ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಸರ್ವಭಾಷಾ ಸರಸ್ವತಿ

July 11, 2006 - 1:09pm — shreekant.mishrikoti

ದಿವ್ಯವಾದ ವಾಕ್ ಅನ್ನು ದೇವತೆಗಳು ಸೃಜಿಸಿದರು. ಅದನ್ನು ನಾನಾರೂಪದ ಜೀವಿಗಳು ನುಡಿಯುತ್ತವೆ. ಇದು ಋಗ್ವೇದದ ಒಂದು ಸೂಕ್ತಿ. ನಾಗವರ್ಮನ 'ಕರ್ಣಾಟಕಭಾಷಾಭೂಷಣ'ದಲ್ಲಿ ಮಂಗಳಶ್ಲೋಕದ ಅರ್ಥ ಹೀಗಿದೆ. ಯಾವ ಪರಂಜ್ಯೋತಿಯಿಂದ ಸರ್ವಭಾಷಾರೂಪವಾದ ವಾಣಿ ಹೊರಹೊಮ್ಮಿತೋ ಅದಕ್ಕೆ ವಂದನೆ. 'ಕರ್ಣಾಟಕ ಶಬ್ದಾನುಶಾಸನ' ಕರ್ತನಾದ ಭಟ್ಟಾಕಳಂಕನು ಗ್ರಂಥಾರಂಭದಲ್ಲಿ ಮಾಡಿದ ಜಿನೇಶ್ವರಸ್ತುತಿಯೂ ಇದೇ ಅರ್ಥದ್ದಾಗಿದೆ. ಅಲ್ಲಿ ಭಾಷೆಯು ಸರ್ವಭಾಷಾಮಯಿ ಎಂದು ಹೇಳಲಾಗಿದೆ.
ಇದೆಲ್ಲವನ್ನು ಗಮನಿಸಿದರೆ ಈ ಭಾಷೆ ಮೇಲು ಆ ಭಾಷೆ ಕೀಳು ಎಂಬ ಭಾವವಾಗಲೀ , ಇದು ಸ್ವಭಾಷೆ , ಅದು ಪರಕೀಯ ಭಾಷೆ ಎಂಬ ಪಕ್ಷಪಾತವಾಗಲೀ ನಮ್ಮ ಪುರಾತನರಿಗೆ ಇದ್ದಿಲ್ಲವೆಂಬುದನ್ನೂ ಎಲ್ಲ ಭಾಷೆಗಳ ಮೂಲ ಒಂದೇ , ಎಲ್ಲ ಭಾಷೆಗಳೂ ದೈವಸೃಷ್ಟಿ ಎಂದು ಅವರು ತಿಳಿದಿದ್ದರೆಂದು ಗೊತ್ತಾಗುತ್ತದೆ.
ಭಾಷೆ ಎಂದರೇನು ? ಸ್ವಾಭಿಪ್ರಾಯಪ್ರಕಾಶನವೇ ಭಾಷೆ. ಈ ಪ್ರಕಾಶನಕ್ರಿಯೆಯ ಮೂಲ , ಶಕ್ತಿ ನಮ್ಮ ಸ್ವಯಾರ್ಜಿತವಲ್ಲ . ಅದು ಪ್ರಕೃತಿ ದೇವತೆ ನಮಗೆ ಕರುಣಿಸಿದ ಒಂದು ಶಕ್ತಿ. ಅದನ್ನೇ ಆ ಸೂಕ್ತಿಕರ್ತರು ಭಾಷಾ ಎಂದು ಕರೆದರು. ಬ್ರಾಹ್ಮೀ , ಭಾರತೀ , ವಾಕ್ , ವಾಣೀ , ಸರಸ್ವತೀ ಇವೆಲ್ಲ ಪರ್ಯಾಯ ನಾಮಗಳೆಂದು ಹೇಳುವ ಅಮರಕೋಶವೂ ಅದೇ ಅಭಿಪ್ರಾಯವನ್ನೇ ಸಮರ್ಥಿಸುತ್ತದೆ. ಆ ಒಂದೇ ಭಾಷೆಯ ನಾನಾ ಸ್ವರೂಪಗಳೇ ನಾವಾಡುವ ಭಾಷೆಗಳು . ಈ ತಥ್ಯವನ್ನು ಮನಗಂಡರೆ ಸ್ವಭಾಷಾಭಿಮಾನ ಎಂಬ ಗೌರವಾಸ್ಪದವಾದ ಭಾವವು ನಮ್ಮಲ್ಲಿ ತೀವ್ರವಾದಾಗ ನಮಗರಿಯದಂತೆ ನಮ್ಮ ಅಂತರಂಗಕ್ಕೆ ಅಂಟಿಕೊಳ್ಳುವ ಪರಭಾಷಾತಿರಸ್ಕಾರಬುದ್ಧಿ ಮಾಯವಾಗಿ ನಿಜವಾದ ಭಾಷಾಭಿಮಾನ , ಪರಿಶುದ್ಧ ಸ್ವಭಾಷಾಭಿಮಾನ ನಮ್ಮಲ್ಲಿ ಉದಯಿಸುತ್ತದೆ. ತನ್ನ ತಾಯಿಯನ್ನು ಗೌರವಿಸುವವನು ಇತರ ತಾಯಂದಿರನ್ನೂ ಗೌರವಿಸುತ್ತಾನೆ.
ಇದು ಶ್ರೀ ಸೇಡಿಯಾಪು ಕೃಷ್ಣಭಟ್ಟರ ಒಂದು ಲೇಖನದ ಸಂಗ್ರಹ .
ನಾನಾ ಭಾಷೆಗಳ ತವರೂರಾದ ನಮ್ಮ ದೇಶದ ಸಮನ್ವಯ ಸಂಸ್ಕೃತಿಗೆ ಸರ್ವಥಾ ಒಪ್ಪಲಾರದ ಸಂಕುಚಿತ ಸ್ವಭಾಷಾಭಿಮಾನವೂ ಅದರ ಫಲವಾಗಿ ಪರಭಾಷಾದ್ವೇಷವೂ ನಮ್ಮ ದೇಶದ ಕೆಲಪ್ರದೇಶಗಳಲ್ಲಿ ಬೆಳೆಯುತ್ತಿದ್ದದ್ದನ್ನು ಕಂಡು ಮನನೊಂದ ಅವರು ಒಂದು ಪದ್ಯವನ್ನು ಬರೆದರು.
ಮಳೆಯ ಬಿಲ್ಲಿನಲಿ ಹಲವು ಬಣ್ಣಗಳು ನೆರೆದಿಹಂತೆ , ಶ್ರೀ ಭಾರತಿ
ಭಾರತೀಯ ಭಾಷೆಗಳ ಕಾಂತಿಯಲಿ ತೋರುತಿಹಳು ನಿಜಮೂರುತಿ
ಕಾಮಧೇನುವಿನ ಕೆಚ್ಚಲೇ ನಿನಗಿರಲ್ಕೆ , ಮೊಲೆಯೊಂದನೇ
ಬಾಯೊಳಿಟ್ಟು ತಣಿಯುವದೆ? ನಾಲ್ಮೊಲೆಯ ಹಾಲನುಂಡು ಕುಣಿ ಕಂದನೆ
ಓ ಸಕಲಭಾಷಾ ಸುಪವಿತ್ರ
ಓ ಭರತಭೂಮಿ ವರಪುತ್ರ
ನೀ ಮಹಾಭಾಗ್ಯಸತ್ಪಾತ್ರ!
ಈ ಭಾವನೆ ಭಾರತೀಯರಾದ ನಮ್ಮೆಲ್ಲರಿಗೂ ಮಾನ್ಯವಾಗಬೇಕೆಂದು ಶ್ರೀ ಸೇಡಿಯಾಪು ಕೃಷ್ಣಭಟ್ಟರ ಬಯಕೆ.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 674 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 11, 2006 - 4:24pm — Sunil Jayaprakash

ಸವಿಯೊದಗು

Sunil Jayaprakash's picture

shreekant.mishrikoti wrote:

ದಿವ್ಯವಾದ ವಾಕ್ ಅನ್ನು ದೇವತೆಗಳು ಸೃಜಿಸಿದರು. ಅದನ್ನು ನಾನಾರೂಪದ ಜೀವಿಗಳು ನುಡಿಯುತ್ತವೆ. ಇದು ಋಗ್ವೇದದ ಒಂದು ಸೂಕ್ತಿ.

ಸಕಾಲದಲ್ಲಿ ಹಾಕಿದಿರಿ ಇದನ್ನು. ಬಹಳ ಇಷ್ಟವಾಯಿತು. ಕನ್ನಡ ಪುಸ್ತಕ(ಸುಧಾ ಬಿಟ್ಟು) ಓದಿ ಕನಿಷ್ಟ ಮೂರು ವಾರಗಳಾಗಿವೆಯಾದ್ದರಿಂದ, ಸರಿಯಾದ ಸಮಯದಲ್ಲಿ ಸವಿಯಾದ ಹಿತವಚನ ನುಡಿದಿರಿ. ಮತ್ತೊಮ್ಮೆ ಸವಿಯೊದಗು - ಸರಿಯಾದ ಸಮಯದಲ್ಲಿ ಒದಗಿ ಬಂದ ಸಹಾಯಕ್ಕಾಗಿ ನನ್ನಲ್ಲಿರುವ ಭಾವ.

ಮತ್ತೆ ಕುಚೇಷ್ಟೆಗೆ

shreekant.mishrikoti wrote:

ಪರಕೀಯ ಭಾಷೆ ಎಂಬ ಪಕ್ಷಪಾತವಾಗಲೀ ನಮ್ಮ ಪುರಾತನರಿಗೆ ಇದ್ದಿಲ್ಲವೆಂಬುದನ್ನೂ ಎಲ್ಲ ಭಾಷೆಗಳ ಮೂಲ ಒಂದೇ , ಎಲ್ಲ ಭಾಷೆಗಳೂ ದೈವಸೃಷ್ಟಿ ಎಂದು ಅವರು ತಿಳಿದಿದ್ದರೆಂದು ಗೊತ್ತಾಗುತ್ತದೆ.

ದೈವಸೃಷ್ಠಿ ಗೊತ್ತು ಸಾ....ಆದ್ರೆ ಅದೇನೋ ಅಂದ್ರಲ್ಲಾ.. ಮೂಲ ಬಾಸೆ ಅಂತ. ಯಾವುದು ಸಾ ಅದು.ಓಸಿ ಏಳಿಬುಡಿ.Smiling.

ನೋಡಿ, ಮೇಲಿನ ಪ್ರಶ್ನೆಯ ಉತ್ತರದ ನಿರೀಕ್ಷಿಯಲ್ಲೇ ಅಲ್ಲವೇ ಇರುವುದು ಜಗಳ, ತೊಳಲಾಟ, ಕಿತ್ತಾಟ, ಅಸಮಾಧಾನ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಫೆಬ್ರವರಿ ೨೧ -ನಾಶವಾಗುತ್ತಿರುವ ಭಾಷೆಗಳು- ಕನ್ನಡ
  • ಭಾಷೆ ಮತ್ತು ಧರ್ಮಗಳ ಸಂಬಂಧ
  • ಕಂಪ್ಯುಟರ್ ಭಾಷೆಗಳು ...(ಕ.ಕ.ಕ.-೪)
  • ಕನ್ನಡ ಕಲಿಯುವದು ಕಷ್ಟವೇ?
  • ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಲಿಂಪಿಕ್ಸ್ : ಬರ ಕೊನೆಯಾಗುತ್ತದೆ, ಆದರೆ...
  • ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sirisobagu
    ಉ: ನನ್ನವಳು
    August 22, 2008 - 10:15am
  • mahesha
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 10:05am
  • gururajkodkani
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:56am
  • mahesha
    ಉ: ಏಕೆ ಕರ್ನಾಟಕದೆಡೆಗೆ ತಾತ್ಸಾರ
    August 22, 2008 - 9:49am
  • uniquesupri
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:40am
  • Sunil Jayaprakash
    ಉ: ಅನುಭವ, ಅನುಭಾವ, ಅನುಭೂತಿ?
    August 22, 2008 - 9:33am
  • uniquesupri
    ಉ: ಎಲ್ಲ ತುಸುಹೊತ್ತು...
    August 22, 2008 - 9:22am
  • uniquesupri
    ಉ: ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!
    August 22, 2008 - 9:18am
  • savithasr
    ಉ: ಲಾಲಿ
    August 22, 2008 - 9:16am
  • Sunil Jayaprakash
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 22, 2008 - 9:14am
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 48 ಅತಿಥಿಗಳು ಆನ್ಲೈನ್ ಇರುವರು.


ಹಣವೊಂದನ್ನು ಬಿಟ್ಟು ಬೇರೇನನ್ನೂ ಗಳಿಸದ ವ್ಯವಹಾರವು ಕಳಪೆ ವ್ಯವಹಾರ.

— ಹೆನ್ರಿ ಫೋರ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator