Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ನನ್ನ ಕನ್ನಡ ಕಲಿಕೆ -೧

September 29, 2006 - 12:50pm — shreekant.mishrikoti

ಹಿಂದೊಮ್ಮೆ 'ನಾನು ಈಗ ಕನ್ನಡ ಕಲಿಯುತ್ತಿದ್ದೇನೆ ' ಎಂಬ ಬ್ಲಾಗ್ ಲೇಖನ ಬರೆದಿದ್ದುದು ನೆನಪಿನಲ್ಲಿರಬಹುದು. ಮೊದಲಿಗೆ ಭೋಗಾದಿ ಮಹೇಶರು , ಅನಗತ್ಯ ಸಂಸ್ಕೃತ ಶಬ್ದಗಳ ಬಳಕೆ ಕುರಿತು ಕಣ್ತೆರೆಸಿದರು , ಜತೆಜತೆಗೆ ಸಂಗನಗೌಡರ ಕೆಲವು 'ಇಚಾರ' ಇಲ್ಲೇ ಸಂಪದದಲ್ಲಿ ಓದಿದೆ. ಒತ್ತಕ್ಷರ ಕುರಿತಾದ ಅವರ ವಿಚಾರ ಓದಿ ಆರ್ಕಿಮಿಡೀಸ್ 'ಯುರೇಕಾ ' ಎಂದಂತೆ 'ಹೌದಲ್ಲಾ' ಎಂದುದ್ಗರಿಸಿದೆ. ಹಿಂದೊಂದು ಸಲ ಡಿ. ಎನ್. ಶಂಕರಭಟ್ಟರ ' ಕನ್ನಡಪದ ರಚನೆ' ಎಂಬ ಪುಸ್ತಕವನ್ನು ಓದಿದ್ದೆ. ಇದೆಲ್ಲದರ ಪರಿಣಾಮವಾಗಿ ಶಬ್ದಕೋಶವೊಂದನ್ನಿಟ್ಟುಕೊಂಡು ಓದಲಾರಂಭಿಸಿದ್ದೇನೆ. ಅ,ಆ,ಇ,ಈ .... ಆಗಿ ಕ ಅಕ್ಷರಕ್ಕೆ ಬಂದಿದ್ದೇನೆ.

ಬನ್ನಿ , ನಾನು ಕಂಡುಕೊಂಡ ವಿಷಯಗಳೇನು? ತಿಳಿದುಕೊಳ್ಳಿ.

ಅಂಕುರ,ಅಂಕುರಿಸು - ಮೊಳಕೆ , ಮೊಳಕೆಯೊಡೆ
ಅಂಗುಷ್ಟ - ಹೆಬ್ಬೆರಳು
ಅಂಚುಮಟ - ಅಂಚಿನವರೆಗೆ (ನೋಡಿ. ಕಂಟ(ಠ)ಮಟ, ಅಲ್ಲಿಮಟಾ )
ಅಂಜು , ಅಂಜಿಸು , ಅಂಜುಕು(ಗು)ಳಿ
ಅಂಟು , ಅಂಟಿಸು , ಅಂಟುರೋಗ
ಅಂದ , ಅಂದಗೊಳಿಸು , ಅಂದಗೇಡಿ , ಅಂದಗೆಡಿಸು
ಅಂತರ್ದೃಷ್ಟಿ - ಒಳನೋಟ
ಅಂಧಶ್ರದ್ಧೆ - ಕುರುಡುನಂಬಿಕೆ
ಅಂಬಾಡಿಯೆಲೆ- ನೀಳವಾದ ವೀಳ್ಯದೆಲೆ
ಅಕ್ಕಡಿಕಾಳು- ಬೇಳೆಕಾಳು
ಅಕ್ಕರ , ಅಕ್ಕರತೆ , ಅಕ್ಕರೆ
ಅಕ್ಷತಾರೋಪಣ - ಅಕ್ಕಿಕಾಳು ಹಾಕುವದು.
ಅಕ್ಷರಶ: - ಅಕ್ಷರ ಅಕ್ಷರ ವಾಗಿ
ಅಗಳಿ - ಬೋಲ್ಟು
ಅಗಾವು( ಹಿಂದಿ ಮೂಲ)- ಮುಂಗಡ
ಅಗ್ನಿ, ಅಗ್ಗಿಷ್ಟಿಕೆ - ಅಗ್ಗಿ , ಅಗ್ಗಿಟಿಕೆ
ಅಚ್ಚ - ಸ್ಪಷ್ಟವಾದ, ಸರಿಯಾದ
ಅಚ್ಚರಿ-ಆಶ್ಚರ್ಯ
ಅಚ್ಚಳಿ- ಹಾಳಾಗು
ಅಚ್ಚುಕಟ್ಟು
ಅರಣ್ಯ- ಅಡ(ಟ)ವಿ

ಅಟ್ಟು - , ಅಟ್ಟಿಸು, ಅಟ್ಟುಗೂಳು(ಬೇಯಿಸಿದ ಅನ್ನ) , ಅಟ್ಟುಣ್ಣು
ಅಡಿಗೆ , ಅಡು , ಅಡುಗೂಳು(ಬೇಯಿಸಿದ ಅನ್ನ) ,ಅಡುಗಬ್ಬು- (ಉರುವಲ ಕಟ್ಟಿಗೆ), ಅಡುಗೂಲಜ್ಜಿ (ಇತರರರಿಗೆ ಅಡಿಗೆ ಮಾಡಿ ಹಾಕುವಾಕೆ) , ಅಡುಬಾಣಲೆ
ಅಡಕ , ಅಡಕಗೊಳಿಸು
ಅಡವಿ , ಅಡವಿಗಿಚ್ಚು , ಅಡವಿಪಾಲು , ಅಡವಿಬೀಳು ( ದಾರಿತಪ್ಪು , ಅಡ್ಡಹಾದಿಹಿಡಿ- ನೋಡಿ- ಆಡಾಡುತ್ತ ಅಡವಿಬಿದ್ದರಂತೆ)
ಇಂಧನ - ಉರುವಲು ,
ಅಡಿ , ಅಡಿಗ ( ದೇವರ ಪಾದದ ಬಳಿ ಇರುವವ - ಅರ್ಛಕ) , ಅಡಿಕೆಡು , ಅಡಿಗಾಣು , ಅಡಿಗಲ್ಲು , ಅಡಿಗಡಿಗೆ , ಅಡಿಮುಟ್ಟ , ಅಡಿಯಿಡು , ಅಡಿಯ ( ಸೇವಕ , ಆಳು), ಅಡಿಯಿಂದ ಮುಡಿಯವರೆಗೆ.

Ornamental seperator
  • shreekant.mishrikoti ರವರ ಬ್ಲಾಗ್
  • Login or register to post comments
  • 654 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 29, 2006 - 1:19pm — Sunil Jayaprakash

ಯಾವ ಶಬ್ದಕೋಶವದು

Sunil Jayaprakash's picture

ಶ್ರೀಕಾಂತ ಮಿಶ್ರಿಕೋಟಿಗಳೇ,

shreekant.mishrikoti wrote:

ಇದೆಲ್ಲದರ ಪರಿಣಾಮವಾಗಿ ಶಬ್ದಕೋಶವೊಂದನ್ನಿಟ್ಟುಕೊಂಡು ಓದಲಾರಂಭಿಸಿದ್ದೇನೆ. ಅ,ಆ,ಇ,ಈ .... ಆಗಿ ಕ ಅಕ್ಷರಕ್ಕೆ ಬಂದಿದ್ದೇನ

ಯಾವ ಶಬ್ದಕೋಶವದು.

ಅಂದ ಹಾಗೆ ನನ್ನ ಕನಸನ್ನು ಓದಲು ಮರೆಯಬೇಡಿರಿ, ದಯವಿಟ್ಟು, ಇಂದು ಆ ಕನಸನ್ನು ಹಾಕಲಿದ್ದೇನೆ.

ಸವಿಯೊದಗು.

  • Login or register to post comments
  • link
  • Email this ಪ್ರತಿಕ್ರಿಯೆ
September 29, 2006 - 1:33pm — shreekant.mishrikoti

ನಿಮ್ಮ ಕನಸಿನ ( ಕಣಸೋ ಏನೋ? ) ದಾರಿ ಕಾಯುತ್ತಿರುವೆ

shreekant.mishrikoti's picture

ಬೇಗ ಹಾಕಿ

ನಿಮ್ಮ ಕನಸಿನ ( ಕಣಸೋ ಏನೋ? ) ದಾರಿ ಕಾಯುತ್ತಿರುವೆ

(ಗೊತ್ತಿಲ್ಲದವರಿಗಾಗಿ - ಕನಸು -Dream
ಕಣಸು - vision

ನೋಡಬಹುದು ಕನಸಿನೊಳಗೊಂದು ಕಣಸು- ಬೇಂದ್ರೆ ಕವನ)

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
September 29, 2006 - 4:26pm — Sunil Jayaprakash

ಕಣಸಿನ ಪೂರ್ತಿ ಪದ್ಯ

Sunil Jayaprakash's picture

ಮಿಶ್ರಿಕೋಟಿಗಳೆ,

shreekant.mishrikoti wrote:

ಕನಸು - Dream
ಕಣಸು - vision

ಸವಿಯೊದಗು. ನನಗೆ ತಿಳಿದಿರಲಿಲ್ಲ. "ಕನ್ನಡದ ಕುಡಿ" ಗಳ ಭಂಡಾರ ಕುಗ್ಗಿಲ್ಲ. ಆದರೆ ಅದರ ತೂಕ ನನಗೆ ತಿಳಿದಿಲ್ಲ ಅಷ್ಟೇ. ಹೀಗೆಯೇ ಮುಂದೆಯೂ ತಿಳಿಕೊಡುತ್ತಾ ಇರಿ. ಮೂರು ಬಾರಿ ಸವಿಯೊದಗು.

shreekant.mishrikoti wrote:

ನೋಡಬಹುದು ಕನಸಿನೊಳಗೊಂದು ಕಣಸು- ಬೇಂದ್ರೆ ಕವನ)

ಕವನವನ್ನು ನಮಗೆಲ್ಲರಿಗೂ ತಿಳಿಸಲು ಆಗುತ್ತದೆಯೇ?. ಇಂದೇ "ಅಂಕಿತ ಪುಸ್ತಕ"ದೆಡೆಗೆ ದಾಪುಗಾಲು ಹಾಕುತ್ತಿದ್ದೇನೆ. ಹಾಗೆಯೇ ನನ್ನದು ಕನಸೋ, ಕಣಸೋ ನೀವೇ ತೂಕ ಮಾಡಿ ತಿಳಿಸಿ ಹೇಳಿ.

ಸವಿಯೊದಗು.

  • Login or register to post comments
  • link
  • Email this ಪ್ರತಿಕ್ರಿಯೆ
January 10, 2007 - 3:09pm — shreekant.mishrikoti

Re: ಕಣಸಿನ ಪೂರ್ತಿ ಪದ್ಯ

shreekant.mishrikoti's picture

ಅಂದು ಕಣಸಿನ ಪೂರ್ತಿ ಪದ್ಯ ಕೇಳಿದ್ದಿರಿ . ಅದು ಇಲ್ಲಿದೆ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
June 20, 2007 - 4:22pm — Sunil Jayaprakash

ಉ: Re: ಕಣಸಿನ ಪೂರ್ತಿ ಪದ್ಯ

Sunil Jayaprakash's picture

ಈ ದಿನ, ನಮ್ಮ ಮಿಶ್ರಿಕೋಟಿಗಳಿಂದಾಗಿ, ಕನಸಿನೊಳಗೊಂದು ಕಣಸು ಪದ್ಯ ಸಿಕ್ಕಿತು. ಇಲ್ಲಿದೆ ನೋಡಿ.
ಪುಟ ೧
ಪುಟ ೨

೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಣೆಗೊಂಡ, ಕನ್ನಡದ ಬಾವುಟ ಪುಸ್ತಕದಲ್ಲಿ ಈ ಪದ್ಯ ಇದೆ. ಈ ಕನಸಿನಲ್ಲಿ, ಯಾವ ಕಣಸನ್ನು ಬೇಂದ್ರೆಯವರು ಕಂಡಿದ್ದರೋ ತಿಳಿಯುವುದು ಕಷ್ಟ. ಮೈನಡಗುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
June 20, 2007 - 4:27pm — Sunil Jayaprakash

ಉ: Re: ಕಣಸಿನ ಪೂರ್ತಿ ಪದ್ಯ

Sunil Jayaprakash's picture

ಮನ್ನಿಸಿ, ಅದು ಕನ್ನಡ ಸಾಹಿತ್ಯ ಪರಿಷತ್ತಲ್ಲ, ಆಗ ಅದು ಕರ್ನಾಟಕ ಸಾಹಿತ್ಯ ಪರಿಷತ್ತಾಗಿತ್ತು. ಅದರ ಲಾಂಛನವನ್ನು ಗಮನಿಸಿ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀವೂ ಕನ್ನಡ ಶಬ್ದಕೋಶ ಓದಿ
  • ಅನುವಾದದಲ್ಲಿ 'ಆಹಾ!' - wildcard ಗೆ ಕನ್ನಡ ಪದ
  • ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.
  • ಈಗ ನನ್ನ ಭಾಷೆಯನ್ನೇ ಮತ್ತೊಮ್ಮೆ ಕಲಿಯತೊಡಗಿದ್ದೇನೆ. !
  • ಕನ್ನಡ ಬರಹವನ್ನು ಸರಿಪಡಿಸೋಣ - ಶಂಕರಭಟ್ಟರ ಪುಸ್ತಕ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"

— ಕುವೆಂಪು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator