ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಬರವಣಿಗೆಯ ಕನ್ನಡದ ದಿಕ್ಕು

June 5, 2008 - 1:13pm — shreekant.mishrikoti

ಕನ್ನಡದಲ್ಲಿ ಸಂಸ್ಕೃತದ ಅತಿಬಳಕೆಯಿಂದ , ಸಂಸ್ಕೃತದ ಕಾಗುಣಿತ(ಸ್ಪೆಲ್ಲಿಂಗ್ಸ್ ) ನಿಂದಾಗಿ ಹಳ್ಳಿಗರಿಗೆ ಮತ್ತು ಸಂಸ್ಕೃತದ ಪರಿಚಯ ಇಲ್ಲದವರಿಗೆ ( ಅಂದರೆ ’ಕೆಳ’ ಎಂದು ತಿಳಿದಿರುವ ಜಾತಿಯ ಜನಕ್ಕೆ) ತೊಂದರೆ ಆಗಿದೆಯಂತೆ . ಅದಕ್ಕಾಗಿ ಮಹಾಪ್ರಾಣ , ಷ ಇತ್ಯಾದಿ ಅಕ್ಷರಗಳನ್ನು ತೆಗೆದು ಹಾಕಿ ಎಂಬ ವಾದ ಒಂದೆಡೆ ಎದ್ದಿದೆ .

( ಅಂದ ಹಾಗೆ ಚಾಯನೀಸ್ ಭಾಶೆಯಲ್ಲಿ ಸಾವಿರಾರು ಅಕ್ಶರಗಳಂತೆ ; ಅವರಿಗೆ ಏನು ತೊಂದರೆ / ಎಷ್ಟು ತೊಂದರೆ ಆಗಿದೆಯೋ ಏನೋ ; ಅವರು ಬಳಸ್ತಾ ಇಲ್ವೀ ; ನೂರಾರು ವರುಷ ಅದು ಬಾಳಿ ಬದುಕಿಲ್ವೇ? -- ನನಗೆ ಸರಿಯಾಗಿ ಗೊತ್ತಿಲ್ಲ)

ಸರಿ ಈ ವಾದಾನೂ ಒಪ್ಕೊಳ್ಳೋಣ ; ಶಂಕರ ಭಟ್ಟರ ವಾದಾನೂ ಒಂತರ ಸರೀನೇ ; ಭಾಶೆಯ ಕಠಿಣತನವನ್ನು ಕಡಿಮೆ ಮಾಡಿ , ಪರಸ್ಪರ ಓದಿ , ಬರೆಯಲು , ಹೆಚ್ಚಿನ ತಿಳಿವು ಪಡೆದು , ಬದುಕನ್ನು ಶ್ರೀಮಂತಗೊಳಿಸಲು ಸರಳಗೊಳಿಸೋಣ ; ಅದಕ್ಕೆ ನನ್ನ ಒಪ್ಪಿಗೆಯೂ ಇದೆ ; ಆದರೆ ಈಗಾಗಲೇ ಬಳಕೆಯಲ್ಲಿರೋ ಎಲ್ಲಾ ಸಂಸ್ಕೃತ ಶಬ್ದಗಳನ್ನ ಬದಲಿಸಲೇಬೇಕೆಂಬ ಹಟ ಏಕೆ ? ಎಲ್ರಿಗೂ ತಿಳಿಯೋ ಕನ್ನಡ ಶಬ್ದ ಇದ್ರೆ ಸರಿ , ಅದನ್ನು ಸಂಸ್ಕ್ರುತ ಶಬ್ದಕ್ಕೆ ಬದಲಾಗಿ ಬಳಸೋಣ ; ಸಂಸ್ಕೃತದ ಮೇಲಿನ ದ್ವೇಶದಿಂದ ಎಲ್ಲರಿಗೂ ತಿಳಿಯೋ ಶಬ್ದಗಳನ್ನು , ಅವು ಸಂಸ್ಕ್ರುತ ಎಂಬ ಒಂದೇ ಕಾರಣಕ್ಕೆ , ಅದಕ್ಕೆ ಬದಲಿಯಾಗಿ ಯಾರಿಗೂ ಗೊತ್ತಿಲ್ಲದ ಶಬ್ದಗಳನ್ನು ಹೆಕ್ಕಿ ತೆಗೆಯೋದು ಏಕೆ ? ದಿನ , ವರ್ಷ ಎಲ್ರಿಗೂ ಗೊತ್ತು ; ಬೇಕೆಂದರೆ ವರುಶ , ವರಶ ಎಂದೆಲ್ಲಾ ಉಚ್ಚಾರಕ್ಕೆ ತಕ್ಕಂತೆ ಬರೆಯಲಿ ; ಆದರೆ ಅದಕ್ಕೆ ಏಡು , ನಾಳು , ಪದುಳ ಗಳೆಂಬ ಶಬ್ದ ಚಲಾವಣೆಗೆ ತಂದರೆ ಇದನ್ನೆಲ್ಲಾ ಕಲಿಯಬೆಕಾಗುತ್ತದೆ ; ನೆನಪಿನಲ್ಲೂ ಇಟ್ಟುಕೊಳ್ಳಬೇಕಾಗುತ್ತದೆ . ಇದು ಎಲ್ಲರಿಗೂ ಸುಲಭವೇ ? ಸಾಧ್ಯವೇ ? ಲಾಭವದರೂ ಏನು ?

ಮತ್ತೆ ಆಶ್ಚರ್ಯ ಎಂದರೆ ಈ ತರಹ ಯೋಚಿಸುವ ಜನಗಳಲ್ಲಿ ಕೆಲವರು ಹಳೆಯ ರ , ಳ ಗಳನ್ನು ಬಳಕೆಗೆ ತರ್ತಿದ್ದಾರೆ ; ಇದರಿಂದ ಜನಕ್ಕೆ ಕಷ್ಟ ಆಗುಲ್ವೇ? ಎಷ್ಟು ಜನ ಈ ಹಳೆಯ ರ - ಳ ಬಲ್ಲರು ? ಷ-ಶ ನಡುವೆ ಏನೂ ವ್ಯತ್ಯಾಸ ಇಲ್ಲ ; ಷ ಕೈ ಬಿಡಬೇಕು ಎನ್ನೋರಿಗೆ ಹೊಸ ಹಳೆಯ ರ-ಳ ಗಳ ನಡುವೆ ಏಕೆ ಭೇದ ಕಲ್ಪಿಸುತ್ತಾರೋ ? ಇದರಿಂದ ಭಾಷೆಯ ಕ್ಲಿಷ್ಟತೆ ಹೆಚ್ಚುಲ್ಲವೋ ?

ಈಗಾಗಲೇ ಕನ್ನಡ ಓದು , ಬರಹ , ಬಳಕೆ ಕಡಿಮೆ ಆಗುತ್ತಿರುವಾಗ ಇಂಗ್ಲೀಷು ಹಿಂದಿ ಜನಜೀವನದಲ್ಲಿ ಹಾಸುಹೊಕ್ಕಾಗುತ್ತಿರುವಾಗ , ನಾನು ಮೇಲೆ ಹೇಳಿದ ಬೆಳವಣಿಗೆಗಳಿಂದ ಜನ ಇನ್ನಷ್ಟು ಕನ್ನಡದಿಂದ ದೂರ ಆಗುಲ್ವೇ ?

ಇನ್ನೂ ಒಂದು ವಿಷಯ ನಾನು ಗಮನಿಸಿದ್ದೀನಿ ; ಈ ತರಹ ಯೋಚಿಸುವ ಜನಗಳಲ್ಲಿ ಕೆಲವರು ಬರಹಕ್ಕೆ ಬೇಕಾದ ಶಿಸ್ತನ್ನು ರೂಢಿಸಿಕೊಂಡಿಲ್ಲ ; ತಾವು ಬರೆದ ಬರಹವನ್ನು ಬೆಳಕಿಗೆ ತರುವ ಮೊದಲು ಇನ್ನೊಂದು ಸಲ ಓದಿ , ತಮ್ಮ ಮನಕ್ಕೆ ಒಪ್ಪುವಂತೆ ಇದೆಯೇ , ತಾವು ಬರೆದದ್ದು ತಮ್ಮ ಅನಿಸಿಕೆಯನ್ನ ಓದುವವರಿಗೆ ತಲುಪಿಸುತ್ತದೆಯೋ ಇಲ್ಲವೋ ಎಂದೂ ನೋಡುವದಿಲ್ಲ ;
ಇಂಥವರಿಂದ ಕನ್ನಡಕ್ಕೆ ಹಾನಿಯೇ ಹೆಚ್ಚಾದೀತು .

ಸೆಂಟು ಎಂದು ಬರೆಯುವವರು ಬರೆಯಲಿ ; ಅದನ್ನಾದರೂ ಸರಿಯಾಗಿ ಬರೆಯಬೇಕಲ್ವೇ ಮತ್ತೇನೋ ಬರೆದರೆ ಅಪಾರ್ಥ ಆಗಲ್ವೆ ?

ಈ ಗತಿಯನ್ನು ಇಂಗ್ಲೀಶಿನಲ್ಲೂ ಗಮನಿಸಿದ್ದಾರೆ ;
ಕಾಗುಣಿತದಿಂದ ,ವ್ಯಾಕರಣದಿಂದ , ನಯ-ನಾಜೂಕಿನಿಂದ ಭಾಶೆಯನ್ನು ಬಿಡುಗಡೆಗೊಳಿಸ್ತಿದಾರೆ !

ಇಂಗ್ಲೀಷು ಲಿಪಿಯಲ್ಲಿ ಕನ್ನಡ ಬರೆವವರು ಓದುಗರ ಕಷ್ಟವನ್ನು ಗಮನದಲ್ಲಿಟ್ಟುಕೊಳ್ಳಬೇಕು , ಬರಹ, ಯೂನಿಕೋಡ್ ಗಳಂತಹ ಸೌಲಭ್ಯಗಳಿರುವಾಗಲೂ ಇಂಗ್ಲೀಷ್ ಲಿಪಿ ಬಳಸಿದರೆ ? ೨೬ ಅಕ್ಶರ ಬಳಸಿ ಅವರೇನೋ ಬರೆದುಬಿಡ್ತಾರೆ , ಓದುವವರು ಹೇಗೆ ಓದಬೇಕು ? ನಿಶ್ಚಿತ ಕೋಡಿಂಗ್ ಇದೆಯೇ ? ’ಹೇಳಿ’ ಅನ್ನೋದನ್ನ heli ಅಂತ ಬರೆಯಬೇಕೋ hELi ಅಂತ ಬರೆಯಬೇಕೋ ? ಓದುವವರು ಈ ಕೋಡಿಂಗ್ ಅನ್ನು ಗಮನದಲ್ಲಿಟ್ಟುಕೊಂಡು ಮೆದುಳಿಗೆ ಕೆಲ್ಸ ಕೊಟ್ಟು ಓದಿಕೊಂಡು ಅರ್ಥ ಮಾಡ್ಕೋಬೇಕು .

ನಾನೇನೂ ಸಂಸ್ಕ್ರುತದ ಅಭಿಮಾನಿ ಏನಲ್ಲ ; ನನ್ನ ಬರಹದಲ್ಲಿ ಸಂಸ್ಕೃತ ಶಬ್ದ ಕಂಡು ನಾನು ಸಂಸ್ಕೃತ ಅಭಿಮಾನಿ ಎಂದೂ , ಬ್ರಾಹ್ಮಣನೆಂದೂ ತಿಳಿದರೆ ತಪ್ಪು ನನ್ನದಲ್ಲ ; ( ದಾಸಸಾಹಿತ್ಯ ಮೆಚ್ಚುವವರು, ಪ್ರತಿಕ್ರಿಯಿಸುವವರು ಬ್ರಾಹ್ಮಣರಂತೆ ! ವಚನಸಾಹಿತ್ಯ ಮೆಚ್ಚುವವರು, ಪ್ರತಿಕ್ರಿಯಿಸುವವರು ಲಿಂಗಾಯತ/ವೀರಶೈವರಂತೆ !! ಹೊಸ ಆರಯ್ಯು Smiling )

’ಸೆಟ್ಟಿಯೆಂಬೆನೆ ಸಿರಿಯಾಳನಾ,
ಡೋಹರನೆಂಬೆನೆ ಕಕ್ಕಯ್ಯನಾ,
ನಾನು ಹಾರುವನೆಂದೆಡೆ
ನಗುವನಯ್ಯಾ ಕೂಡಲಸಂಗಯ್ಯ’

ಅಷ್ಟೇ ;

( ಅಂದ ಹಾಗೆ ಏನೇನೋ ಕಾರಣಗಳಿಂದಾಗಿ ಸಂಪದದಲ್ಲಿ ನಾನು ಸಕ್ರಿಯನಾಗಿ ಪಾಲ್ಗೊಳ್ಳಲು ಆಗುತ್ತಿಲ್ಲ ; ಇದು ಒಂಥರಾ ಹೇಳಿಕೊಳ್ಳದ ಪ್ರೇಮ ; ಒನ್-ವೇ / ಏಕಮುಖ / ಒಮ್ಮುಖ ( ಯಾರಿಗೆ ಯಾವ್ದು ಬೇಕೋ ಆಯ್ದುಕೊಳ್ಳಿ !! ) ಪ್ರೀತಿ .. ಹಾಗಾಗಿ ಈಗ ಸಂಪದದಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ , ಅಥವಾ ಈ ಬರಹಕ್ಕೆ ಬರಬಹುದಾದ ಟಿಪ್ಪಣಿಗಳಿಗೆ ಮರುಟಿಪ್ಪಣಿ ಹಾಕೋದಿಕ್ಕೆ ನನಗೆ ಆಗೋದಿಲ್ಲ )

ಎಲ್ಲೋ ಒಂದೆರಡು ಕಾಗುಣಿತ ದೋಷಗಳಿರಬೇಕು. ಮನ್ನಿಸಿ .

  • ಕನ್ನಡ
  • ಬರವಣಿಗೆ
  • ಶಂಕರ ಭಟ್ಟರು
  • ಸಂಪದ
  • ಸಂಸ್ಕೃತ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 730 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 5, 2008 - 1:58pm — mahesha

ಉ: ಬರವಣಿಗೆಯ ಕನ್ನಡದ ದಿಕ್ಕು

mahesha's picture

ಚಂನಾಗಿದೆ ಬ್‌ಲಾಗು.. Smiling

ಚಂನಾಗಿ ಬರೆದುಕೊಂಡಿದ್ದೀರಿ.

ಚರ್ಚೆಯಡಿ ತರದುದು ಒಳ್ಳೇದಾಯ್ತು... ಓಸುಗರ ಇಲ್ಲಿ ಬಂದಿರುವ ಒಂದೊಂದು ಸಾಲೂ ಸಂಪದದೊಳು ಚರ್ಚಾತಿಚರ್ಚೆಯಾಗಿ ಹೋಗಿದೆ.

ನನ್ನನಿಸಿಕೆಯಲ್ಲಿ ಈ ಕುಱಿತ ಚರ್ಚೆಗಳು ನಡೇತಾ ಇರೋದು ತಲೆಪು/ಇಂಪಾಟೆಂಟು ಕೊನೆ ಏನೇ ಇರಲಿ.!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 2:13pm — vikashegde

ಉ: ಬರವಣಿಗೆಯ ಕನ್ನಡದ ದಿಕ್ಕು

vikashegde's picture

ವಿಷ್ಯ ಕರೆಕ್ಟು. ಅಚ್ಚ ಕನ್ನಡ ಅಪ್ಪಟ ಕನ್ನಡ ಅಂತ ಸುಮ್ಸುಮ್ಕೆ ಬಡ್ಕಳೋರ ಮಕಕ್ಕೆ ಚೆನಾಗಿ ರಾಚಿದೀರಾ.
ಅವು ಯಾವಾಗ ಅರ್ಥ ಮಾಡ್ಕತವೋ ಏನೋ.! Sad ಅಚ್ಚ ಕನ್ನಡ ಬೆಳೆಸೋಕೆ ಹೋಗಿ ಇದ್ದ ಕನ್ನಡವನ್ನೂ ಅಳಿಸಿಹಾಕುವಂತಾಗಬಾರದಷ್ಟೆ.

ಬ್ಲಾಗು ಆಗಿಬಿಟ್ಟರೆ ಚರ್ಚೆ ಮಾಡ್ಬಾರ್ದು ಅಂತ ಏನೂ ಇಲ್ಲ ಅಲ್ವಾ? ಎಸ್ಕೇಪು Smiling

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 2:15pm — mahesha

ಉ: ಬರವಣಿಗೆಯ ಕನ್ನಡದ ದಿಕ್ಕು

mahesha's picture

ಸರಿಯಪ್ಪ

’ಚೆನಾಗಿ’ ಇದೆ Smiling

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 2:22pm — vikashegde

ಉ: ಬರವಣಿಗೆಯ ಕನ್ನಡದ ದಿಕ್ಕು

vikashegde's picture

ಒಪ್ಕೊ.. ಆಡುಬಾಸೆ Smiling

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 10:18am — kannadakanda

ಉ: ಬರವಣಿಗೆಯ ಕನ್ನಡದ ದಿಕ್ಕು

kannadakanda's picture

ಈ ತೆಱನಾದ ವಾದ ಮಾಡುವವರು ತಮ್ಮ ಇತಿಮಿತಿಯನ್ನು ತಿಳಿದಿರಬೇಕು. ಎಲ್ಲವನ್ನು ಸಮಗ್ರವಾಗಿ ಅಱಿತು ವಾದ ಮಾಡಿದರೆ ಅದಕ್ಕೊಂದು ತೂಕವುಂಟು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 3:10pm — mahesha

ಉ: ಬರವಣಿಗೆಯ ಕನ್ನಡದ ದಿಕ್ಕು

mahesha's picture

Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 9:48pm — ವೈಭವ

ಉ: ಬರವಣಿಗೆಯ ಕನ್ನಡದ ದಿಕ್ಕು

ವೈಭವ's picture

ಕನ್ನಡಕಂದರೆ,
ಹೆಗಡೆಯವರು ಹೀಗೆ ಬರೆಯುವುದು ಹೊಸತಲ್ಲ(ಹಿಂದೆ ಸಕ್ಕದದಿಂದ ಕನ್ನಡ ನಾಡಿನ 'ಏಕೀಕರಣ' ಆಗಬೇಕು ಅಂತ ಇವರೇ ಹೇಳಿದ್ದು Smiling ). ಇದನ್ ಬಿಟ್ ಬೇರೆ ಬರೆಯಕ್ಕೆ ಅವರಿಗಾಗಲ್ಲ. ಅವರಿಗೆ ಸರಿಯಾಗ ಸಲಹೆಯನ್ನಿತ್ತಿದ್ದೀರ. ನಿಮಗೆ ನನ್ನಿ Smiling

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 3:02pm — madhava_hs

ಉ: ಬರವಣಿಗೆಯ ಕನ್ನಡದ ದಿಕ್ಕು

madhava_hs's picture

ಮಿಶ್ರ ಕೋಟಿಗಳೇ, ಸರಿಯಾಗಿ ಹೇಳಿದ್ದೀರಿ.

ಉತ್ತರನ ಪೌರುಷ ಒಲೆ ಮುಂದೆ ಎಂಬಂತೆ ಇಂಗ್ಲೀಷಿನ ಹೊಡೆತಕ್ಕೆ ಎಲ್ಲ ಭಾಷೆಗಳೂ ಸಿಕ್ಕಿ ನಲುಗುತ್ತಿರುವಾಗ ಅದನ್ನು ಎದುರಿಸಲಾಗದೆ ಸಮಸ್ಯೆಯೇ ಇರದ ವಿಷಯಗಳಮೇಲೆ ವಾದ ಮಾಡಿ ಕಾಲ ಕಳೆಯುವ ಒಂದು ವರ್ಗವಿದೆ. ಅವರದು ಇಂತಹ ಬ್ಲಾಗುದಾಣಗಳಲ್ಲೇ ಹುಟ್ಟಿ ಇಲ್ಲೇ ಸಾಯುವ ’ಚಳುವಳಿ’ ಗಳಷ್ಟೆ. ಹರಟೆ ಕಟ್ಟೆ ಮೀರದ ಇಂತಹ ವಿಷಯಗಳಬಗ್ಗೆ ಇನ್ನು ಚಿಂತಿಸುವುದೂ ಕೂಡ ವ್ಯರ್ಥ. ಇನ್ನು ಇಂತಹ ವಿಷಯಗಳಿಗೆ ವೃಥಾ ಬರೆದು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 3:12pm — mahesha

ಉ: ಬರವಣಿಗೆಯ ಕನ್ನಡದ ದಿಕ್ಕು

mahesha's picture

ಈ ಕಮೆಂಟು ಬರೆದು ಆದು ಯಾವ ಅಮೂಲ್ಯ ಸಮಯದ ಸಾರ್ಥಕ ಪ್ರಯೋಜನ ಮಾಡಿದರಿ.. Smiling

"ಅವರದು ಇಂತಹ ಬ್ಲಾಗುದಾಣಗಳಲ್ಲೇ ಹುಟ್ಟಿ ಇಲ್ಲೇ ಸಾಯುವ ’ಚಳುವಳಿ’ ಗಳಷ್ಟೆ. "
ಓಹೋ..

ವ್ಯಾಕರಣ ಚರ್ಚೆಯ ಹೊತ್ತಗೆಗಳು ಮಾರಾಟಕ್ಕೆ ಇವೆ.. ಅದು ಅಂಕಿತ ಮೊದಲ ಹತ್ತು ಹೊತ್ತಗೆಗಳಲ್ಲಿ ಮೊದಲ ಜಾಗಕ್ಕೂ ಏರಿದೆ..!!

ಇನ್ನು ತಾವು ಬರೆದ ಬ್ಲಾಗಲ್ಲಿ ಎಶ್ಟು ಪೂರ ಇಂಗ್ಲೀಸಲ್ಲಿ ಇದ್ದು ಹರಿ ಅಳಿಸಬೇಕಾಯ್ತು?

ಹರಿ..

ಇವರ ಕಮೆಂಟುಗಳನ್ನು ಗಮನಿಸಪ್ಪ.. ಬಲು ಕಿರೀಕು ಈ ಅಯಿಡಿ ನನಗೆ ಸಿಕ್ಕಾಪಟ್ಟೆ ಅನುಮಾನ ಇದರ ಬಗ್ಗೆ.. ಯಾರೋ ಹುಸಿ ಅಯಿಡಿ ಮಾಡಿಕೊಂಡು ಹೀಗೆ ನಂಮ ನಡುವೆ ಬಾಯಿ ಹಾಕ್ತಾ ಇದ್ದಾರೆ..

ಹೀಗೇ ಆದರೆ ದಿಟದ ಅಯಿಡಿಯಿಂದ ಬರೆಯೋ ವಿಕಾಸಹೆಗಡೆ ಮುಂತಾದವರು ಕಮೆಂಟುಗಳು ತಪ್ಪು ದಾರಿ ಹಿಡಿಯುವ ಹೆದರಿಕೆ..!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 3:42pm — ishwar.shastri

ಉ: ಬರವಣಿಗೆಯ ಕನ್ನಡದ ದಿಕ್ಕು

ishwar.shastri's picture

ಇವೇ ಅಭಿಪ್ರಾಯಗಳನ್ನು ನಾನು ಹೊಂದಿದ್ದೇನೆ. ದಯವಿಟ್ಟು ವೀಕ್ಷಿಸಿ
http://sampada.net/forum/7316

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 10:10pm — ವೈಭವ

ಉ: ಬರವಣಿಗೆಯ ಕನ್ನಡದ ದಿಕ್ಕು

ವೈಭವ's picture

ಈ ಬರಹ ತುಂಬ ಎಳಸುತನದಿಂದ ಕೂಡಿದೆ. ನಾನು ಹೀಗೆ ಹೇಳುವುದಕ್ಕೆ ಓಸುಗರ:-

"...ಅಂದ ಹಾಗೆ ಚಾಯನೀಸ್ ಭಾಶೆಯಲ್ಲಿ ಸಾವಿರಾರು ಅಕ್ಶರಗಳಂತೆ ; ಅವರಿಗೆ ಏನು ತೊಂದರೆ / ಎಷ್ಟು ತೊಂದರೆ ಆಗಿದೆಯೋ ಏನೋ ; ಅವರು ಬಳಸ್ತಾ ಇಲ್ವೀ ..."

ಇದೊಳ್ಳೆ ಪಕ್ಕದ ಮನೆಯವನು ಹೆಂಡ ಕುಡಿತನೆ, ನಾನು ಅವನಿಗಿಂತ ಏನ್ ಕಮ್ಮಿ ನಾನು ಹೆಂಡ ಕುಡಿತೀನಿ ಅನ್ನುವ ಹಾಗಿದೆ.

ಸಾಮಿ ಮಿಶ್ರಿಕೋಟಿಗಳೆ,
ಈ ರೀತಿ ನುಡಿಗಳಲ್ಲಿ (ಕೆಲವು ಹೆಚ್ಚು ಅಕ್ಕರಗಳು, ಕೆಲವು ಕಮ್ಮಿ ಅಕ್ಕರಗಳು) ಇರುವುದು ಆ ನುಡಿಗಳ ಗುಣ,ನಿಬ್ಬರಗಳು. ಅವರು ಮಾಡ್ತರೆ ಅಂತ ನಾವು ಹಂಗೆ ಮಾಡಕ್ಕಾಗಲ್ಲ. ನಮಗೆ(ಕನ್ನಡಕ್ಕೆ) ನಮ್ಮತನ ಇದೆ, ಬೇಕು.

"...ಸಂಸ್ಕೃತದ ಕಾಗುಣಿತ(ಸ್ಪೆಲ್ಲಿಂಗ್ಸ್ ) ನಿಂದಾಗಿ ಹಳ್ಳಿಗರಿಗೆ ಮತ್ತು ಸಂಸ್ಕೃತದ ಪರಿಚಯ ಇಲ್ಲದವರಿಗೆ ( ಅಂದರೆ ’ಕೆಳ’ ಎಂದು ತಿಳಿದಿರುವ ಜಾತಿಯ ಜನಕ್ಕೆ) ತೊಂದರೆ ಆಗಿದೆಯಂತೆ . ಅದಕ್ಕಾಗಿ ಮಹಾಪ್ರಾಣ , ಷ ಇತ್ಯಾದಿ ಅಕ್ಷರಗಳನ್ನು ತೆಗೆದು ಹಾಕಿ ಎಂಬ ವಾದ ಒಂದೆಡೆ ಎದ್ದಿದೆ .."

ಕೆಳ ಅಂತ ಯಾರೂ ತಿಳಿದಿಲ್ಲ. ಅವರನ್ನು ಕೆಳ ಅವರು ಆಡುವ ನುಡಿ ಕೀಳು ಅಂತ ಮೇಲಿನವರು ಹೇಳಿ ಹೇಳಿ ಜಡ್ಡುಗಟ್ಟಿಸಿದ್ದಾರೆ. ಬರೀ ಕಾಗುಣಿತ ಅಲ್ಲ ಸಕ್ಕದದ ಹಲವು ಪದಗ ಉಲಿಯಲು/ಉಚ್ಚರಿಸಿಲು ಬಲು ಎಡರು. ಅಂತ ಎಡರುಪದಗಳನ್ನು ನಾವು ಕನ್ನಡಿಗರ ಮೇಲೆ ಹೇರಬೇಡಿ ಅಂತ ಹೇಳ್ತಾ ಇದ್ದೀವಿ.

"...ಅದಕ್ಕೆ ಏಡು , ನಾಳು , ಪದುಳ ಗಳೆಂಬ ಶಬ್ದ ಚಲಾವಣೆಗೆ ತಂದರೆ ಇದನ್ನೆಲ್ಲಾ ಕಲಿಯಬೆಕಾಗುತ್ತದೆ ..."
ನೀವು ಈಗಾಗಲ್ಲೆ ಯಾದೃಚ್ಚಿಕ, ಬೃಹನ್ಮಂಡಲ ಮತ್ತು ವಾಙ್ಮಯ ಇವುಗಳನ್ನ ಕಲೀತಿಲ್ಲವ? ಏಡು, ನಾಳು ,ಪದುಳ ಕಲಿಯಲು ಏನ್ ಎಡರು ನಿಮಗೆ Smiling

"..ಎಷ್ಟು ಜನ ಈ ಹಳೆಯ ರ - ಳ ಬಲ್ಲರು ? ಷ-ಶ ನಡುವೆ ಏನೂ ವ್ಯತ್ಯಾಸ ಇಲ್ಲ ; ಷ ಕೈ ಬಿಡಬೇಕು ಎನ್ನೋರಿಗೆ ಹೊಸ ಹಳೆಯ ರ-ಳ ಗಳ ನಡುವೆ ಏಕೆ ಭೇದ ಕಲ್ಪಿಸುತ್ತಾರೋ ? ಇದರಿಂದ ಭಾಷೆಯ ಕ್ಲಿಷ್ಟತೆ ಹೆಚ್ಚುಲ್ಲವೋ..."
ಇಲ್ಲೆ ನೀವು ಎಡವಿರುವುದು. ಶಂಕರಬಟ್ಟರು ಹೇಳಿರುವುದು ಱ,ೞ ಮತ್ತು ಷ ಇವುಗಳನ್ನು ಹೊಸಗನ್ನಡದ ಬರಹದಲ್ಲಿ ಇಟ್ಟುಕೊಳ್ಳಬೇಕಾಗಿಲ್ಲ. ಅತ್ವ ಬರಹಗಾರರ ಇಶ್ಟಕ್ಕೆ ಬಿಡಿ ಅಂತ ಹೇಳಿರುವುದು. ವಿಶಯವನ್ನು 'ವಿಷಯ' ಅಂತಲೇ ಬರಯಬೇಕೆಂಬ ಕಟ್ಟಳೆಯನ್ನು ತೆಗೆದು ಹಾಕಿ ಅಂತ ಅವರು ಹೇಳಿರುವುದು. 'ವಿಶಯ' ಅಂತ ಬರೆದರೆ ಆತನನ್ನು ಕೀಳಾಗಿ ನೋಡಿ ನಗೆಪಾಟಲು ಮಾಡುವುದು ಸರಿಯಲ್ಲ.

ತಾವು ದಯವಿಟ್ಟು ಶಂಕರಬಟ್ಟರ ಹೊತ್ತಿಗೆಗಳನ್ನು ಸರಿಯಾಗಿ ಓದಿ ಅರ್ತ ಮಾಡಿಕೊಂಡು ಆಮೇಲೆ ಇಂತಹ ಬರಹಗಳನ್ನು ಬರೆಯಬೇಕಾಗಿ ಕೋರಿಕೆ. Smiling

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 10:18am — mahesha

ಉ: ಬರವಣಿಗೆಯ ಕನ್ನಡದ ದಿಕ್ಕು

mahesha's picture

Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2008 - 3:21pm — mahesha

ಉ: ಬರವಣಿಗೆಯ ಕನ್ನಡದ ದಿಕ್ಕು

mahesha's picture

ವಯಿಬವರೇ...

ಈ ಯಪ್ಪಂಗೆ ದಿಟವಾಗಲೂ ನುಡಿವಲ್ಮೆ ಮೇಗೆ ಹುರುಪು ಅಯಿತಾ ಅಂತ ಅಯಿಬದೆ.

ತಾನು ಒಂದು ಹೇೞ್ತೀನಿ ಅಂತ ಹೇೞಿರೋ ಹಾಗಿದೆ...

ನೀವೇನಾರ
’ಶ್ರೀಮಾನ್ ತತತಗೆ’ ಓಲೆ ಬರೆದು ಅದನ್ನೆಲ್ಲ ಮಾಡಿ ಅಂತ ಬೇಡಿಕೊಂಡಿವರ? ಅದ್‌ಯಾಕೆ ಇವರಿಗೇ ಕುಂಡರಿಸಿಕೊಂಡು ತಿವಿದು ಹೇೞಿದಂಗೆ ಬರೆದುದೋ?’

ಇನ್ನೊಂದು ವಿಸಯ.. ಈ ಯಪ್ಪ ಹುಸಿಅಯಿಡಿಯಿಂದ ಬರೆತಾವರೆ ಅಂತ ಗುಮಾನಿ ಹಲವು ಮಂದಿಗೆ ಎದ್ದದೆ...
ಅದಕ್ಕೇ ಇಲ್ಲಿ ಕೆಲವರು ಅವರ ಕಮೆಂಟಿಗೆ ಬೆನ್ನಾಗಿ ಅವರ ಇನ್ನೊಂದು ಹುಸಿಅಯಿಡಿಯಿಂದ ಕಮೆಂಟುತಾವರೆ. Smiling

ನಮ್ಮಿಸ್ಟ ನಾವ್ ಏನಾರ ಚರಚೆ ಮಾಡಿಕೋತೀವಿ.. ಇವರಿಗೆ ಬೇಕಾದರೇ ಅಲ್ಲೇ ಬಂದು ಹೇೞಲಿ, ಅದನ್ನ ಬಿಟ್ಟು ಅಣಕಬರಹ ಬರೆದು ಓಲಾಡೋದು ಯಾಕೆ? ಚರಚೆ ನಡೇತಿರುವಾಗ ಬಂದ ಪಾಲುಗೊಳ್ಳಕ್ಕೆ ಆಗಲ್ಲ..

ಬಂದು ನಮ್ಮ ಚರಚೆಗಳಲ್ಲಿ ಅದೇನೇನೇನು ಹೇೞಬೇಕೋ ಹೇೞಲಿ ಬೇಡ ಅಂದೋರು ಯಾರು? ಅದನ್ನ ಬಿಟ್ಟು.. ಇಲ್ಲದೇ ಇರೋ ಕಡೆ ಇರುವೆ ಬಿಡೋ ಮಾತಿದು.!

ಇಸ್ಟೊಂದು ಗೊತ್ತಿರೊ ಮಂದಿ ಚರಚೆಗೆ ಬರಬೇಕು.. ಇಲ್ಲ ಅಂದರೆ Smiling
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಬರಹವನ್ನು ಸರಿಪಡಿಸೋಣ - ಶಂಕರಭಟ್ಟರ ಪುಸ್ತಕ
  • ಎಲ್ಲ ಸರಿ , ಆದರೆ ಹಳೆ ಅಕ್ಷರ/ ಹೊಸ ಶಬ್ದ ಯಾಕೆ?
  • ಕನ್ನಡದ ಮೇಲೆ ಸಂಸ್ಕೃತದ ಸವಾರಿ
  • ಭಾಷೆ ಕಿತ್ತಾಟ
  • ಕಂನಡ ಸಂಗಗಳು ಯಾಕೆ ಇಷ್ಟೊಂದು?
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
  • mahesha
    ಉ: ಗೋಕಾಕ ಮಾದರಿಯ ಚಳುವಳಿ ಎಂದರೇನು?
    October 7, 2008 - 5:02pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 471 ಅತಿಥಿಗಳು ಆನ್ಲೈನ್ ಇರುವರು.


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator