ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಕನ್ನಡ ಭಾಷೆಗೆ ಕರ್ಣಾಟಕ ಭಾಷೆ ಅಂತ್ಲೂ ಅಂತಾರೆ

January 23, 2008 - 11:56am — shreekant.mishrikoti

ನಿಮಗಿದು ಗೊತ್ತೇ ?
೧) ಸಂಸ್ಕೃತ ದ ಪಠ್ಯ ಪುಸ್ತಕಗಳಲ್ಲಿ ’ ಕರ್ಣಾಟಕ’ ಭಾಷೆ ಅಂತ ಬಳಸುವರು .
೨) ಕೆಲವು ವ್ಯಾಕರಣ ಪುಸ್ತಕಗಳಲ್ಲೂ ಈ ರೀತಿ ನೋಡಿದ್ದೇನೆ. ( ಹೇಗೂ ಈ ಪಂಡಿತರು ಸಂಸ್ಕೃತ ಪಂಡಿತರೇ Smiling )
೩) ಒಂದು ಸಲ ಮುಂಬೈ ನ ಲೋಕಲ್ ಗಾಡಿಯಲ್ಲಿ ಪ್ರಜಾವಾಣಿ ಓದುತ್ತಿದ್ದೆ . ಆಗ ಹಣ ಕೇಳಲು ( ಕೆಲವು ಸಲ ಕೀಳುವದೂ ಇದೆ) ಬಂದ ಕೆಲವು ಹಿಜಡಾಗಳು ನನ್ನನ್ನೂ , ಕೈಲಿರುವ ಪೇಪರನ್ನೂ ನೋಡಿ , ’ ಏ ತೋ ಕರ್ಣಾಟಕ್ ಪಢತೇ ಹೈ; ಏ ಅಚ್ಛೇ ಲೋಗ್ ಹೋತೇ ಹೈ’ ಅಂದರು .

  • ಕನ್ನಡ
  • ಕರ್ನಾಟಕ
  • ಭಾಷೆ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 349 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 23, 2008 - 1:00pm — mahesha

ಉ: ಕನ್ನಡ ಭಾಷೆಗೆ ಕರ್ಣಾಟಕ ಭಾಷೆ ಅಂತ್ಲೂ ಅಂತಾರೆ

mahesha's picture

ಕವಿರಾಜಮಾರ್ಗದಲ್ಲಿ ಕರ್ನಾಟಕ/ಕರ್ಣಾಟಕದ ಬಳಕೆ ಇಲ್ಲ ಅಂತ ನನ್ನ ತಿಳಿವು...

ಕನ್ನಡದ ಸಂಸ್ಕ್ರುತೀಕರಿಸಿ ಇಲ್ಲವೇ.. ಕರ್‍ನಾಟ್( ಕರಿನಾಡು) ಇದರ ಸಂಸ್ಕ್ರುತೀಕರಣ.

ಮೂಲಪದ ಕರ್‍ನಾಟ್(ನಾಡ್) ಇಲ್ವೇ ಕನ್ನಡ ಇದೇ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 23, 2008 - 8:19pm — hamsanandi

ಉ: ಕನ್ನಡ ಭಾಷೆಗೆ ಕರ್ಣಾಟಕ ಭಾಷೆ ಅಂತ್ಲೂ ಅಂತಾರೆ

hamsanandi's picture

ಕವಿರಾಜಮಾರ್ಗದಲ್ಲಿ ಕರ್ನಾಟಕ ಎನ್ನುವ ಪದವಿಲ್ಲ - ಆದರೆ, ಆ ವೇಳೆಗಾಗಲೇ ಕರ್ನಾಟ/ಕರ್ಣಾಟ/ಕರ್ಣಾಟಕ ಎನ್ನುವ ಪದಗಳು ನಮ್ಮ ನಾಡಿಗೂ/ಭಾಷೆಗೂ ಬಂದಿತ್ತು (ಬೇರೆ ನುಡಿಗಳಲ್ಲಿ). ೭೫೩ ರ ದಂತಿದುರ್ಗನ ಶಾಸನದಲ್ಲೇ ( ಎಲ್ಲೋರ) ಕರ್ಣಾಟ ಎನ್ನುವ ಪದ ಬಂದಿದೆ. ಮತ್ತೆ ಕನ್ನಡದ ಪಂಚತಂತ್ರಕ್ಕೂ ಕರ್ಣಾಟಕ ಪಂಚತಂತ್ರ ಎಂದೇ ಹೆಸರು ಎಂದು ನೆನಪು. ಇನ್ನು (ಬಹಳ ನಂತರ ಬಂದ) ಗದುಗಿನ ಭಾರತಕ್ಕೂ ಕರ್ಣಾಟ ಭಾರತಕಥಾ ಮಂಜರಿ ಎನ್ನುವ ಹೆಸರಿದೆ.

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 23, 2008 - 11:22pm — Sunil Jayaprakash

ಉ: ಕನ್ನಡ ಭಾಷೆಗೆ ಕರ್ಣಾಟಕ ಭಾಷೆ ಅಂತ್ಲೂ ಅಂತಾರೆ

Sunil Jayaprakash's picture

ಹಂಸಾನಂದಿ,

ಕನ್ನಡದ ಪಂಚತಂತ್ರಕ್ಕೂ ಕರ್ಣಾಟಕ ಪಂಚತಂತ್ರ ಎಂದೇ ಹೆಸರು ಎಂದು ನೆನಪು

ನಿಮ್ಮ ನೆನಪು ಸರಿಯಾಗಿದೆ. ಇಷ್ಟೇ ಅಲ್ಲದೆ, ಸಂಸ್ಕೃತದ "ಕಾದಂಬರಿಯಿಂದ" ಪ್ರೇರಿತನಾಗಿ ನಾಗವರ್ಮನು ಬರೆದದ್ದು, "ಕರ್ಣಾಟಕ ಕಾದಂಬರಿ".

ಇನ್ನು ನಾನು ಇತ್ತೀಚೆಗೆ ಓದಿದ ಭರತೇಶ ವೈಭವದ ಪೂರ್ವನಾಟಕ ಸಂಧಿ ಎನ್ನುವಲ್ಲಿ ಈ ಕೆಳಗಿನ ಪದ್ಯ ಬರುತ್ತದೆ.

ನಾಟಕಶಾಲೆಯಂತಿಂತಿರ್ದುದೆಂದು ಕ|ರ್ಣಾಟಿಸಿ ಪೇಳಲಾನರಿಯೆ ||
ಕೋಟಿರತ್ನಗಳಿಂದ ಸುರರ ವಿಮಾನಕೆ | ಸಾಟಿಯೆಂದಾಡಿ ಬಿಡುವೆನು ||

ಹಿಂದೆ, ಉತ್ತರ ನಾಟಕ ಸಂಧಿ ಎಂಬಲ್ಲಿ "ಕನ್ನಡಿಸಿ" ಎಂಬ ಪ್ರಯೋಗ ಭರತೇಶ ವೈಭವದಲ್ಲಿ ಇರುವುದನ್ನು ಭರತೇಶ ವೈಭವದಲ್ಲಿ ಬೊಂಬೆಯಾಟ - ಕಲ್ಪು ೫ರಲ್ಲಿ ಹೇಳಿದ್ದೆ.

ನನ್ನ ಅನಿಸಿಕೆಯ ಪ್ರಕಾರ, ಕರ್ನಾಟ ಎಂಬ ಕನ್ನಡ ಪದದ, ಸಂಸ್ಕೃತ ರೂಪವೇ ಕರ್ಣಾಟ (ಕರ್ಣೆ ಅಟತಿ ಇತಿ ಕರ್ಣಾಟ ಎಂಬ ವಿಗ್ರಹ ವಾಕ್ಯ ದೊರಕುತ್ತಾದರೂ ಅದು ಎಂದಿನಿಂದ ಪ್ರಚಲಿತದಲ್ಲಿದೆ ಎಂಬುದಾಗಲೀ, ಅದರ ವಿಶ್ವಾಸಾರ್ಹತೆಯಾಗಲೀ ನನಗೆ ತಿಳಿದಿಲ್ಲ). ಹಿಂದೆ, ನಮ್ಮ ರಾಜ್ಯದಲ್ಲಿ "ನೊಣ ಜಗಳ" ಎಂಬ ತುಂಬಾ ದೊಡ್ಡ ಚರ್ಚೆಯಾಗಿ ದೊಡ್ಡ ದೊಡ್ಡವರೆಲ್ಲ ಪರಸ್ಪರ ರಾಡಿಯಾಡಿದ್ದರಂತೆ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 24, 2008 - 10:47am — mahesha

ಉ: ಕನ್ನಡ ಭಾಷೆಗೆ ಕರ್ಣಾಟಕ ಭಾಷೆ ಅಂತ್ಲೂ ಅಂತಾರೆ

mahesha's picture

ದಂತೀದುರ್ಗನ ಶಾಸನ ಸಕ್ಕದದಲ್ಲಿ ಇದ್ದರೆ .. ಅದು ಲೆಕ್ಕಕ್ಕೆ ಬೇಡ... ಅವರು ಕನ್ನಡದ ಅರಸರ ಹೆಸರುಗಳನ್ನು ಚೇಂಚು ಮಾಡಿದ್ದಾರೆ.

ಕಲೆ ಇದು ಕನ್ನಡದ ಒರೆ

ಆದರೂ... ಕರ್‍ನಾಟ-ದ ಅಪಭ್ರಂಶ( ಸಂಸ್ಕೃತೀಕರಿಸಿ ಉಚ್ಚರಣೆಯನ್ನು ಮಾರ್‍ ಮಾಡಿದ) ಕರ್ಣಾಟ.

ಆದರೆ ನಮ್ಮ ನೆಂಟು ನುಡಿ ತಮಿಳ ಹಳೆಯ ಬರಹದಲ್ಲಿ ಕರುನಾಟ/ಡರ್‍, ಕರುನಾಟ/ಡ(ಶಿಲ್ಪಾಧಿಕಾರಂ) ಎಂದೇ ಇರೋದು. ಮಯ್ಸೂರನ್ನು ಎರ್ಮೆನಾಡು(ಶಿಲ್ಪಾಧಿಕಾರಂ) ಎಂದೇ ಹೇಳಿರೋದು..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 15, 2008 - 5:36am — kannadakanda

ಉ: ಕನ್ನಡ ಭಾಷೆಗೆ ಕರ್ಣಾಟಕ ಭಾಷೆ ಅಂತ್ಲೂ ಅಂತಾರೆ

kannadakanda's picture

ಕರ್ಣಾಟ=ಕನ್ನಡ. ಕರ್ಣಾಟಕ= ಕನ್ನಡ ಮಾತನಾಡುವವರ ಪ್ರದೇಶ. ಅಂದರೆ ಕರ್ಣಾಟ=ಕನ್ನಡನುಡಿ.
ಕರ್ಣಾಟಕ=ಕನ್ನಡನಾಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದ ಹೈಜಾಕ್-ಕನ್ನಡ ಪಂಡಿತರಿಂದ?
  • Avestan ವೇದ-ಭಾಷೆಯ ಮಾತೃಭಾಷೆ.
  • ಕನ್ನಡ, ತಮಿೞ್, ಮಲಯಾಳಂ, ತೆಲುಗು
  • ಕನ್ನಡ, ತಮಿೞ್, ಮಲಯಾಳಂ, ತೆಲುಗು
  • ಮಂಗಳೂರು ಕನ್ನಡ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ನೇಹ ಬ೦ಧನ
  • ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA
  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • bvenkatraya
    ಉ: ಗೆದ್ದೆತ್ತಿನ ಬಾಲ
    October 16, 2008 - 12:39pm
  • gurubaliga
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:38pm
  • mahesha
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:34pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:32pm
  • gurubaliga
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:29pm
  • mowna
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:10pm
  • ASHOKKUMAR
    ಉ: ಸೈಕಲ್ ರಿಕ್ಷಾಗೆ ಸೌರಶಕ್ತಿ
    October 16, 2008 - 12:05pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:05pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:01pm
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:00pm
ಇನ್ನಷ್ಟು
ಈಗಿನಂತೆ 17 ಸದಸ್ಯರು ಮತ್ತು 124 ಅತಿಥಿಗಳು ಆನ್ಲೈನ್ ಇರುವರು.


ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator