ಈಗಿನಂತೆ 5 ಸದಸ್ಯರು ಮತ್ತು 67 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಗಾಡಿ ಬುಲಾರ ಹೀಹೈ, ಸೀಟಿ ಬಜಾರ ಹೀಹೈ...
ramvani's picture
ವಾಣಿ
21
Jan
2011
ಲೇಖನ

 

ಬಾಲಿವುಡ್ ಸಿನಿಮಾಕ್ಕೂ - ಭಾರತೀಯ ರೈಲಿಗೂ ಬಲು ಸಂಬಂಧವಯ್ಯಾ? ಯಾಕೆ ಅಂತೀರಾ....ವಿಶ್ವದ ಸಿನಿಮಾ ಪ್ರಪಂಚದಲಿ ಅತೀ ಹೆಚ್ಚು ಸಿನೆಮಾಗಳನ್ನು ಮಾಡುವುದು ಬಾಲಿವುಡ್...

ಪ್ರತಿಕ್ರಿಯೆಗಳು: 9
ಹಿಟ್ಸ್ : 758
ಮೊದಲ ಫಸಲಿನ ಸಂಭ್ರಮಕ್ಕೆ ಅಭಿಮಂತ್ರಣ....
rashmi_pai's picture
Rashmi Pai
08
Jan
2010
ಬ್ಲಾಗ್ ಬರಹ

ಅಂತೂ ಮಳೆ ಬಂದಿದೆ,
ನಿರೀಕ್ಷೆಯೂ ಮುಗಿದಿದೆ...
ಕಾವ್ಯ ಕೃಷಿಯ ಮೊದಲ ಬೆಳೆ

'ನೆನಪಿನ...

ಪ್ರತಿಕ್ರಿಯೆಗಳು: 16
ಹಿಟ್ಸ್ : 1,238
ನಾವೇಕೆ ಸೋಲಬೇಕು?
abdul's picture
ಅಬ್ದುಲ್ ಲತೀಫ್ ಸಯ್ಯದ್
10
May
2010
ಪುಟ

TWENTY20 ವಿಶ್ವ ಪಂದ್ಯಾವಳಿಯಲ್ಲಿ ಭಾರತ ಔಪಚಾರಿಕವಾಗಿ ಹೊರಕ್ಕೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ ಟೂರ್ನಮೆಂಟ್ ನ ಫೇವರಿಟ್ ಭಾರತಕ್ಕೆ ಹೊರಹೋಗುವ ಬಾಗಿಲನ್ನು ತೋರಿಸಿ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,303
ಶಹಬ್ಬಾಶ್ ಮುಂಬೈಕಾರ್!
ವಿಶ್ವನಾಥ's picture
ವಿಶ್ವನಾಥ ಎಂ ಬಸವನಾಳಮಠ
13
Jul
2006
ಬ್ಲಾಗ್ ಬರಹ
ಮುಂಬೈನಲ್ಲಿ ಜೂನ್ 11, 2006 ರ ಸಂಜೆ 6-20 ರಿಂದ 6-32 ರ ವರೆಗೆ ಕೇವಲ ಹನ್ನೆರಡೇ ನಿಮಿಷಗಳಲ್ಲಿ 7 ಬಾರಿ ಸಂಭವಿಸಿದ ಭಾರಿ ಸ್ಫೋಟಕ್ಕೆ 200ಕ್ಕೂ ಹೆಚ್ಚು ಮುಗ್ಧ ಜನರು...
ಪ್ರತಿಕ್ರಿಯೆಗಳು: 8
ಹಿಟ್ಸ್ : 3,097
ಲಕ್ಷ್ಮೀನರಸಿಂಹ ದೇವಾಲಯ - ಭದ್ರಾವತಿ
rajeshnaik111's picture
24
Sep
2011
ಲೇಖನ

 ಪೂಜಿತ ದೇವರ ಅತಿ ಸುಂದರ ಮೂರ್ತಿಗಳನ್ನು ನೋಡಬೇಕಾದರೆ ಭದ್ರಾವತಿಯ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಭೇಟಿ ನೀಡಬೇಕು. ಇಲ್ಲಿ ಅದ್ಭುತವಾಗಿ ಕೆತ್ತಲಾಗಿರುವ ೫ ಮೂರ್ತಿಗಳಿವೆ -...

ಪ್ರತಿಕ್ರಿಯೆಗಳು: 15
ಹಿಟ್ಸ್ : 322
ಗಾಂಧಿ ಮೀಟರ್ರು‍
prashanth kota's picture
04
Jun
2006
ಪುಟ
ನನಗೊಬ್ಬ ಸರ್ದಾರ್ಜಿ ಸ್ನೇಹಿತ ಇದ್ದಾನೆ. ಹರ್ಪ್ರೀತ್ ಅಂತ. ನಾಲ್ಕು ತಿಂಗಳ ಹಿಂದೆ ಅವನ ಮನೆಯವರು ಬನ್ನೇರುಘಟ್ಟದಾಚೆಯ ಗೊಟ್ಟಿಗೇರೆ ಎಂಬಲ್ಲಿ ಹೊಸ ಮನೆಯೊಂದರಲ್ಲಿ ವಾಸಿಸ ತೊಡಗಿದರು...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,552
ವಿದ್ಯುನ್ಮಾನ ಮಾದ್ಯಮಗಳ ನಿಯಂತ್ರಣ
Dr.Sureshammasandra's picture
Dr.Suresh Kumar
13
Nov
2011
ಲೇಖನ

ವಿದ್ಯುನ್ಮಾನ ಮಾದ್ಯಮಗಳನ್ನು ನಿಯಂತ್ರಿಸುವ ಕುರಿತಾದ ಚರ್ಚೆಗಳು ಈಗ ದೇಶದಾದ್ಯಂತ ನಡೆಯುತ್ತಿವೆ. ಮುಖ್ಯವಾಗಿ ಖಾಸಗಿ ಟಿ.ವಿ.ವಾಹಿನಿಗಳು ಪ್ರಸಾರ ಮಾಡುತ್ತಿರುವ ಕೆಲವು...

ಪ್ರತಿಕ್ರಿಯೆಗಳು: 2
ಹಿಟ್ಸ್ : 163
ದೇವರಿಗೆ ಪೂಜೆ ಸಲ್ಲಿಸುವುದು ಆತನ ಮುಖೇನ ಸ್ವರ್ಗ ಪ್ರಾಪ್ತಿಯಾಗಲೆಂದಿರಬಹುದೆ?--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೭
anilkumar's picture
ಎಚ್.ಎ. ಅನಿಲ್ ಕುಮಾರ್
06
Sep
2010
ಬ್ಲಾಗ್ ಬರಹ

(೧೯೧) ದೇವರು ನಮಗೆ ಆತನನ್ನು ನಂಬದೆ ಇರಲು ಅನುಮತಿ ನೀಡಿರುವುದು ಏಕೆಂದರೆ ಆತನ ರಾಜ್ಯದಲ್ಲಿ ಮೊರ್ಖರನ್ನು ಹೊಂದಿರುವ ಅರ್ಹತೆ ಆತನಿಗಿಲ್ಲ.

(೧೯೨) ದೇವರಿಗೂ ನಾವು ಮೋಸ...

ಪ್ರತಿಕ್ರಿಯೆಗಳು: 3
ಹಿಟ್ಸ್ : 899
ಕಗ್ಗ - ಮತ್ತೊಂದು ಚಿಂತನೆ
krvinutha's picture
ವಿನುತಾ ಕುಂಸಿ ರಾಜಾರಾವ್
13
Jun
2011
ಬ್ಲಾಗ್ ಬರಹ
ಇತ್ತೀಚೆಗೆ...
ಪ್ರತಿಕ್ರಿಯೆಗಳು: 7
ಹಿಟ್ಸ್ : 407
ಹಣೆಯ ಸಿ೦ಧೂರವೇ (ಧರ್ಮಾ೦ತರಿಯೊಬ್ಬಳ ಪತ್ರ) ಮತ್ತು ಸ್ವಗತ
Harish Athreya's picture
ಹರೀಶ್ ಆತ್ರೇಯ
26
Nov
2009
ಬ್ಲಾಗ್ ಬರಹ

       ಹಣೆಯ ಸಿ೦ಧೂರವೇ

ನೀನು ನನ್ನ ಬಾಳ ಬ೦ಗಾರವಾದೆ. ಆದರೆ ನಿನ್ನನ್ನ ನನ್ನ ಹಣೆಯ...

ಪ್ರತಿಕ್ರಿಯೆಗಳು: 124
ಹಿಟ್ಸ್ : 2,716

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

MP3 ಕಡತಗಳನ್ನು ತುಂಡರಿಸುವುದು ಹೇಗೆ ?

MP3 ಕಡತಗಳನ್ನು ತುಂಡರಿಸುವುದು ಹೇಗೆ ?

ಆಡಿಯೋ ಕ್ಯಾಸೆಟ್ ಗಳಲ್ಲಿನ ಹಾಡುಗಳನ್ನು  MP3 ಗೆ  ಬದಲಿಸಲು ಒಂದು ಫಿಲಿಪ್ಸ್ ಸಿಸ್ಟಮ್ ತೆಗೆದುಕೊಂಡಿದ್ದನ್ನು ಹಿಂದೆ ಯಾವಾಗಲೋ  ಹೇಳಿದ್ದೇನೆ . ( ಒಳ್ಳೆಯ ಟೇಪ್ ರಿಕಾರ್ಡರ್  ಇದ್ದರೆ ಸಾಕು , ಒಂದು chord ಮಾತ್ರ ಖರೀದಿಸಿ , ಅದಕ್ಕಾಗಿ ಇರುವ  ಪುಕ್ಕಟೆ ಸಾಫ್ಟ್ ವೇರ್ ಹಾಕ್ಕೊಂಡು ನಿಮ್ಮ ಕಂಪ್ಯೂಟರ್ ಗೆ  ಸಂಗೀತವನ್ನು  ಸಾಗಿಸಿಕೊಳ್ಳಬಹುದು . ಅದರ ಬಗ್ಗೆಯೂ ಸಂಪದದಲ್ಲೇ ಎಲ್ಲೋ ಬರಹ ಇದೆ).


ನನ್ನ ಗೆಳೆಯರೊಬ್ಬರಿಗೆ ಈ ವಿಷಯ ಹೇಳಿದಾಗ  ತಮ್ಮ ಹತ್ತಿರವಿದ್ದ   ಹತ್ತು ಕ್ಯಾಸೆಟ್ ದಯಪಾಲಿಸಿದರು. MP3 ಗೆ ಬದಲಿಸಿ ಕೊಡಲು ಹೇಳಿದರು .  ಫಿಲಿಪ್ಸ್ ಸಿಸ್ಟಮ್ ನಲ್ಲಿ USB ಡ್ರೈವ್ ಹಾಕಿ  ರೆಕಾರ್ಡ್ ಮತ್ತು ಸ್ಟಾಪ್ ಬಟನ್ ಒತ್ತಬೇಕು.  ಆದರೆ  ಕ್ಯಾಸೆಟ್ ನಲ್ಲಿ ಆಯಾ ಹಾಡು ಮುಗಿದಾಗ ಸ್ಟಾಪ್ ಒತ್ತಿ ಮುಂದಿನ ಹಾಡು ಶುರುವಾಗುವ ಮುನ್ನ ಮತ್ತೆ ರೆಕಾರ್ಡ್ ಬಟನ್ ಒತ್ತಬೇಕು . ಅಂದರೆ  ಅದು ಪ್ಲೇ ಆಗುತ್ತಿರುವಾಗ ಅದರ ಮುಂದೇ ಇರಬೇಕು . ಅತ್ತಿತ್ತ ಗಮನ ಹರಿಸುವಂತಿಲ್ಲ .  ಒಂದೂವರೆ ಗಂಟೆಯ ಹತ್ತು ಕ್ಯಾಸೆಟ್ ಗಳು !  ಅಂದರೆ  ಹದಿನೈದು ಗಂಟೆ !  ಇಷ್ಟಕ್ಕೂ  ಅಲ್ಲಿರೋದೆಲ್ಲ ನನಗೆ ಆಸಕ್ತಿಯದಲ್ಲ.  ಮತ್ತೆ ಮುಂದೇನು ಗತಿ ?


ಸರಿ ಒಂದು ಕ್ಯಾಸೆಟ್ ನ ಒಂದು ಬದಿಯನ್ನು ಪ್ಲೇ ಮಾಡಿ ರೆಕಾರ್ಡ್ ಒತ್ತಿ  ಬೇರೆ ರೂಮಿಗೆ ಹೋದೆ.  ಒಂದು ಗಂಟೆಯ ನಂತರ ಯಾವಾಗಲೋ ನೋಡಿದಾಗ ಕ್ಯಾಸೆಟ್ ಮುಗಿದಿತ್ತು . ೪೫ ನಿಮಿಷದ ಕ್ಯಾಸೆಟ್ ರೆಕಾರ್ಡ್   ಆಗಿತ್ತು . ಈ ತರಹ  ಹತ್ತು ಕ್ಯಾಸೆಟ್ ಗಳಿಂದ  ೪೫ ನಿಮಿಷಗಳ ೨೦ ಕಡತಗಳೇನೋ ಸಿಕ್ಕಬಹುದು.   ಆದರೆ   ಪ್ರತಿ  ಕಡತದಲ್ಲಿನ ಹಾಡುಗಳು ( ಅಥವಾ  ಇನ್ನೇನೋ  )  ಬೇರೆ  ಬೇರೆ  ಕಡತಗಳಾಗಿದ್ದರೆ   ಒಳ್ಳೇದಲ್ಲವೇ ?     ಆ ರೀತಿ   MP3  ಕಡತಗಳನ್ನು     ತುಂಡರಿಸುವುದು   ಹೇಗೆ ?

 ಸಾಮಾನ್ಯವಾಗಿ   ಎಲ್ಲರೂ  ವಿಂಡೋಸ್   ಬಳಸಿದರೆ   ಉಬುಂಟು-ಲಿನಕ್ಸ್    ಬಳಸುತ್ತೀನಿ.   MP3  split  linux  ಅಂತ ಗೂಗಲಿಸಿ   ನೋಡಿದೆ.   ಉಬುಂಟು ಸಾಫ್ಟ್ ವೇರ್  ಸೆಂಟರ್  ನಲ್ಲೇ   ಅದಕ್ಕೆ ತಕ್ಕ     ತಂತ್ರಾಂಶ  ಇರುವುದು ತಿಳಿಯಿತು .  Mp3splt-gtk audio splitter  ಅನ್ನು    ಹಾಕಿಕೊಂಡೆ.   ಈ ತರ   ತಂತ್ರಾಂಶಗಳನ್ನು ಹಾಕಿಕೊಳ್ಳುವುದು   ಉಬುಂಟುನಲ್ಲಿ  ಬಲೇ ಸುಲಭ . ಕ್ಲಿಕ್  ಮಾಡಿದರಾಯಿತು , ಡೌನ್ಲೋಡ್  ಆಗಿ ಇನ್ ಸ್ಟಾಲ್   ಆಗಿಬಿಡುತ್ತವೆ.    

ಆ ತಂತ್ರಾಂಶ ದ ಆಯ್ಕೆಗಳು  ಬಳಸುವ ವಿಧಾನ - ಬಗೆ ಬಗೆಯಲ್ಲಿ ಪ್ರಯತ್ನಿಸಿ  ತಿಳಿದುಕೊಂಡೆ .
ಬಳಕೆಯು   ಬಲು  ಸುಲಭ .   ಕಡತವನ್ನು ಎಲ್ಲೆಲ್ಲಿ  ತುಂಡರಿಸಬೇಕೆಂದು  ಗುರುತಿಸಿದರೆ ಆಯಿತು .  

ಹೀಗಾಗಿ ನಾನು   ಹದಿನೈದು ಗಂಟೆ ಅದರ ಮುಂದೆ ಕೂತಕೊಳ್ಳ ಬೇಕಿಲ್ಲ!   ಹೆಚ್ಚೆಂದರೆ   ಒಂದು ಗಂಟೆಯ ಕೆಲಸ ಅನ್ನಿ !

ಜೈ  ಲಿನಕ್ಸ್  !  ಜೈ  ಉಬುಂಟು !!  


No votes yet
434 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
vikashegde's picture
20
May
2010
11:30

ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ?

>>>ಒಳ್ಳೆಯ ಟೇಪ್ ರಿಕಾರ್ಡರ್ ಇದ್ದರೆ ಸಾಕು , ಒಂದು chord ಮಾತ್ರ ಖರೀದಿಸಿ , ಅದಕ್ಕಾಗಿ ಇರುವ ಪುಕ್ಕಟೆ ಸಾಫ್ಟ್ ವೇರ್ ಹಾಕ್ಕೊಂಡು ನಿಮ್ಮ ಕಂಪ್ಯೂಟರ್ ಗೆ ಸಂಗೀತವನ್ನು ಸಾಗಿಸಿಕೊಳ್ಳಬಹುದು . >>>>

ಇದು ಹೇಗೆ ಹೇಳಿಕೊಡಿ ಪ್ಲೀಸ್. ಮೊದಲೇ ಬರೆದಿದ್ದರೆ ಕೊಂಡಿ ಕೊಡಿ ಪ್ಲೀಸ್..

>>ಫಿಲಿಪ್ಸ್ ಸಿಸ್ಟಮ್ ನಲ್ಲಿ USB ಡ್ರೈವ್ ಹಾಕಿ ರೆಕಾರ್ಡ್ ಮತ್ತು ಸ್ಟಾಪ್ ಬಟನ್ ಒತ್ತಬೇಕು.>>

ಅಂದ್ರೆ USB ಇರುವ ಸಿಸ್ಟಮ್ ಆಗಬೇಕು ಅಲ್ವಾ? ಇಲ್ಲಿ ಸಿಸ್ಟಮ್ ಅಂದ್ರೆ ಟೇಪ್ ರೆಕಾರ್ಡರ್ರಾ? ಹಾಡು USB drive (pendrive?)ಗೆ ಹೇಗೆ ನೇರವಾಗಿ ಹೋಗುತ್ತದೆ?

shreekant.mishrikoti's picture
20
May
2010
1:32

ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ?

>> ಅಂದ್ರೆ USB ಇರುವ ಸಿಸ್ಟಮ್ ಆಗಬೇಕು ಅಲ್ವಾ? ಇಲ್ಲಿ ಸಿಸ್ಟಮ್ ಅಂದ್ರೆ ಟೇಪ್ ರೆಕಾರ್ಡರ್ರಾ? ಹಾಡು USB drive (pendrive?)ಗೆ ಹೇಗೆ ನೇರವಾಗಿ ಹೋಗುತ್ತದೆ?
ಹೌದು , ನಾನು ಫಿಲಿಪ್ಸ್ ಮ್ಯುಸಿಕ್ ಸಿಸ್ಟಮ್ ಬಗ್ಗೆ ಹೇಳುತ್ತಾ ಇದ್ದೀನಿ . ಅದರಲ್ಲಿ ಯು. ಎಸ. ಬಿ. ಪೋರ್ಟ್ ಇದೆ . ಅದರಲ್ಲಿ ಯು ಎಸ ಬಿ ಡ್ರೈವ್ ಸಿಕ್ಕಿಸಬಹುದು .

vikashegde's picture
20
May
2010
2:02

ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ?

ಇಬ್ಬರೂ ಶ್ರೀಗಳಿಗೆ ಥ್ಯಾಂಕ್ಸ್.

mpneerkaje's picture
20
May
2010
12:32

ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ?

ನಾನು ಇಂಥಾದ್ದಕ್ಕೆಲ್ಲ ಅಡಾಸಿಟಿ (audacity) ಬಳಸುವುದು. ಬಹಳ ಚೆನ್ನಾಗಿದೆ ಅದು.

smurthygr's picture
20
May
2010
6:45

ಉ: MP3 ಕಡತಗಳನ್ನು ತುಂಡರಿಸುವುದು ಹೇಗೆ ?

ಹೌದು. ಲಿನಕ್ಸ್ ನಲ್ಲಿ ಅಡಾಸಿಟಿ, ವಿಂಡೋಸ್ ಆದರೆ ಗೋಲ್ಡ್ ವೇವ್ (ಅಥವಾ ಅಡಾಸಿಟಿ ವಿಂಡೋಸ್ಗೂ ಸಿಗುತ್ತೆ) ಬಳಸಲು ಸುಲಭ. ರೆಕಾರ್ಡ್ ಆದ mp3ಗಳಲ್ಲಿ ಇನ್ನೂ ಕೆಲವು ಸಣ್ಣ ಪುಟ್ಟ ರಿಪೇರಿಗಳಿದ್ದರೂ ಮಾಡಿಕೊಳ್ಳಬಹುದು.