ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಕನ್ನಡ ದ್ರಾವಿಡ ಭಾಷೆಯಲ್ಲ ; ಕನ್ನಡಿಗರು ದ್ರಾವಿಡರಲ್ಲ.

August 28, 2006 - 11:48am — shreekant.mishrikoti

ಈ ತಲೆಬರಹದ ಬರಹವು ('ಶೀರ್ಷಿಕೆ'ಗೆ ಬದಲಾಗಿ 'ತಲೆಬರಹ', 'ಲೇಖನ'ದ ಬದಲಾಗಿ 'ಬರಹ' ಬಳಸಿದ್ದೇನೆ- 'ಉಪಯೋಗಿ'ಸಿಲ್ಲ . ಇಂದಿನ ಆಂಡಯ್ಯಗೆ ಧನ್ಯವಾದಗಳು. ಈ 'ತಲೆಬರಹದ ಬರಹ ' ಎಂಬುದು ವಿಚಿತ್ರವಾಗಿ ಕಾಣಿಸುವದು ಅಲ್ಲವೇ ? 'ತಲೆಕಟ್ಟಿನ' ಎನ್ನಬೇಕಿತ್ತೇನೋ . ಇರಲಿ ) ನಿನ್ನೆಯ ಪ್ರಜಾವಾಣಿ (೨೭-೮-೦೬) ನಲ್ಲಿದೆ . ಓದಿ. ಅಲ್ಲಿ ಹೇಳಿರುವದೇನೆಂದರೆ - ಕನ್ನಡಿಗರು ಯಾವತ್ತೂ ದ್ರಾವಿಡರೊಂದಿಗೆ , ದ್ರಾವಿಡ ಭಾಷೆಯೊಂದಿಗೆ ಗುರುತಿಸಿಕೊಂಡಿಲ್ಲ . ಮತ್ತು ಕಾಲ್ಡ್ ವೆಲ್ ಮಹಾಶಯನು ಕನ್ನಡ ತೆಲುಗು ಮತ್ತು ಕೆಲವು ವಾಯುವ್ಯ ಭಾರತದ ಭಾಷೆಗಳನ್ನು ಒಂದು ವರ್ಗವನ್ನಾಗಿಸಿ ಅದಕ್ಕೆ 'ದ್ರಾವಿಡಿಯನ್' ಎಂಬ ಹೆಸರಿಟ್ಟಿದ್ದಾನೆ ಅಷ್ಟೇ)

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 1688 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 28, 2006 - 4:07pm — ಸಂಗನಗೌಡ

ಅಪ್ಪ, ಅಣ್ಣ

ಸಂಗನಗೌಡ's picture

ತಮಿಳರು ತಮ್ಮ ಹೆಸರಿನ ಕೊನೆಗೆ 'ನ್' ಸೇರಿಸಿಕೊಂಡು ತಮ್ಮತನ ಮೆರೆಯುತ್ತಾರೆ, ಹಾಗೆ ತೆಲುಗರು 'ಬಾಬು' ಸೇರಿಸಿಕೊಳ್ಳುತ್ತಾರೆ, ಆದರೆ 'ಅಪ್ಪ', 'ಅಣ್ಣ' ಸೇರಿಸಿಕೊಳ್ಳಲು ನಮಗೆ ಮೈಯೆಲ್ಲ ಮುಳ್ಳು. ಕನ್ನಡಿಗರ ಹೆಸರುಗಳಿಗೂ ತೆಂಕಣ ಬಾರತದ ಹೆಸರುಗಳಿಗೂ ಬದಲಾವಣೆಯೇ ಕಾಣದು. ನಾವು ನಮ್ಮತನವನ್ನು ಹುಡುಕಿಕೊಳ್ಳುವ ಕಾಲ ಬಂದಿದೆ. ನಾವು ನಮ್ಮತನವನ್ನು ಗುರುತಿಸಕೊಳ್ಳಬೇಕಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2006 - 5:26pm — ರಘುನಂದನ

ನ್ ಸೇರಿಸಿಕೊಂಡರೆ ತಮಿಳಿರವನು :P

ರಘುನಂದನ's picture

ಗೌಡ್ರು wrote:
ತಮಿಳರು ತಮ್ಮ ಹೆಸರಿನ ಕೊನೆಗೆ 'ನ್' ಸೇರಿಸಿಕೊಂಡು ತಮ್ಮತನ ಮೆರೆಯುತ್ತಾರ

ರಘುನಂದನ ಎನ್ನುವ ನನ್ನ ಹೆಸರನ್ನು ರಘುನಂದನ್ ಎಂದು ತಾವೇ ಮಾಡಿಕೊಂಡು ನೀನು ತಮಿಳ್ರೋನು, ಕೊಂಗ ಎಂದೆಲ್ಲ ಕಿರಿಕಿರಿ ಮಾಡಿದ ಸಂದರ್ಭಗಳು ಹಲವಾರು ಬಾರಿ ನನಗೆ ಎದುರಾಗಿವೆ. ಇಲ್ರಪ್ಪ ನಾನು ಉತ್ತರ ಕರ್ನಾಟಕದ ಭಕ್ರಿ ತಿನ್ನೋನು ಎಂದರೂ ಕೇಳದೆ "ಮತ್ತೆ ನಿನ್ನ ಹೆಸರಿನ ಮುಂದೆ ಕಮಲಹಾಸನ್, ಸಿ.ವಿ ರಾಮನ್ ತರಹ 'ನ್' ಅಂತ ಯಾಕಿಟ್ಟು ಕೊಂಡಿದ್ದೀಯಾ?" ಎಂದು ಪ್ರಶ್ನಿಸಿ ಅವಿವೇವಕದ ಪರಮಾವಧಿಯನ್ನು ತೋರಿಸಿಕೊಂಡಿದ್ದಾರೆ ನನ್ನ ಸ್ನೇಹಿತರು Smiling

ಅಂದ ಹಾಗೆ ಸಂಗನಗೌಡ್ರೇ, ನಿಮ್ಮೂರು ಯಾವ್ದು? ನಿಮ್ಮ ಹೆಸರು ಮತ್ತು ಮೊದಲು ನೀವು ಹಾಕಿಕೊಂಡಿದ್ದ "ಬೆನ್ನು ತೋರಿಸ್ತಾ ನಡೆಯುವ ಗೌಡನ" ಫೋಟೋ ನೋಡಿದ್ರೆ ಉತ್ತರಕರ್ನಾಟಕ ಎನ್ನಿಸುತ್ತದೆ. ಆದರೆ ನಿಮ್ಮ ಒದ್ದಾಟ ನೋಡಿದ್ರೆ ಬೆಂಗಳೂರಿನವರು ಎನ್ನಿಸುತ್ತದೆ. (ತಮಾಶೆ ಮಾಡಿದೆ ಸ್ವಾಮಿ!)

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2006 - 9:12am — ಸಂಗನಗೌಡ

ರಾಗಣ್ಣವರೇ,

ಸಂಗನಗೌಡ's picture

ಬಡಗಣ(ಉತ್ತರ)ದ ಹಳೇ ಮುದುಕಪ್ಪನ ಮುಂದೆ ಹೋಗಿ ನಿಮ್ಮ ಹೆಸರು ಹೇಳಿ, ಅವನ ಬಾಯಾಗ ನೀವು ರಾಗಪ್ಪ ಆಗುತ್ತೀರಿ. ಪಡಿಯಪ್ಪನ್, ಮಹಾದೇವನ್ ಇವೆಲ್ಲಾ ಅಗದೀ ಅಚ್ಚ ತಮಿಳು ಹೆಸರುಗಳು. ಉತ್ತರದವನು ಅಂದಾಗ ಜನ ತೆಂಕಣದವರನ್ನು ನಾನು ಲೆಕ್ಕಕ್ಕೆ ಹಿಡಿದೇ ಹೇಳತೀನಿ ಅಂದುಕೋಬಾರದಲ್ಲ, ಅದಕ್ಕೇ ಅದನ್ನ ತಗದೀನಿ. ಅಗದೀ - ಅಂದರ ಅತ್‍ಯಂತ, ಅದನ್ನೇಕೆ ನೀವು ಬಳಸುದಿಲ್ಲ ಬರೆಯುವಾಗ? ತಮಾShe ಅಂದರ ನಗೆಚಾಟಿಕಿ. ಈಗರೆ ಗೊತ್ತಾತೇನರೀ ರಾಗಣ್ಣ, ನಾ ಯಾಕಣ್ಣಾ ಹಿಂಗ್ ಹೇಳುದಂತ. ನೀ ಹೇಳುದ ಸುಳ್ಳ್  ಅನ್ನು ಹತ್ತ ಮಂದಿ(ಸಕ್ಕದದ ಜನ್) ಒಳಗ ನಂದ ಒದ್ದಾಟದಂಗ ಕಂಡರ ಅದಕ್ಕ್ ನಾ ಯೇನ್ ಮಾಡಲಿ? ನಿಮ್ಮ ಕತ್ತಿ ನೀವ್ ಹೊಡಿರಿ, ನಾ ತೆಲಿ ಕೆಡಿಸಿಕೊಳ್ಳುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2006 - 5:24pm — ಸಂಗನಗೌಡ

;P

ಸಂಗನಗೌಡ's picture

ನಿಮ್ಮ ಕತ್ತೆ ನೀವು ಹೊಡಿರಿ ಅಂದರೆ, ನಿಮ್ಮ ದಾರಿಯಲ್ಲೇ ನೀವು ಸಾಗಿಯೆಂದು, ಇನ್ನೇನನ್ನೋ ತಿಳಿದುಕೊಳ್ಳಬಾರದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2006 - 10:01pm — ರಘುನಂದನ

:P

ರಘುನಂದನ's picture

ಅಗ್ಲೇಳ್ರಿ. ಹಂಗ ಮಾಡಮಂತ. ನಮಗರ ಇನ್ನೇನೈತ್ಮಾಡದು?

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 10:22am — kannadakanda

ಉ: :P

kannadakanda's picture

ಸಂಗನಗೌಡರೇ ಗಮನಿಸಿ. ಹಾಂಗ ಹಂಗ ಅಂತ ಬೞಸುವವರು ಉತ್ತರ ಕರ್ಣಾಟಕದ ಜನರು. ಅಂದರೆ ಅನುಸ್ವಾರ ಬೞಕೆ ತಮಿೞರಷ್ಟೆ ಅಲ್ಲ. ಕನ್ನಡದಲ್ಲೂ ಇದೆಯೆನ್ನುವುದಕ್ಕೆ ಇದೇ ಸಾಕ್ಷಿ. ’ಹಾಂಗ’ ಈ ಶಬ್ದ ಹೞಗನ್ನಡದ ’ಪಾಂಗು= ರೀತಿ’ ಯಿಂದ ಬಂದದ್ದು. ಈ ಪಾಂಗು, ಈ ಹಾಂಗು ಆಗಿ ಹೀಂಗು ಆಗಿ ಹೀಗು -> ಹೀಗೆ ಆಗಿದೆ. ಈ ಅನುನಾಸಿಕ/ಅನುಸ್ವಾರ ಹಾಗೆ ಉೞಿದಿದೆ. ಹಾಗಾಗಿ ಕನ್ನಡಗರಿಗೆ ಅಕಾರಾಂತವಾದ ರಾಮ, ಕೃಷ್ಣ ನಿಜವಾಗಿ ರಾಮಂ(ನ್), ಕೃಷ್ಣಂ(ನ್), ಅವಂ(ನ್) ಬಂದಂ(ನ್). ಈ ’ನ್’ ವನ್ನು ಸ್ವಲ್ಪ ಮೆದುವಾಗಿ ಉಚ್ಚರಿಸಬೇಕು. ಹಾಗಾಗಿ ಅಕಾರಾಂತದ ಕೊನೆಯ ’ನ್’ ಬಱಿ ತಮಿೞ್‍ ಹಾಗೂ ಮಲಯಾಳಂಗೇ ಮೀಸಲೆಂದು ಭಾವಿಸಬೇಡಿ. ಅದು ಕನ್ನಡದಲ್ಲೂ ಇದೆ. ಹೊಸಗನ್ನದದಲ್ಲಿ ನಾವು ರಾಮನು, ಕೃಷ್ಣನು, ಅವನು (ಉಕಾರ ಬೆರಸಿದ ನಕಾರ ಬೞಸುತ್ತೇವಷ್ಟೇ).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 6:01pm — ಸಂಗನಗೌಡ

ಉ: :P

ಸಂಗನಗೌಡ's picture

ಒಪ್ಪಿದೆ ಅನಂತರೆ... ಕನ್ನಡ ಹೊತ್ತು ಹೊತ್ತಿಗೆ ಹೊಸ ಹೊಸ ಹೊಳಪನ್ನು ಪಡೆದುಕೊಳ್ಳುತ್ತ, ಹೊಸ ಹೊಸ ಒರೆಗಳನ್ನು ಸೇರಿಸಿಕೊಳ್ಳುತ್ತ, ಹಳೆಯದು ತಾನಲ್ಲವೇನೋ ಎಂಬನಿತು ಬೇರೆಯಾಗುತ್ತ ನಡೆದಿದೆ,... ಇದು ಬೇಕಿದೆ ಕೂಡ.... ಅವನ್ - ಅವನು, ಇವನ್ - ಇವನು ಆಗಿದೆ.. ನಮ್ ಕಡೆ ಅವನ್ ಅನ್ನುವಾಗ ’ವ’ವನ್ನು ಮೂಗಿನಲ್ಲಿ ಹೇಳುತ್ತೇವೆ,.. ಅಂದರೆ "ಅವನ್ ಇಂದ ಅವನು" ಆಗಿರುವದನ್ನು ನಾವು ಒಪ್ಪಿಲ್ಲ(ಬರವಣಿಗೆಯಲ್ಲಿ ಆಗಿದೆಯಾದರೂ).... "ಅವನು" ಅಂತ ಮಾತಿನಲ್ಲಿ ಅಪ್ಪಿ ತಪ್ಪಿಯೂ ಅನ್ನುದಿಲ್ಲ.. ’ಅವನೂ’ ಅನ್ನುವಲ್ಲನಿತೇ ಅದು ಬರುವದು,..

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 10:22am — kannadakanda

ಉ: :P

kannadakanda's picture

ಸಂಗನಗೌಡರೇ ಗಮನಿಸಿ. ಹಾಂಗ ಹಂಗ ಅಂತ ಬೞಸುವವರು ಉತ್ತರ ಕರ್ಣಾಟಕದ ಜನರು. ಅಂದರೆ ಅನುಸ್ವಾರ ಬೞಕೆ ತಮಿೞರಷ್ಟೆ ಅಲ್ಲ. ಕನ್ನಡದಲ್ಲೂ ಇದೆಯೆನ್ನುವುದಕ್ಕೆ ಇದೇ ಸಾಕ್ಷಿ. ’ಹಾಂಗ’ ಈ ಶಬ್ದ ಹೞಗನ್ನಡದ ’ಪಾಂಗು= ರೀತಿ’ ಯಿಂದ ಬಂದದ್ದು. ಈ ಪಾಂಗು, ಈ ಹಾಂಗು ಆಗಿ ಹೀಂಗು ಆಗಿ ಹೀಗು -> ಹೀಗೆ ಆಗಿದೆ. ಈ ಅನುನಾಸಿಕ/ಅನುಸ್ವಾರ ಹಾಗೆ ಉೞಿದಿದೆ. ಹಾಗಾಗಿ ಕನ್ನಡಗರಿಗೆ ಅಕಾರಾಂತವಾದ ರಾಮ, ಕೃಷ್ಣ ನಿಜವಾಗಿ ರಾಮಂ(ನ್), ಕೃಷ್ಣಂ(ನ್), ಅವಂ(ನ್) ಬಂದಂ(ನ್). ಈ ’ನ್’ ವನ್ನು ಸ್ವಲ್ಪ ಮೆದುವಾಗಿ ಉಚ್ಚರಿಸಬೇಕು. ಹಾಗಾಗಿ ಅಕಾರಾಂತದ ಕೊನೆಯ ’ನ್’ ಬಱಿ ತಮಿೞ್‍ ಹಾಗೂ ಮಲಯಾಳಂಗೇ ಮೀಸಲೆಂದು ಭಾವಿಸಬೇಡಿ. ಅದು ಕನ್ನಡದಲ್ಲೂ ಇದೆ. ಹೊಸಗನ್ನದದಲ್ಲಿ ನಾವು ರಾಮನು, ಕೃಷ್ಣನು, ಅವನು (ಉಕಾರ ಬೆರಸಿದ ನಕಾರ ಬೞಸುತ್ತೇವಷ್ಟೇ).

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2006 - 8:35am — ಸಂಗನಗೌಡ

ಪೇಟ ಸುತ್ತಿದರೆ ಗೌಡ?

ಸಂಗನಗೌಡ's picture

Quote:

ರಾಗಣ್ಣ ಬರೆದಿದ್ದು:

"ಬೆನ್ನು ತೋರಿಸ್ತಾ ನಡೆಯುವ ಗೌಡನ" ಫೋಟೋ ನೋಡಿದ್ರೆ ಉತ್ತರಕರ್ನಾಟಕ ಎನ್ನಿಸುತ್ತದೆ.

ಬಡಗಣ(ಉತ್ತರ)ದಲ್ಲಿ ತುಸು ಹಿರಿಯರಾದವರು ಪೇಟ ಸುತ್ತುತ್ತಾರೆ. ಸಿಶುನಾಳ ಶರೀಪಜ್ಜರೂ ಸುತ್ತುತ್ತಿದ್ದರು, ಅದು ಹಿರಿತನವನ್ನು ಎತ್ತಿ ತೋರುತ್ತದೆ, ಅದಕ್ಕೊಂದು ಮೆರುಗು ನೀಡುತ್ತದೆ. ಅಂತವರ ನೆರಳು ನನ್ನಂತ ಕಿರಿಯರ ಮೇಲಿರಲಿ ಎಂದು ನಾನು ಹಾಕಿಕೊಂಡಿದ್ದಿದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2008 - 2:51pm — kannadakanda

ಉ: ಅಪ್ಪ, ಅಣ್ಣ

kannadakanda's picture

ತಮಿೞರು ಮತ್ತು ಮಲಯಾಳಿಗಳು ಮಾತ್ರ ’ನ್’ ಸೇರಿಸಿಕೊಂಡು ತಮ್ಮತನ ಮೆಱೆಯುತ್ತಾರೆಂದು ಭಾವಿಸುವುದು ತಪ್ಪು. ಹೞಗನ್ನಡ ಹಾಗೂ ಈಗಿನ ಕೆಲವು ಕನ್ನಡ ಮಾತನಡುವ ಪಂಗಡಗಳಲ್ಲಿ ’ನ್’ (ಮೂಗಿನಲ್ಲಿ ಸ್ವರ ಬಿಡುವುದು) ಉಚ್ಚಾರ ಇದೆ. ಅವಂ ಬಂದಂ. ಎಂದೇ ಉಚ್ಚರಿಸುತ್ತಾರೆ. ಅಕಾರಾಂತವಾದ ಪುಲ್ಲಿಂಗಕ್ಕೆ ’ನ್’ ಹಾಗೂ ನಪುಂಸಕಲಿಂಗಕ್ಕೆ ’ಮ್’ ಸೆರಿಸಬೇಕೇಂಬುದು ತಮಿೞ್, ಕನ್ನಡ ಹಾಗೂ ಮಲಯಾಳಂ ನಿಯಮ. ತೆಲುಗಿನಲ್ಲಿ ಅಕಾರಾಂತ ಪುಲ್ಲಿಂಗಕ್ಕೆ ’ಡು’ ಸೆರಿಸಬೇಕು. ನಪುಂಸಕಲಿಂಗಕ್ಕೆ ’ಮ್’ ಸೇರಿಸಬೇಕು. ನೋಡಿ ಆಂಧ್ರಪ್ರದೇಶದ ಊರಿನ ಹೆಸರುಗಳು ’ಅನಂತಪುರಂ’, ’ಹಿಂದೂಪುರಂ’ ಇತ್ಯಾದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2006 - 6:38am — benaka

ಕಾಲ್ಡ್‌ವೆಲ್ ಮಹಾಶಯನ ವರಪ್ರಸಾದ!

benaka's picture

ಮಿಶ್ರಿಕೋಟಿಗಳೇ,
ಏನು ಮಾಡೋಣ ಹೇಳಿ ಸ್ವಾಮೀ, ನಮ್ಮ ಚರಿತ್ರೆ, ಭಾಷೆಯನ್ನು ಬೇರೆಯವರು ತೋರಿಸಿದಂತೆ ವಿಂಗಡಿಸಿ ಓದಬೇಕಾಗಿಬಿಟ್ಟಿದೆ! ದ್ರಾವಿಡಭಾಷೆಯೆಂಬುದು ಕಾಲ್ಡ್‌ವೆಲ್ ಮಹಾಶಯನ ವರಪ್ರಸಾದವೆಂದು ಬುದ್ಧಿಜೀವಿಗಳಿಗೆ ತಿಳಿಸುವಷ್ಟು ಶಕ್ತಿ ನಮಗಿಲ್ಲವಾಗಿದೆ. ಆಂಗ್ಲರು ಹೇಳಿದ್ದೆಲ್ಲ ನಿಜ; ಅಲ್ಲಲ್ಲ.. ಅವರು ಹೇಳಿದ್ದೇ ನಿಜವೆನ್ನುವವರಿಗೆ ಏನು ಹೇಳೋಣ!? ದ್ರಾವಿಡಭಾಷೆಗಳ ಬಗ್ಗೆ ನಮ್ಮವರು ಮಾಡುವ ಸಂಶೋಧನೆಗಳೆಲ್ಲ ಆ ಆಂಗ್ಲ ಪಟುಗಳ ಪುಸ್ತಕಗಳನ್ನೇ ಉದ್ಧರಿಸಿ, ಉದ್ಗರಿಸುತ್ತಾ, ಕೊನೆಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ 'ತಮ್ಮದೇ'(?) ಫಲಿತಾಂಶವೊಂದನ್ನು ತೆರೆದಿಟ್ಟು ಇರುವ ಪುಸ್ತಕಗಳ ಸಾಲಿಗೆ ಸೇರ್ಪಡೆಯಾಗುತ್ತವೆ! (ಕೀರ್ತಿನಾಥ ಕುರ್ತಕೋಟಿಯವರಂತಹ ಕೆಲವರನ್ನು ಹೊರತು ಪಡಿಸಿ) ಸರಿ, ಇನ್ನು ಇಂತಹ ಪುಸ್ತಕಗಳಿದ್ದರೆ, ಅವೇ ಸಾಕ್ಷಿಗಳೆಂಬಂತೆ ಮಾಧ್ಯಮಗಳು ಸುದ್ದಿ ಮಾಡುತ್ತವೆ! ಇದರ ಹಿಂದೆ ರಾಜಕೀಯ ಕೈವಾಡವೂ ಇಲ್ಲದಿಲ್ಲ!

ಭಾರತವನ್ನು ಒಗ್ಗೂಡಿಸಲು ಭಾಷೆ ಪ್ರಮುಖ ಸಾಧನ; ಹಿಂದೆ ಸಂಸ್ಕೃತ ಆ ಕೆಲಸ ಮಾಡುತ್ತಿತ್ತು; ಅದು ಸಾಯಲಿಲ್ಲ; ಅದನ್ನು ಕೊಲ್ಲಲಾಯಿತು! ಅದರ ಬಿಡಿ ಭಾಗಗಳು ಎಲ್ಲ ಭಾಷೆಗಳಲ್ಲೂ ಇವೆ; ಅವನ್ನು ಹಾಗೆಯೇ ಉಳಿಸಿಕೊಳ್ಳುವುದೂ ಭಾರತದ ಒಗ್ಗಟ್ಟಿನ ದೃಷ್ಟಿಯಿಂದ ಒಳ್ಳೆಯದೇ ಆಗಿದ್ದರೂ, ಆಡುಭಾಷೆಯಲ್ಲಿ ತದ್ಭವಗಳನ್ನು ತಡೆಯಲು ಸಾಧ್ಯವಿಲ್ಲವೆಂಬುದು ಸತ್ಯ. ಆದರೆ ಎಲ್ಲ ಭಾಷೆಗಳೂ ತಮ್ಮ ಜೊತೆಗೆ ಸಕ್ಕದವನ್ನು ಉಳಿಸಿಕೊಳ್ಳುವುದರಲ್ಲೇ - ಭಾಷೈಕ್ಯವಲ್ಲದಿದ್ದರೂ - ಭಾವೈಕ್ಯದ ಎಳೆಯೊಂದಿದೆ ಎಂದು ಏಕೆ ಸಕ್ಕದ ದ್ವೇಷಿಗಳು ಮನಗಾಣರೋ ಕಾಣೆ! ಇಂತಹ ಪರಿಸ್ಥಿತಿಯಲ್ಲಿ ಆಂಗ್ಲರು ಭಾಷೆಯ ಮೇಲೆ ಭಾರತವನ್ನು ಒಡೆದು ನೋಡುವ ಸಂಶೋಧನೆ ಮಾಡಿದರು! ಸಾವಿರಾರು ವರ್ಷ ಹಳೆಯ ವೇದಗಳನ್ನು ಎಲ್ಲೆಲ್ಲಿಗೋ ಎಳೆದು ಕ್ರಿ.ಪೂ. ೧೫೦೦ ಎಂದರು! ಸಿಂಧೂ ನಾಗರಿಕತೆ ಬೆಳಕಿಗೆ ಬಂದ ಮೇಲೆ ಬಾಯ್ಮುಚ್ಚಿ ಕುಳಿತರು! ಆದರೂ ನಾವು ಓದುತ್ತಿಲ್ಲವೇ...ಆರ್ಯರು ಮಧ್ಯ ಏಷ್ಯಾದಿಂದ ಬಂದರು ಎಂದು! ಹೀಗೇ ದ್ರಾವಿಡಭಾಷೆಯೂ....!

ಕೊನೆಯ ಮಾತು: ದಕ್ಷಿಣದಲ್ಲಿ ಸಕ್ಕದ ಇರಲೇ ಇಲ್ಲ ಎನ್ನುವವರಿಗೊಂದು ಪ್ರಶ್ನೆ: ಇನ್ನಿಲ್ಲದಂತೆ ಉತ್ತರಭಾರತವನ್ನೆಲ್ಲಾ ಜಾಲಾಡಿದರೂ ಜಾಡೇ ಸಿಗದಾಗಿದ್ದ ಕಾಳಿದಾಸನಿಗಿಂತ ಹಳೆಯ 'ಭಾಸ' ಕವಿಯ ಎಲ್ಲ ಕೃತಿಗಳೂ ಕೇರಳದ ಬಾವಿಯಲ್ಲಿ ದೊರಕಿದ್ದು ಹೇಗೆ?

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2006 - 12:30pm — hpn

ಸಂಸ್ಕೃತ, "ದ್ರಾವಿಡ" ಭಾಷೆಗಳು

hpn's picture

ಬೆನಕ wrote:

ಕೊನೆಯ ಮಾತು: ದಕ್ಷಿಣದಲ್ಲಿ ಸಕ್ಕದ ಇರಲೇ ಇಲ್ಲ ಎನ್ನುವವರಿಗೊಂದು ಪ್ರಶ್ನೆ: ಇನ್ನಿಲ್ಲದಂತೆ ಉತ್ತರಭಾರತವನ್ನೆಲ್ಲಾ ಜಾಲಾಡಿದರೂ ಜಾಡೇ ಸಿಗದಾಗಿದ್ದ ಕಾಳಿದಾಸನಿಗಿಂತ ಹಳೆಯ 'ಭಾಸ' ಕವಿಯ ಎಲ್ಲ ಕೃತಿಗಳೂ ಕೇರಳದ ಬಾವಿಯಲ್ಲಿ ದೊರಕಿದ್ದು ಹೇಗೆ?

ಸಂಸ್ಕೃತ ಹೊರಗಿನದು, ಅದರ ಪ್ರಭಾವ ನಮ್ಮ ಭಾಷೆಗೆ ಬೇಡ ಎನ್ನುವುದು ಬಹುಶಃ ಹೊಳೆಯ ನೀರನ್ನು ಬೆರೆತ ನದಿಗಳ ನೀರಿಗೆ ಬೇರ್ಪಡಿಸಲು ಯತ್ನಿಸಿದಂತೆ Eye-wink

ಇನ್ನು "ದ್ರಾವಿಡ ಭಾಷೆ"ಗೆ ಸಂಬಂಧಪಟ್ಟಂತೆ, ಈಗಲಾದರೂ ಮಾಹಿತಿ ಸರಿಪಡಿಸುವ ಸುವರ್ಣಾವಕಾಶ ಆಸಕ್ತರಿಗೆ ಇದೆ. ಪುರಾವೆಯೊಂದಿಗೆ ವಿಕಿಪೀಡಿಯದಲ್ಲಿ ಒಂದು ಕ್ಯಾಂಪೇಯ್ನ್ ಮಾಡಿ "ದ್ರಾವಿಡ" ಎಂದಿರುವುದನ್ನು ಎಲ್ಲೆಡೆ ಸರಿಪಡಿಸಬಹುದು. ಆಲೋಚಿಸಿ ನೋಡಿ. ಈ ತರಹದ ಒಂದು ಪ್ರಯತ್ನ ನಡೆದರೆ ಅದರಲ್ಲಿ ಪಾಲ್ಗೊಳ್ಳಲು ನಾನೂ ಸಿದ್ದ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2006 - 1:24pm — ಸಂಗನಗೌಡ

ಸಕ್ಕದ ಬೇಡ ಅನ್ನುವದಕ್ಕಿಂತ, ಕನ್ನಡ ಬೇಕು

ಸಂಗನಗೌಡ's picture

ಸಕ್ಕದ ಬೇಡ ಅನ್ನುವದಕ್ಕಿಂತ ನಾವು ಕನ್ನಡ ಬೇಕು ಅನ್ನಬೇಕು. ಒಬ್ಬ ಕನ್ನಡಿಗ ತುಸು ವರುಸಗಳ ಕಾಲ ಬಡಗಣ(north) ನಾಡುಗಳಲ್ಲಿ ಇದ್ದು ಬರಬೇಕು. ಹೇಗೆ ಕನ್ನಡದ ಪದಗಳು ಕನ್ನಡಿಗನನ್ನು ಬಿಟ್ಟು ಒಂದೊಂದಾಗಿ ಹೋಗುವವು ಎಂಬುದು ತಿಳಿಯುತ್ತದೆ. ತನ್ನತನವನ್ನು ಕಾಯಿದುಕೊಳ್ಳಬೇಕೆಂಬ ಹಂಬಲ ನಮ್ಮಲ್ಲಿ ಮೂಡಬೇಕಿದೆ. ಮಹನೀಯ ಕಿಟೆಲ್  ಕನ್ನಡ ಪದಕಣಜ ಬರೆಯುವ ಸಲುವಾಗಿ ಮರಗಳ ಮೇಲೆ ಕುಳಿತು ಕನ್ನಡಿಗರ ಮಾತುಗಳನ್ನು ಆಲಿಸಿ, ಪದಗಳನ್ನು ಬರೆದುಕೊಳ್ಳುತ್ತಿದ್ದರಂತೆ, ಅಂತವರರನ್ನು ನಾವು ಕೆಂಪು ಮೋತಿಯ ಮಂಗಗಳು, ಇವಕ್ಕೇನು ತಿಳಿದೀತೆಂದು ಹೀಗಳೆಯುತ್ತೇವೆ. 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2006 - 8:17pm — ismail

ಕೀಳರಿಮೆ ಬೇಡ

ismail's picture

ಪ್ರಿಯ ಬೆನಕ ಮತ್ತು ಮಿಶ್ರಿಕೋಟಿಯವರೇ  ಕಾಲ್ಡ್ ವೆಲ್ ಹೇಳಿರುವುದರಲ್ಲಿ ಅವೈಜ್ಞಾನಿಕವಾದುದು, ಇಲ್ಲವೇ ತಪ್ಪಾಗಿರುವುದು ಏನಾದರೂ ಇದ್ದರೆ ಅದರ ಬಗ್ಗೆ ಚರ್ಚಿಸುವುದು ಉತ್ತಮ ಎನಿಸುತ್ತದೆ. ಇನ್ನು ಕಾಲ್ಡ್ ವೆಲ್ ನ ತುಲನಾತ್ಮಕ ವ್ಯಾಕರಣ ಅವನ ಕಾಲಕ್ಕೆ ಬಹಳ ದೊಡ್ಡ ಕೆಲಸವೇ ಸರಿ. ಈಗ ನಮ್ಮಲ್ಲಿ ಮತ್ತಷ್ಟು ಮಾಹಿತಿ ಇದೆ. ಇದನ್ನಿಟ್ಟುಕೊಂಡು ಅವನು ಆರಂಭಿಸಿದ ಚರ್ಚೆಯನ್ನು ಮುಂದುವರಿಸಬಹುದು. 

ಇನ್ನು ಒಂದು ಭಾಷೆಯೊಳಗೆ ಮತ್ತೊಂದು ಭಾಷೆ ಇರುವುದು ಅತ್ಯಂತ ಸಹಜ ಮತ್ತು ಸಾಮಾನ್ಯ ಸಂಗತಿ. ಇದೊಂದು ಕೀಳರಿಮೆಯ ವಿಷಯವಾಗಬೇಕಿಲ್ಲ. ಹಾಗೊಂದು ಕೀಳರಿಮೆ ಕಾಡಿದ್ದೇ ಆದರೆ ಇಂಗ್ಲಿಷ್ ಇಷ್ಟು ದೊಡ್ಡ ಭಾಷೆಯಾಗಿ ಬೆಳೆಯುತ್ತಿರಲೂ ಇಲ್ಲ. ದ್ರಾವಿಡ ಎನ್ನುವುದನ್ನು ಸಂಸ್ಕೃತಕ್ಕೆ ವಿರುದ್ಧವಾದ ಅರ್ಥದಲ್ಲಿ ಗ್ರಹಿಸುವುದೇಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇವೆಲ್ಲಾ ಅಧ್ಯಯನದ ಅನುಕೂಲಕ್ಕೆ ಬೇಕಾಗಿ ಮಾಡಿಕೊಂಡ ಪಾರಿಭಾಷಿಕಗಳಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2006 - 1:13pm — ಸಂಗನಗೌಡ

ಹಿಮಾಲಯದಲ್ಲಿ ಸರವಜ್ಜ

ಸಂಗನಗೌಡ's picture

Quote:

ಕೊನೆಯ ಮಾತು: ದಕ್ಷಿಣದಲ್ಲಿ ಸಕ್ಕದ ಇರಲೇ ಇಲ್ಲ ಎನ್ನುವವರಿಗೊಂದು ಪ್ರಶ್ನೆ: ಇನ್ನಿಲ್ಲದಂತೆ ಉತ್ತರಭಾರತವನ್ನೆಲ್ಲಾ ಜಾಲಾಡಿದರೂ ಜಾಡೇ ಸಿಗದಾಗಿದ್ದ ಕಾಳಿದಾಸನಿಗಿಂತ ಹಳೆಯ 'ಭಾಸ' ಕವಿಯ ಎಲ್ಲ ಕೃತಿಗಳೂ ಕೇರಳದ ಬಾವಿಯಲ್ಲಿ ದೊರಕಿದ್ದು ಹೇಗೆ?

ಹಿಮಾಲಯದ ಬಾವಿಯೊಂದರಲ್ಲಿ ಯಾರೋ ಹೋಗಿ ನಮ್ಮ ಸರವಜ್ಜನ ವಚನಗಳನ್ನು ಎಸೆದು ಬಂದು, ಅದು ಇನ್ನಾರಿಗೋ ಸಿಕ್ಕರೆ, ಓ! ನಮ್ಮ ಸರವಜ್ಜ ಕರುನಾಡಲ್ಲಿ ಇರಲೇ ಇಲ್ಲ, ಹಿಮಾಲಯದಲ್ಲಿ ಅಲೆದಾಡಿಕೊಂಡಿದ್ದ ಅನ್ನಬಹುದೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2006 - 3:13pm — benaka

ದ್ವೇಷದಿಂದ ನಾಡನ್ನು ಕಟ್ಟಲು ಅಸಾಧ್ಯ!

benaka's picture

ಅಲ್ಲವೇ ಮತ್ತೆ? ಇಡೀ ಭಾರತವೇ ವರ್ಷಾನುಗಟ್ಟಲೆಯಿಂದ ಹುಡುಕುತ್ತಿದ್ದ ಭಾಸನ ನಾಟಕಗಳನ್ನು ಮಹಾಮಹೋಪಾಧ್ಯಾಯ ಟಿ.ಗಣಪತಿಶಾಸ್ತ್ರಿಗಳು ತಾವೇ ಬರೆದು, ೧೯೧೩ರಲ್ಲಿ ಕೇರಳದ ಯಾವುದೋ ಹಳೆಯ ಬಾವಿಗೆ ಎಸೆದು ಬಂದಿದ್ದರೇನೋ ಪಾಪ....! ನಿಮ್ಮ ತಪ್ಪಿಲ್ಲ ಬಿಡಿ, ನಿಮ್ಮ ಸಂಸ್ಕೃತ ದ್ವೇಷ ಹೀಗೆ ಮಾತನಾಡಿಸುತ್ತದೆ! ನಿಮ್ಮ ಮಾತಿಗೆ ನಿಜವಿಚಾರ ತಿಳಿದವರು ನಗದೆ ವಿಧಿಯಿಲ್ಲ! ಸಕ್ಕದವನ್ನು ದ್ವೇಷಿಸಲೇ ಬೇಕೆಂಬ ಈ ನಿಮ್ಮ ಧೋರಣೆಯೇ ಒಡಕಿಗೆ ಮೂಲವೆಂದು ನಾನು ಹೇಳುತ್ತಿರುವುದು. 'ನಾಡನ್ನು ಕಟ್ಟಲು' ಎಲ್ಲರನ್ನು ಒಗ್ಗೂಡಿಸಬೇಕು; ಒಡೆಯುವ ಕೆಲಸ ಆಗಲೇ ಆಗಿದೆ ಸ್ವಾಮಿ! ದ್ವೇಷದಿಂದ ನಾಡನ್ನು ಕಟ್ಟಲು ಅಸಾಧ್ಯ!

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2006 - 5:32pm — ಸಂಗನಗೌಡ

ಅಯ್ಯ

ಸಂಗನಗೌಡ's picture

ಅಯ್ಯ, ಸಕ್ಕದವು ಕನ್ನಡದ ತಾಯಿಯೆಂದೇ ಕಣ್ಣು ಮುಚ್ಚಿಕೊಂಡು ನಂಬಿದವರಲ್ಲವೇ ನೀವು. ಅದು ಯಾರಾರೋ ಮಾಡಿದ ಸಂಸೋದನೆಯಾಗಲಿ, 'ಬಾಸ' 'ಕಾಳ' ರಂತಹ ದೊಡ್ಡವರ ಹೊತ್ತಿಗೆಗಳನ್ನಾಗಲಿ ನಾನು ಓದಿದವನಲ್ಲ. ಹಾಗಾಗಿ ಯಾರನ್ನೇ ಆಗಲಿ ದ್‍ವೇಸಿಸುವ, ಇಲ್ಲವೇ ಪಿರುತಿಸುವ ಸಾಲಿಗೆ ನಾನು ಸೇರಿಲ್ಲ. ಹೇಳಿದ್ದಕ್ಕೆಲ್ಲಾ ಮರುಮಾತನ್ನು ತಯಾರಿಟ್ಟುಕೊಂಡವರಿಗೆ ಏನೂ ಹೇಳಲಾಗದು. ನಿದ್ದೆ ಮಾಡುವವರನ್ನು ಎಬ್ಬಿಸಬಹುದು, ಆದರೆ ಹಾಗೆ ನಾಟಕ(ನಟನೆ) ಮಾಡುವವರನ್ನು ಎಬ್ಬಿಸಲಾಗದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 29, 2006 - 1:27pm — ಸಂಗನಗೌಡ

ತಲೆಬರಹದ ಬರಹ

ಸಂಗನಗೌಡ's picture

"ತಲೆಬರಹದ ಬರಹ"ಅನ್ನುವದಕ್ಕಿಂತ ಕ್ಕಿಂತ ತಲೆಬರಹದಡಿಯ ಬರಹ ಅನ್ನಬಹುದೇನೋ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2006 - 7:03am — benaka

ನಿಜವಾಗಿ ಬದಲಾಗಬೇಕಿರುವುದು

benaka's picture

ನಾಡಿಗರೇ,
'ದ್ರಾವಿಡ' ಎಂಬ ಹಣೆಪಟ್ಟಿ ಕಳಚಿದ ಮಾತ್ರಕ್ಕೆ ಕನ್ನಡದ ಹಣೆಬರಹ ಸರಿಹೋಗುವುದಿಲ್ಲ ಅಲ್ಲವೇ? ಹೆಸರಲ್ಲೇನಿದೆ ಎಂದು ಬಿಟ್ಟೇ ಬಿಡಬಹುದಾಗಿತ್ತು; ಆದರೆ ಆ ಹೆಸರನ್ನು 'ಭಾರತದ ಇತರ ಭಾಷೆಗಳಿಗಿಂತ ತೀರಾ ಭಿನ್ನವಾದ', 'ದಕ್ಷಿಣದಲ್ಲಿ ಹುಟ್ಟಿದ', 'ಸಂಸ್ಕೃತದ ಗಾಳಿಯೇ ಸೋಕಿಲ್ಲದ' ಎಂದೆಲ್ಲಾ ಅರ್ಥಗಳಲ್ಲಿ ಬಳಸಲಾಗುತ್ತಿದೆಯಾದ್ದರಿಂದ ಸ್ವಲ್ಪ ಯೋಚಿಸಬೇಕಾದ ವಿಷಯವೇ! ಭಾರತದ ಒಗ್ಗಟ್ಟನ್ನು ಒಡೆದು ನೋಡುವಂತೆ ಬಳಸಲ್ಪಡುವ ಯಾವ ಪದವನ್ನೇ ಆಗಲಿ, ಬದಲಿಸಲು ನನ್ನ ಸಂಪೂರ್ಣ ಬೆಂಬಲವಿದೆ. ಆದರೆ, ನಿಜವಾಗಿ ಬದಲಾಗಬೇಕಿರುವುದು ಹಣೆಪಟ್ಟಿಯಲ್ಲದೆ, ಆ ಹಣೆಪಟ್ಟಿಯಿಂದ ವಿಪರೀತಾರ್ಥ ಕಲ್ಪಿಸುವ ಜನರ ಭಾವನೆಗಳು ಎಂದು ನನ್ನ ಅನಿಸಿಕೆ.

ಇಸ್ಮಾಯಿಲರೇ,
ತುಂಬಾ ಸರಿಯಾಗಿ ಹೇಳಿದ್ದೀರಿ; ದ್ರಾವಿಡವೆಂದರೆ, ಸಕ್ಕದಕ್ಕೆ 'ವಿರುದ್ಧ' ಎಂಬ ಭಾವನೆಗಷ್ಟೇ ನನ್ನ ವಿರೋಧ! 'ದ್ರಾವಿಡ' ಎಂಬ ಪದಕ್ಕಲ್ಲ. ಭಾರತೀಯರಾರೂ ಮಾಡದಿದ್ದ ಕೆಲಸವನ್ನು ಮಾಡಿದ ಕಾಲ್ಡ್‌ವೆಲ್ ಬಗ್ಗೆ ಖಂಡಿತವಾಗಿ ನನಗೆ ಗೌರವವಿದೆ; ಆದರೆ ಅವನಿಟ್ಟ ಹೆಸರು ಮುಂದೆ ರಾಜಕೀಯ ಪ್ರೇರಿತವಾಗಿ ದೇಶವನ್ನು ಭಾಷೆಯಮೇಲೆ ಹಿರಿದಾಗಿ ಇಬ್ಭಾಗ ಮಾಡಲೆತ್ನಿಸಿದ್ದು ಚರಿತ್ರೆಯಲ್ಲವೆ? ಇಂದಿಗೂ ಉತ್ತರದವರಿಗೆಲ್ಲ ನಾವು 'ಮದ್ರಾಸೀ'ಗಳೇ! ಉತ್ತರಪ್ರದೇಶದಲ್ಲಿ ಕನ್ನಡ ಶಾಸನ ದೊರೆತಿದ್ದರೂ ಅದು 'ದಕ್ಷಿಣದ ಭಾಷೆ'ಯೇ! ಇಂತಹ ಪೂರ್ವಾಗ್ರಹಗಳಿಗಷ್ಟೇ ನನ್ನ ವಿರೋಧ.

ಸಂಗನ ಗೌಡರೇ,
'ಸಕ್ಕದ ಬೇಡ ಎನ್ನುವುದಕ್ಕಿಂತ ಕನ್ನಡ ಬೇಕು' ಎಂಬುದು ಹದಿನಾರಾಣೆ ದಿಟ! ಅದಕ್ಕೆಂದೂ ನನ್ನ ಬೆಂಬಲವಿದೆ!
ಕಿಟ್ಟೆಲ್ ನಂತಹ ಮಹಾನ್ ವ್ಯಕ್ತಿತ್ವದ ವಿದೇಶೀಯರು ಬೆರಳೆಣಿಕೆಯಷ್ಟು ಮಾತ್ರ; ಎಲ್ಲ ಕಲ್ಲುಗಳೂ ವಿಗ್ರಹಗಳಾಗಲು ಸಾಧ್ಯವೇ? ಮ್ಯಾಕ್ಸ್ ಮುಲ್ಲರ್ ಕೂಡ ಮಹಾನ್ ವ್ಯಕ್ತಿಯೇ, ಆದರೆ ಭಾರತೀಯರ ಚರಿತ್ರೆಯನ್ನು ಯೂರೋಪಿಯನ್ನರಿಗೆ ಬೇಕಾದಂತೆ ತಿರುಚಲು ಆಂಗ್ಲರ ಕೈಗೊಂಬೆಯಾಗಲಿಲ್ಲವೇ? ಎಲ್ಲರೂ ಕೆಟ್ಟವರಲ್ಲ; ಆದರೆ ಒಳ್ಳೆಯವರು ಬಹಳವಿರಲಿಲ್ಲ.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 30, 2006 - 7:19pm — ismail

ಪಾಪ್ಯುಲರ್

ismail's picture

ಪಾಪ್ಯುಲರ್ ಸ್ಟೀರಿಯೋ ಟೈಪ್ಸ್ ಎಂಬ ಪರಿಕಲ್ಪನೆಯೊಂದನ್ನು ಸಾಮಾಜಿಕ ಮನೋವಿಜ್ಞಾನದಲ್ಲಿ ಬಳಸಲಾಗುತ್ತದೆ. ಜನಪ್ರಿಯ ಸಿದ್ಧ ಮಾದರಿ ಎಂದು ಇದನ್ನು ಕನ್ನಡಕ್ಕೆ ಅನುವಾದಿಸಬಹುದಾದರೂ ಅದು ಮೂಲದ ಧ್ವನಿಯನ್ನು ಹೊರಡಿಸುತ್ತದೆ ಎಂದು ನನಗನ್ನಿಸುವುದಿಲ್ಲ. ಇಂಥ ಅನೇಕ ಸಿದ್ಧ ಮಾದರಿಗಳು ನಮ್ಮ ನಡುವೆ ಇವೆ. ಉದಾಹರಣೆಗೆ 'ಜನಸಂಖ್ಯಾ ಸ್ಫೋಟ' ಎಂಬ ಪರಿಕಲ್ಪನೆ. ಇದೆಷ್ಟು ಅರ್ಥಹೀನ ಪರಕಲ್ಪನೆ ಎಂಬುದನ್ನು ಆಧುನಿಕ ಅರ್ಥಶಾಸ್ತ್ರಜ್ಞರು ಸಾಕಷ್ಟು ಹೇಳಿದ್ದಾರಾದರೂ ನಾವಾರೂ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿಲ್ಲ. ನಾವೀಗಲೂ ಜನಸಂಖ್ಯಾ ಸ್ಫೋಟದಿಂದ ಆಗುವ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದೇವೆ. ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನು ವ್ಯಾಪಕಗೊಳಿಸಲು ಹೊಸ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಸಮಸ್ಯೆಯ ಮೂಲಕ್ಕೆ ಹೋಗುತ್ತಲೇ ಇಲ್ಲ.

 ಆರ್ಯ-ದ್ರಾವಿಡ ಭೇದವೂ ಅಷ್ಟೇ. ದ್ರಾವಿಡ ಭಾಷೆಗಳಿಗೆ ಸಂಸ್ಕೃತ ಸೋಂಕಿಯೇ ಇಲ್ಲ ಎಂದು ವರ್ತಮಾನದ ಯಾವ ಭಾಷಾ ವಿಜ್ಞಾನಿಯೂ ಹೇಳಲಾರ. ಸಂಸ್ಕೃತದಲ್ಲಿ ದ್ರಾವಿಡ ಭಾಷಾ ಪದಗಳು ಇರುವುದನ್ನು ಯಾವ ಸಂಸ್ಕೃತ ಪಂಡಿತನೂ ಅಲ್ಲಗಳೆಯುವುದಿಲ್ಲ. ಈ ವಿಷಯಗಳ ಕುರಿತು ಕಡಿಮೆ ಜ್ಞಾನವಿರುವವರು ಚರ್ಚಿಸುವಾಗ ಮಾತ್ರ ದ್ರಾವಿಡ ಎಂಬ ಪದ ಸಂಸ್ಕೃತಕ್ಕೆ ವಿರುದ್ಧವಾದುದು ಎಂಬ ಅರ್ಥದಲ್ಲಿ ಬಳಕೆಯಾಗುತ್ತದೆ. ಈ ಬಗೆಯ ಅಮೆಚೂರಿಷ್ ಚರ್ಚೆಗಳಲ್ಲಿ ನಿಜ ತಿಳಿಯುವ ಆಸಕ್ತಿಗಿಂತಲೂ ಹೆಚ್ಚಾಗಿ ವಾದಿಸುವವರು ನಿಂತಿರುವ ರಾಜಕೀಯ ನೆಲೆಗಟ್ಟೇ ಮುಖ್ಯವಾಗಿಬಿಟ್ಟಿರುತ್ತದೆ. ತಮಿಳು ಮತ್ತು ಕನ್ನಡಗಳು ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಜನ್ಮತಳೆದ ಭಾಷೆಗಳು ಎಂದ ತಕ್ಷಣ ತಮಿಳರಿಗೆ ಸಿಟ್ಟು ಬರುತ್ತದೆ. ಇಲ್ಲವೇ ಕನ್ನಡಿಗರು ನಮ್ಮದು ಇನ್ನೂ ಮೊದಲೇ ಇತ್ತು ಎಂದೋ ಇಲ್ಲವೇ ಕನ್ನಡ ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಭಾಷೆಯೇ ಅಲ್ಲ ಎಂದೆಲ್ಲಾ ವಾದಿಸತೊಡಗುತ್ತಾರೆ. ಈ ವಾದಗಳಿಗೆ ವೈಜ್ಞಾನಿಕ ಆಧಾರಗಳೂ ಇರುವುದಿಲ್ಲ. ವಾದ ಮಂಡನೆಗೆ ಅಗತ್ಯವಿರುವ ಶೈಕ್ಷಣಿಕ ಶಿಸ್ತೂ ಇರುವುದಿಲ್ಲ.

ಈ ಬಗೆಯ ವಾದಗಳ ಮಧ್ಯೆ ನಿಜವಾದ ಸಂಶೋಧನೆಗಳು ಬೆಳಕಿಗೆ ಬರುವುದೇ ಇಲ್ಲ. ಉದಾಹರಣೆಗೆ ಡಾ.ಡಿ.ಎನ್. ಶಂಕರಭಟ್ಟರು ಕನ್ನಡ ವ್ಯಾಕರಣವನ್ನು ಬರೆದವರೆಲ್ಲಾ ಸಂಸ್ಕೃತ ವ್ಯಾಕರಣವನ್ನು ಮಾದರಿಯಾಗಿಟ್ಟುಕೊಂಡು ರಚಿಸಿದ್ದಾರೆ. ಇದು ಸರಿಯಲ್ಲ. ಕನ್ನಡದ್ದೇ ಆದ ವ್ಯಾಕರಣವೊಂದು ಬೇಕು ಎಂದು ಕನ್ನಡದ್ದೇ ಆದ ವ್ಯಾಕರಣವನ್ನು ಮುಂದಿಟ್ಟರು. ಇದು ಅತ್ಯಂತ ವೈಜ್ಞಾನಿಕವಾಗಿ ರಚಿತವಾದ ವ್ಯಾಕರಣ. ಕನ್ನಡದಲ್ಲಿ ಪದಗಳು, ವಾಕ್ಯಗಳು ರೂಪುಗೊಳ್ಳುವ ಕ್ರಿಯೆ ಹೇಗೆ ಸಂಸ್ಕೃತಕ್ಕಿಂತ ಭಿನ್ನವಾಗಿದೆ ಎಂಬುದನ್ನು ಅವರು ಈ ವ್ಯಾಕರಣದಲ್ಲಿ ವಿವರಿಸುತ್ತಾರೆ.

ಈ ವ್ಯಾಕರಣವನ್ನು ಭಟ್ಟರು ಸಂಸ್ಕೃತ ವಿರೋಧಿ ಎಂದು ಟೀಕಿಸುವುದಕ್ಕಾಗಿ ಬಳಸಲಾಯಿತೇ ಹೊರತು ಅವರು ಹೇಳುತ್ತಿರುವುದರಲ್ಲಿ ಇರುವ ಸತ್ಯವನ್ನು ಅರಿಯಲು ಯಾರೂ ಮುಂದಾಗಲಿಲ್ಲ. ಭಟ್ಟರು ಕನ್ನಡ ಸಂಸ್ಕೃತದಿಂದ ಏನೂ ಪಡೆದಿಲ್ಲ ಎಂದು ಅವರ ಪುಸ್ತಕದಲ್ಲಿ ಎಲ್ಲಿಯೂ ಹೇಳಿಲ್ಲ. ಅಥವಾ ಸಂಸ್ಕೃತದಿಂದ ಪಡೆಯುವುದು, ಪಡೆದದ್ದು ತಪ್ಪು ಎಂದಿಲ್ಲ. ಆದರೂ ಅವರು ಸಂಸ್ಕೃತ ವಿರೋಧಿಯಾಗಿಬಿಟ್ಟರು.

ಆರ್ಯರು ಮತ್ತು ದ್ರಾವಿಡರು ಎಂಬ ಭೇದವನ್ನು ಬಹುವಾಗಿ ಒಪ್ಪಿಕೊಳ್ಳುತ್ತಿದ್ದ ಮಾರ್ಕ್ಸವಾದೀ ಇತಿಹಾಸಕಾರರೂ ಈಗ ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದಾರೆ. ದಕ್ಷಿಣದಲ್ಲಿರುವವರೆಲ್ಲಾ  ದ್ರಾವಿಡರು, ಉತ್ತರದಲ್ಲಿರುವವರೆಲ್ಲಾ ಆರ್ಯರು ಹಾಗೆಯೇ ಆರ್ಯರು ಆಕ್ರಮಣ ಮಾಡಿದರು, ದ್ರಾವಿಡರು ಆಕ್ರಮಣಕ್ಕೆ ಒಳಗಾದರು ಎಂಬ ಸರಳೀಕೃತ ತೀರ್ಮಾನಗಳನ್ನು ಎಲ್ಲರೂ ಕೈಬಿಟ್ಟಿದ್ದಾರೆ. ಹೆಚ್ಚು ತಾರ್ಕಿಕವಾಗಿ ಈ ವಿಷಯವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. 

ಇನ್ನೊಂದು ತಮಾಷೆಯ ವಿಷಯವಿದೆ. ಇದನ್ನು ಪ್ರಸಿದ್ಧ ವಿಧ್ವಾಂಸರೊಬ್ಬರು ಅನೌಪಚಾರಿಕ ಮಾತುಕತೆಯ ವೇಳೆ ಹೇಳಿದ್ದರು. ಬ್ರಿಟಿಷರು ತಾವು ಆರ್ಯ ವಂಶಜರು ಎಂದು ಭಾವಿಸಿದ್ದರು (ಹಿಟ್ಲರ್ ಕೂಡಾ ಹಾಗೆಯೇ ಹೇಳಿಕೊಂಡಿದ್ದ). ಅವರು ತಮ್ಮ ಬಳಿ ಕೆಲಸಕ್ಕಿದ ಭಾರತದ ಮೇಲ್ಜಾತಿಯವರ ಬಳಿ ನೀವು ಆರ್ಯರು ಎಂದಾಗ ಅವರಿಗೆ ಸಂತೋಷವಾಯಿತು. ತಾವೂ ಬ್ರಿಟಿಷರಷ್ಟೇ ಶ್ರೇಷ್ಟರು ಎಂದುಕೊಂಡು ಬೀಗಿದರು. ಇದು ಬರೇ ತಮಾಷೆಯೇ ಆಗಿರಬಹುದು. ಆದರೆ ಭಾರತೀಯರ ಮನಸ್ಥಿತಿಯನ್ನೂ ತಿಳಿಸುತ್ತದೆಯಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 10, 2006 - 9:19pm — ಸಂಗನಗೌಡ

ಡಾ.ಡಿ.ಎ ಶಂಕರಭಟ್ಟರು

ಸಂಗನಗೌಡ's picture

Quote:

ಡಾ.ಡಿ.ಎನ್. ಶಂಕರಭಟ್ಟರು ಕನ್ನಡ ವ್ಯಾಕರಣವನ್ನು ಬರೆದವರೆಲ್ಲಾ ಸಂಸ್ಕೃತ ವ್ಯಾಕರಣವನ್ನು ಮಾದರಿಯಾಗಿಟ್ಟುಕೊಂಡು ರಚಿಸಿದ್ದಾರೆ. ಇದು ಸರಿಯಲ್ಲ. ಕನ್ನಡದ್ದೇ ಆದ ವ್ಯಾಕರಣವೊಂದು ಬೇಕು ಎಂದು ಕನ್ನಡದ್ದೇ ಆದ ವ್ಯಾಕರಣವನ್ನು ಮುಂದಿಟ್ಟರು. ಇದು ಅತ್ಯಂತ ವೈಜ್ಞಾನಿಕವಾಗಿ ರಚಿತವಾದ ವ್ಯಾಕರಣ. ಕನ್ನಡದಲ್ಲಿ ಪದಗಳು, ವಾಕ್ಯಗಳು ರೂಪುಗೊಳ್ಳುವ ಕ್ರಿಯೆ ಹೇಗೆ ಸಂಸ್ಕೃತಕ್ಕಿಂತ ಭಿನ್ನವಾಗಿದೆ ಎಂಬುದನ್ನು ಅವರು ಈ ವ್ಯಾಕರಣದಲ್ಲಿ ವಿವರಿಸುತ್ತಾರೆ.

ಈ ಮಾಹಿತಿಗಾಗಿ ವಂದನೆಗಳು, ಇಸಮಾಯಿಲ್‍ರೇ. ಕನ್ನಡಕ್ಕೆ ತನ್ನದೇ ಬೇರೊಂದು ಬರವಣಿಗೆಯ ಪದ್ದತಿ ಇದೆ ಎಂಬುದು ನನಗೆ ಇತ್ತೀಚೆಗೆ ತಾನೇ ತಾನಾಗಿ ಹೊಳೆದದ್ದು. ಆ ಹೊತ್ತಿಗೆಯನ್ನು ನಾನೊಮ್ಮೆ ಓದಬೇಕಿದೆ.

Quote:

ಈ ವ್ಯಾಕರಣವನ್ನು ಭಟ್ಟರು ಸಂಸ್ಕೃತ ವಿರೋಧಿ ಎಂದು ಟೀಕಿಸುವುದಕ್ಕಾಗಿ ಬಳಸಲಾಯಿತೇ ಹೊರತು ಅವರು ಹೇಳುತ್ತಿರುವುದರಲ್ಲಿ ಇರುವ ಸತ್ಯವನ್ನು ಅರಿಯಲು ಯಾರೂ ಮುಂದಾಗಲಿಲ್ಲ. ಭಟ್ಟರು ಕನ್ನಡ ಸಂಸ್ಕೃತದಿಂದ ಏನೂ ಪಡೆದಿಲ್ಲ ಎಂದು ಅವರ ಪುಸ್ತಕದಲ್ಲಿ ಎಲ್ಲಿಯೂ ಹೇಳಿಲ್ಲ. ಅಥವಾ ಸಂಸ್ಕೃತದಿಂದ ಪಡೆಯುವುದು, ಪಡೆದದ್ದು ತಪ್ಪು ಎಂದಿಲ್ಲ. ಆದರೂ ಅವರು ಸಂಸ್ಕೃತ ವಿರೋಧಿಯಾಗಿಬಿಟ್ಟರು.

ನಾನು ಮತ್ತು ನನ್ನಂತವರು ಇಲ್ಲಿ ಕೆಲವರಿಗೆ ಹಾಗೆಯೇ ಕಾಣುತ್ತಿದ್ದೇವೆ. 'ಬಳಸುವುದು' ಅನ್ನುವದು ನಿಯಮನುಸಾರ ತಪ್ಪು ಅನಿಸುತ್ತದೆ. 'ಇಸು' ವಿನ ಸರಿ ಬಳಕೆಯ ಬಗ್ಗೆ ಈ ಕೊಂಡಿ ನೋಡಿ. 'ಬಳಕೆ ಮಾಡುವುದು' ಅನ್ನಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 11, 2006 - 6:33pm — ismail

ಅಭಿವ್ಯಕ್ತಿ ಮತ್ತು ಸಂವಹನ

ismail's picture

ತಾವು ಇಸುವಿನ ಬಗ್ಗೆ ಹೇಳಿರುವುದು ಒತ್ತಕ್ಷರದ ಬಗ್ಗೆ ಬರೆದಿರುವುದು ಎಲ್ಲವನ್ನೂ ನಾನು ಓದಿದ್ದೇನೆ. ಭಾಷೆಯನ್ನು ಶುದ್ಧವಾಗಿಡುವುದಕ್ಕೆ ಸಂಬಂಧಿಸಿದ ನಿಮ್ಮ ನಿಲುವುಗಳನ್ನು ನಾನು ಒಪ್ಪುವುದಿಲ್ಲ. ನನ್ನ ದೃಷ್ಟಿಯಲ್ಲಿ ಅಭಿವ್ಯಕ್ತಿ ಮತ್ತು ಅದರ ಸಂವಹನ ಮಾತ್ರ ಮುಖ್ಯ. ಬಹುಮುಖೀ ಸಂಸ್ಕೃತಿಯೊಂದನ್ನು ನಮ್ಮ ಮೂಗಿನ ನೇರಕ್ಕೆ ಬಗ್ಗಿಸುವುದಕ್ಕಿಂತ ನಮ್ಮನ್ನು ಅದಕ್ಕೆ ಹೊಂದಿಸಿಕೊಂಡು ಹೋಗುವುದರಲ್ಲೇ ನನ್ನ ಆಸಕ್ತಿ. ಇದು ನನ್ನ ವೃತ್ತಿ ಬಯಸುವ ಗುಣ ಕೂಡಾ. ಕನ್ನಡವನ್ನು 'ಕನ್ನಡ' ಮಾತ್ರವಾಗಿ ಉಳಿಸುವ ನಿಮ್ಮ ಪ್ರಯತ್ನಕ್ಕೆ ಶುಭ ಹಾರೈಸುತ್ತೇನೆ. 

ಇಸ್ಮಾಯಿಲ್ 

ನನ್ನ ಬ್ಲಾಗ್ ನೋಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 12, 2006 - 11:08am — ಸಂಗನಗೌಡ

ಬಳಸು

ಸಂಗನಗೌಡ's picture

Quote:

'ಬಳಸುವುದು' ಅನ್ನುವದು ನಿಯಮನುಸಾರ ತಪ್ಪು ಅನಿಸುತ್ತದೆ. 'ಇಸು' ವಿನ ಸರಿ ಬಳಕೆಯ ಬಗ್ಗೆ ಈ ಕೊಂಡಿ ನೋಡಿ. 'ಬಳಕೆ ಮಾಡುವುದು' ಅನ್ನಬಹುದು.

'ಬಳಸು' ಇದರಲ್ಲಿ ಇಸು ಸೇರಿಲ್ಲ. ಇದು ಸೂಸು, ಹಾಸು ಗಳಂತೆ ಒಂದು ಸೊತಂತರ ಪದವಾಗಿದೆ. ಆದರೆ ಬಳಸು ಎಂಬುದಕ್ಕೆ ಕೆಲ ಕಡೆ 'ಬಳಚು' ಎಂಬ ಬಳಕೆ ಇದೆ. ಇರಲಿ ನಾನಿನ್ನೂ ಕನ್ನಡವನ್ನು ಕಲಿಯುತ್ತಿದ್ದೇನೆ. 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 4, 2008 - 2:53pm — kannadakanda

ಉ: ಬಳಸು

kannadakanda's picture

ಸರಿ. ಅದು ನಿಜವಾಗಿ ಬೞಸು/ಚು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 1, 2006 - 11:16pm — ಪ್ರದೀಪ್ ಬೆಳಗಲ್

ಜನಪ್ರಿಯ ಸಿದ್ಧ ಮಾದರಿಗಳು ಹಾಗೂ ಜ್ಞಾನಶಿಸ್ತುಗಳು

ಪ್ರದೀಪ್ ಬೆಳಗಲ್'s picture

ದ್ರಾವಿಡ ಮತ್ತು ಕನ್ನಡದ ಚರ್ಚೆಗೆ ಇಸ್ಮಾಯಲ್ ಅವರು ನಿಜವಾಗಿಯೂ ರಂಗು ಒದಗಿಸಿದ್ದಾರೆ. ಅವರು ಹೇಳುವ `ಪ್ರಸಿದ್ಧ ವಿದ್ವಾಂಸರ` ಅನೌಪಚಾರಿಕ ಮಾತುಕಥೆಯಲ್ಲಿ ಹೇಳಲಾದ `ಆರ್ಯ ಗುರುತಿಸಿಕೊಳ್ಳುವ` ಬಗೆಗೆ ಅದರ ಪರಿಣಾಮಗಳ ಬಗೆಗೂ ಇತಿಹಾಸಕಾರರು ಚರ್ಚಿಸಿದ್ದಾರೆ. (ರೋಮಿಲಾ ಥಾಪರ್ ಅವರ Ancient India Social History Some Interpretations, 1979ನಲ್ಲಿನ ಲೇಖನ Interpretations of Ancient Indian History). ಆಸಕ್ತಿದಾಯಕ ಅಂಶವೆಂದರೆ ಓರಿಯೆಂಟಾಲಿಸ್ಟ್­ರು  ತಮ್ಮದೇ ಒಂದು ಕವಲು ಇಲ್ಲಿಗೆ ಬಂದು `ಪರ ಚಿಂತನೆಯ` ಬಗೆಗೆ ಹೆಚ್ಚು ಆಸಕ್ತಿ ವಹಿಸಿದರೆ, ಯುರೋಪಿನ ಕವಲು `ಪದಾರ್ಥ ಚಿಂತನೆ`ಯ ಬಗೆಗೆ ಹೆಚ್ಚು ಆಸಕ್ತಿ ವಹಿಸಿತು ಎಂದು ಭಾವಿಸಿದುದು. ಸಹಜವಾಗಿಯೇ ಅಂದಿನ ಹೊರಹೊಮ್ಮುತ್ತಿದ್ದ ಮಧ್ಯಮ ವರ್ಗಕ್ಕೆ  ಕಿವಿಗೆ ಅದು ಜೇನಾಗಿ ಬಿದ್ದಿತು ಹಾಗೂ ಇದು ಪ್ರಾರಂಭಿಕ ರಾಷ್ಟ್ರೀಯತೆ ಪರಿಕಲ್ಪನೆ ರೂಪಗೊಳ್ಳುವಿಕೆಗೂ ಸಂಬಂಧಿಸಿದೆ (ಈ ಬಗೆಗಿನ ಸ್ವೀಕೃತಿ ಆ ಮಧ್ಯಮ ವರ್ಗದ ಹಿನ್ನೆಲೆಯೂ ಸಹ ಕಾರಣವಾಯಿತು) . ಬಹುಶಃ ಇಲ್ಲಿಂದಲೇ ಸಿದ್ಧ ಮಾದರಿಯೊಂದು ಪ್ರಾರಂಭವಾಯಿತು. ಇಸ್ಮಾಯಲ್­ರು ಸರಿಯಾಗಿಯೇ ಗುರುತಿಸಿದಂತೆ ಇಂತಹ ಹಲವು ಜನಪ್ರಿಯ ಸಿದ್ಧ ಮಾದರಿಗಳು ಚಾಲ್ತಿಯಲ್ಲಿವೆ. ಹೀಗಾಗಿ ಇಲ್ಲಿನ ಇನ್ನೊಂದು ಜನಾಂಗ (ಪ್ರೋಟೋ ಆಸ್ಟ್ರಾಲಾಯ್ಡ್- ಭಾಷಿಕವಾಗಿ ಮುಂಡ) ಸಾಂಸ್ಕೃತಿಕ ಕೊಡುಗೆ ಮರೆತೇ ಬಿಟ್ಟಿದ್ದೇವೆ. ಭಾರತದ ಬಹುತೇಕ ಪುರಾಣಗಳು ನಿಶಾದ ದೊರೆಯಿಂದ ವ್ಯವಸಾಯ ಸ್ಥಾಪಿತವಾಯಿತು ಎಂದು ಹೇಳುತ್ತವೆ. (ಲಿಂಗ ಪದದ ಉತ್ಪತ್ತಿಯು ಮುಂಡಾದ ಲಂಗುಲ-ಬೀಜ ಹಾಕುವ ಮೊದಲು ಕುಣಿ ಮಾಡಲು ಉಪಯೋಗಿಸುವ ಕಡ್ಡಿ  ಎಂದು ಹೇಳಲಾಗಿದೆ). ಈಗಿರುವ ಹಲವು ಜನಪ್ರಿಯ ಸಿದ್ಧ ಮಾದರಿಗಳಿಂದ ಹೊರ ಬಂದಾಗಲೇ ಈ ಸಾಂಸ್ಕೃತಿಕ ಮಿಶ್ರಣ (ಹಾಗೂ ಜನಾಂಗೀಯ ಮಿಶ್ರಣ) ಹೇಗೆ ಆಯಿತೆಂದು ಅರಿಯುವ ಪ್ರಯತ್ನದೆಡೆ ಸಾಗಬಹುದು.
ಡಾ.ಡಿ.ಎನ್. ಶಂಕರಭಟ್ಟರನ್ನು ಹೇಗೆ ಸಂಸ್ಕೃತ ವಿರೋಧಿಯೆಂದು ಕರೆಯವುದು ತಪ್ಪು, ಇಂತಹ ತಪ್ಪುಗಳ ಹಲವಿವೆ. ಏಕೆಂದರೆ ಸಂಸ್ಕೃತ-ಕನ್ನಡ, ದ್ರಾವಿಡ-ಆರ್ಯ, ಕನ್ನಡ-ತಮಿಳು ಈ ಪರ-ವಿರೋಧ ನೆಲೆಗಳು ಇಂದಿನ ಗ್ರಹಿಕೆಯಿಂದಲೇ ಪ್ರೇರಿತವಾಗಿರುತ್ತವೆ.
ದ್ರಾವಿಡ ಕಲ್ಪನೆ ಭಾಷಿಕ, ಜನಾಂಗೀಯ ಹಾಗೂ ಪ್ರಾದೇಶಿಕವೂ ಸಹ. ಪ್ರಜಾವಾಣಿಯಲ್ಲಿ ಬಂದ `ಕನ್ನಡ ದ್ರಾವಿಡವಲ್ಲ, ಕನ್ನಡಿಗರು ದ್ರಾವಿಡರಲ್ಲ` ಲೇಖನ ಭಾಷೆಗಳ ವರ್ಗೀಕರಣವನ್ನು ತಿರಸ್ಕರಿಸುವುದಿಲ್ಲ.. ಹಾಗಾದರೆ ಸಮಸ್ಯೆ ಇರುವುದು ಎಲ್ಲಿ. ಅವರ ಪ್ರಕಾರ ತಮಿಳರು ತಮ್ಮದೇ ದ್ರಾವಿಡ ಭಾಷೆ ಎಂದು ಹೇಳಿಕೊಳ್ಳುವುದು. ಇದು ತಮಿಳರ ಹುಚ್ಚುತನವಾದೀತು.  ಈ ಕಾರಣಕ್ಕೆ ಆ ಲೇಖನದ ಪ್ರಶ್ನೆಯನ್ನು ಒಂದು ಗಂಭೀರವಾದ ಜ್ಞಾನಶಿಸ್ತಿನ ಪ್ರಶ್ನೆಯಾಗಿ  ಸಮಾಜ ವಿಜ್ಞಾನಿಗಳು (ಮುಖ್ಯವಾಗಿ ಭಾಷಾಶಾಸ್ತ್ರಜ್ಞರು) ಸ್ವೀಕರಿಸಲಾರರು ಎಂದು ನಾನು ಭಾವಿಸುತ್ತೇನೆ.
ನಮ್ಮ ಕನ್ನಡ ಸಂಸ್ಕೃತಿಯನ್ನು ವಿಶಿಷ್ಟವಾಗಿ ಕಟ್ಟಿಕೊಳ್ಳಲು `ಅನ್ಯದ ಬಗೆಗಿನ` ತೀವ್ರ ಅಸಮಾಧಾನ ಸಹಾಯಕವಾಗಲಾರದು.

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 6, 2006 - 4:11pm — anant

ಕನ್ನಡ ದ್ರಾವಿಡ ಭಾಷೆ ಅಲ್ಲ.

anant's picture

ಕನ್ನಡ ದ್ರಾವಿಡಭಾಷೆ ಅಲ್ಲ. ಯಾಕೆ೦ದರೆ ಇದಕ್ಕೆ ತಮಿಳಿಗಿ೦ತ ಹಿ೦ದಿನ ಇತಿಹಾಸವಿದೆ. ಸ್ವರೂಪ ಬೆರೆ ಇರಬಹುದು. ಇದು ಸಂಸ್ಕೃತ ದಿ೦ದ ನೇರವಾಗಿ ಉದಯಿಸಿದಭಾಷೆ. ಆದ್ದರಿ೦ದ ನಾವು ಕನ್ನಡ ತನ ಉಳಿಸಿಕೊಳ್ಳಲು ಅದನ್ನು ಸಾರ್ವಜನಿಕವಾಗಿ ಉಪಯೋಗಿಸ ಬೇಕಾಗಿದೆ. ನಮ್ಮ ಹೆಸರಿನಕೊನೆಗೆ ಏನು ಸೇರಿಸಿ ಕೊಳ್ಳುತ್ತೇವೆ ಎನ್ನುವದಕ್ಕಿ೦ತ ನಿರ್ದಾಕ್ಷಿಣ್ಯವಾಗಿ ಸಮಾಜಿಕವಾಗಿ ನಾವು ಅದನ್ನು ಉಪಯೋಗಿಸಬೇಕಾಗಿದೆ. ಆದರೆ ನಾವು ದಾಕ್ಷಿಣ್ಯಕ್ಕೆ ಬಲಿಯಾಗಿ ಎದುರಿನವನು ಏನುಭಾಷೆ ಉಪಯೋಗಿಸುತ್ತಾನೋ ಅದನ್ನೇ ಉಪಯೋಗಿಸುವಷ್ಟು ಉದಾರಿಗಳಾಗಿದ್ದೇವೆ. ಅದು ಕನ್ನಡಕ್ಕೆ ಕುತ್ತು ತ೦ದಿದೆ.

ಅಪರೂಪವಾಗಿ ಬ೦ದಿರುವ ಪ್ರವಾಸಿಗನಿಗೆ ಸಹಾಯಕ್ಕಾಗಿ ಬೆರೆ ಭಾಷೆ ಬಳಸುವದು ಬೇರೆ ಆದರೆ ಇಲ್ಲೇ ವಾಸಿಸುವ ವರ ವಿಚಾರ ವಾಗಿ ನಾವು ನಿರ್ದಾಕ್ಷಿಣ್ಯ ದಿ೦ದ ನಡೆದು ಕೊಳ್ಳಲೇ ಬೇಕಾಗಿದೆ. 

ಅನಂತ ಪಂಡಿತ 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2006 - 8:51am — ಸಂಗನಗೌಡ

ಪಂಡಿತರೇ

ಸಂಗನಗೌಡ's picture

Quote:

ಸಿರಿ ಅನಂತ ಪಂಡಿತರು ಬರೆದದ್ದು:

ಇದು ಸಂಸ್ಕೃತ ದಿ೦ದ ನೇರವಾಗಿ ಉದಯಿಸಿದಭಾಷೆ.

ಇದರ ಬಗ್ಗೆ ನಾನು ಬಾಯಿ ತೆರೆದರೆ, ಬಿರುಸಾದೀತು. ಇಂತಹ ಮೂಡನಂಬಿಕೆಯ ಜನ ಇನ್ನೂ ಇದ್ದಾರೆ ಎಂದರೆ, ಕೇಳಿ ಬೆರಗೆನಿಸುತ್ತದೆ. ಆಗಿನ ಸಮಯದಲ್ಲಿ ಸಂಸ್‍ಕ್‍ರುತವು ಹೇಗೆ ಈಗ ಇಂಗಲೀಸು ಸೇರಿಕೊಳ್ಳುತ್ತಿದೆ, ಹಾಗೆ ಸೇರಿಕೊಂಡಿದೆ ಎಂಬುದನ್ನು ಈ ಕೊಂಡಿಯಲ್ಲಿ ಎಳೆ ಎಳೆಯಾಗಿ ಬಿಡಿಸಲು ನೋಡಿದ್ದೇನೆ, ನೋಡಿರಿ.

Quote:

ಆದರೆ ನಾವು ದಾಕ್ಷಿಣ್ಯಕ್ಕೆ ಬಲಿಯಾಗಿ ಎದುರಿನವನು ಏನುಭಾಷೆ ಉಪಯೋಗಿಸುತ್ತಾನೋ ಅದನ್ನೇ ಉಪಯೋಗಿಸುವಷ್ಟು ಉದಾರಿಗಳಾಗಿದ್ದೇವೆ. ಅದು ಕನ್ನಡಕ್ಕೆ ಕುತ್ತು ತ೦ದಿದೆ.

ನಿಮ್ಮ ಕನ್ನಡ ಕಾಳಜಿಯನ್ನು ನಾನು ಒಪ್ಪುತ್ತೇನೆ, ಆದರೆ ನಿಮ್ಮ ತಪ್ಪು ತಿಳುವಳಿಕೆಯನ್ನು ತುಸು ಸರಿಪಡಿಸಿಕೊಳ್ಳಿ. ಕನ್ನಡದ ಮೂಲದ ಬಗೆಗಿನ ಹೊತ್ತಿಗೆಗಳನ್ನು ಓದಿ, ತತ್‍ಸಮ - ತದ್‍ಬವಗಳು ಏಕೆ ಹುಟ್ಟಿಕೊಂಡವು?, ಕ ಕೆಳಗೆ ಷ ಬರೆದು ಕ್ಷ ಮಾಡಿ, ಮತ್ತು ಜ ಕೆಳಗೆ ಞ ಬರೆದು ಜ್ಞ ಮಾಡಿ ಅವೂ ಮೂಲಾಕ್ಕರಗಳೆಂದು ಏಕೆ ಓದಿಕೊಂಡು ಬಂದೆವು? ನಾಮಪದಕ್ಕೆ ಇಸು ಸೇರಿಸಿಕೊಂಡು ಕೀಯಾಪದವಾಗಿಸಿಕೊಂಡಿರುವುದಲ್ಲಿ ಇರುವ ತೊಂದರೆ ಏನು? ಇಂತ ಕೇಳಿಕೆಗಳನ್ನು ನಿಮಗೆ ನೀವೆ ಕೇಳಿಕೊಂಡು ಉತ್ತರ ಹುಡುಕತೊಡಗಿ, ಆಗ ಏನು ನಿಮಗೆ ತಿಳಿಯುವುದೋ ಅದನ್ನು ನಮಗೂ ತಿಳಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 10:25am — kannadakanda

ಉ: ಪಂಡಿತರೇ

kannadakanda's picture

ನಾನಿದನ್ನು ಒಪ್ಪಲಾಱೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 10:27am — kannadakanda

ಉ: ಪಂಡಿತರೇ

kannadakanda's picture

ಅಂದರೆ ಸಂಗನಗೌಡರ ವಾದ ಒಪ್ಪುತ್ತೇನೆ. ಸಿರಿ ಅನಂತರ ವಾದ ಒಪ್ಪಲಾಗದು. ಸಿರಿ ಅನಂತರು ಪುರಾವೆ ಒದಗಿಸಲಾಱರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 11, 2006 - 6:35pm — ismail

ವಿವರವಾಗಿ ಬರೆಯಿರಿ

ismail's picture

ಪ್ರಿಯ ಅನಂತ ಪಂಡಿತರೇ ತಮ್ಮ ವಾದವನ್ನು ವೈಜ್ಞಾನಿಕವಾಗಿ ಮಂಡಿಸಿದ್ದರೆ ಒಳ್ಳೆಯದಿತ್ತು. ಕನ್ನಡ ಸಂಸ್ಕೃತ ಜನ್ಯ ಭಾಷೆಯಾಗಿರುವುದರ ಕಾರಣಗಳನ್ನು ವಿವರವಾಗಿ ಬರೆಯಬೇಕೆಂದು ವಿನಂತಿಸುತ್ತಿದ್ದೇನೆ.

ಇಸ್ಮಾಯಿಲ್ 

ನನ್ನ ಬ್ಲಾಗ್ ನೋಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2006 - 9:50am — shreeharsha4u

ಅದ್ಭುತವಾಗಿದೆ

shreeharsha4u's picture

ಅದ್ಭುತವಾಗಿ ಸಾಗುತ್ತಿದೆ ಈ ಚರ್ಚೆ. ಎಷ್ಟೋ ಹೊಸ ಹೊಸ ವಿಷಯಗಳನ್ನ ತಿಳಿದುಕೊಳ್ಳಲಿಕ್ಕೆ, ಹೊಸ ಹೊಸ ನಿಟ್ಟಿನಲ್ಲಿ ಯೋಚಿಸುವುದಕ್ಕೆ ಪ್ರೇರಣೆ ನೀಡುತ್ತಿರುವ ಎಲ್ಲರಿಗೂ ವಂದನೆಗಳು. ಹೀಗೇ ಹೊಸ ವಿಚಾರಗಳೊಂದಿಗೆ ಮುಂದುವರಿಯಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 3, 2007 - 8:14pm — smurthygr

ಉ: ಕನ್ನಡ ದ್ರಾವಿಡ ಭಾಷೆಯಲ್ಲ ; ಕನ್ನಡಿಗರು ದ್ರಾವಿಡರಲ್ಲ.

smurthygr's picture

(ಇನ್ನೇನೋ ನೋಡುತ್ತಿದ್ದಾಗ ಇದು ಈಗ ಸಿಕ್ಕಿತು) ಚೆನ್ನಾಗಿ ಸಾಗುತ್ತಿದ್ದದ್ದು ಇದ್ದಕ್ಕಿದ್ದಂತೆ ನಿಂತು ಹೋಗಿದೆಯಲ್ಲಾ? ಪುನಃ ಮುಂದುವರಿಸಬಾರದೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2008 - 10:31am — kannadakanda

ಉ: ಕನ್ನಡ ದ್ರಾವಿಡ ಭಾಷೆಯಲ್ಲ ; ಕನ್ನಡಿಗರು ದ್ರಾವಿಡರಲ್ಲ.

kannadakanda's picture

ಸಂಪದದಲ್ಲಿ ಕನ್ನಡ ವಿದುಷಿಯರು ಸಿಗುತ್ತಿಲ್ಲ. ಈ ವಿಚಾರ ಮುಂದುವರೆಯಲಿ ಎಂಬುದಱ ಬದಲು ನೀವೇನದಾರೂ ಚರ್ಚೆ (ಪರ ಅಥವಾ ವಿರೋಧ) ಮಂಡಿಸಿದ್ದರೆ ಚೆನ್ನಾಗಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಸ್ತಕನಿಧಿ - ’ಕನ್ನಡಿಗರು ಆಳಿದ ಅಮೇರಿಕ’ , ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲೀಷ್’
  • ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ
  • ಎಲರ್‍-ದ್ರಾವಿಡ Air-Dravida
  • ತುಳು ಕುರಿತೋದು... ದ್ರಾವಿಡ ಯುನಿವರ್ಸಿಟಿಯಲ್ಲಿ
  • 'ಪ್ಲಾನೆಟ್ ಕನ್ನಡ' (Planet Kannada)
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator