ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಅನುವಾದದಲ್ಲಿ 'ಆಹಾ!' - wildcard ಗೆ ಕನ್ನಡ ಪದ
ನನ್ನ ಪಾಂಡಿತ್ಯ ಅಷ್ಟಕ್ಕಷ್ಟೇ - ಹೆಚ್ಚು ಹೊಸಗನ್ನಡ ಓದಿದ್ದೇನೆ. ಕನ್ನಡ ವ್ಯಾಕರಣ ಗೊತ್ತಿಲ್ಲ . ಹಳೆಗನ್ನಡ ಓದಿಲ್ಲ . ಸಂಸ್ಕೃತ ಜ್ಞಾನ ಸ್ವಲ್ಪ ಇದೆ.
ಭಾಷೆಯ(ಗಳ) ಕುರಿತು ಸಿಕ್ಕ ಮಾಹಿತಿ ಓದುತ್ತೇನೆ. ಏನಾದರೂ ಮಾಡಬೇಕೆಂಬ ಹಂಬಲ ನನ್ನಲ್ಲಿದೆ. ( ಯಾರಾದರೂ ನನ್ನನ್ನು ಕನ್ನಡಕ್ಕೆ ನೀನು ಏನಪ್ಪಾ ಮಾಡಿದ್ದೀಯಾ ? ಎಂದು ಕೇಳಿದರೆ ? ಆಗ ಹೇಳಲಿಕ್ಕೆ ಬೇಕಲ್ಲ? )
ಸದ್ಯ ಲೀನಕ್ಸ್ ಅನುವಾದ ಮಾಡುತ್ತಿರುವೆ.
ತಾಂತ್ರಿಕ ಶಬ್ದಗಳ ಅನುವಾದ ಹೇಗೆ ? ಮೊದಲು ಅದರ ಅರ್ಥ ತಿಳಿಯಬೇಕು . ( ಅದಕ್ಕಾಗಿ ಇರುವ webopedia ತಾಣವನ್ನು ಪವನಜ ಅವರು ನನ್ನ ಗಮನಕ್ಕೆ ತಂದರು .) ಅರ್ಥ ತಿಳಿದ ನಂತರ ಸೂಕ್ತ ಕನ್ನಡಪದ ಹುಡುಕಬೇಕು . ಕೆಲವೆಡೆ ಇಂಗ್ಲೀಷನ್ನೇ ಇಟ್ಟುಕೊಳ್ಳಬಹುದು. ( ಇಂಗ್ಲೀಷ್ ಶಬ್ದವೇ ಈಗಾಗಲೇ ಬಳಕೆಯಲ್ಲಿದ್ದರೆ , ಅಥವಾ ಅನುವಾದ ಕಷ್ಟವಾದರೆ (!) ) ಸಂಸ್ಕೃತವನ್ನು ಸಾಧ್ಯವಾದಷ್ಟು ತಪ್ಪಿಸಬೇಕಂತೆ. ಹಳೆಗನ್ನಡ ದಲ್ಲಿ ಸರಿಯಾದ ಪದ ಹುಡುಕಬೇಕಂತೆ. ಅಯ್ಯೋ , ನಾನೇನು ಮಾಡಲಿ , ಹಳಗನ್ನಡ ಗೊತ್ತಿಲ್ಲವಲ್ಲ .
ಇರಲಿ ಬಂದ ಹಾಗೆ , ಸಾಧ್ಯವಿದ್ದಷ್ಟು ಸಹಜವಾಗಿ ಇರುವಂತೆ ಮಾಡುತ್ತಿರುವೆ .
ಉದಾಹರಣೆಗೆ , ಇದೀಗ wildcard ಅನುವಾದಿಸಬೇಕಿತ್ತು .
ವೆಬೋಪೀಡಿಯ ನೋಡಿದೆ ಅಲ್ಲಿ ' A special symbol that stands for one or more characters. ' ಎಂದಿದೆ.
ಅದಕ್ಕೆ ಮೊದಲು ಬಹುಅಕ್ಷರಸೂಚಿ ಪರಿಗಣಿಸಿದೆ. ಬಹು ಸಂಸ್ಕೃತ ಅಲ್ವೇ? ಸಂಧಿ ಸಮಾಸ ? ಬಹ್ವಕ್ಷರಸೂಚಿ ಎನ್ನಬೇಕೇನೋ? 'ಬಹು' ಬದಲಾಗಿ ಕನ್ನಡದ 'ಹಲ/ಹಲವು' ಬಳಸಬೇಕೆಂದು ಶಂಕರಭಟ್ಟರ ಪುಸ್ತಕದಲ್ಲಿ ಓದಿದ್ದೆ . ಹಲ ಅಕ್ಷರ ಜೋಡಿಸಿದರೆ - ಬರಹದಲ್ಲಿ ಹಲಾಕ್ಷರ ಆಗುತ್ತದೆ . ಅದಕ್ಕೆ ಹಲವಕ್ಷರ ಮಾಡಿದೆ. ( ಕನ್ನಡ ಮತ್ತು ಸಂಸ್ಕೃತ ಶಬ್ದಗಳನ್ನು ಜೋಡಿಸುವ ಹಾಗಿಲ್ಲವೇನೋ?
) ಅಕ್ಷರವನ್ನು ಅಕ್ಕರ ಮಾಡಬಹುದೇನೋ ? ಇದು ಸ್ವಲ್ಪ ಅತಿಯಾಯಿತೇನೋ ? ನಾವು ಹಳಗನ್ನಡದಿಂದ ಹೊಸಗನ್ನಡಕ್ಕೆ ಬಂದಿರುವಾಗ ಹಿಂದಕ್ಕೆ ಹೋಗಬೇಕೇ ?
ಹಾಗಾಗಿ ಹಲವಕ್ಷರಸೂಚಿ ಎಂದೇ ಇಟ್ಟುಕೊಂಡಿದ್ದೇನೆ. ನಿಮ್ಮ ಪ್ರತಿಕ್ರಿಯೆ ಕಾಯುವೆ.
ಇಲ್ಲಿ ಈಗಾಗಲೇ (ಇತರರ ಬದಲಾಗಿ ಕನ್ನಡ ಪದ) ಉಳಿದವರು ಮಾಡಿದ ಅನುವಾದ (ನುಡಿಬದಲು ಅನ್ನಲೇ?- ಹೀಗೆಲ್ಲ ಹೋದರೆ ಕಟಿಣ-ಕಷ್ಟವಾಗುತ್ತದೆ - ನಾನಾದರೂ ಹುಚ್ಚಾದೇನು . ಅಥವಾ ಓದುವವರು ಹುಚ್ಚರಾದಾರು! ಈಗ ನಾನು ಬಳಸುತ್ತಿರುವ ಕನ್ನಡವೇ ಸರಿ ಏನೋ ?
ಜೋ ಭೀ ಹೈ ವೋ ಠೀಕ ಹೈ , ಫಿಕ್ರ ಕ್ಯೂಂ ಕರೇ ?
ಹಮ್ ಹೀ ಇಸ್ ಜಹಾನ್ ಕೀ ಜಿಕ್ರ ಕ್ಯೂಂ ಕರೇ? - ಅಂತ ಹಾಡಿಕೊಳ್ಳುವದೇ ಸರಿ ಏನೋ )
ನೋಡುತ್ತಿರುವಾಗ ಒಳ್ಳೊಳ್ಳೇ ಅನುವಾದಗಳು ಕಂಡು ಬಂದವು .
ಕರ್ಸರ್ ಗೆ ತೋರುಗ !
ಫುಲ್‌ಸ್ಕ್ರೀನ್ ಗೆ ತುಂಬುತೆರೆ! ... ತುಂಬು ಬಸಿರಿ , ತುಂಬು ಚಂದಿರ , ತುಂಬುತೋಳು ...... ಇತ್ಯಾದಿಯಂತೆ! ತುಂ೦೦೦೦೦ಬುತೆರೆ ಅಂದಿದ್ರೆ ಚನ್ನಾಗಿತ್ತು! ಅಡ್ಬಿದ್ದೇ ಗುರುಗಳೇ ! ಎದುರಿಗಿಲ್ಲದ ದ್ರೋಣಾಚಾರ್ರಿಗೆ ಏಕಲವ್ಯನ ತೆರದಿ! - ಯಾರಪ್ಪಾ ಅದು ಮಹಾನುಭಾವರು ಹೆಸರು ತಿಳಿಸುವಿರಾ?)
ಈವರೆಗೆ ಇದನ್ನೆಲ್ಲ ಓದಿದಿರಿ . ತುಂಬ ಉಪಕಾರವಾಯಿತು. ( ಥ್ಯಾಂಕ್ಸ್ ಅನ್ನು ನಮ್ಮ ಕನ್ನಡ ಜನ ಹೇಳುವ ರೀತಿ ಇದು)

- shreekant.mishrikoti ರವರ ಬ್ಲಾಗ್
- Login or register to post comments
- 530 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
Re: ಅನುವಾದದಲ್ಲಿ 'ಆಹಾ!' - wildcard ಗೆ ಕನ್ನಡ ಪದ
wildcard ಗೆ ಹಲವಕ್ಷರಸೂಚಿ! ವ್ಹಾ. ಚೆನ್ನಾಗಿದೆ ನಿಮ್ಮ ಸೃಜನಶಕ್ತಿ. ಆದರೂ ಒಂದು ಸಂದೇಹ. ಸೂಚಿ ಎನ್ನುವುದನ್ನು index ಎಂಬುದಕ್ಕೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಆದುದರಿಂದ ಹಲವಕ್ಷರಸೂಚಕ ಎನ್ನಬಹುದೇನೋ?
cursor ಗೆ ಸೂಚಕ ಎಂಬುದಾಗಿ ನಾನು ಬಳಸುತ್ತಲಿದ್ದೇನೆ.
fullscreen ಗೆ ಪೂರ್ಣಪರದೆ ಎನ್ನಬಹುದೇನೋ? (ತೆರೆ ಎಂದರೆ open ಎಂದೂ ಆಗುತ್ತದೆ).
ಸಿಗೋಣ,
ಪವನಜ
-----------
Vishva Kannada
Think globally, Act locally
'ಆಹಾ!' - wildcard
ಸಾರ್
ವೈಲ್ಡಕಾರ್ಡ್/ವಯಲ್ಡಕಾರ್ಡು ಅಂತಾನೆ ಇರಲಿ.
ಹಲವಕ್ಷರಸೂಚಿ ಅಸ್ಟು ಸರಿಯಿಲ್ಲ.
http://en.wikipedia.org/wiki/Wildcard_character
Wildcard- A special symbol that stands for one or more characters.
ಆದರೆ ಹಲವು ಅಂದರೆ ಒಂದು ಅಲ್ಲ, ಒಂದಕ್ಕಿಂತ ಜಾಸ್ತಿ.
ತಪ್ಪು ತಿಳೀ ಬೇಡಿ...
ಕೆಲವು ಸರತಿ ಟೆಕ್ನಿಕಲ್ ಪದಗಳನ್ನು ಹಾಗೆ ಬಳಸೋದೆ ಲೇಸು..
ಈಗ "carbon di oxide" ಗೆ ಸಂಸ್ಕೃತದಲ್ಲೂ/ಕನ್ನಡದಲ್ಲೂ "ಇಂಗಾಲದ ಡೈ ಆಕ್ಸೈಡ್" ಅಂತಾನೆ ಹೇಳೋದು. ಏಕೆಂದರೆ ’ಡೈ ಆಕ್ಸೈಡ್’ ಇದನ್ನು ಕನ್ನಡದಲ್ಲಿ ಏನನ್ನೋದು?
ಕರ್ + ಪೊನ್ = ಕರ್ಬೊನ್ ಅಂತೆ, ’ಪದಾರ್ಥ ಚಿಂತಾಮಣಿ’
ಹಾಗೆ ’*’ ಕೇರೆಕ್ಟರನ್ನು ನಕ್ಷತ್ರ ಅಂತ ಅನ್ನೋದಕ್ಕಿಂತ, ಏಸ್ಟ್ರಿಕ್ಸು/ಏಸಿಟ್ರಿಕ್ಸು ( ಮೂರು ಒತ್ತು ಅಸ್ಟು ಚೆನ್ನಾಗಿರಲ್ಲ ಬರೆಯಕ್ಕೆ) ಅಂತ ಅಂದರೆ ಚೆನ್ನು.
ಹಾಗಂತ ಎಲ್ಲ ವರ್ಡುಗಳನ್ನು ಹಾಗೆ ಬಳಸಬೇಕು ಅಂತಲ್ಲ. ಸಲೀಸಾಗಿ ಅನುವಾದ ಮಾಡಬೋದಾದ್ದು, ಮತ್ತು ಸಲೀಸಾಗಿ ತಿಳಿಯವಂತಹದ್ದು ಇರಲಿ.
ಇಲ್ಲ ಅಂದರೆ, ಈ ಹೊಸಪದವನ್ನು ಮೊದಲ ಸರತಿ ನೋಡಿದೋರು ಬಹಳ ಕಸ್ಟಪಡಬೇಕು, ಅದೇನು ಅಂತ ತಿಳಿಯಕ್ಕೆ. ಇದಕ್ಕೆ ಒಳ್ಳೇ ಉಪಾಯ ಅಂದರೆ help ಅಲ್ಲಿ ಈ ಅನುವಾದವಾದ ಪದ(translated Kannada word), ಇಂಗಲೀಶಿನ ಯಾವ ಪದ(root English words) ಅಂತ ತಿಳಿಯಕ್ಕೆ ಸವಲತ್ತು ಇರ್ಬೇಕು.
ಏನೇ ಇರಲಿ
ಇಂತಹ ಕೆಲಸಕ್ಕೆ ಹೊಗಳಬೇಕಾದುದು. ಅನುವಾದ ಬಳಗಕ್ಕೆ ನನ್ನಿ!
Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ
wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ ಬಳಸಬಹುದು ಎನ್ನಿಸುತ್ತದೆ .
ನನ್ನ ಅನುವಾದದಲ್ಲಿನ ದೋಷ ತೋರಿಸಿಕೊಟ್ಟ ಮಹೇಶರಿಗೂ , ಪವನಜರಿಗೂ ಧನ್ಯವಾದಗಳು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ
shreekant.mishrikoti ಸಾರ್
ಕನ್ನಡದಲ್ಲಿ ನಂಬರುಗಳನ್ನು ಅಕ್ಷರ ಅಂತಾರ ಅಂತ ಗೊತ್ತಿಲ್ಲ
.
Wildcard- A special symbol that stands for one or more characters. ಅಂತ ಇರೋದು.
alphabet, ಅಂದರೆ ಅಕ್ಷರ ಅಲ್ವಾ.
ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ ಅಂದರೆ one or more alphabets ಅಂತ ಅನ್ನಿಸುತ್ತದೆ.
characterಗೆ ಕನ್ನಡದಲ್ಲಿ ಏನು? ನಂಗೆ ಗೊತ್ತಿಲ್ಲ
character ಅಂದರೆ ಅದು alphabets, numbers ಇಲ್ಲವೇ special characters, ಅವಲ್ಲಿ ಯಾವುದು ಬೇಕಾದರು ಆಗಬಹುದು.
Re: digit-ಅಂಕೆ
ಅಂಕೆಗಳು ಸೇರಿ ಸಂಖ್ಯೆ ಆಗುತ್ತದೆ.
character (ನಾ) 1) ನಡತೆ, ಸ್ವಭಾವ, ಚಾರಿತ್ರ್ಯ, ಶೀಲ 2) ವ್ಯಕ್ತಿ ಯಾ ವಸ್ತುವಿನ ವಿಶೇಷ ಲಕ್ಷಣಗಳು, ವೈಶಿಷ್ಟ್ಯ 3) ಕಥೆ ಯಾ ನಾಟಕದ ಪಾತ್ರ 4) ಪ್ರಸಿದ್ಧ, ಪ್ರಖ್ಯಾತ, ಹೆಸರಾಂತ ವ್ಯಕ್ತಿ 5) ಲಿಪಿ, ಅಕ್ಷರ, ಚಿಹ್ನೆ 6) ನೀತಿಬಲ, ಸತ್ವ, ಸ್ಥೈರ್ಯ
ಲಿಪಿ ಸರಿಯಾಗಬಹುದೇನೋ!
digital
@shreekant.mishrikoti
numeric -?
digital - ?
alphanumeric -?
ಕನ್ನಡದಲ್ಲಿ ಈ ಬಗೆಯ ಪದಗಳಿಗೆ ಯಾವ ನಿಘಂಟು ನೋಡಬೇಕು?
Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ
ಲೂಸ್ ಆಗಿ ಅಕ್ಷರ ಅನ್ನಬಹುದು . ಇಲ್ಲದಿದ್ದರೆ ಅಕ್ಷರ-ಅಂಕೆ-ವಿಶೇಷಾಕ್ಷರವನ್ನೂ ಸೇರಿಸಿ ಒಂದು-ಅಥವಾ-ಹೆಚ್ಚು-ಅಕ್ಷರ-ಅಂಕೆ-ವಿಶೇಷಾಕ್ಷರ-ಸೂಚಕ ಎನ್ನಬೇಕಾಗಬಹುದು .
ಪಲಕು ಅಥವಾ ಇನ್ನಾವುದೇ ಹಳಗನ್ನಡದ ಶಬ್ದಗಳನ್ನು ಕಂಪ್ಯುಟರಿನಲ್ಲಿ ಜಾರಿಗೆ ತರುವದು ಏಕೋ ಸರಿ ಎನ್ನಿಸುವದಿಲ್ಲ . ಈಗಾಗಲೇ ಬಳಕೆಯಲ್ಲಿರುವ ಸಾಮಾನ್ಯ ಶಬ್ದಗಳ ಆಧಾರಿತ ಇದ್ದರೆ ಚೆನ್ನ ಅಲ್ಲವೆ ?
ನಮ್ಮ ಗುರಿ ಜನಸಾಮಾನ್ಯರಿಗೆ ಕಂಪ್ಯುಟರ್ ತಂತ್ರಜ್ಞಾನ ಲಭ್ಯವಾಗಬೇಕೆಂಬುದಲ್ಲವೇ ? ಕನ್ನಡದ ಉದ್ಧಾರವೇ ? ಮೊದಲು ಕನ್ನಡ ಜನರ ಉದ್ಧಾರ ನೋಡೋಣ ಆಮೇಲೆ ಕನ್ನಡದ ಉದ್ಧಾರ . ಕನ್ನಡ ಜನ ಬೆಳೆದರೆ ತಾನೇ ಕನ್ನಡ ಉಳಿದು ಬೆಳೆದೀತು?
ಕನ್ನಡದ ಉದ್ಧಾರ ಕಂಪ್ಯೂಟರ್ ತಂತ್ರಜ್ಞಾನದ ಅನುವಾದ ಮೂಲಕವೇ ಏಕಾಗಬೇಕು ? ಈ ಹಳಗನ್ನಡ , ಅಚ್ಚಕನ್ನಡದ ಪದಗಳ ಬಳಕೆಯನ್ನು ನಮ್ಮ ಆಡುಮಾತಿನಲ್ಲಿ , ಮಾಧ್ಯಮಗಳಲ್ಲಿ , ನಮ್ಮ ಬರಹ, ಸಾಹಿತ್ಯಗಳ ಮೂಲಕ ತರಲು ಬರುವದಲ್ಲವೇ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉತ್ತರ : wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ
ಏಕೆಂದರೆ, ತಾಂತ್ರಿಕ ಮಂದಿಯೇ, ಕನ್ನಡದಲ್ಲಿ ತಂತ್ರಜ್ಞಾನ ಸಾಧ್ಯವಿಲ್ಲ, ಬರೇ ಅನುವಾದ ಮಾತ್ರವೇ ಸಾಧ್ಯ ಎಂದು ತಪ್ಪು ತಿಳಿದಿರುವುದು. ನಮಗೆ ಕಂಪ್ಯೂಟರ್ ತಂತ್ರಜ್ಞಾನದ ಅನುವಾದ ಬೇಕಿಲ್ಲ. ನಮಗೆ ಬೇಕಿರುವುದು ಕನ್ನಡದಲ್ಲಿ ಕಂಪ್ಯೂಟರ್ ತಂತ್ರಜ್ಞಾನದ conceptualizationಗಳು. ಇದನ್ನು ಸಾಹಿತ್ಯ, ತಂತ್ರಜ್ಞಾನ ಅಥವಾ ಇನ್ಯಾವದೇ ಮಾರ್ಗದಿಂದಲಾದರೂ ನಾವುಗಳು ಸಾಧಿಸಬೇಕು.
ಅಂದ ಹಾಗೆ ಪಲುಕು ಎಂಬ ಪದ ಹಳೆಗನ್ನಡವಲ್ಲ, ಸೂರ್ಯ ಕಣ್ಣು ಹೊಡ್ದ ಹಾಡು ಕೇಳಿದರೆ ತಿಳಿಯುತ್ತದೆ. ಇದರಲ್ಲಿ ನನಗೆ ಯಾವ ಬಲವಂತವೂ ಇಲ್ಲ.
ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ ಅಥವಾ ಪಲುಕು ಇವುಗಳಲ್ಲಿ ಯಾವುದು ಸರಳವಾದ ನಾಮಪದ ಎಂಬ ತೀರ್ಮಾನಗಳನ್ನು ನಿಮ್ಗಳಿಗೆ ಬಿಡುಬಿಡುತ್ತೇನೆ. ಆದರೆ ಇಂತಹ ಉದ್ದುದ್ದ ಪದಗಳನ್ನು ಖಂಡಿತವಾಗಿಯೂ ಕನ್ನಡಿಗರು ಬಳಸುವುದೇ ಇಲ್ಲ. ಅಷ್ಟಕ್ಕೂ ತಂತ್ರಜ್ಞಾನ ಮತ್ತು ಸೃಜನಶೀಲತೆ ಎರಡೂ ಬೇರೆ ಬೇರೆ ಅಂತ ಏಕೆ ಭಾವಿಸುವಿರಿ ? ನನ(ಮ)ಗೆ ತಿಳಿದಿಲ್ಲ ಅಂತ ಕನ್ನಡದಲ್ಲಿ ಎಲ್ಲ ಹೊಸ ಪ್ರಯೋಗಗಳನ್ನೂ ಬೇಡಾ ಬೇಡಾ ಅಂತಾ ಇದ್ದರೆ, ನಷ್ಟ ನಮಗೇ ಹೊರತು ಬೇರೆಯವರಿಗಲ್ಲ ಎಂಬುದು ನನ್ನ ಅಂಬೋಣ.
ಮತ್ತೊಂದು ಮಾತು ಒಂದು-ಅಥವಾ-ಹೆಚ್ಚು-ಅಕ್ಷರ-ಅಂಕಿ-ಸೂಚಕ ಎನ್ನುವದಕ್ಕಿಂತ ಹಲವಂಕಿ ಅಂತಲೇ ಕರೆಯಬಹುದು. ಸೂಚಕ ಎಂಬ ಪದವನ್ನು ಸೇರಿಸಬೇಕಿಲ್ಲ. ಹಲವಂಕಿ ಎಂಬುದೇ ಒಂದು ನಾಮಪದವಾಗುತ್ತದೆ.
ಆಡು ಮಾತಿನಲ್ಲಿ.
೧. ಹುಡುಕುವಾಗ wildcard ಬಳಸು.
೨.೧ ಹುಡುಕುವಾಗ "ಒಂದ-ಅಥವಾ-ಹೆಚ್ಚು-ಅಕ್ಷರ-ಸೂಚಕ" ಬಳಸು.
೨.೨ ಹುಡುಕುವಾಗ ಹಲವಂಕಿ ಬಳಸು.
೩. ಹುಡುಕುವಾಗ ಪಲುಕು(ಹಲುಕು) ಬಳಸು.
ಹಾಯಿಕು ಕನ್ನಡವಾಗಬಹುದಾದರೆ, ಹಲುಕು ಏಕೆ ಆಗುವುದಿಲ್ಲ ?
ಇಂತಹ ಪ್ರಯೋಗಗಳಿಗೆ ಸುಲಭ ಉತ್ತರ ಎಂದರೆ, ನಮ್ಮ ತಮ್ಮಂದಿರಿಗೆ ಅಥವಾ ಮನೆಯಲ್ಲಿರುವ ಚಿಕ್ಕಮಕ್ಕಳಿಗೆ, ಅಥವಾ ವಯಸ್ಸಾದವರಿಗೆ ಹೇಳವಂತೆ ಮಾಡುವುದು. ಯಾವುದು ಅವರುಗಳಿಗೆ ಹೇಳಲು ಸುಲಭವಾಗಿರುತ್ತದೆಯೋ ಅದನ್ನು ಬಳಸುವುದು.
Re: wildcard ಗೆ ಒಂದು-ಅಥವಾ-ಹೆಚ್ಚು-ಅಕ್ಷರ-ಸೂಚಕ
ಪಲಕು ಅಥವಾ ಇನ್ನಾವುದೇ ಹಳಗನ್ನಡದ ಶಬ್ದಗಳನ್ನು ಕಂಪ್ಯುಟರಿನಲ್ಲಿ ಜಾರಿಗೆ ತರುವದು ಏಕೋ ಸರಿ ಎನ್ನಿಸುವದಿಲ್ಲ . ಈಗಾಗಲೇ ಬಳಕೆಯಲ್ಲಿರುವ ಸಾಮಾನ್ಯ ಶಬ್ದಗಳ ಆಧಾರಿತ ಇದ್ದರೆ ಚೆನ್ನ ಅಲ್ಲವೆ ?
ನಮ್ಮ ಗುರಿ ಜನಸಾಮಾನ್ಯರಿಗೆ ಕಂಪ್ಯುಟರ್ ತಂತ್ರಜ್ಞಾನ ಲಭ್ಯವಾಗಬೇಕೆಂಬುದಲ್ಲವೇ ? ಕನ್ನಡದ ಉದ್ಧಾರವೇ ? ಮೊದಲು ಕನ್ನಡ ಜನರ ಉದ್ಧಾರ ನೋಡೋಣ ಆಮೇಲೆ ಕನ್ನಡದ ಉದ್ಧಾರ . ಕನ್ನಡ ಜನ ಬೆಳೆದರೆ ತಾನೇ ಕನ್ನಡ ಉಳಿದು ಬೆಳೆದೀತು?
ಕನ್ನಡದ ಉದ್ಧಾರ ಕಂಪ್ಯೂಟರ್ ತಂತ್ರಜ್ಞಾನದ ಅನುವಾದ ಮೂಲಕವೇ ಏಕಾಗಬೇಕು ? ಈ ಹಳಗನ್ನಡ , ಅಚ್ಚಕನ್ನಡದ ಪದಗಳ ಬಳಕೆಯನ್ನು ನಮ್ಮ ಆಡುಮಾತಿನಲ್ಲಿ , ಮಾಧ್ಯಮಗಳಲ್ಲಿ , ನಮ್ಮ ಬರಹ, ಸಾಹಿತ್ಯಗಳ ಮೂಲಕ ತರಲು ಬರುವದಲ್ಲವೇ?
@shreekant.mishrikoti ಸಾರ್
ನನಗೂ ಇದೆಲ್ಲ ಗೋಜಲು ಬೇಡ..
ನಾನು ಹೇಳಿದುದು ಇಷ್ಟೇ.
character = ಅಕ್ಷರ ಆದರೆ
numeric = ?
alphnumeric = ?
alphabetic =?
ಅಂತ.
ಈ regular expressionಗಳಲ್ಲಿ ಇವೆಲ್ಲ ಬರುತ್ತೆ. wildcard ಒಂದು regular expression. ( ಹೆಚ್ಚು ಕೊರೆತ ಆದರೆ sorry )!
ಹೀಗೆ ಇಷ್ಟು ಕಷ್ಟ ಪಟ್ಟು ಲೂಸ್ ಆಗಿ ಅಕ್ಷರವನ್ನು characterಗೆ ಸಮ ಮಾಡಿ, ಬಳಸೋದು ತ್ರಾಸ, ಶ್ರಮ ಅಂತ ನಾನು personal ಆಗಿ ಅಂದುಕೊಂಡೆ. ಇಷ್ಟೆಲ್ಲ ಕಷ್ಟಪಟ್ಟರೂ ಕೊನೆ ಮಾಡಿದ ಪದ ಬಗ್ಗೆ ಇನ್ನೂ ಗೊಂದಲ ಇದ್ದೇ ಇದೆ.
ನಿಮಗೆ 'ಹಲವಕ್ಕರಸೂಚಿ' ಸರಿಯೆಂದು ಅನಿಸಿದರೆ, ಅದೇ ಇರಲಿ ಬಿಡ್ರಿ. ಸುಮ್ಮನೆ ಗಲಿಬಿಲಿ ಬೇಡ!
===========================================================
===========================================================
ಹೆಚ್ಚು ಜನ ನಂಬಿರುವುದೇ ಧರ್ಮ, ನ್ಯಾಯ, ಸತ್ಯ, ನೀತಿ, ಸಭ್ಯತೆ, ಸದಾಚಾರ, ಸರಿ!
ಪ್ರ: 'ಆಹಾ!'
ಮಿಶ್ರಿಕೋಟಿಗಳೇ, ನಿಮ್ಮ ಬರೆವಣಿಗೆ ತುಂಬಾ ಇಷ್ಟವಾಯಿತು. ಇದನ್ನು ಬರೆಯುವಾಗ ನೀವು ಏನೇನೆಲ್ಲಾ ಯೋಚಿಸಿರಬಹುದು ಎಂಬುದರ ಕುರಿತಾಗ ನಾನು ಯೋಚಿಸಿದಾಗ ತುಂಬಾ ನಗು ಬಂತು(ಖುಷಿಯೂ ಆಯಿತು). ನಿಮ್ಮ ಮನಸ್ಸು ಇತ್ತೀಚೆಗೆ ಹೇಗೇಗೆಲ್ಲಾ ಕೆಲಸ ಮಾಡುತ್ತಿದೆ ಎಂಬುದನ್ನು ಈ ಬರಹದಲ್ಲಿ ಸಮರ್ಥವಾಗಿ ಕಟೆದು ಬರೆದಿದ್ದೀರಿ.
ನಿಮ್ಮ ಬರಹವನ್ನೋದುವಾಗ ಏನೇನೋ ಹೇಳಬೇಕು ಎನಿಸಿದರೂ, ಇಷ್ಟನ್ನು ಮಾತ್ರ ಹೇಳಲೇಬೇಕೆನಿಸಿತು. ನನ್ನಿ (thanks).
wildcardಗೆ ಸೂಪರ್ರಾಗಿರುವ, ಸರಳವಾಗಿರುವ, ಸಖತ್ತಾಗಿರುವ ಕನ್ನಡ ಪದ
ಶ್ರೀಕಾಂತ ಮಿಶ್ರಿಕೋಟಿಗಳು ತಮ್ಮ ಮನದಾಳದ ಮಾತನ್ನು ಅತ್ಯಂತ ಸಮರ್ಪಕವಾಗಿ ನಮ್ಮ ಮುಂದಿಟ್ಟಿದ್ದರು. ಅವರು ಸೂಚಿಸಿದ ಹಲವಕ್ಷರಸೂಚಿ, ನಂತರ ಪವನಜರು ಹಲವಕ್ಷರಸೂಚಕ, ನಂತರ ಮಹೇಶರ ಕಾಮೆಂಟ್, ನಂತರ ಅಶೋಕ್ ಅವರು ಅಂಕೆ ಎಂದು ಸೂಚಿಸಿದ್ದು ಕನ್ನಡಕ್ಕಾಗಿ ನಮ್ಮಲ್ಲೆರಲ್ಲಿರುವ ತೀವ್ರತೆಯನ್ನು ಸೂಚಿಸುತ್ತದೆ.
ಅಶೋಕ್ ಅಂಕೆ ಎಂದು ಪ್ರಸ್ತಾಪಿಸಿದ ನಂತರ, ಹಲವಂಕೆ (ಅಥವಾ ಹಲವಂಕಿ ) ಎನ್ನಬಹುದೇ ಎಂದು ಯೋಚಿಸುತ್ತಿದ್ದೆ.
ನನಗೆ ತಿಳಿದದ್ದು. ಕನ್ನಡದಲ್ಲಿ ಅಂಕೆ ಎಂಬ ಪದಕ್ಕೆ ಈ ಬಗೆಯಾದ ಅರ್ಥಗಳೂ ಇವೆ.
ಅಂಕೆ - ಆಜ್ಞೆ, ಯುದ್ಧ.
ಅಂದ ಹಾಗೆ, ಹಲವು ಎಂದು ಬಳಸುವ ಪದಕ್ಕೆ ಹಳಗನ್ನಡದ "ಪಲ" ಎಂಬ ಪದವೇ ಆಧಾರ(root).
http://dsal.uchicago.edu/cgi-bin/philologic/getobject.pl?c.1:1:1403.burrow
ಹಲ, ಹಲವು, ಪಲ, ಪಲವು ಎಂಬ ಪದಗಳೆಲ್ಲವೂ ಒಂದೇ ಅರ್ಥವನ್ನು ಸೂಚಿಸುತ್ತವೆ.
ನಾನು ಕನ್ನಡದ ಗಣಿಯಲ್ಲಿ ಅಜ್ಞಾತವಾಗಿರುವ ರತ್ನಗಳು- ಒಂದು ಚಿಂತನೆ ಯಲ್ಲಿ ಪ->ಹ ಮಾರ್ಪಾಟಿನ ಬಗ್ಗೆ ತಿಳಿಸಿಕೊಡುವಾಗ ಬಹುಮುಖ್ಯವಾಗಿ ಒತ್ತಾಗಿ ಹೇಳಿದ್ದು, ಹಳೆಗನ್ನಡದ "ಪ" ಅಕ್ಷರವನ್ನು ಈಗಿನ ಕನ್ನಡಿಗರಾದ ನಾವು conceptualizationಗೆ ಬಳಸಿಕೊಳ್ಳುತ್ತಾ ಹೊಸ ಹೊಸ ನಾಮಪದಗಳನ್ನು ಮಾಡಬಹುದು ಎಂಬುದಾಗಿ. ಆ ದೃಷ್ಟಿಯಲ್ಲಿ wildcardಗೆ ಪಲ ಎಂಬ ಎರಡಕ್ಷರದ ಪದವನ್ನೇ ಇಟ್ಟುಕೊಳ್ಳಬಹುದು. ಹೇಳುವುದಕ್ಕೂ ಸರಳವಾಗಿದೆ. ಮತ್ತೆ ಕನ್ನಡ ಕಾವ್ಯಗಳನ್ನು ಅರಸುತ್ತಾ ಹೋದರೆ ಇದಕ್ಕೆ ಬೇಕಾದಷ್ಟು ಉದಾಹರಣೆಗಳು ಸಿಗುತ್ತವೆ. wildcard ಎನ್ನುವ ಹೊಸ concept ಅನ್ನೇ ಸ್ವೀಕರಿಸುವ ಕನ್ನಡಿಗರು, ಹೊಸಪದವೆನಿಸುವ ಆದರೆ ಹಳೆಯ ಪದವಾದ "ಪಲ"ವನ್ನು ಸ್ವೀಕರಿಸುವುದಿಲ್ಲ ಎಂಬ ಹಿಂಜರಿಕೆ ಬೇಡ.
ಪಲ ಎಂಬ ಪದ ಗೊಂದಲಕ್ಕೀಡು ಮಾಡುತ್ತದೆ ಎನ್ನುವುದಾದರೆ, ಇನ್ನೊಂದು ಸಲಹೆಯಿದೆ. ಅಶೋಕ್‌ಕುಮಾರ್ ಅವರು ಅಂಕೆಯ ಬಗ್ಗೆ ಪ್ರಸ್ತಾಪಿಸಿದರು,
ಪಲ + ಅಂಕೆ - ಪಲಂಕೆ -> ಪಲಕೆ, ಅಥವಾ ಪಲ + ಅಂಕಿ -> ಪಲಂಕಿ -> ಪಲಕಿ.
ನನಗೆ ಅತ್ಯಂತ ಖುಷಿ ಕೊಟ್ಟ ಪದ
ಈ ಪದ, ಪಲಕೆ, ಪಲಕಿ, ಪಲವಂಕಿ, ಹಲವಂಕಿ, ಹಲವಂಕೆ, ಯಾವುದೂ ಬೇಡ, ಈಗಿನ ಕನ್ನಡಿಗರಿಗೆ ಸಖತ್ತಾಗಿದೆ ಎನಿಸುವ ಪದ ಬೇಕು ಎನ್ನುವಾದಾದರೆ, ಜೊತೆ ಜೊತೆಯಲಿ ಚಿತ್ರದ ಸೂರ್ಯ ಕಣ್ಣು ಹೊಡ್ದ ಹಾಡಿನಲ್ಲಿ ಉತ್ತರಸಿಗುತ್ತದೆ. ನಾದವಿರದ ನಾಡಿನಲ್ಲಿ ಇವಳ ಉಸಿರೆ ಪಲುಕು. ಕನ್ನಡದ ಚಿತ್ರೋದ್ಯಮವೂ ಹೇಗೆ ಕನ್ನಡದ ತಾಂತ್ರಿಕತೆಗೆ ಸಹಾಯ ಮಾಡಬಹುದು ನೋಡಿ. ಪಲುಕು ಪದದ ಹಿಂದಿನ ಅರ್ಥಗಳು ಏನೇ ಇರಲಿ, ಕೆಳಗಿನ ವಿವರಣೆ ನೋಡಿ.
ಪಲುಕು ಪದದ ಅರ್ಥ
ಪಲುಕು - ಪಲ + ಉಕು(ಉಂಕು). ಉಂಕು ಎನ್ನುವುದು ಹಳೆಗನ್ನಡದ ಒಂತು ಪ್ರತ್ಯಯ. ಬರ್ದುಂಕು -> ಬರ್ದು + ಉಂಕು - ಬದುಕು ನೆನಪಿಸಿಕೊಳ್ಳಿ. ಓ.ಎಲ್.ಎನ್ ಸ್ವಾಮಿಯವರು ಬದುಕು ಎನ್ನುವುದು ಹೇಗೆ ಬಂತು ಎಂಬುದನ್ನು ವಿವರಿಸಿದ್ದರು. ನೋಡಿಯಿಲ್ಲಿ.
ಪಲ - ಹಲವು, many, ಉಂಕು - ಒಂದು ಪ್ರತ್ಯಯ.
wildcard ಪದದ ಭಾವಾನುವಾದ ಮಾಡಿದರೆ, ಪಲುಕು ಸರಿಹೊಂದುತ್ತದೆ ಎಂಬುದು ನನ್ನ ಅಂಬೋಣ. ಈ ಪಲುಕು ಪದದ ಭಾವಾನುವಾದದ ಬಗ್ಗೆ ನಿಮ್ಮೆಲ್ಲರ ಅನಿಸಿಕೆಯೇನು ? ನಮ್ಮ ಹಳಗನ್ನಡ ಎಷ್ಟು ಚೆಂದ ಅಲ್ಲವೇ ? ನಾವು ಕನ್ನಡದ ಬಗ್ಗೆ ತಿಳಿಯುವುದು ಬಹಳಷ್ಟಿದೆ. ನೀವುಗಳು ಪಲುಕು ಒಪ್ಪುವುದಾದರೆ, ಕನ್ನಡದ ಒಂದು ಒಳ್ಳೆಯ(??) ಪದ ಹೊಸ ಅರ್ಥವನ್ನು ಪಡೆಯುತ್ತದೆ. ಯೋಚಿಸಿ ನೋಡಿ. ತೆಲುಗಿನಲ್ಲಿ ಪಲುಕು ಎಂಬುದು word, utter, speak ಎಂಬ ಅರ್ಥದಲ್ಲಿ ಬಳಕೆಯಲ್ಲಿದೆಯಂತೆ.