ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಪುಸ್ತಕನಿಧಿ - ಯದ್ವಾ ತದ್ವಾ - ಒಳ್ಳೆಯ ಹಾಸ್ಯ - ಅ.ನಾ.ಕಸ್ತೂರಿಯವರ ಪುಸ್ತಕ
ನಾ.ಕಸ್ತೂರಿಯವರ ’ಅನರ್ಥಕೋಶ ಕೋಶ’ದ ಬಗ್ಗೆ ನೀವು ಕೇಳಿರಬಹುದು. ಅವರ ಇನ್ನೊಂದು ಪುಸ್ತಕ ’ಯದ್ವಾ ತದ್ವಾ’ - ನಾ.ಕಸ್ತೂರಿಯವರ ಹಾಸ್ಯ ಲೇಖನಗಳ ಸಂಗ್ರಹ . ನಿಜಕ್ಕೂ ಇಲ್ಲಿಯ ಹಾಸ್ಯ ಬರಹಗಳು ಚೆನ್ನಾಗಿದ್ದು ಸಂತೋಷ ಕೊಡುತ್ತವೆ. ಪುಸ್ತಕವೂ ಸಣ್ಣದು. ಇದು ಇಲ್ಲಿದೆ.
ಓದಿ .

- shreekant.mishrikoti ರವರ ಬ್ಲಾಗ್
- Login or register to post comments
- 686 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಸವಿ : ಯದ್ವಾ ತದ್ವಾ - ಒಳ್ಳೆಯ ಹಾಸ್ಯ
ಓದುತ್ತೇನೆ ಮಿಶ್ರಿಕೋಟಿಗಳೇ, ಎಲ್ಲರಿಗೂ ಈ ವಿಷಯ ತಿಳಿಸಿದ್ದಕ್ಕಾಗಿ ಸವಿನೆರವು. ಯದ್ವಾ ತದ್ವಾ ಅಂತ ಈ-ಟಿ.ವಿಯಲ್ಲಿ ಒಂದು ಧಾರಾವಾಹಿ ಬರುತ್ತಿತ್ತು. ತುಂಬಾ ಮಜಾ ಕೊಡ್ತಾ ಇತ್ತು. ಅದರ ಶೀರ್ಷಿಕೆ ಗೀತೆಯೇ ತುಂಬಾ ನಗು ಬರಿಸುತ್ತಿತ್ತು. ಹೆಂಡ ಕುಡಿದ ಕೋತಿ ಮಾಡದೆ ಫಜೀತಿ, ಜೇನು ಕುಟುಕಿದರೆ ದೆವ್ವ ಮೆಟ್ಟಿಕೊಂಡರೆ...ಆಗೋದೆಲ್ಲಾ ಆಗುತ್ತಮ್ಮ, ಎರ್ರಾಬಿರ್ರಿ ಡೇಂಜರಮ್ಮ......
Re: ಸವಿ : ಯದ್ವಾ ತದ್ವಾ - ಒಳ್ಳೆಯ ಹಾಸ್ಯ
ಆ (ಯದ್ವಾ ತದ್ವಾ) ಧಾರಾವಾಹಿ ಈಗ ಮರು ಪ್ರಸಾರವಾಗುತ್ತಿದೆ. ಕಳೆದ ಶುಕ್ರವಾರ ಅಥವಾ ಶನಿವಾರ ಮಧ್ಯಾಹ್ನ ಅದನ್ನು ನೋಡಿದೆನು.
ಚೇಳು ಕುಟುಕಿದರೆ ಅ೦ತ ಇರಬೇಕಿತ್ತು.
ಶೀರ್ಷಿಕೆ ಗೀತೆ ಒ೦ದು ಸ೦ಸ್ಕೃತ ಪದ್ಯದ ಅನುವಾದ. ಮೂಲ ಪದ್ಯ ಹೀಗಿದೆ.
ಮರ್ಕಟಸ್ಯ ಸುರಾಪಾನ೦
ತತ್ರ ವೃಶ್ಕಿಕದ೦ಶನಮ೦
ತನ್ಮಧ್ಯೇ ಭೂತ ಸ೦ಚಾರೋ
ಯದ್ವಾತದ್ವಾ ಭವಿಷ್ಯತೇ
ಸವಿಯೊದಗು : ಯದ್ವಾ ತದ್ವಾ - ಒಳ್ಳೆಯ ಹಾಸ್ಯ
ಬಿಡುವಾದಾಗ ಇದನ್ನು ನೋಡಬೇಕು. ತಪ್ಪನ್ನು ಎಲ್ಲರಿಗೂ ತಿಳಿಸಿದ್ದಕ್ಕಾಗಿ ಮತ್ತು ಆ ಶೀರ್ಷಿಕೆ ಗೀತೆಯಲ್ಲಿದ್ದ ಪದ್ಯವನ್ನೂ ಹಾಕಿದ್ದಕ್ಕಾಗಿ ಮತ್ತಷ್ಟು ಸವಿಯೊದಗು. ಈ ಯದ್ವಾ-ತದ್ವಾ ಧಾರಾವಾಹಿಯಲ್ಲಿ ಇದ್ದ ಗಣೇಶ, ಮುಂದೆ ಕಾಮಿಡಿ ಟೈಮಾಗಿ, ಅಮೃತಧಾರೆಯಲ್ಲಿ ಸಣ್ಣ ಪಾತ್ರ ನಿರ್ವಹಿಸಿ ಈಗ ಮುಂಗಾರು ಮಳೆಯಲ್ಲಿ ನೆನೆದು ನೆನೆದು ನೆನೆಯುತ್ತಲೇ ಇದ್ದಾನೆ.
ಉ: ಸವಿ : ಯದ್ವಾ ತದ್ವಾ - ಒಳ್ಳೆಯ ಹಾಸ್ಯ
ಮಿಶ್ರಿಕೋಟಿಗಳೆ, ನಾ.ಕಸ್ತೂರಿಯವರ ಯದ್ವಾ-ತದ್ವಾ ಪುಸ್ತಕವನ್ನೋದಿದೆ. ಇದರ ಎಳೆಯನ್ನು ನೀಡಿದ್ದಕ್ಕಾಗಿ ನನ್ನಿಗಳು ನಿಮಗೆ. ಅಂದ ಹಾಗೆ ಅದರಲ್ಲಿ ಗಮನಿಸಿದಿರಾ, ಕೊನೆಯ ಪುಟದಲ್ಲಿ ಇನ್ಷೂರೆನ್ಸ್ ಬಗೆಗಿನ ಆಡ್ ಒಂದಿದೆ.