ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ನೀವು ಏನಾದರೂ ಬರೆಯುತ್ತಾ ಇದ್ದರೆ ಈ ಕೆಳಗಿನ ಪಟ್ಟಿ ನೋಡಿ. ಇಲ್ಲಿನ ಶಬ್ದವನ್ನ ನೀವು ಬಳಸಿದ್ದರೆ ಅದರ ಬದಲಾಗಿ ಅದರ ಮುಂದೆ ಕೊಟ್ಟಿರುವ ಸುಲಭಕನ್ನಡ ಶಬ್ದ ಬಳಸಬಹುದೋ ನೋಡಿ ..
ಸುಲಭವಾಗಿ ತಿಳಿಯದ ಇಲ್ಲಿನ ಅನೇಕ ಶಬ್ದಗಳನ್ನು ದಿನಪತ್ರಿಕೆಯೊಂದರಿಂದಲೇ ಆಯ್ದುಕೊಂಡು ಅವುಗಳ ಬದಲಿಗೆ ಬಳಸಬಹುದಾದವನ್ನು (ಆಹಾ ! - ಕನ್ನಡದ ಶಕ್ತಿಯೇ !!) .. ಒಂದೆರಡನ್ನು ಬಿಟ್ಟು ಉಳಿದವನ್ನೆಲ್ಲ ಕೂಡಲೇ ಬಳಸಬಹುದಾಗಿದೆ.
ಈ ಸಂಗ್ರಹಕ್ಕೆ ಏನಾದರೂ ಸೇರಿಸಬಹುದಿದ್ದರೆ ತಿಳಿಸಿ ..
ಅಕಸ್ಮಾತ್ ಪಳಚ್ಚನೆ
ಅಗೋಚರ ಕಾಣದ
ಅಗ್ನಿ ಬೆಂಕಿ
ಅಗ್ನಿಜ್ವಾಲೆ ಬೆಂಕಿಯ ನಾಲಗೆ
ಅನತಿಕಾಲದಲ್ಲಿ ತಡವಿಲ್ಲದೆ
ಅಪಜಯ/ಪರಾಜಯ ಸೋಲು
ಅವಿಸ್ಮರಣೀಯ ಮರೆಯಲಾಗದ
ಅಷ್ಟಮ ಎಂಟನೇ
ಅಸತ್ಯ ಸುಳ್ಳು,ಸಟೆ
ಆಗ್ರಹ ಒತ್ತಾಯ
ಆಗ್ರಹಿಸು ಒತ್ತಾಯಿಸು
ಆಶ್ರಯ ಆಸರೆ
ಆಷ್ಟ ಎಂಟು
ಉಗಮವಾಗು ಹುಟ್ಟು
ಉತ್ಸವ ಹಬ್ಬ
ಉದ್ದೇಶಿಸಿ ಕುರಿತು
ಉದ್ಧರಿಸು ಮೇಲಕ್ಕೆತ್ತು
ಉದ್ಧಾರ ಮೇಲಕ್ಕೆತ್ತುವಿಕೆ
ಉದ್ಭವ ಹುಟ್ಟಿಕೊಂಡ
ಉದ್ಭವವಾಗು ಹುಟ್ಟಿಕೋ
ಉನ್ನತ ಎತ್ತರದ
ಉಪಸ್ಥಿತರಿರು ಹಾಜರಿರು
ಏಕಾಂಗಿ ಒಬ್ಬಂಟಿ
ಏಕಾಂಗಿತನ ಒಬ್ಬಂಟಿತನ
ಕರ್ತವ್ಯ ಮಾಡತಕ್ಕುದು
ಕಲಹ ಜಗಳ
ಕಾರ್ಪೆಂಟರ್ ಮರಗೆಲಸಕಾರ
ಕಾರ್ಯನಿರ್ವಹಿಸು ಕೆಲಸಮಾಡು
ಕೃತ್ಯ ಕೆಲಸ
ಕೈದಿ ಸೆರೆಯಾಳು
ಕ್ಷೀರಸಮುದ್ರ ಹಾಲ್ಗಡಲು
ಚತುರ್ಥ ನಾಲ್ಕನೇ
ಛಿದ್ರಗೊಳ್ಳು -ಒಡೆ
ಜನಿಸು ಹುಟ್ಟು
ಜನ್ಮ ಹುಟ್ಟು
ಜಯ ಗೆಲುವು
ಜ್ಞಾಪಕ ನೆನಪು
ಜ್ಞಾಪಕಾರ್ಥ ನೆನಪಿನಲ್ಲಿ, ನೆನಪಿಗಾಗಿ, ನೆನಪಿಗೋಸ್ಕರ
ಜ್ಞಾಪಿಸು ನೆನಪಿಸು
ತನುಮನ ಮೈಮನ
ತೃತೀಯ ಮೂರನೇ
ತೃಷೆ(ಲೈಂಗಿಕ) ಲೈಂಗಿಕ ಹಸಿವು
ತೈಲ ಎಣ್ಣೆ
ತ್ಯಜಿಸು ಬಿಟ್ಟುಬಿಡು
ತ್ರಿ/ತ್ರಯ ಮೂರು
ದ್ವಯ ಜ(ಜೊ)ತೆ
ದ್ವಿ ಎರಡು
ದ್ವಿತೀಯ ಎರಡನೇ
ಧೃಡ ಗಟ್ಟಿ
ಧ್ವಜ ಬಾವುಟ
ನಗ್ನ ಬೆತ್ತಲೆ
ನವ ಹೊಸ/ಒಂಬತ್ತು
ನವನವೀನ ಹೊಚ್ಚಹೊಸತು
ನವಮ ಒಂಭತ್ತನೇ
ನಾಮಕರಣಮಾಡು ಹೆಸರಿಡು
ನಾವೀನ್ಯ ಹೊಸತು
ನಿರೀಕ್ಷಿಸು ಎ(ಇ)ದಿರುನೋಡು
ನೇತಾರ ಮುಂದಾಳು
ನೇತೃತ್ವ ಮುಂದಾಳುತನ
ಪಂಚ ಐದು
ಪಂಚಮ ಐದನೇ
ಪರಸ್ಪರ ಒಬ್ಬರನ್ನೊಬ್ಬರು
ಪರಾಜಿತ ಸೋತವ
ಪರಿಗಣನೆ ಎಣಿಕೆ
ಪರಿಗಣಿಸಿ ಎಣಿಸು , ಲೆಕ್ಕಕ್ಕೆ ತೆಗೆದುಕೋ
ಪಶ್ಚಾತ್ತಾಪ ಹಿನ್ನೋವು
ಪಾಣಿಗ್ರಹಣಮಾಡು ಕೈಹಿಡಿ
ಪಾರಂಗತ ನಿಪುಣ,ಕೋವಿದ
ಪಾರ್ಶ್ವ ಮಗ್ಗಲು, ಪಕ್ಕ , ಬದಿ
ಪುನಃ/ಪುನರ್ ಮತ್ತೆ/ಮರು
ಪುನಃಪುನಃ ಮತ್ತೆಮತ್ತೆ
ಪುನರ್ಜನ್ಮ ಮರುಹುಟ್ಟು
ಪುಷ್ಪ ಹೂ
ಪೂಜನೀಯ ಪೂಜಿಸತಕ್ಕ
ಪೂರ್ವ ಮುನ್ನ
ಪ್ರತಿ... ಇದಿರು...
ಪ್ರಥಮ ಮೊದಲ
ಪ್ರೇಕ್ಷಣೀಯ ನೋಡತಕ್ಕ
ಬಂದಿ ಸೆರೆಯಾಳು
ಬೃಹತ್ ದೊಡ್ಡ
ಭಕ್ಷಿಸು ತಿನ್ನು
ಭಕ್ಷ್ಯ ತಿಂಡಿ, ತಿನಿಸು
ಭಕ್ಷ್ಯಭೋಜ್ಯ ತಿನಿಸು-ಉಣಿಸು
ಭಯ ಹೆದರಿಕೆ / ಅಂಜಿಕೆ
ಭಯಾನಕ/ಭಯಾವಹ ಅಂಜಿಕೆ(ಹೆದರಿಕೆ)ಯನ್ನುಂಟು ಮಾಡುವ
ಭಾಗವಹಿಸು ಪಾಲ್ಗೊಳ್ಳು
ಭೀತ ಅಂಜಿದ/ ಹೆದರಿದ
ಭೀತಿ ಹೆದರಿಕೆ / ಅಂಜಿಕೆ
ಭೂಕಂಪ ನೆಲನಡುಕ
ಮರಣ ಸಾವು
ಮಾತೃತ್ವ ತಾಯ್ತನ, ತಾಯಿತನ
ಮಾರ್ಗ ದಾರಿ
ಮಾರ್ಗ ದಾರಿ
ಮುಕ್ತ.. ತೆರೆದ..
ಮುಕ್ತಿ ಬಿಡುಗಡೆ
ಮೃತದೇಹ ಹೆಣ
ಮೃತರಾಗು ಸಾಯು
ಮೌಲ್ಯಮಾಪನ ಬೆಲೆಕಟ್ಟುವಿಕೆ
ಯಾಚಿಸು ಬೇಡು
ರಂಧ್ರ ತೂತು
ರಕ್ಷಣೆಗೆ ಕಾಯಲು/ಕಾಪಾಡಲು
ರಕ್ಷಿಸು ಕಾಪಾಡು
ಲೇಖಕ ಬರಹಗಾರ
ಲೇಖಕಿ ಬರಹಗಾತಿ
ಲೇಖನ ಬರಹ
ವಂಚನೆ ಮೋಸ
ವಂಚಿಸು ಮೋಸಗೊಳಿಸು / ಮೋಸ ಮಾಡು
ವಶಕ್ಕೆ ಕೈಗೆ
ವಾಪಸ್ ಮರಳಿ
ವಿಜೇತ ಗೆದ್ದವ
ವಿತರಣೆ ಹಂಚಿಕೆ
ವಿತರಿಸು ಹಂಚು
ವಿನ್ಯಾಸ ಚಿತ್ತಾರ
ವೃದ್ಧಿ ಹೆಚ್ಚಳ
ವೃದ್ಧಿಸು ಹೆಚ್ಚು/ಹೆಚ್ಚಾಗು/ಹೆಚ್ಚಿಸು/ಹೆಚ್ಚುಮಾಡು
ವೈಶಿಷ್ಟ್ಯ ವಿಶೇಷತೆ
ವ್ಯಾಪಿಸು ಹರಡು
ವ್ಯಾಪ್ತಿ ಹರಡು
ಶೀಘ್ರ ಬೇಗ
ಶೀತ ಚಳಿ
ಶೀತಮಾರುತ ಚಳಿಗಾಳಿ
ಶುದ್ಧ ಅಪ್ಪಟ
ಷಡ್ರಿಪು ಆರುವೈರಿಗಳು
ಸಂಘರ್ಷ ತಿಕ್ಕಾಟ
ಸಂಬಂಧ ನ(ನೆ)ಂಟು , ನ(ನೆ)ಂಟಸ್ತಿಕೆ
ಸಂವಾದ ಮಾತುಕತೆ
ಸತ್ಯ ದಿಟ
ಸನ್ನಿಹಿತವಾಗು ಹತ್ತಿರಬರು
ಸಪ್ತ ಏಳು
ಸಪ್ತಮ ಏಳನೇ
ಸಮುದ್ರ ಕಡಲು
ಸಮ್ಮಿಲಿತ ಸೇರ್ಪಡೆ
ಸಮ್ಮಿಶ್ರ ಬೆರಕೆ
ಸೂಕ್ತ ಸರಿಯಾದ
ಸೂಚಿ ಪಟ್ಟಿ
ಸ್ಟ್ರಿಕ್ಟ್ ಕಟ್ಟುನಿಟ್ಟು
ಸ್ಪರ್ಧಾತ್ಮಕ ಪೈಪೋಟಿಯ
ಸ್ಪರ್ಧೆ ಪೈಪೋಟಿಯ
ಸ್ಪಷ್ಟ ನಿಚ್ಚಳ
ಸ್ಫೋಟ ಸಿಡಿತ
ಸ್ಮರಣೆ ನೆನಪು
ಸ್ಮರಿಸು ನೆನೆ
ಹಂತಕ ಕೊಲೆಗಾರ
ಹತ್ಯೆ ಕೊಲೆ
ಹೃದಯ ಎದೆ

- shreekant.mishrikoti ರವರ ಬ್ಲಾಗ್
- Login or register to post comments
- 229 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಮಿಶ್ರಿಕೋಟಿಗಳೇ, ಚೆನ್ನಾಗಿದೆ ಸುಲಬಕನ್ನಡಕೈಗನ್ನಡಿ.
ಸುಮ್ಮನೇ ಅಚ್ಚ ಕನ್ನಡ ಬಳಸಬೇಕು ಬೇಕು ಅಂತ ಎಲ್ಲಾ ಕಡೆ ಹೇಳಿಕೊಳ್ಳುತ್ತಾ ಇರುವವರಿಗಿಂತ ಇದು ಒಳ್ಳೆಯದು.
ಸತ್ಯ = ’ನಿಜ’ ಆಗುತ್ತದಾ , ಅದು ಕನ್ನಡ ಪದವಾ?
**************************
http://vikasavada.blogspot.com/
**************************
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಸತ್ಯಕ್ಕೆ ನಿಜ ’ಉಪಯೋಗಿಸ’ಬಹುದು . ಅಪ್ಪಟಕನ್ನಡವೇ ಬೇಕೆಂದರೆ ದಿಟ ’ಬಳಸಬಹುದು’ !
ಸುಳ್ಳಿಗೆ ಸಟೆ ಎಂಬ ಶಬುದವೂ ಇಹುದು ಮಾರಾಯ್ರೆ .
ನನ್ನ ಪಟ್ಟಿ ಸುಲಭ ಕನ್ನಡದ್ದೇ ವಿನ: ಅಪ್ಪಟ ಕನ್ನಡದ್ದಲ್ಲ !
( ಸಂಸ್ಕೃತ ಶಬ್ದಗಳನ್ನು ಪೂರ್ತಿ ಬಿಡಲಾಗದು. ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಸರಳವಾದ , ತಿಳಿಯಲು ಸುಲಭವಾದ ಕನ್ನಡ ಬಳಸಬೇಕು ಎನ್ನುವುದೇ ಸರಿ ಅನ್ನಿಸುತ್ತದೆ! )
ಅದಕ್ಕೇ ಈ ಶಬ್ದಗಳನ್ನು ಸದ್ಯದ ಬರವಣಿಗೆಗಳಿಂದ ಆಯ್ದುಕೊಂದು, ಇಂದೇ ಬಳಸಲು ಸಾಧ್ಯವಾದ ಸುಲಭವಾದ ಬದಲಿ ಪದಗಳನ್ನು ಕೊಟ್ಟಿದ್ದೇನೆ. )
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಚನ್ನಾಗಿದೆ............... ಬಲು ನೆರವಾಯ್ತು.. ಒಳ್ಳೆಯ ಆರಯ್ಯು ಮತ್ತು ಕೆಲಸ..
ಕೆಲವು ತಿದ್ದುಪಡಿಗಳು
ಅಕಸ್ಮಾತ್ = ಗೊತ್ತಿಲ್ಲದೇ, ತಿಳಿಯದೇ, ಪಳಚ್ಚನೆ
ಅನತಿಕಾಲದಲ್ಲಿ = ಬೇಗನೆ, ತಡವಿಲ್ಲದೇ, ಚುರುಕಾಗಿ
ಉಗಮವಾಗು = ಮೂಡು, ಹುಟ್ಟು
ಉದ್ಧರಿಸು = ಏಳಿಗೆ ಮಾಡು, ಮೇಲಕ್ಕೆತ್ತು
ಉದ್ಧಾರ = ಏಳಿಗೆ, ಮೇಲಕ್ಕೆತ್ತುವಿಕೆ
ಉದ್ಭವ = ಮೂಡಿದ, ಹುಟ್ಟಿಕೊಂಡ
ಉನ್ನತ = ಮೇಲ್ಮಟ್ಟದ ಎತ್ತರದ ( ಉನ್ನತ ಶಿಕ್ಶಣ = ಮೇಲ್ಮಟ್ಟದ ಕಲಿಕೆ )
ಉಪಸ್ಥಿತರಿರು = ಇರು, ಹಾಜರಿರು
ಕಾರ್ಪೆಂಟರ್ = ಬಡಗಿ, ಮರಗೆಲಸಕಾರ
ಛಿದ್ರಗೊಳ್ಳು -ಒಡೆ, ಚೂರು ಮಾಡು
ನವಮ = ಒಂಬತ್ತನೇ (ಒಂಭತ್ತನೇ ಅಲ್ಲ )
ನಿರೀಕ್ಷಿಸು = ಎ(ಇ)ದಿರುನೋಡು, ಕಾಯಿ
ಪಾರಂಗತ , ನಿಪುಣ,ಕೋವಿದ ಈ ಮೂರು ಸಂಸ್ಕ್ರುತದವೇ = ಬಲ್ಲ, ತಿಳಿದವ, ಪಂಡಿತ
ವೃದ್ಧಿ = ಬೆಳೆತ, ಹೆಚ್ಚಳ
ವೃದ್ಧಿಸು = ಬೆಳೆಸು, ಹೆಚ್ಚು/ಹೆಚ್ಚಾಗು/ಹೆಚ್ಚಿಸು/ಹೆಚ್ಚುಮಾಡು
ಷಡ್ರಿಪು ಆರುವೈರಿಗಳು = ಆರುಹಗೆಗಳು
ಹೃದಯ = ಗುಂಡಿಗೆ
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
’ಪಂಡಿತ’ ಸಕ್ಕದವಲ್ಲವಾ?!
**************************
http://vikasavada.blogspot.com/
**************************
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಪಂಡಿತ=ಬಲ್ಲವ, ಕೋವಿದ
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಸತ್ಯ=ನಿಜ ಎರಡೂ ಸಂಸ್ಕೃತವಾಗಿರುವುದಱಿಂದ ಹುರುಳು, ಖರೆ ಅಥವಾ ನೆಱವನ್ನು ಸತ್ಯಕ್ಕೆ ಸಮಾನಾರ್ಥಕವಾಗಿ ಬಳಸಬಹುದು. ಉಪಸ್ಥಿತರಿರು= ಹಾಜರಿರು. ಇಲ್ಲಿ ಹಾಜರು ಅರಬ್ಬಿ ಆಗಿರುವುದಱಿಂದ ಉಪಸ್ಥಿತರಿರು ಅಥವಾ ಕುಳಿತಿರು ಎಂಬ ನಮ್ಮದೇ (ಸಂಸ್ಕೃತ ಮತ್ತು ಕನ್ನಡ) ಶಬ್ದಗಳನ್ನು ಬಳಸುವುದು ಉತ್ತಮ.
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಸತ್ಯ = ದಿಟ,
ದರ್ಮ = ಅರು(ಅಱು)
ಪ್ರಾಮಾಣಿಕತೆ = ನೆಱ?ನೇರನಡೆ
ಉಪಸ್ತಿತರು = ಇರುವವರು
ಖರೆ ಕನ್ನಡವೇ? ಮರಾಟಿ/ಉರ್ದು ಅಲ್ವ? "ಖರಾ ಉತರ್ನಾ"(ದಿಟವಾಗು) ಎಂಬು ನುಡಿಗಟ್ಟು..!!
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಅಱು ಅಲ್ಲ. ಅಱ. ನೋಡಿ ಅಱನ ಮಗ ಅಥವಾ ಅಱ+ಪಟ್ಟಿಗೆ=ಅಱವಟ್ಟಿಗೆ=ಧರ್ಮಛತ್ರ.
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಮನ್ನಿಸಿರಿ..
ತಪ್ಪು ತಿದ್ದಿದಕ್ಕೆ ನನ್ನಿ...
ಅಱದ ಕುರಿ
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
’ಖರೆ’ ಕನ್ನಡವೇ. ಅದು ಎಲ್ಲಿಂದನಾರೂ ಬಂದಿರಬಹುದು ಇಲ್ಲವೇ ಕನ್ನಡದ್ದೇ ಇರಬಹುದು.
ನಮ್ಮ ಹವ್ಯಕ ಕನ್ನಡದಲ್ಲಿ ಸತ್ಯ, ನಿಜ, ದಿಟ ಯಾವುದೂ ಬಳಕೆಯಲ್ಲಿಲ್ಲ. ’ಖರೆ ’ ಎನ್ನುವುದೇ ಇರುವುದು. ಅದಕ್ಕೆ ನಮಗೆ ಅದೇ ಸರಿಯಾದ ಕನ್ನಡ ಪದ.
**************************
http://vikasavada.blogspot.com/
**************************
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಹಾಗೆಯೇ ಸುಳ್ಳು=ಬದ್ದ ನಿಮ್ಮ ಕನ್ನಡವಲ್ಲವೇ?
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಅಲ್ಲ.
**************************
http://vikasavada.blogspot.com/
**************************
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಹೌದಾ? ಖರೆ, ಉತ್ತರ ಕರ್ನಾಟಕದಲ್ಲಷ್ಟೇ ಉಪಯೋಗಿಸುವುದು ಅಂದ್ಕೋಂಡಿದ್ದೆ!
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಹೌದು, ಇದೇ ರೀತಿ ಹವ್ಯಕ ಕನ್ನಡ ಮತ್ತು ಉತ್ತರ ಕರ್ನಾಟಕದ ಕನ್ನಡದಲ್ಲಿ ಸುಮಾರಷ್ಟು common ಪದಗಳಿವೆ. ಬಹುಶ: ಹಿಂದಿನಿಂದ ಉತ್ತರಕನ್ನಡ ಜಿಲ್ಲೆ ಮತ್ತು ಉತ್ತರ ಕರ್ನಾಟಕ ಪ್ರದೇಶಗಳ ಸಂಪರ್ಕವೇ ಕಾರಣವಿರಬಹುದು.
**************************
http://vikasavada.blogspot.com/
**************************
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಅಱು ಅಲ್ಲ ಅಱ. ನೋಡಿ ಅಱನ ಮಗ= ಧರ್ಮರಾಯ. ಅಱ+ಪಟ್ಟಿಗೆ=ಅಱವಟ್ಟಿಗೆ=ಧರ್ಮಛತ್ರ. ಅಱ ಅಂದರೆ ಧರ್ಮ.
ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
ಸತ್ಯಕ್ಕೆ ನನ್ನಿ ಅನ್ನುವ ಅರ್ಥವೂ ಇದೆ.
ಸತ್ಯ = ನನ್ನಿ