Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಈ ಸಿನೇಮಾ ಯಾವದು ?

January 19, 2008 - 11:59pm — shreekant.mishrikoti

ಇವತ್ತು ಶನಿವಾರ , ೧೯ ಜನವರಿ ೨೦೦೮, ಚಂದನ ಚಾನೆಲ್ಲಿನಲ್ಲಿ ಒಂದು ಕನ್ನಡ ಸಿನೆಮಾ ಬರ್ತಾ ಇದೆ , ಮಲೆನಾಡಲ್ಲಿ ೨೦ ವರ್ಷ ಹಿಂದೆ ತೀರಿಕೊಂಡೋನು ಬಯಲುಸೀಮೆಯಲ್ಲಿ ಪುನರ್ಜನ್ಮ ಎತ್ತಿದ್ದಾನೆ , ಹಿಂದಿನ ಜನ್ಮದ ಅಪ್ಪ , ಅಮ್ಮ , ಇತರ ಜನ ತೀರಿಕೊಂಡೋನೇ ಇವನು ಅಂತ ಒಪ್ಕೊಂಡಿದ್ದಾರೆ , ಹೆಂಡತಿ ತಲೆ ಬೋಳಿಸಿಕೊಂಡು ವಿಧವೆಯ ಬಾಳು ಬದುಕುತ್ತಿದ್ದು , ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ , ವೈಶಾಲಿ ಕಾಸರವಳ್ಳಿಯವರ ಮಗಳು , ಮತ್ತೆ ಸುನೀಲ್ ಪುರಾಣಿಕ್ ಈ ಚಿತ್ರದಲ್ಲಿದ್ದಾರೆ , ಈ ಸಿನೇಮಾದ ಹೆಸರು , ನಿರ್ದೇಶಕರು , ಕತೆಗಾರರು ,ಮತ್ತೇನಾದ್ರೂ ಹೆಚ್ಚಿನ ವಿವರ ಗೊತ್ತಿದ್ರೆ ತಿಳಿಸ್ತೀರಾ?

Ornamental seperator
  • shreekant.mishrikoti ರವರ ಬ್ಲಾಗ್
  • Login or register to post comments
  • 246 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 20, 2008 - 3:09am — hamsanandi

ಉ: ಈ ಸಿನೇಮಾ ಯಾವದು ?

hamsanandi's picture

ಕಥೆಯ ಜಾಡನ್ನು ಕೇಳಿದ್ರೆ ಭೈರಪ್ಪ ಅವರ ನಾಯಿ ನೆರಳಿನ ತರಹ ಇದೆ. ಅದೇ ಆಗಿದ್ರೆ, ನಿರ್ದೇಶಕರು ಗಿರೀಶ್ ಕಾಸರವಳ್ಳಿ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
January 20, 2008 - 10:46pm — Ennares

ಉ: ಈ ಸಿನೇಮಾ ಯಾವದು ?

Ennares's picture

ಹಂಸಾನಂದಿಯವರು ಸರಿಯಾಗಿ ಕಂಡುಹಿಡಿದರು.

ಭೈರಪ್ಪನವರ ಕಾದಂಬರಿ "ನಾಯಿ ನೆರಳು"ವಿನ ಮೇಲೆ ಅಧಾರಿತ ಚಲನಚಿತ್ರದ ನಿರ್ದೇಶಕ ಗಿರೀಶ್ ಕಾಸರವಳ್ಳಿ. ( ೨೦೦೫- ೦೬ ನೇ ಸಾಲಿನ ಅತ್ಯುತ್ತಮ ಚಿತ್ರ) ಹಾಗೆಯೇ ೨೦೦೬ರಲ್ಲಿ ಓಶಿಯನ್ ಸಿನಿಫ್ಯಾನ್ ಏಶಿಯಾ ಚಿತ್ರೋತ್ಸವದ ವಿಶೇಷ ಜ್ಯೂರಿ ಪ್ರಶಸ್ತಿ ಕೂಡ

ತಾಯಿ ವೆಂಕಟಲಕ್ಷ್ಮಿಯ ಪಾತ್ರದಲ್ಲಿ ಪವಿತ್ರಾ ಲೋಕೇಶ್ ( ಅತ್ಯುತ್ತಮ ನಟಿ ). ಮಗಳು ರಾಜಲಕ್ಷ್ಮಿಯ ಪಾತ್ರದಲ್ಲಿ ಗಿರೀಶ್ ಕಾಸರವಳ್ಳಿ ಪುತ್ರಿ ಅನನ್ಯ ಅಭಿನಯಿಸಿದ್ದಾರೆ.

ಕ್ಯಾಮೆರಾ ಶ್ರೀ ರಾಮಚಂದ್ರ ಐತಾಳರದ್ದು.

ಈ ಕೆಳಗಿನ ಕೊಂಡಿಯಲ್ಲಿ "ದಿ ಹಿಂದೂ" ಪತ್ರಿಕೆಯ ಪುಟ ನೋಡಿ.

http://www.hindu.com/mag/2006/08/06/stories/2006080600090500.htm

-ನವರತ್ನ ಸುಧೀರ್

  • Login or register to post comments
  • link
  • Email this ಪ್ರತಿಕ್ರಿಯೆ
January 21, 2008 - 11:16am — shreekant.mishrikoti

ಉ: ಈ ಸಿನೇಮಾ ಯಾವದು ?

shreekant.mishrikoti's picture

ಎನ್ನಾರೆಸ್ ಅವರಿಗೂ ಹಂಸಾನಂದಿ ಅವರಿಗೂ ಧನ್ಯವಾದಗಳು. ಸಿನೇಮಾ ಚೆನ್ನಾಗಿತ್ತು .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
January 21, 2008 - 11:38am — ವೈಭವ

ಉ: ಈ ಸಿನೇಮಾ ಯಾವದು ?

ವೈಭವ's picture

ಸಿನಿಮಾಗಿಂತ ಕಾದಂಬರಿ ಓದಿ. ಇನ್ನು ಸಕ್ಕತ್ತಾಗಿದೆ.

ಕಾದಂಬರಿ ಮೊದಲೆ ಓದಿದ್ದ್ದ ನನಗೆ ಸಿನಿಮ ಹಿಡಿಸಲಿಲ್ಲ. Sad
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • Email this ಪ್ರತಿಕ್ರಿಯೆ
January 21, 2008 - 12:08pm — kpbolumbu

ಉ: ಈ ಸಿನೇಮಾ ಯಾವದು ?

kpbolumbu's picture

ಕಾಸರವಳ್ಳಿಯವರು ಅದನ್ನು ವೆಂಕಟಲಕ್ಷ್ಮಿಯ ದೃಷ್ಟಿಯಿಂದ ತೋರಿಸಿದ್ದಾರೆ. ಕಾದಂಬರಿಯಲ್ಲಿ ವೆಂಕಟಲಕ್ಷ್ಮಿ ಗಂಡನನ್ನು ಸಂಪೂರ್ಣ ನಂಬುತ್ತಾಳೆ. ಸಿನಿಮಾದಲ್ಲಿ ಅವಳು ನಂಬುವುದಿಲ್ಲ, ಆದರೆ ನಂಬಿದಂತೆ ನಟಿಸುವುದರಿಂದ ತನ್ನನ್ನು ಸಮಾಜ ನೋಡುವ ರೀತಿ ಬದಲಾದೀತೇನೋ ಎಂಬ ಆಸೆಯಿಂದ ನಂಬುವಂತೆ ಕಾಣಿಸುತ್ತಾಳೆ. ಅವಳು ಕೊನೆಗೂ ತನ್ನ ಅಸ್ತಿತ್ವವನ್ನು ಹೇಗೆ ಕಂಡುಕೊಳ್ಳುತ್ತಾಳೆ ಎನ್ನುವುದೇ 'ನಾಯಿನೆರಳು' ಸಿನಿಮಾ.
______
ಬೊಳುಂಬು

  • Login or register to post comments
  • link
  • Email this ಪ್ರತಿಕ್ರಿಯೆ
January 22, 2008 - 12:32am — hamsanandi

ಉ: ಈ ಸಿನೇಮಾ ಯಾವದು ?

hamsanandi's picture

ಸುಮಾರಾಗಿ, ಎಲ್ಲ ಕಾದಂಬರಿ ಆಧಾರಿತ ಚಿತ್ರಗಳದ್ದೂ ಇದೇ ಪಾಡು; ನಾನು ಗೃಹಭಂಗ, ನಾಯಿನೆರಳು ಚಿತ್ರಗಳನ್ನು ನೋಡಿಲ್ಲ - ಆದರೆ, ಅವೂ ವಂಶವೃಕ್ಷದ, ಕಾಡು ಮೊದಲಾದ ಚಿತ್ರಗಳ ಹಾದಿ ಹಿಡಿದಿದ್ದರೆ, ಕಾದಂಬರಿ ಓದಿದವರಿಗೆ ನಿರಾಶೆಯಾಗುವುದರಲ್ಲಿ ಸಂಶಯವಿಲ್ಲ. ಹ್ಯಾರಿ ಪಾಟರ್ ಚಿತ್ರವನ್ನು ನೋಡಿದಾಗಲೂ ನನಗೆ ಇದೇ ರೀತಿ ನಿರಾಸೆಯಾಯಿತು.

ಓದುವಾಗ ನಮ್ಮ ಮನಸ್ಸಿನಲ್ಲಿ ಕಲ್ಪನೆಗಳು ಗರಿಕೆದರಬಹುದು. ನೋಡುವಾಗ ಹಾಗಾಗುವುದಿಲ್ಲವಲ್ಲ? ಆದರೆ, ಚಿತ್ರವನ್ನು ನೋಡಿದಾಗ, ಓದದಿದ್ದವರು ಆ ಕತೆ/ಕಾದಂಬರಿಯನ್ನು ಓದಬೇಕೆನ್ನಿಸುವಷ್ಟು ಆಸೆ ತಂದರೆ, ಅದು ಯಶಸ್ವಿ ಎಂದು ನನ್ನ ಎಣಿಕೆ. (ಹೀಗೆ, ಕಳೆದವರ್ಷ ಸಿಂಗಾರವ್ಬ ಮತ್ತು ಅರಮನೆ ಚಿತ್ರ ನೋಡಿದಾಗ, ಮೂಲವನ್ನು ಓದದ ನನಗೆ ಅದನ್ನು ಓದಲೇಬೇಕೆನ್ನಿಸಿ, ಓದಿದೆ)

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮತ್ತೆ ’ಅಂತ’
  • ಈ ಟೀವಿಯಲ್ಲಿ ಕನ್ನಡ ನಾಟಕಗಳು
  • ಲವಣ ಅಂದ್ರೆ....
  • ವಿಷಯ : ದತ್ತಿ ಉಪನ್ಯಾಸ-೨೦೦೮ " ಸಾಹಿತ್ಯ ಮತ್ತು ಜೀವನದ ಇತರ ಮೌಲ್ಯಗಳು "
  • ಸೂಪರ್ ಹಿಟ್ ಹಾಡು,ಸೂಊಊಊಊಪರ್ ಸಿನೆಮಾ..??
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಮ್ಮನ ದಿನ
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
  • ಅಡುಗೆಯ ಸಂಭ್ರಮ
  • ಕೊಂಡಗೂಳಿ ಕೇಶಿರಾಜ ಮತ್ತು ಶಬ್ದಮಣಿದರ್ಪಣದ ಕೇಶಿರಾಜರು ಬೇರೆಬೇರೆ
  • ಲಿನಕ್ಸಾಯಣ - ೬- ಪ್ರೊಗ್ರಾಮ್ ಇನ್ಸ್ಟಾಲೇಶನ್
  • lifestyle exhibition ನಲ್ಲಿ ಲಿನಕ್ಸು !!!
  • ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
  • ಕಾಲೇಜು ಜೀವನಕ್ಕೆ ಸಂಬದಿಸಿದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • prasannasp
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 12, 2008 - 2:58pm
  • Sunil Jayaprakash
    ಉ: ’ದ್ರಾವಿಡ’ ಶಬ್ದದ ಬದಲು ’ತೆನ್ನುಡಿ’ ಎನ್ನುವ ಶಬ್ದ
    May 12, 2008 - 2:49pm
  • madhava_hs
    ಉ: ಕವಿರಾಜಮಾರ್ಗ ತಂದ ಹುರುಪು,ಕುಸಿ,ನಲಿವು...
    May 12, 2008 - 2:38pm
  • roopablrao
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 2:12pm
  • ಗಣೇಶ
    ಉ: ದಾವೂದ್ ಇಬ್ರಾಹಿಂ ಬಂಧನ......ನಂತರ
    May 12, 2008 - 2:12pm
  • Shivakumar.Revadi
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:59pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 12, 2008 - 1:38pm
  • vikashegde
    ಉ: ಪ್ರತ್ಯಕ್ಷ ನೋಡಿದರೂ...
    May 12, 2008 - 1:23pm
  • sushil
    ಉ: ವಚನ ಚಿಂತನ: ಈ ವಚನವನ್ನು ಅರ್ಥಮಾಡಿಕೊಳ್ಳುವುದು ಹೇಗೆ?
    May 12, 2008 - 1:19pm
  • sushil
    ಉ: ಶ್ರೀಬಸವೇಶ್ವರರ ವಚನಗಳು
    May 12, 2008 - 11:25am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 26 ಅತಿಥಿಗಳು ಆನ್ಲೈನ್ ಇರುವರು.

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator