ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

May 15, 2007 - 3:05pm — shreekant.mishrikoti

ಎಷ್ಟೋ ಸಿದ್ಧವಾದ ವಿಷಯಗಳನ್ನು ಕೂಡ ಮತ್ತೆ ಮತ್ತೆ ಹೇಳುತ್ತಲೇ ಇರಬೇಕಾಗುತ್ತದೆ .
ಉದಾಹರಣೆಗೆ , ಮರಾಠೀ ಮತ್ತು ಕನ್ನಡದ ಸಂಬಂಧ

೧. ಈಗಿನ ಮಹಾರಾಷ್ಟ್ರದಲ್ಲೆಲ್ಲ ಕನ್ನಡವೇ ಇತ್ತು .
೨. ೧೦-೧೨ ಶತಮಾನದ ಹೊತ್ತಿಗೆ ಮರಾಠಿ ಉದಯವಾಯಿತು .
೩. ಅದರ ಆಧಾರ ಕನ್ನಡವೇ .
೪. ಇದನ್ನು ಅನೇಕ ಮರಾಠೀ ಸಂಶೋಧಕರೂ ನೇರವಾಗಿ ಅಥವಾ ಸುತ್ತು ಬಳಸಿ ಒಪ್ಪಿದ್ದಾರೆ.
೫. ೫ ನೇ ಶತಮಾನದಿಂದ ೧೫ ರವರೆಗೆ ಮಹಾರಾಷ್ಟ್ರವನ್ನು ಕನ್ನಡ ಅರಸರೇ ಆಳಿದ್ದಾರೆ.
೬. ಅತೀ ಹೆಚ್ಚು ಕನ್ನಡ ಶಾಸನಗಳು ಮಹಾರಾಷ್ತ್ರದಲ್ಲೇ ಸಿಕ್ಕಿವೆ.
೭. ಮಹಾರಾಷ್ಟ್ರದಲ್ಲಿ ಸಿಕ್ಕ ಶಾಸನಗಳ ಪೈಕಿ ೭೫ % ಕನ್ನಡದ್ದೇ
೮. ಅಜಂತಾ ಎಲ್ಲೋರ ಕಟ್ಟಿದವರು ಕನ್ನಡಿಗರು .
೯. ಈ ಎಲ್ಲ ವಿಷಯವನ್ನು ಅನೇಕ ಪುಸ್ತಕ (ಶಂ.ಬಾ.ಜೋಷಿ ಯವರ ಪುಸ್ತಕಗಳು) ಮುಖಾಂತರವೂ ,
ಮಹಾರಾಷ್ಟ್ರ ಸರಕಾರದ ವೆಬ್‌ಸೈಟಿನ ಮೂಲಕವೂ , ಮಹಾರಾಷ್ಟ್ರದ ಇತಿಹಾಸದ ಮೂಲಕವೂ ( ಅವರ ಇತಿಹಾಸ ಶಿವಾಜಿಯಿಂದ ಆರಂಭ !) ಖಚಿತಪಡಿಸಿಕೊಳ್ಳಬಹುದು.
೧೦.ಹಳೆಯ ಮರಾಠೀ ಎನ್ನುವದು ಕನ್ನಡವೇ ಆಗಿದೆ.
೧೧. ಅಜಂತಾ ಎಲ್ಲೋರಗಳನ್ನು ಅವರ ಸಂಸ್ಕೃತಿಯ ಹೆಮ್ಮೆಯ ವಿಷಯ ಎಂದು ತೋರಿಸಿಕೊಳ್ಳುವದಿಲ್ಲ!
೧೨. ಏನೋ ಕಾರಣಗಳಿಗಾಗಿ ಇಲ್ಲಿಂದ ಕನ್ನಡ ಕಣ್ಮರೆ ಆಯಿತು . ಇದಕ್ಕೆ ಎರಡು ವಿವರಣೆಗಳಿವೆ.
೧. ವೈದಿಕ ಸಂಸ್ಕೃತಿಯ ಪುನರುತ್ತಾನ - ಮರಾಟಿ ಭಾಶೆಯ ಉದಯದೊಂದಿಗೆ ಇತ್ಯಾದಿ
೨. ಇನ್ನೊಂದು ಸಂಸ್ಕೃತವನ್ನು ಹೇಗೆ ಜೀರ್ಣಿಸಿಕೊಳ್ಳುವದು ಎಂಬ ಬಗ್ಗೆ ಕನ್ನಡದ ತಪ್ಪು ಹೆಜ್ಜೆ. ( ಇದರ ಬಗ್ಗೆ ಸರಿಯಾಗಿ ತಿಳಿದಿಲ )
೧೨. ರಾಜಕೀಯ ಕಾರಣಗಳಿಂದಾಗಿ ಕರ್ನಾಟಕದ ಬಹು ಭಾಗ ಒಂದು ಅಂಧಕಾರ ಯುಗ ಕಂಡಿತು. ಉತ್ತರ ಕರ್ನಾಟಕದ ಮೇಲೆ ಮರಾಠೀ ಆಡಳಿತದ ಮೇಲುಗೈ ಆಗಿ ಸ್ವಲ್ಪ ಮರಾಠೀ ಪ್ರಭಾವ ಆಗಿದೆ .

ಈ ವಿಷಯ ಅಷ್ಟೇ ಅಲ್ಲ ; ಅನೇಕರು ಅಂತರ್ಜಾಲದಲ್ಲಿರುವದೇ ಸತ್ಯ . ಎಂದೂ ಅಂತರ್ಜಾಲದಲ್ಲಿನ ಆಧಾರಗಳೇ ಅಂತಿಮ ಎಂದೂ ನಂಬುತ್ತಾರೆ! . ಇದಕ್ಕೆ ಅಂತರ್ಜಾಲ ಪುಕ್ಕಟೆಯಾಗಿರುವದೂ , ಕೂತ ಸ್ಥಳದಲ್ಲಿಯೇ ಮಾಹಿತಿ ( ಸರಿಯೋ , ತಪ್ಪೋ ) ಸಿಗುವದೂ ಕಾರಣವಿರಬೇಕು! .

ಒಂದು ಒಳ್ಳೆಯ ಪುಸ್ತಕದ ಬಗ್ಗೆ ಹೇಳುತ್ತಿದ್ದಂತೆ , ಅಂತರ್ಜಾಲದಲ್ಲಿ ನ ಕೊಂಡಿಯನ್ನು ಕೇಳುತ್ತಾರೆ! . ಹೊಸದಾದ ಮಾಧ್ಯಮ ಆಗಿರುವ ಅಂತರ್ಜಾಲ ಸೇರದ ಎಷ್ಟೋ ವಿಷಯಗಳಿವೆ ಎಂಬುದನ್ನು ಮರೆಯುತ್ತಾರೆ! . ಕೊಂಡು ಓದಲು , ಪುಸ್ತಕ ಹುಡುಕಲು ಒಲ್ಲರು!

ಇದೆಲ್ಲ ನಾನು ಓದಿ ತಿಳಿದ ವಿಷಯ ಮತ್ತು ಅನಿಸಿಕೆ .

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 672 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 15, 2007 - 5:14pm — mahesha

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

mahesha's picture

ಸಾರ್‍

ನೀವು ಹೇಳಿದ್ದು ಬಹಳ ಒಳ್ಳೇದೇ ಆಯ್ತು. ಈ ವಿಕೀಪೀಡಿಯ ಅಂತ ಒಂದು ಬಂದು ಬಿಟ್ಟಿದೆಯಲ್ಲ, ಇದರಲ್ಲಿ ಯಾರು ಏನು ಬೇಕಾದರೂ, ಹೆಂಗೆ ಬೇಕಾದರೂ ಸೇರಿಸಿಬಿಡಬವುದು. ಹಿಡಿತವೇ ಇಲ್ಲ. ಹಿಡಿತವಿದ್ದರೂ ಅಲ್ಲಲ್ಲಿ ಕಳ್ಳರಂತೆ ಕಾಣದ ಹಂಗೆ ಪುಟಗಳನ್ನು ಸೇರಿಸಿಬಿಡುತ್ತಾರೆ.

ಇಂಗ್ಲೀಸು ವಿಕೀಪೀಡಿಯದ ತಮಿಳು ಕುರಿತ ಪುಟಗಳನ್ನು ನೋಡಿರಿ, ಅಪ್ಪಾ, ಏನೇನೋ!

http://en.wikipedia.org/wiki/Kalabhras

ಕಳಭ್ರ ಅನ್ನೋ ಅರಸತನವಂತೆ, ಅವರು ಕನ್ನಡಿಗರಿರಬವುದಂತೆ, ಅವರು ತಮಿಳರ ಮೇಲೆ ಬಲು ಹಿಂದೇ, ನುಗ್ಗಿ ಅವರ ಸಂಗ ಕಬ್ಬವನ್ನೆಲ್ಲ ಹಾಳುಗೈದರಂತೆ! ಬುರುಡೇ ಪುರಾಣವಂತೆ Smiling.

ಅದಕ್ಕೆ ನಾವು ಒಂದು ದಿಟವಾದ, ಎಲ್ಲರೂ ನಂಬತಕ್ಕ ಒಂದು "ಕನ್ನಡ ಹಿಸ್ಟರಿ" (ನುಡಿ, ನೆಲ, ಮಂದಿ) ಕುರಿತು ಇಂಟರ್ನೆಟಲ್ಲಿ ಒಂದು ಸೈಟನ್ನು ಮಾಡಲೆಳಸಬೇಕು.

ನಾನು + ನನಗೆ ತಿಳಿದಿರುವ, ಕೆಲವು ಹುರುಪಿರುವವರು, ಇದರ ಬಗ್ಗೆ ಮೊಗಸಲು ಅಣಿಯಾಗುತ್ತಿದ್ದೇವೆ. ನೋಡೋಣ! ಇನ್ನೂ ಉಂಕಿನಲ್ಲಿದೆ!

ಇದರ ಬಗ್ಗೆ ನೀವು ನೆರವಾಗ ಬಯಸಿದ್ದಲ್ಲಿ, ನನಗೆ ಒಂದು ಮಿಂಚೋಲೆ ಹಾಕಿರಿ!

ನನ್ನಿ!!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 10:34pm — hamsanandi

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

hamsanandi's picture

Quote:
ಇಂಗ್ಲೀಸು ವಿಕೀಪೀಡಿಯದ ತಮಿಳು ಕುರಿತ ಪುಟಗಳನ್ನು ನೋಡಿರಿ, ಅಪ್ಪಾ, ಏನೇನೋ!

http://en.wikipedia.org/wiki/Kalabhras

ಕಳಭ್ರ ಅನ್ನೋ ಅರಸತನವಂತೆ, ಅವರು ಕನ್ನಡಿಗರಿರಬವುದಂತೆ, ಅವರು ತಮಿಳರ ಮೇಲೆ ಬಲು ಹಿಂದೇ, ನುಗ್ಗಿ ಅವರ ಸಂಗ ಕಬ್ಬವನ್ನೆಲ್ಲ ಹಾಳುಗೈದರಂತೆ! ಬುರುಡೇ ಪುರಾಣವಂತೆ .

ಇದರ ಬಗ್ಗೆ ಹೆಚ್ಚು ಆಸಕ್ತಿ ಇರುವವರು ಸ್ವಾಮಿ ಅವರ ತಮಿಳುತಲೆಗಳ ನಡುವೆ ಓದಬಹುದು.
ಈ ಎಲ್ಲ ಹುಚ್ಚ್ಗಾಟಕ್ಕೂ ಒಂದೋ ಎರಡೋ ಶಾಸನಗಳಲ್ಲಿರುವ ಕೆಲವು ಹೇಳಿಕೆಗಳೇ ಕಾರಣ. "ಕಳಪ್ಪಿರನೆಂಬನ್ ಕಲಿಯರಸನ್" ಎಂಬುದನ್ನು ನೀಲಕಂಠ ಶಾಸ್ರ್ತ್ರಿಅವರು ಕಳಭ್ರನೆಂಭ ಕೆಟ್ಟ ರಾಜ ಎಂದು ಅರ್ಥೈಸಿದ್ದರಿಂದಲೇ ಈ ವಾದಕ್ಕೆ ಪುಟ ಸಿಕ್ಕಿದ್ದು ಎಂದು ಸ್ವಾಮಿ ಅವರ ವಾದ.
ಕಲಿ ಎಂಬ ಪದಕ್ಕೆ, ಕನ್ನಡದಲ್ಲೂ ವೀರ ಎಂಬ ಅರ್ಥ ಇರುವುದನ್ನು ನಾವು ಗಮನಿಸಬೇಕು.

ದುರ್ವಿನೀತ ಗಂಗ ಕೆಲವು ಕಾಲ ಕೊಂಗುನಾಡು (ಈ ಪದವನ್ನು ತಮಾಷೆಗೆ ಅಥವಾ ಅಣಕವಾಡಲು ಹೇಳುತ್ತಿಲ್ಲ್ - ಕೊಂಗುನಾಡು ಎಂಬುದು ತಮಿಳುನಾಡಿನ ಒಂದು ಭಾಗ. ಸೇಲಂ, ಈರೋಡ್, ಧರ್ಮಪುರಿ ತಿರುಪ್ಪೂರ್ ಮೊದಲಾದ ಪ್ರದೇಶವನ್ನು ಒಳಗೊಳ್ಳುತ್ತೆ ಕೊಂಗುನಾಡು. ಆದ್ದರಿಂದ ಕೊಂಗ ಎಂದರೆ, ಈ ಭಾಗದಿಂದ ಬಂದ ತಮಿಳ ಎಂದಷ್ಯೇ ಅರ್ಥ.) ಪ್ರದೇಶವನ್ನು ಆಳಿದ್ದನೆಂದು ಆಧಾರ ಇದೆಯಂತೆ. ಇವನೇ ಈ ’ಕಳಭ್ರ’ನೆನ್ನುವ ಕಲಿಯರಸ ಇದ್ದಿರಬೇಕು ಎಂಬುದು ಸ್ವಾಮಿ ಅವರ ವಾದ. ಗಂಗರ ಲಾಂಛನವೂ ಕಳಭ್ರ = ಆನೆ, ಅನ್ನೋದನ್ನ ನಾವು ನೆನಸಿಕೊಳ್ಳಬಹುದು.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 1:10pm — mahesha

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

mahesha's picture

ಹಂಸಾನಂದಿ,

ನೆನ್ನೆ 'ತಮಿಳು ತಲೆಗಳ ನಡುವೆ' ತೆಗೆದು ನೋಡಿದೆ. ಅವುದು ಅಲ್ಲಿ ಅವರು ಹಾಗೆ ಬರೆದಿದಾರೆ.

ತಮಿಳು ತಲೆಗಳ ನಡುವೆಯಲ್ಲಿ ಒಂದು ಐಬ ಕಂಡೆನು. ಅವರು "ತೆಂಕಣ ಬಾರತದಲ್ಲಿ ಕಲ್ಲುಯುಗದ ಮಂದಿ ಇರಲಿಲ್ಲ. ಅದಕ್ಕೆ ಪುರಾವೆಯಿಲ್ಲ, ತೆಂಕಣಕ್ಕೆ ಎಲ್ಲ ವಲಸೆ ಬಂದವರೇ" ಎಂದು ಬರೆದಿದ್ದಾರೆ.

ಆದರೆ ಅದು ಅನಿತ್ತು ಸರಿಯಿಲ್ಲ. ಬಳ್ಳಾರಿ ಜಿಲ್ಲೆಯ ಗವಿಗಳಲ್ಲಿ, ದೇವನಹಳ್ಳಿ ಹತ್ರವೂ, ತುಮಕೂರ ಹತ್ರವೂ, ಕರ್ನಾಡಿಲ್ಲೇ ಕಲ್ಲುಯುಗದ ಮಂದಿಯ ಹಳೆಯುಳಿಕೆಗಳು ದೊರೆತಿವೆ.

ಕೊಂಗುನಾಡು
http://www.coimbatore.com/kongunadu/home.htm
=======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 1:17pm — mahesha

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

mahesha's picture

ಕರ್ನಾಡಿಲ್ಲೇ ಅಲ್ಲ ಕರ್ನಾಡಲ್ಲೇ!
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 10:03pm — ASHOKKUMAR

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

ASHOKKUMAR's picture

Quote:
ಹೊಸದಾದ ಮಾಧ್ಯಮ ಆಗಿರುವ ಅಂತರ್ಜಾಲ ಸೇರದ ಎಷ್ಟೋ ವಿಷಯಗಳಿವೆ ಎಂಬುದನ್ನು ಮರೆಯುತ್ತಾರೆ!
...
ಎಂದೂ ಅಂತರ್ಜಾಲದಲ್ಲಿನ ಆಧಾರಗಳೇ ಅಂತಿಮ ಎಂದೂ ನಂಬುತ್ತಾರೆ!


ಈ ಮಾತು ಕಟು ಸತ್ಯ. ಅಂತರ್ಜಾಲದಲ್ಲಿ ಕಂಡದ್ದನ್ನು ಪರಾಂಬರಿಸಿ ನೋಡುವುದೂ ಮುಖ್ಯವೆನ್ನುವುದೂ ಅಷ್ಟೆ ಸತ್ಯ.
  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 15, 2007 - 10:45pm — hamsanandi

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

hamsanandi's picture

Quote:
೬. ಅತೀ ಹೆಚ್ಚು ಕನ್ನಡ ಶಾಸನಗಳು ಮಹಾರಾಷ್ತ್ರದಲ್ಲೇ ಸಿಕ್ಕಿವೆ.

ಈ ವಿಷಯ ನಿಮಗೆ ಎಲ್ಲಿ ಸಿಕ್ಕಿತು? ಆಸಕ್ತಿಗೆ ಕೇಳುತ್ತಿದ್ದೇನೆ. ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿರುವ ಶಾಸನಗಳ ಸಂಖ್ಯೆಯ ಪಟ್ಟಿಯೇನಾದರೂ ಇದ್ದರೆ ಇಲ್ಲಿ ಹಾಕಿ.

Quote:
೧೧. ಅಜಂತಾ ಎಲ್ಲೋರಗಳನ್ನು ಅವರ ಸಂಸ್ಕೃತಿಯ ಹೆಮ್ಮೆಯ ವಿಷಯ ಎಂದು ತೋರಿಸಿಕೊಳ್ಳುವದಿಲ್ಲ!

ಪಾಪ, ಅಜಂತಾ ಎಲ್ಲೋರಗಳನ್ನ ಬಹಳ ಚೆನ್ನಾಗಿ ಇಟ್ಟುಕೊಂಡಿದ್ದಾರೆ ಸ್ವಾಮಿ, ಅದಕ್ಕೆ ನಾವು ಖಂಡಿತ ಸಂತೋಷಪಡಬೇಕು.

ಮಹಾರಾಷ್ಟ್ರದಲ್ಲಿ, ಅಜಂತ ಎಲ್ಲೋರ ಅಲ್ಲದೆ ಇನ್ನೂ ಹಲವೆಡೆ ಕನ್ನಡದರಸರ ದೇವಾಲಯಗಳಿವೆ. ನಾನು ಹದಿನೈದು ವರ್ಷಗಳ ಹಿಂದೆ ನಾಸಿಕದ ಬಳಿಯ ಸಿನ್ನರ್ ಗೆ ಹೋಗಿದ್ದಾಗ ಅಲ್ಲಿಯ ಗೊಂದೇಶ್ವರ ದೇವಾಲಯವನ್ನು ನೋಡಿದ್ದೆ. ಈ ರೀತಿಯ ಕಲ್ಲಿನಲ್ಲಿ ಕಟ್ಟಿದ ದೇವಾಲಯಗಳು ಅಲ್ಲಿ ಕಡಿಮೆಯೇ. ಅಲ್ಲಿ ಹೊಯ್ದಳರ ಶೈಲಿ (ನಕ್ಷತ್ರಾಕಾರದ ಕಟ್ಟಡ) ಇರುವುದನ್ನು ಕಂಡು ಚಕಿತನಾಗಿದ್ದೆ.

ಈಗ ಗೂಗಲಿಸಿದ್ದಕ್ಕೆ ಅಲ್ಲಿಯ ಕೆಲವು ಚಿತ್ರ್ಗಗಳು ದೊರೆತವು - ಇದು ದೇವಗಿರಿ ಯಾದವರದ್ದಂತೆ - ಅವರೂ ಕನ್ನಡದವರೇ ಎಂಬುದು ಗೊತ್ತಿರುವ ವಿಷಯವೇ. ಮತ್ತೆ ಹೊಯ್ಸಳರ ಸಮಕಾಲೀನರು ಕೂಡ.

ಕೆಲವು ಕೊಂಡಿಗಳು ಇಲ್ಲಿವೆ. ನೋಡಿ ಆನಂದಿಸಿ.

ಗೊಂದೇಶ್ವರ ದೇವಾಲಯ (ಸಿನ್ನರ್) - http://shri-lakshmi.tripod.com/1221.htm

ಮಾಹಿತಿ - http://shri-lakshmi.tripod.com/gondeshwar.htm

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 1:04pm — mahesha

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

mahesha's picture

ಹಂಸಾನಂದಿ

"ಮಹಾರಾಷ್ಟ್ರದ ಕನ್ನಡ ಶಾಸನಗಳು"( ಇಂಗ್ಲೀಸು ) ಎಂಬ ಹೊತ್ತಗೆ ಇದೆ. ನಾನು ನೋಡೀನಿ.

ಅವರ ಲೆಕ್ಕದಂತೆ, ಅಲ್ಲಿ ಸಿಕ್ಕ ೧೦೦೦ ಶಾಸನಗಳಲ್ಲಿ ಸುಮಾರು ೫೦೦-೬೦೦ ಕನ್ನಡ, ೩೦೦-೪೦೦ ಸಂಸ್ಕ್ರುತ, ೧೦೦ ಮರಾಟಿ/ಪ್ರಾಕ್ರುತ ಅಂತ ಓದಿದ ನೆಪ್ಪು.

ಅಲ್ಲಿ ರಾಷ್ಟ್ರಕೂಟರ ಗುಡಿಗಳು ಬಲು ಇವೆ ಎಂದು ಕೇಳೀನಿ.
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 1:20pm — shreekant.mishrikoti

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

shreekant.mishrikoti's picture

೧.

Quote:
ಬೇರೆ ಬೇರೆ ರಾಜ್ಯಗಳಲ್ಲಿ ಸಿಕ್ಕಿರುವ ಶಾಸನಗಳ ಸಂಖ್ಯೆಯ ಪಟ್ಟಿಯೇನಾದರೂ ಇದ್ದರೆ ಇಲ್ಲಿ ಹಾಕಿ.

ಮನೆಯಲ್ಲಿರುವ ಪುಸ್ತಕಗಳಲ್ಲಿ ಇದೆ ; ಒಂದು ದಿನ ಹಾಕುವೆ.

೨

Quote:
ಅಜಂತಾ ಎಲ್ಲೋರಗಳನ್ನು ಅವರ ಸಂಸ್ಕೃತಿಯ ಹೆಮ್ಮೆಯ ವಿಷಯ ಎಂದು ತೋರಿಸಿಕೊಳ್ಳುವದಿಲ್ಲ!

ಈ ಮಾತು ಏಕೆ ಹೇಳಿದ್ದೆಂದರೆ , ನಾವು ನೋಡುವ ಬೇರೆ ಬೇರೆ ಭಾಷೆಯ/ರಾಜ್ಯದ ಟೀವಿ ಚಾನೆಲ್ಲುಗಳಲ್ಲಿ ಸಾಮಾನ್ಯವಾಗಿ ಪ್ರಾತಿನಿಧಿಕ ಸಿಗ್ನೇಚರ್ ಟ್ಯೂನ್ ( ಶಬ್ದ ಸರಿ ತಾನೆ? ) ಗಳು ಇರುತ್ತವೆ. ನಮ್ಮ 'ಚಂದನ'ದ 'ನಾಡಿನ ನಾಡಿ ಚಂದನ' ಮತ್ತು ಈ-ಟೀವಿಯದನ್ನೂ ಮರಾಠಿಯ ಸಹ್ಯಾದ್ರಿ ಅಥವ ಈ-ಟೀವಿ ಗಳಲ್ಲಿ ಬರುವ ದನ್ನೂ ನೋಡಿ ಈ ಮಾತು ಹೇಳಿದೆ.
ಅವರದರಲ್ಲಿ ಶಿವಾಜಿ-ಕೇಸರಿಧ್ವಜ-ಕೋಟೆ ಇರುತ್ತವೆ. ಅಥವಾ ಜನಪದ ಕುಣಿತ ಇರುತ್ತದೆ .

ಅದೇ ನಮ್ಮ 'ನಾಡಿನ ನಾಡಿ ಚಂದನ' ಹಾಡಿನ ಸಾಲುಗಳನ್ನು ಗಮನಿಸಿ.

ಅವರ ಇತಿಹಾಸ ಅಧಿಕೃತವಾಗಿ , ಮರಾಠಿ ರಾಜರ ಆಳ್ವಿಕೆಯಿಂದ ಆರಂಭವಾಗುತ್ತದೆ . ಮುಂಚಿನ ಇತಿಹಾಸದ ಬಗ್ಗೆ ಚಕಾರವೆತ್ತುವದಿಲ್ಲ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 8:08pm — Rohit

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

Rohit's picture

ಈ ವಿಷಯದ ಬಗ್ಗೆ ನನ್ನ ವಿಚಾರಗಳು ಸ್ವಲ್ಪ ತದ್ವಿರುದ್ಧವಾಗಿವೆ. ಮಹಾರಾಷ್ಟ್ರದ ತುಂಬೆಲ್ಲ ಕನ್ನಡವೇ ಪ್ರಚಲಿತವಾಗಿತ್ತು ಎನ್ನುವುದಕ್ಕೆ, ವಿದ್ವಾಂಸರು ಬಳಸುವ ಮುಖ್ಯ ಆಧಾರಗಳು, ಕವಿರಾಜಮಾರ್ಗದ ’ಕಾವೇರಿಯಿಂದಮಾ..’ ಪದ್ಯ ಹಾಗೂ, ಲಭ್ಯವಿರುವ ಕನ್ನಡ ಶಾಸನಗಳು. ಆದರೆ ಇವುಗಳಿಂದ ಕನ್ನಡ ಮಾತ್ರವೇ ಈ ಭಾಗದ ಜನರ ಭಾಷೆಯಾಗಿತ್ತು ಎಂದು ಹೇಳುವುದು ಅಷ್ಟು ಸಮಂಜಸವಾಗಲಾರದು.
ನನ್ನ ಅಭಿಪ್ರಾಯದಲ್ಲಿ, ಆಗಿನ ಕಾಲಕ್ಕೆ ಈ ಭಾಗವನ್ನು ಆಳಿದ ಆಳರಸರು(ಚಾಲುಕ್ಯರು, ರಾಷ್ಟ್ರಕೂಟರು) ಕನ್ನಡಿಗರಾಗಿದ್ದರು. ಅವರ ಅಧಿಕಾರಿವರ್ಗದವರು ಕನ್ನಡಿಗರಾಗಿದ್ದರು. ಹಾಗಾಗಿ ಕನ್ನಡವು ಆಡಳಿತದಲ್ಲಿ ಹೆಚ್ಚು ವ್ಯಾಪಕವಾಗಿ ಬಳಕೆಯಲ್ಲಿತ್ತು. ಅಧಿಕಾರಗಳಿಂದ ಬರೆಸಲ್ಪಟ್ಟ ಶಾಸನಗಳು ಸಹಜವಾಗಿ ಕನ್ನಡದಲ್ಲಿದ್ದುವು. ಕಾವೇರಿಯಿಂದಮಾ ಗೋದಾವರಿ ಎಂಬುವಲ್ಲಿನ, ಗೋದಾವರಿಯು, ನಮ್ಮ ಬೀದರಿನ ಗಡಿಯಿಂದ ಸುಮಾರು ೫೦ ಕಿಮೀ ದೂರದಲ್ಲಿ ಹರಿಯುವ ಗೋದಾವರಿ ನದಿಯ ಪ್ರದೇಶವಾಗಿದ್ದಿರಬಹುದಾದ ಸಾಧ್ಯತೆ ಹೆಚ್ಚು. ಏಕೆಂದರೆ, ರಾಷ್ಟ್ರಕೂಟರು ಆಳುತ್ತಿದ್ದ ಮಳಖೇಡ, ಲಾತೂರು ಭಾಗಕ್ಕೆ ಇದು ಹೊಂದಿಕೊಂಡಂತಿದೆ.
ಅಧಿಕಾರದ ಭಾಷೆ ಬೇರೆಯಿದ್ದು, ಜನಸಾಮಾನ್ಯರ ಭಾಷೆ ಬೇರೆಯಾಗಿರುವ, ಉದಾಹರಣೆಗಳು ಇಂದಿಗೂ ನಮ್ಮೆದುರಿಗಿವೆ.(ಉದಾ: ದಕ್ಷಿಣ ಕನ್ನಡ, ಕೊಡಗು).

ಹಾಗೆ ನೋಡಿದರೆ, ದಕ್ಷಿಣ ಸೊಲ್ಲಾಪುರ, ಜತ್ತ, ಅಕ್ಕಲಕೋಟೆ, ಗಡಹಿಂಗ್ಲಜ, ಆಂಧ್ರದ ಬಿಚ್ಕುಂದ ಭಾಗದಲ್ಲಿ ಇಂದಿಗೂ ಕನ್ನಡವನ್ನು ಮಾತನಾಡುವವರಿದ್ದಾರೆ. ಆದರೆ ಬೇರೆ ಆಡಳಿತ ಪ್ರದೇಶಕ್ಕೆ ಸೇರಿಹೋಗಿವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 16, 2007 - 8:37pm — mahesha

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

mahesha's picture

Rohit,

ನಿಮ್ಮ ಮಾತು ಒಪ್ಪುವಂತದ್ದು.

೧) ಕನ್ನಡದರಸರು + ಕನ್ನಡ ಮಾತಾಡೋರು ಕಾವೇರಿಯಿಂದ ಗೋದಾವರಿವರೆಗೂ( ನರ್ಮದೆ ವರೆಗೂ? ) ಇದ್ರು. ಅವರ ಜತೆ ಬೇರೆಯವರೂ ಇದ್ರು.
೨) ಕರಾಮಾ ಹೇಳುವಂತೆ ಕನ್ನಡನೆಲದ ತಿರುಳು, ತಿರುಳ್ಗನ್ನಡ ನೆಲ ಈಗಿನ ಬೆಳಗಾವಿ, ಪಟ್ಟದಕಲ್ಲು, ಕೊಪ್ಪಳ, ಒಕುಂದದಲ್ಲಿ ಇತ್ತು. ಅದು ಅಚ್ಚಗನ್ನಡ ನೆಲವಾಗಿತ್ತು ಎಂದು.
೩) ಈ ತಿರುಳ್ಗನ್ನಡ ನಾಡಿನ ಬಡಗಲಿಗೆ ಹೇರಳವಾಗಿ ಪಾಗತ( ಪ್ರಾಕೃತ/ಮಹಾರಾಷ್ಟ್ರಿ ಪಾಕೃತ ) ಬರೆಸಿದ ಕನ್ನಡವಿದ್ದಿರಬಹುದು. ಮಾನ್ಯಖೇಟದಲ್ಲಿ ಬರೆದುದು ಎಂದು ಹೇಳಿಕೊಂಡಿರುವ 'ಕರಾಮಾ'ದಲ್ಲೂ ಸಿಕ್ಕಾಪಟ್ಟೆ ಪ್ರಾಕೃತ ಇದೆ. ( ಘಾಸ ಮುಂತಾದವು ).
ತಿರುಳ್ಗನ್ನಡ ನಾಡಿನ ತೆಂಕಣದಲ್ಲಿ, ಹೆಚ್ಚು ಹೆಚ್ಚು ತಮಿಳರು, ತಿಗಳರು, ಕೊಂಗರ, ನುಡಿಗೆ ಹತ್ತಿರವಾದ ಕನ್ನಡವಿದ್ದಿರಬಹುದು.
ಅದರಲ್ಲೇ ಈ ಎರಡು ಬಗೆಯ ಬಗ್ಗೆ ಹೇಳಿದೆ.
೪)
http://72.14.235.104/search?q=cache:fsLvKz_Tm3sJ:www.deccanherald.com/deccanherald/apr272004/spt10.asp+kannada+chhattisgarh&hl=en&ct=clnk&cd=3
"Kannada footprints in Chattisgarh "
http://www.ethnologue.com/show_lang_family.asp?code=hoy
ಚತ್ತೀಸ್ ಗಡದಲ್ಲಿ "ಹೊಲಿಯ" ಎಂಬ ಕನ್ನಡದ ನುಡಿಬಗೆ( dialect ) ಇದೆ.

ಇದಲ್ಲದೆ ಮುಂಬೈಯ "ಕೋಲಿ" ಮಂದಿಯೂ ಕನ್ನಡಿಗರು ಎಂಬ ಮಾತು ಕೇಳೀನಿ.

೫) ನೀಲಗಿರಿಯಲ್ಲಿ ದೊಡ್ಡದಾದ ಬುಡಕಟ್ಟು ಮಂದಿ ಬಡಗರು ಕನ್ನಡಿಗರು ( ತೊದರೂ ಕೂಡ ಅಂತೆ )
http://www.geocities.com/TheTropics/Cabana/3841/badaga.html

೭) ಬಹಳ ಹಿಂದೆ ಸಂಗನ ಗೌಡ್ರು, ಗುಜರಾತಲ್ಲಿ "ಕಾಮನ ಕಟ್ಟೆ" ಎಂಬ ಊರನ್ನು ಪತ್ತೆಗೈ ತೋರಿದ್ರು.

೮) ಸೊಲಂಕಿ ಎನ್ನುವ ರಾಜಪೂತ ಮನೆತನಕ್ಕೆ ಕನ್ನಡದವರು ಮೂಲವಂತೆ.
ವಿಕೀಪಿಡಿಯ http://en.wikipedia.org/wiki/Solanki ( ನನಗೆ ಸರಿಯಾಗಿ ಗೊತ್ತಿಲ್ಲ )

೯) ಬಂಗಾಳವನ್ನಾಳಿದ ಸೇನರು ಕನ್ನಡಿಗರಂತೆ. http://a-bangladesh.com/banglapedia/HT/S_0199.htm

೧೦) ಮಿಥಿಲಾದೇಶವನ್ನು ಆಳಿದ ಕನ್ನಡಿಗರು ಇದ್ದಾರಂತೆ.

ಒಟ್ಟಿನಲ್ಲಿ
ಕಾವೇರಿಯಿಂದ (ನರ್ಮದೆ?)ಗೋದಾವರಿ ಕನ್ನಡದ ಮಂದಿ ಇದ್ದದ್ದಂತೂ, ಆಳಿದ್ದಂತೂ ದಿಟ. ಪೂರ ಅವರೇ ಇದ್ರು ಅಂತ ಅಲ್ಲ.
ಇದಲ್ದೆ ಕನ್ನಡದೋರು ಗುಜರಾತ, ಮಿಥಿಲಾ, ಬಂಗಾಳ ಮುಂತಾದವನ್ನೂ ಆಳಿರೋದಕ್ಕೆ ಪುರಾವೆ ಇವೆ.

- ಮಾಯ್ಸ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 16, 2007 - 4:47pm — shreekant.mishrikoti

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

shreekant.mishrikoti's picture

Quote:
ಈ ವಿಷಯದ ಬಗ್ಗೆ ನನ್ನ ವಿಚಾರಗಳು ಸ್ವಲ್ಪ ತದ್ವಿರುದ್ಧವಾಗಿವೆ. ಮಹಾರಾಷ್ಟ್ರದ ತುಂಬೆಲ್ಲ ಕನ್ನಡವೇ ಪ್ರಚಲಿತವಾಗಿತ್ತು ಎನ್ನುವುದಕ್ಕೆ, ವಿದ್ವಾಂಸರು ಬಳಸುವ ಮುಖ್ಯ ಆಧಾರಗಳು, ಕವಿರಾಜಮಾರ್ಗದ ’ಕಾವೇರಿಯಿಂದಮಾ..’ ಪದ್ಯ ಹಾಗೂ, ಲಭ್ಯವಿರುವ ಕನ್ನಡ ಶಾಸನಗಳು. ಆದರೆ ಇವುಗಳಿಂದ ಕನ್ನಡ ಮಾತ್ರವೇ ಈ ಭಾಗದ ಜನರ ಭಾಷೆಯಾಗಿತ್ತು ಎಂದು ಹೇಳುವುದು ಅಷ್ಟು ಸಮಂಜಸವಾಗಲಾರದು.

ಶಂ.ಬಾ.ಜೋಷಿಯವರ ’ಮಹಾರಾಷ್ಟ್ರದ ಮೂಲ’ ಪುಸ್ತಕ ನೋಡಿ .
ಗುಜರಾತ್ ಮತ್ತು ಮರಾಠಿಯ ತಳಹದಿ ಕನ್ನಡವೇ ಆಗಿದೆ . ಅನೇಕ ಅಧಾರಗಳನ್ನೂ ಅಲ್ಲಿ ಕೊಟ್ಟಿದ್ದಾರೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 16, 2007 - 5:04pm — shreekant.mishrikoti

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

shreekant.mishrikoti's picture

Quote:
ಈ ವಿಷಯದ ಬಗ್ಗೆ ನನ್ನ ವಿಚಾರಗಳು ಸ್ವಲ್ಪ ತದ್ವಿರುದ್ಧವಾಗಿವೆ. ಮಹಾರಾಷ್ಟ್ರದ ತುಂಬೆಲ್ಲ ಕನ್ನಡವೇ ಪ್ರಚಲಿತವಾಗಿತ್ತು ಎನ್ನುವುದಕ್ಕೆ, ವಿದ್ವಾಂಸರು ಬಳಸುವ ಮುಖ್ಯ ಆಧಾರಗಳು, ಕವಿರಾಜಮಾರ್ಗದ ’ಕಾವೇರಿಯಿಂದಮಾ..’ ಪದ್ಯ ಹಾಗೂ, ಲಭ್ಯವಿರುವ ಕನ್ನಡ ಶಾಸನಗಳು. ಆದರೆ ಇವುಗಳಿಂದ ಕನ್ನಡ ಮಾತ್ರವೇ ಈ ಭಾಗದ ಜನರ ಭಾಷೆಯಾಗಿತ್ತು ಎಂದು ಹೇಳುವುದು ಅಷ್ಟು ಸಮಂಜಸವಾಗಲಾರದು.

ಶಂ.ಬಾ.ಜೋಶಿಯವರ ’ಮಹಾರಾಷ್ಟ್ರದ ಮೂಲ’ ಪುಸ್ತಕ ನೋಡಿ . ಅಲ್ಲಿ ಕನ್ನಡ ವ್ಯಾಪಿಸಿದ ಪ್ರದೇಶ , ಅದಕ್ಕೆ ಆಧಾರಗಳು , ಕನ್ನಡವೇ ಗುಜರಾತಿ ಮತ್ತು ಮರಾಠಿಯ ತಳಹದಿ ಎಂಬುದಕ್ಕೆ ಆಧಾರಗಳು ಸಿಗುತ್ತವೆ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 16, 2007 - 5:27pm — mahesha

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

mahesha's picture

ಅದ್ ಸರಿ...

ಆದ್ರೆ ತೆಂಕಿಗೆ ಕನ್ನಡದ ಗಡಿ ಯಾವ್ದಿತ್ತು? ನೀಲಗಿರಿಯಂತೂ ಕನ್ನಡ-ಬಡಗರ ಜಾಗ, ಹಾಗೇ ಕಾಸರಗೋಡು, ಅನಂತಪುರದ ಕೆಲವೂರುಗಳು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 16, 2007 - 6:51pm — shreekant.mishrikoti

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

shreekant.mishrikoti's picture

ಆರ್ಯ ಪೂರ್ವ ಭಾರತದಲ್ಲಿ ಕನ್ನಡ-ತಮಿಳು ಜನಾಂಗ ( ದ್ರಾವಿಡರೆಂದರೆ ಸಂಕುಚಿತ ಅರ್ಥದಲ್ಲಿ ತಮಿಳರೆಂದಷ್ಟೇ ತಿಳಿಯಬಹುದು!) ವ್ಯಾಪಿಸಿದ ಪ್ರದೇಶದ ನಕ್ಷೆ ಇಲ್ಲಿದೆ
< img src=http://sampada.net/image/6287>

- ಶಂ.ಬಾ.ಜೋಷಿಯವರ - ’ಮಹಾರಾಷ್ಟ್ರದ ಮೂಲ’ ಪುಸ್ತಕದ ಕೃಪೆ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 16, 2007 - 10:00pm — mahesha

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

mahesha's picture

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 16, 2007 - 6:17pm — ಸಂಗನಗೌಡ

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

ಸಂಗನಗೌಡ's picture

ಗುಜ್ಜರು ಎಕ್ಸ್ ಟೆಂಡೆಡ್ ಕನ್ನಡಿಗರು ಅನ್ನುವದರಲ್ಲಿ ಎರಡು ಮಾತಿಲ್ಲ. ಅವರು ಕ್ರಿಸ್ನನನ್ನು ಪೂಜೆ ಮಾಡುತ್ತಾರೆ. ನಮ್ ಕಿಟ್ಟು ಕನ್ನಡಿಗನಂತೆ. ಮತ್ತು ಅವರ ದಾಂಡಿಯಾ ನಮ್ಮ ಕೋಲಾಟವೇ ಆಗಿದೆ. ಹಬ್ಬಗಳಲ್ಲಿ ಕೋಲಾಟವಾಡುವದು ಕನ್ನಡಿಗರ ಅಚ್ಚ ಗುರುತು. ಗುಜರಾತಿನ ಹಲವು ಊರುಗಳ ಹೆಸರುಗಳು ಈಗಲೂ ಕನ್ನಡದಲ್ಲಿವೆ. ಅಲ್ಲಿನ ಕೆಲವು ಬುಡಕಟ್ಟು ಮಂದಿ ಈಗಲೂ ಕನ್ನಡದಲ್ಲಿ ಮಾತಾಡ್ತಾರಂತೆ.

ಸಕ್ಕದದ ಮೇಲೆ ಕನ್ನಡಿಗರು ಬೆಳೆಸಿಕೊಂಡ ಪೊಳ್ಳು ಮೋಹದಿಂದಾಗಿ ಅವರು ಮರಾಟಿಗರಾದರು ಅನಿಸುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 16, 2007 - 9:02pm — gc

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

gc's picture

ಸಂಗನಗೌಡರೆ, "ಸಕ್ಕದದ ಮೇಲೆ ಕನ್ನಡಿಗರು ಬೆಳೆಸಿಕೊಂಡ ಪೊಳ್ಳು ಮೋಹದಿಂದಾಗಿ ಅವರು ಮರಾಟಿಗರಾದರು ಅನಿಸುತ್ತೆ" ಅನ್ನುವುದು ಸ್ವಲ್ಪ ನಿಜವೆನಿಸಿದರೂ ಇಂತಹ ಮೋಹ "ಶಿಕ್ಷಿತ" ಮತ್ತು ಉನ್ನತ ವರ್ಗದವರಲ್ಲಿ ಹೆಚ್ಚು. ರಾಜಾಶ್ರಯ, ವಲಸೆ, ಆಕ್ರಮಣ, ಇತ್ಯಾದಿಗಳ ಚೌಕಟ್ಟಿನಲ್ಲಿ ನುಡಿಗಳ ಮೇಲಾಗುವ ಪ್ರಭಾವವನ್ನು ನೋಡಬೇಕು. ಊದಾ: ಕನ್ನಡ ಮೂಲದ ದೇವಗಿರಿಯ ಯಾದವರು ಸಕ್ಕದ/ಪ್ರಾಕೃತದಿಂದ ಹೊರಹೊಮ್ಮಿದ ಮರಾಠಿಗೆ ಕನ್ನಡಕ್ಕಿಂತ ಹೆಚ್ಚಿನ ಆಶ್ರಯ ನೀಡಿದರೆನ್ನಲಾಗಿದೆ (http://en.wikipedia.org/wiki/Yadava_Dynasty). ಅವರು ಕನ್ನಡಕ್ಕೆ ಹೆಚ್ಚಿನ ಮಹತ್ವ ನೀಡಿದ್ದರೆ ಕನ್ನಡದ ಇಂದಿನ ಉತ್ತರದ ಗಡಿ ಬದಲಾಗುತ್ತಿತ್ತೇನೋ. ಅದೇ ರೀತಿ ಮಹಾರಾಷ್ಟ್ರದ ಕೊಂಕಣ ಭಾಗದ ಕೆಲ ಕೊಂಕಣಿಗರು ಮರಾಠಿಗರನ್ನು ಇಂದಿಗೂ ಆಕ್ರಮಣಕಾರರು ಎಂದು ಕರೆಯುವುದನ್ನು ಕೇಳಿದ್ದೇನೆ. ಇಂದಿನ ಗೋವಾ-ಮಹಾ-ಕರ್ನಾಟಕದ ಗಡಿ ಭಾಗಗಳಲ್ಲಿ ಮರಾಠಿ ಪ್ರಭಾವ ಮರಾಠಾ ಸಾಮ್ರಾಜ್ಯದ ಜೊತೆಗೆ ಬಂದದ್ದು. ಅದೇ ರೀತಿ ಇಂದಿನ ಗೋವಾ ಹಿಂದೊಮ್ಮೆ ಕನ್ನಡ ರಾಜರು ಆಳುತ್ತಿದ್ದ ಪ್ರದೇಶವಾಗಿತ್ತು.

ಹಿಂದಿನ ಕಾಲದಲ್ಲಿ ಜನಗಣತಿ ಇದ್ದಿದ್ದ್ರೆ ಚನ್ನಾಗಿರ್ತಿತ್ತು Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 17, 2007 - 12:42pm — ವೈಭವ

ಉ: ಮರಾಠೀ ಮತ್ತು ಕನ್ನಡದ ಸಂಬಂಧ - ಅಂತರ್ಜಾಲದ ಸತ್ಯ ಇತ್ಯಾದಿ

ವೈಭವ's picture

ನನ್ನ ಗುಜ್ಜು ಗೆಳೆಯ ಹೇಳಿದ ..ಅವರು 'ಕೊಬ್ಬರಿ'ಗೆ 'ಕೊಬ್ರ' ಅಂತಾರಂತೆ. ಅವರ ಕೊಬ್ರ ನಮ್ಮ 'ಕೊಬ್ಬರಿ'ಯಿಂದನೇ ಬಂದಿರುವುದೇ ಅಂತ ಐಬು ನನಗೆ.

http://dsal.uchicago.edu/cgi-bin/philologic/search3advanced?dbname=burro...

Ka. kobbari, kobari id. Tu. koppara, koppari, kobbari, kobari id. Te. kobbari, kobbera kernel of the coconut; pertaining to the coconut; kobbari-kāya, kobbera-kāya a coconut.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಂಥ ನಾಡಿದು ಎಂಥ ಕಾಡಾಯಿತೋ
  • ಮುಂಬೈಯಲ್ಲಿ ಕನ್ನಡದ ಪ್ರಚಾರ!
  • ಉತ್ತರ ಕರ್ನಾಟಕದಲ್ಲಿ ಕನ್ನಡದ ಕಥೆ -೩
  • ಉತ್ತರಕರ್ನಾಟಕದಲ್ಲಿ ಕನ್ನಡದ ಕಥೆ -೧
  • ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು ( ಉ.ಕ.ಕ-೫)
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಅಬ್ಯಾಸಗಳನ್ನು ನಾವು ಸೃಷ್ಟಿಸುತ್ತೇವೆ, ಅನಂತರ ಅಭ್ಯಾಸಗಳು ನಮ್ಮನ್ನು ಸೃಷ್ಟಿಸುತ್ತವೆ.

— ಜಾನ್ ಡ್ರೈಡನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator