ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಮೊದಲು ಮಹೇಶ್ ಅವರು ಕೇಳಿದ ಪ್ರಶ್ನೆಗೆ ಉತ್ತರ :
ಅವರು ಕೇಳಿದ್ದು .
೧. ನಾನು ನಿನಗೆ ಕಾಗದ ಬರೆಯುತ್ತಾ ಇದೆ.
೨. ನಾನು ಮಗುವಿಗೆ ಸ್ನಾನ ಮಾಡಿಸ್ತಾ ಇದ್ದೀನಿ
೩. ಅವರು ಅವನಿಗೆ ಹೊಡೆಯುತ್ತಾ ಇದ್ರು..
ಇದನ್ನೆಲ್ಲ ಧಾರವಾಡದಲ್ಲಿ ಹೇಗೆ ಹೇಳುತ್ತೀರಿ ? ಅಂತ
ಉತ್ತರ :
೧. ನಾನು ನಿನಗ ಪತ್ರ (/ಪತ್ರಾ) ಬರೀಲಿಕ್ಕೆ ಹತ್ತೇನಿ ( /ಬರೀಲಿಕ್-ಹತ್ತೇನಿ) .
೨. ನಾನು ಕೂಸಿಗೆ ಸ್ನಾನಾ ಮಾಡಿಸ್ಲಿಕ್ಕೆ ಹತ್ತೇನಿ (/ಮಾಡಿಸ್ಲಿಕ್-ಹತ್ತೇನಿ) .
೩. ಅವರು ಅವಗ ಹೊಡೀಲಿಕ್ಕೆ ಹತ್ತಿದ್ರು (/ಹೊಡೀಲಿಕ್-ಹತ್ತಿದ್ರು) .
ಮಾಡುತ್ತಾ ಇರು , ಮಾಡುತ್ತಿರು - ಇವುಗಳಿಗೆ ಅಷ್ಟೇ ಅಲ್ಲದೇ ,
ಮಾಡತೊಡಗು , ಮಾಡಲು ಶುರುಮಾಡು ಇವುಗಳಿಗೆ ಬದಲಾಗಿ ( ಗಮನಿಸಿ )
ಮಾಡಲಿಕ್ಕೆ ಹತ್ತು , ಮಾಡಲಿಕ್-ಹತ್ತು ಎಂದು ಬಳಸುತ್ತಾರೆ.
(ಮಾಡತೊಡಗು = ಮಾಡಹತ್ತು ಎಂಬುದನ್ನೂ ನೆನಪಿನಲ್ಲಿಡಿ)
ನಾನು ಮಾಡಲಿಕ್ಕೆ ಹತ್ತೀನಿ ( ಮಾಡಲಿಕ್ ಹತ್ತೀನಿ)
ನೀನು ....... ಹತ್ತೀದಿ .
ಅವ ... ಹತ್ಯಾನ
ಅಕಿ ... ಹತ್ಯಾಳ
ಅವರು ... ಹತ್ಯಾರ ...
ನಾನು .... ಹತ್ತಿದೆ ( ಮಾಡತೊಡಗಿದೆ ಅನ್ನುವದಕ್ಕೆ )
ಅವ ... ಹತ್ತಿದ ( ಮಾಡತೊಡಗಿದ)
ಅಕಿ ... ಹತ್ತಿದ್ಲು / ಹತ್ತಿದ್ಳು ... ( ಮಾಡತೊಡಗಿದಳು )
ನಾನು ... ಹತ್ತಿದ್ದೆ ... ( ಮಾಡ್ತಾ ಇದ್ದೆ , ಶುರು ಮಾಡಿದ್ದೆ)
ಅವ ... ಹತ್ತಿದ್ದ ( ಎರಡೂ ಅರ್ಥದಲ್ಲಿ )
ಅಕಿ... ಹತ್ತಿದ್ಲು / ಹತ್ತಿದ್ಳು ( ಎರಡೂ ಅರ್ಥದಲ್ಲಿ ) ಮೂರು ಸಾಲು ಮೇಲಿನದನ್ನೂ ಗಮನಿಸಿ .
ಇನ್ನೂ ಬೇರೆ ಬೇರೆ ರೂಪಗಳೂ ಇವೆ ..
ಹೊಡಿಯಾಕ (ಹೊಡ್ಯಾಕ ) / ಮಾಡಾಕ / ಬರಿಯಾಕ , ಇವೆ ನಿಜ .
ಆದರೆ ನಾನು ಆ ಕನ್ನಡವನ್ನು ಆಡುವದಿಲ್ಲ ಆದ್ದರಿಂದ ಆ ರೂಪಗಳನ್ನು ತಿಳಿಸಿಲ್ಲ ; ಯಾಕೆಂದರೆ ನಾನು ಬರೆಯುವದು ತಪ್ಪಾಗಬಹುದು .
ಬಲ್ಲವರು ಇಲ್ಲಿ ಟಿಪ್ಪಣಿ ಮಾಡಿ .

- shreekant.mishrikoti ರವರ ಬ್ಲಾಗ್
- Login or register to post comments
- 450 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಅರೇ!!
ನಂಗೆ ಒಂದು ಹೊಸ ಸಂಗತಿ ಹೊಳೀತ್ರಿ...
ನಮ್ಮ ಕಡೆ ನಾವು ಒರೆಗಳ ನಡುವ ಬರುವ ’ಹ’ ಅನ್ನು ಬಿಟ್ಟುಬಿಡ್ತೀವಿ. ಇಲ್ಲ ಅದನ್ನ ವ/ಯ ಅಂತ ಉಲಿತೀವಿ.. ಅಲ್ವರ!
ಈಗ
ನಾನು ನಿನಗ ಪತ್ರ (/ಪತ್ರಾ) ಬರೀಲಿಕ್ಕೆ ಹತ್ತೇನಿ
ನಾನು ನಿಂಗೆ ಕಾಗದ ಬರಯಕ್ಕೆ ಹತ್ತಿವ್ನಿ => ನಾನು ನಿಂಗೆ ಕಾಗದ ಬರಯಕ್ಕತ್ತಿವ್ನಿ ಆಯ್ತದೆ.
ಇಲ್ಲಿ ಬರಯಕ್ಕೆ ಹತ್ತೀನಿ ಅನ್ನೋ ಬರೆಯ ಹತ್ತೀನಿ ಅನ್ನೋದು ಸಮ ಅಲ್ವರ!
ಬರೀಲಿಕ್ಕೆ ಹತ್ತೀನಿ = ಬರಿಯ ಹತ್ತೀನಿ
ಇದನ್ನ ನಾವು ಬರೆಯತ್ತೀವ್ನಿ ಇದು ಬರಿಯ್ತಿವ್ನಿಗೆ ಸಮ ಆಯ್ತಲ್ಲ..!!
ಅರಿತ ಆಗ್ಲಿವ್ವ? ಇನ್ನೊಂದು ಸರತಿ ಓದ್ರಿ..
ಹಂಗೆ...
ಬರಿಯಲಿಕ್ಕೆ ಹತ್ತೀನಿ/ಹತ್ತಿವ್ನಿ = ಬರಿಯ ಹತ್ತೀನಿ/ಹತ್ತಿವ್ನಿ = ಬರಿಯ್ತಿವ್ನಿ
ಮಾಡಿಸ್ಲಿಕ್ಕ ಹತ್ತೀನಿ = ಮಾಡಿಸ ಹತ್ತೀನಿ/ಹತ್ತಿವ್ನಿ = ಮಾಡಿಸ್ತಿವ್ನಿ
ಹೊಡೆಯಲಿಕ್ಕೆ ಹತ್ತಾರೆ/ಹತ್ತವ್ರೆ = ಹೊಡೆಯ ಹತ್ತವ್ರೆ = ಹೊಡೆಯ್ತವ್ರೆ!
ನಂಗೆ ಯಾರೂ.. ದಾರವಾಡ ಈ ಹತ್ತೀನಿ/ಹತ್ತಿವ್ನಿ ನಾವು ಬಳಸ್ತೀವಿ ಅನ್ನಿಸ್ತಯ್ತೆ/ಅನ್ನಿಸ ಹತ್ತಯ್ತೆ!
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಅಲಲಾ!!
ನಂಗೆ ಒಂದು ಹೊಸ ಸಂಗತಿ ಹೊಳೀತ್ರಿ...
ನಮ್ಮ ಕಡೆ ನಾವು ಒರೆಗಳ ನಡುವ ಬರುವ ’ಹ’ ಅನ್ನು ಬಿಟ್ಟುಬಿಡ್ತೀವಿ. ಇಲ್ಲ ಅದನ್ನ ವ/ಯ ಅಂತ ಉಲಿತೀವಿ.. ಅಲ್ವರ!
ಈಗ
ನಾನು ನಿನಗ ಪತ್ರ (/ಪತ್ರಾ) ಬರೀಲಿಕ್ಕೆ ಹತ್ತೇನಿ
ನಾನು ನಿಂಗೆ ಕಾಗದ ಬರಯಕ್ಕೆ ಹತ್ತಿವ್ನಿ => ನಾನು ನಿಂಗೆ ಕಾಗದ ಬರಯಕ್ಕತ್ತಿವ್ನಿ ಆಯ್ತದೆ.
ಇಲ್ಲಿ ಬರಯಕ್ಕೆ ಹತ್ತೀನಿ ಅನ್ನೋದು, ಬರೆಯ ಹತ್ತೀನಿ ಅನ್ನೋದಕ್ಕೆ ಸಮ ಅಲ್ವರ!
ಬರೀಲಿಕ್ಕೆ ಹತ್ತೀನಿ = ಬರಿಯ ಹತ್ತೀನಿ
ಇದನ್ನ ನಾವು ಬರೆಯತ್ತೀವ್ನಿ, ಇದು ಬರಿಯ್ತಿವ್ನಿಗೆ ಸಮ ಆಯ್ತಲ್ಲ..!!
ಅರಿತ ಆಗ್ಲಿಲ್ವ? ಇನ್ನೊಂದು ಸರತಿ ಓದ್ರಿ..
ಹಂಗೆ...
ಬರಿಯಲಿಕ್ಕೆ ಹತ್ತೀನಿ/ಹತ್ತಿವ್ನಿ = ಬರಿಯ ಹತ್ತೀನಿ/ಹತ್ತಿವ್ನಿ = ಬರಿಯ್ತಿವ್ನಿ ( ತೆಂಕು ಬಗೆ )
ಮಾಡಿಸ್ಲಿಕ್ಕ ಹತ್ತೀನಿ = ಮಾಡಿಸ ಹತ್ತೀನಿ/ಹತ್ತಿವ್ನಿ = ಮಾಡಿಸ್ತಿವ್ನಿ
ಹೊಡೆಯಲಿಕ್ಕೆ ಹತ್ತಾರೆ/ಹತ್ತವ್ರೆ = ಹೊಡೆಯ ಹತ್ತವ್ರೆ = ಹೊಡೆಯ್ತವ್ರೆ!
ನಂಗೆ ಯಾಕೂ.. ದಾರವಾಡ ಈ ಹತ್ತೀನಿ/ಹತ್ತಿವ್ನಿ ನಾವು ಬಳಸ್ತೀವಿ ಅನ್ನಿಸ್ತಯ್ತೆ/ಅನ್ನಿಸ ಹತ್ತಯ್ತೆ!
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಇಲ್ಲ ಮಹೇಶ್ , ಅದು ಹಾಗಿರ್ಲಿಕ್ಕಿಲ್ಲ
ಬರಿಯ್ತಿವ್ನಿ - ಬರೀತಿವ್ನಿ ಇರ್ಬೇಕು
ಈ ಬರೀತಿವ್ನಿ, ಬರೀತ ಇವ್ನಿ - ಬರೆಯುತ್ತಾ ಇದ್ದೀನಿ ಇರ್ಬೇಕು
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಶ್ರೀಕಾಂತ ಅಯ್ನೋರೆ...
"ಹೊಡೆಯಕ್ಕೆ ಸುರು ಮಾಡವ್ರೆ" ಅನ್ನೋದನ್ನ ನಾವು "ಹೊಡೆಯ್ತವ್ರೆ" ಅಂತ ಹೇಳೋದು ಕೇಳಿವ್ನಿ. ಹಾಂಗೆ ಹೋಯ್ತವ್ರೆ ಅಂದ್ರೆ "ಹೋಗಕ್ಕೆ ಅಣಿಯಾಗವ್ರೆ" ಅಂತ ಕೂಡ ಅರಿತ ಬತ್ತದೆ.
ಇರಲಿ..
ಆದ್ರೆ....
ಮಾಡ್ತಾ ಇದಕ್ಕೆ ’ಮಾಡಲಿಕ್ಕೆ ಹತ್ತಿ’ ಸರಿಗಾಣದು..
ಇದನ್ನು ಇನ್ನೂ ಬಿಡಿಸುಮ.
ಈ ಸಾಲನ್ನು ನಿಮ್ಮ ಮಾತಲ್ಲಿ ಹೇಳಿ..
"ನಾನು ಪಳ್ಳೆಮನೆಗೆ ಹೋಯ್ತಾ, ದಾರ್‍ಯಾಗೆ ಒಂದು ಹೆಬ್ಬಾವ್ ಕಂಡೆ... ಅದು ಒಂದು ಇಲಿಯನ್ನ ಹಿಡ್ಕೊಂಡ್ ಹರಿದುಕೊಂಡು ಓಡ್ತಾ ಇತ್ತು"
ಪಳ್ಳಿಮನೆ ಅಂದ್ರೆ ಶಾಲೆ!
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಮಹೇಶ್ ,
ಸರಿಯೋ , ತಪ್ಪೋ ,
ಧಾರವಾಡದಲ್ಲಿನ ಜನ ಅದರಲ್ಲೂ ’ಒಂದು’ ಜನ ಆಡುವ ಮಾತಿನ ರೀತಿಯನ್ನು ಒಂದೆಡೆ ಕ್ರೂಡ್ ಆಗಿ ಒಟ್ಟು ಮಾಡಿ ಬರೆಯುತ್ತಿರುವೆ , ಅಷ್ಟೇ ,
ಬೇರೆ ಜನಕ್ಕೆ ಈ ನುಡಿಯನ್ನು ಪರಿಚಯಿಸುವದಷ್ಟೇ ನನ್ನ ಉದ್ದೇಶ ;
’ಉಳಿದ’ ಜನರೂ, ಉಳಿದ ಆಡುನುಡಿಗಳವರೂ ಜತೆ ಜತೆಗೆ ತಂತಮ್ಮ ಮಾತು ಸೇರಿಸಿದರೆ ಚೆನ್ನು .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಈ ಸಾಲನ್ನು ನಿಮ್ಮ ಮಾತಲ್ಲಿ ಹೇಳಿ..
"ನಾನು ಪಳ್ಳೆಮನೆಗೆ ಹೋಯ್ತಾ, ದಾರ್‍ಯಾಗೆ ಒಂದು ಹೆಬ್ಬಾವ್ ಕಂಡೆ... ಅದು ಒಂದು ಇಲಿಯನ್ನ ಹಿಡ್ಕೊಂಡ್ ಹರಿದುಕೊಂಡು ಓಡ್ತಾ ಇತ್ತು"
ಪಳ್ಳಿಮನೆ ಅಂದ್ರೆ ಶಾಲೆ!
[\quote]
"ನಾನು ಸಾಲಿಗೆ ಹೊಂಟಿದ್ದೆ , ಹಾದ್ಯಾಗ ಒಂದ್ (/ಒಂದು) ಹೆಬ್ಬಾಂವ್ ನೋಡ್ದೆ ,ಅದು ಒಂದ್ ಇಲೀ ಹಿಡ್ಕೊಂಡ್ ಸರಸರ ಅಂತ ಹೊಂಟಿತ್ತು "
ಪಳ್ಳೆಮನೆ ಅಂತ ಹೇಳಿ ಪಳ್ಳಿಮನೆಗೆ ಅರ್ಥ ಹೇಳಿದ್ರಿ ; ಈ ಶಬ್ದ ಬೇರೆ ಯಾರು ಎಲ್ಲಿ ಬಳಸಿದ್ದಾರೆ /ಬಳಸ್ತಾ ಇದ್ದಾರೆ ? ಪುಸ್ತಕದಲ್ಲೋ ? ಆಡುಮಾತಲ್ಲೋ ? ನೀವೇ ಹೊಸದಾಗಿ ಕಂಡು ಹಿಡಿದಿದ್ದೀರೋ ? ಸ್ವಲ್ಪ ತಿಳಿಸಿ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಗುರುಗಳೆ,
ನಮ್ಮ ಚಾ.ನಗರದ ಕಡೆ ಪಳ್ಳು, ಪಳ್ಮನೆ ಇನ್ನು ಆಡು ಮಾತಲ್ಲಿ ಬಳಸ್ತೀವಿ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ನಾನು ಗುರು ಅಲ್ರಿ ! ಗುರ್ರ್ ಅಂತಾನೂ ಅನ್ನೂದಿಲ್ರಿ !!
ಹೊಸ ಶಬ್ದ ತಿಳಿದ ಹಾಗಾಯಿತು ; ಆದರೆ ನಾನು ಈ ವರೆಗೆ ಓದಿದ್ದರಲ್ಲೆಲ್ಲೂ ಈ ಶಬ್ದ ನೋಡಿಲ್ಲ ;
ಅಥವಾ ನಾನು ಓದಿದ್ದು ಬಹಳ ಕಡಿಮೆ ; ಓದಬೇಕಾಗಿರೋದು ಬಹಳ.
ಧನ್ಯವಾದಗಳು .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಗುರುಗಳೆ ಅನ್ನುವಾಗ ಕುಹಕ ಇಲ್ಲ. ದಿಟವಾಗ್ಲೂ ಗೌರುವದಿಂದ ಹೇಳಿದ್ದು
ನೀವು ಸಕ್ಕತ್ ಹೊತ್ತಿಗೆ ಓದುತ್ತೀರ. ಮತ್ತು ಅದರ ಬಗ್ಗೆ ನಮಗೆ ತಿಳಿಸ್ತೀರ. ಅದಕ್ಕೆ ನೀವೆ ಸಂಪದ 'ಗುರುಗಳು'

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಪ್ಲೀಸ್ , ಹಾಗೆ ಹೇಳ್ಬೇಡಿ. ಕುಹಕ ಇದೆ ಅಂತ ನಾನು ಅನ್ಲಿಲ್ಲ , ನಿಮ್ಮ ಗೌರವಕ್ಕೆ ನಾನು ಅರ್ಹನಲ್ಲ , ಅಂತ ಹೇಳಿದೆ ;
ನಾನು ಓದಿದ್ದು ಬಹಳ ಕಡಿಮೆ
ಓದಬೇಕಾಗಿರೋದು ಬಹಳ ಇದೆ .
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ನಮ್ಮ ಕಡೆ ನಾನು, ನೀನು ಅಂತ ಪೂರ್ತಿ ಅನ್ನಂಗಿಲ್ಲ. ನಾ, ನೀ ಅಷ್ಟ.
ನಾ ಸಾಲಿಗೆ ಹೊಂಟಿದ್ದೆ...
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಹೌಧೌದು ! ಇದ್ರ ಕಡೆ ನಾ ಲಕ್ಷ್ಯ ಕೊಟ್ಟಿರ್ಲಿಲ್ಲ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಹೌಧೌದು ! ಇದರ ಕಡೆ ನಾ ಲಕ್ಷ್ಯ ಕೊಟ್ಟಿರ್ಲಿಲ್ಲ !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಹೊಂಟಿದ್ದೆ ಅನ್ನಲ್ಲ, ಹೊಂಟಿದ್ನಿ = ಹೊಂಟಿದ್ದೆನು
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ನಾ ಸಂತಿಗೆ ಹೋಗಿದ್ನಿ ,

ಆಕಿ ತಂದಿದ್ದಳೋ ಬೆಣ್ಣಿ !
ಹಿಂಡು ಹೆಣ್ಣಿನಾಗ ಅವಳೇ ಸವಿ ಸಕ್ಕರಿ ಕಣ್ಣಿ !!
(ಕಣ್ಣಿ=ಕರಣಿ)
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಆಕಿ ಕೊಳ್ಳಾಗಿತ್ತು ತಾಳಿ ಅನ್ನು ಗೊಣಿ,
ಅದನ್ ನೋಡಿ ನನ್ನ ಕಣ್ಣಾಗ
ಬಂತು ನೀರಿನ ಹಣಿ,
ಆಕಿ ಬಗಲಾಗಿನ ಕೂಸಿನ ಮೂಗಿನ್ಯಾಗ,
ಸೋರತಿತ್ತು ಸುಂಬಳ ಗೊಣ್ಣಿ!!!
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ರೀ ಶ್ರೀಕಾಂತ ಅಯ್ನೋರೆ...
ನೀವು ಹೋಯ್ ಕ್ರಿಯಾ-ಒರೆಯ ಜಾಗದಲ್ಲಿ ಹೊರಡು ಕ್ರಿಯಾ-ಒರೆಯನ್ನು ಬಳಸಿದ್ರಿ..
ನಿಮಗೆ ನಾನು ಹೇಳಬಯಸಿದ್ದು ತಿಳೀತಿಲ್ಲ...( ಎನ್ನ ಎಣಿಕೆ )
ಇರಿ, ಇನ್ನೊಂದು ಸಾಲ್ ಹಾಕ್ತಿನಿ.. ಆದ್ರೆ ನೀವು ಅದರ ಒರೆಗಳನ್ನು ಬದಲಿ ಮಾಡದೆ( ಅಂದ್ರೆ ಕ್ರಿಯಾಪದಗಳನ್ನು, ನಾಮಪದಗಳನ್ನು ಬದಲಿಸದೇ, ) ಬರೀ ಅದಕ್ಕೆ ಸೇರುವ ಒಟ್ಟುಗಳನ್ನು/ಪ್ರತ್ಯಯಗಳನ್ನು ಬದಲಿಸಿ ಹೇಳಿ ( ಮಾದರಿ, ಹೋಗಕ್ಕೆ ಅನ್ನು ಹೋಗಲಿಕ್ಕೆ ಮಾಡಬೋದು, ಆದ್ರೆ ಹೋಗಕ್ಕೆ ಅನ್ನು ಹೊರಡಕ್ಕೆ ಮಾಡಬರದು )
ಇದನ್ನು ಹೇಳಿ
-
ಅಮ್ಮ ತಂಗಿಗೆ ಜಡೆ ಹಾಕ್ತಾ ನಂಗೆ ಅಂದ್ರು.. "ಲೋ ರಾಮ ಆಟಕ್ಕೆ ಹೋಯ್ತಾ, ದಾರೀಲಿ, ಅಪ್ಪ ಕಟ್ಟೆ ತಾವ ಇತ್ತಾರೆ/ಇರ್ತಾರೆ.. ಅವರಿಗೆ ಬತ್ತಾ/ಬರ್ತಾ, ಒಂದ್ ಕೇಜಿ ಕಡಲೆ ತಕ್ಕೊಂಡು/ಕೊಂಡು ಬರಕ್ಕೆ ಹೇಳು"
-
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ನಾನು ನನ್ನ ಹುಬ್ಬಳ್ಳಿ ಗೆಳೆಯರ ಬಾಯಿಂದ ಕೇಳಿರೋ ಪ್ರಕಾರ
ಅವರು ಅವಗ ಹೊಡೀಲಿಕ್ಕೆ ಹತ್ತಿದ್ರು
ಅವರು ಅಂವ್ಗ್ಗ ಹೊಡೀಲಿಕ್ಕೆ ಹತ್ತಿದ್ರು
ಇಲ್ಲಿ ಅಂವ( ಮೂಗುಲಿ) ಬಿಟ್ತಿಹೋಗಿದೆ ಅಲ್ವ ?
ಹುಬ್ಬ್ಬಳ್ಳಿ/ದಾರವಾಡ ಕಡೆ ಹಾರುವ ಮತ್ತು ಹಾರುವರಲ್ಲದ ಮಂದಿ ಆಡುನುಡಿಯಲ್ಲಿ ಬಲು ಬೇರೆತನಗಳಿವೆ
ಬರಹಗನ್ನಡ ಹಾರುವ(ದಾರವಾಡ) ಹಾರುವರಲ್ಲದ(ದಾರವಾಡ)
----------------------------------------------------------
ಇದೆ ಅದ ಐತಿ
ಅದರಲ್ಲಿ ಅದ್ರೊಳಗ ಅದ್ರಾಗ
ಕೂತಿಕೊ ಕೂತ್ಕೊ ಕುಂತ್ಕ
ಗಮನಿಸಿ: ಹಾರುವರಲ್ಲದವರಲ್ಲಿ ಮೂಗುಲಿ ಹೆಚ್ಚು
ಇದರ ಬಗ್ಗೆ ಮೆಲ್ಬರ್ನ್ ಯೂನಿವರ್ಸಿಟಿಯವರು ಅರಯ್ಯು ಮಾಡಿದ್ದಾರೆ.
"Towards a General Model for Linguistic paradigms" ...ಇದರ ಬಗ್ಗೆ ಗೂಗಲಿಸಿದರೆ ನಿಮಗೆ ಇದರ pdf ಸಿಗುವುದು.
ಮೂಗುಲಿ = ಅನುನಾಸಿಕ ( ಶಂಕರ ಬಟ್ಟರ ನೆಗಳ್)
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
1. "ಹುಬ್ಬ್ಬಳ್ಳಿ/ದಾರವಾಡ ಕಡೆ ಹಾರುವ ಮತ್ತು ಹಾರುವರಲ್ಲದ ಮಂದಿ ಆಡುನುಡಿಯಲ್ಲಿ ಬಲು ಬೇರೆತನಗಳಿವೆ
ಬರಹಗನ್ನಡ ಹಾರುವ(ದಾರವಾಡ) ಹಾರುವರಲ್ಲದ(ದಾರವಾಡ) "
ಹೌದು, ನಾನು ಹಾರುವನಾದ್ದರಿಂದ ಆ ನುಡಿಯ ಕುರಿತು ಬರೆಯುತ್ತಿದ್ದೇನೆ .
2. " ಹಾರುವರಲ್ಲದವರಲ್ಲಿ ಮೂಗುಲಿ ಹೆಚ್ಚು"
ಇದು ಸರಿ ಇರಲಿಕ್ಕಿಲ್ಲ ; ನಾನು ಅವ/ಅಂವ ಅನ್ನುವಾಗ ಅನುಸ್ವಾರ ಬಳಸ್ತೀನಿ .
ಹಾಗೇ ಆರಯ್ಯು ಬಗ್ಗೆ ತಿಳಸ್ತೀರಾ ?
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಅರಯ್ = ಸಂಶೋದನೆ ( ಮಾಯ್ಸ
ಹೇಳಿದ್ದು)
ನಿಮಗೆ ಗೂಗಲಿಸಿದಾಗ ಆ ಪಿಡಿಎಪ್ ಸಿಕ್ಕಿತೆ? ಅದನ್ನ ಓದಿ
2. " ಹಾರುವರಲ್ಲದವರಲ್ಲಿ ಮೂಗುಲಿ ಹೆಚ್ಚು"
ಇದು ಸರಿ ಇರಲಿಕ್ಕಿಲ್ಲ ; ನಾನು ಅವ/ಅಂವ ಅನ್ನುವಾಗ ಅನುಸ್ವಾರ ಬಳಸ್ತೀನಿ
ಆದ್ರೂ ನನ್ನ ಕೆಲವು ಹುಬ್ಬಳ್ಳಿ ಬೇಟಿಗಳಲ್ಲಿ ನನಗೆ ಹೀಗೆ ಅನ್ನಿಸಿತು. ಮತ್ತು ಆ ಪಿಡಿಎಪ್ ನಲ್ಲೂ ಹಾಗೆ ಇದೆ.
-----------
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಆರಯ್ಯು = ಸಂಶೋದನೆ
ಆರಯ್= ವಿಚಾರಿಸು, contemplate
ಆರೈಕೆ = ನೋಡಿಕೊ, treatment
http://dsal.uchicago.edu/cgi-bin/philologic/getobject.pl?c.0:1:380.burro...
Ka.
āray, ārayu, ārayyu to search, investigate, take care of, ponder;
ārayisu, āraysu to look for, look to, desire;
ārayike, ārayke searching, observing; āre taking care of, etc.;
ārekāṟa a man who fosters; ?
ārisu to collect, gather, pick out, select.
ಆರಿಸು ( ಆರಿಸದ) ಮತ್ತು ಆಯ್ ( ಆಯ್ದ ) ಇದ ನಡುವಿನ ಬೇರತನ ಬಗ್ಗೆ ಉಂಕು ನಡೆಸಿದ್ರೆ..
ಆರಿಸು = ಯೋಚನೆ ಮಾಡಿ, ಆಯ್ದುದು.
ಆಯ್ದ = ಇಲ್ಲಿ ಆರಯ್ಯು ನಡೆದಿಬೇಕೆಂದಿಲ್ಲ.!
ನೆಲ ಮೇಲೆ ಬಿದ್ದು ನೆಲ್ಲನ್ನು ಆಯ್ದರು. ಅಕ್ಕಿಲ್ಲಿರುವ ಕಲ್ಲನ್ನು ಹುಡುಕಿ ಆರಿಸಿದರು.!
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಆರಿಸು ( ಆರಿಸದ) ಇದು ಆರಿಸು( ಆರಿಸಿದ ) ಆಗಬೇಕಿತ್ತು, ಅಚ್ಚುತಪ್ಪು!
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಮಿಶ್ರಿಕೋಟಿ, ಮಹೇಶ ಈಗಾಗಲೇ ಆರಯ್ಯದ ಬಗ್ಗೆ ತಿಳಿಸಿಬಿಟ್ಟಿದ್ದಾನೆ. ಆದರೂ ಸ್ವಲ್ಪ ದಿನ ತಡೆಯಿರಿ, ಆರಯ್ಯ ಬಗ್ಗೆ ಭರತೇಶ ವೈಭವದ ರತ್ನಾಕರವರ್ಣಿ ಏನು ಹೇಳಿದ್ದಾನೆ ಅಂತ ಎಲ್ಲರಿಗೂ ತಿಳಿಸಿಕೊಡ್ತೀನಿ
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ನಸುಬಿರ್ರನೇ ಹೇಳಲೆಳಸು.!
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಹೌದು, ನೀವು ಹೇಳೂದು ಖರೆ:
ಉದಾ:
ಗ್ರಾಂಥಿಕ - ಹಾರುವ - ಬಹುಜನ
ಇದೆ - ಅದ - ಐತಿ
ಜೋಳದ ರೊಟ್ಟಿ - ಭಕ್ಕರಿ - ರೊಟ್ಟಿ
??? - ಥಾಲಿಪೆಟ್ಟು - ಧಪಾಟಿ
ಕೇಶವ
Visit my blog:
http://kannada-nudi.blogspot.com
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ನನ್ನಿ
ಕನ್ನಡ ನಾಡಿನ ಬೇರೆ ಬೇರೆ ಇಕ್ಕೆಗಳ/ಸ್ತಳಗಳ ಆಡುನುಡಿಗಳ ಬಗ್ಗೆ ಒಂದು ಒಳ್ಳೆ ಅರಯ್ಯು ಮಾಡಲು ಹೇಳಿ ಮಾಡಿಸಿದ ವಿಸ್ಯ.
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಇಗೊ, ಪಿಡಿಎಪ್ ಬಂತು
http://www.ldc.upenn.edu/sb/home/papers/paradigms.pdf
------
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಒಮ್ಮೆ ನಾನು ನಿಪ್ಪಾಣಿಯನಾದ ಗೆಳೆಯನ ಜೊತೆಗೆ ಮಾತನಾಡಕೊತ "ಮಂಗ್ಯಾ ಮರಾ ಹೆಂಗ ಇಳೀಲಿಕ್ಕಹತ್ತದ ನೋಡ್ರಿ" ಅಂದೆ. ಆ ಮಾತನ್ನು ಮತ್ತೊಬ್ಬ ಬೆಂಗಳೂರಿಗ ಮಿತ್ರನೊಬ್ಬನೂ ಕೇಳಿಸಿಕೊಂಡಿದ್ದ. ಸ್ವಲ್ಪ ಹೊತ್ತಿನ ಮ್ಯಾಲ ಆವ ನನ್ನ ಕೇಳಿದ, ಮಂಗ ಮರ ಇಳೀಲಿಕ್ಕೆ ಹತ್ತಬೇಕು ಯಾಕ ಅಂತ, ನಮ್ಮ ಭಾಷೆಯ ಹತ್ಯಾರ, ಹತ್ತೆದ ಇವುಗಳ ಅರ್ಥ ಹೇಳಿದ ಮೇಲೆ ಅವನಿಗೆ ನಾನು ಹೇಳಿದ್ದು ಅರ್ಥ ಅಯ್ತು ಅಂದ.
ಉ: ಹತ್ಯಾರ ! (ಧಾರವಾಡ ಕನ್ನಡ - ಭಾಗ ಆರು)
ಒಮ್ಮೆ ನಾನು ನಿಪ್ಪಾಣಿಯನಾದ ಗೆಳೆಯನ ಜೊತೆಗೆ ಮಾತನಾಡಕೊತ "ಮಂಗ್ಯಾ ಮರಾ ಹೆಂಗ ಇಳೀಲಿಕ್ಕಹತ್ತದ ನೋಡ್ರಿ" ಅಂದೆ. ಆ ಮಾತನ್ನು ಮತ್ತೊಬ್ಬ ಬೆಂಗಳೂರಿಗ ಮಿತ್ರನೊಬ್ಬನೂ ಕೇಳಿಸಿಕೊಂಡಿದ್ದ. ಸ್ವಲ್ಪ ಹೊತ್ತಿನ ಮ್ಯಾಲ ಆವ ನನ್ನ ಕೇಳಿದ, ಮಂಗ ಮರ ಇಳೀಲಿಕ್ಕೆ ಹತ್ತಬೇಕು ಯಾಕ ಅಂತ, ನಮ್ಮ ಭಾಷೆಯ ಹತ್ಯಾರ, ಹತ್ತೆದ ಇವುಗಳ ಅರ್ಥ ಹೇಳಿದ ಮೇಲೆ ಅವನಿಗೆ ನಾನು ಹೇಳಿದ್ದು ಅರ್ಥ ಅಯ್ತು ಅಂದ.