ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಭಾಷೆ ಕಿತ್ತಾಟ
ಭಾಷೆ , ಸಕ್ಕದ , ಕನ್ನಡ ಅಂತ ಅದೆಷ್ಟನೆಯೋ ಬಾರಿ ಕಿತ್ತಾಟ ಇಲ್ಲಿ ನಡೆದಿದೆ . ಹೌದೂ , ಭಾಷೆ ನಮಗೆ ಯಾಕೆ ಬೇಕು ?
ನಮ್ಮ ಮನಸ್ಸಿನ ವಿಚಾರಗಳನ್ನು ಪರಸ್ಪರ ತಿಳಿಸಲು ತಾನೇ ? ಭಾಷೆ ಯಾಕೆ ಉಳಿಯಬೇಕೆಂದರೆ ಹಿಂದಿನ ವಿಚಾರಗಳು ಮುಂದಿನ ಕಾಲಕ್ಕೆ ಉಳಿಸಿಕೊಂಡು ಹೋಗಬೇಕೆಂದು ತಾನೇ ?
ಶಬ್ದ ಮುಖ್ಯ ಅಲ್ಲ ; ಅರ್ಥ ಮುಖ್ಯ ಎಂದು ತಥಾಗತ ( ಅಂದ್ರೆ ಬುದ್ಧ ಮಾತ್ಮ ) ಹೇಳಿದ್ದಾನೆ . ಇದು ನಿಜ ಅಲ್ವೇ ? ಒಂದು ಶಬ್ದ ಅದು ಯಾವ ಮೂಲ ಇದ್ರೆ ಏನಂತೆ ಒಬ್ರು ಮಾತಾಡಿದ್ದು , ಬರೆದದ್ದು ಇನ್ನೊಬ್ರಿಗೆ ತಿಳಿದ್ರೆ, ಆಯ್ತಪ್ಪ ! ಇದು ಇಂಗ್ಲೀಶು , ಇದು ಸಂಸ್ಕೃತ , ಇದು ಪಾರ್ಸಿ , ಇದು ಉರ್ದು ನಮ್ಮ ಜನಕ್ಕೆ ಕಷ್ಟ ಆಗುತ್ತೆ ಅಂತ ಅಂತೀರೋ ಏನೋ ? ನಿಮ್ಮ ಮನಸ್ಸಿನಲ್ಲಿರೋ ಈ ಹಳ್ಳೀ ಜನ ಏನು ಮಾತಾಡ್ತಾ ಇದ್ದಾರೆ ನೋಡಿ ಅವರು ಇಂಗ್ಲೀಷು , ಸಂಸ್ಕೃತ ಇತ್ಯಾದಿಗಳನ್ನು ಲೀಲಾಜಾಲವಾಗಿ ಬಳಸ್ತಾ ಇರೋದನ್ನ ನೀವು ಕೊಂಚ ತೆರೆದ ಮನಸ್ಸಿನಿಂದ ನೋಡಿದರೆ ತಿಳಿಯುವದು . ಹಳ್ಳಿಗೆ ಹೋಗಿ ನೋಡದಿದ್ದರೆ ಟೀವೀಯಲ್ಲಿ ಬರುವ ರೈತಾಪಿ ಕಾರ್ಯಕ್ರಮ ನೋಡಿ . ಅರಿಯದ ಶಬ್ದವನ್ನ ಮನುಷ್ಯ ಕೇಳಿ ತಿಳಕೋತಾನೆ ಅಥವಾ ಊಹೆ ಮಾಡ್ತಾನೆ , ಅದೇ ಶಬ್ದ ಅನೇಕ ಬರಿ ಅವನಿಗೆ ಎದುರಾಗಿ , ತಾನು ತಿಳಿದ ಅರ್ಥಕ್ಕೆ ಹೊಂದಿಕೆ ಆದರೆ ಅದೇ ಅದರ ಅರ್ಥ ಎಂದು ಸ್ವೀಕರಿಸ್ತಾನೆ . ಎಲ್ರೂ ಡಿಕ್ಷನರೀ ನೋಡೋದಿಲ್ಲ , ಶಬ್ದ ಮೂಲಾನೋ ತಿಳಕೋಳೋದಿಲ್ಲ ;
ಈ ಭಾಷೆ ಕುರಿತು ಅನಗತ್ಯ ವಾದಕ್ಕಿಳಿದು ಶ್ರಮಪಡದೆ ಭಾಷೆಯ ಸದ್ಬಳಕೆ ಹೇಗೆ ಅಂತ ನೋಡೋಣ , ನಮಗೆ ತಿಳಿದ ವಿಶಯ ಇತರರಿಗೆ ತಿಳಿಸಿ ಅವರ ಜೀವನವನ್ನ ಕೊಂಚ ಉತ್ತಮಪಡಿಸೋಣ . ಉದಾಹರಣೆಗೆ , ಲೀನಕ್ಸ್ ಕಲಿತು , ಕಲಿಸಿ , ಜನರಲ್ಲಿ ಪ್ರಚಾರ ಮಾಡಿ , ಜನರ ಹಣ ಉಳಿಸೋಣ ; ತಂತ್ರಜ್ಞಾನವನ್ನ ಕನ್ನಡಕ್ಕೆ ತರೋಣ ; ಹೆಚ್ಚು ಕಲಿಯದ ಒಬ್ಬ ಮನುಷ್ಯನೂ ಕಂಪ್ಯೂಟರ್ ಬಳಸಿ ಅದರ ಲಾಭ ಪಡೆಯುವಂತಾಗಬೇಕು . ಪಂಡಿತರಷ್ಟೇ ಓದು ಬರಹ ಮಾಡುವದು ಬೇಡ ; ಪಾಮರರೂ ಮಾಡುವಂತಾಗಲಿ . ಪಾಮರರು ಹೇಳುವದನ್ನು ಪಂಡಿತರೂ ಕೇಳುವಂತಾಗಲಿ .
ಹಣ, ಶೇರು ಪೇಟೆ ಬಗ್ಗೆ ಗೊತ್ತಿರುವವರು ಗೊತ್ತಿಲ್ಲದವರಿಗೆ ತಿಳಿಸಿ , ಡಾಕ್ಟರರು ವೈದ್ಯಕೀಯ ವಿಷಯ ತಿಳಿಸಲಿ , ಇತ್ಯಾದಿ . ಕಾನೂನು, ಹಕ್ಕು , ಕರ್ತವ್ಯ , ಇತ್ಯಾದಿ ವಿಷಯಗಳನ್ನು ವಕೀಲರು ತಿಳಿಸಲಿ . ಇತ್ಯಾದಿ , ಇತ್ಯದಿ .
ಇದೇ ತರಹ ಭಾಷೆಯನ್ನ ನಾಲ್ಕು ಜನಕ್ಕೆ ಲಾಭ ಆಗುವ ಹಾಗೆ ಬಳಸುವದು ಹೇಗೆ ಎಂದು ನೋಡೋಣ . ಏನಂತೀರಾ ?
(ಬರಹ ಗಂಭೀರ ಆಯ್ತೇನೋ ? ಅಂದ ಹಾಗೆ ’ಪಾಮರರ ಅಭಿಪ್ರಾಯ’ ಕೇಳುವ ಚರ್ಚೆಯಲ್ಲಿ ನಾನು ಪಾಲ್ಗೊಳ್ಳಲಿಲ್ಲ . ಯಾಕಂತೀರಾ ? ನನ್ನ ಅಭಿಪ್ರಾಯ ಅಲ್ಲಿ ಹೇಳಿದ್ರೆ .. ನಾನು ಪಾಮರ (ದಡ್ಡರು , ನೀಚರು ಅಂತಾನೂ ಅರ್ಥ ಇದೆ ! ) ಅಂತ ನಾನೇ ಒಪ್ಕೊಂಡ ಹಾಗೆ ಆಗಲ್ವೇ ?
ಅದಕ್ಕೇ ಸುಮ್ನಿದೇನೆ )

- shreekant.mishrikoti ರವರ ಬ್ಲಾಗ್
- Login or register to post comments
- 338 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಭಾಷೆ ಕಿತ್ತಾಟ
ಉ: ಭಾಷೆ ಕಿತ್ತಾಟ
ನಮ್ಮಲ್ಲಿ ಕೆಲವರಿಗೆ ಕನ್ನಡ ಹೋರಾಟಕ್ಕಿಂತ ಜಾತಿ ಜಗಳವೇ ಜಾಸ್ತಿ ಕಿಕ್ ನೀಡುತ್ತೆ ಅಂತ ಕಾಣುತ್ತೆ.
ಮೊನ್ನೆ ಇದೇ ಸಂಪದದಲ್ಲಿ ಕನ್ನಡಿಗರ ಅಭಿಮಾನ ಶೂನ್ಯತೆಯಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಓದುಗರೊಬ್ಬರು ಜಾತಿ ಜಗಳ ತೆಗೆದು ಚರ್ಚೆಯ ದಾರಿ ತಪ್ಪಿಸಿದರು.
ಇನ್ನು ಕೆಲವರಿಗೆ ಕನ್ನಡಪ್ರೇಮಕ್ಕಿಂತ ಸಕ್ಕದದ ದ್ವೇಷವೇ ಹೆಚ್ಚು ಶ್ರೇಷ್ಟ.
ಏನೇ ಆಗಲಿ ಈ ಎರಡುಬಗೆಯ ಜನರಿಂದ ಏನೂ ಆಗುವುದಿಲ್ಲ.
ಶ್ರೀಕಾಂತ್ ರವರೇ, ನಿಮ್ಮಂತೆ ಹಲವರು ಚಿಂತೆ ನಡೆಸಿ ಕನ್ನಡದಲ್ಲಿ ಉನ್ನತ ಶಿಕ್ಷಣ, ತಂತ್ರಜ್ಞಾನ ಬಳಕೆಗೆ ತಂದರೆ, ಕನ್ನಡವೂ ಉಳಿದೀತು.
ಉ: ಭಾಷೆ ಕಿತ್ತಾಟ
ಜಿ.ವಿಯವರ ನಿಗಂಟಿನಿಂದ
ನಾನು ಇನ್ನು ಪಂಡಿತ ಆಗಿಲ್ಲ 
ಹುಡುಕು ಪದ: ಪಾಮರ
೧. people (ನಾ) 1) ಜನ, ಮಂದಿ, ಜನಗಳು, ನಿವಾಸಿಗಳು, ಜನತೆ 2) ಜನಸಾಮಾನ್ಯರು, ಜನಸಮುದಾಯ, ಶ್ರೀಸಾಮಾನ್ಯರು, ಪಾಮರ ಜನತೆ 3) ಜನಾಂಗ, ಪ್ರಜೆಗಳು
ಹೌದು ನಾವು 'ಶ್ರೀ ಸಾಮಾನ್ಯ'ರು ಅದಕ್ಕೆ ಆ ಚರ್ಚೆಯಲ್ಲಿ ಪಾಲ್ಗೊಂಡೆವು.
ಹಾಗೆ ತಾವು ಈ ಸಕ್ಕದ ಪಂಡಿತರಿಗೆ ಹೇಳಿ. ಅವರಿಗೆ ಶಂಕ್ರ ಬಟ್ರು ಹೇಳಿರುವ ಯಾವ ವ್ಯಾಕರಣ ಅಂಶವನ್ನು ಒಪ್ಪುವುದಿಲ್ಲ. ಯಾಕೆ? ಅವರ ಹೊತ್ತಿಗೆಗಳಲ್ಲಿರುವ ಬಂದಿರುವ ಅಂಶಗಳ ಬಗ್ಗೆ ಚೆನ್ನಾಗಿ ಚರ್ಚೆಯಾಗಲಿ. ಅದು ಬಿಟ್ಟು ಕತೆ ಹೇಳ್ತ ಇದ್ರೆ ಏನೂ ಆಗಲ್ಲ.
ಹೌದು ಲಿನಕ್ಸ್ ಹಾಗು ಹೊಸ ವಿಶ್ಯಗಳನ್ನ ಕನ್ನಡಕ್ಕೆ ತರುವ. ಅದನ್ನ ತರುವಾಗ ಯಾವ ರೀತಿ ಮಾಡಬೇಕು. ಹೇಗೆ ಮಾಡಿದರೆ ಹೆಚ್ಚು ಜನಕ್ಕೆ ಮುಟ್ಟುತ್ತದೆ ಅಂತ ನಮಗೆ ಚೆನ್ನಾಗಿ ತಿಳಿದಿರಬೇಕು. ಇದಕ್ಕೆ ಕನ್ನಡ ಪದಗಳ ಒಳರಚನೆ, ಕನ್ನಡ ಪದಗಳ ಸೊಗಡು ಇವುನ್ನೆಲ್ಲ ತಿಳ್ಕಬಾರದಾ?? ಒಂದು ಒಪ್ಪ ಓರಣವಾಗಿ ಕೆಲ್ಸ ಮಾಡಬೇಕು ಅಂದ್ರೆ ಇವೆಲ್ಲ ಗೊತ್ತಿರಬೆಕು ಅಂತ ನಿಮಗನ್ನಿಸಲ್ವ... ಸುಮ್ನೆ ಏನೇನೋ ಕೆಲಸ ಮಾಡಿ ಅದು ಯಾರ ಬಳಕೆಗೆ ಬಾರದಿದ್ದರೆ ..???
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಭಾಷೆ ಕಿತ್ತಾಟ
೧. ಆ ನಿಘಂಟಿನಲ್ಲಿರೋದು ಹೀಗೆ ...
ಹುಡುಕು ಪದ: ಪಾಮರ
೧. people (ನಾ) 1) ಜನ, ಮಂದಿ, ಜನಗಳು, ನಿವಾಸಿಗಳು, ಜನತೆ 2) ಜನಸಾಮಾನ್ಯರು, ಜನಸಮುದಾಯ, ಶ್ರೀಸಾಮಾನ್ಯರು, ಪಾಮರ ಜನತೆ 3) ಜನಾಂಗ, ಪ್ರಜೆಗಳು
೨. ಪಾಮರ (ಸಂ) (ನಾ) ೧ ತಿಳಿವಳಿಕೆಯಿಲ್ಲದವನು, ದಡ್ಡ, ಮೂಢ ೨ ಅಲ್ಪನಾದವನು, ನೀಚ
೩. ಪಾಮರ (ಸಂ) (ಗು) ೧ ಏನೂ ತಿಳಿಯದ, ಅಲ್ಪವಾದ, ತುಚ್ಛ
೪. ಪ್ರಾಕೃತ (ಸಂ) (ನಾ) ೧ ಸಾಮಾನ್ಯವಾದುದು, ಸಾಧಾರಣವಾದುದು ೨ ನಾಡಾಡಿ, ಪಾಮರ ೩ ಪ್ರಕೃತಿ, ತತ್ತ್ವವಾದಿ, ನಿಸರ್ಗವಾದಿ ೪ ಯಜ್ಞಪಶು ೫ ಆರ್ಯಭಾಷಾ ವರ್ಗದ ಪ್ರಾಚೀನ ಭಾರತದ ದೇಶ ಭಾಷೆಗಳು ಮತ್ತು ಆ ಭಾಷೆಗಳಲ್ಲಿ ಪ್ರತಿಯೊಂದು
೨. ಎಲ್ಲಾ ಒಪ್ಪ ಓರಣ ಆಗಿಯೇ ಶುರು ಆಗ್ಲಿ ಅಂದ್ರೆ ... ಯಾವಾಗ್ಲೂ ಸಾಧ್ಯ ಇಲ್ಲ ; ಮೊದ್ಲು ಏನೋ ಒಂದು ಶುರು ಮಾದಬಹುದು . ಆಮೆಲೆ ಸರಿಪಡಿಸಬಹುದು ... ಇದು ನನ್ನ ಅನಿಸಿಕೆ ... ಅಷ್ಟೇ ....
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಭಾಷೆ ಕಿತ್ತಾಟ
ಗೊತ್ತು ಸಾರ್...
ಅಲ್ಲಿ ಶಾಸ್ತ್ರಿಗಳು
"ಪಾಮರರ ಅಭಿಪ್ರಾಯವೇನು"? ಅಂತ ಕೇಳಿದರ ಅರಿತ
ದಡ್ಡರ ಮೂಢರ ಅಲ್ಪರ ಮೂಢರ ತುಚ್ಛರ ಅಭಿಪ್ರಾಯ ಕೇಳಿದ್ದಾರೆ. ಸಂಪದದಲ್ಲಿ ಯಾರೂ ದಡ್ಡರು ತುಚ್ಛರು ಅಲ್ಪರು ಮೂಢರು ?
ಅವರು ಅಂತಹ ಪ್ರಶ್ನೇ ಕೇಳಬೋದೇ, ಅದೂ ಪಾಮರ ಅನ್ನುವ ಕೀಳು ಪದ ಪ್ರಯೋಗ.
ನಾವು ಬರೆದಿರುವ ಗುರಿ, ನಮ್ಮ ಕಮೆಂಟುಗಳಲ್ಲೇ ಇದೆ. ನೋಡಿ..
ದಡ್ಡ = ಯಾರು ಸರಿಯಾಗಿ ವಿಶಯ ತಿಳಿದಿರಲ್ಲ ಅವನು
ಉ: ಭಾಷೆ ಕಿತ್ತಾಟ
ಮಿಶ್ರಿಕೋಟಿಯರೆ,
ನೀವು ಹೇಳುವುದು ನಿಜ.
ಪದಗಳ ಮುಂಚಿನ ಅನುಮಾನ, ಪದಗಳ ನಂತರದ ನಿರಾಳ, ಆತಂಕ ಅಥವ ಪದಗಳಿಲ್ಲದ ಮೌನ ಇವೆಲ್ಲಾವನ್ನು ಅಲಂಕರಿಸುವುದು ಪದಗಳಷ್ಟೆ ಅಲ್ಲವೆ? ಇವುಗಳನ್ನೆಲ್ಲಾ ಮಾತಲ್ಲಿ ಹಿಡಿಯುವುದು ಯಾವಾಗ ನಾವು? ಪದಗಳು ಒಮ್ಮೊಮ್ಮೆ ಅನಿವಾರ್ಯ ನಿಮಿತ್ತ ಅಷ್ಟೆ ಅನಿಸತ್ತೆ.
ನುಡಿಯ ಬಗ್ಗೆ ಎಚ್ಚರವಿರುವುದು ಇರಬೇಕಾದದ್ದೆ. ಆದರೆ ಅದೇ ಎಲ್ಲ ಯೋಚನೆಗಳನ್ನೂ ಆವರಿಸಿಬಿಟ್ಟರೆ ಅಥವಾ ಎಲ್ಲಾವನ್ನೂ ಅವೇ ಯೋಚನೆಗಳು ಆವರಿಸಿಬಿಟ್ಟರೆ?!
ಉ: ಭಾಷೆ ಕಿತ್ತಾಟ
ಸಾರ್ ಏನಿದು..
ನೀವು ನಿಮ್ಮ ಬರಹದಲ್ಲಿ ಏನು ಮಾಡಬಾರದು, ಬಾಶೆಯ ಸದ್ಬಳಕೆ ಯಾವುದು ಎಂದು ಹೇಳಿದ್ದೀರೋ ಅದೇ ಇಲ್ಲ ಇಲ್ಲಿ?
ನೋಡಿ, ಈ ಬರಹ "ಹಣ, ಶೇರು ಪೇಟೆ ಬಗ್ಗೆ ಗೊತ್ತಿರುವವರು ಗೊತ್ತಿಲ್ಲದವರಿಗೆ ತಿಳಿಸಿ , ಡಾಕ್ಟರರು ವೈದ್ಯಕೀಯ ವಿಷಯ ತಿಳಿಸಲಿ , ಇತ್ಯಾದಿ . ಕಾನೂನು, ಹಕ್ಕು , ಕರ್ತವ್ಯ ," ಇದರ ಬಗ್ಗೆ ಕಿಂಚಿತ್ತೂ ಹೇಳದೇ, ಬರೀ ಹಾಳು ಬಾಶೆ ಜಗಳದ ಬಗ್ಗೆ ಹೇಳ್ತಿದೆ!!
ಛೇ. ಅಲ್ಲ ಚೇ
ನಮ್ಮಂತೆ ಪಾಮರರಲ್ಲ ಬಿಡಿ ನೀವು! ಏನೋ ಪಾಮರರ(ದಡ್ಡರ, ನೀಚರ) ಜಗಳ ಅಂತ ಉಪೇಕ್ಷೇ ಮಾಡುವ ದೊಡ್ಡ ಮನಸ್ಸುಬೇಡವೇ?
ಉ: ಭಾಷೆ ಕಿತ್ತಾಟ
ಕೆಲವರಿಗೆ ಕನ್ನಡದ ವ್ಯಾಕರಣವನ್ನೇ ಬದಲಿಸಿ ಹೊಸಭಾಷೆಯನ್ನು ೬ ಕೋಟಿ ಕನ್ನಡಿಗರಿಗೆ ಕಲಿಸುವಾಸೆ. ಹೀಗೆ ಬದಲಿಸಿದರೆ ಈಗಾಗಲೇ ಸಾವಿರಾರು ವರ್ಷಗಳಿಂದ ರಚಿತವಾಗಿರುವ ಗ್ರಂಥಗಳ ಗತಿ ಏನು? ಆ ’ಹೊಸ ಭಾಷೆ’ಯನ್ನು ಸಮಸ್ತ ಕನ್ನಡಿಗರಿಗೂ ಕಲಿಸಲು ಎಷ್ಟು ಶತಮಾನಗಳು ಬೇಕು?
’ಇರುವುದನ್ನು ಬಿಟ್ಟು ಇಲ್ಲದಿದ್ದುರೆಡೆಗೆ ತುಡಿಯುತಿದೆಯೇ ಮನಸು?’
ಉ: ಭಾಷೆ ಕಿತ್ತಾಟ
ಹೊಸ ಬಾಶೆಯಲ್ಲ. ಇರೋದನ್ನೇ ಸರಿಯಾಗಿ ಗುರುತಿಸಿ ನಮ್ಮ ಕನ್ನಡದ ಸೊಗಡಿಗೆ ಒಗ್ಗುವ ಹಾಗೆ ಒಪ್ಪ ಓರಣವಾಗಿ ಕಲಿಸುವುದು, ಕಲಿಯುವುದು.
ಇಲ್ಲಿ ಸಕ್ಕದದ ಬಗ್ಗೆ ಮಾತನಾಡುವರಾರು ಶಂಕರಬಟ್ರಶ್ಟು ಸಕ್ಕದ ಓದಿಲ್ಲ ತಿಳಿದುಕೊಂಡಿಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ಅವರ ಹೊತ್ತಿಗೆ ಓದ್ರಿ. ಅವರ ಸಕ್ಕದದ ಬಗೆಗಿನ ಅರಿವು ಎಶ್ಟು ಎತ್ತರದಲ್ಲಿದೆ ನಿಮಗೇ ಗೊತ್ತಾಗುತ್ತೆ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಭಾಷೆ ಕಿತ್ತಾಟ
ಏನ್ ಸರ್... ಹಿಂದೆ ಆದ ಮಾತುಕತೆಗಳನ್ನೆಲ್ಲ ಮರೆತಿರೋ ಹೆಂಗೆ??
ಕನ್ನಡದಲ್ಲಿ ಆದಸ್ಟು ಕನ್ನಡದ್ದೇ(!!!) ಪದಗಳನ್ನು ಬಳಸಿ ಅಂತ ಇಲ್ಲಿ ನನ್ನಂತವರು ಒರಲುತ್ತಿರೋದು ಯಾಕೆ?
ಇಲ್ಲಿ ಕೆಲವು ತಳದ ಕೇಳಿಕೆಗಳು,...
೧) ಕನ್ನಡದಲ್ಲಿ ಬರವಣಿಗೆಗೂ ಮಾತಿಗೂ ಏಕಿಸ್ಟು ಬೇರೆತನ?
೨) ಕನ್ನಡದೊಂದಿಗೆ ಸಕ್ಕದ, ಇಂಗಲೀಸಿನಂತ ಬೇರೆ ನುಡಿಗಳಲ್ಲಿ ಓದಿಕೊಂಡೋರಿಗೆ, ಕನ್ನಡದಲ್ಲಿ ತುಸು ಜಟಿಲ ಸಂಗತಿಗಳನ್ನು ಹೇಳುವದು ತ್ರಾಸು ಅನಿಸುತ್ತೆ ಯಾಕೆ?
೩) ಕನ್ನಡವಲ್ಲದ ಕನ್ನಡದಲ್ಲಿ ಬರೆದರೆ ಅದು ಕನ್ನಡವಾಗುತ್ತಾ?
ಹೊರಗಿನ ವಿಚಾರಗಳನ್ನು ಕನ್ನಡದಲ್ಲಿ ತರಬೇಕಿದೆ, ಅದನ್ನು ಎಲ್ಲರೂ ಒಪ್ಪತಕ್ಕದ್ದೇ.