ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಮನುಷ್ಯನ ಖಾಸಗಿ ಸಂಗತಿಗಳು.( ಚಿಂತನೆ)
ಒಬ್ಬ ಮನುಷ್ಯನ ವ್ಯಕ್ತಿ ವಿಶೇಷದಲ್ಲಿ ಅವನು ಯಾರಿಗೂ ಹೇಳಿಕೊಂಡಿರದ ಹೇಳಬಾರದ ಗುಟ್ಟುಗಳು , ಖಾಸಗಿ ಸಂಗತಿಗಳು ಇರುತ್ತವೆ. . ಈ ಗುಟ್ಟು ಖಾಸಗಿ ಸಂಗತಿಗಳೇ ಅವನ ವ್ಯಕ್ತಿತ್ವ, ಚಹರೆ ಎಲ್ಲವೂ . ಮನೋವಿಜ್ಞಾನಿ ಎರಿಕ್‍ಸನ್ ಪ್ರಕಾರ ಒಬ್ಬ ಮನುಷ್ಯ ವಯಸ್ಸಿಗೆ ಬಂದ ಪ್ರಬುದ್ಧನಾದ ಅಂದರೆ ತನ್ನ ತಪ್ಪುಗಳನ್ನು ಗುಟ್ಟುಗಳನ್ನು ತನ್ನಲ್ಲೇ ಇಟ್ಟುಕೊಂಡು ಆತ್ಮ ವಿಮರ್ಷೆ ಮಾಡಿಕೊಂಡು ಬೆಳೆಯಬಲ್ಲ ಹಂತಕ್ಕೆ ಬಂದ ಎಂದೇ ಅರ್ಥ .ಅದಕ್ಕೇ ಹೇಳುವದು ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಹತ್ತಿರ ಯಾವುದೇ ಸಂದರ್ಭದಲ್ಲೂ ಕನ್ಫ಼ೆಸ್ ಮಾಡಲಾರ , ಮಾಡಬಾರದು. ಆತ್ಮ ನಿವೇದನೆ ಏನಿದ್ದರೂ ಭಗವಂತನ ಹತ್ತಿರ ಮಾತ್ರ.
( ಎಪ್ರಿಲ್ ೨೦೦೬ ಮಯೂರದಿಂದ )

- shreekant.mishrikoti ರವರ ಬ್ಲಾಗ್
- Login or register to post comments
- 708 hits
- Email this blog




RSS:
ಪ್ರತಿಕ್ರಿಯೆಗಳು
ಮಯೂರ
ಓಹ್! ಮಯೂರ ಬಂದಿದೆಯೇ? ನಾನಿವತ್ತು ಸ್ಟೇಷನ್ನಿನಲ್ಲಿ ನೋಡಲಿಲ್ಲ. ಇದನ್ನು ಅದರಲ್ಲಿ ಬರೆದಿರುವವರು ಯಾರು?
ಇಂತಹದ್ದನ್ನು ಇನ್ನೂ ಬರೆಯಿರಿ. ತುಂಬಾ ಚೆನ್ನಾಗಿದೆ.
ಆತ್ಮನಿವೇದನೆ - ಭಗವಂತನಲ್ಲಿ - ಆತ್ಮವೇ ಭಗವಂತನಲ್ಲವೇ? ಅಥವಾ ಅದರ ಅರಿವಾಗುವವರೆವಿಗೆ ಹೀಗೆ ನಿವೇದಿಸಿಕೊಳ್ಳಬೇಕೇ - ಇಗರ್ಜಿಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಸ್ಥಳ ಇದೆ ಅಲ್ಲವೇ?
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net