ಗೋಳಾಟ !
ಅಯ್ಯೋ ಊಂ ಊಂ, ನಾನು ಧಡ್ಡನಾದೆನು
ಅಯ್ಯೋ ಊಂ ಊಂ, ನನ್ನ ತಲೆಯು ಓಡಲೊಲ್ಲದು
ಅಯ್ಯೋ ಊಂ ಊಂ, ನನಗೆ ಕೆಲಸ ಇಲ್ಲವು
ಅಯ್ಯೋ ಊಂ ಊಂ, ನನಗೆ ಕೆಲಸ ಮಾಡುವ ಮನಸೂ ಇಲ್ಲವು !
ಅಯ್ಯೋ ಊಂ ಊಂ, ನನಗೆ ಹೇಳುವರಾರೂ ಇಲ್ಲವು
ಅಯ್ಯೋ ಊಂ ಊಂ, ನನಗೆ ಕೇಳುವರಾರೂ ಇಲ್ಲವು
ಅಯ್ಯೋ ಊಂ ಊಂ, ನಾನು ಏನೂ ಸಾಧಿಸಲಿಲ್ಲವು
ಅಯ್ಯೋ ಊಂ ಊಂ, ನಾನು ಏನೂ ಸಾಧಿಸುತಿಲ್ಲವು
ಅಯ್ಯೋ ಊಂ ಊಂ, ನನಗೆ ಏನೂ ಸಾಧಿಸಲಿಕ್ಕಿಲ್ಲವು
ಅಯ್ಯೋ ಊಂ ಊಂ, ನನಗೆ ಸಮಾಧಾನ ಇಲ್ಲವು
ಅಯ್ಯೋ ಊಂ ಊಂ, ನಾನು ಏನೂ ಕಲಿಯುತಿಲ್ಲವು
ಅಯ್ಯೋ ಊಂ ಊಂ, ನನಗೆ ಏನೂ ತೋಚುತಿಲ್ಲವು
ಅಯ್ಯೋ ಊಂ ಊಂ, ಇನ್ನೆರಡು ಸಾಲು ಹೊಳೆಯುತಿಲ್ಲವು
ಅರೆ , ಎಂತೋ ಈ ಹಾಡು ಪೂರ್ತಿಯಾಯಿತು !
- shreekant.mishrikoti's blog
- Login or register to post comments
- 564 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ಗೋಳಾಟ !
ಅಯ್ಯೋ ಅಯ್ಯೋ ,ನಮಗೂ ಏನು ಅರ್ಥವಾಗಲಿಲ್ಲವೋ!
ಉ: ಗೋಳಾಟ !
ಸದ್ಯ !
ಅರ್ಥವನ್ನು ಪುರಂದರವಿಠಲ ಬಲ್ಲ !
ಉ: ಗೋಳಾಟ !
ನಂದೂ ಅದ ಗೋಳಾಟ್ ನೋಡ್ರೀ..
:(
:)
ಉ: ಗೋಳಾಟ !
ನನಗೆ ಇನ್ನೊಬ್ಬ ಸಮಾನಮನಸ್ಕರು ಇದ್ದಾರೆ ಹಾಗಾದರೆ !
ಉ: ಗೋಳಾಟ !
ಪದ್ಯ ಬರೆಯಲು ಗೋಳಾಟ :)
ಉ: ಗೋಳಾಟ !
ಗೋಳೇ ಪದ್ಯವಾಗಿ ಹೊಮ್ಮಿದೆ !
ಉ: ಗೋಳಾಟ !
ಅರ್ಥನೂ ನೀನೆ..
ಅನರ್ಥನೂ ನೀ ನೇ..
ಅನವರತ ರಕ್ಷಿಸೆಮ್ಮನು..
ಪುರ೦ದರ ವಿಠಲಾ..
ಅನ೦ತ್
ಉ: ಗೋಳಾಟ !
:)
ಉ: ಗೋಳಾಟ !
ಏನ್ರೀ ಇದು?:-D
ಸೀತ ಆರ್. ಮೊರಬ್
ಉ: ಗೋಳಾಟ !
ಗೋಳಾಟರೀ , ನಾನೇನೂ ಒಬ್ಬಂಟಿಯಲ್ಲ ; ಒಬ್ರು ಸಮಾನಮನಸ್ಕರೂ ಸಿಕ್ಕಿದ್ದಾರೆ ! ಕೆಳಗೆ ನೋಡಿ !
ಉ: ಗೋಳಾಟ !
ತುಂಬಾ ಚನ್ನಾಗಿದೆ...
ದಡ್ಡರು ಈ ಬಗೆಯ ಕವನ ಬರೆಯಲು ಆರುವರೇ? :)
ಉ: ಗೋಳಾಟ !
ಮಹೇಶ್
ಇದರಲ್ಲಿ ಜಾಣತನವೇನು ಇದೆ ?
ಯಾರು ಬೇಕಾದರೂ ಕವನ ಹೊಸೆಯಬಹುದು !
ಕೆಲವೊಂದು ಮಾರ್ಗದರ್ಷಿ ಸೂತ್ರಗಳನ್ನು ರಾ.ಶಿ ಅವರೂ ಜೀ.ಪಿ.ರಾಜರತ್ನಂ ಅವರೂ ಕೊಟ್ಟಿದ್ದಾರೆ ! ನಿಮಗೆ ಸಿಕ್ಕಿಲ್ಲವೆ ? ಯದ್ವಾ ತದ್ವಾ ಅಂತ ಪುಸ್ತಕದ ಲಿಂಕ್ ಕೊಟ್ಟಿದ್ದೆ . ಅದನ್ನು ನೋಡಿ ನೀವೂ ಕವಿಯಾಗಿ . ಅಷ್ಟೇ ಏಕೆ ಏನೆಲ್ಲ ಆಗಬಹುದು !
ಉ: ಗೋಳಾಟ !
ಇದರಲ್ಲಿ ಜಾಣತನವೇನೆಂದ್ರೆ ಕವನ ಬರೆದುದು...
ಉ: ಗೋಳಾಟ !
[ಅರೆ , ಅಂತೂ ಈ ಹಾಡನ್ನು ಪೂರ್ತಿಗೊಳಿಸಿದೆನು !]
ಒಂಚೂರು ತಿದ್ದುಪಡಿಮಾಡಿಕೊಂಡರೆ ಹೇಗೆ?
ಅಯ್ಯೋ ಅಂತೂ ಈ ಹಾಡು ಪೂರ್ಣವಾಗಲಿಲ್ಲವು!
ಉ: ಗೋಳಾಟ !
ಹ್ಹ ಹ್ಹ , ಶೀಧರಣ್ಣಾ ನಾನೂ ಹೀಗೇ ಬರೀಬೇಕು ಅಂದ್ಕೊಂಳ್ತಾ ಇದ್ದೆ . ಅಷ್ಟರಾಗೆ ನೀವೇ ಬರದಂಗೈತೆ...
ಅಯ್ಯೋ ಅಂತೂ ಈ ಹಾಡು ಯಾರಿಗೂ ಅರ್ಥವಾಗಲಿಲ್ಲವು.... ಹ್ಹೆಹ್ಹೆ
ಉ: ಗೋಳಾಟ !
ನಾವು ಯಾವಗಲೂ ’ಅಯ್ಯೋ’ ಎನ್ನುತ್ತಿರಬಾರದು ಎಂದು ಕೇಳಿದ್ದೆ, ಏಕೆಂದರೆ ’ಅಯ’ ಯಮಧರ್ಮನ ಹೆಂಡತಿ, ನಾವು ಅಯ್ಯೋ.. ಅಯ್ಯಯ್ಯೋ.. ಎಂದಾಗಲೆಲ್ಲಾ.. ಅವಳು ಬರುತ್ತಾಳಂತೆ ಕರೆದಿರಾ ಎಂದು, ಅವಳ ಹಿಂದೆ, ಅವಳ ಪತಿಯೂ ಬರುತ್ತಾನಂತೆ, ಅವಳನ್ನು ಹುಡುಕಿಕೊಂಡು...:-)
ಶ್ರೀಕಾಂತಣ್ಣ... ಬೇರೆ ಏನಾದರೂ ಬದಲಾಯಿಸಿ ಬರೀರಿ..............
ಶ್ಯಾಮಲ
ಉ: ಗೋಳಾಟ !
ಶ್ಯಾಮಲಾರೇ
ನಿಮ್ಮ ಕಾಳಜಿಗೆ ತಲೆಬಾಗಿ ಬದಲಾಯಿಸಿದ್ದೇನೆ ,
ದೇವರು ನಿಮಗೆ ಒಳ್ಳೇದು ಮಾಡುತ್ತಾನೆ .
ಉ: ಗೋಳಾಟ !
ಶ್ರೀಕಾಂತ್ ಅವರೆ,
"ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ" ಕೇಳಿದ್ದೀರ ಅಲ್ವೆ?
ಈಗ "ಅಯ್ಯೋ ಅನ್ನುವ ಬಳಿ ಅಯ್ಯಾ" ಅನ್ನಿ. (ಆಮೇಲೆ ಆ ಪರಮಾ.....ನಿಗೆ ಬಿಟ್ಟಿದ್ದು)
~ಮೀನ
ಉ: ಗೋಳಾಟ !
ನನ್ನ ಮಾತಿಗೆ ಮನ್ನಣೆ ಕೊಟ್ಟಿದ್ದಕ್ಕೆ, ಹೃತ್ಪೂರ್ವಕ ಧನ್ಯವಾದಗಳು. :-)
ಉ: ಗೋಳಾಟ !
ಅಯ್ಯೋ..ಹಯ್ ಹಯ್. ಇದನ್ನು ಓದಿಬಿಟ್ಟೆನು