ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಕಾಮಿಡಿಯೋ ಟ್ರ್ಯಾಜಿಡಿಯೋ- ಬೇಂದ್ರೆ ಅವರ ನಾಟಕ 'ಜಾತ್ರೆ'
ನಿಮಗೆ ಕವಿ ಬೇಂದ್ರೆ ಗೊತ್ತು , ನಾಟಕಕಾರ ಬೇಂದ್ರೆ ಗೊತ್ತೆ? ಹೌದು, ಅವರು ಅನೇಕ ನಾಟಕಗಳನ್ನು ಕೂಡ ಬರೆದಿದ್ದಾರೆ. ಅವರು ಒಂದು ನಾಟಕ 'ಜಾತ್ರೆ'ಯ ಕಿರು ಪರಿಚಯ ಇಲ್ಲಿದೆ .
'ಜಾತ್ರೆ ಸುಳ್ಳಿನ ಕೋಟೆಯ ಕುರಿತಾದ ಒಂದು ವಿಡಂಬನೆ. ಇಲ್ಲಿ ಒಬ್ಬ ಪಾಳೇಗಾರ ಊರಲ್ಲಿ ಪ್ಲೇಗ್ ಬಂದರೂ ನಡೆಯಲಿರುವ ಜಾತ್ರೆ ತಪ್ಪಿಸಲು ಸಿದ್ಧನಿಲ್ಲ. ಜನ ಸತ್ತರೆ ಸಾಯಲಿ, ಬೊಕ್ಕಸಕ್ಕೆ ಬರುವ ಆದಾಯ ತಪ್ಪಬಾರದು . ಎಂಬ ಹಠ ಅವನದು . ಊರಲ್ಲಿ ಪ್ಲೇಗ್ ಇಲ್ಲ ಎಂದು ಡಂಗುರ ಸಾರಿಸುತ್ತಾನೆ . ಜನ ಪ್ಲೇಗ್ ನ ಹೆಸರು ಎತ್ತ ದಂತೆ ಮಾಡುತ್ತಾನೆ. ಕೊನೆಗೆ ಅವನಿಗೇ ಪ್ಲೇಗು ಬರುತ್ತದೆ . ರಾಜಾಜ್ನ್ಯೆಯಂತೆ ಡಾಕ್ಟರೂ ನಿಮಗೆ ಪ್ಲೇಗು ಇಲ್ಲ ಎನ್ನುತ್ತಾನೆ. ಹೀಗೆ ತನ್ನ ಸುಳ್ಳಿಗೆ ತಾನೇ ಬಲಿಯಾಗಿ ರಾಜ ಸಾಯುತ್ತಾನೆ.
ಇಲ್ಲಿ ಸಂಭಾಷಣೆಗಳು ಎಷ್ಟು ಚುರುಕಾಗಿ ಇವೆ ಎಂದರೆ " ಇದು ಒಂದು ಟ್ರಾಜೆಡಿ ; ಜನ ಇದನ್ನು ಕಾಮಿಡಿ ಎಂದು ಸ್ವೀಕರಿಸಿದರು . ಇದು ನಾಟಕದ ಟ್ರಾಜೆಡಿ" ಎಂದು ಬೇಂದ್ರೆ ನಿಟ್ಟುಸಿರು ಬಿಟ್ಟರು!.

- shreekant.mishrikoti ರವರ ಬ್ಲಾಗ್
- Login or register to post comments
- 838 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಜಾತ್ರೆ
ನಿಮ್ಮ ಬಳಿ 'ಜಾತ್ರೆ' ಯ ಪುಸ್ತಕ ಪ್ರತಿ ಇದೆಯೇ? ಅಥವಾ ಪುಸ್ತಕ ಎಲ್ಲಿ ದೊರೆಯುತ್ತದೆ? ಮಾಹಿತಿ ಇದ್ದರೆ ತಿಳಿಸುವಿರಾ?
ಬೇಂದ್ರೆಯವರ 'ಜಾತ್ರೆ' ನಾಟಕದ ವಿವರ
ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಅನೇಕ ಸರಕಾರ ಕಡಿಮೆ ಬೆಲೆಯ ಪುಸ್ತಕಗಳನ್ನು ಪ್ರಕಟಿಸಿತ್ತು . ಅವುಗಳಲ್ಲಿ ಏಕಾಂಕ ನಾಟಕಗಳು ಎನ್ನುವ ಸಂಕಲನವೂ ಒಂದು . ಅದರಲ್ಲಿ ಒಂದು ಬೇಂದ್ರೆಯವರ ಈ ನಾಟಕ ಇದೆ. ಈ ನಾಟಕವನ್ನು ಆಕಾಶವಾಣಿಯಲ್ಲೂ ಕೇಳಿದ್ದೆ.