ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!
'ಕಸ್ತೂರಿ' ಮಾಸಪತ್ರಿಕೆಯ ಎಪ್ರಿಲ್ ೨೦೦೬ರ ಸಂಚಿಕೆ ಯುಗಾದಿ ವಿಶೇಷಾಂಕವಾಗಿ ೩೨೦ ಪುಟ (ಬೆಲೆ ೧೨ ರೂ) ಹೊಂದಿ ಬಂದಿದೆ.
ಶ್ರೀ ರಾಮಚಂದ್ರನಿಗೆ ಚಿಕ್ಕವನಿದ್ದಾಗ ತೀರ್ಥಯಾತ್ರೆ ಹೋದಾಗ ವೈರಾಗ್ಯ ಉಂಟಾಗುತ್ತದೆ . ಆಗ ವಸಿಷ್ಠ ಮುನಿಗಳು ಅವನಿಗೆ ಮಾಡಿದ ಉಪದೇಶವೇ ಯೋಗವಾಸಿಷ್ಠ. ಇದಕ್ಕೆ ವಾಸಿಷ್ಠ ರಾಮಾಯಣ ಎಂಬ ಇನ್ನೊಂದು ಹೆಸರೂ ಇದೆ. ಈ ಬಗ್ಗೆ ಒಂದು ಲೇಖನ ಇದೆ. ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದವರು ಇದನ್ನು ನೋಡಬಹುದು. ಮೊಘಲ್ ರಾಜಕುಮಾರ ಅನೇಕ ಉಪನಿಷತ್ತುಗಳ ಜತೆ ಇದನ್ನೂ ಪರ್ಶಿಯನ್ ಭಾಷೆಗೆ ಅನುವಾದಿಸಿದ್ದಾನಂತೆ. ಅವನ ಕನಸಿನಲ್ಲಿ ಶ್ರೀ ರಾಮಚಂದ್ರನೂ ಬಂದಿದ್ದನಂತೆ.
ಚಿದಾನಂದ ಸಾಲಿಯವರ ಗಜ಼ಲ್‍ಗಳು ಈ ಇಲ್ಲಿಯೂ ಏಪ್ರಿಲ್ ತಿಂಗಳ ಮಯೂರದಲ್ಲಿಯೂ ಬಂದಿವೆ ಕವಿ ಕಡೆಯಲ್ಲಿ ತನ್ನನ್ನೇ ಉದ್ದೇಶಿಸಿ ಹೇಳುವ ಸಾಲುಗಳು ಇಲ್ಲಿಯೂ ಇವೆ. ರೋಮ್ಯಾಂಟಿಕ್ ಆಗಿ ಇವೆ.
ಜಿ.ಟಿ.ನಾರಾಯಣರಾವ್ ಅವರ ಒಂದು ವೈಜ್ಞಾನಿಕ ಲೇಖನದಲ್ಲಿ ಒಬ್ಬ ವಿಜ್ಞಾನಿ W, O, B, A, F, G, K, M, R, N, S ಈ ಅಕ್ಷರಗಳನ್ನು ಅದೇ ಕ್ರಮದಲ್ಲಿ ನೆನಪಿಟ್ಟುಕೊಳ್ಳಬೇಕಿತ್ತಂತೆ. ಅವನು ಆ ಅಕ್ಷರಗಳಿಂದ ಪ್ರಾರಂಭವಾಗುವ ಶಬ್ದಗಳ ವಾಕ್ಯವೊಂದನ್ನು ರಚಿಸಿದನಂತೆ. ನಾರಾಯಣರಾವ್ ಅವರು 'ಚೆಲುಗನ್ನಡ'ದಲಿ ಒಂದು ಸೂತ್ರವಾಕ್ಯವನ್ನು ಹೆಣೆದರು . ಓ ನನ್ನ ಬಾಳ ಬೆಳಕೇ ಆಗಮಿಸು ಫೇನಮಯ (?) ಗೋರಸ(ಹಾಲು?)ವ ಕೊಡು ನನಗೆ ಮೃದುಭಾಷಿ ರಸಿಕಮಣಿ ನಗುನಗುತ ಸಾರೆಲೇ! ನಾನೂ ಈ ರೀತಿ ಪ್ರಯತ್ನಿಸಿ ಸೋತೆ. ನೀವು? ಬಹುಶ: ಶ್ರೀವತ್ಸ ಜೋಷಿಯವರು ಯಶಸ್ವಿಯಾಗುವರು!
ಡಾ. ರಂ. ಶ್ರೀ . ಮುಗಳಿಯವರು ಮರಾಠಿಗರ ಮಧ್ಯೆ ಹೇಗೆ ಕನ್ನಡ ಭಾಷೆಯನ್ನುಳಿಸಿಕೊಂಡೇ ಮರಾಠಿಗೆ , ಮರಾಠೀ ಜನರಿಗೆ ಒಗ್ಗಿಕೊಂಡು ಬಾಳಿದರೆಂಬ ಬಗ್ಗೆ ಒಂದು ಲೇಖನ , ಸೂರ್ಯನಾಥ ಕಾಮತರ ಒಂದು ಲೇಖನ 'ಗಣ್ಯ ಸಾಂಸ್ಕೃತಿಕ ಕೇಂದ್ರವಾಗಿ ಧಾರವಾಡ ಬೆಳೆದ ಪರಿ' ಇವೆ- ಕರ್ನಾಟಕದ ಎರಡು ಸಾಂಸ್ಕೃತಿಕ ಕೇಂದ್ರಗಳಲ್ಲಿ ಮೈಸೂರು ರಾಜಾಶ್ರಯದಲ್ಲಿ ಬೆಳೆದರೆ , ಧಾರವಾಡ ಕೇವಲ ಜನಾಶ್ರಯದಿಂದಲೇ ಬೆಳೆಯಿತು. ಪತ್ರ ಸಂಸ್ಕೃತಿ ಬಗ್ಗೆ ಒಂದು ಲೇಖನ ಇದೆ. ಅಂಚೆ ವ್ಯವಸ್ಥೆ ಬರುವ ಮೊದಲು ಜನ ಸಂದೇಶವನ್ನು ಜನರ ಮೂಲಕವಾಗಿಯೆ ಕಳಿಸಬೇಕಾಗುತ್ತಿತ್ತು. ಅಂಚೆ ವ್ಯವಸ್ಥೆ ಬಂದಾಗ ಒಂದು ವಿಳಾಸ ಬರೆದು ಪತ್ರವನ್ನು ಒಂದು ಕೆಂಪು ಡಬ್ಬಿಯಲ್ಲಿ ಹಾಕಿದರೆ ಅದು ವಿಳಾಸದಾರರಿಗೆ ಮುಟ್ಟುವದು ಅಂದಿನ ಜನರಿಗೆ ಬಹಳ ಅದ್ಭುತವೆನಿಸುತ್ತಿತ್ತಂತೆ. ಫೋನು / ಮೊಬೈಲು ಬಂದ ಮೇಲೆ ಪತ್ರ ಸಂಸ್ಕೃತಿ ನಶಿಸುವದು ಸಹಜ ಅಲ್ಲವೇ? .
ಒಂದು ಹೊಸಮಾತನ್ನು ನೋಡಿದೆ- ಅಕ್ಕಿ ನಿನ್ನದು , ಅನ್ನ ನಿನ್ನದೇ?

- shreekant.mishrikoti ರವರ ಬ್ಲಾಗ್
- Login or register to post comments
- 721 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!
"ವಾರಕ್ಕೆ ಒಮ್ಮೆ ಬರುವ ಅಣ್ಣನಿಗೆ ಫರಂಗಿ ಗಿಡದಲ್ಲಿ ಕಾಯಿ ಮಾಗಿ ರಸಾಳವಾಗಿರಬಹುದೆಂಬ ನಿರೀಕ್ಷೆಯ ಸಡಗರ!"
( ಹಾಸ್ಟೆಲ್‍ನಲ್ಲಿರುವ ಅಣ್ಣ ವಾರಕ್ಕೊಮ್ಮೆ ಮನೆಗೆ ಬರುವ ಸಡಗರ ತಂಗಿಗೆ. ಅವರಿಬ್ಬರೂ ನೆಟ್ಟು ಬೆಳೆಸಿದ್ದ ಅನಾನಸು (= ಫರಂಗಿ) ಗಿಡದಲ್ಲಿ ಬಿಟ್ಟಿದ್ದ ಕಾಯಿ ಯಾವಾಗ ಹಣ್ಣಾಗುತ್ತದೆಯೆಂಬ ಕುತೂಹಲ. ಅದನ್ನವಳು ವರ್ಣಿಸುವ ರೀತಿ).
- ಶ್ರೀವತ್ಸ ಜೋಶಿ
Re: ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!
"ವಾರಕ್ಕೆ ಒಮ್ಮೆ ಬರುವ ಅಣ್ಣನಿಗೆ ಫರಂಗಿ ಗಿಡದಲ್ಲಿ ಕಾಯಿ ಮಾಗಿ ರಸಾಳವಾಗಿರಬಹುದೆಂಬ ನಿರೀಕ್ಷೆಯ ಸಡಗರ!"
( ಹಾಸ್ಟೆಲ್‍ನಲ್ಲಿರುವ ಅಣ್ಣ ವಾರಕ್ಕೊಮ್ಮೆ ಮನೆಗೆ ಬರುವ ಸಡಗರ ತಂಗಿಗೆ. ಅವರಿಬ್ಬರೂ ನೆಟ್ಟು ಬೆಳೆಸಿದ್ದ ಅನಾನಸು (= ಫರಂಗಿ) ಗಿಡದಲ್ಲಿ ಬಿಟ್ಟಿದ್ದ ಕಾಯಿ ಯಾವಾಗ ಹಣ್ಣಾಗುತ್ತದೆಯೆಂಬ ಕುತೂಹಲ. ಅದನ್ನವಳು ವರ್ಣಿಸುವ ರೀತಿ).
- ಶ್ರೀವತ್ಸ ಜೋಶಿ
ಶ್ರೀವತ್ಸರೆ, ನಿಮ್ಮ ಕಲ್ಪನೆ ಸಕ್ಕತ್ತಾಗಿದೆ. ಫರಂಗಿ ಹಣ್ಣೆಂದರೆ ಪಪ್ಪಾಯಿ ಮಾತ್ರ ಎಂದುಕೊಂಡಿದ್ದೆ. ನಿಮ್ಮ ಕಲ್ಪನಾಲಹರಿಯಿಂದ ನನಗೆ ಮನೆಯ ತಿಂಡಿಗಳು ನೆನಪಿಗೆ ಬಂದವು. ಯಾಕೋ ಗೊತ್ತಿಲ್ಲ.
ನನಗೆ ಸ್ವಲ್ಪ ತಿಂಡಿ ಪದಾರ್ಥಗಳ ಮೇಲೆ ಆಸೆ ಹೆಚ್ಚು. (ಅಭಾವದಲ್ಲಿ ಆಸೆ ಹೆಚ್ಚಾಗುವುದಂತೆ). ಅದಕ್ಕೆ ಹೀಗೆ ಅನ್ನಿಸಿತು.
W, O, B, A, F, G, K, M, R, N, S
"ವಡೆ-ಒಬ್ಬಟ್ಟು-ಬೋಂಡಂಗಳ ಅಭಾವದಿಂ ಫಣಿಯು ಗಂಟಲುಬ್ಬಿದಂತೆಲ್ಲಾ ಕೋಡುಬಳೆಯಂ ಮುರಿಮುರಿದುದು ರಸವಂ ನಾಸಿಕಾಘ್ರದಿ ಸವಿಯಿತಿಹನು "
ಗೆಳೆಯ ಫಣಿಯು ಮನೆಯಿಂದ ದೂರ, ಪರದೇಶಕ್ಕೆ ಬಂದು ಮನೆಯ ತಿಂಡಿಗಳನ್ನೆಲ್ಲಾ ನೆನೆಪಿಸಿಕೊಳ್ಳುತ್ತಾ ಗಂಟಲುಬ್ಬಿಬಂದಾಗ ಮನೆಯಿಂದ ತಂದ ಕೋಡುಬಳೆಯನ್ನು ತಿನ್ನದೆಯೇ ಮೂಗಿನಿಂದ ಆಘ್ರಾಣಿಸುತಿದ್ದಾನೆ.
೧.ಗೆಳೆಯ ಫಣಿ, ನಿನ್ನ ಹೆಸರು ನಿನ್ನನ್ನು ಕೇಳದೆ ಬಳಸಿಕೊಂಡಿದ್ದಕ್ಕೆ ಕ್ಷಮಯಿರಲಿ.
೨.F ಅಕ್ಷರದಿಂದ ಬೇರೆ ಯಾವ ಪದ ನೆನಪಿಗೆ ಬರುತ್ತಿಲ್ಲ. ಕನ್ನಡದ ಫ ಅದಕ್ಕೆ ಅತ್ಯಂತ ಹತ್ತಿರ. ಅದನ್ನು ಬಳಸಿಕೊಳ್ಳಬಹುದು ಎಂದು ಊಹಿಸಿಕೊಂಡಿದ್ದೇನೆ.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
Re: ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!
W, O, B, A, F, G, K, M, R, N, S
"ವಡೆ-ಒಬ್ಬಟ್ಟು-ಬೋಂಡಂಗಳ ಅಭಾವದಿಂ ಫಣಿಯು ಗಂಟಲುಬ್ಬಿದಂತೆಲ್ಲಾ ಕೋಡುಬಳೆಯಂ ಮುರಿಮುರಿದುದು ರಸವಂ ನಾಸಿಕಾಘ್ರದಿ ಸವಿಯಿತಿಹನು "
ಗೆಳೆಯ ಫಣಿಯು ಮನೆಯಿಂದ ದೂರ, ಪರದೇಶಕ್ಕೆ ಬಂದು ಮನೆಯ ತಿಂಡಿಗಳನ್ನೆಲ್ಲಾ ನೆನೆಪಿಸಿಕೊಳ್ಳುತ್ತಾ ಗಂಟಲುಬ್ಬಿಬಂದಾಗ ಮನೆಯಿಂದ ತಂದ ಕೋಡುಬಳೆಯನ್ನು ತಿನ್ನದೆಯೇ ಮೂಗಿನಿಂದ ಆಘ್ರಾಣಿಸುತಿದ್ದಾನೆ.
ಬಹಳ ಚೆನ್ನಾಗಿದೆ! ಸರ್ವಂ ತಿಂಡಿಮಯಂ ಮಾಡಿಬಿಟ್ಟು ಒಂದು ಪ್ರಾಸಬದ್ಧ ಕವನವನ್ನೇ ಕಟ್ಟಿದರೆ ಹೇಗೆ!?
ವಡೆ ಒಬ್ಬಟ್ಟು ಬೋಂಡಾ ಅತಿರಸ
ಫೇಣಿ ಗಸಗಸೆಯ ಪಾಯಸ
ಕೋಡುಬಳೆ ಮಾವಿನಹಣ್ಣಿನ ರಸಾಯನ
ನುಚ್ಚಿನುಂಡೆ ಸಪಾದಭಕ್ಷ್ಯ ಭೋಜನ!
- ಶ್ರೀವತ್ಸ ಜೋಶಿ
ಉ: W, O, B, A, F, G, K, M, R, N, S
ಭಾಪು! ಭಳಿರೆ!!
ಶ್ರೀನಿಧಿ ಮತ್ತು ಶ್ರೀವತ್ಸ ಅವರಿಗೆ!
ಅನಾನಸು
ನನಗೆ ಮತ್ತೆ ಗೊಂದಲ...
ನಾವು ಅನಾನಸ್ ಎಂದರೆ pineapple ಅಂತ ತಿಳಿದಿದ್ದೇವೆ. ಇದು ನೆಲದಲ್ಲಿ ಬೆಳೆಯುವುದು.
papaya ಎಂದರೆ ಪರಂಗಿ ಹಣ್ಣು.
ಆಂಗ್ಲರು ಮಾಗಿದ ಪರಂಗಿಹಣ್ಣಿನಂತೆ ಕಂಪುಕೆಂಪಗೆ ಇರುವ ಕಾರಣದಿಂದ ತಾನೆ, ಅವರನ್ನು ಪರಂಗಿಯವರು ಎಂದು ಕೆರೆದದ್ದು?
ಈಗ ಮರದಲ್ಲಿ ಬಿಡುವ ಅನಾನಸ್ಸು ಯಾವುದು?
ಒಳ್ಳೆಯ ಪರಿಚಯ
ನಿಮ್ಮ ಲೇಖನ ಓದುತ್ತಿದ್ದರೆ ಈ ಸಲದ ಕಸ್ತೂರಿ ವಿಶೇಷಾಂಕ ಬಹು ಅತ್ಯಮೂಲ್ಯ ಪುಸ್ತಕ ಅನ್ನಿಸುತ್ತಿದೆ. ಒಳ್ಳೆಯ ಪುಸ್ತಕವನ್ನೇ ಪರಿಚಯಿಸುತ್ತಿದ್ದೀರಿ.
ಜೋಶಿಯರನ್ನು ಕೆಣಕಿದಷ್ಟೂ ಸಂಪದಕ್ಕೆ ಒಳ್ಳೆಯದೇ. ವಜ್ರವನ್ನು ಸಾಣೆ ಹಿಡಿದ ಹಾಗೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net