ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು
ಒಂದು ವಾರ ರಜ ಹಾಕಿ ನನ್ನೂರಿಗೆ ಹೋದಾಗ ಅಲ್ಲಿ ಇನ್ನಷ್ಟು ಪುಸ್ತಕ ಖರೀದಿ ಮಾಡಿದೆ .
೧.ವಸುಧೇಂದ್ರ ಅವರ ’ಯುಗಾದಿ’ ಕತೆಗಳ ಪುಸ್ತಕ .
೨.ಜಾನಕಿ ಕಾಲಂ -
೩. ಜೋಗಿ ಕತೆಗಳು - ಸುಮಾರು ೩-೪ ಪುಟಗಳ ಕತೆಗಳಿವೆ. ವಿಚಿತ್ರ ಆಗಿವೆ . ಬರವಣಿಗೆ ಚೆನ್ನಾಗಿದೆ . ಅನೆಕ ಕತೆಗಳು ತಿಳಿಯೋದೇ ಇಲ್ಲ . ಆ ಕವನದ ಅರ್ಥ ಏನು / ಈ ಕವನದ ಅರ್ಥ ಏನು ಎಂದೆಲ್ಲ ಪದ್ಯಗಳನ್ನು ಅರ್ಥ ಮಾಡ್ಕೊಳ್ಳೋಕೆ ಪ್ರಯತ್ನಿಸ್ತೇವೆ. ಅದರೆ ಸರಳ ಗದ್ಯಾನೇ ಅನೇಕ ಸಲ ಅರ್ಥ ಆಗೋಲ್ವಲ್ಲ ? ಯಾವಾಗಲಾದರೂ ನಿಮಗೂ ಹಾಗೆ ಅನಿಸಿದೆಯೇ ? ಇಂಥ ಕತೆಗಳ ಬಗ್ಗೂ ಚರ್ಚೆ ಮಾಡೋಣ್ವೇ ?
೪. ಬೆಸ್ಟ್ ಆಫ್ ಕೇ.ಫ . - ಬಹಳ ದಿನದಿಂದ ಹುಡುಕ್ತಿದ್ದೆ
೫. ಬೆಸ್ಟ್ ಆಫ್ ಬಿ.ಜಿ.ಎಲ್. ಸ್ವಾಮಿ
೬. ಹೊಸಗನ್ನಡ ವ್ಯಾಕರಣ ( ಯಾರೋ ಅರಳಗುಪ್ಪಿ ಅಂತೆ )
೭. ಹಿಂದೆ ಯಾವಾಗಲೋ ಹಳೆಗನ್ನಡದ ವ್ಯಾಕರಣ ಎಂತಹದು ಎಂದೇನೋ ಶಂಕರ ಭಟ್ಟರ ಒಂದು ಪುಸ್ತಕ ನೋಡಿದ್ದೆ . ಅದು ಸಿಗಲಿಲ್ಲ ; ಬದಲಾಗಿ ಇಂಗ್ಲೀಷ್ ಹೆಸರಿನ ಒಂದು ಹಳೆ ಕನ್ನಡ ವ್ಯಾಕರಣ ಪುಸ್ತಕ ಸಿಕ್ತು .
೮. ನನ್ನ ಅವ್ವನಿಗಾಗಿ ’ಮರುಳ ಮುನಿಯನ ಕಗ್ಗದ ವಿವರಣೆ’ ಪುಸ್ತಕ
೯. ಗೌರಿ ಲಂಕೇಶರ - ದರವೇಶಿ ಕತೆಗಳು . ಇದು ಸೂಫಿ ಕತೆಗಳ ಸಂಗ್ರಹ . ಒಂದು ಅಥವಾ ಎರಡು ಪುಟಗಳ ಕತೆಗಳಿವೆ.
೧೦. ಶ್ರೀನಿವಾಸ ವೈದ್ಯ ಅವರ ಇನ್ನೊಂದು ಕಥಾಸಂಗ್ರಹ - ಅಗ್ನಿಕಾರ್ಯ
ಈ ಎಲ್ಲ ಪುಸ್ತಕದ ಬೆಲೆ ಸುಮಾರು ನೂರು ನೂರು ರೂಪಾಯಿಗಳು
ಆಮೇಲೆ ಫರ್ಸ್ಟ್ ಹ್ಯಾಂಡ್ ಪುಸ್ತಕದ ಅಂಗಡಿಯಲ್ಲೇ ಯಾವ್ದೋ ಕಾಲಕ್ಕೆ ಪ್ರಿಂಟಾದ ಪುಸ್ತಕಗಳು ಇದ್ದವು . ಅವನ್ನೂ ೧೦/೧೫/೨೦ ರೂಪಾಯಿಗೆ ತಗೊಂಡೆ ! .

- shreekant.mishrikoti ರವರ ಬ್ಲಾಗ್
- Login or register to post comments
- 275 hits
- Email this blog




RSS:
ಪ್ರತಿಕ್ರಿಯೆಗಳು
ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು
'ಮರುಳ ಮುನಿಯನ ಕಗ್ಗದ ವಿವರಣೆ' ಕವಿತಾಕೃಷ್ಣರ ಅನುವಾದವೇ?
______
ಬೊಳುಂಬು
ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು
ಅಲ್ಲ ; ಯಾರೋ ಶ್ರೀಕಾಂತ್ ಅಂತೆ ( ಅವನು ನಾನಲ್ಲ
) ನಿಟ್ಟೂರು ಶ್ರೀನಿವಾಸ್ರಾಯರ ಮುನ್ನುಡಿ ಇದೆ
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು
ಬೈರಪ್ನೋರ ಪುಸ್ತಕಗಳನ್ನು ಖರೀದಿಸ್ಲಿಲ್ವೇನ್ರೀ? ಅಥವಾ ಆಗಲೇ ಓದಿ ಮುಗಿಸಿದ್ದೀರಾ?
ಬೈರಪ್ಪನವರ ’ಆವರಣ’ ವನ್ನು ಕೆಲ ವಾರಗಳಹಿಂದೆ ಓದಿದೆ. ೫ ವರ್ಷಗಳೂ ಬಹಳ ಕಷ್ಟಪಟ್ಟು ಮಾಹಿತಿಗಳನ್ನು ಕಲೆಹಾಕಿ ಬರೆದಿದ್ದಾರಂತೆ. ಬಹಳ ಉತ್ತಮ ಕಾದಂಬರಿ.
ನಾನು ವ್ಯಾಸರಾಯಬಲ್ಲಾಳರ ಸಮಗ್ರ ಕಥೆಗಳ ಪುಸ್ತಕವನ್ನು ಹುಡುಕಾಡಿದ್ದೆ, ಆದರೆ ಸಿಕ್ಕಿಲ್ಲ!.
ಅವರ ಕಥೆಘಳೂ ಚೆನ್ನಾಗಿರ್ತವೆ ಅಂತ ಕೇಳಿದ್ದೇನೆ.
ಬೈರಪ್ಪನವರಿಂದ ಕನ್ನಡ ಸಾಹಿತ್ಯ ಶ್ರೀಮಂತಿಗೆ ಹೆಚ್ಚಿದೆ. ಯಾವುದೇ ಆಡಂಬರಗಳಿಲ್ಲದೆ ಎಲೆ ಮರೆ ಕಾಯಿಯಂತೆ ತಮ್ಮ ಸಾಹಿತ್ಯ ಕೃಶಿಯನ್ನು ಮಾಡುತ್ತಿರುವ ಬೈರಪ್ಪನವರಿಂದ ಇನ್ನಷ್ಟು ಕೃತಿಗಳನ್ನು ನಿರೀಕ್ಷಿಸೋಣವೇ?
ನನಗೆ ಕಾದಂಬರಿಗಳಿಗಿಂತ ಸಣ್ಣ ಸಣ್ಣ ಕಥೆಗಳನ್ನೋದುವುದೇ ಅಭ್ಯಾಸ. ಏಕೆಂದರೆ ೨೦೦-೩೦೦-೪೦೦ ಪುಟಗಳನ್ನೋದಿ ಒಂದು ಕಥೆ ತಿಳಿದುಕೊಳ್ಳುವ ಸಹನೆ ಏಕೋ ನನಗೆ ಹೊರಟು ಹೋಗಿದೆ. ಕಾಲೇಜು ದಿನಗಳಲ್ಲಿ ಯಂಡಮೂರಿ ವೀರೇಂದ್ರ ನಾಥ್, ಹಾಗೂ ಇನ್ನಿತರ ಪ್ರಸಿದ್ದ ತೆಲುಗು ಲೇಖಕರ ಕಾದಂಬರಿಗಳ ಕನ್ನಡ ಅವತಣಿಕೆಯನ್ನೋದುತ್ತಿದ್ದೆವು. ಆಗಿದ್ದ ಸಹನೆ ಈಗಿಲ್ಲ. ಏಕೋ ಗೊತ್ತಿಲ್ಲ. ಅದಕ್ಕೇ ಏನೋಪ್ಪ ಒಂದು ಧಾರಾವಾಹಿಗಳನ್ನು ನೋಡಲೂ ಮನಸಾಗುವುದಿಲ್ಲ. ಎಂತಹ ಟಿ.ಎನ್.ಸೀತಾರಾಮ್ ಸೀರಿಯಲ್ಲು ದಿನವೂ ಮನೆಯಲ್ಲಿ ಎಲ್ಲರೂ ನೋದ್ಡುತ್ತಿದ್ದರೂ ನಾನು ಮಾತ್ರ ಒಂದು ಎಪಿಸೋಡನ್ನೂ ನೋಡಿಲ್ಲ.
ಅದೇ ಸುಧಾ, ತರಂಗಗಳಲ್ಲಿ ಬರುವ ಕಥೆಗಳನ್ನು ಓದುತ್ತೇನೆ. ಏಕೆಂದರೆ ೧೦-೧೫ ನಿಮಿಷದಲ್ಲಿ ಮುಗಿಯುತ್ತದಲ್ಲ!!
ಉತ್ತಮ ಕಥಾಸಂಕಲನಗಳು ನಿಮಗೆ ಗೊತ್ತಿರುವಂಥವನ್ನು ತಿಳಿಸಿ.
ಉ: ಇನ್ನಷ್ಟು ಹೊಸ ಪುಸ್ತಕ ಖರೀದಿ ; ಒಂದಿಷ್ಟು ಓದು
೧. ನನಗೂ ನಿಮ್ಮ ಹಾಗೇ ಕಾದಂಬರಿ ಓದಲು ಸಹನೆ ಇಲ್ಲ , ಚಂದಮಾಮ , ಝೆನ್ , ಚಮತ್ಕಾರದ ಕತೆಗಳು , ದೃಷ್ಟಾಂತ ಕತೆಗಳು ಇತ್ಯಾದೀ ಸಣ್ಣ ಕತೆಗಳೇ ಇಷ್ಟ ;
ನಮ್ಮಿಂದ ಬಯಸುವ ಸಮಯ ಕಡಿಮೆ , ಕೊಡುವ ಸಂತೋಷ ತಿಳುವಳಿಕೆ ಹೆಚ್ಚು .
೨. ಬೈರಪ್ಪ ಕಾದಂಬರಿಗಳನ್ನು ೨೫ ವರ್ಷದ ಹಿಂದೆ ಓದಿದ್ದೆಷ್ಟೋ ಅಷ್ಟೇ , ಕತೆಗಿಂತ ಅವರ ಪುಸ್ತಕದಲ್ಲಿ ಪ್ರಬಂಧ, ಭಾಷಣ ಜಾಸ್ತಿ ಅಂತ ನನ್ನ ಅನಿಸಿಕೆ . ಅದಕ್ಕೇ ಭೈರಪ್ಪ ಬರಹದಿಂದ ದೂರ ಇದ್ದೀನಿ .
೩. ಮಾಸ್ತಿ ಕತೆಗಳನ್ನು ಓದಿ , ಜಯಂತ ಕಾಯ್ಕಿಣಿಗಳನ್ನೂ ಓದಿ , ಶ್ರೀನಿವಾಸ ವೈದ್ಯರ ’ಮನಸುಖರಾಯರ ಮನಸ್ಸು’ , ಕುಂ. ವೀ. ಅವರ ’ಭಳಾರೆ ವಿಚಿತ್ರಂ’ ಓದಿ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"