ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಮುಂಬೈಯಲ್ಲಿ ಮತ್ತೆ ಮಹಾಮಳೆ? ಶಿವಪಾರ್ವತಿಯರ ಸೋಲು !

May 31, 2006 - 6:30pm — shreekant.mishrikoti

ಟೀವಿಯಲ್ಲಿ ಮಹಾಭಾರತ ಧಾರಾವಾಹಿಯೊಂದಿಗೆ 'ಮಹಾ' ಶಬ್ದ ಹೆಚ್ಚು ಚಲಾವಣೆಗೆ ಬಂದಿತು . ಮಹಾಚುನಾವಣೆ ....ಇತ್ಯಾದಿ. ಹೋದ ವರುಷದ ಮುಂಬೈ ಮತ್ತು ಬೆಂಗಳೂರಿನ ಮಳೆಯ ಹಾವಳಿ ನಂತರ 'ಮಹಾಮಳೆ' ಶಬ್ದವೂ ಸೃಷ್ಟಿಯಾಯಿತು.
ಮುಂಬೈಗೆ ನಿನ್ನೆ ಮಾನ್ಸೂನು ಆಗಮಿಸಿತು . ರಾತ್ರಿ ಬಹಳ ಮಳೆ ಆಯಿತು, ಮಧ್ಯಾಹ್ನ ಕೂಡ ಆಯಿತು. ಮೊಬೈಲುಗಳಲ್ಲಿ ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ಬಹಳ ಮಳೆಯಾಗಲಿದೆ ಎಂಬ ಎಚ್ಚರಿಕೆ ಸಂದೇಶಗಳು ಹರಿದಾಡಿದವು. ನಾನು ಕಚೇರಿಯಿಂದ ಹೆಂಡತಿಗೆ ಫೋನ್ ಮಾಡಿ ಕೇಳಿದೆ ಏನು ಸುದ್ದಿ ? ಎಂದು . ಟೀವಿಯಲ್ಲಿ ಸತತ ವಾರ್ತೆಯ ವಾಹಿನಿಗಳಿಂದ ಏನಾದರೂ ಸುದ್ದಿ ಸಿಗುವದೇನೋ ಎಂದು .
ಅವಳು ಹೇಳಿದಳು ' ಹೌದು ; ಹೋದ ವರುಷದ ಹಾಗೆಯೇ ಈ ಸಲವೂ ಮಳೆಯಾಗುವದು'
'ಯಾರು ಹೇಳಿದರು ? ಯಾವ ಚಾನೆಲ್‍ನಲ್ಲಿ? '
' ಟೀವಿಯಲ್ಲಿ ಅಲ್ರೀ? ಕೆಲಸದವಳು ಹೇಳಿದಳು. - ಹಾಂ ಹಾಂ ಭಾಭೀಜಿ , ಐಸಾ ಹಿ ಹೋನೆವಾಲಾ ಹೈ- ಅಂತ '
' ಅವಳಿಗೆ ಯಾರು ಹೇಳಿದರಂತೆ? '
' ಅವಳಿರೋ ಜೋಪಡಪಟ್ಟಿಯಲ್ಲಿ ಎಲ್ಲರೂ ಹೇಳುತ್ತಿದ್ದಾರಂತೆ'

ನೋಡಿದಿರಾ ? ಬಹುಶ: ಅವರಿಗೇ ಹೆಚ್ಚಿಗೆ ಗೊತ್ತೋ ಏನೋ? ನಮ್ಮ ಹವಾಮಾನ ಇಲಾಖೆಯವರಿಗಿಂತ? ಅವರಿಗೆ ನೆಲಕ್ಕೆ ಕಿವಿ ಇರುತ್ತೇನೋ ?

ಇವತ್ತೇ ಮುಂಜಾನೆ ಒಂದು ಜನಪದ ಕಥೆ ಓದಿದೆ. ( ಮುಂಬೈಯಲ್ಲಿರುವ ಭಾರತೀಯ ಸಾಹಿತ್ಯ ಅಕಾಡೆಮಿಯಲ್ಲಿ ಮೊನ್ನೆ ಖರೀದಿ ಮಾಡಿದ ಕನ್ನಡ ಪುಸ್ತಕಗಳಲ್ಲಿ ಒಂದಾದ ' ಉತ್ತರ ಕರ್ನಾಟಕದ ಜನಪದ ಕಥೆಗಳು' ಪುಸ್ತಕದಲ್ಲಿ) ಕತೆಯ ಹೆಸರು - ಶಿವಪಾರ್ವತಿಯರ ಸೋಲು .

ಕಥೆ ಸಂಕ್ಷೇಪದಲ್ಲಿ ಹೀಗಿದೆ . ಒಬ್ಬ ಕುರುಬ ಒಂದು ಹಳ್ಳದ ದಂಡೆಯಲ್ಲಿ ಕುರಿಗಳಿಗೆ ವಸತಿಯನ್ನೇರ್ಪಡಿಸ ತೊಡಗುತ್ತಾನೆ.ಅಲ್ಲಿ ಶಿವಪಾರ್ವತಿ ಬಂದು " ಇಲ್ಲೇಕೆ? ಮಳೆ ಆಗಿಬಿಟ್ಟರೆ ಹಳ್ಳಕೊಳ್ಳ ತುಂಬಿ ಬರುವದಿಲ್ಲವೇ? " ಎಂದು ಕೇಳುತ್ತಾರೆ .
"ಮಳೆ ಹೋಯಿತು ತನ್ನ ನಾಡಿಗೆ ಮೂರು ತಿಂಗಳು" ಕುರುಬ ಬೀರ ಹೇಳುವ.
ಶಿವಪಾರ್ವತಿಯರು ಅಲ್ಲಿಂದ ವರುಣನ ಹತ್ತಿರ ಹೋಗಿ 'ಈಗಲೇ ಮಳೆರಾಯನನ್ನು ಕಳಿಸಿಕೊಡು ' ಎಂದರೆ ' ಮಳೆರಾಯನನ್ನು ಬೇರೆ ನಾಡಿಗೆ ಕಳಿಸಿದ್ದೇನೆ , ಅವನು ಬರುವದು ಮೂರು ತಿಂಗಳ ಬಳಿಕ ' ಎನ್ನುವ.ಶಿವಪಾರ್ವತಿಯರ ಮುಖಗಳು ಬಾಡಿ ಕೈಲಾಸಕ್ಕೆ ವಾಪಸು ಹೋದರು.
ಕುರುಬ , ಕುರಿ ಹಾಯಾಗಿ ಅಲ್ಲಿ ಮೂರು ತಿಂಗಳು ಕಳೆದರು.
ಆಗ ಶಿವಪಾರ್ವತಿಯರು ಮತ್ತೆ ಅಲ್ಲಿ ಬಂದರು. ಬೀರ ತನ್ನ ವಸತಿಯನ್ನು ಕೀಳುತ್ತಿದ್ದಾನೆ. ಶಿವಪಾರ್ವತಿಯರು ಅವನನ್ನು ಏಕೆಂದು ಕೇಳುತ್ತಾರೆ.
'ಮಳೆರಾಯ ಬರುವನಲ್ಲವೇ ನಮ್ಮ ನಾಡಿಗೆ ಈಗ?' ಬೀರನ ಮರುನುಡಿ.
ಶಿವಪಾರ್ವತಿಯರು 'ಬೀರನಿಗೆ ಎಷ್ಟು ಸೊಕ್ಕು ? ಮಳೆ ಬರುವದೆಂದು ಏತರ ಮೇಲಿಂದ ಖಚಿತವಾಗಿ ಹೇಳುತ್ತಾನೆ?' ಎಂದು ಅಂದುಕೊಂಡು ವರುಣನ ಬಳಿಗೆ ಹೋಗಿ ಹೇಳುತ್ತಾರೆ. ' ಮಳೆರಾಯನನ್ನು ಮರಳಿ ಕರೆಸು'
ವರುಣ ಬಿನ್ನಯಿಸಿದನು -' ಆ ಹೊತ್ತು ನೀವು ಹೇಳಿದಂತೆ ಅವನನ್ನು ಇವತ್ತೇ ಅತ್ತ ಕಡೆ ಕಳಿಸಿದ್ದೇನೆ. ಮೋಡಗಳು ಮುಂದೆ ಮುಂದೆ , ಸಿಡಿಲು, ಮಿಂಚುಗಳು ಹಿಂದೆ ಹಿಂದೆ ಹೋಗಿವೆ. ನನ್ನ ಕೈಯಲ್ಲಿ ಏನಿದೆ? ಕೊಟ್ಟ ಹುಕುಮು ಅವರ ಕೈಯಲ್ಲಿದೆ. '
ಆ ಮಾತು ಕೇಳಿ ಶಿವಪಾರ್ವತಿಯರು ಅಂದುಕೊಂಡರು - ನಾವಿಂದು ಕುರುಬನಿಗೆ ಸೋತೆವು'

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 786 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 1, 2006 - 6:15am — ಮಹೇಶ ಭೋಗಾದಿ

ಧನ್ಯವಾದ

ಮಹೇಶ ಭೋಗಾದಿ's picture

ಸಂಪದಕ್ಕೆ ಸೇರಿದ ಹೊಸತರಲ್ಲಿ, ಮಿಶ್ರಿಕೋಟಿಗಳ ಬರಹಗಳನ್ನು ತಪ್ಪದೆ ಓದುತ್ತಿದ್ದೆ. ಅವರ ಗಾದೆಗಳ ಪಟ್ಟಿ ಮತ್ತು ಜೆನ್ ಕಥಾಮಾಲೆ ಇಂದಿಗೂ ನೆನಪಿದೆ.

ಈಗೇಕೋ ಅವರ ಸಂಪದದಲ್ಲಿ ಬರೆಯುವುದು ಕಡಮೆಯಾಗಿದೆ. ಅವರು ಇನ್ನು ಹೆಚ್ಚು ಬರೆಯಲಿ ಎಂದು ನನ್ನ ಹಾರೈಕೆ ಮತ್ತು ಕೋರಿಕೆ.

ಧನ್ಯವಾದಗಳೊಂದಿಗೆ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 1, 2006 - 10:51am — shreekant.mishrikoti

ಉ:ಕಾರಣಗಳು : ಸಂಪದದಲ್ಲಿ ಬರೆಯುವುದು ಕಡಮೆಯಾಗಿದೆ.

shreekant.mishrikoti's picture

ಮಹೇಶರೆ ,
ಕಾರಣಗಳು : ಸಂಪದದಲ್ಲಿ ಬರೆಯುವುದು ಕಡಮೆಯಾಗಿದೆ.
೧.ತಲೆ ಖಾಲಿ . ಈವರೆಗೆ ತುಂಬಿಕೊಂಡ ತಲೆಯನ್ನು ಸಂಪದದಲ್ಲಿ ಬರೆದು ಖಾಲಿ ಮಾಡಿಕೊಂಡಿದ್ದೇನೆ - ತುಂಬಿ ತುಂಬಿದ ಹಾಗೆ ಮತ್ತೂ ಬರೆಯುವೆ.( ಓದುಗರಿದ್ದಾರೆ ಅದೇ ಸಂತೋಷ) ತುಂಬಿಕೊಳ್ಳುವದು ಸ್ವಲ್ಪ ನಿಧಾನ.
೨. ಸೋಮಾರಿತನ- ಒಂದೊಂದೆ ಅಕ್ಷರ ಹುಡುಕಿ ಟೈಪು ಮಾಡಬೇಕಾದ್ದರಿಂದ ಸಾಧ್ಯವಾದಷ್ಟೂ ಅತೀ ಕಡಿಮೆ ಅಂದರೆ ಅತಿ ಅಗತ್ಯವಿದ್ದಷ್ಟು ಮಾತ್ರ; ಕಡಿಮೆ ಯತ್ನ ಹೆಚ್ಚು ಲಾಭ (ಹಣದ್ದು ಅಂತಲ್ಲ) ಇರಬೇಕು . ಸೋಮಾರಿತನವೇ ಪ್ರೊಗ್ರಾಮ್ಮರ್( ನಾನೂ ಒಬ್ಬ..) ಗಳಿಗಿರಬೇಕಾದ ಸದ್ಗುಣ ಅಂತೆ ! ( ಈ ಬಗ್ಗೆ ಇನ್ಯಾವಾಗಲಾದರೂ!)
೩. ಟೀಕೆಗಳಿಗೆ ಹೆದರುವೆ. !
೪. ಪದಪರೀಕ್ಷಕದ ಕೆಲಸದಲ್ಲಿ ತೊಡಗಿರುವೆ. ಹಟ ಬಿಡದ ತ್ರಿವಿಕ್ರಮನಂತೆ!

ನಿಮ್ಮ ಅಸಕ್ತಿ, ಹಾರೈಕೆ , ಕೋರಿಕೆಗಳಿಗೆ ಧನ್ಯವಾದಗಳು.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 1, 2006 - 1:30pm — venkatesh

ಶ್ರೀಕಾಂತ್ ರವರಿಗೆ

venkatesh's picture

ಶ್ರೀಕಾಂತ್ ರವರಿಗೆ,
ಮಹೇಶ್, ಹೇಳಿದಂತೆ ಬರವಣಿಗೆ ಕಡಿಮೆಯಾಯಿತೆಂದು ನನಗೂ ಅನ್ನಿಸುತ್ತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 1, 2006 - 9:08pm — srivathsajoshi

'ಮಹಾ' ವಿಶೇಷಣ

srivathsajoshi's picture

ಶ್ರೀಕಾಂತ್:

ನೀವೆಂದಂತೆ, ಟಿವಿಯಲ್ಲಿ ಮಹಾಭಾರತ ಬಂದ ನಂತರ ಈ 'ಮಹಾ' ವಿಶೇಷಣ ಜಾಸ್ತಿಯಾದದ್ದು ಹೌದು. RIN detergent cakeಗೆ ಸಹ ರಿನ್ 'ಮಹಾ' ಬಾರ್ ಎಂಬ ಜಾಹೀರಾತು ಬರುತ್ತಿದ್ದದ್ದು ನನಗೆ ನೆನಪಿದೆ.

ಆದರೆ, 'ಮಹಾ' ಒಂದು ಮಜಾ ಆಗಿ ಅದಕ್ಕಿಂತ ಮೊದಲೇ ಇತ್ತು ಎಂದು ನನ್ನ ಅಂಬೋಣ. ಸಂಧ್ಯಾವಂದನೆ ಮಾಡುವಾಗ ತಿಪ್ಪಾಭಟ್ಟರು ಬೇಕಂತಲೇ, "ಕೇಶವ ಏನು ಮಹಾ, ನಾರಾಯಣ ಏನು ಮಹಾ, ಮಾಧವ ಏನು ಮಹಾ...' ಎಂದು ತನ್ನ ಪ್ರತಿಸ್ಪರ್ಧಿ ಪುರೋಹಿತರಾದ ಕೇಶವಭಟ್ಟ, ನಾರಾಯಣಭಟ್ಟ, ಮಾಧವಭಟ್ಟ ಇತ್ಯಾದಿಯವರ ಮೇಲೆ 'ಮಂತ್ರಕ್ಕಿಂತ ಜಾಸ್ತಿ ಉಗುಳು'ತ್ತಿದ್ದರಂತೆ!

Smiling

-ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 1, 2006 - 9:42pm — ಮಹೇಶ ಭೋಗಾದಿ

ವಕ್ರೋಕ್ತಿ

ಮಹೇಶ ಭೋಗಾದಿ's picture

ವಕ್ರೋಕ್ತಿಯ ಶ್ರೀವತ್ಸ ಜೋಶಿಗಳು ಬಹಳ ದಿನಗಳ ನಂತರವಾದರೂ, ಸಂಪದದಲ್ಲಿ ಬರೆದಿರುವುದು ಅತೀವ ಸಂತಸದ ಸುದ್ದಿ.

ಸ್ವಾಮಿ ಇಂತಹ ವಕ್ರೋಕ್ತಿಗಳನ್ನು ಇಲ್ಲಿ ಇನ್ನು ಹೆಚ್ಚಾಗಿ ಬರೆದು ನಮ್ಮ (ವಕ್ರ?)ಬುದ್ಧಿಯನ್ನು Laughing out loud ಹೆಚ್ಚುವಂತೆ ಮಾಡಿ.

ಸವಿಯೊದಗೆ,
ಮಹೇಶ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪರಿಶುದ್ಧ ಚರಿತ್ರ
  • ಮಾಘೇ ಮೇಘೇ ಗತಂ ವಯಃ
  • ಝೆನ್ ಕತೆ: ೧೯: ಭೂತವನ್ನು ಓಡಿಸಿದ್ದು
  • ಸವಿನೆನಪುಗಳು ಬೇಕು ... ಸವಿಯಲೇ ಬದುಕು...
  • ಅಂತೂ ಇಂತೂ ಥ್ರೆಡ್ ಮಿಲ್ ಬಂತು
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 55 ಅತಿಥಿಗಳು ಆನ್ಲೈನ್ ಇರುವರು.


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator