ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ
ಮಹಾಭಾರತ ಯುದ್ಧದ ಕೊನೆಗೆ ದುರ್ಯೋಧನನು ಭೀಮನಿಂದ ತೊಡೆಯನ್ನು ಮುರಿಸಿಕೊಂಡು ಸಾಯುತ್ತ ಬಿದ್ದಿದ್ದಾನೆ . ಆಗ ಅಲ್ಲಿಗೆ ಅವನ ಚಿಕ್ಕ ಮಗ ಬರುತ್ತಾನೆ. ಎಳೆಯ ವಯಸ್ಸಿನ ಆ ಮಗು ಅಭ್ಯಾಸದಂತೆ ಅವನ ತೊಡೆಯ ಮೇಲೆ ಕೂತುಕೊಳ್ಳಲು ಹೋಗುವದು . ಆಗ ದುರ್ಯೋಧನನು ಅವನಿಗೆ ’ ಈ ಜಾಗ ಇನ್ನು ಮುಂದೆ ನಿನಗೆ ಇಲ್ಲದಂತಾಗುವದು ’ ಎನ್ನುತ್ತಾನೆ . ಈ ಮಾತಿನ ಮರ್ಮವನ್ನು ಅರಿಯದ ಮಗು ಯಾಕೆಂದು ಕೇಳಿದಾಗ ’ನಾನು ಬಹಳ ದೂರ ಹೋಗುತ್ತಿದ್ದೇನೆ’ ಎನ್ನುತ್ತಾನೆ . ಮಗು ಸಹಜವಾಗಿ ’ ನಾನೂ ಬರುತ್ತೇನೆ ’ ಎನ್ನುವದು . ಆಗ ದುರ್ಯೋಧನನು ’ನಿಮ್ಮ ಚಿಕ್ಕಪ್ಪನನ್ನು ಕೇಳು ; ಅವನು ನಿನ್ನನ್ನೂ ಅಲ್ಲಿಗೆ ಕಳಿಸಿಯಾನು ’ ಎನ್ನುತ್ತಾನೆ . ( ಭೀಮ ಆ ಮಗುವಿಗೆ ಚಿಕ್ಕಪ್ಪ)
ಇದು ಭಾಸನ ಊರುಭಂಗದಲ್ಲೋ , ರನ್ನನ ಗದಾಯುದ್ಧದಲ್ಲೋ , ಅಥವಾ ಎರಡೂ ಕಡೆಗಳಲ್ಲಿ ಬಂದಿದೆ.

- shreekant.mishrikoti ರವರ ಬ್ಲಾಗ್
- Login or register to post comments
- 388 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ
ರೀ ಇದು ಶ್ಲೇಷಾಲಂಕಾರ ಅಲ್ವಾ!!
ಭಾಸ ರನ್ನ ಇಬ್ರೂ ಸಕ್ಕತ್!
ನನ್ನಿ!
ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ
ಭಾಸನ ಊರುಭಂಗದ ಎಸ್.ವಿ.ಪರಮೇಶ್ವರ ಭಟ್ಟರ ಕನ್ನಡ ರೂಪ ಹಿಂದೆ ಓದಿದ್ದೆ.
ಇಲ್ಲಿ ತೊಡೆ ಮುರಿದಿದ್ದು ಬೇರೆ ಬೇರೆ ಅರ್ಥಗಳನ್ನು ಹೊಳೆಸುತ್ತದೆ ಅಂತ ನೆನಪು. ಪ್ರೀತಿಯ ಮಗನನ್ನು ಕೂರಿಸಿಕೊಳ್ಳಲು ಆಗುವುದಿಲ್ಲ, ಮಗನ ಭವಿಷ್ಯದ ಪಟ್ಟ ಭಂಗವಾಗಿದೆ ಮತ್ತು ತನ್ನ ಚಕ್ರಾಧಿಪತ್ಯ/ರಾಜ್ಯ ಮುರಿದಿದೆ ಎಂದೆಲ್ಲಾ ಧ್ವನಿಸುತ್ತದೆ ಅಲ್ಲವೆ? ಆ ಅರ್ಥ ಬರುವ ಒಂದು ಸಾಲು ಇತ್ತೆಂದು ನೆನಪು.
ಊರುಭಂಗವಂತೂ ಇವತ್ತಿಗೂ ರೆಲೆವಂಟಾಗುವಂತೆ ಆಡಬಹುದು ಅಂತ ನನಗೆ ಆಗಾಗ ಅನಿಸುತ್ತದೆ. ಯುದ್ಧದ ದಾರುಣತೆಯ ಬಗ್ಗೆ ದುರ್ಯೋಧನನೂ ದುಃಖಪಡುತ್ತಾನೆ ಕೊನೆಯಲ್ಲಿ!
ಇವೆಲ್ಲಾ ನೆನಪಿಸಿದ್ದಕ್ಕೆ ಥ್ಯಾಂಕ್ಯು ಮಿಶ್ರಿಕೋಟಿಯವರೆ.
ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ
"ಊರುಭಂಗವಂತೂ ಇವತ್ತಿಗೂ ರೆಲೆವಂಟಾಗುವಂತೆ ಆಡಬಹುದು ಅಂತ ನನಗೆ ಆಗಾಗ ಅನಿಸುತ್ತದೆ. ಯುದ್ಧದ ದಾರುಣತೆಯ ಬಗ್ಗೆ ದುರ್ಯೋಧನನೂ ದುಃಖಪಡುತ್ತಾನೆ ಕೊನೆಯಲ್ಲಿ!"
ಮುಂದಿನ ಸರದಿ ಊರುಭಂಗಕ್ಕಾ?
ನಾನೆಲ್ಲೋ ಈ 'ಗೃಹಭಂಗ' ಇದೆಯಲ್ಲ ಹಾಗೆ '.ಊರು.ಭಂಗ' ಅಂತ ಹೊಸ ಇದೆ ಅಂದುಕೊಂಡಿದ್ದೆಂ.
ಈ ಊರು ಉಡು ಕೆಳಗಿನ, ತೊಡೆ!!
ಒಟ್ಟಿನಲ್ಲಿ ಅಲ್ಲೂ ತೊಡೆಮುರಿತವೋ, ಊರುಹಾಳೋ ಎರಡು ಹೊಂದುವುದು!!
ಮಾಬಾರತದ ಬವರದಿಂದ ಬಿದ್ದವರೂ, ಗೆದ್ದವರೂ ಇಬ್ರೂ ಎಕ್ಕುಟ್ಟು ಹೋದ್ರು! ಅವರ ಜೊತೆ, ಆ ನೆಲವೂ ಎಕ್ಕುಟ್ಟೇ ಹೋಯ್ತು!
ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ
ಪ೦ಪ ವಿಕ್ರಾಮಾರ್ಜುನನಿಗೆ ಪಟ್ಟ ಕಟ್ಟುವ ಅವಸರದಲ್ಲಿ, ದುರ್ಯೋಧನನ್ನು ಹೊಡೆದು ಉರುಳಿಸಿ ಅಲ್ಲಿಯೇ ಮರೆತು ಹೋಗಿದ್ದಾನೆ.
ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ
ಹತ್ತನೆಯ ತರಗತಿಗಿರುವ "ಕುರುಕುಲಾರ್ಕನುಂ ಅರ್ಕನುಂ ಅಸ್ತಂ ಗೆಯ್ದಿದರ್" ಗದ್ಯ ನೆನಪಾಗುತ್ತದೆ.
ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ
ಸಂಗನ
ಅದು ನಮಗೆ ಇತ್ತು..
ಕುರುಕುಲಾರ್ಕನುಮರ್ಕನುಮಸ್ತಮೇಯ್ದಿದರ್..!!
ನಿಬಿಡವೂರುಮಂಡಲಮಾರುಡಿದರ್ ಫಣಿರಾಜಕೇತನಾ!! ಹೀಗೆ ಅಶ್ವತ್ಥಾಮ ಕೇಳ್ತಾನೆ! ಅಲ್ವಾ!
ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ
ಹತ್ತನೆ ತರಗತಿಯ ಗದ್ಯಗಳು ತುಂಬಾ ಚೆನ್ನಾಗಿದ್ದವು, ಈಗ ಎಲ್ಲಾ ಮರೆತು ಹೋಗಿದೆ, ಏನು ಆ ಸಾಲಿನ ತಿಳಿವು?
ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ
ಕುರುಕುಲಾರ್ಕನುಂ = ಕುರುಕುಲದ ಅರ್ಕನು = ಕುರುಕುಲದ ನೇಸರುನು
ಅರ್ಕನುಂ = ನೇಸರು = ದಿಟದ ನೇಸರನು
ಅಸ್ತಂ = ಮುಳುಗನ್ನು, ಪಡುವನ್ನು
ಎಯ್ದಿದರ್ = ಹೊಂದಿದರು? ( ಮರೆತು ಹೋಗಿದೆ )
ನಿಬಿಡೂರುಮಂಡಲ = ನಿಬಿಡವಾದ/ಒತ್ತೊತ್ತಾಧ ಊರುಮಂಡಲ/ತೊಡೆಗುಂಪು
)
ಆರು =ಯಾರು
ಉಡಿದರ್ = ಒಡೆದರ್( ಉಡಾಯಿಸು!
ಉ: ಮಹಾಭಾರತದ ಕೊನೆಯಲ್ಲೊಂದು ಕರುಣರಸದ ಪ್ರಸಂಗ
ಸಂಗನಗೌಡರೆ,
"ಕುರುಕುಲಾರ್ಕನುಂ" ಗದ್ಯದ ಸಾಲಾದರೂ, ಅದು ಬರುವುದು ಗದ್ಯ-ಪದ್ಯ ಮಿಶ್ರಿತ ಚಂಪೂ ಕಾವ್ಯ ಅಂತ ಹೇಳೋ ಒಂದು ಪ್ರಕಾರದಲ್ಲಿ. ಅಂದರೆ ಗದ್ಯದಲ್ಲೂ, ಪದ್ಯದಲ್ಲೂ ಎರಡರಲ್ಲೂ "ಕಾವ್ಯ" ಇರುತ್ತದೆ.