ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

April 13, 2007 - 1:57pm — shreekant.mishrikoti

೧.

ಹಳೆಯ ರ, ಳ- ಯಾವಾಗಲೋ ಎಷ್ಟೋ ನೂರು ವರ್ಷ ಹಿಂದೆ ಬಿಟ್ಟ ಅಕ್ಷರಗಳು ,
ಶಾಲೆಗಳಲ್ಲಿ ಕಲಿಸುತ್ತಿಲ್ಲ .
ಕನ್ನಡದಲ್ಲಿನ ಸಂಸ್ಕೃತ ಶಬ್ದ ಉಚ್ಚರಿಸಲು ಕಷ್ಟ - ತೆಗೆದು ಹಾಕಿ , ಸುಲಭಗೊಳಿಸಿ ಎಂದೆಲ್ಲ ಅನ್ನುವ ಜನರು
ಏಕೆ ಈ ಹಳೆಯ ರ, ಳ ಬಳಸುತ್ತಿದ್ದೀರೋ ? ತಿಳಿಯದು.
ಶಂಕರ ಭಟ್ಟರೂ ಇದನ್ನು ಒಪ್ಪಲಿಕ್ಕಿಲ್ಲ.

ನನಗಂತೂ ಅವನ್ನು ಗುರುತಿಸಲು ಕಷ್ಟವಾಗುವದು . ೯೯.೯೯% ಜನಕ್ಕೂ ಹಾಗೆಯೇ ಇದ್ದೀತು.

೨.

ನಾನು ಇಂಗ್ಲೀಷು , ದೇವನಾಗರಿ ಲಿಪಿಯ ಬರಹಗಳಿಗಿಂತ ಕನ್ನಡ ಲಿಪಿಯ ಬರಹಗಳನ್ನು ಓದಲು ಇಷ್ಟಪಡುತ್ತೇನೆ.
ಹಾಗೆಯೇ ಪದ್ಯಕ್ಕಿಂತ ಗದ್ಯ .
ಹಳೆಗನ್ನಡಕ್ಕಿಂತ ಹೊಸ ಸರಳಗನ್ನಡ ಕ್ಕೆ ಪ್ರಾಶಸ್ತ್ಯ .
ಗೊತ್ತಿಲ್ಲದ ಅಕ್ಷರಗಳು , ಶಬ್ದಗಳು ನನ್ನನ್ನು ಓದಿನಿಂದ ದೂರ ಮಾಡುತ್ತವೆ.
ಮೊದಲೇ ಕನ್ನಡ ಬಳಕೆದಾರರು ಕಡಿಮೆಯಾಗುತ್ತಿದ್ದಾರೆ .
ಬಳಸದ ಭಾಷೆ ಸಾಯುವುದು ಖಂಡಿತ.
ಅದರಲ್ಲಿ ಹಳೆಯ ಅಕ್ಷರ , ಭಾರೀ ಪ್ರಮಾಣದಲ್ಲಿ ಹೊಸ ಅಕ್ಷರ ಜಾರಿಗೆ ತಂದು ಕನ್ನಡಕ್ಕೆ ಇನ್ನಷ್ಟು ಹಾನಿ ಆದೀತೇನೋ ?

೩.
ನಾನು ಜೇನುಗೂಡಿಗೆ ಕಲ್ಲು ಎಸೆಯುತ್ತಿದ್ದೇನೋ ಏನೋ ?

ಏನೇ ಇರಲಿ . ನಾನು ಪ್ರಚಲಿತ ಕನ್ನಡವನ್ನೆ ಬರೆವವನು , ಓದುವವನು.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 524 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 13, 2007 - 2:13pm — Sunil Jayaprakash

ಹಳೆಯ ಅಕ್ಷರ ಏಕೆ ?

Sunil Jayaprakash's picture

ಮಿಶ್ರಿಕೋಟಿಗಳೇ, ನಿಮ್ಮ ಮೊದಲನೆಯ ಪಾಯಿಂಟಿಗೆ ನಾನೂ ದನಿಸೇರಿಸುವೆ.

ನೀವೆಂದಂತೆ ನಾವು ಯಾವಾಗಲೂ ನಮಗೆ ಇಷ್ಟವಾದ ಕನ್ನಡದಲ್ಲಿಯೇ ಬರೆಯೋಣ. ಬೇರೆ ಏನಾದರೂ ಚೆನ್ನಾಗಿದೆ ಎಂದು ಮನದಟ್ಟಾದರೆ ಮಾತ್ರವೇ ಹೊಸತನ್ನು ಕಲಿಯುವುದಕ್ಕೆ ಹಿಂಜರಿಕೆ ಮಾತ್ರ ಬೇಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 13, 2007 - 4:12pm — mahesha

ಹೞಗನ್ನಡದ ಕುಱಿತು ಮಾತಾಡುವಾಗ ಱ, ೞ ಬಳಸಬೇಕು! ಹೊಸಗನ್ನಡದಲ್ಲಿ optional

mahesha's picture

Quote:

ಏಕೆ ಈ ಹಳೆಯ ರ, ಳ ಬಳಸುತ್ತಿದ್ದೀರೋ ? ತಿಳಿಯದು.
ಶಂಕರ ಭಟ್ಟರೂ ಇದನ್ನು ಒಪ್ಪಲಿಕ್ಕಿಲ್ಲ.

ಹೌದು

ಱ ಮತ್ತು ೞ ಗಳ ಮಾತು ಬರುವುದು, ಹಳೆಗನ್ನಡದ ಒರೆಗಳ ಕುರಿತು ಆಡುವಾಗ. ನೆಱೆ ಮತ್ತು ನೆರೆ ನಡುವೆ ವ್ಯತ್ಯಾಸ ಮುಂತಾದವನ್ನು ತೋರುವಾಗ. ಹಳೆಗನ್ನಡವನ್ನು ಬಿಡಿಸಲು ಇದು ಬೇಕೇ ಬೇಕು.

Quote:

ನಾನು ಇಂಗ್ಲೀಷು , ದೇವನಾಗರಿ ಲಿಪಿಯ ಬರಹಗಳಿಗಿಂತ ಕನ್ನಡ ಲಿಪಿಯ ಬರಹಗಳನ್ನು ಓದಲು ಇಷ್ಟಪಡುತ್ತೇನೆ.

ಇಂಗ್ಲೀಷನ್ನು ಪೂರ್ತೀಯಾಗಿ ಕನ್ನಡದಲ್ಲಿ ಬರೆಯಲು za, o, A, f, q,w/v ಮುಂದಾವನ್ನು ಸೇರಿಸಬೇಕು
ದೇವನಾಗರಿಯನ್ನು ಪೂರ್ತಿ ಓದಲು, ಲೃ, ಲೄ, ೠ, ಜಿಹ್ವಾಮೂಲೀಯ ಮುಂತಾದವನ್ನು ಸೇರಿಸಬೇಕು.
ತಮಿಳು ಓದಲು ಱ, ೞ ಮರಳಿ ಸೇರಿಸಬೇಕು. ( ಒಂದೆರಡು 'ನ'ಗಳು ಬರಬೇಕು )
ಹಿಂದಿ ಓದಲು ಡ( ಕೆಳಗೆ ಚುಕ್ಕಿ), ಠ( ಕೆಳಗೆ ಚುಕ್ಕಿ), ಮುಂತಾದವು ಸೇರಿಸಬೇಕು
ಪಾರಸೀ ಓದಲು ಇನ್ನೆರಡು 'ಹ' ಸೇರಿಸಬೇಕು.
.....
...
...
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 13, 2007 - 11:06pm — ವೈಭವ

Re: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

ವೈಭವ's picture

"ಹಳೆಯ ರ, ಳ- ಯಾವಾಗಲೋ ಎಷ್ಟೋ ನೂರು ವರ್ಷ ಹಿಂದೆ ಬಿಟ್ಟ ಅಕ್ಷರಗಳು ,ಶಾಲೆಗಳಲ್ಲಿ ಕಲಿಸುತ್ತಿಲ್ಲ ."

ಅದಕ್ಕೆ ಇಲ್ಲಿ ಕಲಿತಾಇದ್ದೀವಿ..Smiling

ಇದು  ಒಂದು ಇತಿಹಾಸದ ಓದು ಅನ್ಕೊಳ್ಳಿ. ಪದಗಳ ಇತಿಹಾಸದ ಓದು...ಇದನ್ನು ಬಳಸಲೇಬೇಕಂತೇನೂ ಇಲ್ಲ... ಇಷ್ಟ ಆದ್ರೆ ಬಳಸಿ. ಇಲ್ಲ ಅಂದ್ರೆ ಬಿಟ್ ಹಾಕಿ.

 

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 13, 2007 - 11:22pm — hpn

ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

hpn's picture

ಮಿಶ್ರಿಕೋಟಿಯವರೆ, ನಿಮ್ಮ ಎರಡನೆ ಮತ್ತು ಮೂರನೆ ಪಾಯಿಂಟುಗಳಿಗೆ ನಾನೂ ದನಿ ಸೇರಿಸುವೆ.

ಮೊದಲನೆಯದು ಮಾತ್ರ ಒಪ್ಪಲಾಗದು. ಹ, ರ, ಳ, ನೂ ಇರಲಿ. ಹಳೆಗನ್ನಡದ ಅಕ್ಷರಗಳೂ ಇರಲಿ. ಯಾರೊಬ್ಬರಿಗೂ 'ಬಳಕೆಯಲ್ಲಿಲ್ಲದಿದ್ದರೂ ಇದನ್ನೇ ಬಳಸಿ', ಇದನ್ನು "ತೆಗೆದುಹಾಕಿದ್ದೇವೆ" ಬಳಸಬೇಡಿ ಎನ್ನುವುದು ಸರಿಕಾಣದು.

ಎರಡೂ ಕಡೆಯ extremity ಸಲ್ಲದು. ಸಂಸ್ಕೃತ ಪದಗಳೂ ಬೇಕು, ಹಳೆಗನ್ನಡ ಪದಗಳೂ ಬೇಕು, ಎಲ್ಲ ಅಕ್ಷರಗಳೂ ನಮ್ಮ ಪೆಟ್ಟಿಗೆಯಲ್ಲಿ ಲಭ್ಯವಿರಬೇಕು. ಬಳಕೆಗೆ ಮಾತ್ರ ಹಿಡಿತವಿರಕೂಡದು ಅಥವ ನಿಯಮಗಳನ್ನು ಹೇರಬಾರದು. ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ ಅಥವ ಬೇರೆಡೆ ಒತ್ತಡದಿಂದ ಹರಿಯುವಂತೆ ಮಾಡಿದರೆ ಪರಿಸರಕ್ಕೆ ತಂದೊಡ್ಡಿದ ಅಪಾಯದಂತೆ. ಭಾಷೆಯೆಂಬ ಹೊಳೆಯನ್ನೇ ವಿನಾಶದ ಅಂಚಿಗೆ ತಳ್ಳಿದಂತಾಗುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 14, 2007 - 3:39pm — mahesha

ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ

mahesha's picture

exactly...

HPN.. ಮಾತು ಬಹಳ ಸರಿಯಾಗಿದೆ. ನನಗೆ ಸೇರಿತು(ಹಿಡಿಸಿತು)

ನನ್ನಿ!

"ಹಳತರ ಸೊಬಗು, ಹೊಸದರ ಮರೆಗು" ಎರಡೂ ಬೇಕು
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 14, 2007 - 11:23pm — ವೈಭವ

Re: ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ

ವೈಭವ's picture

"ಹಳತರ ಸೊಬಗು, ಹೊಸದರ ಮರೆಗು" ಎರಡೂ ಬೇಕು"

ಮರೆಗು = ಮರೆತುಹೋಗು ಅಲ್ಲ ತಪ್ಪು.... ಮೆರುಗು =  merugu = shine, lustre;

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 15, 2007 - 1:59pm — mahesha

Re: ಭಾಷೆ ಹೊಳೆಯಂತೆ - ಅಡ್ಡಗಟ್ಟಿದರೆ

mahesha's picture

ನನ್ನಿ ವಯ್ಬವ...

ಅಲ್ಲಿ ನಾನು "ಹೞತರ ಸೊಬಗು ಹೊಸದರ ಮೆರೆಗು/ಮೆರೆಗು/ಮೆರಗು" ಅಂತ ಬೇರಯಬೇಕಿತ್ತು..

'ಎ'ತನ 'ಮ' ಬದಲು 'ರ'ಕ್ಕೆ ಬಿದ್ದು ತಪ್ಪಾಯ್ತು!! ( ಕೆಟ್ಟ ಟೈಪೊ )

ಅಳಲು(sorry), ಮನ್ನಿಸಿ(excuse) Sad

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 3:28pm — kannadakanda

ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

kannadakanda's picture

ನಾನಿದಕ್ಕೆಲ್ಲ ಒಪ್ಪುವುದಿಲ್ಲ. ಱ ಮತ್ತು ೞ ಬೞಸುವ ಕಾರಣಗಳು ಈ ಕೆೞಗಿನಂತಿವೆ.
೧) ತೆನ್ನುಡಿಗಳಿಗೆ ವಿಶೇಷಧ್ವನಿಗಳಿವು
೨) ನಮ್ಮ ನಿತ್ಯದ ಶಬ್ದಗಳಲ್ಲಿ ಈ ’ಬಱಿ’ ಹಾಗೂ ’ಕಱಿ’(ಕಪ್ಪು ಎಂಬರ್ಥದಲ್ಲಿ) ಬೞಸುವಾಗ ನಾವು ಬಹಳಷ್ಟು ಜನ ಕಂಪಿತ ’ಱ’ (In English, you follow the rule if someone says to prounounce 'r' with a trill. Why not in Kannada?)' . ಈ ಒಂದು ವಿಚಾರ ನಿಮಗೆ ಕನ್ನಡದ ವಿಶೇಷತೆಯನ್ನು ಮುಂದಿನ ಪೀಳಿಗೆಗೆ ಹೇೞಬೇಕಾದ ನಿಜವಾದ ಕಾಳಜಿಯಿಲ್ಲವೆಂದು ತೋಱಿಸುತ್ತದೆ.
೩) ಕಲಿಯುವಲ್ಲಿ ಎಲ್ಲವನ್ನು ಕಲಿಯಬೇಕು. ಕಲಿಸಬೇಕು. ಈ ’ಶ, ಷ, ಸ, ರ, ಱ, ಲ, ಳ, ೞ ಜ, z, ಫ, f ’ ಗಳ ನಡುವೆ ವ್ಯತ್ಯಾಸ ತಿಳಿದಿರಬೇಕು. ಎಲ್ಲವನ್ನು ಸಮಗ್ರವಾಗಿ ಕಲಿಸಬೇಕು. ಕಲಿಯಬೇಕು. ಗಣಿತಶಾಸ್ತ್ರ ಕಷ್ಟ. ಅದನ್ನು ಬಿಟ್ಟುಬಿಡೋಣವೆಂದು ನೀವು ಹೇಗೆ ಹೇೞುವುದಿಲ್ಲವೋ ಹಾಗೆ ಒಂದು ಭಾಷೆಯನ್ನು ಸಮಗ್ರವಾಗಿ ಹೞೆಯದರ ಜೊತೆಗೆ ಹೊಸತನ್ನು ಸೇರಿಸಿ ಕಲಿಯುವಂತೆ. ಶೇಕ್ಸ್‍ ಪಿಯರ್‍ ಇಂಗ್ಲಿಷ್ ಹೞೆಯದೆಂದು ನೀವು ಹೇಗೆ ಅದನ್ನು ಓದದೆ ಬಿಡುವುದಿಲ್ಲವೋ ಹಾಗೆ. ಅಥವಾ ಇನ್ನಾರಾದರೂ ಓದಿ ಹೇೞುವ ಹಾಗೆ.
೪) ನನಗೂ ಹೞಗನ್ನಡದಲ್ಲಿರುವ ವಿಶೇಷಗಳನ್ನು ತಿಳಿಸುವ ಆಸೆಯಿಂದಲೂ ಈ ಱ ಮತ್ತು ೞಗಳನ್ನು ಬೞಸುತ್ತೇನೆ. ಹಾಗಾಗಿಯಾದರೂ ಜನ ತಿಳಿದುಕೊಳ್ಳಲಿ ಎಂಬ ಆಶೆ ನನ್ನದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 4:00pm — mahesha

ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

mahesha's picture

ಕನ್ನಡದ ಕಂದ

ಮಿಶ್ರಕೋಟಿಗಳೂ ಇದೇ ಬ್ಲಾಗನ್ನು ಹೊಸದಾಗಿ ಹಾಕಿದ್ದಾರೆ... ಅವರದು ಇದೇ ರಾಗ ಇದೇ ತಾಳ. Smiling

ಬ್ಲಾಗಲ್ಲಿ ಚರ್ಚೆ ಬೇಡ.. ಈ ಸಂಗತಿಯಾಗಿ ಚರ್ಚೆಗಳಿವೆ ಅವನ್ನ ಹುಡುಕಿ ಅಲ್ಲಿ ಮಾತಾಡಣ!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 3:57pm — kannadakanda

ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

kannadakanda's picture

ಎರಡಱ ನಿಜವಾದ ರೂಪ ೧) ಮಱೆ ೨) ಮೆಱುಗು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2008 - 11:37pm — kannadakanda

ಉ: ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?

kannadakanda's picture

ಶ್ರೀಕಾಂತ್‍ ಮಿಶ್ರಿಕೋಟಿಯವರೆ,
ಎಲ್ಲವನ್ನು ತಿಳಿದು ಮಾತಾಡಬೇಕು. ಅದಕ್ಕೊಂದು ತೂಕವಿರುತ್ತದೆ. ಹೞಗನ್ನಡ, ಹೊಸಗನ್ನಡ ಎಲ್ಲವನ್ನು ಸಮಗ್ರವಾಗಿ ಅಭ್ಯಸಿಸಿ ಮಾತನಾಡಿ. ಇಲ್ಲದಿದ್ದರೆ ನಿಮಗೆ ನಿಜಕ್ಕೂ ಕನ್ನಡದ ಬಗ್ಗೆ ಆೞವಾದ ಪ್ರೀತಿಯಿದೆ ಎಂಬುದಱ ಬಗ್ಗೆ ಅನುಮಾನವಾಗುತ್ತದೆ. ಹೇಗೆ ಕಲಿಯುವಾಗ ಎಲ್ಲವನ್ನು ಕಲಿಯಬೇಕೋ ಹಾಗೆ ಕನ್ನಡದ ಎಲ್ಲಾ ವಿಶೇಷತೆಗಳನ್ನು ಹೇೞಬೇಕೆಂದರೆ ಈ ಭಾಷೆಯ ಎಲ್ಲವನ್ನು ತಿಳಿಯಬೇಕಾಗುತ್ತದೆ. ನಿಮಗೆ ಕನ್ನಡ ಭಾಷೆಯ ಆೞದ ಪರಿಚಯವಿಲ್ಲವೆಂದು ಕಾಣುತ್ತದೆ. ಅಗಲವಷ್ಟೆ ಗೊತ್ತಿದ್ದರೆ ಆೞದ ಮುತ್ತುರತ್ನಗಳ ಪರಿಚಯವಾಗುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? ನಿಮ್ಮ ಅಂಬೋಣ ಏನು?
  • ಕನ್ನಡದಲ್ಲಿ ಶುದ್ಧ ಸ್ವರಾಕ್ಷರಗಳಿಂದ ಕೊನೆಗೊಳ್ಳುವ ಪದಗಳಿವಿಯೆ?
  • ಕನ್ನಡ , ಸಂಸ್ಕೃತ , ಇಂಗ್ಲೀಷ್ ಶಬ್ದಗಳು - ಬಿ.ಎಂ.ಶ್ರೀ. ಅವರ ವಿಚಾರಗಳು
  • ಬರವಣಿಗೆಯ ಕನ್ನಡದ ದಿಕ್ಕು
  • ಹಳೆಯ ಗೆಳೆಯ :
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:35pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:32pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:28pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:25pm
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 10:12pm
  • benaka
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:02pm
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20pm
  • kalpana
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 5, 2008 - 9:15pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 14 ಅತಿಥಿಗಳು ಆನ್ಲೈನ್ ಇರುವರು.


ಎಲ್ಲ ಬಲ್ಲವರಿಲ್ಲ | ಬಲ್ಲವರು ಬಹಳಿಲ್ಲ
ಬಲ್ಲಿದರು ಇದ್ದು ಬಲವಿಲ್ಲ ಸಾಹಿತ್ಯ |
ವೆಲ್ಲವರಿಗಿಲ್ಲ ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator