ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಧಾರವಾಡ ಕನ್ನಡ- ಭಾಗ ೩
ಪ್ರಮಾಣ ಕನ್ನಡದ ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು ’ಇ’ ದಿಂದ ಕೊನೆ ಆಗುತ್ತವೆ
ಉದಾ: ಶಾಲೆ - ಸಾಲಿ
ಮನೆ - ಮನಿ
ಆನೆ - ಆನಿ
ರಾಟೆ - ರಾಟಿ
ಇತ್ಯಾದಿ
ಎಲ್ಲ ಶಬ್ದಗಳೂ ಈ ತರ ಆಗ್ತಾವ ಅಂತ ಅಲ್ಲ ;
ಕಡೆಯ .... ಕಡೀ ಆದರೂ
ಕಡೆ ... ಕಡೆ ಎಂದೇ ಇರುವದು ..
ನಿಂ ಕಡೆ .. (ನಿಮ್ಮ ಹತ್ರ .. ನಿಮ್ಮ ಭಾಗದಲ್ಲಿ )
ಆಮೇಲೆ ಇನ್ನೊಂದು ....
ಇದು ಖರೇ ಅಂದ್ರ ಧಾರವಾಡಕ್ಕಷ್ಟS ಸೀಮಿತ ಅಲ್ಲ . ಇದು ಉಳಕೀ ಕಡೇನೂ ಲಾಗೂ ಆಗ್ತದ ...
ಇದು ನನ್ನ ಲಕ್ಷ್ಯಕ್ಕೆ ಬಂದ ವಿಷ್ಯ .
ಇದನ್ನು ಬ್ಯಾರೇದಾವರೂ ಹೇಳಿರಬಹುದು / ಗಮನಿಸಿರಬಹುದು ...
ಮೊದಲು ಉದಾಹರಣೆನೇ ನೋಡೋಣ .. ನಿಯಮ ಹೇಳೋದು ನಂಗ ಸುಲಭ ಆಗ್ತದ
ಬೇರೆ - ಬ್ಯಾರೆ
ಬೇನೆ - ಬ್ಯಾನಿ
ಪೇಟೆ - ಪ್ಯಾಟಿ
ಮೇಲೆ - ಮ್ಯಾಲೆ
ಬೇಡ - ಬ್ಯಾಡ
ಕೋಟೆ - ಕ್ವಾಟಿ ,
ತೋಟ - ತ್ವಾಟ
ಜೋಳ - ಜ್ವಾಳ
ಜೋಕೆ - ಜ್ವಾಕಿ
ಹೋದ ( ಹೋದನು) - ಹ್ವಾದ ಅಂತನೂ ಬಳಸುವರು .
ಅಂದರ ’ಏ’ ಇದ್ದಲ್ಲೆಲ್ಲ ’ಯ’ , ’ಓ’ ಇದ್ದಲ್ಲೆಲ್ಲ ’ವ’ !
ಹಳೇ ಮೈಸೂರು ಮತ್ತಿತರ ಗ್ರಾಮೀಣ ಕಡೆಗಳಲ್ಲೂ ಇದು ಕಂಡು ಬರ್ತದ .

- shreekant.mishrikoti ರವರ ಬ್ಲಾಗ್
- Login or register to post comments
- 249 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಧಾರವಾಡ ಕನ್ನಡ- ಭಾಗ ೩
ಮಿಶ್ರಿಕೊಟಿಯವರs,
ಭಾಳ ಛಂದ ಹೇಳಿದ್ರಿ ನೋಡ್ರಿ. ಕನ್ನಡ ಭಾಷಾ ಎಷ್ಟು ಥರ ಮಾತಾಡಿದ್ರೂ ಅಸ್ಟ್ ಛಂದ. ಧಾರವಾಡ ಕನ್ನಡದ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ವಿಚಾರ ಬರೀರಿ.
ಕೇಶವ
Visit my blog:
http://kannada-nudi.blogspot.com