ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

February 1, 2008 - 5:28pm — shreekant.mishrikoti

ಭಾರತೀಯರು ಉತ್ತಮ ಉಳಿತಾಯದಾರರು ; ಉತ್ತಮ ಹೂಡಿಕೆದಾರರಲ್ಲ . ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ದೇಶದ ಜನರ ಬಡತನವನ್ನು ತೊಲಗಿಸಬಹುದು . ಷೇರುಪೇಟೆಯಲ್ಲಿ ಹಣ ತೊಡಗಿಸುವದು ಲಾಭಗಳಿಕೆಯ ನ್ಯಾಯಸಮ್ಮತ ಹಾಗೂ ಕಾನೂನುಬದ್ಧ ಮಾರ್ಗ ; ಹಣದುಬ್ಬರದ ದರಕ್ಕಿಂತ ವೇಗವಾಗಿ ನಮ್ಮ ಹಣ ಬೆಳೆಯುವಂತೆ ಮಾಡಬಹುದು ;

ಸಂಪತ್ತು ಮತ್ತು ಷೇರುಪೇಟೆಯ ಕುರಿತು ಕನ್ನಡದಲ್ಲಿ ಪುಸ್ತಕಗಳೇ ಇಲ್ಲ ; ಕನ್ನಡಿಗರು ಷೇರುಪೇಟೆಯ ಲಾಭದಿಂದ ವಂಚಿತರಾಗಿದ್ದಾರೆ . ಇಂಗ್ಲೀಷ ಸಿರಿವಂತರ ಭಾಷೆ , ಸಿರಿವಂತಿಕೆ ಗಳಿಸುವ ಮಾರ್ಗವಾಗಿ, ಕನ್ನಡ ಬಡವರ ಭಾಷೆ ಆಗಿ ಉಳಿಯಬೇಕೇ ?

ಸಂಪತ್ತಿನ ಮತ್ತು ಹಣದ ಬಗ್ಗೆ ನಮ್ಮಲ್ಲಿ ತಪ್ಪು ಅಭಿಪ್ರಾಯಗಳಿವೆ . ಹಣ ಗಳಿಸುವದು ತಪ್ಪು, ನಾವು ಬಡವರಾದರೂ ನೆಮ್ಮದಿಯಾಗಿರಬಹುದು, ಇದ್ದೀವಿ ಅಂತ ತಿಳ್ಕೊಂಡಿದ್ದೀವಿ. ನಾವು ಬಡದೇಶವಾಗಿ ಉಳಿದಿರುವದಕ್ಕೆ ಈ ನಮ್ಮ ಮನೋಭಾವವೇ ಕಾರಣ.

( ನಿಮಗೆ ಗೊತ್ತಾ .... Economic times ... ಗುಜರಾತೀಲೂ ಇದೆ ...
ಸೆನ್ಸೆಕ್ಸ್ ಸೈಟು , ಇಂಗ್ಲೀಷ್ , ಹಿಂದಿ , ಮತ್ತು ಗುಜರಾತೀಲೂ ಇದೆ... )

ಕನ್ನಡಿಗರೂ ತಮ್ಮ ಮನೋಭಾವ ಬದಲಿಸಿ , ನಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಆರ್ಥಿಕ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳೋಣ , ಸಂಪತ್ತಿನ ಸೃಷ್ಟಿಕರ್ತರನ್ನು ಗೌರವಿಸುವದನ್ನು ಕಲಿಯೋಣ ಎಂದು ಈ ಪುಸ್ತಕ- ಷೇರುಪೇಟೆ ಎಂಬ ವಿಸ್ಮಯಲೋಕ’ ಬರೆದಿರುವ ಕೆ.ಕೆ.ಪೂರ್ಣೇಶ್ ಅವರ ಆಸೆ .

ನೀವೂ ಈ ಪುಸ್ತಕ ಓದಿ , ಇತರರಿಗೂ ತಿಳಿಸಿ. ನಾವು ಭಾಶೆ/ ಸಂಸ್ಕೃತಿ/ಇತಿಹಾಸ ಬಿಟ್ಟು ಬೇರೆ ವಿಚಾರ ಮಾಡೋದು ಯಾವಾಗ ?

  • ಹಣ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 321 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 1, 2008 - 5:47pm — Sunil Jayaprakash

ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

Sunil Jayaprakash's picture

ಇದೇನ್ರೀ ಮಿಶ್ರಿಕೋಟಿ. ಕನ್ನಡಿಗರು ಶಾಂತಿಪ್ರಿಯರು, ಸಹೃದಯರು, ಸಂವೇದನಾಶೀಲರು ಅಂತ ಗೊತ್ತಿಲ್ವೇ. ನಾವುಗಳು ಶೇರುಪೇಟೆಗೆ ಹೋಗಿಬಿಟ್ಟರೆ ನಮ್ಮ ಅಗಾಧವಾದ ಸೃಜನಶೀಲ ಸಂವೇದನಾಶೀಲ ಸಾಹಿತ್ಯ, ಅದರ ವಿಮರ್ಶೆ ಇವುಗಳನ್ನು ಯಾರು ನೋಡಿಕೊಳ್ಳೋದು ? ನೀವೋಳ್ಳೆ ಚೆನ್ನಾಗೇಳ್ತೀರಾ.

ತಮಾಶೆ ಬದಿಗಿಟ್ಟು, ನಿಮ್ಮ ಬರಹ ಸಮಯೋಚಿತವಾಗಿದೆ. ನಾನೂ ಕೂಡ ಈ ತಿಂಗಳು ಯಾವುದಕ್ಕೂ ಒಂದು ಡೀಮ್ಯಾಟ್ ಅಕೌಂಟ್ ಮಾಡಿಸಿಕೊಳ್ತೀನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2008 - 6:07pm — shreekant.mishrikoti

ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

shreekant.mishrikoti's picture

three-in-one ಅಕೌಂಟ್ ತೆರೆದುಕೊಳ್ಳಿ .. ತುಂಬ ಪ್ರಯೋಜನ ಉಂಟು ...
ಅದರಲ್ಲಿ ನಿಮ್ಮ ಬ್ಯಾಂಕ್ ಖಾತೆ , ಡಿಮ್ಯಾಟ್ ಖಾತೆ , ಮತ್ತು ಟ್ರೇಡಿಂಗ್ ಖಾತೆ ಮೂರೂ ಪರಸ್ಪರ ಲಿಂಕ್ ಆಗಿರುತ್ವೆ .

ಆನ್ಲೈನ್ ಆಗಿ ಐ.ಪ್.ಓ ( ಹೊಸ ಷೇರ್ ನೀಡಿಕೆ) ಗೆ ಅರ್ಜಿ ಹಾಕಬಹುದು .
ಷೇರ್ ಮಾರಾಟ ಮತ್ತು ಖರೀದಿ ಮಾಡಬಹುದು .
ಟ್ರಾನ್ಸ್ಪರೆಂಟ್ ವ್ಯವಹಾರ ...

ಸ್ಟೇಟ್ ಬ್ಯಾಂಕ್ ನಲ್ಲಿ ಪ್ರಯತ್ನಿಸಿ . ಬಹಳ ಅಗ್ಗ ; ಇತರ ಬ್ಯಾಂಕ್ ಗೆ ಹೋಲಿಸಿದರೆ . ಮಿನಿಮಮ್ ಬ್ಯಾಲನ್ಸ್ ಅಗತ್ಯ ಇಲ್ಲ ( ಇತರೆಡೆ ೫೦೦೦ ಇರ್ತದೆ)
SBICAP securities ಅಥವಾ ಮೋತಿಲಾಲ್ ಓಸ್ವಾಲ್ ಎರಡರ ಜತೆಗೂ ಟೈ ಅಪ್ ಇದೆ .

ಮೋತಿಲಾಲ್ ಓಸ್ವಾಲ್ ಅನ್ನು ಸಂಪರ್ಕಿಸಿದರೆ ಒಳ್ಳೇದು .. ಖಾಸಗಿ ಆದ್ದರಿಂದ ಒಳ್ಳೇ ಸೇವೆ ಇರುತ್ತದೆ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 1, 2008 - 6:25pm — ಸಂಗನಗೌಡ

ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

ಸಂಗನಗೌಡ's picture

ಹೌದು,... ಈ ಸಂಗತಿಯಲ್ಲಿ ತುಸು ಸೀರಿಯಸ್ ಆಗಬೇಕಿದೆರೀ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 2, 2008 - 1:06am — nagesamrat

ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

nagesamrat's picture

ಕಾಸಿನ ಬಗ್ಗೆ ತಾಸುಗಟ್ಟಲೆ ಚಿಂತೆ ಮಾಡಿ ಕೈಗೆ ಏನೂ ಹತ್ತದಿದ್ದರೆ ಬಡತನದಲ್ಲೇ ಜೀವನದ ಸಾರ್ಥಕ್ಯ ಇರೋದು ಅನ್ನೋ ಫಿಲಾಸಫಿ ಹೇಳೋರು ನಾವು. ಕಾಸಿನ ಬಗ್ಗೆ ತುಸು ಚಿಂತನೆ ಮಾಡಬೇಕು ಎಂಬ ನಿಮ್ಮ ಅಭಿಪ್ರಾಯ ಪಸಂದಾಗೈತ್ರಿ. )
................................................................
ಹಾಸ್ಯಕ್ಕೆ ಮೀಸಲಾದ ನನ್ನ ಬ್ಲಾಗು: http://nagenagaaridotcom.wordpress.com
ಭೇಟಿ ಕೊಡಿ, ಓದಿ, ಸಲಹೆ ನೀಡಿ, ನೀವೂ ಬರೆಯಿರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 2, 2008 - 2:07am — anivaasi

ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

anivaasi's picture

ಮಿಶ್ರಿಕೋಟಿಯರೇ,
ಹೊಸ ವಿಷಯವನ್ನು ಚರ್ಚೆಗೆ ತಂದಿದ್ದಕ್ಕೆ ಥ್ಯಾಂಕ್ಸ್.
"ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ದೇಶದ ಜನರ ಬಡತನವನ್ನು ತೊಲಗಿಸಬಹುದು" - ಇದು ಯಾಕೋ ಹೊಸ ತಿಯರಿಯಂತೆ ಕಾಣ್ತಾ ಇದೆ. ಹೇಗೆ ಅಂತ ತಿಳಿಲಿಲ್ಲ. ಶೇರ್‍ ಹೋಲ್ಡರ್‍ನನ್ನು ನೋಡಿಕೊಳ್ಳುವ ಹೆಸರಲ್ಲಿ ಎಷ್ಟೆಲ್ಲಾ ಅನಾಚಾರಗಳು ನಡೆದಿವೆಯಲ್ಲ?!

ಇಂಡಿಯಾವನ್ನು poor country with rich people - ಎಂದು ಗುರುತಿಸುವ ಹಿಂದಿನ ಇಂಗಿತ ನಮ್ಮಲ್ಲಿ ಸಂಪತ್ತಿನ ಹಂಚಿಕೆಯಾಗಿಲ್ಲ ಅನ್ನುವುದು. ಶೇರ್‌ಗಳು ಅವನ್ನು ಮತ್ತಷ್ಟು ಕ್ರೋಢೀಕರಸಲು ಸಹಾಯ ಮಾಡುತ್ತವೆ ಅಲ್ಲವೆ?

ಹಾಗಂತ ಶೇರ್‍ಗಳಲ್ಲಿ ಕಾಸು ಹೂಡಕೂಡದೆಂದು ನಾನು ಹೇಳುತ್ತಿಲ್ಲ. ಯಾರು, ಅವರು ಏನು, ಹೇಗೆ ಮಾಡುತ್ತಾರೆ ಎಂಬುದನ್ನು ನೋಡಿಕೊಳ್ಳಬೇಕಲ್ಲ?

ಇವೆಲ್ಲಾ ಶೇರು, ಸ್ಟಾಕುಗಳ ತಳಹದಿಯ ವಿಚಾರಗಳಲ್ಲವೆ? ಕಾಸಿದ್ದವನಿಗೆ ಇವೆಲ್ಲಾ ಬೇಡವೇನೋ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 2, 2008 - 11:33am — shreekant.mishrikoti

ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

shreekant.mishrikoti's picture

ಅದಕ್ಕೇ ಈ ಪುಸ್ತಕ !
ನಮ್ಮಲ್ಲಿ ಕಲಿತವರಿಗೂ ಈ ಬಗ್ಗೆ ಸಾಕಷ್ಟು ತಿಳಿದಿಲ್ಲ ; ಈ ಪುಸ್ತಕ ಓದಿ ನೋಡಿ , ಷೇರುಪೇಟೆಯ ಎಲ್ಲ ಮಗ್ಗಲುಗಳನ್ನೂ ಇಲ್ಲಿ ಚರ್ಚಿಸಿದ್ದಾರೆ . ಬಹಳಷ್ಟು ಮಾಹಿತಿ ಇಲ್ಲಿದೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 3, 2008 - 9:53pm — muralihr

ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

muralihr's picture

ಸಾರ್,
ಮೊನ್ನೆ ಆದ ಷೇರ್ ಕುಸಿತದಲ್ಲಿ ನಮ್ಮಕ್ಕಾ ಸ್ವಲ್ಪ ದುಡ್ಡೂ ಕಳೆದುಕೊ೦ಡಳು. ಅವಳಿಗೆ ಈ ಅಭ್ಯಾಸವಿದೆ, ಆದರೆ ಅಷ್ಟೊ೦ದು ಜೋರಾಗಿ ಶೇರ್ ಮಾರ್ಕೆಟ್ ಕುಸಿದಾಗ ಕಾರಣ ಹುಡುಕಿದಾಗ..ಅಲ್ಪ ಸ್ವಲ್ಪ ತಿಳಿಯಿತು.
ಅದೇನೋ ಅಮೇರಿಕಾದಲ್ಲಿ ದುಡ್ಡನ್ನು ಕಳೆದುಕೊ೦ಡ ಮ೦ದಿ (FII ) ನಮ್ಮ ದೇಶದಿ೦ದಾ ಅಲ್ಲಿಗೆ ಹಣ ಸಾಗಿಸಿದ್ದಾರ೦ತೆ .. ಹಾಗೇ ಹೀಗೆ..

ನಿಮ್ಗೇ ಇದರ ಬಗ್ಗೆ ತಿಳಿದಿದ್ದರೆ ಬೇರೆ ಬ್ಲಾಗ್ ಬರೆಯಿರಿ.. ನಮ್ಗೂ ಅರ್ಥ ವಾಗುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 3, 2008 - 10:55pm — Sunil Jayaprakash

ಉ: ಕನ್ನಡಿಗರೇ ನೀವೂ ಹಣಮಾಡ್ಕೊಳ್ಳಿ - ಷೇರುಪೇಟೆ ಬಗ್ಗೆ ಪುಸ್ತಕ

Sunil Jayaprakash's picture

ಇಂಡಿಯಾವನ್ನು poor country with rich people - ಎಂದು ಗುರುತಿಸುವ ಹಿಂದಿನ ಇಂಗಿತ ನಮ್ಮಲ್ಲಿ ಸಂಪತ್ತಿನ ಹಂಚಿಕೆಯಾಗಿಲ್ಲ ಅನ್ನುವುದು. ಶೇರ್‌ಗಳು ಅವನ್ನು ಮತ್ತಷ್ಟು ಕ್ರೋಢೀಕರಸಲು ಸಹಾಯ ಮಾಡುತ್ತವೆ ಅಲ್ಲವೆ?

"ಒಂದು ಲಕ್ಷಕ್ಕಿಂತ ಕಡಿಮೆ ದುಡ್ಡು ಹೂಡಿರುವವರಿಗೆ ರಿಲಯನ್ಸ್ ಶೇರುಗಳು ಬಿಕರಿಯಾಗುವುದಿಲ್ಲ" ಎಂಬು ಸುದ್ಧಿಯನ್ನು ಓದಿದರೆ ನಿಮ್ಮ ಮಾತಿನಲ್ಲಿ ನಿಜವಿರಬಹುದು ಎಂದನಿಸದೇ ಇರದು.

ಈ ಎಚ್ಚರಿಕೆಯಿಂದ ನಾವೂ ಏನಾದರೂ ದುಡ್ಡು ಮಾಡಬಹುದಾ ಎಂಬುದಾಗಿ ನೋಡೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತಮಿಳು ಭಾಷಾಭಿಮಾನದ ಇತಿಹಾಸ
  • ಪುಸ್ತಕ ನಿಧಿ - ಕಂಪ್ಯೂಟರ್ ಕುರಿತು ಅದ್ಭುತ ಪುಸ್ತಕ
  • ಭಾರತೀಯತೆ ಅಂದ್ರೆ ಏನು?
  • ಆಡಳಿತ ಭಾಷೆ vs ರಾಷ್ಟ್ರಭಾಷೆ
  • ಕನ್ನಡ ಕಲಿಯುವದು ಕಷ್ಟವೇ?
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 41 ಅತಿಥಿಗಳು ಆನ್ಲೈನ್ ಇರುವರು.


ಒಂದು ಭಾಷೆ ಯಾವುದೇ ರಾಜ್ಯಕ್ಕಿಂತ ಪುರಾತನ ಮತ್ತು ಅನಿವಾರ್ಯವಾದುದು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator