನೂ ಮಾಡಲಾಗದು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ನನಗನ್ನಿಸಿದ್ದು: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ.
ಆರೋಗ್ಯಕರ ಮಿಶ್ರಣವೇ ಸರಿ. english ಅಂತ ಬಿಟ್ಟೇ ಬಿಡುವುದು ಯಾಕೆ. ಕೆಲವು ಶಬ್ದಗಳನ್ನು ಕನ್ನಡೀಕರಿಸಬಹುದು ಅಲ್ಲವೇ - ಅರ್ಥವೂ ಆಗುತ್ತೆ, ಕನ್ನಡವೂ ಶ್ರೀಮಂತವಾಗುತ್ತೆ.
A quick point to be noted your honour
".......ತಂತ್ರಾಂಶವನ್ನು ಅನುವಾದಿಸುವಾಗ ಹೊಸ ಶಬ್ದಗಳಾದ ಡೌನ್ಲೋಡ್ , ರ್‍ಯಾಂಡಂ"
Random ಅನ್ನು ರ್ಯಾಂಡಮ್ಮಾಗಿಯೇ, ಅಥವಾ ರ್‌ಯಾಂಡಂ ಆಗಿಯೇ ಬಳಸಬೇಕು ಅಂತಾ ಏನು ಇಲ್ಲ. ರಾಂಡಮ್ ಅಂತಲೂ ಕರೆಕ್ಟಾಗಿ ಬಳಸಬಹುದು / ಬರೆಯಬಹುದು.
Re:point ಅದಲ್ಲ..
ರಾಂಡಮ್ ಸರಿಯಾಗಿ ಬರೆಯಲಾಗದು ,ಹಾಗಾಗಿ ಬಳಕೆ ಬೇಡ ಎಂದಲ್ಲ..ಅದು ಕನ್ನಡಕ್ಕೆ ಅಪರಿಚಿತ ಪದ ಎಂದು ನನ್ನನಿಸಿಕೆ.
Re:ಕ್ಷಮಿಸಿ ...ಒಂದೇ ಅನಿಸಿಕೆ ಹಲವಾರು ಬಾರಿ ಪ್ರಕಟವಾಗಿ ಬಿಡ್ತು
ಬೇಕೆಂದು ಹೀಗೆ ಮಾಡಿದ್ದಲ್ಲ...
ಉ:ಕ್ಷಮಿಸಿ ...ಒಂದೇ ಅನಿಸಿಕೆ ಹಲವಾರು ಬಾರಿ ಪ್ರಕಟವಾಗಿ ಬಿಡ್ತು
ಸರಿಪಡಿಸಲಾಗಿದೆ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re : ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ?
ನನಗನ್ನಿಸಿದ್ದು
ಆದಷ್ಟೂ ಕನ್ನಡ ಪದ ಬಳಸುವುದು. ಹೊಸದನ್ನು ಸೃಷ್ಟಿಸಲು ಸಾಧ್ಯವಾದರೆ ಸೃಷ್ಟಿಸುವುದು. ಹಳೆಯದನ್ನು ಅಳವಡಿಸಬಹುದಾದರೆ ಅಳವಡಿಸಿವುದು. ಏನೂ ಹೊಳೆಯದಿದ್ದರೆ, ಇಂಗ್ಲೀಷೇ ಸುಲಭವೆನ್ನಿಸಿದರೇ ಅದನ್ನೇ ಬಳಸುವುದು.
ಜನರಿಗೆ ಇಷ್ಟವಾದರೆ ಉಪಯೋಗಿಸುತ್ತಾರೆ,ಉಳಿಸುತ್ತಾರೆ. ಕಷ್ಟವಾದರೆ ಮರೆಯುತ್ತಾರೆ, ಅಳಿಸುತ್ತಾರೆ.
ನಾವು ಕನ್ನಡ ಪದ ಉಪಯೋಗಿಸುವುದರಿಂದ ಜನರನ್ನೇನು ದಾರಿತಪ್ಪಿಸುತ್ತಿಲ್ಲವಲ್ಲಾ!. ಒಂದು ಪದಕ್ಕೆ ಸಮಾನಾರ್ಥಕೊಡುವ ಬಹಳ ಪದಗಳಿದ್ದಷ್ಟೂ ಒಳ್ಳೆಯದೆ. ಸಂದರ್ಭಕ್ಕೆ ತಕ್ಕಂತೆ ಬಳಸಬಹುದು.
ಸುಚರ
Re: ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? ನಿಮ್ಮ ಅಂಬೋಣ ಏನು?
ದಯವಿಟ್ಟು ಬಹು ಹಿಂದೆಯೇ ಬರೆದ ನನ್ನ ಲೇಖನ "ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಬರೆವಣಿಗೆ" ಓದಿ. ನೀವು ತಿಳಿಸಿದ ಎಲ್ಲ ವಿಷಯಗಳನ್ನು ಅಲ್ಲಿ ವಿವರವಾಗಿ ಚರ್ಚಿಸಿದ್ದೇನೆ. ಕೆಲವು ಕಡೆ ನನ್ನ ಅಭಿಪ್ರಾಯ, ತೀರ್ಮಾನಗಳನ್ನೂ ಕೊಟ್ಟಿದ್ದೇನೆ. ಅಂದ ಹಾಗೆ ಈ ಲೇಖನದಲ್ಲಿ ನಾನು ಹೇಳಿರುವ ಅಭಿಪ್ರಾಯಗಳನ್ನು ಶ್ರೀ ಪೂರ್ಣಚಂದ್ರ ತೇಜಸ್ವಿಯವರೂ ಒಪ್ಪಿಕೊಂಡಿದ್ದಾರೆ, ಅದೂ 100%
ಸಿಗೋಣ,
ಪವನಜ
-----------
Vishva Kannada
Think globally, Act locally