ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

October 8, 2007 - 1:31pm — shreekant.mishrikoti

ಆ ಎಂದು ಬಾಯಿ ತೆರೆಯದೆ ’ಅ’ ಅನ್ನೇ ದೀರ್ಘಕಾಲ ಉಚ್ಚರಿಸುವ ಪದ್ದತಿ ನಮ್ಮಲ್ಲಿದೆ .
(ಇದನ್ನು ಹಿಂದೆ ’S' ಸಂಕೇತದಿಂದ ಸೂಚಿಸುತ್ತಿದ್ದರು . ಈಗ ಅದನ್ನು ನೀವು ನೋಡಲಿಕ್ಕಿಲ್ಲ . ಈ ಚಿಹ್ನೆ ಇಲ್ಲದಿರುವಾಗ ಮಾತಿನಲ್ಲಿ ಕೊಡುವ ಒತ್ತು ಬರಹದಲ್ಲಿ ಇಲ್ಲವಾಗುತ್ತದೆ .)

ಉದಾಹರಣೆ ಗೆ

ನಾನೇ (ಪ್ರ) - ನಾನS(ಧಾ)
ಅವನೇ (ಪ್ರ) - ಅವನS(ಧಾ)
ಹಾಗೆಯೇ(ಪ್ರ),ಹಾಗೇ - ಹಾಂಗS(ಧಾ)
ಹೀಗೆಯೇ(ಪ್ರ),ಹಾಗೇ - ಹಿಂಗS(ಧಾ)

ಇತ್ಯಾದಿ .

ಇಲ್ಲಿ (ಧಾ) - ಅಂದರೆ ಧಾರವಾಡ ಕನ್ನಡ
(ಪ್ರ) - ಅಂದರೆ ಪ್ರಮಾಣ ಕನ್ನಡ

  • ಆಡುಭಾಷೆ
  • ಕನ್ನಡ
  • ಧಾರವಾಡ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 505 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 8, 2007 - 1:59pm — mahesha

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

mahesha's picture

ಸಕ್ಕತ್.. ಚನ್ನಾಗಿದೆ..

ಇವು ನಮ್ಮೆಡೆ

ನಾನೇ (ಪ್ರ) - ನಾನೇಯ
ಅವನೇ (ಪ್ರ) - ಅವನೇಯ
ಹಾಗೆಯೇ(ಪ್ರ),ಹಾಗೇ - ಹಂಗೇಯ
ಹೀಗೆಯೇ(ಪ್ರ),ಹಾಗೇ - ಹಿಂಗೇಯ

ಆಯ್ತವೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 2:03pm — mahesha

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

mahesha's picture

ಬೆಂಗಳೂರು-ಮೈಸೂರಿನ ಪಟ್ಟಣದೋರು

ನಾನೇ (ಪ್ರ) - ನಾನೇನೇ
ಅವನೇ (ಪ್ರ) - ಅವನೇನೇ
ಹಾಗೆಯೇ(ಪ್ರ),ಹಾಗೇ - ಹಾಗೇನೇ
ಹೀಗೆಯೇ(ಪ್ರ),ಹಾಗೇ - ಹೀಗೇನೇ

ಅಂತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 3:19pm — Sunil Jayaprakash

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

Sunil Jayaprakash's picture

ಮಹೇಶ, ಇಷ್ಟಲ್ಲದೆ, ನಾನೇನೆಯ, ಅವನೇನೆಯ, ಹಾಗೇನೇನೆಯ(ಹಂಗೇನೆಯ), ಹೀಗೇನೇನೆಯ(ಹಿಂಗೇನೆಯ) ಎಂಬ ಬಳಕೆಗಳೂ ಇದೆ. ಬಹುಶಃ ತುಮಕೂರು, ತಿಪಟೂರು, ತುರುವೇಕೆರೆ ಕಡೆ ಇವುಗಳ ಬಳಕೆ ಹೆಚ್ಚಿರಬಹುದು.

ಮಿಶ್ರಿಕೋಟಿ, ಒಳ್ಳೆಯ ಪ್ರಯತ್ನ, ಮುಂದುವರಿಯಲಿ, ಜೋರಾಗಿ ಸಾಗಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 3:46pm — mahesha

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

mahesha's picture

ಹೌದೋ...

ಬೋಶ ಮುದುಕರು ಹೆಚ್ಚು ಹಂಗೆ ಹೇಳಬೋದು...

ಇತ್ತಿತ್ತಿಲ್ಲ ಅನ್ನೋ ಹಾಗೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 2:13pm — savithru

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

savithru's picture

ಮಹೇಶ ಆವ್ರು ಬರೆದ ರೀತಿನೇ ನಮ್ಮ ಜಾಗದಲ್ಲಿ ಬಳಸ್ತೀವಿ.

ನಾನೇ (ಪ್ರ) ..... ನಾನೇಯ / ನಾನೇ ss
ಅವನೇ (ಪ್ರ) .... ಅವ್ನೇಯ / ಅವ್ನೇ ss
ಹಾಗೆಯೇ(ಪ್ರ),ಹಾಗೇ .....ಹಂಗೇಯ / ಹಂಗೇ ss
ಹೀಗೆಯೇ(ಪ್ರ),ಹಾಗೇ ...... ಹಿಂಗೇಯ / ಹಿಂಗೇ ss

ಆಗ್ತವೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 4:35pm — Khavi

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

Khavi's picture

ಬಿಜಾಪೂರು ಮತ್ತು ಬಾಗಲಕೋಟೆಗಳಲ್ಲಿ... ಇವುಗಳಿಗೆ.. "ಅಳ" ಅನ್ನುವ ಕೊನೆಯೊರೆ ಸೇರಿಸಿ.. ಹೀಗೆ ಹೇಳುತ್ತೇವೆ..

ನಾನೇ (ಪ್ರ) ..... ನಾನೇಯಳ / ನಾನೇ ss
ಅವನೇ (ಪ್ರ) .... ಅವ್ನೇಯಳ / ಅವ್ನೇ ss
ಹಾಗೆಯೇ(ಪ್ರ),ಹಾಗೇ .....ಹಂಗೇಯಳ / ಹಂಗೇ ss
ಹೀಗೆಯೇ(ಪ್ರ),ಹಾಗೇ ...... ಹಿಂಗೇಯಳ / ಹಿಂಗೇ ss

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 4:55pm — shreekant.mishrikoti

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

shreekant.mishrikoti's picture

ಹೊಸ ವಿಷಯ ತಿಳಿಸಿದಿರಿ ; ಇದು ನನಗೆ ಗೊತ್ತಿರಲಿಲ್ಲ ; ಧನ್ಯವಾದಗಳು

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 5:38pm — Sunil Jayaprakash

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

Sunil Jayaprakash's picture

ವಿನಾಯಕ ಖಾವಿ, "ಅಳ" ಪದ ತಿಳಿಸಿದ್ದಕ್ಕಾಗಿ ತುಂಬಾ ತುಂಬಾ ನನ್ನಿ. ಮೇಲಿನ ಕಾಮೆಂಟನ್ನು ಓದಿದ ತಕ್ಷಣ ನನಗೆ ಏನು ಹೊಳೆಯಿತಪ್ಪಾ ಎಂದರೆ, ಕನ್ನಡದಲ್ಲಿ ಗ್ಯಾರೆಂಟಿ, ಅಬ್ಸೋಲ್ಯೂಟ್ಲಿ, ಹೀಗೆ ದೃಢವಾಗಿ ಏನನ್ನಾದರೂ ಹೇಳಬೇಕಾದಂತಹ ಸಂದರ್ಭದಲ್ಲಿ ಇದನ್ನು ಬಳಸಬಹುದು ಅನ್ನಿಸಿತು.

ಉದಾ :-
೧. ನಿಜಕ್ಕೂ ಅದು ಹೀಗೆಯೇ ಆಗುವುದು.
೨. ಅನುಮಾನವೇ ಬೇಡ, ಅಂದು ರಾತ್ರಿ ಕತ್ತಲಲ್ಲಿ ಕಾಣಿಸಿದ್ದು ಅವನೇ.

"ಅಳ" ಪದದ ಬಗ್ಗೆ ದ್ರಾವಿಡ ನುಡಿಕೋಶದಲ್ಲಿ ತಡಕಾಡಿದಾಗ ತಿಳಿದದ್ದೇನೆಂದರೆ, "ಅಳ" ಎಂಬುದು ತುಂಬಾ ತುಂಬಾ ಶಕ್ತಿಯುತವಾತ ಪದ.
ಕನ್ನಡ ಅಳ - Ka. aḷa, aḷavi, aḷavu, alavu power, strength, force, ability, possibility, practicability

ತುಳು ಅಳ(=ಕನ್ನಡ ಅಳತೆ ??) - Tu. aḷa measure, capacity;

ಇನ್ನು ಮುಂದೆ,

೧. "ಈ ಪ್ರಾಜೆಕ್ಟಿನ ಪ್ರಾಕ್ಟಿಕಾಲಿಟಿ, ಅಪ್ಲಿಕಬಿಲಿಟಿ ಎಷ್ಟು" ಎಂದು ಹೇಳಬೇಕಾದ ಸಂದರ್ಭದಲ್ಲಿ, "ಈ ಪ್ರಾಜೆಕ್ಟಿನ ಅಳ ಎಷ್ಟು" ಎಂದು ಹೇಳುವೆ ನಾನು.
೨. ಒಂದು ಪಾಸಿಬಿಲಿಟಿ ಏನಪ್ಪಾ ಅಂದರೆ ಮಳೆಕೊಯ್ಲು ನಡೆಸುವುದು - ಒಂದು ಅಳ (ಆಯ್ಕೆ) ಏನಪ್ಪಾ ಅಂದರೆ ಮಳೆಕೊಯ್ಲು ನಡೆಸುವುದು.

ತುಂಬಾ ತುಂಬಾ ನನ್ನಿ ವಿನಾಯಕ. ಹೀಗೆಯೇ ನಿಮ್ಮ ಕಡೆ ಇರುವ ಪದಗಳನ್ನು ನಮಗೆಲ್ಲ ತಿಳಿಸುತ್ತಾ ಇರಪ್ಪ. ಮೈಸೂರು-ಬೆಂಗಳೂರು, ಬಿಜಾಪೂರ, ಬಾಗಲಕೋಟೆ ಒಂದಾಗಿಸಿದ ಪುಣ್ಯ ನಿನಗೆ ಬರುತ್ತೆ Smiling

@ಮಿಶ್ರಿಕೋಟಿ, ನೀವು ನೆಡುತ್ತಿರುವ ಸಸಿ ಆಗಲೇ ನಮಗೆಲ್ಲ ಸಿಹಿ ಹಂಚುವಂತಾಗಿದೆ. ನನಗೆ ತುಂಬಾ ನಲಿವಾಯಿತು. ನೀವು ಹೀಗೆ ಮುಂದುವರಿಸಿಕೊಂಡು ಹೋದರೆ, ಮೈಸೂರು-ಬೆಂಗಳೂರು-ಹುಬ್ಬಳ್ಳಿ-ಧಾರವಾಡ ಒಂದಾಗಿಸಿದ ಪುಣ್ಯ ನಿಮಗೆ ಅಳ (ಗ್ಯಾರೆಂಟಿ).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 5:55pm — mahesha

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

mahesha's picture

ಚನ್ನೀಲ ಬಲ್ ನನ್ ಮಗ ನೀನು Smiling ...

ಏನು ಹುಡುಕಿದ್ದೀಯೋಲೋ!!

ನೆನ್ನೆ ನಮ್ಮ ಮನೆಗೊಬ್ಬ ನನ್ ಬಳ್ಳಾರಿ ಗೆಳೆಯ ಬಂದಿದ್ದ, ಟೀವಿಯಲ್ಲಿ ಒಂದು ಕಟ್ಟೆಗೊಳ ನೋಡಿ, 'ಕೋನೇರು' ಅಂದ. ನೀನೇ ಅಲ್ವಾ ಹಿಂದೆ ಇದನ್ನೂ ಹುಡುಕಿದ್ದು Smiling.. ನಾನು ಚಕ್ಕನೆ ತಿರುಗಿ, ಏನದು ಮತ್ತೆ ಹೇಳು ಅಂದೆ, ಅದಕ್ಕೆ ಅವನು "ಪುಶಕರಣಿ" ಅಂದ. ನಾನು "ಲೋ ಅಲ್ಲ ಕೋನೇರು ಅದೂ ಕನ್ನಡದ ಪದವೇ" ಅಂದೆ. ಅದಕ್ಕೆ ಅವನು "ನಿಮಗೆ ನಮ್ ಕಡೆ ಪದ ಅರ್ತ ಆಗಲ್ಲ ಅಂತ ನಾನು ಹಿಂಗಂದೆ" ಎಂದು ಕಿಸಿದ.. Smiling Sad

ಚನ್ನೈಯಲ್ಲಿ ಒಂದು ಏರಿಯ ಹೆಸರು "ನುಂಗಬಕ್ಕಂ" Smiling.. ಇದನ್ನು ನೋಡಿ, ನಾನು ಬಿದ್ದು ಬಿದ್ದು ನಕ್ಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 6:11pm — Ennares

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

Ennares's picture

ನುಂಗಂಬಾಕ್ಕಂ. ಹಾಗೇನೇ ಮೀನಂಬಾಕ್ಕಂ, ನಂದಂಬಾಕ್ಕಂ, ಮತ್ತು ಕೋಡಂಬಾಕ್ಕಂ ಕೂಡ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 7:02pm — mahesha

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

mahesha's picture

ಅದು ಬಾಕ್ಕಂ ಆ?

ನುಂಗಂಬಕ್ಕ ಅಂದ ಬಕಬಕ ನುಂಗೊನು ಎಂದು Smiling
ಹಾಗೆ
ಮೀನಂಬಕ್ಕ ಅಂದ ಮೀನು ಬಕಬಕ್ಕ ತಿನ್ನೊನು

ಇನ್ನು ನಂದ, ಕೋಡ ಅಂದ್ರೇನು ತಮಿಳಲ್ಲಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 11:33pm — hamsanandi

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

hamsanandi's picture

ತಮಿಳಿನಲ್ಲಿ (ಬಹುಶಃ), ಪಾಕಂ, ಪಾಕಂ, ಇವುಗಳು ನಮ್ಮಲ್ಲಿಯ ಕೊಪ್ಪಲು, ವಂಗಲ ಇವುಗಳ ತರಹ ಹಳ್ಳಿ, ಕೇರಿಗಳನ್ನು ತಿಳಿಸುವ ಪದಗಳು. ಅದೂ ಮುಕ್ಕಾಲು ಪಾಲು ಚೆನ್ನೈ ಸುತ್ತಮುತ್ತಲ ಪ್ರದೇಶಗಳಲ್ಲಿ ಎಂದು ಕಾಣುತ್ತೆ. ನಮ್ಮಕಡೆ ಮೈಸೂರು ಹಾಸನದ ಕಡೆ ಕೊಪ್ಪಲು ಇದ್ದರೆ, ಬೆಂಗಳೂರು ಬಳಿ ಮಂಗಲ,ವಂಗಲ ಇವೆಯಲ್ಲ. ಹಾಗೆ.

ಮದರಾಸಿನಲ್ಲಿ ಈ ರೀತಿ ಬಹಳ ಹೆಸರುಗಳಿವೆ - ನುಂಗಂಬಾಕಂ, ಮೀನಂಬಾಕಂ, ಪುರಸ್ವಾಕಂ, ನಂದಂಬಾಕಂ, ಕೋಡಂಬಾಕಂ ಇತ್ಯಾದಿ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 5:58pm — mahesha

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

mahesha's picture

http://dsal.uchicago.edu/cgi-bin/philologic/getobject.pl?c.0:1:298.burro...

ಅಳತೆ ಬಗ್ಗೆ ಅಲ್ಲಿ ನೋಡೋ ಚನ್ನೀಲ!

ಕನ್ನಡದಾಗೆ ಅಳ ಮತ್ತು ಅಳೆ ಬೇರೆಬೇರೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 6:45pm — Khavi

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

Khavi's picture

ಚೆನ್ನಾಗಿದೆ.. Smiling

Quote:
ಹೀಗೆಯೇ ನಿಮ್ಮ ಕಡೆ ಇರುವ ಪದಗಳನ್ನು ನಮಗೆಲ್ಲ ತಿಳಿಸುತ್ತಾ ಇರಪ್ಪ. ಮೈಸೂರು-ಬೆಂಗಳೂರು, ಬಿಜಾಪೂರ, ಬಾಗಲಕೋಟೆ ಒಂದಾಗಿಸಿದ ಪುಣ್ಯ ನಿನಗೆ ಬರುತ್ತೆ

ಸರಿ ನಾನು ನಮ್ಮ ಕಡೆ ಇರೋ ಪದಗಳನ್ನ ಹೆಕ್ಕಿ ತೆಗಿತೀನಿ... ಎಲ್ಲದಕ್ಕೂ ನಂಟು ಬೆಸೆಯೋ ಕೆಲಸ ನಿಂದು .. ಆಯ್ತಾ.. Smiling .. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 6:50pm — Khavi

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

Khavi's picture

Quote:
ನೀವು ಹೀಗೆ ಮುಂದುವರಿಸಿಕೊಂಡು ಹೋದರೆ, ಮೈಸೂರು-ಬೆಂಗಳೂರು-ಹುಬ್ಬಳ್ಳಿ-ಧಾರವಾಡ ಒಂದಾಗಿಸಿದ ಪುಣ್ಯ ನಿಮಗೆ ಅಳ (ಗ್ಯಾರೆಂಟಿ).

ಮಸ್ತ ಹೇಳಿದೇಳ.. ನೀನೀಗ ಪಕ್ಕ ನಮ್ಮೂರಿನ ನುಡಿ ಮಾತಾಡಿದಿ.. ಇಲ್ಲಿ ಅಳ ಬಳಸೂದು ಹಿಂಗ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 8, 2007 - 9:53pm — Sunil Jayaprakash

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

Sunil Jayaprakash's picture

@ಮಹೇಶ,

ಏನು ಹುಡುಕಿದ್ದೀಯೋಲೋ

ಈ ವರಸೆ ಮಾತು ಕೇಳಿ ತುಂಬಾ ವರ್ಷ ಆಗಿತ್ತು. ನಲಿವೆನಿಸಿತು.

@ವಿನಾಯಕ,

ಮಸ್ತ ಹೇಳಿದೇಳ.. ನೀನೀಗ ಪಕ್ಕ ನಮ್ಮೂರಿನ ನುಡಿ ಮಾತಾಡಿದಿ.. ಇಲ್ಲಿ ಅಳ ಬಳಸೂದು ಹಿಂಗ..

ಹೌದಾ!!!!!!!!!ನನಗೆ ತುಂಬಾ ತುಂಬಾ ಆಶ್ಚರ್ಯ ಹಾಗೆಯೇ ಖುಷಿಯಾಯಿತು. ನಾನು ಸುಮ್ಮನೆ ಊಹೆ ಮಾಡಿ ಹೇಳಿದ್ದೆ. ಹಾಗಾರೆ, ನಾನು ನಿಮ್ಮವನಾಗೀನಿ ಅಂದಂಗಾತು. "ಗ್ಯಾರೆಂಟಿ" ಎಂಬುದಕ್ಕೆ ಕನ್ನಡ ಪದ ಇದೆ ಅಂತ ನಮ್ಮ ನಮ್ಮ ಮೇಷ್ಟ್ರುಗಳಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಸಂಪದವನ್ನು ಓದುವ ಎಲ್ಲರಿಗೂ ತಿಳಿಯುವಂತಾಯಿತು. ಅದೂ ಇನ್ನೂ ಆ ಪದ ಬಳಕೆಯಲ್ಲಿರುವಾಗಲೇ. "ಅಳ"ದ ಜನ್ಮ ಸಾರ್ಥಕವಾಯಿತು, ಬಿಡು ಮತ್ತ.

ಸರಿ ನಾನು ನಮ್ಮ ಕಡೆ ಇರೋ ಪದಗಳನ್ನ ಹೆಕ್ಕಿ ತೆಗಿತೀನಿ... ಎಲ್ಲದಕ್ಕೂ ನಂಟು ಬೆಸೆಯೋ ಕೆಲಸ ನಿಂದು .. ಆಯ್ತಾ

ನಾನಿರುವುದೆ ನಿಮಗಾಗಿ, ಕನ್ನಡ ಇರುವುದೆ ನಮಗಾಗಿ Smiling , Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 5:16am — aniljoshi

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

aniljoshi's picture

ಅಳ ಎನ್ನುವದನ್ನು ನಾನು ಕೇಳಿದಂತೆ ಭರವಸೆ/ಧೈರ್ಯ ತುಂಬುವ ವಾಕ್ಯಗಳಲ್ಲಿ ಅಥವ ಸ್ವಲ್ಪ ನಿರ್ಧಾರಿತವಾಗಿ ಹೇಳುವ ವಾಕ್ಯದಲ್ಲಿ ಬಳಸುತ್ತಾರೆ.
ಉದಾ:
ಅದು/ಅವ/ಅಕಿ ಹಂಗs ಅಳ. (ಅದು/ಅವನು/ಅವಳು ಇರುವದೇ ಹಾಗೆ)
ನಾ ಎಲ್ಲ ಮಾಡ್ತೀನಳs ನೀ ಏನ್ ಚಿಂತಿ ಮಾಡಬ್ಯಾಡ. (ನಾನೆಲ್ಲ ಮಾಡುತ್ತೇನೆ, ನೀನೇನು ಚಿಂತಿಸುವದು ಬೇಡ)

ಸುನಿಲರ ಪ್ರೋಜೆಕ್ಟಿನ ಉದಾಹರಣೆಯನ್ನ ಹೀಗೂ ಕೊಡಬಹುದು,

ಇಂಜಿನೀಯರ್ ತನ್ನ ಪ್ರೊಜೆಕ್ಟ್ ಮ್ಯಾನೇಜರಗೆ ಕೇಳುತ್ತಾನೆ: ಈ ಪ್ರೋಜೆಕ್ಟ್ ಅದ ಇಲ್ರೀ ಸರs ಮತ್ತ.
ಮ್ಯಾನೇಜರ್ : ಹೇ ಇರತದಳ್ರೀ ಈ ಪ್ರೊಜೆಕ್ಟು. ಭಾಳ ಇಂಪೊಂರ್ಟೆಂಟು ಪ್ರೊಜೆಕ್ಟ್ರೀ ಇದು. ನೀವೇನ್ ಹೆದರಬ್ಯಾಡ್ರಿ.

ಧಾರವಾಡ ಕನ್ನಡದ ಬಗ್ಗೆ ವಿಕ್ರಮ್ ಕವಳಿ ಅವರು ಬರೆದ ಈ ಕೆಳಗಿನ ಲೇಖನ ಓದಿರದಿದ್ದರೆ ಓದಿ ನೋಡಿ ಬಹಳ ಚನ್ನಾಗಿದೆ.
http://thatskannada.oneindia.in/sahitya/article/210406language_kavali.ht...

ಒಂದು ಒಳ್ಳೆಯ ಸರಣಿ ಪ್ರಾರಂಭಿಸಿದ ಮಿಶ್ರಿಕೋಟಿ ಅವರಿಗೆ ಅಭಿನಂದನೆಗಳು.
-
ಅನಿಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 11:57am — shreekant.mishrikoti

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

shreekant.mishrikoti's picture

ಇಲ್ಲಿ ಸ್ವಲ್ಪ ಗೊಂದಲ ಮಾಡ್ಕೊಂಡೀರಿ ಅನ್ನ್ಇಸುತ್ತದೆ .

೧. ಅದು/ಅವ/ಅಕಿ ಹಂಗs ಅಳ. (ಅದು/ಅವನು/ಅವಳು ಇರುವದೇ ಹಾಗೆ)

ಇಲ್ಲರೋದು ಆಳ - ಅಳ ಅಲ್ಲ ...
ಅರ್ಥ ಇರೋದು .
ಮ್ಯಾಲ ಹಾರ್ರಿ - ಅಂದರ ಮ್ಯಾಲ ಇದ್ದಾರ ಅನ್ನೋ ಅರ್ಥದ ಮಾತುಇ ಗುಲ್ಬರ್ಗಾದಲ್ಲಿದೆ

೨
ನಾ ಎಲ್ಲ ಮಾಡ್ತೀನಳs ನೀ ಏನ್ ಚಿಂತಿ ಮಾಡಬ್ಯಾಡ. (ನಾನೆಲ್ಲ ಮಾಡುತ್ತೇನೆ, ನೀನೇನು ಚಿಂತಿಸುವದು ಬೇಡ)

ಇಲ್ಲಿ ಇರೋದು "ಏಳು" ...

’ನಾ ಎಲ್ಲ ಮಾಡ್ತೀನೇಳು ’ ಸರಿಯಾದ ವಾಕ್ಯ .

೩. ಇನ್ನು ಸುನೀಲರು ಹೇಳುವ ಅಳ - ಬೇರೆ .. ಅದು ... ಅಳವು .... ನನ್ನ ಅಳವಿನಲ್ಲಿಲ್ಲ - ನನ್ನ ಹಿಡಿತದಲ್ಲಿ /ಕೈಯಲ್ಲಿ ಇಲ್ಲ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 7:23pm — aniljoshi

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

aniljoshi's picture

ಮಿಶ್ರಿಕೋಟಿ ಅವರಿಗೆ ನಮಸ್ಕಾರ,
ನಮ್ಮ ಗುಲ್ಬರ್ಗ ಕಡೆ ಹಾನ/ಹಾರ/ಹಾಳ (ಇದ್ದಾನ/ಇದ್ದಾರ/ಇದ್ದಾಳ) ಇವುಗಳ ಪ್ರಯೋಗ ಇರುವದು ನಿಜ. ನನ್ನ ಉದಾಹರಣೆಯಲ್ಲಿ ಕೇವಲ 'ಅಕಿ ಹಂಗs ಹಾಳ' ಅಂದಿದ್ದರೆ ಅದು ನೀವು ತಿಳಿಸಿದ ಪ್ರಯೋಗವಾಗುತ್ತಿತ್ತು. ಹಾಳ ಎನ್ನುವದು ಸ್ತ್ರೀಲಿಂಗ ಸೂಚಿ ಪದ. ನೀವು ತಿಳಿಸಿದ 'ಏಳು' ಸರಿಯಾದ ಪದವಾದರೆ ನನ್ನ ವಾಕ್ಯ 'ಅದು/ಅಕಿ/ಅವ ಹಂಗs ಏಳು' ಎಂದಾಗಬೇಕು. ಏಳು ಎನ್ನುವದು ಆಡುಭಾಷೆಯಲ್ಲಿ (ಹಾಗೂ ಯಾವ ಪದಗಳ ಜೊತೆಗೆ ಬಳಸಿದೆ ಎನ್ನುವದನ್ನು ಆಧರಿಸಿ) ಅಳs/ಆಳ/ಏಳs ಆಗಬಹುದೇನೋ. ಹುಬ್ಬಳ್ಳಿ ಕಡೆ ಹಲವು ವಾಕ್ಯಗಳಲ್ಲಿ ಕ್ರಿಯಾಪದಕ್ಕೆ ಸೇರಿಸುವ 'ಎ' ಮಾಡ್ತಿನೇಳು ಎಂಬಲ್ಲಿಯೂ ಸೇರಿಕೊಂಡಿದೆಯೇ ಎಂಬ ಸಂಶಯವೂ ನನಗಿದೆ (ಹುಬ್ಬಳ್ಳಿ 'ಎ/ಏ'ಗೆ ಇನ್ನೂ ಉದಾಹರಣೆ ಕೊಡಬೇಕೆಂದರೆ, ನಾ ಬರತೇನಿ/ಹೋಗ್ತೇನಿ). ಗೊತ್ತಿದ್ದರೆ ತಿಳಿಸಿ.
ಅಳವು ಪದ ನನಗೆ ಗೊತ್ತು. ಆದರೆ ಅಳ ಎನ್ನುವ ಪದದ ಬಳಕೆ (ಅಂದರೆ ಅಳ ಎಂದಷ್ಟೆ ಉಪಯೋಗಿಸಿದ ವಾಕ್ಯ) ನಾನು ಬರೆದ ವಾಕ್ಯಗಳ ತರಹದ ಬಳಕೆಯನ್ನು ಬಿಟ್ಟು ಬೇರೆ ಕೇಳಿಲ್ಲ/ಓದಿದ ನೆನಪೂ ಇಲ್ಲ. ನಿಮಗೆ ಯಾವದಾದರೂ ಪುಸ್ತಕದಲ್ಲಿ ಸಿಕ್ಕಿದ್ದರೆ ತಿಳಿಸಿ. ಖಾವಿಯವರು ತಿಳಿಸಿದ 'ಯಳ' ಪ್ರಯೋಗ ಈ 'ಏಳು/ಅಳ' ಇವುಗಳ ರೂಪಾಂತರವೇ ಅನಿಸುತ್ತದೆ. ಸುನೀಲರ ಅಳ ಪದವನ್ನು ನೋಡಿದಾಗ ನಾನು ಬರೆದ ವಾಕ್ಯಗಳಲ್ಲಿನ ಅಳವೂ ಅದೇ ಏನೋ ಅನ್ನಿಸಿದ್ದು ನಿಜ.

ಧನ್ಯವಾದಗಳು,
ಅನಿಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 7:34pm — mahesha

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

mahesha's picture

ಹಾನ/ಹಾರ/ಹಾಳ

ಇದರ ಬಗ್ಗೆ ತುಸು ಹೇಳಿ ಅನಿಲ್..

ನೋಡಿ.. ಹಿಂದೆ ಸಂಗನಗೌಡರು ಮತ್ತು ನಾವು ಮಾತಾಡ್ತಾ, ಬಡಗಣದಲ್ಲಿ ಪ => ಹ ಆದ್ರೆ, ನಮ್ಮ ತೆಂಕಣದ ಕಡೆ ಪ/ಹ=>ವ ಆಗುವುದು.

ಬಡಗಣ
ಇರ್ಪನ್/ಇಪ್ಪನ್ => ಇಹನ/ಅಹನ => ಹಾನ?
ಅಹಳ => ಹಾಳ
ಅಹರ => ಹಾರ
ಅದ => ದಾ?

ತೆಂಕಣ
ಇರ್ಪನ್ => ಅವ್ನೆ
ಹಾಗೇ ಅವ್ಳೆ, ಅವ್ರೇ, ಹೀಗೆ....

ಗುಲಬರ್ಗದ ಕನ್ನಡದ ಬಗ್ಗೆ ಹೆಚ್ಚಿಗೆ ತಿಳಿಸಿರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 11:58am — shreekant.mishrikoti

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

shreekant.mishrikoti's picture

ಇಲ್ಲಿ ಸ್ವಲ್ಪ ಗೊಂದಲ ಮಾಡ್ಕೊಂಡೀರಿ ಅನ್ನಿಸುತ್ತದೆ .

೧. ಅದು/ಅವ/ಅಕಿ ಹಂಗs ಅಳ. (ಅದು/ಅವನು/ಅವಳು ಇರುವದೇ ಹಾಗೆ)

ಇಲ್ಲಿರೋದು ’ಆಳ’ - ಅಳ ಅಲ್ಲ ...
ಅರ್ಥ ಇರೋದು .
ಮ್ಯಾಲ ಹಾರ್ರಿ - ಅಂದರ ಮ್ಯಾಲ ಇದ್ದಾರ ಅನ್ನೋ ಅರ್ಥದ ಮಾತುಇ ಗುಲ್ಬರ್ಗಾದಲ್ಲಿದೆ

೨
ನಾ ಎಲ್ಲ ಮಾಡ್ತೀನಳs ನೀ ಏನ್ ಚಿಂತಿ ಮಾಡಬ್ಯಾಡ. (ನಾನೆಲ್ಲ ಮಾಡುತ್ತೇನೆ, ನೀನೇನು ಚಿಂತಿಸುವದು ಬೇಡ)

ಇಲ್ಲಿ ಇರೋದು "ಏಳು" ...

’ನಾ ಎಲ್ಲ ಮಾಡ್ತೀನೇಳು ’ ಸರಿಯಾದ ವಾಕ್ಯ .

೩. ಇನ್ನು ಸುನೀಲರು ಹೇಳುವ ಅಳ - ಬೇರೆ .. ಅದು ... ಅಳವು .... ನನ್ನ ಅಳವಿನಲ್ಲಿಲ್ಲ - ನನ್ನ ಹಿಡಿತದಲ್ಲಿ /ಕೈಯಲ್ಲಿ ಇಲ್ಲ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 12:06pm — mahesha

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

mahesha's picture

"ನಾ ಎಲ್ಲ ಮಾಡ್ತೀನಳs ನೀ ಏನ್ ಚಿಂತಿ ಮಾಡಬ್ಯಾಡ. (ನಾನೆಲ್ಲ ಮಾಡುತ್ತೇನೆ, ನೀನೇನು ಚಿಂತಿಸುವದು ಬೇಡ)"

ಸಾರ್‍..

ಇದು "ನಾನ್ ಎಲ್ಲ ಮಾಡ್ತೀವ್ನಿ ಬಿಡು/ಸರೆ, ನೀನ್ ಯಾವ ಚಿಂತೆ ಮಾಡಬ್ಯಾಡ" ಅಂತ ನಾವು ಹೇಳೋದಾ?

ಇಲ್ಲಿ ಏಳು/ಬಿಡು/ಸರೆ/ನಡೆ ಈ ಒರೆಗಳನ್ನು ನಾವು ನಡುವೆ ಹೇಳ್ತೀವಿ ಅಲ್ವರ?

"ನಾನ್ ಮನೆಗೆ ಜೋಪಾನವಾಗೇ ಬತ್ತೀನ್ ಬಿಡು, ಏನ್ ಚಿಂತೆ ಮಾಡಬ್ಯಾಡ." ( ಪೋನಲ್ಲಿ )
"ನಾನ್ ಎತ್ತಾಕ್ತೀನಿ ಸರೆ, ನೀನ್ ಯಾಕೆ ಕೈಮಸಿ ಮಾಡ್ಕೊತೀಯ"( ಇದು ಕೆಲಸ ನಾನು ಮಾಡ್ತೀನಿ ಅನ್ನೋವಾಗ )
"ನಾನ್ ಮನೆ ನೋಡ್ಕೊತೀನ್ ನಡೆ, ಮೊದಲು ಬಸ್ಸ ಹತ್ತೋಗು".

ಇನ್ನೂ ಹಲವು ಅವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 12:35pm — shreekant.mishrikoti

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

shreekant.mishrikoti's picture

ಹೌದು ... ಇದು ಒಂಥರ ’ಮತ್ತು’ , ’ಆದರೆ’ ಇತ್ಯಾದಿ ತರಹದ ಪದ ಇವಕ್ಕೆ ವ್ಯಾಕರಣದಲ್ಲಿ conjunction ಅಂತಾನೋ ಏನೋ ಅಂತಾರೆ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 9, 2007 - 12:46pm — mahesha

ಉ: ’ಅ’ ಮತ್ತು ’ಆ’ ನಡುವೆ ಒಂದು ಸ್ವರ ? (ಧಾರವಾಡ ಕನ್ನಡ-೨)

mahesha's picture

ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾವು ’ಅ’ ಅನ್ನು ’ಅ’ ಅಂತೀವಿ! (ಧಾರವಾಡ ಕನ್ನಡ - ೧)
  • ನಕ್ಕೋತ , ಹಾಡಿಕೋತ , ಕುಣಕೋತ .......(ಧಾರವಾಡ ಕನ್ನಡ - ೫)
  • ’ಎ’ ಅಕ್ಷರದಿಂದ ಕೊನೆಯಾಗುವ ಶಬ್ದಗಳು - ಇನ್ನೊಂದು ಬಗೆ ಮತ್ತು ಧಾರವಾಡದಾಗ , (ಧಾರವಾಡ ಕನ್ನಡ- ೪)
  • ಱ ಮತ್ತು ರ ಹಾಗೂ ೞ ಮತ್ತು ಳ ಗಳ ನಡುವಿನ ಉಚ್ಚಾರವ್ಯತ್ಯಾಸ
  • ಪೞೆಯುೞಿಕೆಗಳು
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 57 ಅತಿಥಿಗಳು ಆನ್ಲೈನ್ ಇರುವರು.


ಸಾಕೋದನ್ ಅರಿತಾತ - ಸಾವಿರ ಜನಕ್ ತ್ರಾತ

— ಟಿ ಪಿ ಕೈಲಾಸಂ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator