ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಪುಸ್ತಕನಿಧಿ-ಕನ್ನಡ ಭಾಷಾ ಸಂಪದ ಎಂಬ ಪುಸ್ತಕ
ಕನ್ನಡ ಭಾಷಾ ಸಂಪದ ಎಂಬ ಪುಸ್ತಕವನ್ನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಿದೆ .
೯೦ ಪುಟಗಳ ಪುಟ್ಟ ಪುಸ್ತಕ ಇದು .
ಭಾಷೆಗಳು , ದ್ರಾವಿಡ ಭಾಷೆಗಳು , ಕನ್ನಡ ಕುರಿತಾದ ಎಷ್ಟೋ ಸಂಗತಿ ಇಲ್ಲಿದೆ.
ನಾನು ಗಮನಿಸಿದ ಕೆಲ ವಿಷಯಗಳು .
ದ್ರಾವಿಡರೂ ಹೊರಗಿನಿಂದ ಬಂದವರು!
ಕನ್ನಡದಲ್ಲಿ ಭೌಗೋಲಿಕ, ಸಾಮಾಜಿಕ ಎಂದು ಎಪ್ಪತ್ತು ಪ್ರಭೇದಗಳನ್ನು ಗುರುತಿಸಿದ್ದಾರೆ.
ಕನ್ನಡದಲ್ಲಿನ ಪ್ರಾಚೀನ ವ್ಯಾಕರಣಗಳು ಮೂರೂವರೆ(!). ಅದರಲ್ಲಿ ಎರಡು
ಸಂಸ್ಕೃತದಲ್ಲಿವೆ ( ಕನ್ನಡಕ್ಕೆ ಗೌರವ ತಂದು ಕೊಡಬೇಕೆಂದು ಸಂಸ್ಕೃತದಲ್ಲಿ
ಬರೆದಿರಬಹುದಂತೆ) . ಅರ್ಧ ಎಂದು ಹೇಳುವದು ಇನ್ನೊಂದು ಕೃತಿಯ ಭಾಗವಾಗಿ ಬಂದಿದೆಯಂತೆ
. ಉಳಿಯುವುದೊಂದು ಕೇಶಿರಾಜನ ಶಬ್ದಮಣಿದರ್ಪಣ.
ಕನ್ನಡದಲ್ಲಿ ನಂತರ ಬಂದ ವ್ಯಾಕರಣಗಳ ಕುರಿತೂ ಮಾಹಿತಿ ಇಲ್ಲಿದೆ.
ನೀವೂ ತಿರುವಿ ಹಾಕಬಹುದು.(http://dli.iiit.ac.in/cgi-bin/Browse/scripts/use_scripts/advnew/metainfo...)

- shreekant.mishrikoti ರವರ ಬ್ಲಾಗ್
- Login or register to post comments
- 520 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: