ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಕನ್ನಡ ಮತ್ತು ಕರ್ನಾಟಕ ಮತ್ತು ರಾಜ್ಯೋತ್ಸವ; ನೀವು ಏನು ಮಾಡುತ್ತಿದ್ದೀರಿ?

October 30, 2006 - 2:18pm — shreekant.mishrikoti

೧. ಮೊದಲು ಈ ವಾರದ ಸುಧಾ ಕೊಂಡುಕೊಳ್ಳಿ ಇಲ್ಲವೆ ಅಂತರ್ಜಾಲದಲ್ಲಿ ಓದಿ (www.sudhaezine.com) . ರಾಜ್ಯೋತ್ಸವ ನಿಮಿತ್ತ ಒಳ್ಳೆಯ ಲೇಖನಗಳಿವೆ. ( ಅದೇಕೋ ಕನ್ನಡ ಕರ್ನಾಟಕ ಕುರಿತಾದ ಲೇಖನಗಳು ತರಂಗ ದಲ್ಲಿಲ್ಲ . ಕರ್ಮವೀರ ಸಿಗಲಿಲ್ಲ . ಕಸ್ತೂರಿಯಲ್ಲೂ ಇಲ್ಲ .)
ಸಾಮಾನ್ಯವಾಗಿ ಈ ಬಗೆಯ ಲೇಖನಗಳು ಆಗಾಗ ಸುಧಾ/ಮಯೂರ/ಪ್ರಜಾವಾಣಿಗಳಲ್ಲಿ ಮಾತ್ರ.
ಸುಧಾದಲ್ಲಿ ಭುವನೇಶ್ವರಿಯ ತೈಲಚಿತ್ರದ ಪ್ರತಿ ಇದೆ .

ನನಗೆ ಗೊತ್ತಿರಲಿಲ್ಲ , ಹಿಂದಿಯಂತೆ ಇಂಗ್ಲೀಷಿಗೂ ತನ್ನದೇ ಆದ ಲಿಪಿ ಇಲ್ಲ ! ಅದುಅ ಬಳಸುತ್ತಿರುವದು ಲ್ಯಾಟಿನ್ ಲಿಪಿ?

೨. ಕನ್ನಡದ ಏಳಿಗೆ ಕನ್ನ್ಡ ಜನರಿಂದ ಮಾತ್ರ ಸಾಧ್ಯ - ಸರಕಾರ / ಸಾಹಿತಿ/ಕಲಾವಿದರಿಂದಲ್ಲ. ಕನ್ನಡಮ್ಮನ ರಥಕ್ಕೆ ಕನ್ನಡಿಗರೇ ಸಾರಥಿಗಳು . ಎಂಬ ಲೇಖನ ಪ್ರಜಾವಾಣಿಯಲ್ಲಿದೆ. (೨೮-೧೦-೨೦೦೬). ಪ್ರತಿಯೊಬ್ಬ ಕನ್ನಡಿಗನೂ ಕನ್ನಡವನ್ನು ಬದುಕಿನ ಪ್ರತಿಹಂತದಲ್ಲೂ ಬಳಸಬೇಕು.

೩. ಶಿಕ್ಷಣರಂಗದಲ್ಲಿ ಕನ್ನಡವನ್ನು ಉಳಿಸಿದರೆ ಮಾತ್ರ ಕನ್ನಡ ಉಳಿಯುವುದು - ಬರಗೂರರ ಅಭಿಪ್ರಾಯ

೪. ತಂತ್ರಜ್ಞಾನಕ್ಕೆ ಕನ್ನಡ ತರುವದು ಇಂದಿನ ಅಗತ್ಯ. ( ಐ.ಟಿ. ಮೇಳದಿಂದ) .
ಇದನ್ನು ನಾನು ಕೈಲಾದ ಮಟ್ಟಿಗೆ ಮಾಡುತ್ತಿದ್ದೇನೆ. ಲೈನಕ್ಸಿನ ಕನ್ನಡೀಕರಣದಲ್ಲಿ ತೊಡಗಿದ್ದೇನೆ. ಮತ್ತು ಕಂಪ್ಯೂಟರ್ ಕಲಿಕೆ ಸರಣಿಯನ್ನು ಸಂಪದದಲ್ಲಿ ಅರಂಭಿಸಿದ್ದೇನೆ.

ನೀವು ಏನು ಮಾಡುತ್ತಿದ್ದೀರಿ?

ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು .

ಕನ್ನಡವನ್ನು ಬಳಸಿ , ಕನ್ನಡವನ್ನು ಉಳಿಸಿ.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 1243 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 30, 2006 - 9:00pm — venkatesh

ರಾಜ್ಯೋತ್ಸವ......

venkatesh's picture

ಸುಧ ಪತ್ರಿಕೆಯಲ್ಲಿ ಕನ್ನಡವನ್ನು ಉಳಿಸಿ ಎನ್ನುವ ಬದಲು ಕನ್ನಡ ಬಳಸಿ--ಎನ್ನುವ ಮಾತು ಎಷ್ಟು ಅನ್ವರ್ಥ ವಾಗಿದೆ! ಇದನ್ನು ಬರಿ ರಾಜ್ಯೋತ್ಸವದ ದಿನ ಮಾಡಿ ಬಿಡುವುದಲ್ಲ. ಪ್ರತಿದಿನವೂ ಇದನ್ನು ಅನುಸ್ಠಾನಕ್ಕೆ ತರಲು ಯತ್ನಿಸ ಬೇಕು. ಕನ್ನಡದ ಬಗ್ಗೆ ಪ್ರೀತಿಯನ್ನು ಬೆಳಸಿಕೊಳ್ಳಲು 'ದಿನ' ಆಚರಿಸುವಂತಹ 'ಆಪತ್ತು 'ಯಾವ ಭಾಷಾಭಿಮಾನಿಗೂ ಬರದಿರಲಿ. ಹಿಂದಿ(ಕನ್ನಡದಂತೆ ಅದೂ ಒಂದು ರಾಷ್ಟ್ರಭಾಷೆ) ದಿನ ಆಚರಣೆಯೂ ಇದೇತರಹ ಇರುತ್ತೆ !

ಇದಕ್ಕೆ ಯಾರ ಗವಾಹನೆಯ (ಸಾಕ್ಷಿಯ) ಅಗತ್ಯವಿದೆಯೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 31, 2006 - 12:19pm — Sunil Jayaprakash

ಸದ್ಯಕ್ಕೆ ಇಷ್ಟು ಮಾಡೋಣ ಅಂತ ಇದ್ದೀನಿ

Sunil Jayaprakash's picture

೧. ವಂಶವೃಕ್ಷ ಕಾದಂಬರಿಯಲ್ಲಿ ಬರುವ ಗಟ್ಟಿತನದಿಂದ ಕೂಡಿರುವ ಮಾತುಗಳ ಬಗ್ಗೆ ಗೆಳೆಯನೊಡನೆ ಚರ್ಚಿಸಬೇಕು.

೨. ಪರ್ವ ಕಾದಂಬರಿಯ ಕನಿಷ್ಟ ೩೫೦ ಪುಟಗಳನ್ನಾದರೂ ಓದಬೇಕು. ಒಟ್ಟು ಸರಿಸುಮಾರು ೬೨೫ ಪುಟಗಳಿವೆ ಅದರಲ್ಲಿ.

೩. ರಂಗ ಶಂಕರದಲ್ಲಿ ನಾಟಕ ನೋಡಬೇಕು.

೪. ಯಾರೊಡನೆಯಾದರು ಕನ್ನಡದಲ್ಲಿ ಜಗಳವಾಡಬೇಕು.

೫. ಮಾರನೆಯ ದಿನ ನಮ್ಮ ಮನೆಯಲ್ಲಿ ತಿಥಿಯಿರುವುದರಿಂದ ಹಣ್ಣು, ಕಾಯಿಪಲ್ಲೆ(ಅದೇ ತರಕಾರಿ)ಗಳನ್ನು ತರಬೇಕು.Laughing

೬  ಒಂದಷ್ಟು ಮಂದಿಗೆ ಕನ್ನಡ ರಾಜ್ಯೋತ್ಸವ ಎಂದರೇನು ತಿಳಿಸಿಕೊಡಬೇಕು. ಅದನ್ನು ಈಗಾಗಲೇ ಬೇರೆದೇಶದ ನಮ್ಮ ಸಹೋದ್ಯೋಗಿಗಳಿಗೆ ಹೇಳಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 1, 2006 - 6:43pm — kadeshammi

ಸ್ವಾಮೀ ಬೇಡ !!!!

kadeshammi's picture

ರಾಜ್ಯೋತ್ಸವದ ಇಷ್ಟು ಮಾಡೋಣ ಅಂತಿದ್ದೀನಿ ಅನ್ನುವ ಸೂತ್ರದಲ್ಲಿ ಯಾಕೋ ನಾಕಣೆ (ಪ್ರಾಸಕ್ಕಾಗಿ ಮಾತ್ರ ಯಾವದೇ ಬೇರೆ ಅರ್ಥ ಇಲ್ಲ! ಇದ್ದರೂ ಸ್ವಾಗತ!!) ಅಂಕಣದ ಆಸೆ ಯಾಕೋ ನಾಕಾಣೆ! ಜಗಳ ಆಡುವದಕ್ಕೂ ಸಹ ಸರೀಕರಲ್ಲಿ ಜಗಳ ಆಡಬೇಕು ನಿಮಗೆ ನಾನಂತು ಸಿಗುವದಿಲ್ಲ!! ಬೇರೆಯವರಿಗೆ ಪುರುಸೊತ್ತಿಲ್ಲದಿದ್ದಲ್ಲಿ ಆಸೆ ಆಸೆ ಯಾಗಿಯೇ ಉಳಿಯುವ ಅಪಾಯವಿದೆ. ಮತ್ತೊಮ್ಮೆ ಯೋಚಿಸಿ ಸ್ವಾಮಿ !!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 13, 2006 - 6:16pm — Sunil Jayaprakash

ಆಸೆ ಆಸೆಯಾಗಿಯೇ ಉಳಿಯಿತು

Sunil Jayaprakash's picture

ಗೆಳೆಯರೆ, ಜಗಳವನ್ನಾಡಬೇಕೆಂಬೆನ್ನಾಸೆಯು ಸಾಕಾರಗೊಳ್ಳಲಿಲ್ಲ. ಆದರೆ ಸಮಾಧಾನದ ಸಂಗತಿಯೆಂದರೆ ನನ್ನೊಬ್ಬ ಗೆಳೆಯನು ಜಗಳವನ್ನಾಡಿದನು, ಕನ್ನಡದಲ್ಲಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 2, 2006 - 7:31am — venkatesh

ಸದ್ಯಕ್ಕೆ ಇಷ್ಟು ......

venkatesh's picture

ಯಾರಾದರೊಬ್ಬರ ಜೊತೆ ಕನ್ನಡದಲ್ಲಿ ಜಗಳವಾಡಬೇಕು. ನೆನಪಾಯಿತು ನೋಡಿ - "ಎಮ್ಮೆ ತಮ್ಮಣ್ಣ" ಚಿತ್ರನೋಡಿ. ಅದರಲ್ಲಿ ಮಂಜುಳಾ ಬೌಗುಳು ನಿಮಗೆ ಮುದ ತರಬಹುದು. ನನಗಂತೂ ಅದು ಅತಿ ಪ್ರಿಯವಾದ ಚಿತ್ರ. ರಾಜ್ ಕೂಡ ಎನ್ಕಡಿಮೆಯಿಲ್ಲ !

ನನ್ಮನೆ ಕಾಯ್ವಾಗ. ಬೇ...ನ್...ನೆ . ಓಗೊ ಎಲ್ಲಾ ನಂ ಗೊತ್ತೈತೆ. ಮು....ಇತ್ಯಾದಿ.
ನಾನೇನ್ ಸುಮ್ನೆ ಬುಟ್ಟೇನಾ ..ಓಗೆ ಓಗೆ....ಇತ್ಯಾದಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 1, 2006 - 4:43pm — BogaleRagale

ಪ್ರಯತ್ನ ಪ್ರಯತ್ನ ಪ್ರಯತ್ನ

BogaleRagale's picture

"ಕನ್ನಡಕ್ಕಾಗಿ ಹೋರಾಡಲು ನಿರ್ಧಾರ ಕೈಗೊಳ್ಳುವ ಬಗ್ಗೆ ಯೋಚಿಸುತ್ತೇವೆ ಅಂತ ಭರವಸೆ ನೀಡುತ್ತೇವೆ" ಎಂದು ಹೇಳುವವರ ಸಂಖ್ಯೆಯನ್ನು ಲೆಕ್ಕವಿಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ. Smiling
-ಅಸತ್ಯ ಅನ್ವೇಷಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
November 13, 2006 - 6:25pm — Sunil Jayaprakash

ಲೆಕ್ಕವಿಟ್ಟುಕೊಳ್ಳುವುದು ಹಾಗಿರಲಿ

Sunil Jayaprakash's picture

ಅಸತ್ಯ ಅನ್ವೇಷಿ wrote:
"ಕನ್ನಡಕ್ಕಾಗಿ ಹೋರಾಡಲು ನಿರ್ಧಾರ ಕೈಗೊಳ್ಳುವ ಬಗ್ಗೆ ಯೋಚಿಸುತ್ತೇವೆ ಅಂತ ಭರವಸೆ ನೀಡುತ್ತೇವೆ" ಎಂದು ಹೇಳುವವರ ಸಂಖ್ಯೆಯನ್ನು ಲೆಕ್ಕವಿಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ. Smiling

"ಲೆಕ್ಕವಿಟ್ಟುಕೊಳ್ಳುವ ಪ್ರಯತ್ನವನ್ನು ಯಾವಾಗ ಒಡರ್ಚಬೇಕು ಅಂದರೆ ಯಾವಾಗ ಆರಂಭಿಸಬೇಕು" ಅಂತ ಯೋಚಿಸಲು ಪ್ರಾರಂಭಿಸುತ್ತೀರಾ ಎಂಬ ಭರವಸೆ ನೀಡುವಿರಾ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇವತ್ತು ಏಡ್ಸ್ ದಿನ -( ಹೊಸ ಸುಧಾ ಮಯೂರ ಮತ್ತು ಕರ್ಮವೀರ ದೀಪಾವಳಿ ವಿಶೇಷಾಂಕ)
  • ಶುಭವಾಗಲಿ
  • ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ
  • ಹೌದು ನಮ್ದ ಮಂಗಳೂರು ಕನ್ನಡ. ಏನೀವಗ?
  • ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಗಣೇಶ
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 6, 2008 - 12:15am
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 11:03pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:35pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:32pm
  • ಚೈತನ್ಯ ಎಸ್
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 10:28pm
  • rameshbalaganchi
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:25pm
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 10:12pm
  • benaka
    ಉ: ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....
    July 5, 2008 - 10:02pm
  • kishorpatwardhan
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20pm
  • kalpana
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 5, 2008 - 9:15pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator