ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಪುಸ್ತಕನಿಧಿ - ಕನ್ನಡದ ಬಾವುಟ
ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನದು . ಬೆಲೆ ಸುಮಾರು ೧೫ ರೂಪಾಯಿ ಇದ್ದು ಚಾಮರಾಜಪೇಟೆಯ ಸಾಹಿತ್ಯಪರಿಷತ್ ಕಛೇರಿಯಲ್ಲಿ ಸಿಗುತ್ತದೆ. ಅಂತರ್ಜಾಲದಲ್ಲಿ ಇಲ್ಲಿ ಇದೆ.
ಈ ಪುಸ್ತಕದ ವಿಶೇಷವೇನಪ್ಪಾ ಅಂದರೆ ಇದನ್ನು ಬರೆದಿರುವದು ('ಇಂಗ್ಲೀಷ ಗೀತೆಗಳು' ಖ್ಯಾತಿಯ , ನವೋದಯ ಸಾಹಿತ್ಯದ ಹರಿಕಾರರಾದ ಬಿ.ಎಂ.ಶ್ರೀಕಂಠಯ್ಯ . ಇದರಲ್ಲಿ ಕನ್ನಡ ನಾಡಿನ ಹೆಮ್ಮೆಯನ್ನು ಹಾಡಿರುವ ಕವಿಗಳಿಂದ ಆಯ್ದ ತಿರುಳು ಇದೆ. ೭ನೇ ಶತಮಾನದಿಂದ ೨೦ನೇ ಶತಮಾನದವರೆಗಿನ ಕನ್ನಡ ಸಾಹಿತ್ಯದ ಸಂಗ್ರಹ ಇದೆ. ಎರಡು ಸಾವಿರ ವರ್ಷದ ಜೀವಾಳ ಇದೆ. ಕನ್ನಡ ಲಿಪಿಯ ಅಕ್ಷರಗಳನ್ನು ಭಾರೀ ಪ್ರಮಾಣದಲ್ಲಿ ಕಡಿತಗೊಳಿಸುವ ಕ್ರಾಂತಿಕಾರೀ ಬದಲಾವಣೆಯ ಪ್ರಸ್ತಾಪ ಇದೆ. ( ಇದನ್ನೇ ಯಾರೋ ಮತ್ತೆ 'ಹೊಸದೆಂಬಂತೆ ನೆಟ್ಟಿನಲ್ಲಿ ಸೂಚಿಸಿದ್ದರು!) . ಹೊಸ ರೀತಿಯಲ್ಲಿ 'ಏರಿಸಿ ಹಾರಿಸಿ ಕನ್ನಡದ ಬಾವುಟ' ವನ್ನು ನೋಡಿ.
ಶಾಸನಗಳು , ಪೂರ್ವ ಸಾಹಿತ್ಯ , ನಾಡಪದಗಳು , ಇಂದಿನ ಪದ್ಯಗಳು ಎಲ್ಲದರ ಪ್ರಾತಿನಿಧಿಕ ಸಂಕಲನ ಇದು . ಇಲ್ಲಿ ಏನೇನು ಇದೆ ,ಎಂದು ನೀವೇ ನೋಡಿ .

- shreekant.mishrikoti ರವರ ಬ್ಲಾಗ್
- Login or register to post comments
- 448 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ:
ಅದರಲ್ಲಿರೋ ಕನ್ನಡ ನಾಡಿ ನೆಲವಾಪೆ( map ) ನೋಡಿ..
ಅದೂ ನಮ್ಮ ಎಮ್ಮೆನಾಡಿನ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಒಪ್ಪಿಸಿದೆ( ಕನ್ನಬಾಡಿಯಲ್ಲಿ ಅಣೆ ಕಟ್ಟಿಸಿದ ಅರಸ ).
"ಕನ್ನಡ-ಸಕ್ಕದ"ದ ಹಾಳೆಗಳನ್ನು ಓದಿ
ಒಳ್ಳೇ ಹೊತ್ತಗೇ ಸಾರ್.. ನನ್ನಿ!
======================================
ಉ:
ನನ್ನ ಪೋಸ್ಟ್ ಬಗ್ಗೆ ಮಾತಾಡುತ್ತಿಲ್ಲ ಎಂದುಕೊಂಡಿದ್ದೇನೆ ;) ಒಂದು ಪ್ರತಿಕ್ರಿಯೆಯಲ್ಲಿ ನಾನು ಇದನ್ನು ಬಹುಶಃ ಬಿಎಂಶ್ರೀ ಅವರು ಸೂಚಿಸಿದ್ದು ಎಂದು ಬರೆದೂ ಇದ್ದೆ!
-ಹಂಸಾನಂದಿ
ಉ:
ನಿಮ್ಮ ಪೋಸ್ತ್ ಬಗ್ಗೆ ಅಂತೂ ಈ ಸಾಲು ಅಲ್ಲ ; ಅನೇಕ ವರ್ಷಗಳ ಹಿಂದೆ ಇಂಟರ್ನಟ್ಟಿನಲ್ಲಿ ಬೇರೆ ಯಾರೋ . ಬಿ.ಎಂ.ಶ್ರೀ ಹೆಸರು ಸೂಚಿಸದೆ . ಇದೇ ತರಹ ಬರೆದಿದ್ದರು! ಅವರ ಹೆಸರು ಗಮನಿಸಿಲ್ಲ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಪುಸ್ತಕನಿಧಿ - ಕನ್ನಡದ ಬಾವುಟ
ಹವುದು. ಬಿ.ಎಂ.ಶ್‌ರೀ ಸುದ್‌ದಗೆ ಸಕ್ಕತ್.
ಅ ಇ ಉ ಎ ಒ - ೫ ಸೊರಗಳು
ಅಂ - ಅನುಸೊರ
ಕ ಗ
ಚ ಜ
ಟ ಡ ಣ
ತ ದ ನ
ಪ ಬ ಮ - ೧೩ ಗುಂಪುಗೊಂಡ ವೆಂಜನ
ಯ ರ ಲ ವ ಸ ಹ ಳ - ೭ ಗುಂಪುಗೊಳ್ಳದ ವೆಂಜನ
೫ + ೧ + ೧೩ + ೭ = ೨೬ ಅಕ್ಕರ( ಇಪ್ಪತ್ತಾರಕ್ಕರ ). + ಉದ್ದ ಸೊರ ಗುರುತು(ರೀ) = ೨೭ ಗುರುತುಗಳು( ಇಪ್ಪತ್ತೇಳು )
ಒತ್ತಕ್ಕರಗಳಿಲ್ಲ. ಬದಲಿಗೆ ಅರೆಯಕ್ಕರಗಳು ಅಮ್ಮ = ಅಂಮ / ಅಮ್‌ಮ
ಉದ್ದ ಸೊರಗಳನ್ನು 'ಗಿಡ್ಡ ಸೊರ'ದ ಪಕ್ಕ 'ಉದ್ದ ಸೊರದ ಗುರುತು' ಇಕ್ಕಿ ತೋರುವುದು.
ಸೂಪರ್ ಐಡಿಯ!!
======================================