ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಅಕ್ಷರಗಳಿಂದ ದೂರ
ದಣಿಯದೆ ಇರುವ ಕಲಿತ ಮನುಷ್ಯನನ್ನು ನೀವು ನೋಡಲಾರಿರಿ. ಪಂಡಿತರನ್ನು ನೋಡಿ , ಯಾವಾಗಲೂ ದಣಿದಿರುತ್ತಾರೆ, ಶಬ್ದಗಳೊಂದಿಗೆ ಕೆಲಸ ಮಾಡುತ್ತ ಯಾವಾಗಲೂ ದಣಿದಿರುತ್ತಾರೆ. ಗಮನಿಸಿ , ಒಬ್ಬ ಕೂಲಿಕಾರ್ಮಿಕ ಕೂಡ ಅಷ್ಟೊಂದು ದಣಿದಿರುವದಿಲ್ಲ . ಏಕೆಂದರೆ ಅವನು ಜೀವನದೊಂದಿಗೆ ಕೆಲಸ ಮಾಡುತ್ತಿದ್ದಾನೆ. ನೀವು ತಲೆಯನ್ನು ಮಾತ್ರ ಬಳಸಿ ಶಬ್ದಗಳೊಂದಿಗೆ , ವ್ಯರ್ಥ ಶಬ್ದಗಳೊಂದಿಗೆ ಕೆಲಸ ಮಾಡುತ್ತಿರುವಾಗ ದಣಿಯುತ್ತೀರಿ.
ಜೀವನವು ಚೈತನ್ಯದಾಯಕವಾಗಿದೆ . ಅದೇ ನೀವು ತೋಟದಲ್ಲಿ ಕೆಲಸಮಾಡುವಾಗ , ನೀವು ಬೆವರುತ್ತೀರಿ, ಆದರೆ ನೀವು ಹೆಚ್ಚು ಚೈತನ್ಯ ಪಡೆಯುತ್ತೀರಿ , ಹೊರತು ಕಳೆದುಕೊಳ್ಳುವದಿಲ್ಲ. ವಾಯುವಿಹಾರಕ್ಕೆ ಹೋದಾಗ ನಿಮಗೆ ಹೆಚ್ಚು ಶಕ್ತಿ ಪಡೆಯುತ್ತೀರಿ. ಯಾಕೆಂದರೆ ಆಗ ನೀವು ಪ್ರಸ್ತುತ ಕ್ಷಣದಲ್ಲಿ ಜೀವಿಸಿರುತ್ತೀರಿ. ಆದರೆ ನೀವು ನಿಮ್ಮನ್ನು ಶಬ್ದಗಳೊಂದಿಗೆ ಅಭ್ಯಾಸದೊಡನೆ ತೊಡಗಿದಾಗ , ಯೋಚಿಸುತ್ತಾ ಹೋಗುತ್ತಿರಿ. ಅದು ಎಷ್ಟೊಂದು ನಿರ್ಜೀವ ಕ್ರಿಯೆ ಆಗಿದೆ ಎಂದರೆ ನೀವು ದಣಿದು ಬಿಡುತ್ತೀರಿ. ವಿದ್ವಾಂಸನು ಯಾವಾಗಲೂ ದಣಿದಿರುತ್ತಾನೆ, ಮೂರ್ಖನು ಯಾವಾಗಲೂ ಫ್ರೆಷ್ ಆಗಿ ಇರುತ್ತಾನೆ. ಸಂತನೂ ಕೂಡ ಹಾಗೇ ತಾಜಾ ಆಗಿಯೇ ಇರುತ್ತಾನೆ. ಇಬ್ಬರಲ್ಲೂ ಎಷ್ಟೋ ಸಾಮಾನ್ಯ ಗುಣಗಳಿವೆ.
----- ಎಲ್ಲೋ ಓದಿದ್ದು.

- shreekant.mishrikoti ರವರ ಬ್ಲಾಗ್
- Login or register to post comments
- 424 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: ಅಕ್ಷರಗಳಿಂದ ದಣಿವು
ಈಜು ಬಾರದ ಪಂಡಿತ ಮತ್ತು ಅಂಬಿಗನ ಕತೆ ನೆನಪಾಗುತ್ತಿದೆ. ಶಬ್ದಗಳ ಜತೆ ನಮ್ಮ ಗುದ್ದಾಟ "ಶಬ್ದ ಮಾಲಿನ್ಯ" ಉಂಟು ಮಾಡದಿರಲಿ!
ನಮ್ಮ ಬಾಟನಿ ಪ್ರೊ. ಹೇಳಿದ ಮಾತು
ಈಗ್ಗೆ ಕೆಲವು ವರ್ಷಗಳ ಹಿಂದೆ, ನಮ್ಮ ಕ್ಲಾಸ್ಮೇಟ್ ಒಬ್ಬಳು ಬಾಟನಿ ಕ್ಲಾಸಿನಲ್ಲಿ ತಲೆತಿರುಗಿ ಬಿದ್ದಿದ್ದಳು. ಏನೆಂದು ಕಾರಣ ಹುಡುಕಿದ್ದಾಗ ಕೊನೆಗೆ ತಿಳಿದದ್ದು ಅವಳು ಸ್ಲಿಮ್ ಆಗಬೇಕು ಅಂತ ಸರಿಯಾಗಿ ಊಟ ತಿಂಡೀನೇ ಮಾಡ್ತಾ ಇರಲಿಲ್ಲವಂತೆ. ಆಗ ನಮ್ಮ ಬಾಟನಿ ಪ್ರೋಫೆಸರ್ "ಬರೀ ಗರಡಿ ಮನೆಯಲ್ಲಿರುವವರಿಗಷ್ಟೇ ಅಲ್ಲ ಊಟ ಬೇಕಾಗಿರುವದು, ಓದುವುದಕ್ಕೂ, ಸರಿಯಾಗಿ ಅರ್ಥಮಾಡಿಕೊಳ್ಳುವುದಕ್ಕೂ ಮಿದುಳಿಗೂ ರಕ್ತ ಬೇಕು. ಅದಕ್ಕೆ ಚೆನ್ನಾಗಿ ತಿನ್ನಿ ಎಂಬ ಸಲಹೆಯಿತ್ತು. ಇನ್ನೇನು ಬೇಸಿಗೆ ಶುರುವಾಗುತ್ತಿದೆ, ವಾರಕ್ಕೆ ಕಡಿಮೆಯೆಂದರೆ ಐದಾದರೂ ಮಾವಿನಹಣ್ಣು ತಿನ್ನಿ" ಎಂದಿದ್ದರು.
Re: ಅಕ್ಷರಗಳಿಂದ ದೂರ
ಮೂರ್ಖನಿಗೂ ಹಾಗೂ ಸಂತನಿಗೂ ಇನ್ನೂ ಕೆಲವು ಸಾಮಾನ್ಯ ಗುಣಗಳಿವೆ.
1. ಜೀವನದ ಆಗುಹೋಗುಗಳ ಬಗೆಗಿನ ಚಿಂತೆ ಇರುವುದಿಲ್ಲ.
2. ಹೊಟ್ಟೆಪಾಡಿಗಾಗಿ ದುಡಿಯುವ ಅವಶ್ಯಕತೆ ಇರುವುದಿಲ್ಲ.
ಪಂಡಿತರೂ, ವಿದ್ವಾಂಸರೂ ಹಾಗೂ ನಮ್ಮಂತ ಜನಸಾಮಾನ್ಯರಿಗೆ ಚಿಂತೆ ಹಾಗೂ ಅವಶ್ಯಕತೆ ಎರಡೂ ಇರೊತ್ತೆ...ಅದಕ್ಕೆ ನಾವು ಓದಿ ಓದಿ ದಣಿಯುತ್ತೆವೆ.