19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕನ್ನಡದ ಕಂದ

January 23, 2006 - 4:58pm
shreekant.mishrikoti
ನಾವು ಕಲಿತವರು / ನಗರಗಳಲ್ಲಿರುವ ಜನರು ಕನ್ನಡವನ್ನು ಹೆಚ್ಚು ಹೆಚ್ಚು ಕೈಬಿಡುತ್ತಿದ್ದೇವೆ. ಬೆಂಗಳೂರಿನಲ್ಲಿ ನಮ್ಮ ಮನೆಗೆ ಒಬ್ಬ ೪-೫ ವರ್ಷದ ಒಬ್ಬ ಹುಡುಗ ಮನೆಗೆ ಬಂದಿದ್ದ ಅವನು ಗೋಕಾಕದ ನುಡಿಯನ್ನು ಆಡುತ್ತಿದ್ದ . ಹೀಗಿರುವಾಗ ನಮ್ಮ ಮನೆಯಲ್ಲಿ ನನ್ನ ಹೆಂಡತಿ ನೆರೆಮನೆಯವರು ಅವನನ್ನು ಮಾತನಾಡಿಸಿ ಅವನ ಮಾತಿನಿಂದ ಮೋಜು ಅನುಭವಿಸುತ್ತಿದ್ದರು. ನನ್ನ ಹೆಂಡತಿ ಅವನಿಗೆ ಚಾಕೊಲೇಟೊಂದನ್ನು ಕೊಟ್ಟಳು. ಚಾಕೊಲೇಟ್ ಅನ್ನು ಅವನು ಬಿಚ್ಚಿದ. ಚಾಕೊಲೇಟ್ ನ್ ಮೇಲಿನ ರ್‍ಯಾಪ್ಪರ್ ( ಅದಕ್ಕೆ ನೀವೇನು ಎನ್ನುವಿರಿ - ಕನ್ನಡ ಪಂಡಿತರೇ , ವಿದ್ಯಾವಂತರೇ , ಕನ್ನಡಾಭಿಮಾನಿಗಳೇ , ವಿಚಾರ ಮಾಡದೆ / ವಿಚಾರ ಮಾಡಿ ಹೇಳಿ ನೋಡೋಣ ) ಅನ್ನು ಅವನಿಗೆ ಚೆಲ್ಲ ಬೇಕಿತ್ತು. . . . . . . . . . . . . . . . . . ಗೊತ್ತಾಯಿತೇ? ಅವನು ಕೇಳಿದ - ಈ ಸಿಪ್ಪೆಯನ್ನು ಎಲ್ಲಿ ಚೆಲ್ಲಬೇಕು? ಅಂತ . ಎಲ್ಲರೂ ನಕ್ಕರು. ಅದೇ ಸರಿ ಅಲ್ಲವೇ ? ಸಾವಿರಾರು ವರ್ಷಗಳ ಕನ್ನಡದ ಶಕ್ತಿ ನಮ್ಮ ಹಳ್ಳಿಯ ಜನರಲ್ಲಿದೆ.ಅವರ ಬಳಕೆಯ ಭಾಷೆಯಲ್ಲಿದೆ. ನಾವು ಇರುವ ಶಬ್ದ ಬಿಟ್ಟು ಸಂಸ್ಕೃತ ಮೂಲದ ಶಬ್ದ ಹುಡುಕುತ್ತೇವೆ. ಅಥವಾ ಕನ್ನಡದಲ್ಲಿ ಸರಿಯಾದ ಶಬ್ದ ಇಲ್ಲ / ಸರಿಯಾಗಿ ಅಭಿವ್ಯಕ್ತಿಸಲಾಗದು/ ಗ್ರಾಂಥಿಕವಾಗುತ್ತದೆ/ ಬಳಕೆಯಲ್ಲಿ ತರಲು ಆಗುವದಿಲ್ಲ ಎಂದೆಲ್ಲ ಹೇಳುವ ನಮಗೆ ಒಂದು ಮುಖ್ಯ ಪಾಠ ಇಲ್ಲಿದೆ. ಅಲ್ಲವೇ ? ನನ್ನ ಹೆಂದತಿ ಡಸ್ಟ್‍ಬಿನ್ನಲ್ಲಿ ಹಾಕು ಎಂದು ಕಳಿಸಿದಳು. ಪಾಪ ಈ ಹುಡುಗನಿಗೆ ಡಸ್ಟ್ ಬಿನ್ ಅಂದರೇನು ಗೊತ್ತಿಲ್ಲ . ಅಲ್ಲೇ ಇದೆ ನೋಡು ಸಿಂಕ್ ಹತ್ತಿರ, ವಾಷಿಂಗ್ ಬೇಸಿನ್ ಹತ್ರ ಎಂದಳು. ಅವನು (ಸಹಜ ಅಲ್ವೇ) ಗುರುತಿಸದಾದಾಗ ಎದ್ದು ತೋರಿಸಿದಳು. ಅವನು ' ಐ, ಕಸದ ಪುಟ್ಟಿ ಅಂತ ಹೇಳಬಾರದೇನ್ರಿ? ' ಅಂಥ ಹೇಳಿದಾಗ ನನ್ನ ಹೆಂಡತಿ ಸುಸ್ತು! . ಸಂಜೆ ನಾನು ಮನೆಗೆ ಬಂದ ಮೇಲೆ ನನ್ನ ಹೆಂಡತಿ ಈ ವಿಷಯ ಹೇಳಿದಾಗ- ' ನಿಮಗೆ ನಾಚಿಕೆ ಆಗ್ಬೇಕು - ಕನ್ನಡ ಕೈಬಿಟ್ಟಿದ್ದೀರಿ. ಆ ಹುಡುಗನಿಂದ ಕಲ್ತೋಬೇಕು' ಅಂದು ' ಶಭಾಶ್ ! ಕನ್ನಡದ ಕಂದ' ಎಂದು ಮೆಚ್ಚಿಕೊಂಡೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by pavanaja on
ನಿಮ್ಮ ಮನೆಯಲ್ಲಿ ಕನ್ನಡವನ್ನು ನೀವು ಮೂಲೆಗುಂಪು ಮಾಡಿರಬಹುದು. ಆದರೆ ನಮ್ಮ ಮನೆಯಲ್ಲಿ ಇಂದಿಗೂ ಚಾಕಲೇಟಿನ ಸಿಪ್ಪೆ, ಕಸದ ಬುಟ್ಟಿ, ಅಡುಗೆ ಕೋಣೆ, ಸ್ನಾನದ ಕೋಣೆ, ಇತ್ಯಾದಿ ಪದಗಳನ್ನು ಬಳಸುತ್ತಿದ್ದೇವೆ. ನನ್ನ ಮಕ್ಕಳು ಕನ್ನಡದ ಪುಸ್ತಕಗಳನ್ನು ಓದುತ್ತಾರೆ. ಉದಾ: ದೇವುಡು ಮಹಾಭಾರತ, ಅಜೇಯ, ಆತ್ಮಾಹುತಿ, ತೇಜಸ್ವಿಯವರ ಮಿಲೇನಿಯಂ ಪುಸ್ತಕಮಾಲೆ, ಅನಂತರಾಂ ಅವರ ಸರಸ್ವತೀ ನದಿ, ಇತ್ಯಾದಿ. ಐದು ವರ್ಷಗಳ ಹಿಂದೆ ನಾನೊಮ್ಮೆ ಅವರಿಬ್ಬರನ್ನು ಕರೆದುಕೊಂಡು ನಾನು ಕೆಲಸ ಮಾಡುತ್ತಿದ್ದ ಕಂಪೆನಿಗೆ ಹೋಗಿದ್ದೆ. ಅಲ್ಲಿದ್ದ ನನ್ನ ಸಹೋದ್ಯೋಗಿ ರಶ್ಮಿ ಎಂಬಾಕೆ ನನ್ನ ಮಗನಲ್ಲಿ ಕೇಳಿದಳು "ಮಮ್ಮಿ ಮನೆಯಲ್ಲೇ ಇದ್ದಾರೋ" ಎಂದು. ಅದಕ್ಕೆ ನನ್ನ ಮಗನೆಂದ "ಮನೆಯಲ್ಲಿ ಅಮ್ಮ ಇದ್ದಾರೆ. ಮಮ್ಮಿ ಈಜಿಪ್ಟಿನಲ್ಲಿ". ಸಿಗೋಣ, ಪವನಜ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಚಾಕಲೇಟು ಬಂತು ಮಿಟಾಯಿ ಹೋಯ್ತು. ಮಿಕ್ಸಿ ಬಂತು ಒರಳು ಹೋಯ್ತು. ಸ್ನಾನ ಬಂತು ಮಿಯ್ಯಿ, ಮಡಿಯುಡು ಹೋಯ್ತು. ಅಂತ್ಯ ಬಂತು ತೀರ್ಸೋದು ಹೋಯ್ತು. next ಬಂತು ಆಮೇಕೆ ಹೋಯ್ತು tiffan ಬಂತು ತಿಂಡಿ ತಿನ್ತು. ಸಾಂಬಾರು ಬಂತು ಹುಳಿ, ಹುಳಿತೊವ್ವೆ ಹೋಯ್ತು... ಒಟ್ಟಿನಲ್ಲಿ ಕನ್ನಡದ ಒರೆ ಹೋದವು, ಬೇರೆ ಒರೆ ಬಂದುವು. ಹೋದವೆಲ್ಲ ಹೞಗನ್ನಡವಾಯಿತು. ಬಂದವೆಲ್ಲ ಹೊಸಗನ್ನಡವಾಯ್ತು. ಹಳೆಯದನ್ನು ಮತ್ತೆ ತರೋಣ ಅಂದ್ರೆ, ಅಯ್ಯೋ ನಮಗೆ ಅದು ತಿಳೋಲ್ಲ, ಹಿಂಗೆ ಇರ್ಲಿ ಅಂತಾರೆ. "ಭಾಷೆ ಸಂವಹನಕ್ಕೆ ಮಾಧ್ಯಮೈಕ ಮಾತ್ರ" ಅಂತಾರೆ!! ======================================
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
wrapperಗೆ ಹೊದಿಕೆ ಎನ್ನಬಾರದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಸಿಪ್ಪೇ ಕೂಡ ಸರಿ ಸಾರ್‍ ಚಿಪ್ಪು, ಸಿಪ್ಪೆ, ಸಿಪ್ಪಿ ಇವೆಲ್ಲ ಹೊರಿಕೆ( outer layer ) ಅಂತೇ !!! ======================================
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ಸಿಪ್ಪೆ ಹಣ್ಣಿಗೆ ಇರುತ್ತೆ. ಚಾಕಲೇಟಿಗೆ ಅಲ್ಲ. ಚಿಪ್ಪು ತೆಂಗಿಗಿರುತ್ತೆ. ಹೊರಿಕೆ ಅಲ್ಲ ಹೊದಿಕೆ.ಅಲ್ವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಹೊರಿಕೆ ಅಂದ್ರೆ ಇಲ್ಲ ನೋಡಿ ಅಸೋಕಣ್ಣ. Ka. pore a fold, layer, stratum; horike, horige the scale or coat of an onion, a thin layer or scale of a stone, lamina, stratum, layer. ನಾನು ಹೊರ layer ಅಂತ ಬಳಕೆಗೈದಿವ್ನಿ. ======================================
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Sunil Jayaprakash on
ಅದೇನೋ ಗೊತ್ತಿಲ್ಲ, ನಮ್ಮ ಮನೆಯಲ್ಲಿ ಕಡೆಗಳಲ್ಲಿ ಚಾಕಲೇಟು ಸಿಪ್ಪೆ ಅಂತಲೇ ಹೇಳುತ್ತೇವೆ. ನಮ್ಮ ಮನೆಯಲ್ಲಷ್ಟೇ ಅಲ್ಲ ನಮ್ಮ ಬಳಗದವರು, ನಮ್ಮ ಅಕ್ಕಪಕ್ಕದ ಮನೆಯವರು ಎಲ್ಲರೂ. "ಚಾಕಲೇಟ್ ಸಿಪ್ಪೆ ಎಲ್ಲೋ ಬಿಸ್ಹಾಕೋದು" ಅಂತ ಬಯ್ಯುವುದು, ಬಯ್ಸಿಕೊಳ್ಳುವುದುಂಟು. ನಮ್ಮನೆ ಕಡೆಗಳಲ್ಲಿ, ರಾಪರ್ ಎನ್ನುವುದು ಪುಸ್ತಕಕ್ಕೆ ಹಾಕುವ ಹೊದಿಕೆಯಾಗಿ ಹೆಚ್ಚು ಬಳಕೆಯಲ್ಲಿದೆ. ಆದರೆ ಚಾಕಲೇಟ್ ಸಿಪ್ಪೆಗೆ ರಾಪರ್ ಎನ್ನುವ ಬಳಕೆ ಕೇಳಿದ್ದು ಇಲ್ಲವೇ ಇಲ್ಲವೇನೋ ಅಥವಾ ತುಂಬಾ ತುಂಬಾ ಕಡಿಮೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.