Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

’ಸಖೇದಾಶ್ಚರ್ಯ’ ಮತ್ತು ’ಸನೇಕ’

May 7, 2008 - 7:05pm — shreekant.mishrikoti

ಸಖೇದಾಶ್ಚರ್ಯ ಅಂತ ನೀವು ಶಬ್ದ ನೋಡಿರಬಹುದು ... ಏನು ಈ ಶಬ್ದದ ಅರ್ಥ ? ಆಶ್ಚರ್ಯದಿಂದ ಅನ್ನೋ ಅರ್ಥದಲ್ಲಿ ಬಳಸ್ತಾರೆ , ನಿಜ . ಈ ಶಬ್ದವನ್ನು ಅರ್ಥ ಮಾದಿಕೊಳ್ಳಲು ಪ್ರಯತ್ನಿಸಿದರೆ ಖೇದ ( ದು:ಖ) ಮತ್ತು ಆಶ್ಚರ್ಯಗಳಿಂದೊಡಗೂಡಿ ಎಂದಾಗುತ್ತದೆಯೆ ?
ಖೇದ ಶಬ್ದ ಯಾಕೆ ಇಲ್ಲಿ ? ಅಥವಾ ಬೇರೇನಾದರೂ ಅರ್ಥ ಇದೆಯೇ ಈ ಶಬ್ದಕ್ಕೆ?

ಅಂದ ಹಾಗೆ ನೀವು ಸನಿಹ/ಸನಿಯ ಆಡುಮಾತಲ್ಲಿ ನೋಡಿದ್ದೀರಾ ?

ನನಗೆ ಒಮ್ಮೆಲೇ ಹೊಳೆಯಿತು ... ನಮ್ಮಲ್ಲಿ ಬಳಸುವ .. ಸನೇ / ಸನೇಕ ಅದೇ ಶಬ್ದ !
ಅವನ ಸನೇ(ಕ) ಹೋಗಬ್ಯಾಡ....
ಅಂದರೆ ಅವನ ಹತ್ರ ಹೋಗಬ್ಯಾಡ....

  • ಶಬ್ದಗಳು
Ornamental seperator
  • shreekant.mishrikoti ರವರ ಬ್ಲಾಗ್
  • Login or register to post comments
  • 250 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 8, 2008 - 12:57pm — Shivakumar.Revadi

ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’

Shivakumar.Revadi's picture

ಆದೇ ತರ "ಹತ್ತಿರ" ಅನ್ನುದಕ್ಕ್ "ಹಂತೇಕ" ಅಂತನೂ ಉಪಯೊಗಿಸ್ತಾರ,
ಉದಾ: ಅವನ ಹಂತೇಕ ಕೇಳು, ಇದ್ದರ ಕೊಡತಾನ

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 1:59pm — mahesha

ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’

mahesha's picture

ಈ ಬೞಕೆಗಳ ಬಗ್ಗೆ ಇನ್ನೂ ಹೆಚ್ಚಿಗಿ ಬರೀರಿ.. ಬಲ್ ಭೇಷಯ್ತಿ!
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 3:33pm — Shivakumar.Revadi

ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’

Shivakumar.Revadi's picture

ಮಹೇಶಾರ................ ಹೀಂತಾ ಶಬ್ದಗಳು ಆಡೂ ಬಾಸೆದಾಗ ರಗಡ (ಬಹಳ) ಸಿಗತಾವು, ಅದರ ಏನರ ಬರಿಯಾಕ್ ಕುಂತ್ರ ಮಟಾ ಮಾಹ ಆಕ್ಕಾವು.

  • Login or register to post comments
  • link
  • Email this ಪ್ರತಿಕ್ರಿಯೆ
May 8, 2008 - 5:48pm — ಸಂಗನಗೌಡ

ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’

ಸಂಗನಗೌಡ's picture

ಮಟಾ ಮಾಯ್ ಅಕ್ಕಾವನ್ರಿ ಸರ... ಬಿಡಬ್ಯಾಡ್ರಿ ಅತುರ್ನ ಹಿಡದ್ ಕಟ್ಟಿ ಇಲ್ಲಿ ಉದರಸ್ರಿ.. Smiling
ಇಂತ ಕೆಲ ಪದಗಳನ್ನು ಹೇಳೋದಾದರ..

ಸನೇಕ - ಸನಿಹಕ್ಕೆ
ಹಂತೇಕ - ಹತ್ತಿರಕ್ಕೆ
ಮಾಡಾಕ್ಕ - ಮಾಡಕ್ಕೆ - ಮಾಡಲಿಕ್ಕೆ
ಕುಂದರಾಕ - ಕುಳಿತುಕೊಳ್ಳಲಿಕ್ಕೆ
ಬಾಡ್ಯಾಗ - ಬುಡದಲ್ಲಿ

ಮತ್ತಟ್ ಹೇಳ್ರಿ..

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 1:48pm — girish.rajanal

ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’

girish.rajanal's picture

ಸಂಜೀಕೆ=ಸಂಜೆಯಲ್ಲಿ, ಸಂಜಿನ್ಯಾಗ.
ಹರ್ಯಾಗ=ನಸುಕಿನಲ್ಲಿ.
ಮಾಳಿಗಿ=ಮಾಳಿಗೆ
ಮಹಡಿ=ಅಂತಸ್ತು. ಮಹಡಿಮನೆ ಅಂತಾರಲ್ಲ ಹಂಗ.
ಕತ್ರಿ=ಎರಡು ರಸ್ತೆ ಸೇರುವ ಸ್ಥಳ. ಕ್ರಾಸ್ ಅಂತಾರಲ್ಲ ಹಂಗ.
ಅಡ್ನಾಡಿ= ಅಜ್ಞಾನಿ
ಸುದುಗ=ಸೋಮಾರಿ
ಜಂಗಿಕುಸ್ತಿ=ಭಾರಿ ಕುಸ್ತಿ
ತುರುಸಿನ ಆಟ=ಹುರುಪಿನ ಆಟ.
ತಿಣುಕು= ಪ್ರಯತ್ನಪಡು
ಅಂಜು=ಹೆದರು
ಉಡಾಳ ಹುಡುಗ=ಉಪದ್ರವದ ಹುಡುಗ,ಉಪಟಳದ ಹುಡುಗ.
ಗಡಿಗಿ=ಗಡಿಗೆ, ಮಡಿಕೆ, ಕುಡಿಕೆ
ಹರವಿ= ಹಿರಿದಾರ ಮುಣ್ಣಿನ ಬಿಂದಿಗೆ
ಹಂಡೆ= ತಾಮ್ರ ಅಥವಾ ಹಿತ್ತಾಳೆಯ ನೀರಿನಾಗಾರ.
ಸಿಂಬಿ=ಸಿಂಬೆ. ಹಳ್ಳೀಲಿ ಹಾಲು ಮೊಸರಿನ ಮಡಿಕೆಗಳನ್ನು ನೇತಾಕಿರ್ತಾರಲ್ಲ ಅದು.
ದುಗಾಡಿ= ಸುಸ್ತು.
ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.
ಉಡಾಳ ಓಣಿ ಕೆಡಸಿದರ, ಸಂಭಾವಿತ ಊರನ್ನೇ ಕೆಡಸಿದನಂತ.

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 1:56pm — mahesha

ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’

mahesha's picture

ನಾವ್ ಕೂಡ

ಸಂಜೀಕೆ, ಮಾಳಿಗೆ, ಅಡ್ನಾಡಿ, ಜಂಗೀಕುಸ್ತೀ(ಜಂಘೀಕುಸ್ತಿ ಇರಬೇಕು), ತಿಣುಕು,ಗಡಿಗೆ, ಅಂಜು, ಹಂಡೆ, ಸಿಂಬಿ, ಬೞಸ್ತೀವಿ...!!

ಸಿಂಬಿ ಅಂದ್ರೆ ತಲೆಮೇಲೆ ಸರಕು ಹೊರಲು ತಲೆ ಮೇಲೆ ಸರಕಿನಡಿ ಇಡುವ ಬಟ್ಟೆ ಸುರುಳಿ!

=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 10, 2008 - 12:52pm — Shivakumar.Revadi

ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’

Shivakumar.Revadi's picture

ಅದು ಮಟಾ ಮಾಯಾ ಆಗ್ಬೇಕಿತ್ತು,
ನನ್ನಿ............

  • Login or register to post comments
  • link
  • Email this ಪ್ರತಿಕ್ರಿಯೆ
May 10, 2008 - 3:17pm — ವೈಭವ

ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’

ವೈಭವ's picture

ನಂಗೆ ಗೊತ್ತಿರದು.

ರಗಡ್ - ಹೆಚ್ಚಾಗಿ
ಶಾಣ್ಯ - ಚದುರ
ಏಸ್ - ಎಶ್ಟು
ಲಗು - ಬೇಗ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 1:53pm — mahesha

ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’

mahesha's picture

"ಮಟಾ ಮಾಹ ಆಕ್ಕಾವು" ಅಂದ್ರೇನು ವಸಿ ಯೇಳಿ! Smiling

=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 9, 2008 - 2:58pm — roopablrao

ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’

roopablrao's picture

ಸಖೇದಾಶ್ಚರ್ಯ
ನಮಗೆ ಇಷ್ಟವಿಲ್ಲದ್ದು ಅಥವ ನೋವಾಗುವಂತಹದ್ದು ಮತ್ತು ನಿರೀಕ್ಶೆ ಮಾಡದ್ದು ನಮಗೆ ಎದುರಾದರೆ ಖೇದ ಹಾಗು ಆಶ್ಚರ್ಯಗಳು ಒಟ್ಟಾಗಿ ಆಗುವ ಭಾವನೆಗೆ ಹೆಸರೇ ಸಖೇದಾಶ್ಚರ್ಯ

http://thereda-mana.blogspot.com/

ರೂಪ

  • Login or register to post comments
  • link
  • Email this ಪ್ರತಿಕ್ರಿಯೆ
May 10, 2008 - 12:58pm — Shivakumar.Revadi

ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’

Shivakumar.Revadi's picture

ಇತ್ತಿಚೆಗೆ ಮಾಯವಾಗುತ್ತಿರುವ ಶಬ್ದಗಳಲ್ಲಿ ಇವೆರಡೂ ಸೇರಿವೆ.
೧. ಹರನಾಳಗಿ = ಮ್ಯಾಳಿಗಿಯಿಂದ ನೀರು ಕೆಳಗ ಬಿಳಾಕ ಇರು ಕಲ್ಲಿನ ಪೈಪು.
೨.ಮೇಲ್ ಮುದ್ದಿ = ಹೋಸಾ ಮನಿಗೆ ಹಾಕುವ ಮಣ್ಣಿನ ಛಾವಣಿ. (ಪೂರ್ತಿ ಆದಮ್ಯಾಗ ಅದು ಮಾಳಗಿ)

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • hacker ಶಬ್ದದ ಬಗ್ಗೆ
  • ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
  • ಕಬ್ಬಿಗ = ಕವಿ
  • ಪತ್ತನಾಜೆ ಪದದ ಅರ್ಥ ಹೇಳಿ!
  • ದ್ವಿಮುಖ ಪದ ಪಟ್ಟಿ ಮಾಡಿ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
  • ಆದದ, ವೋದದ?
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಪ್ರತ್ಯಕ್ಷ ನೋಡಿದರೂ...
    May 13, 2008 - 9:05am
  • madhava
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 13, 2008 - 8:59am
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 8:11am
  • mahesha
    ಉ: ಸುಭಾಷಿತಗಳು
    May 13, 2008 - 7:39am
  • mahesha
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 13, 2008 - 7:34am
  • roopablrao
    ಉ: ದೊಡ್ಡದಾದ ಮಂಚ ???
    May 13, 2008 - 6:43am
  • hamsanandi
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 13, 2008 - 5:44am
  • hamsanandi
    ಉ: ಅಡುಗೆಯ ಸಂಭ್ರಮ
    May 13, 2008 - 5:29am
  • anivaasi
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 13, 2008 - 2:21am
  • omshivaprakash
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 11:35pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ

— ಪ್ರಚಲಿತ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator