ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಇಲ್ಲೊಂದು ಕಲ್ಲುಸಕ್ಕರೆ -

July 28, 2006 - 12:34pm — shreekant.mishrikoti

ನಮ್ಮ ಓದು ಹೆಚ್ಚಿದಂತೆ , ನಮ್ಮ ತಿಳಿವಳಿಕೆಯೂ , ಅದರಿಂದ ಸಿಗುವ ಸಂತೋಷವೂ ಹೆಚ್ಚುತ್ತದೆ. ಬಹುಶ್ರುತರಾಗುವುದರ ಲಾಭ ಅದು . ( ನಾನು ಈ ಭಾಷೆಯ ಚಿತ್ರ ನೋಡುವದಿಲ್ಲ , ಈ ಕುರಿತು ತಿಳಿದುಕೊಳ್ಳಲೊಲ್ಲೆ ಎಂದರೆ ನಷ್ಟ ಯಾರಿಗೆ ? ನಮಗೇ ತಾನೆ?)
ಇತ್ತೀಚೆಗೆ ಒಂದು ಲೇಖನ ನೋಡಿದೆ . ಬಹಳ ಚೆನ್ನಾಗಿದೆ. ಮತ್ತು ಈ ವಿಷಯವನ್ನು ಸ್ಪಷ್ಟಪಡಿಸುತ್ತದೆ. ಅದರ ಕೆಲ ಭಾಗ ಇಲ್ಲಿದೆ.

" ನಮ್ಮೂರ ಜನ ಬಹಿರ್ದೆಸೆಗಾಗಿಹೊಳೆಯ ತೀರದಲ್ಲಿ ದಾಂಗುಡಿ ಇಡಲು ನಡುಹಾದಿಯಲ್ಲೇ ಪಂಚೆ ಎತ್ತಿಕಟ್ಟುವದು ದೇವದೇವತೆಗಳು ಅಂಬರದಲ್ಲಿ ನಿಂತು ನೋಡಬಯಸುವ ನಯನಮನೋಹರ ದೃಶ್ಯ. ( ದೃಶ್ಯತೇ ವ್ಯೋಮ್ನಿ ದೇವೈಃ ಎನ್ನುವುದು ಇದೇಯೇ) ಒಂದೂರ ಮಲವನ್ನು ಮತ್ತೊಂದೂರಿನ ಸರಹದ್ದಿನಲ್ಲಿ ಗುಡ್ಡೆ ಹಾಕುವುದೇ ತಾನೇ ನಗರ ನೈರ್ಮಲ್ಯ ಎಂದರೆ. ) ....
.... ಸರ್ಕಾರಿ ನಿಗಮಗಳಲ್ಲಿ ಅಧ್ಯಕ್ಷ್ಯಪೀಠದಿಂದ ವಂಚಿತರಾದ ಹತಾಶ ಎಮ್ಮೆಲ್ಲೆಗಳಿಗೆ ಬೇಲಿ ಹಾರುವದನ್ನು ಕಲಿಸಲಿಕ್ಕೆಂದೇ ಬೊಮ್ಮ ಕಡೆದ ನೋಟ ಇದು . .. ತೋಟದ ಮಾಲೀಕರು ಬ್ರಿಟಿಷರ ಕಾಲದಲ್ಲೊಂದು ಫಲಕವನ್ನು ಪ್ರಾಕೃತದಲ್ಲಿ ಬರೆಯಿಸಿ ಭರ್ಜರಿ ಮರವೊಂದರ ಕಾಂಡಕ್ಕೆ ನೇತು ಹಾಕಿದ್ದರು. " ಹಿಲ್ಲಿ ಅಣ್ಣು ಕದಿಯೋ ಅಲಾಲ್ಕೋರರ ಮ್ಯಾಲೆ ನಮ್ಮ ಸಿವಾ ಮುಡಿಗುಂಡೇಸನಾಣೆ" ಆ ಫಲಕ ನೆಲ ಕಚ್ಚಿದ್ದೂ ಸಿವನಿಚ್ಚೆಯೇ. ... ಅಕೋ ಮಾಗಿದ ಹಣ್ಣಿನ ಘಮಘಮ ಮಂದಿಯ ಮೂಗರಳಿಸುತ್ತಿತ್ತು. ಏನೇ ಹೇಳಿ ತೋಟದಿಂದ ಕದ್ದು ತಂದ ಮಾವು . ತೋಟದೊಳಗೆ ಕದ್ದೊಯ್ದು ಮುದ್ದಿಸಿದ ಹುಡುಗಿ ( ತೋಟವಿಲ್ಲದೆಡೆ ರಿಸಾರ್ಟ್ ಆದರೂ ನಡೆದೀತು) ಮುಡಿಯಿಂದ ನಡುವಿನವರೆಗೂ ಸಿಹಿಯೇ ಸಿಹಿ. ... "ರಸೋವೈಸಃ" ಎನ್ನುವುದು ಇದೇನೇ? ಆದರೆ ಇಲ್ಲಿ "ಸಃ" ಎನ್ನುವ ಪುಲ್ಲಿಂಗ ಪ್ರಯೋಗವೇಕೆ? ಇದು ಸ್ತ್ರೀವಾದಿ ಮಹಿಳಾಲೇಖಕಿಯರು ಚರ್ಚಿಸಬೇಕಾದ ವಿಷಯ.

"ಏನು ತಡಕ್ತೀರಿ ಯಜಮಾನ್ರೇ?" ಹಣ್ಣಿನ ವ್ಯಾಪಾರಿ ಕೇಳಿದ.
" ತಡಕ್ತಿಲ್ಲ ಹುಡುಕ್ತಿದೀನಿ" ( ಎರಡಕ್ಕೂ ಸೂಕ್ಷ್ಮ ಅಂತರವಿದೆ. ಬಿಗ್‍ಬಜಾರಿನಲ್ಲಿ ಕಳೆದು ಹೋದ ಹೆಂಡತಿಯನ್ನು ಹುಡುಕುವದೇ ಬೇರೆ. ಬೇಕೆಂತಲೇ ಮ್ಯಾಟಿನಿಗೆ ತಡವಾಗಿ ಬಂದು ಕತ್ತಲಲ್ಲಿ ಸೀಟು ಹುಡುಕುವ ನೆಪಮಾಡಿ ಕಂಡವರ ಮೈ ತಡವಿದರೆ ಅದು ತಡಕೋದು. )
"ಓ ತಿಳೀತು ಬುಡಿ. .ರಸಪೂರಿ! ಅದು ನಮ್ಮಪ್ಪನ ಕಾಲಕ್ಕೇ ಓಯಿತು. ಈಗ ಬೇನಿಶಾ ಐತೆ ಬೇಕಾ?"
ಬರೇ ಬೇನಿಶಾ ಏನು ... ಬೇಡದ್ದು ಸಾವಿರ ಇದೆ ' ಇರುವುದೆಲ್ಲವ ಬಿಟ್ಟು ಇರದಿರುವುದೆಡೆಗೆ ನಡೆವುದೇ ಬದುಕು'. ಅಡಿಗರು ಎಂದು ಮಾವಿನ ಮಂಡಿಗೆ ಕಾಲಿಟ್ಟರು?

.... ಬೆಳೆಯುವ ನಗರಕ್ಕೆ ಇದೆಲ್ಲ ಬೇಕು - ಹೃದ್ರೋಗಿ ಆಸ್ಪತ್ರೆ , ಹುಚ್ಚಾಸ್ಪತ್ರೆ , ಜೈಲು, ರೇಸ್‍ಕೋರ್ಸು , ವಿಧಾನಸೌಧ ..ಅದರೆ ಇವು ಒಂದು ಸೀಕ್ವೆನ್ಸ್‍ನಲ್ಲಿ ಇಲ್ಲವೆಂಬುದೇ ಒಂದು ಕೊರತೆ. ... ಹಿರೇಮಗಳೂರು ಕಣ್ಣನ್‍ಗೂ ಇದೇ ಚಿಂತೆ. ಇತ್ತ ದತ್ತ , ಅತ್ತ ಹುತ್ತ , ನಡುವೆ ಚಿತ್ತ , ಹೋಗಲೆತ್ತ ?

"ಹತ್ರೀ ಸರ , ನಿಮ್ ಸಲುವಾಗಿ ಬಸ್ ನಿಂತು ತಾಸಾತು. " ಬೆಳಗಾವಿ ಮೂಲದ , ಬಸ್ ನಿರ್ವಾಹಕ ಉಗ್ರಪ್ಪ ಶಾಣಪ್ಪ ಉಳ್ಳಾಗಡ್ಡಿ ತಡೆರಹಿತವಾಗಿ ಬಡಬಡಿಸಿದ.
... ಈ ಬಸ್ಸಿನ ಸ್ವಯಂಚಾಲಿತ ಬಾಗಿಲಿಗೆ ಗುರಪ್ಪನಪಾಳ್ಯದಲ್ಲಿ ಸ್ವಿಚ್ ಒತ್ತಿದರೆ ಬಳ್ಳೇಕಹಳ್ಳಿಯಲ್ಲಿ ಬೇಡವಾದಾಗ ತೆರೆದುಕೊಳ್ಳುತ್ತದೆ , ಒಲ್ಲದ ಮಡದಿ ಅಪರಾತ್ರಿಯಲ್ಲಿ ಒಲಿವಂತೆ.

" ಸರ , ಈ ಜೋಕು ಕೇಳೀರೇನು ? ತಾಜಮಹಲ ಬನಾನೇಕಾ ಶೌಕ್ ಹೈ ಮಗರ್ ಮಮ್ತಾಜ್ ಅಭೀ ತಕ ನಹೀ ಮಿಲಿ ' ಉಳ್ಳಾಗಡ್ಡಿ ಉಸುರಿದ. " ಅದು ಕ್ರೌರ್ಯ . ಮಡದಿ ಮುರ್ದಾ ಆಗಿ ಮಲಗಿದ ಮೇಲೆ ಮಹಲ್ ಕಟ್ಟಿದರೇನು . ಮಲ್ಲಿಗೆ ಗಿಡ ಹಾಕಿದರೇನು. ಪ್ರೇತವನದೊಳು ಬೆಳೆದ ಹೂ ಆರ ಮುಡಿಹಕ್ಕೆ ಯೋಗ್ಯಂ? ( ನಾನು ರಾಘವಾಂಕನನ್ನು ಓದಿಕೊಂಡಿದ್ದೇನೆಂದು ತೋರ್ಪಡಿಸಲು ಇದಕ್ಕಿಂತ ಬೇರೆ ತಾಣ ಬೇಕೆ?)

ಹೀಗೆ ಶ್ರೀ ಸಿ. ಎನ್, ಕೃಷ್ಣಮಾಚಾರ್ ಅವರು ಬರೆದ ಹಾಸ್ಯ ಲೇಖನ ಮುಂದುವರೆಯುತ್ತದೆ. ಅಲ್ಲಿ ಹಳೆಗನ್ನಡವೂ ಸಂಸ್ಕೃತವೂ ಇನ್ನಿತರ ಭಾಷೆಗಳೂ ಅನೇಕ ವಿಷಯಗಳೂ ಸೇರಿಕೊಂಡಿವೆ. ತುಂಬ ಚೆನ್ನಾಗಿ ಬರೆದಿದ್ದಾರೆ . ನನಗೆ ಬಹಳ ಮೆಚ್ಚಿಕೆಯಾದ ಲೇಖನ ಇದು . ಕತ್ತರಿಸಿ ಇಟ್ಟುಕೊಂಡಿದ್ದೇನೆ. ನೀವು ಇದನ್ನು ಓದಿದ್ದೀರಾ ? ಮುಂದೆ ಓದಬೇಕೆನ್ನಿಸುವದೇ ತಿಳಿಸಿ . ಅಂದರೆ ಅದನ್ನೂ ನಿಮಗಾಗಿ ಅಚ್ಚಿಸುವೆ.

ಶ್ರೀ ಅ. ರಾ. ಸೇ ಅವರೂ ಹೀಗೆಯೇ ಬಹಳ ಚೆನ್ನಾಗಿ ಬರೆಯುತ್ತಿದ್ದರು ಅವರ ಸಂಕಲನಗಳು ಬಂದ ಹಾಗಿಲ್ಲ . ಅವರ ಬಿಡಿ ಲೇಖನಗಳನ್ನೂ ಕತ್ತರಿಸಿ ಇಟ್ಟುಕೊಂಡು ಆಗಾಗ್ಗೆ ಓದಿ ಸಂತೋಷಪಡುವದಿದೆ.

ಶ್ರೀ ಸಿ. ಎನ್, ಕೃಷ್ಣಮಾಚಾರ್ ಅವರು ಮತ್ತೆ ಏನು ಎಲ್ಲಿ ಬರೆದಿದ್ದಾರೆ? ನನಗೆ ಗೊತ್ತಿಲ್ಲ . ನಿಮಗೆ ಗೊತ್ತಿದ್ದರೆ ದಯಮಾಡಿ ತಿಳಿಸಿ.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 372 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಲ್ಲುಸಕ್ಕರೆ ಸವಿ ಬಲ್ಲವರೇ ಬಲ್ಲರು ?
  • ಸುಧಾ ಹಾಸ್ಯ ವಿಶೇಷಾಂಕ (ಏಪ್ರಿಲ್ ೬ ರ ಸಂಚಿಕೆ )
  • ಸಾವಿರ ಪಾಯಿಂಟ್ ಸರದಾರ ! (- ಇದು Vote of thanks ಅಲ್ಲ!)
  • ಮರೆವೆನೆಂತು ಅ.ರಾ.ಸೇ. ಅವರ ಹಾಸ್ಯವನು ?
  • ಸಂಪದ ಬಗ್ಗೆ ಸುಧಾದಲ್ಲಿ ನನ್ನ ಲೇಖನ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator