ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ
ಈವರೆಗೆ ನಾನು ಓದಿ ಮೆಚ್ಚಿಕೊಂಡು ಮತ್ತೆ ಮತ್ತೆ ಓದಬಯಸುವ ಕನ್ನಡ ಪುಸ್ತಕಗಳ ಪಟ್ಟಿಯನ್ನು ಇಲ್ಲಿ ಕೊಡುತ್ತಿದ್ದೇನೆ. ಓದಿನ ಸುಖಕ್ಕೆ ನಿಮಗೆ ಶಿಫಾರಸು ಮಾದುತ್ತಿದ್ದೇನೆ .ನೀವೂ ಓದಿ ನೋಡಿ.
ಬಿ.ಜಿ.ಎಲ್ ಸ್ವಾಮಿಯವರ
ಕಾಲೇಜುರಂಗ ,
ಕಾಲೇಜುತರಂಗ ,
ಪ್ರಾಧ್ಯಾಪಕನ ಪೀಠದಲ್ಲಿ ,
ತಮಿಳು ತಲೆಗಳ ನಡುವೆ ,
ಹಸಿರು ಹೊನ್ನು
ಜಯಂತ ಕಾಯ್ಕಿಣಿರವರ
ಬೊಗಸೆಯಲ್ಲಿ ಮಳೆ
ಬಣ್ಣದ ಕಾಲು
ತೂಫಾನ್ ಮೇಲ್
ಸೇವಂತಿ ಪ್ರಸಂಗ
ಜಯಂತ ಕಾಯ್ಕಿಣಿ ಕಥೆಗಳು ( ತೆರೆದಷ್ಟೇ ಬಗಿಲು , ದಗಡೂ ಪರಬನ ಅಶ್ವಮೇಧ , ಅಮೃತಬಳ್ಳಿ ಕಷಾಯ - ಸಂಗ್ರಹ)
ಶ್ರೀನಿವಾಸ ವೈದ್ಯ ಅವರ
ಮನಸುಖರಾಯನ ಮನಸು
ರುಚಿ ಹುಳಿಯೊಗರು
ತಲೆಗೊಂದು ತರತರ
ಎ.ಎನ್. ಮೂರ್ತಿರಾಯರು - ಪೂರ್ವಸೂರಿಗಳೊದನೆ
ರಾ.ಕು. - ಗಾಳಿಪಟ
ಬಿ.ಎಮ್.ಶ್ರೀ - ಇಂಗ್ಲೀಷ್ ಗೀತೆಗಳು
ಎಮ್.ಆರ್. ಶ್ರೀನಿವಾಸಮೂರ್ತಿ - ರಂಗಣ್ಣನ ಕನಸಿನ ದಿನಗಳು
ಮೋ.ಕ.ಗಾಂಧಿ - ಆತ್ಮಕಥೆ/ ನನ್ನ ಸತ್ಯಾನ್ವೇಷಣೆ
ಕುಂ. ವೀರಭದ್ರಪ್ಪ - ಭಳಾರೆ ವಿಚಿತ್ರಂ
ಈಶ್ವರಯ್ಯ - ಸರಸ
ನಾ.ಕಸ್ತೂರಿ - ಅನರ್ಥಕೋಶ
ಅ.ರಾ.ಸೇ -ಶೀನಪ್ಪನ ರೋಮಾನ್ಸ್
ಬೆಸ್ಟ್ ಆಫ್ ಕೊರವಂಜಿ - ಭಾಗ ೧-೨
ಮಾಸ್ತಿ ವೆಂಕಟೇಶ ಅಯ್ಯಂಗಾರ್ ( ಶ್ರೀನಿವಾಸ) ಅವರ
ಸಣ್ಣಕಥೆಗಳು ( ಸಂಪುಟ ೧-೫)
ಶ್ರೀರಾಮ ಪಟ್ಟಾಭಿಷೇಕ
ಸುಬ್ಬಣ್ಣ

- shreekant.mishrikoti ರವರ ಬ್ಲಾಗ್
- Login or register to post comments
- 863 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ನಾನಂತೂ
ನಾನಂತೂ ಬಿ.ಜಿ.ಎಲ್. ಸ್ವಾಮಿಯವರ ಪುಸ್ತಕಗಳ ದೊಡ್ಡ ಅಭಿಮಾನಿ.
ನೀವು ಪಟ್ಟಿ ಮಾಡಿರುವ ಸ್ವಾಮಿಯವರ ಎಲ್ಲ ಪುಸ್ತಕಗಳನ್ನು ಓದಿದ್ದೇನೆ.
ಉ: ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ
ಇದರಾಗ ಎಷ್ಟು ಪುಸ್ತಕಗಳು ಮುದ್ರಣ ರೂಪದಲ್ಲಿ ಸಿಗ್ತಾವು. ಮಾಸ್ತಿಯವರ ಪುಸ್ತಕಗಳನ್ನ ಭಾಳ ದಿನದಿಂದ ಹುಡುಕ್ಲಿಕತ್ತೇನಿ ಇನ್ನು ಯಾವ ಕೈಗೆ ಹತ್ತಿಲ್ಲ. ಡಿವಿಜಿಯವರ ಪುಸ್ತಕಗಳು ಕೂಡ ಸಿಗೋದು ಕಠಿಣ.
ಉ: ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ
ಮಾಸ್ತಿಯವರ ಹೊತ್ತಿಗೆಗಳು ಬೇಕಿದ್ದರೆ ಡಿ. ಎಲ. ಐ ನಲ್ಲಿ "Ayyan'gaara Maasti Ven'kat'eisha" ಮತ್ತು "Shreinivaasa" ಈ ಹೆಸರುಗಳಿಂದ ಹುಡುಕಿ.. ಒಳ್ಳೆಯ ಹೊತ್ತಿಗೆಗಳು ಸಿಗುತ್ತವೆ..
ಉ: ಒಳ್ಳೆಯ ಕನ್ನಡ ಪುಸ್ತಕಗಳು - ನನ್ನ ಪಟ್ಟಿ
ನಂದೂ ಒಂದೆರಡು ಪುಸ್ತಕ ಸೇರಿಸ್ತಿನಿ. ಅಡ್ಡಿ ಯಿಲ್ಲ ತಾನೆ ?
೧. ಕಲಾಂ ಮೇಸ್ಟ್ರು- ಪ್ರೊ. ಎಚ್. ಆರ್. ರಾಮಕೃಷ್ಣರಾವ್
೨. ತ್ರಿವಿಕ್ರಮ ಹೆಜ್ಜೆಗಳು- ಶ್ರೀ. ಟಿ.ಆರ್. ಅನಂತರಾಮು.
೩. ನಮಸ್ಕಾರ- ಡಾ. ಎಚ್. ಎಸ್. ರಾಘವೇಂದ್ರರಾವ್.
೪. ರೂಪದರ್ಶಿ- ಶ್ರೀ. ಕೆ. ವಿ. ಅಯ್ಯರ್.
೫. ಡಾ. ಎಚ್. ಎನ್. ರವರ ಪುಸ್ಕಕ. ಹೆಸರು ಜ್ಞಾಪಕಕ್ಕೆ ಬರುತ್ತಿಲ್ಲ.