ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ನಾವು ಕನ್ನಡದಲ್ಲಿ ಸಾಮಾನ್ಯವಾಗಿ ಬಳಸುವ ಕೆಲವು ಸಂಸ್ಕೃತ ಶಬ್ದಗಳ ಬದಲಾಗಿ ಕೆಲವು ಅಪ್ಪಟ ಕನ್ನಡದ ಶಬ್ದಗಳನ್ನು ಆಗಸ್ಟ್ ಕಸ್ತೂರಿಯ ಪುಸ್ತಕವಿಭಾಗದಲ್ಲಿ ಬಂದಿರುವ ಭಾರತಿಸುತ ಅವರ ಕಾದಂಬರಿ ಸಂಗ್ರಹದಿಂದ ಆಯ್ದುಕೊಂಡು ಇಲ್ಲಿ ಕೊಡುತ್ತಿರುವೆ .
ಒಂದು ಸಲ ಈ ಪಟ್ಟಿ ನೋಡಿ . ಅಚ್ಚ ಕನ್ನಡ ಶಬ್ದಗಳನ್ನು ಬಳಸಿ .
ಶಿರಸಾ ವಹಿಸಿ - ನೆತ್ತಿಯಲ್ಲಿ ಹೊತ್ತು
ಆಲಿಂಗನ - ಅಪ್ಪುಗೆ
ಚುಂಬನ - ಮುತ್ತು
ಗರ್ವ - ಸೊಕ್ಕು
ಮಧ್ಯರಾತ್ರಿ - ನಟ್ಟಿರುಳು
ವೃದ್ಧಾಪ್ಯ - ಮುಪ್ಪು
ಸೈನ್ಯ - ದಂಡು
ಅಧರ -ತುಟಿ
ಮಧುರ - ಸಿಹಿ
ಸ್ನಾನ ಮಾಡುವದು - ಮೀಯುವದು
( ಜಳಕ ಮಾಡುವದು - ಜಳ ಜಳ ಸ್ವಚ್ಚ ಆಗುವದು!)
ಜೀವನ - ಬದುಕು , ಬಾಳುವೆ
ವಸ್ತ್ರಾಭರಣ - ಉಡಿಗೆ ತೊಡಿಗೆ
ರಾಜ - ಅರಸ
ರಾಣಿ - ಅರಸಿ
ಸಮುದ್ರ - ಕಡಲು
ಜವಾಬ್ದಾರಿ ( ಇದು ಸಂಸ್ಕೃತ ಅಲ್ಲ) - ಹೊಣೆ
ಖರ್ಚು - ವೆಚ್ಚ
ಶೌರ್ಯ - ಕಲಿತನ - ಕೆಚ್ಚು
ದುಃಖ ,ಶೋಕ - ಅಳಲು ( ಅಳುವಿಗೆ ಸಂಬಂಧಿಸಿದ್ದು)
ಔಷಧ -ಮದ್ದು
ಮಂದಹಾಸ - ಕಿರುನಗೆ , ನಸುನಗೆ
ಹಾಗೆಯೇ ಬಳಕೆಯಲ್ಲಿರುವ ಕೆಲ ಇಂಗ್ಲೀಷ ಪದಗಳಿಗೆ ಕನ್ನಡ ಪದಗಳು
ಪ್ರೆಸೆಂಟು - ಉಡುಗೊರೆ
ಪ್ಯಾಂಟ್ - ಕಾಲು ಕುಪ್ಪಸ
ಸೆಂಡಾಫ್ - ಬೀಳ್ಕೊಡುಗೆ
ಟೆನ್ಶನ್- ದುಗುಡ
ವಿಶ್ - ಹಾರೈಕೆ
ಬರ್ಥಡೇ - ಹುಟ್ಟಿದ ಹಬ್ಬ
ಮ್ಯಾರೇಜು - ಮದುವೆ
ಲಿಸ್ಟ್ - ಪಟ್ಟಿ , ಯಾದಿ ..... ಅಯ್ಯೋ , ಬಳಕೆಯಲ್ಲಿರುವ ಇಂಗ್ಲೀಷ ಪದಗಳಿಗೆ ಕನ್ನಡ ಪದಗಳನ್ನು ಕೊಡ್ತಾ ಹೋದರೆ ಪಟ್ಟಿ ದೊಡ್ಡದಾಗುವದು .... !
ಯುರೇಕಾ ! ಬಡಿಗೆ - ಬಡಿಯಲು ಬಳಸುವ ಸಾಧನ

- shreekant.mishrikoti ರವರ ಬ್ಲಾಗ್
- Login or register to post comments
- 589 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ಪ್ಯಾಂಟ್ - ಕಾಲು ಕುಪ್ಪಸ
ಸಾರ್.
ಕುಪ್ಪಸ ಇದು ಸಕ್ಕದ ಕುರ್ಪಾಸದಿಂದ ಎಂಬ ಮಾತಿದೆ. ಅಲ್ಲದೇ ಇದು ಕುಪ್ಪಸ ಅಂದರೆ blose, jacket.
ಅಚ್ಚಗನ್ನಡದ ಒರೆ ರವಿಕೆ/ಱವಿಕೆ/ಱವಕೆ = jacket, blose
http://dsal.uchicago.edu/cgi-bin/philologic/search3advanced?dbname=burro...
ಉಡು ಅಂದರೆ ಸೊಂಟ, ಉಡುವುದು ಅಂದರೆ ಸೊಂಟಕ್ಕೆ ಸುತ್ತುವುದು.
ಹಾಗೆ ನೋಡಿದರೆ Pant ಒಂದು ಉಡುಗೆ.
Pant ಗೆ ನಮ್ಮ ಕಡೆ ಶರಾಯಿ ಅಂತಾರೆ. ಅಚ್ಚಗನ್ನಡದಲ್ಲಿ ಕಾಲುಡುಗೆ ಎನ್ನಬಹುದು.
To wear ಗೆ ಸರಿಯಾದ ಒರೆ ತೊಡು = ಧರಿಸು. ತೊಡುಗೆ = dress.
ಮಿಕ್ಕ ಎಲ್ಲ ಒರೆಗಳು ಬಲು ಚನ್ನಾಗಿದೆ. ಅವಕ್ಕೆ ನನ್ನಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
೬. ಕುಪ್ಪಸ (<ಸಂ. ಕೂರ್ಪಾಸ) (ನಾ) ೧ ರವಕೆ, ಕಂಚುಕ, ಕುಬಸ ೨ ಕವಚ, ಚಿಲುಖತ್ತು ( ಮೇಲಂಗಿ )
ಮೇಲಂಗಿ, ನೀಳಂಗಿ, ತೋಳಂಗಿ, ಅರೆತೋಳಂಗಿ, ಒಳಂಗಿ ಇವೆಲ್ಲ ಗೊತ್ತಾ?
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ಇದನ್ನು ನೋಡಿ ಪ್ಯಾಂಟ್ ಗೆ ನಮ್ಮ ಅಜ್ಜಿ ಬಳಸುತ್ತಿದ್ದ ಕಾಲು ಕುಪಾಯ ಎಂಬ ಪದ ನೆನಪಾಯಿತು. ಕುಪಾಯ ಅನ್ನೋದೂ ಕುಪ್ಪುಸ ಅನ್ನೋದರಿಂದಲೇ ಬಂದ ಹಾಗೆ ಕಾಣುತ್ತೆ. ಆದ್ರೆ, ಇನ್ಯಾರೂ ಈ ಪದ ಬಳಸಿದ್ದನ್ನು ನಾನು ಕೇಳೇ ಇಲ್ಲ..
-ಹಂಸಾನಂದಿ
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ಪ್ಯಾಂಟ್ - ಕಾಲು ಕುಪ್ಪಸ,
ಸಾಕ್ಸ್ - ಕಾಲು ಚೀಲ, ಈಗಲೂ ನಾವು ಸಾಕ್ಸ್ ಗೆ 'ಕಾಲು ಚೀಲ' ಅಂತೀವಿ. ಆದರೆ ಪ್ಯಾಂಟ್ ಗೆ ಕೆಲವು ಕಡೆ 'ಇಜಾರ' ಅನ್ನುವದನ್ನು ಕೇಳಿದ್ದೇನೆ.
-------------------------------------------------------
-------------------------------------------------------
ನಡೆವವ ಬಿದ್ದಾನಲ್ಲದೇ, ನಿಂತವ ಬೀಳಲಾರ
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ಉತ್ತರ ಕರ್ನಾಟಕದ ಕೆಲ ಹಳ್ಳಿ ಕಡೆ pant ಗೆ ದುಗುಡಿ ಎಂದು ಉಪಯೋಗಿಸಿದ್ದನ್ನು ಕೇಳಿದ್ದೇನೆ
Visit my blog:
http://kannada-nudi.blogspot.com
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ಇನ್ನಷ್ಟು
ಆಗಮನ - ಬರವು
ಅಭಿಮಾನ - ಹೆಮ್ಮೆ
ಅಹಂಕಾರ - ಸೊಕ್ಕು
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ಸಾರ್///
ಸಿಂಗಾಪುರದಲ್ಲಿ ನನಗೆ ಅಚ್ಚಕನ್ನಡದಲ್ಲೇ "welcome" ಆದರೆ ತಮಿಳು ಲಿಪಿಯಲ್ಲಿ "ನಲ್ವರುಂ" ಎಂದು ( ನಲ್ + ಬರು = ನಲ್ವರು ಇದು ಕನ್ನಡೂ ಹೌದು ). ನಾನು ಇದ ಮುಂದೆ ನಿಂತು, "ಕುಡಿ ನೀರ್"( ತಮಿಳು ಲಿಪಿ ) ಮುಂದೆ ನಿಂತು, ಪೋಟೊ ಹೊಡೆಸಿಕೊಂಡೆ!
ನಾನು "ಕುಡಿ ನೀರ್" ಮುಂದೆ ನಿಂತು ಪೋಟೋ ತಗೆಸಿಕೊಂಡಿದ್ದು ನೋಡಿ, ನನ್ನ ಗೆಳೆಯರು ಮೂದಲಿಸಿದರು, ಆದರೆ ನಾನು ಬಲು ಹೆಮ್ಮೆಯಿಂದ "ಸೆಂದೆಮಿೞ್, ಸಿರಿಗನ್ನಡಂ ಗೆಲ್ಗೆ" ಎಂದು ನಲಿದೆ
ನೀವೇ ಅಲ್ವಾ!!
good night = ಸೊಬಗಿರುಳು
good morning = ನಲ್ವಗಲು
ಈ ಒರೆಗಳನ್ನು ತಿಳಿಸಿದ್ದು?( ಮರೆವು
)
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ಸ್ವಾಗತ=ನಲ್ವರವು
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ನಲ್ವಾತು, ನಲ್ವನೆ, ನಲ್ವ, ನಲ್ವೆಳಗು, ನಲ್ನಾಳು, ನಲ್ದೆರಳು ...
=====================================
ಮಾಯ್ಸ!
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ನಲ್ನಸುಕು, ನಲ್ಸಂಜೆ, ನಲ್ಲಿರುಳು, ಹೊಂಬಿಸಿಲು (Good afternoon)
scavenger=ಕೊೞೆತಿನಿ
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ನಲ್ಮದುವೆ, ನಲ್ವೊತ್ತು, ನಲ್ಲೊಸುಗೆ, ನಲ್ಸುದ್ದಿ
ನಲ್ವೆ, ನಲ್ವು, ನಲ್ನಡುವಗಲು, ನಲ್ನೆನಪು, ಇನಿನೆನಪು
=====================================
ಮಾಯ್ಸ!
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
ನಲ್ವದುವೆ=ಶುಭವಿವಾಹ ಕೂಡ ಆಗಬಹುದು
ಉ: ಒಂದಿಷ್ಟು ಅಪ್ಪಟ ಕನ್ನಡ ಶಬ್ದಗಳು
=====================================
ಮಾಯ್ಸ!