ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಅಂವ , ಇಂವ , ಅಕಿ , ಇಕಿ ........ (ಧಾರವಾಡ ಕನ್ನಡ- ೩)
ಅವನು, ಇವನು , ಅವಳು, ಇವಳು ಇಂಥ ಶಬ್ದಗಳ ರೂಪಗಳನ್ನು ಇವತ್ತು ನೋಡೋಣ
ಅಂವ /ಅಂವಾ ( ಇಲ್ಲಿ ಒಂದು ಅನುನಾಸಿಕ(?) ದ ಉಚ್ಚಾರ ಆಗುತ್ತದೆ ... ಹಾವು ಅನ್ನು ಉಚ್ಚಾರ ಮಾಡುವ ಹಾಗೆ ) - ಅವನು
ಅವಂದು - ಅವನದು
ಅವನ್‍ಹತ್ರ / ಅವನ ಕಡೆ - ಅವನ ಬಳಿ
ಅಂವಗ - ಅವನಿಗೆ
ಹೀಂಗS ಇಂವಾ , ಇವಂದು , ಇವನ್ ಹತ್ರ / ಇಂವಗ ಇತ್ಯಾದಿ
ಇದೇ ರೀತಿ
ಅಕಿ / ಆಕಿ - ಅವಳು ( --- ಆಕೆ ನೆನಪಿಸಿಕೊಳ್ಳಿ )
ಅಕೀದು /ಆಕೀದು ,
ಅಕೀ ಕಡೆ
ಅಕೀಗೆ
ಹೀಂಗS ಇಕಿ , ಇಕೀ ದು ., ಇಕೀ ಕಡೆ , ಇಕೀ ಕಡೇ , ಇಕೀಗೆ
ಹೆಂಡತಿಯನ್ನ ಲೇ ಅಂತ ಕರೆಯುವ ಹಾಗೆ ನಮ್ಮಲ್ಲಿ ’ಏ , ಇಕೀನS ’ ಅಂತ ಕರೆಯುತ್ತಾರೆ .
ಇನ್ನೊಬ್ಬರ ಮುಂದೆ ಹೆಂಡತಿಯನ್ನು ಕುರಿತು ಹೇಳುವಾಗ ’ಈಕಿ’ ಅನ್ನುತ್ತಾರೆ .
ಹೆಂಗಸರೂ ಅಷ್ಟೇ ,ಇನ್ನೊಬ್ಬರ ಮುಂದೆ ಗಂಡನ ಕುರಿತು ಹೇಳುವಾಗ ’ಇವರು’ ಅಂತಾರೆ .

- shreekant.mishrikoti ರವರ ಬ್ಲಾಗ್
- Login or register to post comments
- 298 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಅಂವ , ಇಂವ , ಅಕಿ , ಇಕಿ ........ (ಧಾರವಾಡ ಕನ್ನಡ- ೩)
ಹಾವು ಎನ್ನುವಾಗ ಹಾಂವು ಎಂದ ಹಾಗಾಗುತ್ತಲ್ಲ ಹಾಗೆ ಇದು. ಹಿಂದೆ ಒಮ್ಮೆ ಮೈಸೂರು ಝೂನಲ್ಲಿ ಹಾವನ್ನು ನೋಡುತ್ತಿದ್ದಾಗ. "ಪಾಂಬು ನೋಡ್ರಲೇ" ಅಂತ ಕೆಲವರು ಹೇಳಿದ್ದು ಗಮನಕ್ಕೆ ಬಂದಿತ್ತು. ಕನ್ನಡಿಗರು "ಪಾಂಬು" ಎನ್ನುವುದನ್ನು ಕೇಳಿ ನನಗೆ ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತು.
ಉ: ಅಂವ , ಇಂವ , ಅಕಿ , ಇಕಿ ........ (ಧಾರವಾಡ ಕನ್ನಡ- ೩)
ಪಾಂಬು, ಪಳ್ಳಿ, ಪಲ್ಲಿ, ಇನ್ನು ಮುಂತಾದವು ಇನ್ನೂ ಬಳಕೆಯಲ್ಲವೆ..
ಪಳ್ಳಿ ಅಂದ್ರೆ ಸ್ಕೂಲು.
ಪಲ್ಲಿ ಅಂದ್ರೆ ಹಲ್ಲಿ
ಇನ್ನು ಅಂವ ಇಂವ...
ಇವು ನಮ್ಮ ಕಾವೇರಿ ಕಡೆ ತಮಿಳರಂತೆ
ಅವನು, ಇವನು, ಅವಳು, ಇವಳು ಅಂತವೇ ಹೇಳೋದು..
ಆದ್ರೆ ಅವಂ( ಇಲ್ಲ ವ ಮೂಗಿನಿಂದ ) ಹೀಗೆ ಹೇಳೋರನ್ನು ಕಂಡೀನಿ. ಆದ್ರೆ.. ಅವನು ಅಂತ ನು ಅನ್ನು ತಿಳಿಯಾಗಿ ಉಲಿಯೊರೇ ಹೆಚ್ಚು.