ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಪುಸ್ತಕನಿಧಿ- http://dli.iiit.ac.in/ ಯ ಒಂದು ಸುತ್ತು ಪೂರ್ಣ
ಅಂತೂ ಒಂದು ಸಾರಿ (ವ್ಯರ್ಥ?) ಹಠ ಬಿಡದ ತ್ರಿವಿಕ್ರಿಮನಂತೆ http://dli.iiit.ac.in ತಾಣದಲ್ಲಿನ ೨೦,೦೦೦ ಪುಸ್ತಕಗಳ ಪಟ್ಟಿಯನ್ನು ನೋಡಿದೆ. ಇಲ್ಲಿ ನಾನು ಈಗಾಗಲೇ ಓದಿದ ಪುಸ್ತಕಗಳಿವೆ . ಪೇಟೆಯಲ್ಲಿ ಈಗಲೂ ನೀವು ದುಡ್ಡು ಕೊಟ್ಟು ಖರೀದಿ ಮಾಡುತ್ತಿರುವ ಕೆಲವು ಪುಸ್ತಕಗಳಿವೆ ( ಯೋಗಿಯ ಅತ್ಮಕಥೆ , ಭಗವದ್ಗೀತೆಯ ಯಥಾರೂಪ , ಮಾಸ್ತಿಯವರ ಕತೆಗಳು , ಪಾ.ವೇ.ರವರ ಪದಾರ್ಥ ಶಬ್ದಕೋಶ (ಹೆಸರು ಸರಿ ನೆನಪಿಲ್ಲ ) ಇತ್ಯಾದಿ )
ಶಬ್ದಕೋಶಗಳು , ಅಪರೂಪದ ಪುಸ್ತಕಗಳು ಇವೆ .
ವೇದಗ್ರಂಥಗಳಲ್ಲಿ ಪ್ರವಾದಿ ಮಹಮ್ಮದರು ಎಂಬ ಪುಸ್ತಕವನ್ನೂ ಓದಿದೆ.
ಬೇಂದ್ರೆ , ಕುವೆಂಪು , ಪು.ತಿ.ನ ,ವಿ.ಸೀ , ಗೋಕಾಕ , ಜೀ.ಪಿ.ರಾಜರತ್ನಂ ಪುಸ್ತಕಗಳಿವೆ .
ಧಾರ್ಮಿಕ ಪುಸ್ತಕಗಳಿವೆ .
ಅನೇಕ ಪತ್ತೇದಾರಿ ಮತ್ತು ಸಾಮಾಜಿಕ ಕಾದಂಬರಿಗಳೂ ಇವೆ.
ಅನೇಕ ಇಂಗ್ಲೀಷ್ ಪುಸ್ತಕಗಳ ಅನುವಾದಗಳೂ ಇವೆ . ವುದರಿಂಗ್ ಹೈಟ್ಸ್ ಇದೆ .
ಉಮ್ರಾವ್ ಜಾನ್ , ಪರಿಣೀತಾ , ಉಮರ್ ಖಯ್ಯಾಮ್ ( ಉಮರನ ಒಸಗೆ- ಡಿ.ವಿ.ಜಿ. ) ದಂತಹ ಸುಪ್ರಸಿದ್ಧ ಪುಸ್ತಕಗಳ ಅನುವಾದಗಳೂ ಸಿಕ್ಕವು.
ಕೆಲವು ಪುಸ್ತಕಗಳು ಪಟ್ಟಿಯಲ್ಲಿದ್ದೂ ಲಭ್ಯ ಇರುವದಿಲ್ಲ .
http://dli.iiit.ac.in ದ ಜತೆಗಾರ ತಾಣಗಳಲ್ಲಿ ಹೆಚ್ಚು ಪುಸ್ತಕಗಳಿಲ್ಲ ; ಇದ್ದರೂ ಸರಿಯಾಗಿ ತೋರಿಸುವದಿಲ್ಲ .
ಮುಂದೊಮ್ಮೆ ಓದಬೇಕು . ಓದಿದಾಗ ವಿಶೇಷವೇನಾದರೂ ಇದ್ದರೆ ನಿಮಗೆ ತಿಳಿಸುವೆ.
ಸಿಗುವ .

- shreekant.mishrikoti ರವರ ಬ್ಲಾಗ್
- Login or register to post comments
- 408 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಪುಸ್ತಕನಿಧಿ- http://dli.iiit.ac.in/ ಯ ಒಂದು ಸುತ್ತು ಪೂರ್ಣ
ಸಿರಿಕಾಂತ ಅಯ್ಯನೋರೆ!!
ನನಗೆ "ಸಂಸ" ಇವರ ನಾಟಕ ಓದಿವ ಬಯಕೆ. ಸಿಕ್ಕರೆ ತಪ್ಪದೇ ಹೇಳಿರಿ!
ಉ: ಪುಸ್ತಕನಿಧಿ- http://dli.iiit.ac.in/ ಯ ಒಂದು ಸುತ್ತು ಪೂರ್ಣ
san'sa ಎಂದು ಹುಡುಕಿದರೆ ನಿಮಗೆ ವಿಗಡವಿಕ್ರಮರಾಯ ಮತ್ತು ಮಂತ್ರಶಕ್ತಿ ಎಂಬ
ಎರಡು ಕೊಂಡಿಗಳು ಸಿಗುತ್ತವೆ ; ಆದರೆ ಪುಸ್ತಕ ಲಭ್ಯ ಇರುವದಿಲ್ಲ !
ವಿಗಡವಿಕ್ರಮರಾಯ ನಾನು ಕೊಂಡ್ಕೊಂಡಿದ್ದೆ ; ಆದರೆ ಓದ್ಲಿಲ್ಲ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಪುಸ್ತಕನಿಧಿ- http://dli.iiit.ac.in/ ಯ ಒಂದು ಸುತ್ತು ಪೂರ್ಣ
ಇವರ ಹಳಗನ್ನಡದಂತ ನುಡಿಯ ನಾಟಕಗಳನ್ನು ಸಾಯುವುದರೊಳಗೆ ಓದೋಣ ಅಂತ ಹೆಬ್ಬಂಬಲ
!!
ಅದೂ ಇವರ ಕೂಟುಗಳ ತಿರುಳು ನಮ್ಮ ಎಮ್ಮೆನಾಡರಸರ ಬಾಳೇ ಆಗಿದೆಯಂತೆ!!
ಅಂಗಡಿಯಲ್ಲಿ ಹುಡುಕಬೇಕು!
ಸಿರಿನಿವಾಸರು ಮತ್ತು ಸಿರಿಕಾಂತರ ನೆರವಿಗೆ ನನ್ನಿ!
ಉ: ಪುಸ್ತಕನಿಧಿ- http://dli.iiit.ac.in/ ಯ ಒಂದು ಸುತ್ತು ಪೂರ್ಣ
ಸ೦ಸ ಅವರ ೨ ಪುಸ್ತಕಗಳಿವೆ. ಆದರೆ (ಈ ಶಬ್ದವನ್ನು ಯಾಕಾದರೂ ಕ೦ಡು ಹಿಡಿದರೋ
) ಎರಡೂ ಲಭ್ಯವಿಲ್ಲ.
http://dli.iiit.ac.in/cgi-bin/Browse/scripts/use_scripts/advnew/metainfo...
http://dli.iiit.ac.in/cgi-bin/Browse/scripts/use_scripts/advnew/metainfo...