ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ನನ್ನ ಇತ್ತೀಚಿನ ಓದು
ಇತ್ತೀಚೆಗೆ ಒಂದು ಹಳೆಯ ಪುಸ್ತಕವನ್ನು DLIನಲ್ಲಿ ನೋಡಿದೆ. ಅದರಲ್ಲಿ ಮೊದಲಪುಟದ ಹಿಂದೆ ಸಾಮಾನ್ಯವಾಗಿ ಬರೆಯುವಂತೆ ' ಸರ್ವ ಹಕ್ಕುಸ್ವಾಮ್ಯ ಲೇಖಕರದು ಎಂಬುದರ ಬದಲಿಗೆ - ಒಡೆತನವೆಲ್ಲಾ ಬರೆದವರದು . ಎಂದಿತ್ತು!
-----------------------
ಇತ್ತೀಚೆಗೆ ನನ್ನ ಮೆಚ್ಚಿನ ಲೇಖಕ - ಅ.ರಾ.ಸೇ ಅವರ ಹಾಸ್ಯಲೇಖನಗಳ ಸಂಗ್ರಹ - ಶೀನಣ್ಣನ ರೋಮಾನ್ಸ್ -ಬಂದಿದ್ದು , ಕೊಂಡು ಓದಿ ಮುಗಿಸಿದೆ.
ಅಲ್ಲಿ ಹೇರ್ ಕಟ್ಟಿಂಗ ಸಲೂನಿಗೆ - ಕೂದಲು ಕತ್ತರಿಸುವ ಅಂಗಡಿ ಎಂದಿದ್ದಾರೆ!
ಕನ್ನಡದಲ್ಲಿ ಪೂಜೆ !
-----
ಹೊಯ್ಕೋ ನೀರು , ಬಡ್ಕೋ ಗಂಧ , ಮುಡ್ಕೋ ಪತ್ರೆ , ಮೂಸ್ನೋಡು ಊದಿನ್ಕಡ್ಡಿ , ತಿನ್ನು ದ್ರಾಕ್ಷಿ , ತಗೋ ಮುಖಕ್ಕೆ ಮಂಗಳಾರ್ತಿ .....
(ಅ.ರಾ.ಸೇ ಪುಸ್ತಕದಿಂದ!)
ಮತ್ತೆ ...
'ಕಾನ್ವೆಂಟ್ ಶಾಲೆಯ ಕಟ್ಟಡದ ಮೇಲೆ ಒಂದು ಲಿಖಿತವಿದೆ . ' ಆರ್ಚ ಶಿಷ್ಯ ಥೋಮಸರೇ ! ನಮಗಾಗಿ ಬೇಡಿಕೊಳ್ಳಿ' . ಗಾಡಿ ಹೊಡೆವ ನೌಕರ ಲಿಂಗಣ್ಣನು , ಮೊನ್ನೆ ದಿವಸ ಗ್ರಹಚಾರ ಕಡಿಮೆಯಾಗಿಯೋ , ಶಾಲೆಯ ಮುಂದೆ ಕುಳಿತುಕೊಂಡು 'ಇಂಗಳಹಾಳು ಮಹಂತೇಶ! ನೀನೇ ಕಾಪಾಡು! ' ಎನ್ನಬೇಕೇ ? ಪಕ್ಕದಲ್ಲಿ ನಿಂತಿದ್ದ ಫಾದರ್ ಅವನಿಗೆ ತಕ್ಷಣವೇ ಕೆಲಸದಿಂದ ತೆಗೆದು ಹಾಕಿದರು!.
(ಅ.ರಾ.ಸೇ ಪುಸ್ತಕದಿಂದ!)

- shreekant.mishrikoti ರವರ ಬ್ಲಾಗ್
- Login or register to post comments
- 364 hits
- Email this blog




RSS:
ಪ್ರತಿಕ್ರಿಯೆಗಳು
ಉ: ನನ್ನ ಇತ್ತೀಚಿನ ಓದು
'ತುಗೋ ಮೂತಿಗ್ ಮಂಗಳಾರತಿ'
ಮನಗಂಡ ಐತ್ರಿ.
ಮಂಗಳಾರತಿ ಎತ್ತೋದು ಒಳ್ಳೇದೇ, ಅದು ಇಂದಿನ ದಿನಗಳಲ್ಲಿ ಒಂದು ಬಗೇಲಿ ಬೈಗುಳ ಆಗಿ ಮಾರ್‍ಪಟ್ಟಿದೆ.
ಉ: ನನ್ನ ಇತ್ತೀಚಿನ ಓದು
ನನ್ನಿ ಮಿಶ್ರಿಕೋಟಿಗಳೆ,
"ಒಡೆತನವೆಲ್ಲ ಬರೆದವರದು" ಹಿಡಿಸಿತು.... ಮನ್ನಿಸಿ...ಯಾರೂ ಈ ಆ.ರಾ.ಸೇ ...ಇವರ ಬಗ್ಗೆ ಹೆಚ್ಚು ಹೇಳಿ
ಉ: ನನ್ನ ಇತ್ತೀಚಿನ ಓದು
ಅ.ರಾ.ಸೇ ಬಗೆಗೆ ನನಗೆ ಗೊತ್ತಿದ್ದಷ್ಟು ಹೇಳುವೆ.
೧. ಅವರ ಹೆಸರು ಅ.ರಾ.ಸೇ ಎಂದು ಎಲ್ಲ ಕಡೆ ಓದಿದ ನೆನಪು , ಆದರೆ ಅದೇಕೋ ಇತ್ತೀಚಿನ ಪುಸ್ತಕ - ಅಪರಂಜಿ( ಈ ಅಪರಂಜಿ ಯಾರು ? ಎಂದು ಆಮೇಲೆ ಹೇಳುವೆ ) ಪ್ರಕಾಶನದ್ದು - ಶೀನಣ್ಣನ ರೋಮಾನ್ಸು' ನಲ್ಲಿ ಎಲ್ಲೆಡೆ ಆ.ರಾ.ಸೇ ಎಂದಿದೆ. ನಮಗೆ ಅದು ಅಷ್ಟು ಮಹತ್ವದ್ದಲ್ಲ (!) - ಅವರು ಏನು ಬರೆದಿದ್ದಾರೆ ಎಂಬುದು ಮುಖ್ಯ !.
೨. ಇವರ ಸಂಬಂಧಿಗಳೊಬ್ಬರು ನಮ್ಮ ಸಂಪದದ ಸಕ್ರಿಯ ಸದಸ್ಯರು . ಅ.ರಾ.ಸೇ (ಹೆಸರೂ ಸೇರಿದಂತೆ) ಕುರಿತು ಬರೆಯಲು ಅವರನ್ನು ಕೇಳುವೆ.
೩. ನನಗೆ ಅ.ರಾ.ಸೇ ಹೆಸರು ಗಮನಕ್ಕೆ ಬಂದಿದ್ದು , ತುಷಾರ , ಸುಧಾ , ಪ್ರಜಾವಾಣಿ , ಉದಯವಾಣಿ ದೀಪಾವಳಿ/ಯುಗಾದಿ ವಿಶೇಷಾಂಕಗಳಲ್ಲಿನ ಹಾಸ್ಯ ಲೇಖನಗಳ ಮೂಲಕ . ಸಾಮಾನ್ಯವಾಗಿ ತುಂಬ ಅದ್ಭುತವಾಗಿವೆ. ನನ್ನ ಕೈಗೆ ಸಿಕ್ಕ ಎಲ್ಲವನ್ನೂ ಕತ್ತರಿಸಿ ಇಟ್ಟುಕೊಂಡಿರುವೆ. ಅವರ ಹಾಸ್ಯಕಾದಂಬರಿ ( ಹೌದು . ಹಾಸ್ಯ ಕಾದಂಬರಿ ) - 'ಸೊಗದಿರುಳು ನಲ್ವಗಲು' ('ಏನ್ಸಾ ಅಂಗಂದ್ರೆ ?' ' ಅಂಗಂದ್ರೆ ಕನ್ನಡದಲ್ಲಿ ಗುಡ್‌ನೈಟ್ , ಗುಡ್ ಡೇ! ' ) ಧಾರಾವಾಹಿಯಾಗಿ ಸುಮಾರು ೨೦ ವರ್ಷಗಳ ಹಿಂದೆ ತುಷಾರದಲ್ಲಿ ಬಂದಿತ್ತು. ಇದನ್ನು ಇಟ್ಟುಕೊಳ್ಳಲಿಲ್ಲ .
೪. ಹಳೆಗನ್ನಡವಿರಲಿ , ಸಂಸ್ಕೃತವಿರಲಿ , ಪದ್ಯವಿರಲಿ , ಅಂತರ್ರಾಷ್ಟ್ರೀಯ ಸಂಗತಿ ಇರಲಿ , ಮುಗಿಲುಹಳ್ಳಿ ಇರಲಿ , ಮಂಡಿವ್ಯಾಪಾರ ಇರಲಿ ಎಲ್ಲವನ್ನು ಬೆರೆಸಿ ತುಂಬ ಚೆನ್ನಾಗಿ ಬರೆಯುತ್ತಾರೆ. ( ಈ ರೀತಿ ಬರೆಯುವ ಇನ್ನೊಬ್ಬರಿದ್ದಾರೆ - ಅವರು ಸಿ.ಎನ್.ಕೃಷ್ಣಮಾಚಾರ್ - ಅವರ ಲೇಖನ ಇಲ್ಲಿದೆ -http://sampada.net/blog/shreekant_mishrikoti/28/07/2006/2029
-ತಪ್ಪದೇ ಓದಿ . ಅ.ರಾ.ಸೇ ಮಾದರಿ ನಿಮಗೆ ಅರಿವಾಗುತ್ತದೆ. ಈ ಸಿ.ಎನ್.ಕೃಷ್ಣಮಾಚಾರ್ ವಾರದಲ್ಲೊಂದು ದಿನ ಪ್ರಜಾವಾಣಿಯಲ್ಲಿ ಧ್ಯದ ಎಡಪುಟದಲ್ಲಿ ಕೆಲಬಾಗದಲ್ಲಿ ಬರೆಯುತ್ತಾರೆ . ಗಮನಿಸುತ್ತಾ ಇರಿ . ಒಮ್ಮೊಮ್ಮೆ ಒಳ್ಳೇ ಬರಹ ಸಿಗುತ್ತದೆ.)
ಈ ರೀತಿ ಬರೆಯುವದನ್ನು ಬಹುಶ್ರುತ ಎಂದೇನೋ ಎನ್ನುತ್ತಾರೆ. ಆನಂದಿಸಲು ಓದುಗರೂ ಬಹುಶ್ರುತರಿರಬೇಕು , ಅಷ್ಟೇ .
ಇದನ್ನೂ ನೋಡಿ .
http://sampada.net/blog/shreekant_mishrikoti/07/03/2006/1273
http://sampada.net/blog/shreekant_mishrikoti/07/03/2006/1273#comment-181...
ನೆನಪಿನಲ್ಲಿ ಉಳಿದಿರುವ ಇನ್ನಷ್ಟು ವಾಕ್ಯಗಳು .
೧. ಕವಿರಾಜಮಾರ್ಗವನ್ನು ಶ್ರೀವಿಜಯನು ೧೯೬೩ ರಲ್ಲಿ ಬರೆದನು. ( ೧೯೬೩ರಲ್ಲಿ ಪ್ರಕಟವಾದ ಪುಸ್ತಕದಲ್ಲಿ ಕವಿರಾಜಮಾರ್ಗವನ್ನು ಶ್ರೀವಿಜಯನು ಬರೆದ ವಿಷಯ ಬಂದಿದೆ)
೨. ಹಂದಿಗಳು ಒಣಹಾಕಿದ ನೆಲಗಡಲೆಯ ಮೇಲೆ ಸೋಲೋ ನೃತ್ಯವನ್ನು ಮಾಡುತ್ತಿದ್ದವು . ಹೀಗೆ ಸಂಸ್ಕರಿಸಲ್ಪಟ್ಟ ನೆಲಗಡಲೆಯೇ ಸಂಜೆ ವೇಳೆ ಬಿಸಿಬಿಸಿ ಮಾರಾಟವಾಗುವದು.
ಇನ್ನು ಎಷ್ಟೋ ಇದೆ.
೫. ಅವರು ಕಾವ್ಯ , ಸಾಹಿತ್ಯಪ್ರೇಮಿಗಳಲ್ಲದೆ ಆಧ್ಯಾತ್ಮ ಚಿಂತಕರೂ ಹೌದಂತೆ . ಅವ್ರ ಬಗ್ಗೆಗೆ ಇತ್ತೀಚಿನ ಮಯೂರದಲ್ಲಿ - ಸುಮಾರು ೨-೩ ತಿಂಗಳ ಹಿಂದೆ ಬಂದಿದೆ.
ನಾಪತ್ತೆಯಾದ ಗ್ರಾಮಾಫೋನ್ ಎಂಬ ಪುಸ್ತಕದಲ್ಲಿಯೂ ಅವರ ಕುರಿತು ನೋಡಿದೆ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ನನ್ನ ಇತ್ತೀಚಿನ ಓದು
ಅ.ರಾ.ಸೇತೂರಾಮರಾವ್
From Wikipedia
ಅ.ರಾ.ಸೇ. ಎಂದೇ ಖ್ಯಾತರಾಗಿರುವ ಶ್ರಿ ಅ.ರಾ.ಸೇತೂರಾಮರಾವ್ ಇವರು ೧೯೩೧ ಜನೆವರಿ ೨೬ರಂದು ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಜನಿಸಿದರು. ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
ಅ.ರಾ.ಸೇ.ಯವರು ಕೊರವಂಜಿ ಬಳಗದ ಲೇಖಕರು. ಇವರ “ಮುಗಿಲುಹಳ್ಳಿ ಬಖೈರು” ಹಾಸ್ಯ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿ ಬಹುಮಾನ ದೊರಕಿದೆ.
ಹಾಸ್ಯಲೇಖನಗಳನ್ನಲ್ಲದೆ, ಇವರು ಕವನಸಂಗ್ರಹ, ಕಾದಂಬರಿ, ಗದ್ಯ ರೂಪಾಂತರ, ಪ್ರವಾಸ, ಜೀವನ ಚರಿತ್ರೆಗಳನ್ನೂ ಸಹ ಪ್ರಕಟಿಸಿದ್ದಾರೆ.
*ಅಶೋಕ್
ಉ: ನನ್ನ ಇತ್ತೀಚಿನ ಓದು
ಕನ್ನಡದಲ್ಲಿ ಪೂಜೆ, ಮಂಗಳಾರತಿ ಮಾಡಿದರೆ ನಮ್ಮ "ದೈವಭಾಷಾ" ದೇವರುಗಳಿಗೆ ಅರ್ತ ಅಗ್ತೈತಾ?
ಒಬ್ಬ ಪುರೋಹಿತರು "ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ"(ಮಧ್ಯೆ = ಮಧ್ಯದಲ್ಲಿ) ಅಂತ ಹೇಳಕ್ಕೆ ನನ್ ತರ "ಮದ್ಯೇ ಮದ್ಯೇ ಪಾನೀಯಂ ಸಮರ್ಪಯಾಮಿ" ಅಂದ್ರು.
ಮದ್ಯೇ ( ಮದ್ಯದಲ್ಲಿ, ಮದ್ಯ ಸೇವಿಸುವಲ್ಲಿ )
ಇನ್ನೂ ಅವರ ರುದ್ರಚಮಕ ಕೇಳಿದ್ರೆ
ನಮ್ ಬಿಸಿಲ್ ಮಾರಮ್ಮ, ಬೆಟ್ಟದ ಮಾದಪ್ಪ, ನಂಜನಗೂಡಿನ ಗುಂಡ, ಮೈಲಾರ ಲಿಂಗ ಬರೀ ಈ ದೇವ್ರುಗಳಿಗೆ ತಾನೆ ಕನ್ನಡ ಬರೋದು?
ಅದೂ ಅಲ್ದೇ "ಹೊಯ್ಕೋ ನೀರು , ಬಡ್ಕೋ ಗಂಧ , ಮುಡ್ಕೋ ಪತ್ರೆ , ಮೂಸ್ನೋಡು ಊದಿನ್ಕಡ್ಡಿ , ತಿನ್ನು ದ್ರಾಕ್ಷಿ , ತಗೋ ಮುಖಕ್ಕೆ ಮಂಗಳಾರ್ತಿ " ಇವೆಲ್ಲ ಶಿಷ್ಟ ದೇವರುಗಳಿಗೆ ವಡ್ ವಡ್ಡಾಗಿ ಕೇಳ್ಸಲ್ವಾ? ಆಮೇಕೆ ಅವುಗೊಳು ಮುನಿಸ್ಕೊಂಡ್ರೇನ್ ಗತಿ?
ನನ್ ಮಾತ್ಗೊಳ್ನ ತಮಾಸೆಯಾಗಿ ತಗೋರಿ.
- ಮಾಯ್ಸ