ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡದವರಿಗೆ ಮಾತ್ರ ...( ಉ.ಕ.ಕ-ಕೊನೆಯ ಕಂತು)

August 16, 2006 - 5:37pm — shreekant.mishrikoti

೧೯೨೧ ರಲ್ಲಿ ಬೇಂದ್ರೆಯವರು ಹೀಗೆ ಹೇಳಿದ್ದಾರೆ .
" ಈ ಅಪ್ರತಿಕೂಲ ಕಾಲದಲ್ಲಿಯೂ ನಮ್ಮ ಪುರಾಣ ಕವಿಯ ಕಾಲದ ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡ ಪ್ರಾಂತದಲ್ಲಿರುವ ಕೆಲವು ಜೀವಿಗಳಿಗೆ ಅಸಹ್ಯವಾಗಿತ್ತು. ಬೆಳಗಾಂವಿಗೆ ಹತ್ತಿದ ಮರಾ‍ಠಿಯ ಗ್ರಹಣವು ಈಗೀಗ ಬಿಡಹತ್ತಿದೆ . ಮೈಸೂರವರರಲ್ಲಿ ಈಗೀಗ ಏಕ ಕರ್ನಾಟಕ ಭಾವನೆಯು ಅರೆಮಿಂಚಹತ್ತಿದೆ. ಬಳ್ಳಾರಿಯವರು ಇದೇ ಎಲ್ಲಿಯೋ ಕಣ್ಣು ತಿಕ್ಕುತ್ತಿರುವರು. ಮಂಗಳೂರಿನಲ್ಲಿ ಇದೇ ಎಲ್ಲಿಯೋ ರಾಷ್ಟ್ರೀಯ ವಾಣಿಯು ಶಬ್ದ ಮಾಡುತ್ತಿರುವದು. ಹೈದರಾಬಾದಿನ ಕನ್ನಡಿಗರು ಮಿಸುಕಾಡುತ್ತಿದ್ದರೂ ಇನ್ನೂ ಅವರಿಗೆ ಕನ್ನಡ ಮಂತ್ರದ ಅರ್ಥವೇ ಹೊಳೆದಿಲ್ಲ . ಕಾರವಾರದ ಕನ್ನಡಿಗರು ಚೈತನ್ಯದ ಚಿನ್ಹವನ್ನು ತೋರಿಸಹತ್ತಿದ್ದರೂ ಇನ್ನೂ ಅವರಿಗೆ ಕನ್ನಡ ದೇವಿಯ ಇಡೀ ಮೂರ್ತಿಯು ಕಂಡೇ ಇಲ್ಲ . ಆದರೆ ಧಾರವಾಡದವರಿಗೆ ಮಾತ್ರ ಅಸ್ಪಷ್ಟವಾಗಿಯೇ ಇರಲೊಲ್ಲದೇಕೆ - ಮೊದಲಿನಿಂದ ಕನ್ನಡಮಂತ್ರವೂ , ಕರ್ನಾಟಕ ದೇವಿಯ ಮೂರ್ತಿಯೂ ಕಂಡಿತ್ತು. "

ಕನ್ನಡದ ಈ ನವೋದಯ ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ಸ್ವಾಭಾವಿಕವಾಗಿಯೇ ಧಾರವಾಡವು ಧುರೀಣತ್ವವನ್ನು ವಹಿಸಿತು . ಕನ್ನಡದ ದಾಸಯ್ಯರಾಗಿ ಇಲ್ಲಿಯ ಲೇಖಕರು ನಾಡಿನ ತುಂಬೆಲ್ಲ ಕನ್ನಡದ ಪ್ರಜ್ಞೆ ಪ್ರವಹಿಸುವಂತೆ ಮಾಡಿದರು.

ಈ ಸಮಯದಲ್ಲಿ ಇಂಗ್ಲೀಷವೋ , ಮರಾಠಿಯೋ , ಬಂಗಾಲಿಯೋ , ಸಂಸ್ಕೃತವೋ - ಯಾವುದೋ ಭಾಷೆಯಿಂದ ಅನುವಾದವೋ , ಅನುಕರಣವೋ ಮಾಡಿ ಅನೇಕರು ಅನೇಕ ಕೃತಿರಚನೆ ಮಾಡಿದರು. " ಕನ್ನಡ ಭಾಷೆಯ ಅಭಿಮಾನವು ಇದೇ ಕಾಲಕ್ಕೆ ನೆಲೆಯೂರಿತು"

ಉತ್ತರ ಕರ್ನಾಟಕ ದಲ್ಲಿಯೂ ಮತ್ತು ಸಮಗ್ರ ಕನ್ನಡನಾಡಿನಲ್ಲಿಯೂ ಅನೇಕ ವಿಧವಾದ ಕನ್ನಡದ ಕೆಲಸ ನಡೆಯಿತು.
ಒಮ್ಮೆ ಪ್ರಾರಂಭವಾದ ಕನ್ನಡದ ಕೆಲಸ ರಭಸದಿಂದ ಮುಂದುವರಿಯಿತು. ಅದು ಅನೇಕ ಮುಖವಾಗಿದ್ದಿತು.

ಕನ್ನಡದಲ್ಲಿ ಬರೆಯಬೇಕೆಂಬ ಲವಲವಿಕೆ ಪ್ರಾರಂಭವಾದ ಕೂಡಲೇ ಸ್ವಾಭಾವಿಕವಾಗಿಯೇ ಅದಕ್ಕೆ ಅಚ್ಚುಕೂಟ ಬೇಕಾಯಿತು. ಈ ದಿಶೆಯಲ್ಲಿ ಅದ್ಭುತವಾದ ಕೆಲಸವನ್ನು ಮಾಡಿದವರು - ವಿದೇಶೀಯರು , ಮಿಶನರಿಗಳು.

ಕರ್ನಾಟಕ ಸಂಗೀತ ಪದ್ಧತಿಯ ಪುನಶ್ಚೇತನದ ಪ್ರಯತ್ನವೂ ನಡೆಯಿತು .

ಪ್ರಸಿದ್ಧ ಸಂಸ್ಕೃತ ಪಂಡಿತರಾಗಿದ್ದ ಗಲಗಲಿ ಕೂರ್ಮಾಚಾರ್ಯರಂಥವರೂ ಸಹ ( ಇವರ ಸ್ನಾನ ಪ್ರಸಿದ್ಧ ) 'ಪ್ರಾಕೃತ'ವೆನಿಸಿಕೊಂಡ ಕನ್ನಡ ಬಾಷೆಯ ಬಗೆಗೆ ಅಭಿಮಾನ ತಾಳಿದರು . ..... ಶ್ರೀ ಮದಾನಂದತೀರ್ಥರು ತಮ್ಮ ಗ್ರಂಥದಲ್ಲಿ ಹೇಳಿದ ಒಂದು ಯುಕ್ತಿಯನ್ನು ಸ್ವಲ್ಪ ಬದಲಿಸಿ ಹೀಗೆ ಹೇಳಿದ್ದಾರೆ :
ವರಂ ಸ್ವಮಾತೃಗಮನಂ , ವರಂ ಗೋಮಾಂಸಭಕ್ಷಣಂ
ವರಂ ಹತ್ಯಾ , ಸುರಾಪಾನಂ , ನಿಜಭಾಷಾವಿನಿಂದನಾತ್ ||
- ಕೊನೆಗೆ ಮಾತೃ ಭಾಷಾ ಭಕ್ತನಾದ ಕೂರ್ಮಾಚಾರ್ಯ ಗಲಗಲಿ ಎಂದು ರುಜು ಹಾಕಿದ್ದಾರೆ .

ಇಲ್ಲಿಗೆ ಈ ಸರಣಿಯು ಮುಕ್ತಾಯವಾಯಿತು. ಈವರೆಗೆ ಬರೆದ ಈ ಎಲ್ಲ ವಿಷಯಗಳು 'ಹೊಸಗನ್ನಡ ಸಾಹಿತ್ಯದ ಉದಯಕಾಲ ( ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ ) ' ಎಂಬ ಪುಸ್ತಕದಿಂದ ಆರಿಸಿದ ಕೆಲವು ಕುತೂಹಲಕರ ಭಾಗಗಳು . ಬರೆದವರು ರಾ.ಯ.ಧಾರವಾಡಕರ ಅವರು .ಇದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಿತ . ಸುಮಾರು ೭೦೦ ಪುಟಗಳಷ್ಟಿದೆ.

ಈ ಎಲ್ಲವನ್ನು ಓದಿದ ನಿಮಗೆ ಧನ್ಯವಾದಗಳು .

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 755 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 17, 2006 - 12:22pm — Sunil Jayaprakash

ಮಿಶ್ರಿಕೋಟಿಗಳಿಗೆ ಸವಿಯೊದಗು

Sunil Jayaprakash's picture

Quote:

ಈ ಎಲ್ಲವನ್ನು ಓದಿದ ನಿಮಗೆ ಧನ್ಯವಾದಗಳು.

ಮಿಶ್ರಿಕೋಟಿಗಳೆ, ನಿಜಕ್ಕೂ ಸವಿಯೊದಗನ್ನು ಸಲ್ಲಿಸಬೇಕಾಗಿರುವುದು ನಿಮಗೆ, ನಾವುಗಳು. ದಯವಿಟ್ಟು ನಮ್ಮ ಸವಿಯೊದಗನ್ನು ಸ್ವೀಕರಿಸಿ.

ನಿಮ್ಮಿಂದ ನಾವುಗಳು ತಿಳಿಯಬೇಕಿರುವುದು ಬಹಳಷ್ಟಿದೆ.

ಹೀಗೆಯೇ, ಇನ್ನೂ ಅನೇಕ ವಿಷಯಗಳನ್ನು ನಮಗೆಲ್ಲ ತಿಳಿಸುತ್ತಾ ಇರಿ ಎಂದು ಕೋರುತ್ತೇನೆ.

ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ  ಜೀವನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 17, 2006 - 1:58pm — shreekant.mishrikoti

ನಿನ್ನೆಗಳ ಅರಿವು ನಮಗಿದ್ದಾಗ ... ಇನ್ನೊಂದು ಸರಣಿ ... ಕೃತಿಚೌರ್ಯ?

shreekant.mishrikoti's picture

ಸುನೀಲರೇ ಧನ್ಯವಾದಗಳು .

ನಿನ್ನೆಗಳ ಅರಿವು ನಮಗಿದ್ದಾಗ ನಾಳೆಗಳನ್ನು ಯೋಜಿಸಬಹುದು. ಈ ಅರಿವನ್ನು ಉಂಟು ಮಾಡುವ ನನ್ನ ಈ ಅಳಿಲು ಪ್ರಯತ್ನ ಸ್ವಲ್ಪವಾದರೂ ಸಾರ್ಥಕವಾಗಿದೆಯೆಂದು ತಿಳಿದಿದ್ದೇನೆ.

ಮೂಲ ಪುಸ್ತಕವು ಸಿಕ್ಕರೆ ಓದಿರಿ. ಹೆಚ್ಚು ಮಾಹಿತಿ ಇದೆ.

ಇವು ನನ್ನ ಸ್ವಂತ ಲೇಖನಗಳಲ್ಲವಾದರೂ 'ಕೃತಿಚೌರ್ಯ' ವಲ್ಲ ಎಂಬ ನಂಬಿಕೆ ನನಗಿದೆ.
ಏಕೆಂದರೆ
೧. ಈ ಲೇಖನ ನನ್ನದೆಂದು ಹೇಳುತ್ತಿಲ್ಲ .
೨. ಮೂಲವನ್ನು ಉಲ್ಲೇಖಿಸುತ್ತಿದ್ದೇನೆ.
೩. ನನ್ನ ಬ್ಲಾಗ್ ನಲ್ಲಿ ಬರೆದುಕೊಂಡಿದ್ದೇನೆ.
೪. ಉದ್ದೇಶ ಒಳ್ಳೆಯದು . ಯಾವದೇ ಲಾಭ ಗಳಿಸುವ ಉದ್ದೇಶದ್ದಲ್ಲ.

ಹೀಗೆಯೇ ಇನ್ನೊಂದು ಸರಣಿಯನ್ನು ಆರಂಬಿಸಲಿದ್ದೇನೆ. ಅದಕ್ಕೆ ನೀವು ಸ್ಫೂರ್ತಿಯಾಗಿದ್ದೀರಿ .
ನಿರೀಕ್ಷಿಸಿ .

'ಕೃತಿಚೌರ್ಯ'ವೆಂದಾದಲ್ಲಿ , ಓದುಗರು ಓದಲು ಸಿದ್ಧವಿದ್ದರೆ , ಬೇರೆ ವ್ಯವಸ್ಥೆ ಮಾಡಿಯೇನು.

ನಮಸ್ಕಾರಗಳು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 17, 2006 - 2:17pm — hpn

ಕೃತಿಯ ಮೂಲವನ್ನು ಉಲ್ಲೇಖಿಸಿದರೆ ಕೃತಿಚೌರ್ಯವಾಗದು.

hpn's picture

ಶ್ರೀಕಾಂತರೆ,

ಕೃತಿಯ ಮೂಲವನ್ನು ಉಲ್ಲೇಖಿಸಿದರೆ ಕೃತಿಚೌರ್ಯವಾಗದು.

ನಮಸ್ಕಾರ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಂಬೈಯಲ್ಲಿ ಕನ್ನಡದ ಪ್ರಚಾರ!
  • ಕನ್ನಡದ ಕಂಪು
  • ಮನುಷ್ಯನ ಜೀವನ ಎಂಬ ಬಾಣಕ್ಕೆ ಒಂದೇ ಗುರಿ ಇರುತ್ತದೆ....
  • ಎಂಥ ನಾಡಿದು ಎಂಥ ಕಾಡಾಯಿತೋ
  • ಏಕರೂಪ ಭಾಷೆ ಮತ್ತು ಕನ್ನಡ ಏಕೀಕರಣ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.


ಯಾವಾಗಲೂ ಕೇಡುಬಗೆಯದ ಸ್ನೇಹಿತನೆಂದರೆ, ಮೌನ.

— ಕನ್‌ಫ್ಯೂಷಿಯಸ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator