ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ನಾನು, ನನ್ನ ಓದು ಮತ್ತು ಸಂಪದ .
ಕಳೆದ ಮೂರು ತಿಂಗಳಲ್ಲಿ ಸಂಪದ(www.sampada.net) ಕ್ಕೆ ನನ್ನ ಮೆಚ್ಚಿನ ಝೆನ್ ಕಥೆಗಳನ್ನು ಸೇರಿಸಿದ್ದಾಯಿತು , ಕೆಲವು ಒಳ್ಳೆಯ ಪುಸ್ತಕಗಳ ಬಗ್ಗೆ ವಿಮರ್ಶೆ ಎಂಬ ಹೆಸರಿನಲ್ಲಿ ಬರೆದಿದ್ದಾಯಿತು. ನಾನು ಪದ ಜೋಡಣೆ ಮಾಡಿದ ಒಂದೆರಡು ಕವನಗಳನ್ನು ಪ್ರಕಟಿಸಿದ್ದಾಯಿತು. 'ತಾರಕ್ಕ ಬಿಂದಿಗೆ' ಮಾದರಿಯಲ್ಲಿ ಬರೆದ 'ತೆರೆಯೋ ಬ್ರೌಸರ್ರು' ಹಾಡಿಗೆ ಮಜಾವಾಣಿಯ ಪ್ರತಿಕ್ರಿಯೆ ಹೊಟ್ಟೆ ಹುಣ್ಣಾಗಿಸುವಂತಿತ್ತು. ನನಗೆ ಬೇಡವಾದ ಪುಸ್ತಕಗಳ ವಿಲೇವಾರಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿತು. ಹೀಗಾಗಿ ನಾನೂ ಒಬ್ಬ ಸುದ್ದಿ ಜೀವಿ ಆದೆ!.
ಮುಂದೇನು? ನಾನು ಭಾರೀ ಓದಿನ ಮನುಷ್ಯ. ನನ್ನ ಓದಿಗೆ ನಲವತ್ತು ವರ್ಷಗಳಾಗಲಿವೆ . ಓದಿ ಓದಿ ಈಗೀಗ ಸಾಕು ಎನಿಸುತ್ತಿದೆ. ಆದರೆ ಅಭ್ಯಾಸಬಲ. ಚಟದ ಹಾಗೆ. ಬಿಡಿಸಿಕೊಳ್ಳುವದು ಕಠಿಣ. 'ಓದಬೇಡವೋ ಶ್ರ್‍ಇಕಾ' ಎಂಬ ಸ್ವಗತಕ್ಕೆ , ಓದನ್ನು ನಿಲ್ಲಿಸಬೇಡಿ ಎಂದು ಟಿ.ವಿ.ಶ್ರ್‍ಈನಿವಾಸರಿಂದ ಕೋರಿಕೆ ಬಂತು. ಇರಲಿ . ನೋಡೋಣ.
ಅಂದಂದಿನ ನನ್ನ ಓದಿನ ಬಗ್ಗೆ ನಿಯಮಿತವಾಗಿ ಬ್ಲಾಗ್ ಬರೆಯುತ್ತ ಹೋದರೆ ಹೇಗೆ? . ಬ್ಲಾಗ್ ಎಂದರೇನು ಸರಿಯಾಗಿ ಗೊತ್ತಿಲ್ಲ ; ಆದರೆ ಬೊಗಳಿ ಬೊಗಳಿ ಬ್ಲೋಗ ಎಂಬ ಮತನ್ನು ಎಲ್ಲೋ ಓದಿದ್ದೇನೆ!

- shreekant.mishrikoti ರವರ ಬ್ಲಾಗ್
- Login or register to post comments
- 861 hits
- Email this blog




RSS:
ಪ್ರತಿಕ್ರಿಯೆಗಳು
ಬರೆಯಿರಿ - ಓದುವೆ
ನೀವು ಓದಿದದ್ದನ್ನೆಲ್ಲಾ ಬರೆಯಿರಿ. ನೋಡಿ ಆನಂದಿಸಿದ, ಮನ ಕಲಕಿದ, ದುಗುಡ ಹೆಚ್ಚಿಸಿದ ಕ್ಷಣಗಳ ಬಗ್ಗೆಯೂ ಬರೆಯುತ್ತಾ ಹೋಗಿ. ನಾನು ಓದುವೆ. ಯಾರು ಪ್ರತಿಕ್ರಿಯಿಸದೇ ಇದ್ದರೂ ಪರವಾಗಿಲ್ಲ, ಬರೆಯಿರಿ. ಎಂದೋ ಒಮ್ಮೆ ನೀವೇ ಅದನ್ನು ಓದಿ ಹಳೆಯ ನೆನಪುಗಳನ್ನು ಮೆಲುಕು ಹಾಕುವುದರಲ್ಲಿರುವ ಮಜವೇ ಬೇರೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
Re: ನಾನು, ನನ್ನ ಓದು ಮತ್ತು ಸಂಪದ .
ತಲೆಬಾಗಿ ಬನ್ನಿ ವಟುರೂಪಿ ಗಣಪನಿಗೆ... ಅಂತೊಂದು ಭಕ್ತಿಗೀತೆಯಿದ್ದಂತೆ,
"ತಲೆಬ್ಲಾಗಿ ಬನ್ನಿ ಸಂಪದದ ಚಾವಡಿಗೆ..."
ಶ್ರೀಕಾಂತ್, ನಿಮ್ಮ ಅಂದಂದಿನ ಓದಿನ ಬಗ್ಗೆ ನೀವು ಬರೆಯಲಿರುವುದನ್ನು ನಾವು ಅಂದಂದೇ ಓದುತ್ತೇವೆ. ದಯವಿಟ್ಟು ಬರೆಯಿರಿ!
- ಶ್ರೀವತ್ಸ ಜೋಶಿ
ವಟುರೂಪಿ
ವಟುರೂಪಿ == ಬಾಲಕ?
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ವಟು
ಉಪನಯನದ ಹುಡುಗನಿಗೆ ವಟು ಎನ್ನುವರು. ಆ ರೂಪದಲ್ಲಿ ಬಂದವನು ವಟುರೂಪಿ. ಹೇಗೆ ಮದುಮಗ, ಮದುವಣಗಿತ್ತಿ ಅನ್ನುವರೋ ಹಾಗೆ.
ನಿಮ್ಮ ವಟುರೂಪಿಯ ವಯಸ್ಸಾಗಿ ಹೋಯ್ತು. ಇನ್ನೇನಿದ್ರೂ ಮದುಮಗನ ರೂಪ ವೈಟಿಂಗು (ತಮಾಷೆಗೆ)
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net