ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಹಿಟ್ಟಿನ ಹುಂಜ-ಗಿರೀಶ್ ಕಾರ್ನಾಡರ ನಾಟಕದ ಕಥೆ

February 20, 2006 - 11:41am — shreekant.mishrikoti

ರಾಣಿ ಅಮೃತಮತಿ ಸುಂದರಿ , ಏನೂ ಕೊರತೆಯಿಲ್ಲ ಅವಳಿಗೆ . ಅವಳನ್ನು ತುಂಬ ಪ್ರೀತಿಸುವ ಸದ್ಗುಣಿ , ಸುಂದರ ರಾಜ . ಹೀಗಿರುವಾಗ ಅವಳಿಗೆ ಒಬ್ಬ ಕುರೂಪಿ ಮಾವುತ - ಹೆಸರಿಗೆ ತಕ್ಕಂತೆ ಅಷ್ಟಾವಕ್ರ , ಅಷ್ಟೇ ಅಲ್ಲ ನೀಚ , ಕ್ರೂರಿ ಕೂಡ - ನ ಮೇಲೆ ಮೋಹವುಂಟಾಗುತ್ತದೆ. ರಾಜನ ಕಣ್ಣು ತಪ್ಪಿಸಿ ಅವನ ಹತ್ತಿರ ಹೋಗುತ್ತಿರುತ್ತಾಳೆ.
ಹೀಗೆ ಒಂದು ರಾತ್ರಿ ಹೋಗುವಾಗ ರಾಜನಿಗೆ ಎಚ್ಚರವಾಗಿ ಅವಳನ್ನು ಹಿಂಬಾಲಿಸುತ್ತಾನೆ. ತನ್ನ ಪತ್ನಿಯ ವ್ಯಭಿಚಾರವನ್ನು ಕಣ್ಣಾರೆ ನೋಡಿ ಅವನಿಗೆ ಸಿಟ್ಟು ಬಂದು ಇಬ್ಬರನ್ನೂ ಅಲ್ಲಿಯೇ ತುಂಡರಿಸುವ ಮನಸ್ಸಾಗಿ ಖಡ್ಗದ ಮೇಲೆ ಕೈ ಹಾಕಿದವ ಮತ್ತೆ ಹಿಂಜರಿದು ವಾಪಸ್ ಬಂದು ಮಲಗುತ್ತಾನೆ. ರಾತ್ರಿಯೆಲ್ಲ ಅವನಿಗೆ ನಿದ್ದೆಯೇ ಬರುವದಿಲ್ಲ .
ಬೆಳಗಿನ ಸಮಯ ರಾಜಮಾತೆ ಅವನ ಕಳೆಗುಂದಿದ ಮುಖ ನೋಡಿ ವಿಚಾರಿಸಿದಾಗ ಏನು ಹೇಳಬೇಕೆಂದು ತಿಳಿಯದೆ 'ಏನೋ ಕೆಟ್ಟ ಕನಸು ಬಿದ್ದು ನಿದ್ದೆಯಾಗಲಿಲ್ಲ' ಎನ್ನುತ್ತಾನೆ. ರಾಜಮಾತೆ ಅದು ಏನೆಂದು ಕೇಳಿದಾಗ -ಶ್ರೇಷ್ಠವಾದ ರಾಜಹಂಸವೊಂದು ಕೊಚ್ಚೆಯಲ್ಲಿ ಹೊರಳಡುವದನ್ನು ಕಂಡೆ- ಎನ್ನುತ್ತಾನೆ. ರಾಜಮಾತೆ ರಾಜನ ಕನಸು ಕುರಿತು ಮಂತ್ರಿಗಳು ಪುರೋಹಿತರನ್ನು ವಿಚಾರಿಸಿದಾಗ ಅವರು ಈ ಕೆಟ್ಟ ಕನಸಿಗೆ ಪರಿಹಾರವಾಗಿ ಒಂದು ಶಾಂತಿಯನ್ನು ಮಾಡಿ ಒಂದು ಹುಂಜವನ್ನು ಬಲಿ ಕೊಡಲು ಹೇಳುತ್ತಾರೆ.
ರಾಜ ಜೈನ ಮತವನ್ನು ಅನುಸರಿಸುವವ . ಇದಕ್ಕೆ ಒಪ್ಪದಾದಾಗ . ಹಿಟ್ಟಿನ ಹುಂಜವೊಂದನ್ನು ಮಾಡಿ ಸಾಂಕೇತಿಕವಾಗಿ ಬಲಿಯನ್ನು ಕೊಡಲು ಹೇಳುತ್ತಾರೆ. ಈ ರೀತಿ ಮಾಡುವಾಗ ಹಿಟ್ಟಿನ ಹುಂಜದಲ್ಲಿ ಬೆಂತರ( ದೆವ್ವ? )ವೊಂದು ಸೇರಿಕೊಂಡು ಕೂಗಿಕೊಂಡು ರಕ್ತ ಕಾರಿ ಸಾಯುತ್ತದೆ .
ಆಗ ರಾಜನಿಗೆ ಜೀವನದಲ್ಲಿ ವೈರಾಗ್ಯ ತೋರಿ ರಾಜ್ಯ ತ್ಯಾಗ ಮಾಡಿ ವನವಾಸಕ್ಕೆ ತೆರಳುತ್ತಾನೆ. ಅವನೊಂದಿಗೆ ರಾಜಮಾತೆ ಕೂಡ ಹೋಗುತ್ತಾಳೆ.
ಇತ್ತ ರಾಣಿ ಅಮೃತಮತಿ ಅಷ್ಟಾವಕ್ರನನ್ನೆ ಮದುವೆಯಾಗಿ ರಾಜ್ಯಭಾರ ವಹಿಸಿಕೊಳ್ಳುತ್ತಾಳೆ. ಅಷ್ಟೇ ಅಲ್ಲ , ರಾಜ ಹಾಗೂ ರಾಜಮಾತೆಯರಿಗೆ ವಿಷ ಉಣ್ಣಿಸಿ ಕೊಲ್ಲುತ್ತಾಳೆ.
ಈಗ ಈ ಕಥೆಯ ಕುತೂಹಲಕಾರಿ ಅಂತ್ಯ ಹೊಂದಿದೆ .
ಕಾಲಕ್ರಮೇಣ ಎಲ್ಲರೂ ಸಾಯುವಾಗ ರಾಜ ಹಾಗೂ ರಾಜಮಾತೆ ನೀಚ ಜನ್ಮಗಳನ್ನು ಎತ್ತುತ್ತ ಹೋಗುತ್ತಾರೆ . ಆದರೆ ರಾಣಿ ಅಮೃತಮತಿ ಹಾಗು ಅಷ್ಟಾವಕ್ರ ಉತ್ತಮ ಜನ್ಮಗಳನ್ನೇ ಎತ್ತುತ್ತ ಹೋಗುತ್ತಾರೆ.
ಇದೇಕೆ ಹೀಗೆ ?
ಜೈನ ಧರ್ಮದ ಪ್ರಕಾರ ಪಾಪ ಮಾಡುವದಕ್ಕಿಂತ ಅದರ ಪ್ರಜ್ಞೆ , ವಿಚಾರ , ಸಂಕಲ್ಪ ಹೆಚ್ಚು ಘೋರ. ರಾಣಿ ಅಮೃತಮತಿ ಹಾಗು ಅಷ್ಟಾವಕ್ರರಿಗೆ ಪಾಪ ಪ್ರಜ್ಞೆ ಇಲ್ಲ . ರಾಜ ಅವರನ್ನು ಕೊಲ್ಲುವ ವಿಚಾರ ಬಂದು ಖಡ್ಗವನ್ನು ಎತ್ತಿದ್ದ. ರಾಜಹಂಸದ ಕನಸಿನ ಬಗ್ಗೆ ಹೇಳುವಾಗ , ಹುಂಜ ಹಿಟ್ಟಿನದಾದರೂ ಅದನ್ನು ಕೊಲ್ಲುವಾಗ ಅವನ ಧ್ಯಾನ ಅವರತ್ತಲೇ ಇದೆ .

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 1160 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 20, 2006 - 8:13pm — Sunil Jayaprakash

Re: ಹಿಟ್ಟಿನ ಹುಂಜ-ಗಿರೀಶ್ ಕಾರ್ನಾಡರ ನಾಟಕದ ಕಥೆ

Sunil Jayaprakash's picture

shreekant.mishrikoti wrote:
ಜೈನ ಧರ್ಮದ ಪ್ರಕಾರ ಪಾಪ ಮಾಡುವದಕ್ಕಿಂತ ಅದರ ಪ್ರಜ್ಞೆ , ವಿಚಾರ , ಸಂಕಲ್ಪ ಹೆಚ್ಚು ಘೋರ. ರಾಣಿ ಅಮೃತಮತಿ ಹಾಗು ಅಷ್ಟಾವಕ್ರರಿಗೆ ಪಾಪ ಪ್ರಜ್ಞೆ ಇಲ್ಲ

ಇದು ಅಪಾಯಕಾರಿಯಾಗಲಿಲ್ಲವೇ. ಪಾಪ ಪ್ರಜ್ಞೆಯಿಲ್ಲದಿದ್ದರೆ, ಸ್ವೇಚ್ಛಾಚಾರ ಮನೆಮಾಡುತ್ತದೆ.ಕಳ್ಳರಿಗೆ, ಖದೀಮರಿಗೆ ಹಾಸಿಗೆ ಹಾಸಿ ಕೊಟ್ಟಹಾಗಾಗುತ್ತದೆ. ಮನುಷ್ಯರಿಗೆ ಸರಿ ತಪ್ಪುಗಳು ತಿಳಿದಿದ್ದರೆ ತಾನೆ. ಏನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ತಿಳಿಯುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 21, 2006 - 8:41am — sinchanabhat

ನಮ್ಮೊಳಗೆ

sinchanabhat's picture

ನಮ್ಮೊಳಗೆ ಮನಸ್ಸಿಗಿಂತ ಅದ್ಭುತವಾದದ್ದು ಸಿಗಲಾರದು.ಒಮ್ಮೆ ಬಂದ ಯೋಚನೆಯನ್ನು ಸರಿತಪ್ಪುಗಳ ನಡುವೆ ವಿಮರ್ಶಿಸಿಕೊಂಡುಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡರೆ ಅದು ಮಾನವೀಯತೆ,ಜನಸಾಮಾನ್ಯರಿಗೆ ಅನುಸರಿಸಲಾಗುವಂತದ್ದು.ಕೆಟ್ಟದ್ದನ್ನ ಕಂಡ ತಕ್ಷಣಮೂಡುವ ಕೋಪ ಒಮ್ಮೆ ಕೆಟ್ಟದ್ದಾಗಿಯೇ ಯೋಚಿಸುವಂತೆ ಮಾಡುತ್ತದೆ.ಆದರೆ ನಂತರ ಅದನ್ನು ಪೂರ್ತಿಯಾಗಿ ಮನಸಿಂದ ತೆಗೆದು ಹಾಕದೇಇದ್ದರೆ ಅದು ಚಿಂತೆಯಂತೆ ನಮ್ಮನ್ನು ಬೇಯಿಸುತ್ತದೆ.ಇಲ್ಲಿ ರಾಜ ಮಾಡಿದ ತಪ್ಪು ಕ್ಷಮೆಯಾಗಲಿ ಸರಿಯಾದ ಶಿಕ್ಷೆಯಾಗಲಿ ಕೊಡುವ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳದೇ ಇದ್ದಿರುವುದು.ಆತನ ನಿರ್ಧಾರ ಸರಿಯಾದುದಾಗಿದ್ದರೆ ಅದು ಪಾಪವಾಗುತ್ತಿರಲಿಲ್ಲ ಅಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಾಪ ಮತ್ತು ಪಾಪಪ್ರಜ್ಞೆ
  • ರಾಜ ಮುದ್ದು ರಾಜ
  • ನಿಮ್ಮ ಸ್ವಭಾವ ಅರಿಯಬೇಕೆ?
  • ಸಿನಿಮಾ ಕತೆ ಕೇಳಿ- ಸತ್ಯಕಾಮ -೨
  • ಬದುಕೆಂಬುದು ಮಿಥ್ಯ... ಸತ್ಯ?
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 69 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲರಿಗೆ ಕ್ಷಮಿಸುವ ಹಕ್ಕಿಲ್ಲ, ಕ್ಷಮಿಸುವ ಶಕ್ತಿ ಮತ್ತು ಹಕ್ಕಿರುವುದು ಬಲಿಷ್ಠರಿಗೆ ಮಾತ್ರ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator