ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಯಾರಿಟ್ಟರೀ ಚುಕ್ಕಿ ? ಯಾಕಿಟ್ಟರೀ ಚುಕ್ಕಿ? .....(ಕ.ಕ.ಕ-೩)

December 8, 2006 - 1:51pm — shreekant.mishrikoti

ಮೊದಲು ಚುಕ್ಕಿ ವಿಷಯ . ನಂತರ ಕಕಕ ವಿಷಯ.

ನನ್ನ ಸಹೋದ್ಯೋಗಿ ಸುದರ್ಶನ್ ( ಅವ್ನೂ ನನ್ನ ಹಾಗೇ ಕಂಪ್ಯೂಟರ್ ಪ್ರೊಗ್ರ್ಯಾಮರ್ ) ಗಣಕಯಂತ್ರದ ಮುಂದೆ ತೆರೆಯ ಮೇಲೆ ಕಣ್ಣು ಕೀಲಿಸಿ ಕುಳಿತಿದ್ದ. ಏನ್ರೀ ಸಮಾಚಾರ ? ಅಂದೆ.

ಅಲ್ಲಾ , ಈ ಫಾಕ್ಸ್ ಪ್ರೋ ಪ್ರೊಗ್ರಾಂ ನಲ್ಲಿ ಯಾಕೆ ಹೀಗೆ ಚುಕ್ಕೆ ಇಟ್ಟು ಕಮೆಂಟ್ ಔಟ್ ಮಾಡಿದ್ದಾರೇ ಅಂತ ... ತಲೆ ಕೆಡಿಸಿಕೊಳ್ತಾ ಇದ್ದೀನೀ... ಯಾರಿಟ್ಟರೀ ಚುಕ್ಕಿ ? ಯಾಕಿಟ್ಟರೀ ಚುಕ್ಕಿ? ..... ಅಂತ ... ಹ್ಹಿ ಹ್ಹಿ ಅಂತ ಹಲ್ಲು ಕಿರಿದ .

ವಿವರಣೆ....
ಯಾವದೇ ಕಂಪ್ಯುಟರ್ ಪ್ರೊಗ್ರಾಮಿನಲ್ಲಿ ಬರೆದ ಪ್ರೊಗ್ರಾಂನ ಭಾಗವನ್ನು ನಿಷ್ಕ್ರಿಯಗೊಳಿಸಲು ಆ ಭಾಗದ ಮೊದಲಲ್ಲಿ ಮತ್ತು ಕೊನೆಯಲ್ಲಿ ಕೆಲವು ಚಿಹ್ನೆಗಳನ್ನು ಇಡುತ್ತಾರೆ.
C ಪ್ರೊಗ್ರಾಂ ನಲ್ಲಿ ನಿಷ್ಕ್ರಿಯಗೊಳಿಸಿದ ಭಾಗದ ಪ್ರಾರಂಭವನ್ನು "/*" ಸೂಚಿಸಿದರೆ ಅಂತ್ಯವನ್ನು */
ಸೂಚಿಸುತ್ತದೆ.
ಫಾಕ್ಸ್ ಪ್ರೋ ಪ್ರೊಗ್ರಾಂ ನಲ್ಲಿ ವಾಕ್ಯಗಳ ಮೊದಲಲ್ಲಿ * ಇದ್ದರೆ ಆ ವಾಕ್ಯವು ನಿಷ್ಕ್ರಿಯವಾಗುವದು .
C++ ನಲ್ಲಿ -- ಉಪಯೋಗಿಸುವರು.
ಹೀಗೆಯೇ ಬೇರೇ ಬೇರೇ ಪ್ರೊಗ್ರಾಮ್ಮಿಂಗ್ ಭಾಷೆಗಳಲ್ಲಿ ಏನಾದರೊಂದು ವ್ಯವಸ್ಥೆ ಇರುವದು . ಪದ್ಧತಿ ಬೇರೆ ಇರಬಹುದು.

ಇಂಥ ವಾಕ್ಯ / ಭಾಗಗಳನ್ನು ಕಂಪ್ಯೂಟರ್ ಪರಿಗಣಿಸುವದೇ ಇಲ್ಲ .
ಈ ವ್ಯವಸ್ಥೆಯನ್ನು ಈ ಪ್ರೊಗ್ರಾಮ್ ನ ಉದ್ದೇಶ , ಬದಲಾವಣೆಯನ್ನು ಮಾಡಿದ್ದು ಏಕೆ ? ಮಾಡಿದವರು ಯಾರು? ಯಾವಾಗ? ಇತ್ಯಾದಿ ಟಿಪ್ಪಣಿ(comments)ಗಳನ್ನು ಬರೆಯಲು ಉಪಯೋಗಿಸುವರು. ಇದು ಪ್ರೊಗ್ರಾಂ ಅನ್ನು ನಂತರ ಅರ್ಥಮಾಡಿಕೊಳ್ಳಲು , ತಿದ್ದಲು , ಸುಧಾರಿಸಲು , ಬರದವನಿಗೂ ( ಅವನೂ ತಾನು ಮಾಡಿದ್ದನ್ನು ಎಲ್ಲ ಹೇಗೆ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯ ? ಮರೆಯುತ್ತಾನೆ ಅಲ್ಲವೆ ?) ಇತರರಿಗೂ ಸಹಾಯಕವಾಗುತ್ತದೆ.

ಹೀಗೆ ಈ ಪ್ರೊಗ್ರಾಮ್ ನಲ್ಲಿ ಚುಕ್ಕೆಗಳನ್ನು ಇಟ್ಟು comment out ಮಾಡಿದ್ದರು. ಏಕೆ .. ಇತ್ಯಾದಿ ವಿವರ ಇರಲಿಲ್ಲ .ಈ ಪುಣ್ಯಾತ್ಮ ಅದನ್ನು ಅರ್ಥ ಮಾಡಿಕೊಳ್ಳಲು ಒದ್ದಾಡುತ್ತಿದ್ದ . 'ಯಾಕಿಟ್ಟರೀ ಚುಕ್ಕಿ...' ಸಿನೆಮಾ ಹಾಡನ್ನು ಎಂದು ಹಾಡುತ್ತ ತಲೆ ಚಚ್ಚಿಕೊಳ್ಳುತ್ತಿದ್ದ.

ಇಲ್ಲಿಗೆ 'ಕಕಕ'ದ ಅಂದರೆ ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆಯ ಮೂರನೇ ಭಾಗವು ಮುಗಿದುದು.

ಅಥs ತೃತೀಯೋ ಭಾಗಂ ಸಮಾಪ್ತಂ!

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 610 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 8, 2006 - 4:58pm — Sunil Jayaprakash

Re: ಯಾರಿಟ್ಟರೀ ಚುಕ್ಕಿ ? ಯಾಕಿಟ್ಟರೀ ಚುಕ್ಕಿ? .....(ಕ.ಕ.ಕ-೩)

Sunil Jayaprakash's picture

ಶ್ರೀಕಾಂತ ಮಿಶ್ರಿಕೋಟಿ wrote:
ಅಥs ತೃತೀಯೋ ಭಾಗಂ ಸಮಾಪ್ತಂ!

ಈ ಕಥೆಯನ್ನು ಹೇಳಿದವರಿಗೂ, ಕೇಳಿದವರಿಗೂ ಮತ್ತು ಅನುಕೂಲ ಮಾಡಿಕೊಟ್ಟಂತ ಸಭಿಕರೆಲ್ಲರಿಗೂ ಆ ದೇವರು ಆಯುರಾರೋಗ್ಯ, ಸಂಪತ್ತು, ಐಶ್ವರ್ಯ ಕಲ್ಪಿಸುತ್ತಾನೆಂಬಲ್ಲಿಗೆ ಕ.ಕ.ಕ ಮುಗಿಯಿತು ಎನ್ನಬೇಕಿತ್ತು. ಒಳ್ಳೆ ಮಾಜ್ಜಾ ಇರೋದು. Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 8, 2006 - 5:37pm — shreekant.mishrikoti

Re: ಕ.ಕ.ಕ ಮುಗಿಯಿತು ಎನ್ನಬೇಕಿತ್ತು.!

shreekant.mishrikoti's picture

ಏನ್ರಿ ?

ಈಗಿನ್ನೂ ಪ್ರಾರಂಭ ಆಗಿದೆ .

ಭಾರೀ ಜನಾಗ್ರಹದ ( ಒಬ್ಬರು ವಿನಂತಿಸಿದ್ದರು!!) ಮೇರೆಗೆ
ಮೊದಲ ಮತ್ತು ಎರಡನೇ ಭಾಗ ಬರೆದಿದ್ದೆ .
ನೋಡಿಲ್ಲವೇ ?

ಈಗ ಭಾರೀ ಜನಾಗ್ರಹದ (ನಿಮ್ಮ!! ವಿನಂತಿಯ ) ಮೇರೆಗೇ ನಿಲ್ಲಿಸಬೇಕೇನೋ!

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 8, 2006 - 5:54pm — ರಘುನಂದನ

Re: ಕ.ಕ.ಕ ಮುಗಿಯಿತು ಎನ್ನಬೇಕಿತ್ತು.!

ರಘುನಂದನ's picture

ಭಾರೀ ಅನ್ನೋಹಂಗೇನೂ ಇಲ್ಲ ಬಿಡ್ರಿ... ನಾನು ಬರೇ ಎಪ್ಪತ್ಯಾಲ್ಡು ಕೇಜಿ ಇದ್ದೇನಿ. ಇರುವಲ್ತ್ಯಾಕ ಆದ್ರ ಪಾಠ‌s ಭಾಳ ನಿಧಾನ ಆಗ್ಲಿಕ್ಕೆ ಹತ್ಯಾವ್ರಿ, ಲಿಂಕು ಬಿಟ್ಟು ಹೊಂಟsದ.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 8, 2006 - 6:46pm — shreekant.mishrikoti

Re: ಪಾಠ‌s ಭಾಳ ನಿಧಾನ ಆಗ್ಲಿಕ್ಕೆ ಹತ್ಯಾವ್ರಿ

shreekant.mishrikoti's picture

ನೀವು ಭರಭರ ಓದಿದ್ರ , ನೀವು ಓದಿದ್ದು ನಂಗ ಗೊತ್ತಾದ್ರ ,ಭರ ಭರ ಬರದೇನು.
ಯಾರೂ ಕಮಕ್/ಕಿಮಕ್ ಅಂದೇ ಇಲ್ಲಲ್ಲಾ?

ಇರಲಿ ನಾಲ್ಕನೇ ಕಂತು ಇವತ್ತೆ ಬರದೀನಿ . ನೋಡ್ರಿ.
ಹೆಂಗದ ಹೇಳ್ರಿ. ಆತs?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 9, 2006 - 7:10pm — ರಘುನಂದನ

Re: ಪಾಠ‌s ಭಾಳ ನಿಧಾನ ಆಗ್ಲಿಕ್ಕೆ ಹತ್ಯಾವ್ರಿ

ರಘುನಂದನ's picture

ಭರ ಭರ ಓದ್ತೀನ್ರೀ ಸರs ಆದ್ರ ನಾನು ಊಹಾ ಮಾಡಿದ್ರಕ್ಕಿಂತ ಬೇಗ ಓದsದು ಮುಗದ ಹೋದ್ರ ನಾನರ ಏನ ಮಾಡ್ಲಿರೀ.... ಯಾರರ ಯಾಕ ಕಂಯ್ ಕುಂಯ್ ಅನ್ಲಿ ಬಿಡ್ಲಿ ನಾನಂತ್ರೂ ಅಂತೀನಿ ನೋಡ್ರಿ.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 8, 2006 - 6:28pm — Sunil Jayaprakash

Re: ಕ.ಕ.ಕ ಮುಗಿಯಿತು ಎನ್ನಬೇಕಿತ್ತು.!

Sunil Jayaprakash's picture

ಶ್ರೀಕಾಂತ ಮಿಶ್ರಿಕೋಟಿ wrote:
ಈಗ ಭಾರೀ ಜನಾಗ್ರಹದ (ನಿಮ್ಮ!! ವಿನಂತಿಯ ) ಮೇರೆಗೇ ನಿಲ್ಲಿಸಬೇಕೇನೋ!

ಅಯ್ಯಯ್ಯೋ, ಬೇಡ್ರೀಪ್ಪಾ.. ನಾನು ಮಾರ್ಪಾಟು ಮಾಡಿಕೊಡುತ್ತೇನೆ.

....ಎಂಬಲ್ಲಿಗೆ, ಈ ಅಧ್ಯಾಯವು ಮುಗಿಯಿತು. ಈ ದಿನಕ್ಕೆ ಇಷ್ಟು ಸಾಕು, ಮಂಗಳಾರತಿ ತೊಗೊಂಡ್ ಮನೆಗೆ ಹೋಗಿ ಎನ್ನಬಹುದು. Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 10, 2006 - 7:36pm — Sunil Jayaprakash

ದನಿಗೂಡು: ಯಾರಿಟ್ಟರೀ ಚುಕ್ಕಿ ? ಯಾಕಿಟ್ಟರೀ ಚುಕ್ಕಿ? ಮುಂದುವರಿದ ಭಾಗ

Sunil Jayaprakash's picture

ಶ್ರೀಕಾಂತ ಮಿಶ್ರಿಕೋಟಿಗಳು, ನಿಷ್ಕ್ರಿಯಗೊಳಿಸುವ ಚಿಹ್ನೆಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕಾಗಿ ಸವಿಯೊದಗು. ಇದರ ಮುಂದುವರಿದ ಭಾಗವಾಗಿ ಜಾವಾದಲ್ಲಿ ಹೇಗೆ ಇವುಗಳನ್ನು ಬಳಸುತ್ತಾರೆ ಎಂಬುದಾಗಿ ಬರೆಯುತ್ತಿದ್ದೇನೆ.

ಎಲ್ಲರಿಗೂ ತಿಳಿದಿರಬಹುದಾದ ಹಾಗೆ, C++ ನಲ್ಲಿ /* ... */ ಬಳಸುತ್ತಾರೆ. ಇದೇ ಚಿಹ್ನೆಗಳನ್ನು ಸ್ವಲ್ಪ ಬದಲಾಯಿಸಿ ಜಾವಾದಲ್ಲಿ ಬಳಸುತ್ತಾರೆ.

೧. /* ... */ - ಇದನ್ನು ಸೇರಿಸಿದ ಭಾಗಗಳನ್ನು ಕಂಪೈಲರ್ ಗಣನೆಗೆ ತೆಗೆದುಕೊಳ್ಳುವುದಿಲ್ಲ.
೨. /** ... */ - ಇದನ್ನು ಕೂಡ ಕಂಪೈಲರ್ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಆದರೆ ಇದರಲ್ಲಿ ಒಂದು ವಿಶೇಷವಿದೆ. ನಾವು ಬರೆದಿರುವ ಕೋಡಿನ ವಿವರಗಳನ್ನು ಬರೆಯಬಹುದು. ಆ ವಿವರಗಳಲ್ಲಿ HTML ಕೋಡ್(=ಸಂಕೇತ, ಮೊತ್ತ, ಕರ್ಪಣ(=ಕಪ್ಪಣ???))ಗಳನ್ನು ಕೂಡ ಹಾಕಬಹುದು. ಸಂಕೇತಗಳನ್ನು ಬರೆದ ನಂತರ, ಜಾವಾಡಾಕ್(javadoc) ಎಂಬ ಸಾಧನ ಬಳಸಿ, ನಾವು ಬರೆದಿರುವ ಮೊತ್ತಗಳ(=ಸಂಕೇತಗಳ) ಬಗ್ಗೆ ತಿಳಿಸುವ HTML ಕಡತಗಳನ್ನು ತಯಾರಿಸಬಹುದು.

ಜಾವಾಡಾಕ್ ಬಗ್ಗೆ ಹೆಚ್ಚು ತಿಳಿಯಬೇಕಿದ್ದಲ್ಲಿ, ಇಲ್ಲಿ ತಾಗಿಕೊಳ್ಳಿರಿ. ಆದರೆ ಅದು ಇಂಗ್ಲೀಷಿನಲ್ಲಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚುಕ್ಕಿ ಚಂದ್ರಮರ ಜೂಟಾಟ
  • ಕಂಪ್ಯುಟರ್ ಭಾಷೆಗಳು ...(ಕ.ಕ.ಕ.-೪)
  • ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )
  • ನಾನೂ ಉಬುಂಟು ಹಾಕ್ಕೊಂಡೆ ( ಕನ್ನಡದಲ್ಲಿ ಕಂಪ್ಯುಟರ್ ಪಾಠ! )
  • ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆ-೧
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 158 ಅತಿಥಿಗಳು ಆನ್ಲೈನ್ ಇರುವರು.


ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator