ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಒಂದು ಭಯಂಕರ ಜೋಕು ಓದಿ.
ಚಳಿಗಾಲದ ಒಂದು ದಿನ. ಇಬ್ಬರು ಒಂದು ಬೈಕ್ ಮೇಲೆ ಹೋಗುತ್ತಿರುತ್ತಾರೆ. ಎದುರಿನಿಂದ ಚಳಿಗಾಳಿ ಜೋರಾಗಿ ಬೀಸುತ್ತಿದೆ. ಆಗ ಮುಂದೆ ಕುಳಿತವನು ಎದೆಗೆ ತಣ್ಣನೆಯ ಗಾಳಿ ಬಡಿವುದನ್ನು ತಪ್ಪಿಸಲು ಜರ್ಕಿನ್ನನ್ನು ಅದರ ಹಿಂಭಾಗ ಮುಂದೆ ಬರುವಂತೆಯೂ , ಮುಂಭಾಗ ಹಿಂದೆ ಬರುವಂತೆಯೂ ಹಾಕಿಕೊಳ್ಳುತ್ತಾನೆ . (ಸರಿಯಾಗಿ ಓದ್ಕೊಂಡ್ರಿ ತಾನೆ?)
ಮುಂದೆ ಒಂದು ತಿರುವಿನಲ್ಲಿ ಅಪಘಾತವಾಗುತ್ತದೆ .
.
.
.
.
ಸ್ವಲ್ಪ ಹೊತ್ತಿನ ನಂತರ ಅಲ್ಲಿ ಒಬ್ಬ ಪೋಲೀಸ್ ಕಾನ್‍ಸ್ಟೇಬಲ್ ಬರುತ್ತಾನೆ .
.
.
.
.
ಇನ್ನೂ ಸ್ವಲ್ಪ ಹೊತ್ತಿನ ನಂತರ ಇನ್‍ಸ್ಪೆಕ್ಟರನೂ ಬರುತ್ತಾನೆ. ಅವನು ಕಾನ್‍ಸ್ಟೇಬಲ್ಲಿಗೆ ’ನೀನು ಬಂದಾಗ ಪರಿಸ್ಥಿತಿ ಹೇಗಿತ್ತು?’ ಎಂದು ಕೇಳುತ್ತಾನೆ.
ಆಗ ಅವನು ಹೇಳುವದು ಹೀಗೆ.
’ಬೈಕು ಒಂದೆಡೆ ಬಿದ್ದಿತ್ತು . ಇವರಿಬ್ಬರೂ ಏನೂ ಚಲನೆಯಿಲ್ಲದೆ ಬಿದ್ದಿದ್ದರು.
ನಾನು ಒಬ್ಬನ ಹತ್ತಿರ ಹೋಗಿ ಅವನು ಉಸಿರಾಡುತ್ತಿದ್ದಾನೋ ಎಂದು ನೋಡಿದೆ. ಅವನು ಸತ್ತು ಹೋಗಿದ್ದ.
ಆಮೇಲೆ ಇನ್ನೊಬ್ಬನ ಹತ್ತಿರ ಹೋಗಿ ನೋಡಿದೆ.
ಅವನು ಉಸಿರಾಡುತ್ತಿದ್ದ. ಎಚ್ಚರ ತಪ್ಪಿದ್ದ ಅಷ್ಟೆ . ಆದರೆ ..
..ತಲೆ ಹಿಂದು ಮುಂದಾಗಿತ್ತು.
..
..
.. ನಾನು ಸರಿಪಡಿಸಲು ಪ್ರಯತ್ನಿಸಿದೆ..
.. ಅವನೂ ಸತ್‍ಹೋಗ್ಬಿಟ್ಟ!’.

- shreekant.mishrikoti ರವರ ಬ್ಲಾಗ್
- Login or register to post comments
- 798 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಭಯಂಕರ ಜೋಕೆ?
ಜೋಕ್ ಸೂಪರ್...
ಆದರೆ ಭಯ ಆಗಲಿಲ್ಲ..
.
======================================
Re: ಭೀಭತ್ಸ ರಸವುಳ್ಳ ಜೋಕು
ಭಯಂಕರ ಎಂದು ಮೊದಲೇ ಹೇಳಿದ್ದಕ್ಕೆ ನಿಮಗೆ ಭಯ ಆಗಿಲ್ಲ!
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
Re: ಭೀಭತ್ಸ ರಸವುಳ್ಳ ಜೋಕು
ಸಾರ್..
ಇಲ್ಲಿ ಭೀಭತ್ಸವೋ ಇಲ್ಲ. ಅಲ್ವಾ?
ಇದು ಬರಿ ಹಾಸ್ಯರಸ
...
( ತಮಾಸೆಗೆ ಕಾಲೆಳೆಯುತ್ತಿದ್ದೀನಿ )
======================================
Re: ಭೀಭತ್ಸ ರಸವುಳ್ಳ ಜೋಕು
ಭಯ೦ಕರ ಅ೦ದರೆ ನಮ್ಮ (ಉತ್ತರ ಕರ್ನಾಟಕ) ಕಡೆ "ತು೦ಬಾ ಒಳ್ಳೆಯ" (ಛಲೋ) ಅನ್ನೋ ಅರ್ಥವೂ ಇದೆ. ಹ೦ಗಾಗಿ ಇದು "ಭಯ೦ಕರ ಜೋಕು"!