ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ನಾನು ಸೋಲುವೆನೋ ? ಕಂಪ್ಯೂಟರ್ ಸೋಲುವದೋ ?

May 24, 2006 - 1:02pm — shreekant.mishrikoti

ಸದ್ಯದಲ್ಲಿ ಕನ್ನಡ ಸಾಹಿತ್ಯ ಡಾಟ್ ಕಾಮ್‍ನಲ್ಲಿನ ಲೇಖನಗಳಲ್ಲಿನ ತಪ್ಪುಗಳನ್ನು ತಿದ್ದುತ್ತಿದ್ದೇನೆ. ಹೀಗಾಗಿ ಬ್ಲಾಗ್ ಬರೆದಿಲ್ಲ . ಜತೆ ಜತೆಗೇ ಪದಪರೀಕ್ಷಕ ( ಸ್ಪೆಲ್ಲ್ ಚೆಕ್ಕರ್) ಗೆ ಶಬ್ದಗಳನ್ನು ಸೇರಿಸುತ್ತಿದ್ದೇನೆ. . ಈಗಾಗಲೇ ಐವತ್ತು ಸಾವಿರಕ್ಕೂ ಹೆಚ್ಚು ಪದಗಳು ಸೇರ್ಪಡೆಯಾಗಿವೆ . ನಾನು ಸೋಲುವೆನೋ ; ಬೇಸತ್ತು ಕೈ ಬಿಡುವೆನೋ ; ಅಥವಾ ಕಂಪ್ಯೂಟರ್ ಸೋಲುವದೋ ನೋಡೋಣ ; ಏನೇ ಆಗಲಿ ನಿಮಗೆಲ್ಲ ತಿಳಿಸುವೆ ;

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 1014 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 25, 2006 - 9:36am — ಮಹೇಶ ಭೋಗಾದಿ

ಗೆಲುವು ನಿಮ್ಮದೆ

ಮಹೇಶ ಭೋಗಾದಿ's picture

ಹಾಗೆಂದು ನನ್ನ ಹಾರೈಕೆ.

ಒಂದು ತಲೆಹರಟೆ:

"ಕಂಪ್ಯೂಟರ್ ಸೋಲುವದೋ ?" ಅಲ್ಲ "ಕಂಪ್ಯೂಟರ್ ಸೋಲುವುದೋ ?"

ಉದಾ:

ಮಾಡುವನು / ಮಾಡುವನೋ
ಮಾಡುವಳು / ಮಾಡುವಳೋ
ಮಾಡುವರು / ಮಾಡುವರೋ
ಮಾಡುವುದು / ಮಾಡುವುದೋ?

ನಪುಂಸಕಲಿಂಗದಲ್ಲಿ ಕ್ರಿಯಾಪದಗಳನ್ನು ನೋಡಿ

ಮಾಡಿದನು / ಮಾಡಿತು
ಮಾಡಿದ್ದನು / ಮಾಡಿತ್ತು
ಮಾಡುತ್ತಿದ್ದನು / ಮಾಡುತ್ತಿತು
ಮಾಡಿವನು / ಮಾಡಿವುದು
ಮಾಡುತ್ತಿದ್ದಾನೆ / ಮಾಡುತ್ತಿದೆ
ಮಾಡಿಯಾನು / ಮಾಡೀತು
ಮಾಡನು / ಮಾಡದು

ಪುಲ್ಲಿಂಗ/ಸ್ತ್ರೀಲಿಂಗ/ ಬಹುವಚನ (ಪುಲ್ಲಿಂಗ ಮುತ್ತು/ಇಲ್ಲವೆ ಸ್ತ್ರೀಲಿಂಗ )/ ಮತ್ತು ನಪುಂಸಕಲಿಂಗದ ಬಹುವಚನ ಈ ೪ ಬಗೆಗಳು ಬರಿ ಕ್ರಿಯಾರೂಪದ ಕೊನೆಯ ಅಕ್ಕರದಲ್ಲಿ ವ್ಯತ್ಯಾಸ ಹೊಂದುವುವು

ಮಾಡಿದನು/ಳು/ರು/ವು
ಮಾಡಿದ್ದನು/ಳು/ರು/ವು
ಮಾಡುತ್ತಿದ್ದನು/ಳು/ರು/ವು
ಮಾಡುತ್ತಿದ್ದಾನೆ/ಳೆ/ತೆ - ಮಾಡುತ್ತಿವೆ ( ಮಾಡುತ್ತಿದ್ದಾವೆ, ಎನ್ನುವರೆ?(ನನಗೆ ಗೊಂದಲ) )
ಮಾಡಿಯಾನು/ಳು/ರು/ವು
ಮಾಡನು/ಳು/ರು/ವು
ಮಾಡುವನು/ಳು/ರು - ಮಾಡುವುದು/ಮಾಡುವುವು (ಮಾಡುವವು, ಇದು ಸರಿಯೆ?)

ಚೆಲುವಗಲು,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 9:52am — Sunil Jayaprakash

ವಿರುದ್ಧ ಪದಗಳ ರೂಪಗಳು

Sunil Jayaprakash's picture

ಬಹು ಹಿಂದೆಯೇ ಸಂಪದಿಗರು ತೀರ್ಮಾನಿಸಿದಂತೆ. ತಪ್ಪುಗಳನ್ನು ಆದಷ್ಟೂ ಸರಿಪಡಿಸಿೆಕೊಳ್ಳೋಣ. ನಿಮ್ಮ ವಿವರಣೆ, ಕ್ರಿಯಪದಗಳು ಲಿಂಗಗಳ ಜೊತೆಗೂಡಿದಾಗ ಯಾವ ರೀತಿ ಬದಲಾವಣೆ ಹೊಂದುತ್ತವೆ ಎಂಬುದನ್ನು ಸೂಕ್ತರೀತಿಯಲ್ಲಿ ತಿಳಿಸುತ್ತಿದೆ.
ಹೇಳುವನು (ಅನು)
ಹೇಳುವಳು (ಅಳು)
ಹೇಳುವುದು(ಉದು)

ಈ ಅನು, ಅಳು, ಉದು ಮುಂತಾದವು ಕ್ರಿಯಾಪದಗಳ ವಿಭಕ್ತಿ ಪ್ರತ್ಯಯಗಳು ಎಂದು ಶಬ್ದಮಣಿದರ್ಪಣದಲ್ಲಿ ದಾಖಲಾಗಿವೆಯೇ? ಅಥವಾ

ಕುತೂಹಲದ ಪ್ರಶ್ನೆ. ಸಂಪದಿಗರಲ್ಲಿ ಯಾರಾದರು ಶಬ್ದಮಣಿದರ್ಪಣವನ್ನು ಅಭ್ಯಾಸ ಮಾಡಿರುವರೆ? ನಾನಂತೂ ಮಾಡಿಲ್ಲ.

ಹಾ!. ಅಂದಹಾಗೆ ಶುಭಾಶಯಗಳು ಶ್ರೀಕಾಂತರವರಿಗೆ ೫೦ ಸಾವಿರ ಪದಗಳನ್ನು ಕನ್ನಡ ಭಂಡಾರಕ್ಕೆ ಸೇರಿಸಿದ್ದಕ್ಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 10:00am — ahoratra

ಚಲುವಗಲು ಅಂದರೆ ಏನು?

ahoratra's picture

ಚೆಲುವಗಲು,
ಮಹೇಶ

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 10:04am — Sunil Jayaprakash

ಚೆಲುವಗಲು, ನಲ್ವಗಲು

Sunil Jayaprakash's picture

ಇದನ್ನು ನಮ್ಮ ಶ್ರೀಕಾಂತ ಮಿಶ್ರಿಕೋಟಿಗಳು ನಮಗೆ ಪರಿಚಯಿಸಿದ್ದು. ವಿವರಗಳಿಗೆ ಅವರ ಒಂದು ಬ್ಲಾಗ್ ನೋಡಿ.

ಸವಿಯೊದಗು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 10:07am — ಮಹೇಶ ಭೋಗಾದಿ

ಚೆಲು + ಪಗಲು

ಮಹೇಶ ಭೋಗಾದಿ's picture

ಚೆಲು + ಪಗಲು(ಹಗಲು) = ಚೆಲುವಗಲು
ನಲ್ + ಪಗಲು(ಹಗಲು) = ನಲ್ವಗಲು

ಇದು ಕನ್ನಡದ ಸಂಧಿರೂಪಗಳು.
ಉದಾ:
ಹೆಬ್ಬಾವು = ಹೆಮ್ + ಪಾವು(ಹಾವು).
ಗಮನಿಸಿ:
ಹೆಮ್ + ಮೆ = ಹೆಮ್ಮೆ
ಒಲು + ಮೆ = ಒಲುಮೆ
ಬಲ್ + ಮೆ = ಬಲ್ಮೆ
ಜಾಣ್ + ಮೆ = ಜಾಣ್ಮೆ ಮುಂತಾದವು

ಮುಂದಲೆ = ಮುಂ + ತಲೆ
ಬೆಲೆವೆಣ್ಣು = ಬೆಲೆ + ಪೆಣ್ಣು(ಹೆಣ್ಣು)
ಕಿಸುವೊೞಲ್ = ಕಿಸು + ಪೊೞಲ್(ಹೊಳಲ್)

ಚೆಲು = ಚೆಲುವು

ಸವಿಯೊದಗೆ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 10:14am — ahoratra

ಚೆಲುವು+ಅಗಲು=?

ahoratra's picture

ಹಾಗಾದರೆ ಚೆಲುವು+ಅಗಲು[ಗುಣ ಸಂಧಿ]= ಏನಾಗುತ್ತದೆ ಮಹೇಶರೆ?

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 10:24am — Sunil Jayaprakash

ಚೆಲುವ್ಹೊಗಲು

Sunil Jayaprakash's picture

ಇಲ್ಲಿ ಎರಡು ಅಂಶಗಳನ್ನು ಗಮನಿಸುತ್ತಾ, ನಮ್ಮ ಸಮಸ್ಯೆಯನ್ನು ತಿಳಿಯಾಗಿಸಿಕೊಳ್ಳುವ ಪ್ರಯತ್ನ ಮಾಡೋಣ.

೧. ಚೆಲುವಗಲಿಗೆ ಸಂಧಿಯ ರೂಪದ ಬದಲು ಸಮಾಸದ ರೂಪದಲ್ಲಿ ಅರ್ಥಮಾಡಿಕೊಂಡರೆ ನಮ್ಮ ಸಮಸ್ಯೆ ಸ್ವಲ್ಪ ತಿಳಿಯಾಗುುವುದು.
೨. ಚೆಲುವು + ಹಗಲು. ಇದನ್ನು ಗುಣ ಸಂಧಿಯ ಪ್ರಕಾರ ಕೂಡಸಲು ಬರುವುದಿಲ್ಲ ಎಂಬುದು ನನ್ನ ಅನಿಸಿಕೆ. ಏಕೆಂದರೆ ಚೆಲುವು ಮತ್ತು ಹಗಲು ಎರಡೂ ಕೂಡ ಕನ್ನಡ ಪದಗಳು. ಕನ್ನಡ ಮೂಲದ ಪದಗಳಿಗೆ ಸಂಸ್ಕೃತ ಸಂಧಿಗಳು set(ಈ ಜಾತಕಗಳನ್ನು ಕೂಡಿಸುವಾಗಿ ಹೇಳುತ್ತಾರಲ್ಲ. ಆ ರೀತಿಯಲ್ಲಿ. Smiling) ಆಗುವುದಿಲ್ಲ, ಸರಿ ಹೊಂದುವುದಿಲ್ಲ.
ಇಲ್ಲದಿದ್ದಲ್ಲಿ ಅದು ಚೆಲುವ್ಹೊಗಲು ಎಂದಾಗಬೇಕು. ಏಕೆಂದರೆ ಗುಣ ಸಂಧಿಯಲ್ಲಿ ಸ್ವರಗಳಲ್ಲಿ ಮಾತ್ರ ವ್ಯತ್ಯಾಸವಾಗುತ್ತದೆ. ವ್ಯಂಜನಗಳಲ್ಲಿ ಆಗುವುದಿಲ್ಲ.
ನಾವು ಇನ್ನೂ ಸೂಕ್ಷ್ಮವಾಗಿ ನೋಡಿದರೆ ಗುಣ ಸಂಧಿಯ ಪ್ರಕಾರ ಚೆಲುವ್ಹೊಗಲು ಮಾಡಲು ಬರವುದಿಲ್ಲ ಎಂಬುದು ಗೊತ್ತಾಗುತ್ತದೆ.

ನೀವೆಲ್ಲರೂ ಏನು ಹೇಳುವಿರಿ.?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 10:41am — ಮಹೇಶ ಭೋಗಾದಿ

ಕನ್ನಡ ಸಂಧಿಗಳು

ಮಹೇಶ ಭೋಗಾದಿ's picture

ಕನ್ನಡ ಸಂಧಿಗಳು ಮೂರೇ ಮೂರು.
೧)ಆಗಮ = ಹೆಚ್ಚಿಗೆ ಅಕ್ಕರಗಳು ಬರುವುದು
೨)ಲೋಪ = ಇರುವ ಅಕ್ಕರಗಳು ಬಿಟ್ಟು ಹೋಗುವುದು
೩)ಆದೇಶ = ಒಂದರ ಬದಲು ಮತ್ತೊಂದು ಬರುವುದು.

ಸಂಸ್ಕೃತದ ಅಲ್ಲಿ ಸುಮಾರು ೧೦ಕ್ಕಿಂತ ಹೆಚ್ಚು ಸಂಧಿಗಳಿವೆ.

ಗುಣ vs ಕನ್ನಡದ ಆದೇಶ ಸಂಧಿ.

ಗುಣ ಸಂಧಿಯಲ್ಲಿ ಪೂರ್ವಪದದ(ಮೊದಲನೆ ಪದ) ಕೊನೆಯಕ್ಕರ ಬದಲಾವಣೆ ಹೊಂದುವುದು.
ಹಳೆಬಳಕೆ : ವಾಗೀಶ = ವಾಕ್ + ಈಶ. ಇಲ್ಲಿ ಕ್ ಹೋಗಿ ಗ್ ಬಂತು.

ಗುಣ ಸಂಧಿಯ ಸೂತ್ರ: ಪೂರ್ವಪದದ ಕೊನೆಯಲ್ಲಿನ ಕ್, ಚ್, ಟ್, ತ್, ಪ್(ಕರ್ಕಶ ವರ್ಗೀಯ ವ್ಯಂಜನಗಳು) ಬದಲು ( ಗ್, ಜ್, ಡ್, ದ್, ಬ) ( ಮೃದು ವರ್ಗೀಯ ವ್ಯಂಜನಗಳು) ಬರುವುವು. ಹಾಗೆಯೆ ಮಹಾ ಪ್ರಾಣಕ್ಕೂ ಕೂಡ.

ಆದೇಶ ಸಂಧಿಯಲ್ಲಿ ಉತ್ತರಪದದ(ಎರಡನೆ ಪದದ) ಮೊದಲ ಅಕ್ಕರ ಬದಲಾಗುವುದು.
ಹಳೆಬಳಕೆ: ಕೆಂದಾವರೆ = ಕೆಂ + ತಾವರೆ.
ಇಲ್ಲಿ ಎರಡೆಪದವಾದ(ಉತ್ತರ ಪದ) ತಾವರೆಯ ಮೊದಲ ಅಕ್ಕರ "ತ"ಬದಲು "ದ" ಬಂತು.

ಹೇಗೆ: ಹಳೆಗನ್ನಡ, ಸಿರಿಗನ್ನಡ, ಮುಂತಾದವು

ಸವಿಯೊದಗೆಗಳು,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 11:08am — Sunil Jayaprakash

ಉ : ಸಂಧಿ ಸಮಾಸ

Sunil Jayaprakash's picture

ಮಹೇಶ ಭೋಗಾದಿ wrote:

ಹಳೆಬಳಕೆ: ಕೆಂದಾವರೆ = ಕೆಂ + ತಾವರೆ.

ಸಂಪದದ ಆಶಯ ಈಡೇರುತ್ತಿದೆಯೇನೋ ಎಂದನಿಸುತ್ತಿದೆ. ಅಂತರ್ಜಾಲದಲ್ಲಿ ಕನ್ನಡವನ್ನು ಬಳಸಿ ನಡೆಯುವ ಚರ್ಚೆಗಳು ಹೆಚ್ಚಾಗಬೇಕೇ? ಎಂದು ಒಂದು ಜನಮತ(poll) ಹಾಕಿದ್ದೆವು. ಅದು ಸಾಕಾರಗೊಳ್ಳುತ್ತಿದೆ.

ಇರಲಿ ವಿಷಯಕ್ಕೆ ಬರೋಣ. ಸಂಧಿ ಮಾಡುವಾಗ, ಪೂರ್ವ ಪದ ಮತ್ತು ಉತ್ತರಪದ ಎರಡಕ್ಕೂ ಅರ್ಥವಿರಲೇಬೇಕು ಎಂದು ನಮ್ಮ ಉಪಾಧ್ಯಾಯರು ಹೇಳಿದ್ದರು. ಸಂಧಿಯ ನಿಯಮವೇ ಹಾಗೆ, ಎರಡು ಪದಕ್ಕೂ ಅರ್ಥವಿರಬೇಕು.

ಕೆಂದಾವರೆಯನ್ನು, ಕೆಂ + ತಾವರೆ ಎಂದು ಬಿಡಿಸಲು ಬಾರದು. ಏಕೆಂದರೆ 'ಕೆಂ' ಎನ್ನುವುದಕ್ಕೆ ಯಾವ ಅರ್ಥವೂ ಇಲ್ಲ. ಕೆಂದಾವರೆಗೆ ಸಮಾಸದಿಂದ ಮಾತ್ರವೇ ಅರ್ಥಕಲ್ಪಿಸಲು ಸಾಧ್ಯ. ಒಂದು ಪದಕ್ಕೆ ಸಂಧಿ ಹಾಗು ಸಮಾಸ ಎರಡೂ ಇರಬೇಕು ಎಂಬ ಯಾವ ನಿಯಮವೂ ಇಲ್ಲ.

ಕೆಂಪಾದ ತಾವರೆ - ಕೆಂದಾವರೆ. ಇದನ್ನು ಕೆಂ + ತಾವರೆ ಎಂದು ಬಿಡಿಸಬಾರದು. ನೀವು ಏನು ಹೇಳುವಿರಿ? ಹಾಗೆಯೇ ಚೆಲ್ವಗಲು.

ಅಂದ ಹಾಗೆ, ಈ ಚೆಲುವಗಲು ಪದಕ್ಕೆ ಅರ್ಥ ಹುಡುತ್ತಿರವಾಗ ಹೊಳೆಯಿತು. ಅಗಲು ಎಂದರೆ ತುದಿ ಎಂದನಿಸುತ್ತದೆ.
ಚೆಲುವು + ಅಗಲು = ಚೆಲುವಗಲು ( ಲೋಪ ಸಂಧಿ) - ಚೆಂದವಾದ (ಅಥವಾ ಮಚ್ಚು, ಚಾಕು ಮುಂತಾದ ಶಸ್ತ್ರಗಳಿಗಗಾದರೆ ಚೂಪಾದ ) ತುದಿ ಎಂದು ಅರ್ಥವಿರಬಹುದಲ್ಲವೇ.
ಅಗಲು ಪದಕ್ಕೆ ಕನ್ನಡ ಕಸ್ತೂರಿ ಯ ಸಹಾಯ ಪಡೆಯೋಣ ಎಂದರೆ ಅದು ಏಕೋ ನನ್ನ ಮೇಲೆ ಮುನಿಸಿಕೊಂಡಿದೆ.

ಸವಿಯೊದಗು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 11:20am — ahoratra

ಅಗಲು= ಬೇರೆಯಾಗು

ahoratra's picture

ಚೆಲುವಿನಿಂದ ಬೇರೆಯಾಗು ಎನ್ನುವ ಅರ್ಥ ಬರುತ್ತದೆ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 11:29am — ಮಹೇಶ ಭೋಗಾದಿ

ಚೆಲುವಗಲು = good bye ಮಾಡೋಣ.

ಮಹೇಶ ಭೋಗಾದಿ's picture

ನನಗೆ ಇಂದು ಜಾಸ್ತಿ ಕೆಲಸವಿದೆ

ಚೆಲ್ವಗಲು = good day/morning ಆಗಲಿ

ಚೆಲುವಗಲು/ಸವಿಯಗಲು/ಸವಿಯಗಲಿಕೆ/ಒಲವಗಲಿಕೆ = good bye/tata ಆಗಲಿ Smiling

ಸವಿಯೊದಗೆ:

ಸರಿ. ಸವಿಯೊದುಗುಗಳು ಎನ್ನಿ.

ಸವಿನೆರವು = ಸವಿಯಾದ ನೆರವು ... ಇದು ಆಗಬಹುದೇನೋ..

ಅವಸರದಲ್ಲಿದ್ದೇನೆ ಇಂದು.

ಸವಿಯೊದಗೆ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 26, 2006 - 9:43am — ಮಹೇಶ ಭೋಗಾದಿ

ಕೆಂ, ಮುಂ, ಹಿಂ, ಹೆರ್‍ .. ಇವನ್ನು ಕನ್ನಡ ಉಪಸರ್ಗಗಳೆನ್ನಬಹುದೆ?

ಮಹೇಶ ಭೋಗಾದಿ's picture

ಸುನಿಲರೆ,

ನಾನು ನಿಮ್ಮ ಟಿಪ್ಪಣಿಯ ಮೇಲೆ ಯೋಜಿಸುತ್ತಾ, ಸಂಸ್ಕೃತ ಸಂಧಿಗಳ ಕುರಿತು ಕೆಲವು ಉದಾಹರಣೆಗಳನ್ನು ನೆನಪಿಸಿಕೊಳ್ಳಿತ್ತಿರುವಾಗ "ಸೂರ" ಎಂಬ ಪದ ಹೊಳೆಯಿತು.

ಸೂರ = ಸು + ಉರ ( ಒಳ್ಳೆಯ ಎದೆ, ಹೃದಯವುಳ್ಳವನು) (ಸೂರ್ಯ).

ಇಲ್ಲಿ ನೋಡಿ, "ಸು" ಇದು ಉಪಸರ್ಗ, ಇದಕ್ಕೆ ಸ್ವತಂತ್ರ ಬಳಕೆಯಿಲ್ಲ. ಅಂದರೆ ನಾವೆಂದು ಬರಿ "ಸು" ವೆಂದು ಬಳಸೆವು. ಬದಲಿಗೆ, "ಸಾಧು" "ಸುಂದರ" ಎಂದು ಬಳಸುವೆವು.

ಅಂದರೆ ಉಪಸರ್ಗ+ಪದ ವಾದಾಗಲೂ ಸಂಧಿಯಾಗುವುದು.

ಉದ:
ಸತ್ + ಭಾವ = ಸದ್ಭಾವ
ಸಂ + ಮತಿ = ಸಮ್ಮತಿ
ವಿ + ಆಪ್ತಿ = ವ್ಯಾಪ್ತಿ
ವಿ + ಅಕುಲ = ವ್ಯಾಕುಲ

ಹೀಗೆಯೆ...
ಕೆಂ, ಮುಂ, ಹಿಂ, ಹೆರ್‍, ಮುಂತಾದವು ಕನ್ನಡ ಉಪಸರ್ಗಗಳೆನ್ನಬಹುದೆ?

ನಮ್ಮಕೆಡೆ "ಕೆಂದೆಳ್ಳೀರು" ಎಂದು ಕೆಂಪು ಎಳನೀರಿಗೆ ಹೇಳುವರು.
ಇದು ಹೇಗೆ ಬಂತು ಅಂತ ಮಾತ್ರ ಗೊತ್ತಾಗುತ್ತಿಲ್ಲ.!

ಚೆಲ್ವಗಲು,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 10:18am — Sunil Jayaprakash

ಸಮಾಸದ ರೂಪ

Sunil Jayaprakash's picture

ಚೆಲ್ವಗಲು ಹಾಗು ನಲ್ವಗಲಿಗೆ ಸಂಧಿಯ ರೂಪದ ಬದಲು ಸಮಾಸದ ರೂಪ ಕೊಟ್ಟರೆ ಚೆನ್ನ ಎನಿಸುತ್ತಿದೆ ನನಗೆ.

ಚೆಲುವಾದ ಹಗಲು - ಚೆಲ್ವಗಲು
'ಹ'ಕಾರ 'ವ'ಕಾರ ವಾಗುವುದು.

ನಲ್ವಗಲು - ನಲಿವಿನಿಂದ ಕೂಡಿರುವ ಹಗಲು
'ಹ'ಕಾರ 'ವ'ಕಾರ ವಾಗುವುದು.

ಹಾಗಾಗಿ, ನಲ್ವಗಲು ಎಂದು ಹಾರೈಸಿದರೆ, ನಿಮ್ಮ "ಹಗಲು ಪೂರ್ತಿ ನಲಿವಿನಿಂದ ಕೂಡಿರಲಿ" ಎಂದು ಹಾರೈಸಿದಂತೆ.

ನಾನಂತೂ ಈ ನಡುವೆ ಈ ಪದವನ್ನು ಹೆಚ್ಚು ಬಳಸುತ್ತಿರುವೆನು, ಕೇಳಿದವರು ಏನದು ಏನದು ಅಂತ ಕೇಳುತ್ತಾರೆ, ಆಗ ನನಗೆ ಅವರೊಡನೆ ಹರಟಲು ಬಹಳಷ್ಟು ವಿಷಯಗಳು ಸಿಗುತ್ತವೆ.
ಮಿಶ್ರಿಕೋಟಿಗಳಿಗೆ ಸಿಹಿಿಯೊದಗೆಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 10:26am — ahoratra

ಚೆಲ್ವಗಲು ಬೇರೆ ಚೆಲುವಗಲು ಬೇರೆ.

ahoratra's picture

ಆದರೂ ಇದರ ಬಗ್ಗೆ ಸ್ವಲ್ಪ ಉತ್ಖನನ ಬೇಕಾಗಿದೆ ಸುನಿಲರೆ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 10:48am — ಮಹೇಶ ಭೋಗಾದಿ

ಚೆಲ್ವಗಲು

ಮಹೇಶ ಭೋಗಾದಿ's picture

ಚೆಲ್ವಗಲು = ಚೆಲುವಗಲು. ಆಗದಿರ ಬಹುದು.!

ಚೆಲುವು + ಅಗಲು = ಚೆಲುವಗಲು ಆಗಬಹುದು.

ಚೆಲ್ವಗಲು,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 11:04am — ahoratra

ಧನ್ಯವಾದ ಮಹೆಶರೆ

ahoratra's picture

ಈಗ ಹೇಳಿ ಶುಭೋದಯಕ್ಕೆ ಚಲ್ವಗಲು, ನಲ್ವಗಲು ಎಂದಿರಿ, ಶುಭ್ಹ ಸಂಜೆ ಮತ್ತು ಶುಭರಾತ್ರಿಗೆ ಏನಂತೀರಿ?

ಹಾಗೆಯೆ 'ಒದಗು'ವಿನ ಬಹುವಚನ ಒದಗೆಗಳು ಅಲ್ಲ. ನೀವು ಸವಿಯೋದಗೆಗಳು ಅಂತೀರಿ ಸ್ವಲ್ಪ ಯೋಚಿಸಿ, ತಪ್ಪಿದ್ದರೆ ಮನ್ನಿಸಿ.

ಅಹೋರಾತ್ರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 11:17am — Sunil Jayaprakash

ಶುಭ್ಹ ಸಂಜೆ ಮುಂತಾದವು

Sunil Jayaprakash's picture

ನಲ್ವಗಲು ಚೆಲ್ವಗಲು
ಸೊಗಸ್ಸಂಜೆ
ಸೊಗದಿರುಳು ನಲ್ವಿರುಳು. ಬಹಳ ಸಂತೋಷವಾಗುತ್ತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 10:30am — ಮಹೇಶ ಭೋಗಾದಿ

ಸಂಧಿ/ಸಮಾಸ

ಮಹೇಶ ಭೋಗಾದಿ's picture

ಸುನಿಲರೆ,

ಅಕ್ಕರಗಳಲ್ಲಿ ವ್ಯತ್ಯಯವಾದರೆ ಸಂಧಿ.(ಹೊಸತಕ್ಕರ ಬರುವುದು, ಕಾಣೆಯಾಗುವುದು, ಬದಲಾವುದು ಮುಂತಾದವು).

ಅರ್ಥವ್ಯತ್ಯಾಸವಾದರೆ ಸಮಾಸ.

ಹಳೆಬಳಕೆ:(ಉದಾಹರಣೆ)
ಬಾಂದಳ = ಬಾನ್ + ತಳ. ಇಲ್ಲಿ "ದ", "ತ" ಬದಲಾಗಿ ಬಂತು. ಇದು ಸಂಧಿ(ಆದೇಶ)
ಬಾನಿನ ತಳ ಎಂದು ವಿಗ್ರಹವಾಕ್ಯ( ಬಿಡಿಸಿದ ವಾಕ್ಯ, ವಿಗ್ರಹ ಅಂದರೆ ಬೇರ್ಪಡಿಸು, ಸಂಧಿ ಅಂದರೆ ಕೂಡಿಸು, ಒಗ್ಗೂಡಿಸು) ಮಾಡಬಹುದು

ಬಾನು = ಆಗಸ
ತಳ = ಕೆಳಭಾಗ.

"ಬಾಂದಳ" ಎಂದು ಒಂದು ಹೊಸತರ್ಥವನ್ನು ನೀಡುವುದು. ಇದು ಸಮಾಸ( ಬಹುಶಃ ಕರ್ಮಧಾರಾಯ ಸಮಾಸ , ನೆನೆಪಿಲ್ಲ).
ಸವಿಯೊದಗೆ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 12:54pm — prashanth kota

ಸಂಸ್ಕೃತ ಸಂಧಿ ಗುಣ ಅಲ್ಲ ಜಸ್ತ್ವ

prashanth kota's picture

ಅಂತರ್ಜಾಲದಲ್ಲಿ ಒಂದು ಒಳ್ಳೆ ಪುಟ ಸಿಕ್ತು. ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಗಳ ವ್ಯಾಕರಣ ಇಂಗ್ಲಿಷಿನಲ್ಲಿ ವಿವರಿಸಿದೆ.

http://ccat.sas.upenn.edu/plc/salrc/upload/109_Schiffman.pdf

ಇಂಗ್ಲಿಷ್ ಪುಸ್ತಕದ ಕೊಂಡಿ ಕೊಟ್ಟಿದಕ್ಕೆ ಬೆಸರ ಪಡಬೇಡಿ. ಒಂದು ದಿನ ಇಂಗ್ಲಿಷ್ ನವರು ಕೂಡ ಕನ್ನಡ ಪುಟಗಳ ಕೊಂಡಿ ಕೊಡುವಷ್ಡು ಪುಟಗಳನ್ನ ನಾವು ತಯಾರಿಸೋಣ.

ಪ್ರಶಾಂತ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 1:19pm — ಮಹೇಶ ಭೋಗಾದಿ

ಜಸ್ತ್ವ ಮತ್ತು ಆದೇಶ

ಮಹೇಶ ಭೋಗಾದಿ's picture

ನಿಜವಾಗಲು ಬಹಳ ಬಳಕೆಯ ಕೊಂಡಿಯದು.

ಸವಿಯೊದಗೆಗಳು(ಧನ್ಯವಾದ) ನಾನು ಗೊಂದಲಕ್ಕೀಡಾಗಿದ್ದೆನು.
ಅದು ಜಸ್ತ್ವವೆ.

-ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 25, 2006 - 1:19pm — Sunil Jayaprakash

ಸವಿ : ಜಸ್ತ್ವ ಮತ್ತು ಆದೇಶ

Sunil Jayaprakash's picture

ಸವಿಯೊದಗೆಗಳು ಕೋಟ ಅವರಿಗೆ.
ಈ ಚರ್ಚಾ ಕೊಂಡಿಯ ಮೂಲಕ ಈ ಕೆಳಗಿನವುಗಳ ಬಗ್ಗೆ ಕೆಲವು ಸಂಗತಿಗಳನ್ನು ತಿಳಿದುಕೊಂಡೆವು.
೧. ಜಸ್ತ್ವ ಮತ್ತು ಆದೇಶ ಸಂಧಿಗಳ ಬಗ್ಗೆ ಸ್ಪಷ್ಟಣೆ.
೨. ಚೆಲುವು, ಚೆಲ್ವಗಲು, ಚೆಲುವಗಲು ಗಳ ಸ್ಪಷ್ಟಣೆ.
೩. ಸಮಾಸ ಮತ್ತು ಸಂಧಿಗಳು(??)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪದಪರೀಕ್ಷಕದಲ್ಲಿ ಈಗ ೪೦೦೦೦ + ೭೦,೦೦೦ ಶಬ್ದಗಳು
  • ಬಿಡುವಿನ ವೇಳೆಯಲ್ಲಿ ಒಂದಿಷ್ಟು ಕನ್ನಡ ಸೇವೆ
  • ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.
  • ಲೀನಕ್ಸು , ಉಬುಂಟು , ಕನ್ನಡ ( ಕನ್ನಡ ಕಂಪ್ಯೂಟರ್ ಪಾಠ )
  • ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆ-೧
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
  • ಕ್ರುಶ್ಣಾನೀ ಬ್ಯಾಗನೆ ಬಾರೋ
  • ಸ್ವಲ್ಪನಗಿ
  • ಡೈರಿಯ ಕೆಲವು ಹಾಳೆಗಳು - ಭಾಗ ೫
  • ಇಂಬಕ್ಕ
  • ಡೈರಿಯ ಕೆಲವು ಹಾಳೆಗಳು - ಭಾಗ ೪
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
  • ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
  • ಓದಿದ್ದು ಕೇಳಿದ್ದು ನೋಡಿದ್ದು 40 ಮತಾಂತರ:ಮಹಾತ್ಮಾ ಗಾಂಧೀಜಿ ಏನು ಹೇಳಿದ್ದರು?
  • ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:34pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:27pm
  • hpn
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:25pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:21pm
  • hpn
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:16pm
  • hpn
    ಉ: ಇದು ಯಾವ ಹೂವು? ಹೇಳಿ ನೋಡೋಣ...
    October 6, 2008 - 11:03pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 10:59pm
  • Rajeshwari
    ಉ: ಸಪ್ತಸ್ವರಗಳು
    October 6, 2008 - 10:32pm
  • gurubaliga
    ಉ: ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ
    October 6, 2008 - 10:09pm
  • Rajeshwari
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 6, 2008 - 10:03pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 153 ಅತಿಥಿಗಳು ಆನ್ಲೈನ್ ಇರುವರು.


ಹೊಗೆ-ಎಂಜಿನ್ ಪೋಪೊಪೆಡೆ,
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.

— ಬಿಳಿಗಿರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator