ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ನನ್ನ ಇತ್ತೀಚಿನ ಪುಸ್ತಕ ಖರೀದಿ ಮತ್ತು ಓದು- ಮತ್ತೆ ಸಿಕ್ಕ ವಜ್ರ ?

August 10, 2007 - 6:29pm — shreekant.mishrikoti

ಮುಂಬೈಯಲ್ಲಿರುವ ನಾನು ಇತ್ತೀಚೆಗೆ ಧಾರವಾಡಕ್ಕೆ ಹೋದಾಗ ಮತ್ತಷ್ಟು ಪುಸ್ತಕ ಹೊತ್ತು ತಂದೆ .
ಅವು ಇಂತಿವೆ .

೧) ನೀಲು ; ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ಬಂದ ಲಂಕೇಶರ ’ನೀಲು’ ಕವನಗಳ ಸಂಗ್ರಹ - ಭಾಗ ೧ . ೪-೫ ಸಾಲುಗಳ ಹೇಳಿಕೆಗಳು , ತುಂಟತನ , ವಾಸ್ತವಿಕತೆ , ಸತ್ಯಗಳು ಇಲ್ಲಿವೆ . ಕವಿತೆಗಳು ಅನ್ನುವದಕ್ಕಿಂತ ವಚನ ಎನ್ನಬಹುದು . ೮೦ % ಓದಿದ್ದೇನೆ. ಒಂದೆರಡು ದಿನದಲ್ಲಿ ಮುಗಿಸುವೆ. ಒಳ್ಳೆಯ ಓದು ( ಐದರಲ್ಲಿ ನಾಲ್ಕು ಅಂಕ)
೨) ಕರ್ವಾಲೋ ; ಹಿಂದೆ ತುಷಾರದಲ್ಲಿ ಧಾರಾವಾಹಿಯಾಗಿ ಬಂದಾಗ ಓದಿದ್ದೆ ; ತೇಜಸ್ವಿ ಅವರ ಕಾದಂಬರಿ . ಇರಲಿ ನನ್ನ ಹತ್ರ ಅಂತ ತಗೊಂಡೆ . ಇನ್ನೊಮ್ಮೆ ಓದಬೇಕು. ಇನ್ನೂ ಓದಿಲ್ಲ.
೩) ಆರ್ಯ ಅವರ ಹೈಬ್ರಿಡ್ ಕತೆಗಳು . - ಜಗತ್ತಿನ ವ್ಯಾಪಕ ಹಿನ್ನೆಲೆಯಲ್ಲಿ ವಿಭಿನ್ನ ಸಂಸ್ಕ್ಲೃತಿ , ಭಾಷೆ , ಸಾಹಿತ್ಯ , ಸಂಗೀತಗಳನ್ನು ಆವರಿಸಿದ ಒಂಥರಾ ಕಲಸುಮೇ‍ಲೋಗರದ ಕತೆಗಳು . ( ಐದರಲ್ಲಿ ನಾಲ್ಕು ಅಂಕ)
೪) ಸಂಬಂಧಗಳು - ವಿಚಿತ್ರ ಕನಸುಗಳ ಹಿನ್ನೆಲೆ ಹೊಂದಿದ ಕತೆಗಳು . ಕನಸಿನಲ್ಲಿ ಕಂಡವನು ನನಸಿನಲ್ಲಿ ಬರುವದು , ಸತ್ತವರು ಕನಸಿನಲ್ಲಿ ಬರುವದು , ಹೆಸರಿಡಿದು ಕರೆಯುವದು ಕನಸು ಕಂದವನಿಗೆ ಬರಲಿರುವ ಸಾವಿನ ಸೂಚಕ ನನಸಾಗಿ ಪರಿಣಮಿಸುವದು ಇತ್ಯಾದಿ ವಿಚಿತ್ರ ಕತೆಗಳಿವೆ. ಅರ್ಥ ಅಗಲಿಲ್ಲ ; ಥ್ರಿಲ್ಲರ್ ಕತೆ ಎಂದು ಓದಬಹುದು. ( ಐದರಲ್ಲಿ ಮೂರು ಅಂಕ)
೫) ಹಿಂದೊಮ್ಮೆ ’ಕಲ್ಲೆಂದು ತಿಳಿದು ವಜ್ರವನ್ನು ಎಸೆದ’ ಬಗ್ಗೆ ಬರೆದಿದ್ದೆ . ( http://sampada.net/blog/shreekant_mishrikoti/31/07/2006/2043)
ಆ ಕಾದಂಬರಿ - ಉಸಿರು - ನಿಂಜೂರರದು ಮತ್ತೆ ಸಿಕ್ಕಿತು . ಓದಿ ನೋಡಬೇಕು .
೬) ಲೋಕಾಪುರ ಎಂಬವರ ’ಉಧೋ ಉಧೋ’ ಸಣ್ನ ಕಾದಂಬರಿ . ಬೆಳಗಾಂವಿ , ಐನಾಪುರ , ಅಥಣಿ ಭಾಗದ ಕನ್ನಡ ( ’ಯಾನು’ ಅಂದರೆ ’ಏನು’ ಇತ್ಯಾದಿ) ಆಕರ್ಷಿಸಿ ತೆಗೆದುಕೊಂಡೆ ( ಮಿರ್ಜಿ ಅಣ್ಣಾರಾಯರ ನಿಸರ್ಗ ಸಿಕ್ಕರೆ ಓದಬೇಕು . ) ನಿರ್ಲಿಪ್ತ ವಾಗಿ ಯಲ್ಲಮ್ಮ ಕೇಂದ್ರದೇವತೆ ಆಗಿರುವ ಊರಿನ ಜಾತಿಸಂಬಂಧಿ ಬದಲಾವಣೆಗಳನ್ನು ತಣ್ಣಗೆ ಹೇಳುವದು . ( ಐದರಲ್ಲಿ ಮೂರು ಅಂಕ)
೭) ಎನ್ಕೆ ಅವರ ವೈನಿ ಕಾದಂಬರಿ - ಸಾಕಷ್ಟು ಸುಪ್ರಸಿದ್ಧ - ಹೆಂಡತಿಯಾಗಿ ಬರಬೇಕಾದವಳು ವೈನಿ(ಅತ್ತಿಗೆ) ಆಗಿ ಬಂದಾಗ ಆಗುವ ಮನಸ್ಸಿನ ತಳಮಳ ಇಲ್ಲಿದೆ ಅಂತೆ - ಹಂ ಆಪಕೆ ಹೈ ಕೌನ್ ಚಿತ್ರದ ಕತೆ ಇಲ್ಲಿಂದ ಕದ್ದದ್ದು ಎಂಬ ಆರೋಪವನ್ನು - ಸಾಹಿತಿ ಎನ್. ಕೆ. ಕುಲಕರ್ಣಿ ಅವರು ಮಾಡಿದ್ದರು . ಇನ್ನೂ ಓದಿಲ್ಲ .
೮,೯) ಕಾಫ್ಕಾ ಕತೆಗಳು ಮತ್ತು ಬ್ರೆಖ್ಟ್ ಕತೆಗಳು ಪುಸ್ತಕಗಳನ್ನೂ ಕೊಂಡಿದ್ದೇನೆ . ಇನ್ನೂ ಓದಿಲ್ಲ .
೧೦) ಮತ್ತೆ ’ತಂದೆಯರೂ ಮಕ್ಕಳೂ ’ ಎಂದೇನೋ ಹೆಸರಿರುವ ರಶ್ಯನ್ ಕಾದಂಬರಿಯ ಕನ್ನಡ ಅನುವಾದ . ಇನ್ನೂ ಓದಿಲ್ಲ .
೧೧) ಮುಳಿಯ ತಿಮ್ಮಪ್ಪನವರ ’ಪಶ್ಚಾತ್ತಾಪ’ - ಈ ಬಗ್ಗೆ ಈಗಾಗಲೇ ಬರೆದಿದ್ದೇನೆ.

ಇನ್ನೂ ಓದಿಲ್ಲ ಎಂದು ಬರೆದ ಪುಸ್ತಕಗಳ ಕುರಿತು ಏನದರೂ ವಿಶೇಷ ಇದ್ದರೆ ತಮಗೆ ತಿಳಿಸುವಂಥವನಾಗುವೆನು .
ಇದರಲ್ಲಿ ಒಂದಿಷ್ಟು ಪುಸ್ತಕಗಳು ಸೆಕಂಡ್ ಹ್ಯಾಂಡ್ ಪುಸ್ತಕಗಳು . ಒಟ್ಟಿನಲ್ಲಿ ೬೦೦ ರೂಪಾಯಿಗೆ ೩೦೦೦ ಪುಟಗಳು . ದಿನಕ್ಕೆ ೩೦ ಪುಟದಂತೆ ಮೂರು ತಿಂಗಳು ಓದಬಹುದು !

ನಾನು ಕೆಲಸ ಮಾಡುವಲ್ಲಿ ಪ್ರತಿ ತಿಂಗಳು ೫೦೦ ರೂಪಾಯಿಗಳನ್ನು - ಪುಸ್ತಕ ಮ್ಯಾಗಝಿನ್ ಇತ್ಯಾದಿಗಳಿಗೆ ಕೊಡುವರು . ಆ ಹಣವನ್ನು ಇಲ್ಲಿ ಹಾಕಿದ್ದೇನೆ . ನಿಮಗೂ ಈ ಸೌಲಭ್ಯ ಇದ್ದರೆ ನೀವೂ ಹೀಗೆ ಮಾಡಬಹುದು ಎಂದು ನನ್ನ ಪುಕ್ಕಟೆ ಸಲಹೆ. Smiling

  • ಪುಸ್ತಕಗಳು
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 296 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 10, 2007 - 9:55pm — Sunil Jayaprakash

ಉ: ನನ್ನ ಇತ್ತೀಚಿನ ಪುಸ್ತಕ ಖರೀದಿ ಮತ್ತು ಓದು- ಮತ್ತೆ ಸಿಕ್ಕ ವಜ್ರ ?

Sunil Jayaprakash's picture

ನಿಮ್ಮ ಪುಕ್ಕಟೆ ಸಲಹೆ ನಾನು ತೆಗೆದುಕೊಂಡಿದ್ದೇನೆ Eye-wink ವಜ್ರ ಅಂದ ತಕ್ಷಣ ನೆನಪಾಯಿತು. ಕೂರ್ ಕುರಿತಾದ ಬರಹವನ್ನು ಆದಷ್ಟು ಬೇಗ ಮುಗಿಸಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು
  • ಪುಸ್ತಕ ನಿಧಿ :- ಕೊನಷ್ಟೈ ಕತೆಗಳು ಒಳ್ಳೇಯ ಹಾಸ್ಯ ಓದಿ ಎಂಜಾಯ್ ಮಾಡಿ
  • ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ
  • ಪುಸ್ತಕ ನಿಧಿ - ಮಾಸ್ತಿ ವೆಂಕಟೇಶ ಅಯ್ಯಂಗಾರರ ಅದ್ಭುತ ಕತೆಗಳು
  • ನನ್ನ ಇತ್ತೀಚಿನ ಓದು .
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator