ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಶ್ರೀಕಾಂತ ಮಿಶ್ರಿಕೋಟಿ
ಪರಿಚಯ
ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.
ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
ಹೊಸ ಶಬ್ದಗಳನ್ನು ರೂಪಿಸುವಾಗ ಸಂಸ್ಕೃತದ ಕಡೆಗೆ ನೋಡಬಾರದು ... ಎಂದೆಲ್ಲ ನಮ್ಮಲ್ಲಿ ಅನೇಕರು ಹೇಳುತ್ತಾರೆ .
ಇತ್ತೀಚೆಗೆ ಕನ್ನಡದಲ್ಲಿ ಎರಡು ಹೊಸ ಸಂಸ್ಕೃತ ಶಬ್ದಗಳು ಚಾಲ್ತಿಗೆ ಬಂದಿವೆ ..
ನಿಮ್ಮ ಗಮನಕ್ಕೆ ಬಂದಿಲ್ಲವೇ ?
ಸಂಚಲನ ( ತಳಮಳ ? , ಚಟುವಟಿಕೆ?)
ಮತ್ತು
ಲೋಕಾರ್ಪಣೆ ( ಹಿಂದೆಲ್ಲ ಪುಸ್ತಕನ ಬಿಡುಗಡೆ ಮಾಡ್ತಿದ್ರಪ ! )
ಸರಿ , ನಾನೂ ಈ ಪುಟ್ಟ ಲೇಖನಾನ ಲೋಕಾರ್ಪಣೆ ಮಾಡ್ತೀನಿ :)
- shreekant.mishrikoti's blog
- Login or register to post comments
- 703 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
ಮಿಶ್ರಿಕೋಟಿ, ನಿಮ್ಮ ಬರಹ ಓದಿದರೆ ಅದ್ಹೇಗೋ ಸಿಕ್ಕಾಪಟ್ಟೆ ನಗು ಬಂದ್ಬಿಡತ್ತೆ ಕಣ್ರೀ. ಹೇಳಬೇಕಾದ್ದನ್ನು ಚಿಕ್ಕದಾಗಿ, ಚೊಕ್ಕವಾಗಿ ಹೇಳಿಬಡ್ತೀರಾ :ಚಪ್ಪಾಳೆ: :)
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
ಹೆದ್ದಾರಿ, ಅಣೆಕಟ್ಟೆ, ರೈಲ್ವೇ ಹಳಿ, ಇತ್ಯಾದಿಗಳ ಸಮರ್ಪಣೆ ರಾಷ್ಟ್ರಕಷ್ಟೇ ಸೀಮಿತವಾಗಿರುತ್ತಿತು. ಪುಸ್ತಗಳು ಲೋಕಕ್ಕೆ ಅರ್ಪಣೆಯಾಗುತ್ತಿದೆ! :-)
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
ಅಯ್ಯಯ್ಯಪ್ಪಾ, ದಯವಿಟ್ಟು ಇದನ್ನು ಓದಬೇಡಿ ;) ಈ ಭವದ್ಲೋಕದಲ್ಲಿ :) ಏನೇನೇನೇನೋ ಲೋಕಾರ್ಪಣೆ ಆಗಿದೆ, ಆಗ್ತಾ ಇದೆ.
ಹರಿಹರಪುರದಲ್ಲಿ ಹಿಂದೂ ರುದ್ರಭೂಮಿ ಲೋಕಾರ್ಪಣೆ
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
ಭವದ್ಲೋಕ ತಪ್ಪು ಭವಲ್ಲೋಕ ಸರಿ
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
ಹು...
ತಲ್ಲಿಂಗಂ!
=====================================
ಮಾಯ್ಸ!
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
ಹು...
ತಲ್ಲಿಂಗಂ! ತಲ್ಲೀನ
=====================================
ಮಾಯ್ಸ!
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
:)
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
ಹಾಗೆ, ’ಮುಖ್ಯಾಂಶಗಳು’ ವಿನಲ್ಲಿದ್ದ ಕನ್ನಡದ ’ಗಳು’ ಗಪ್ಪಾಗಿ(ಮಾಯವಾಗಿ) ’ಪ್ರಮುಖಾಂಶ’ ವಾಗಿ ಮಾರ್ಪಾಡಾಗಿದೆ. - ಕಸ್ತೂರಿ ವಾರ್ತೆ.
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
"ಅಗ್ರ ರಾಷ್ಟ್ರೀಯ ವಾರ್ತೆ" ಅಂತ ಬರೀ ಈ ಬಿಜೆಪಿ-ಜೆಡಿ ಎಸ್ ಕಿತ್ತಾಟ ತೋರಾಟ. ಇಲ್ಲಿ ಅಗ್ರ ಯಾವುದು?
ಇನ್ನು ಈ ’ಪ್ರಪ್ರಥಮ’ ಅನ್ನೋದು ಯಾವ ಸೀಮೆ ಸಕ್ಕದವೋ! ( ಇದು ಕನ್ನಡ ವ್ಯಾಕರಣವನ್ನು ಸಕ್ಕದದ ಮೇಲೆ ಆರೋಪ(ಣೆ) ಮಾಡಿರೋದು :) )
ಸಮ್ಮಿಶ್ರ ಸರಕಾರ.. ಅನ್ನೋದು ಎಶ್ಟು ತಪ್ಪು.. ಅದೇನಿದ್ರೂ ಕುಮಿಶ್ರ!
ಸಮ್ಮಿಶ್ರ ಸರಕಾರ ಅನ್ನೊ ಬದಲು ಜಂಟಿ ಸರಕಾರ/ಕೂಟ ಸರಕಾರ ಅನ್ನಕ್ಕೇ ಏನ್ ದಾಡಿ?
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
ಪ್ರಪ್ರಥಮ ಅಂತ ಸಕ್ಕದದಲ್ಲಿ ಇಲ್ವ
ಹಾಗಾದರೆ ನೀವು ಸಕ್ಕದದಲ್ಲಿ 'ಮೊಟ್ಟಮೊದಲು' ಅನ್ನೋದನ್ನ ಹೇಗೆ ಹೇಳ್ತೀರಿ?
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
ಪ್ರಥಮ, ಆದಿ, ಇವೆಲ್ಲ ಮೊಟ್ಟಮೊದಲು ಅಂತಾನೆ...
ಹಚ್ಚಹಸಿರು ಅನ್ನು ಸಕ್ಕದಲ್ಲಿ ಹರಿತ್ ಅಂತ ಇಲ್ವೇ ಹರಿಧರಿತ್ ಅಂತಾರೆ ಅನ್ನಿಸ್ತದೆ...
ಆದ್ರೆ ಮೊಟ್ಟ, ಹಚ್ಚ, ಹೀಗೆ ಬರೋದು ನಮ್ಮ ದ್ರಾವಿಡ ನುಡಿಗಳಲ್ಲಿ ಮಾತ್ರ!
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
ಮೊಟ್ಟಮೊದಲು ತಪ್ಪು ಮೊತ್ತಮೊದಲು ಸರಿ. ಹಾಗೆಯೇ ತುಟ್ಟ ತುದಿ ತಪ್ಪು. ತುತ್ತ ತುದಿ ಸರಿ. ಏಕೆಂದರೆ ಮೊದಲು ಹಾಗೂ ತುದಿ ಶಬ್ದದ ಎರಡನೆಯ ಅಕ್ಷರ ’ದ್’ ಅದನ್ನು ಒತ್ತಿ ಹೇೞುವಾಗ ಅದೇ ವರ್ಗದ ಮೊದಲಕ್ಷರ ’ತ್ತ್’ ಬರಬೇಕು. ನಟ್ಟನಡು ಸರಿ. ಹಾಗೆಯೇ ಕಟ್ಟಕಡೆ ಕೂಡ ಸರಿ.
ಉ: ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
ಹಚ್ಚಹಸಿರು.. ಇಲ್ಲ ಹಚ್ ಬೇರು ಎರಡು ಸರತಿ
ಮೊತ್ತಮೊದಲು ಇಲ್ಲಿ ಮುತ್ ಬೇರು ಎರಡು ಸರತಿ
ಆದರೆ ನಟ್ಟನಡು, ಕಟ್ಟಕಡೆ ಇವು ಸರಿ...
=====================================
ಮಾಯ್ಸ!