ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ನಿಮಗೆ ಈ ಸಮಸ್ಯೆ ಎದುರಾಗಿದೆಯೋ ಇಲ್ಲವೋ ನಾನು ಅರಿಯೆ .
ಕನ್ನಡದೇಶದಲ್ಲೇ ನಿಮ್ಮ ಜನರ ನಡುವೆಯೇ ನೀವು ಇರುತ್ತಿದ್ದರೆ ಈ ಸಮಸ್ಯೆ ನಿಮ್ಮನ್ನು ಕಾಡದು .
ಪರದೇಶದಲ್ಲಿ ಪರಭಾಷಿಗರ ನಡುವೆ ಇರುವ ಪ್ರಸಂಗ ಬಂದಾಗ , ಅವರೊಂದಿಗಿನ ನಮ್ಮ ಸಂವಹನ ಬಹಳಷ್ಟು ಕುಂಠಿತಗೊಳ್ಳುತ್ತದೆ .
ನಾವು ಎಷ್ಟೇ ಚೆನ್ನಾಗಿ ಇನ್ನೊಂದು ಭಾಶೆಯನ್ನು ಕಲಿತುಕೊಂಡಿದ್ದೇವೆಂದರೂ ನಮ್ಮ ಭಾಷೆಯಲ್ಲಿ ನಮ್ಮ ಮನಸ್ಸಿನಲ್ಲಿದ್ದುದ್ದನ್ನು ಹೇಳುವ ಹಾಗೆ ಇನ್ನೊಂದು ಭಾಷೆಯಲ್ಲಿ ಸಾಧ್ಯವೇ ಆಗುವದಿಲ್ಲ .
ನಮ್ಮ ಭಾಷೆಗೇ , ಸಂಸ್ಕೃತಿಗೇ ವಿಶಿಷ್ಟವಾದ ಪರಿಕಲ್ಪನೆಗಳಿರಬಹುದು , ನುಡಿಗಟ್ಟಿರಬಹುದು .
ಇನ್ನೊಂದು ಭಾಶೆಯಲ್ಲಿ ಹೇಳುವಾಗ ಅದಕ್ಕೆ ಈಗಾಗಲೇ ಇರುವ ಸಮಾನಾರ್ಥಕ ಶಬ್ದಗಳು , ನುಡಿಗಟ್ಟುಗಳು ನಮಗೆ ಗೊತ್ತಿರಲಿಕ್ಕಿಲ್ಲ .
ಉದಾಹರಣೆಗೆ ನಾನು ಮಡಿ / ಎಂಜಲು ಬಗೆಗೆ ಏನನ್ನೋ ಹೇಳಲು ಬಯಸ್ಸುತ್ತೇನೆ ಅಂದ್ಕೊಳ್ಳಿ , ನಾನಿರುವ ಮುಂಬೈಯಲ್ಲಿ ನನ್ನ ಸ್ನೇಹಿತರು ಇಂಗ್ಲೀಷ್ , ಹಿಂದಿ , ತಮಿಳು , ಗುಜರಾತಿ ಇನ್ನೂ ಬೇರೆ ಭಾಷಿಕರು .
ನಾನು ಹೇಳಬೇಕೆಂದಿರುವ ವಿಷಯ ಹೇಗೆ ಹೇಳಬಲ್ಲೆ? ಮಡಿ , ಎಂಜಲು ಇಂಥದಕ್ಕೆ ಇಂಗ್ಲೀಶ್ , ಹಿಂದಿಯಲ್ಲಿ ಶಬ್ದಗಳಿವೆಯೋ ಇಲ್ಲವೋ ? ಹಾಲು ಒಡೆದಿದೆ ಎನ್ನುವದನ್ನು ’ ದೂಧ್ ಟೂಟ್ ಗಯಾ’ ಎನ್ನಬಹುದೇ ? (ತೆಲುಗನೊಬ್ಬ ’ ದೂಧ್ ಟೂಟ್ ಗಯಾ’ ಅಂದಾಗ ಹಿಂದಿಯವರು ’ ಟೂಟ ಗಯಾ’ ಅನ್ನೋದಿಲ್ಲ ; ಫಟ್ ಗಯಾ ಅಂತಾರೆ ಅಂತ ಆಕ್ಷೇಪಣೆಯ ದನಿಯಲ್ಲಿ ತಿದ್ದಿದಾಗ , ನಾನು ಅವನ ನೆರವಿಗೆ ಹೋದೆ - ’ನಮಗೆಲ್ಲಾ ಎರಡೂ ಒಂದೇ ’ ಅಂತ - ಆ ಮಾತು ಬೇರೆ ) ಹಿಂದಿ ಜನಕ್ಕೋ ಹಿಂದಿ , ಇಂಗ್ಲೀಷ್ ಎರಡೇ ಭಾಶೆ , ನಮಗೋ ಅವು ಎರಡನೇ ಮೂರನೇ ಭಾಷೆಗಳು .
ಈ ಸಮಸ್ಯೆ ಜಗತ್ತಿನಾದ್ಯಂತ ಇದೆ ಅನ್ನಿಸುತ್ತದೆ , ಟೀವಿಯಲ್ಲಿ ಇಂಗ್ಲೀಷ್ ಅಲ್ಲದ ಭಾಷೆಯ ಚಲನಚಿತ್ರಗಳನ್ನು ಸಬ್-ಟೈಟಲ್ ಗಳೊಂದಿಗೆ ನೋಡುವಾಗ . ’ ಅವನಿನ್ನೂ ಚಿಕ್ಕವನು ’ ಎಂಬುದನ್ನು ’ಹಿ ಇಸ್ ಸ್ಟಿಲ್ಲ್ ಸ್ಮಾಲ್ ’ ಎಂಬಂತಹ ಅನುವಾದ ನೋಡಿದ್ದೇನೆ . ಪರಿಸರಕ್ಕೆ ಸರೌಂಡಿಂಗ್ಸ್ ಶಬ್ದ ಚೀನಾದ ಬೋರ್ಡ ಒಂದರಲ್ಲಿ ನೋಡಿದೆ.
ಆದರೆ ಒಂದು ವಿಷಯ ; ಆದರೆ ನಾವು ಯಾರ ಜತೆ ಮಾತನಾಡುತ್ತಿದ್ದೇವೋ ಅವರು ಅನೇಕ ಸಲ ನಮ್ಮ ಸಮಸ್ಯೆ ಅರ್ಥ ಮಾಡಿಕೊಂಡು , ನಾವು ಹೇಳ ಬಯಸುವದನ್ನು ತಿಳಿದುಕೊಂಡು ಬಿಡುತ್ತಾರೆ . ಇದೇ ಒಂದು ಸಮಾಧಾನ .
ಈ ಬಗ್ಗೆ ಏನಾದರೂ ಮಾಹಿತಿ / ಚರ್ಚೆ ಅಂತರ್ಜಾಲದಲ್ಲಿ ಇದೆಯೇ ? ಗೊತ್ತಿದ್ದವರು ತಿಳಿಸಿ .

- shreekant.mishrikoti ರವರ ಬ್ಲಾಗ್
- Login or register to post comments
- 428 hits
- Email this blog




RSS:
ಪ್ರತಿಕ್ರಿಯೆಗಳು
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ಇದಕ್ಕೆ ಒಂದು ಕೊನೆಯಿದೆ! ಒಂದು ಸರಿಯಾದ ನುಡಿಯನ್ನು ಹಿಡಿದು ಎರಡು ಕಡೆಯವರು ಮಾತಾಡುವುದು.
ಇಲ್ಲಿ ಸರಿಯಾದ ನುಡಿ ಅಂದರೆ, ಹೆಚ್ಚು ಪಜೀತಿ ಇಲ್ಲದ ನುಡಿ ಮಾದರಿ, ಇಂಗ್ಲೀಶು, ಕನ್ನಡ, ತಮಿಳು! ಈ ನುಡಿಗಳ ವ್ಯಾಕರಣದಲ್ಲಿ ಗೊಂದಲಗಳು ಕಡಮೆ. ಇಂಗ್ಲೀಶಲ್ಲಿ ಬರೆವಣಿಗೆಯಲ್ಲಿ spelling ಅಲ್ಲಿ ತೊಂದರೆ ಇದೆ ಹೊರತು ಮಾತಾಡುವುದರಲ್ಲಿ ಅಷ್ಟು ಗೋಜಲಿಲ್ಲ.
ಹಿಂದಿ ಇದೊಂದು ದೊಡ್ಡ ಪಜೀತಿ ( ಕಿ, ಕ, ಕೆ ಯಾವುದು ಯಾವಾಗ? ), ( ಪಾನಿ, ಜಲ ಬೇರೇ ಲಿಂಗ
)
'ರಾಮ ರೋಟೀ ಕೋ ಖಾಯಾ / ರಾಮ ರೋಟೀ ಖಾಯಿ' ಹಿಂಗೇನೊ ಒಂದು ಗೊಂದಲ!
ಕನ್ನಡ-ತಮಿಳು-ತೆಲುಗು ಈ ಮಂದಿಯ ನಡುವೆ ಮಾತುಕತೆಯಲ್ಲಿ ಅಂತ ಯಾವ ತೊಂದರೆ ಇಲ್ಲ. ಆದರೆ ಹಿಂದಿಯವರ ಜೊತೆ ಮಾತಾಡೋದು ಬಲು ಪಜೀತಿ.! ಅಮೆರಿಕದವರೇ ಏಷ್ಟೋ ವಾಸಿ!
=========================================
ತಿಳಿದಷ್ಟು ತಿಳಿಯಾಗುವುದು ತಿಳಿವು !
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ಅದು ’ ರಾಮ್ ನೇ ರೋಟೀ ಖಾಯೀ ’ - ಅಷ್ಟೇ.
ಹಿಂದಿಯಲ್ಲಿ ಕೀ / ಕಾ / ಕೇ ಗಳಿಗೂ ಒಂದು ಲಾಜಿಕ್ ಇದೆ.
ಹಿಂದಿ ಮಾತಾಡುವವರಿಗೆ ಅದು ಸಹಜವಾಗಿ ಬರುತ್ತದೆ. ನಮ್ಮಂಥವರಿಗೆ ಎಷ್ಟು ಹೇಳಿಕೊಟ್ಟರೂ ಬರುವುದಿಲ್ಲ.
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ಏನದು ಆ ಲಾಜಿಕ್ಕು?
ತುಸು ಹೇಳಿರಿ
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ಕ/ಕೇ/ಕೀ ಸಾಮಾನ್ಯವಾಗಿ ಮುಂದಿನ ಶಬ್ದದ ಲಿಂಗವನ್ನು ಅನುಸರಿಸುತ್ತದೆ .
ಈ ನಿಯಮಕ್ಕೆ ಅಪವಾದಗಳಿವೆ - ಹೆಚ್ಚಿನ ವಿವರ ಬೇಕಿದ್ದರೆ
ಹಿಂದಿ ವ್ಯಾಕರಣ ಪುಸ್ತಕ ನೋಡಿ .
( DLI ನಲ್ಲಿ ಒಂದು ಇದೆ )
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ಕನ್ನಡದಲ್ಲೂ ಅಷ್ಟೇ ಅಲ್ವಾ?
ರಾಮ ರೊಟ್ಟಿ ತಿಂದ - ಇದು ಸರಿ
ರಾಮ ರೊಟ್ಟಿಯನ್ನು ತಿಂದ - ಇದೂ ಸರಿ,
ಆದರೆ ಹೆಚ್ಚಾಗಿ ಮೊದಲ್ನೇದೇ ಬಳಕೇಲೊರೋದು.
ಆದ್ರೆ, ರಾಮ್ ನೇ ರೋಟೀ ಕೋ ಖಾಯೀ ಅಂದರೆ ಹಿಂದಿಯಲ್ಲಿ ತಪ್ಪೋ ಇಲ್ಲವೋ ಕಿಶೋರರು ಹೇಳಬೇಕು.
-ಹಂಸಾನಂದಿ
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ಈ ವಿಷಯದಲ್ಲಿ ಮಾತಾಡೋವಾದ, ನಮ್ಮ TV ads ಬಗ್ಗೆ ಹೇಳಬೇಕೆನ್ನಿಸಿತು
ಮುಕ್ಕಾಲು ಪಾಲು ಜಾಹೀರಾತುಗಳು ಹಿಂದಿ/ಇಂಗ್ಲಿಷ್ ನಿಂದ ನೇರ ಪದ-ಪ್ರತಿಪದ ಅನುವಾದ ಮಾಡಿರುತ್ತಾರೆ. ಕನ್ನಡದ ಭಾಷೆಯ ಬಳಕೆಯ ಮರ್ಯಾದೆ ಅಲ್ಲಿ ಕಾಣುವುದೇ ಇಲ್ಲ.
ಉದಾಹರಣೆಗೆ: ಜಿಲೆಟ್ ನಿಂದ ಶೇವ್ ಆಗಿದೆ, ಮತ್ತು ಗೊತ್ತು ಕೂಡ ಆಗಿಲ್ಲ ( ಪತಾ ಭೀ ನಹೀ ಎಂಬುದರ ಅನುವಾದ
)
ಕೀಳಿದರೆ(??) ಮಾವಿನಹಣ್ಣು ಕೀಳುವೆನು ಅವರ ಕಣ್ಣು (ಇದಾವ ಭಾಷೆ ಯಿಂದ ಅನುವಾದವೋ)
ಇದು ಬರಿ ಹಿಮಗಡ್ಡೆಯ ತುದಿ ಅಷ್ಟೆ. ನೋಡುತ್ತಾ ಹೋದರೆ ಈತರಹ ನೂರಾರು ಸಿಗುತ್ತವೆ.
ಈ Ad agency ಗಳಲ್ಲಿ, ಕನ್ನಡ ಬಲ್ಲವರೇ ಇರುವುದಿಲ್ಲವೇ ನಾನರಿಯೆ.
-ಹಂಸಾನಂದಿ
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
"ರಾಮ ರೊಟ್ಟಿ ತಿಂದ - ಇದು ಸರಿ
ರಾಮ ರೊಟ್ಟಿಯನ್ನು ತಿಂದ - ಇದೂ ಸರಿ,"
ಇದರಲ್ಲಿ ಯಾವ ಗೊಂದಲವೂ ಇಲ್ಲ. ಶಂಕರ ಭಟ್ಟರ ಹೊತ್ತಗೆಯಲ್ಲಿ ಇದು ಬಂದಯ್ತೆ.
ಕನ್ನಡದಲ್ಲಿ ತರುವಾಯಿಂದೇ ಓದಿಕೋಬೇಕು. ಒರೆಗಳನ್ನು ಆ ಕಡೆ ಈ ಕಡೆ ಮಾಡಕ್ಕೆ ಬರದು. ಆದರೆ ಸಕ್ಕದ, ಹಿಂದಿಯಲ್ಲಿ ಹಾಗಲ್ಲ/
"ರೊಟ್ಟಿ ರಾಮ ತಿಂದ" ಅಂತ ಅಲ್ಲ. "ರೊಟ್ಟೀನ ರಾಮ ತಿಂದ" ಅನ್ನೋದು.!!
ಕನ್ನಡದಲ್ಲಿ ವಾಕ್ಯರಚನೆಯಲ್ಲಿ ಕೊರತೆ ಕಡಮೆ. ಕನ್ನಡದಲ್ಲಿ ಕೊರತೆ ಇರೋದು ನಾಮಪದಗಳ ವಿಸಯದಲ್ಲಿ!
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ರಾಮ್ ನೆ ರೋಟಿ 'ಕೋ' ಖಾಈ ಅಂತ ಈಗೀಗ ಯಾರೂ ಹೇಳೋದು ಕೇಳಿಲ್ಲ, ಓದಿಲ್ಲ. ರಾಮ್ ನೆ ರೋಟಿ ಖಾಈ ಅಷ್ಟೆ ಹೇಳ್ತಾರೆ.
ರಾಮ್ ನೆ ರೋಟಿ ಖಾಯಾ ತಪ್ಪು. ಯಾಕಂದರೆ ಕ್ರಿಯಾಪದಕ್ಕೂ ಹಿಂದಿಯಲ್ಲಿ ಲಿಂಗ ಇದೆ (ಫ್ರೆಂಚಿನಲ್ಲಿ ಗುಣವಾಚಕಗಳು ತಾವು ಯಾವುದರ ಗುಣ ಹೇಳುತ್ತವೋ ಅವುಗಳ ಲಿಂಗದಲ್ಲೇ ಇರುವ ಹಾಗೆ). ಆದರೆ ಅದು ನಾಮಪದದ ಲಿಂಗದಲ್ಲಿ ಇರುವುದಿಲ್ಲ. ರೋಟಿ (ಕರ್ಮಪದ?) ಸ್ತ್ರೀಲಿಂಗವಾದ್ದರಿಂದ ರಾಮ ರೋಟಿ ತಿಂದರೂ ಖಾಈ ಯೇ, ಸೀತೆ ರೋಟಿ ತಿಂದರೂ ಖಾಈ ಯೇ!
ಸ್ತ್ರೀಲಿಂಗ, ಪುಲ್ಲಿಂಗಗಳ ಗೊಂದಲ average ಹಿಂದಿ ಮಾತಾಡುವವನಿಗೂ ಇದ್ದೇ ಇರುತ್ತದೆ. ಲಿಂಗಗಳ ಹಿಂದಿನ ಲಾಜಿಕ್ಕಿನ ನನ್ನ common sense ತಿಳಿವೇನೆಂದರೆ ಲಿಂಗ ಪದಗಳ ಸ್ವಭಾವವನ್ನು ಅವಲಂಬಿಸಿಲ್ಲ. ಮಾತಾಡುವಾಗ ಸಲೀಸಾಗಿ ಹೇಳಲು ಅನುಕೂಲವಾಗುವುದಕ್ಕೆ ಅದು ಇರಬಹುದು. (ಸರಿಯಾದ ಲಾಜಿಕ್ ಗೊತ್ತಿದ್ದವರು ಹೇಳಿ)
ಹೆಣೆ
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ಹಿಂದಿ ತಾಯ್ನುಡಿಯ ಜನಕ್ಕೂ ಕಾ , ಕೇ , ಕೀ ಗೊಂದಲ ಉಂಟಾಗುವದನ್ನು ನಾನು ನೋಡಿದ್ದೇನೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ಎಂಜಲು, ಎಂಜಲಾಗುವುದಕ್ಕೆ जूठा, जूठा होना (ಜೂಠಾ) ಅನ್ನುತ್ತಾರೆ. चावल जूठा होगया = ಅನ್ನ ಎಂಜಲಾಯಿತು. ತನ್ನಿಂದ ಏನಾದರೂ ತಿನಿಸು ಎಂಜಲಾದರೆ यह मेरा जूठा होगया ಅನ್ನಬಹುದು.
ಜೊಲ್ಲಿಗೆ लार (ಲಾರ್) ಅನ್ನುತ್ತಾರೆ. लार टपकना = ಜೊಲ್ಲು ಸುರಿಯುವುದು
ನೀವು ಹೇಳಿದ ಹಾಗೆ ಕೆಲವೊಮ್ಮೆ ಒಂದು ಕ್ರಿಯೆಗೆ ನಮ್ಮಲ್ಲಿ ಒಂದು ಕ್ರಿಯಾಪದವಿದ್ದರೆ ಹಿಂದಿಯಲ್ಲಿ ಅದೇ ಕ್ರಿಯೆಗೆ ಬೇರೆಬೇರೆ ಸಂದರ್ಭದಲ್ಲಿ ಬೇರೆಬೇರೆ ಕ್ರಿಯಾಪದರೂಪಗಳಿರುತ್ತವೆ:
ಹಾಲು ಒಡೆಯುವುದು - दूध फटना (ಫಟನಾ)
ಬಟ್ಟೆ ಹರಿಯಿತು - कपड़ा फट गया
ಗಾಜು ಒಡೆಯಿತು - शीशा टूटा (ಟೂಟನಾ)
ಗಾಜು ಒಡೆ - शीशा तोड़ो (ತೋಡನಾ)
ಬಳೆ ಒಡೆಯುವುದು - चूड़ी फूटना (ಫೂಟನಾ)
ತಲೆ ಒಡೆಯುವುದು - सर फोड़ना (ಫೋಡನಾ) . . .
ಒಡೆಯುವುದರಲ್ಲಿ ಇಷ್ಟೆಲ್ಲಾ specialisation ಅವರು ಸಾಧಿಸಿಕೊಂಡಿರುವಾಗ दूध 'टूट' कैसे सकता है? उसको तो 'फटना' ही है!
ಹೆಣೆ
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ಸಖತ್ ಸಮಸ್ಯೆ ಆಗೋದು ಮಡಿ, ಮೈಲಿಗೆ, ಎಂಜಲು ಮತ್ತು ಇವುಗಳ ನೆಂಟ ಪದಗಳನ್ನು ಇಂಗ್ಲೀಷಿನಲ್ಲಿ ಹೇಳಬೇಕಾಗಿ ಬಂದಾಗ
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ಬೈಯುವಗ ಸಿಕ್ಕಾಪಟ್ಟೆ ಬರುತ್ತೆ !
ನಿಮ್ಮಜ್ಜಿ , ಬಡೀ..ಮಗ ಆ ಮಗ ಈ ಮಗ ಎಲ್ಲಾ ಹೇಗೆ ಬೈಯೋದು.
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
ಬೈಯುವಗ ಸಿಕ್ಕಾಪಟ್ಟೆ ಬರುತ್ತೆ !
ನಿಮ್ಮಜ್ಜಿ , ಬಡೀ..ಮಗ ಆ ಮಗ ಈ ಮಗ ಎಲ್ಲಾ ಹೇಗೆ ಬೈಯೋದು.
ಫಟಿ೦ಗ, ತರಲೆ, ಕಡಿತೈತಾ, ತಿ** ಮುಚ್ಚು,
ರ೦ಡೆ ಮು೦ಡೆ ಪದಗಳನ್ನು ಬಳಸುವುದೇ ಮರೆತು ಹೋಗುವುದು.
ಉ: ಬೇರೆ ಭಾಷಿಗರೊಂದಿಗಿನ ಸಂವಹನ ಸಮಸ್ಯೆ
http://en.wikipedia.org/wiki/Codeswitch ಎಂಬಲ್ಲಿ ಈ ಸಮಸ್ಯೆ ಕುರಿತು ಬಹಳಷ್ಟು ಮಾಹಿತಿ ಇದೆ. ಅಲ್ಲಿಂದ ಇನ್ನಷ್ಟು ಸಂಬಂಧಿತ ಕೊಂಡಿಗಳೂ ಇವೆ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"