ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಕೆಲವು ಶಬ್ದಗಳು

December 15, 2007 - 6:56am — shreekant.mishrikoti

ಈ ಶಬ್ದಗಳು / ಶಬ್ದರೂಪಗಳು ನಿಮಗೆ ಗೊತ್ತೇ ? ಅಥವಾ ಮರೆತಿದ್ದೀರಾ?
( ಗೊತ್ತಿದ್ದಷ್ಟನ್ನು ವಿವರಿಸಿದ್ದೇನೆ , ನಿಖರವಾಗಿ ಗೊತಿಲ್ಲದ್ದನ್ನು ಬಿಟ್ಟಿದ್ದೇನೆ- ನಿಮಗೆ ಗೊತ್ತಿದ್ದರೆ ತಿಳಿಸಿ)
ಆರಪಾರ -- ಈ ಗಾಡೀಗೆ ಎಲ್ಲಾ ಡಬ್ಬಿಗೂ ಆರಪಾರ ಹಾದಿ ಇರತSದ-- ’ಥ್ರೂ’
ಹತ್ತೀಲೆ / ಹಂತೇಕ / ಹತ್ತರ -- ಹತ್ತಿರ
ಫರಾಳ - ನಾಷ್ಟ /ತಿಂಡಿ
ಊಟಾ-ಉಡಿಗಿ
ಉಡಿಗಿ-ತೊಡಿಗಿ/ ವಸ್ತಾ-ಒಡಿವಿ -- ವಸ್ತ್ರಾಭರಣ
ಎದುರುಗೊಳ್ಳು - ಸ್ವಾಗತಿಸು
ಅಲ್ಲಾಬೆಲ್ಲಾ ತಗೆದುಕೊಳ್ಳು --- ಪರಸ್ಪರ ಆಲಂಗಿಸು ( ಮದುವೆಗಳಲ್ಲಿ ಬೀಗರನ್ನು ಸ್ವಾಗತಿಸಿ ಸಮವಯಸ್ಸಿನವರನ್ನು , ಸಮಾನ ಸ್ಥಾನದವರನ್ನು ಪರಿಚಯಿಸುವ ಕಾರ್ಯಕ್ರಮ ಇರುತ್ತದೆ . ಅಲ್ಲಿ ಆಗೋದು ಇದು)
ಒಡಕಲ - ಸನಾದಿಯ ಒಡಕಲ ದನಿ , ಒಡಕಲು ಚಟ್ನಿಪುಡಿ
ಕೋಟಿ ಖೋಲಿ/ ಅಡಕಲು ಖೋಲಿ - ಉಗ್ರಾಣ , ಸ್ಟೋರ್ ರೂಂ
ಅಳಿಯದೇವರು - ಅಳಿಯಂದಿರು -ಅಳಿಯನನ್ನು ಗೌರವದಿಂದ ಸೂಚಿಸುವ ಶಬ್ದ .
ಹಂದರ
ಸುಳ್ಳೌತಣ , ರುಖ್ಖೋತ , ಸುರಗಿ , ಉರುಟಣಿ , -- ಮದುವೆಗೆ ಸಂಬಂಧಿಸಿದ ಶಬ್ದಗಳು
ಕಳುವೂಟ ( ಬೀಗರನ್ನು ಕಳಿಸುವಾಗ ಹಾಕುವ ಊಟ ?)
ಅತ್ತರದಾನಿ ( ಹೂದಾನಿ - ಫ್ಲಾವರ್ ವೇಸ್ ಕಣ್ರೀ - ತರಹದ ಶಬ್ದಗಳು) ಅತ್ತರದಾನಿ ಅತ್ತರ್ -( ಸೆಂಟ್ , ಸುಗಂಧಿತ ದ್ರವ್ಯ) ಸಿಂಪಡಿಸುವ ಬೆಳ್ಳಿಯ ಸಾಧನ .
ಗುಲಾಬದಾನಿ
ಒಬ್ಬಿ -ಒಬ್ಬೆ -- ಲಾಟ್ , ಕಂತು , (ಇನ್ನೊಂದ್ ಒಬ್ಬಿ ಚಹಾ-ಫರಾಳಾ !)
ಚಹಾದಂಗಡಿ - ಹೋಟೆಲ್ಲಿಗೆ ಮೊದಲು ಚಹಾದಂಗಡಿ ಅಂತಿದ್ರು !

ಹರಕತ್ತು - ಅಗತ್ಯ --- ನನಗೇನು ಹರಕತ್ ಅದ ?
ಹರಕತ್ತಿಲ್ಲ - ಅಡ್ಡಿಯಿಲ್ಲ
ಹುಡ್ರು ಹುಪ್ಪಡಿ - ಮಕ್ಕಳುಮರಿ
ಉಣಿಸಾ-ತಿನಿಸಾ ( ಉಣಿಸು-ತಿನಿಸು ನಾಮಪದಗಳಾಗಿ ). ಊಟ ಉಣಿಸು , ತಿಂಡಿ ತಿನಿಸು ಗಮನಿಸಿ
ಅನವಲ್ಯ - ಕಷ್ಟ

  • ಶಬ್ದಗಳು
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 287 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 17, 2007 - 12:24am — aniljoshi

ಉ: ಕೆಲವು ಶಬ್ದಗಳು

aniljoshi's picture

ಚನ್ನಾಗಿವೆ ಶಬ್ದಗಳು. ನನಗೆ ಗೊತ್ತಿರುವ ಕೆಲವು ರೂಪಗಳು,
ಕಳ್ಳೂಟ - ಆಡು ಮಾತಿನಲ್ಲಿ ಕಳುವೂಟ ಕಳ್ಳೂಟವಾಗುತ್ತದೆ ಎಷ್ಟೋ ಸಾರಿ! (ಇದು ಮದುವೆ ಮುಗಿದ ಮೇಲೆ ಬೀಗರನ್ನು ಕಳಿಸುವ ಮುಂಚೆ ಹಾಕುವ ಊಟ ಹೌದು)

ಅಲಾಯ್-ಬಲಾಯ್ - ನಿಮ್ಮ ಸಾಲಿನಲ್ಲಿ ಅಲ್ಲಾಬೆಲ್ಲಾ ತೆಗೆದುಕೊಳ್ಳುವದಕ್ಕೆ ಸಮಾನ

ರುಖ್ಖೋತ ಅನ್ನುವದಕ್ಕಿಂತ ರುಕ್ಕೋತ ಎನ್ನುವ ರೂಪ ನಾನು ಹೆಚ್ಚು ಕೇಳಿದ್ದೇನೆ.

ಚಹಾದಂಗಡಿ ನಮ್ಮ ಗುಲ್ಬರ್ಗ ಕಡೆ ಚಾದುಕಾನ್ ಆಗುತ್ತದೆ.

ಒಬ್ಬಿ - ಇಡ್ಲಿ ಅಥವ ಗುಂಡುಪೊಂಗಲು (ಫಡ್ಡು) ಮಾಡುವಾಗ ಒಂದೊಂದು ಬಾರಿಗೆ ಎಷ್ಟು ಮಾಡಲಾಗುವದೊ ಅಷ್ಟು ಅಂತಲೂ ಉಪಯೋಗಿಸುವದುಂಟು.
ಅಳಿಯದೇವರು - ಅಳೇದೇವರು
ಅಳೇತನ - ಮದುವೆಯ ನಂತರ ಮಾವನ ಮನೆಯಲ್ಲಿ ಅಳಿಯನ ಮೊದಲ ದೀಪಾವಳಿ ಸಂಭ್ರಮ.

Anil

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 17, 2007 - 12:27am — aniljoshi

ಉ: ಕೆಲವು ಶಬ್ದಗಳು

aniljoshi's picture

ಚನ್ನಾಗಿವೆ ಶಬ್ದಗಳು. ನನಗೆ ಗೊತ್ತಿರುವ ಕೆಲವು ರೂಪಗಳು,
ಕಳ್ಳೂಟ - ಆಡು ಮಾತಿನಲ್ಲಿ ಕಳುವೂಟ ಕಳ್ಳೂಟವಾಗುತ್ತದೆ ಎಷ್ಟೋ ಸಾರಿ! (ಇದು ಮದುವೆ ಮುಗಿದ ಮೇಲೆ ಬೀಗರನ್ನು ಕಳಿಸುವ ಮುಂಚೆ ಹಾಕುವ ಊಟ ಹೌದು)

ಅಲಾಯ್-ಬಲಾಯ್ - ನಿಮ್ಮ ಸಾಲಿನಲ್ಲಿ ಅಲ್ಲಾಬೆಲ್ಲಾ ತೆಗೆದುಕೊಳ್ಳುವದಕ್ಕೆ ಸಮಾನ

ರುಖ್ಖೋತ ಅನ್ನುವದಕ್ಕಿಂತ ರುಕ್ಕೋತ ಎನ್ನುವ ರೂಪ ನಾನು ಹೆಚ್ಚು ಕೇಳಿದ್ದೇನೆ.

ಚಹಾದಂಗಡಿ ನಮ್ಮ ಗುಲ್ಬರ್ಗ ಕಡೆ ಚಾದುಕಾನ್ ಆಗುತ್ತದೆ.

ಒಬ್ಬಿ - ಇಡ್ಲಿ ಅಥವ ಗುಂಡುಪೊಂಗಲು (ಫಡ್ಡು) ಮಾಡುವಾಗ ಒಂದೊಂದು ಬಾರಿಗೆ ಎಷ್ಟು ಮಾಡಲಾಗುವದೊ ಅಷ್ಟು ಅಂತಲೂ ಉಪಯೋಗಿಸುವದುಂಟು.
ಅಳಿಯದೇವರು - ಅಳೇದೇವರು
ಅಳೇತನ - ಮದುವೆಯ ನಂತರ ಮಾವನ ಮನೆಯಲ್ಲಿ ಅಳಿಯನ ಮೊದಲ ದೀಪಾವಳಿ ಸಂಭ್ರಮ.

Anil

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಗೈವೆ ಮುತ್ತಿನಾರತಿ ದೇವಾ'
  • ಈಗ ನನ್ನ ಭಾಷೆಯನ್ನೇ ಮತ್ತೊಮ್ಮೆ ಕಲಿಯತೊಡಗಿದ್ದೇನೆ. !
  • ಕನ್ನಡಕ್ಕೆ ಸೇರ್ಪಡೆಯಾದ ಹೊಸ ಸಂಸ್ಕೃತ ಶಬ್ದಗಳು !
  • ನೀವೂ ಕನ್ನಡ ಶಬ್ದಕೋಶ ಓದಿ
  • ಪತ್ರಿಕೆಗಳು ಮತ್ತು ಭಾಷೆ.
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಕ್ಕಾ..ಅಕ್ಕಾ..ನಾನೂ ಬತ್ತೀನಿ...
  • ಮಳೆಯ ಮೇಲೇಕೆ ದೂರು?
  • ಎಲ್ಲ ತುಸುಹೊತ್ತು...
  • ಕನ್ನಡ ತಾಯಿಗೆ ನಮನ
  • ನೋಡಿ ಕಂಡದ್ದು
  • ನನ್ನಲ್ಲಿ ಒಬ್ಬ ಕವಿ ಹುಟ್ಟಿದ್ದು ಹೀಗೆ....
  • ‘............’
  • ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
  • ಇನಿಯ
  • ಮಾಯಾಂಗಿನಿ ಮೋಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
  • hamsanandi
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 27 ಅತಿಥಿಗಳು ಆನ್ಲೈನ್ ಇರುವರು.


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator