ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಸಂಸ್ಕೃತದಲ್ಲಿ ಕನ್ನಡದ (?) ’ಇದು’ ಮತ್ತು ’ಅದು’
ಸಂಸ್ಕೃತದಲ್ಲಿ ಇರುವ ’ಇದಂ’ ಕನ್ನಡದ್ದು ಎಂದು ಸಂಪದದಲ್ಲಿ ಚರ್ಚೆ ಆಗಿತ್ತು .
ಆಗ ’ಅದು’ ಕೂಡ ಇದೆಯೇ ಎಂದು ಕೇಳಿದ್ದೆ .
ಈಗ ’A Grammar of the Ancient Dialect of the Kannada Language - ಹಳಗನ್ನಡ ವ್ಯಾಕರಣ ಸೂತ್ರಗಳು’ ಎಂಬ ಪುಸ್ತಕದಲ್ಲಿ ಈ ಶಬ್ದಗಳು ಸಿಕ್ಕವು .
ಅದ: ಪುತ್ರಂ - ಅವನ ಮಗನು .
( ಜತೆಗೆ ಇದನ್ನಿಮಿತ್ತಂ - ಈ ನಿಮಿತ್ತ )

- shreekant.mishrikoti ರವರ ಬ್ಲಾಗ್
- Login or register to post comments
- 261 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಸಂಸ್ಕೃತದಲ್ಲಿ ಕನ್ನಡದ (?) ’ಇದು’ ಮತ್ತು ’ಅದು’
ತಪ್ಪು...
ಅದಃ ಪುತ್ರಂ ಅಂದ್ರೆ ಅವಳ ಮಗ, ಅದರ ಮಗ ಕೂಡ...
ಇದನ್ನಿಮಿತ್ತಂ = ಇವನ/ಇವಳ/ಇವರ/ಇವುಗಳ/ಇದರ ಸಲುವಾಗಿ
ದಯವಿಟ್ಟು ಕನ್ನಡ ಸರ್ವನಾಮ( ಹೀಗೇ ಏನೋ ) ಶಂಕರ ಬಟ್ರ ಹೊತ್ತಗೆ ಓದಿ.
ಕನ್ನಡ ಅದು != ಸಃ/ತತ್/ಸಾ
ಉ: ಸಂಸ್ಕೃತದಲ್ಲಿ ಕನ್ನಡದ (?) ’ಇದು’ ಮತ್ತು ’ಅದು’
ಸಮೀಪೇ ಇದಮಃ ರೂಪಂ ಸಮೀಪತರ ಏತದ: ದೂರೇ ಸ್ಯಾದದಸಃ ತದಃ ಪರೋಕ್ಷೇ ಚ ವಿಜಾನೀಯಾತ್
ಅಂದರೆ ಸಮೀಪದ ವಸ್ತುಗಳಿಗೆ ’ಇದಮ್’ ಶಬ್ದದ ರೂಪಗಳನ್ನು ಅಂದರೆ ಅಯಂ, ಇಯಂ, ಇದಂ ಇತ್ಯಾದಿ. ತೀರಾ ಹತ್ತಿರದಲ್ಲಿದ್ದರೆ ’ಏತದ್’ ಶಬ್ದದ ರೂಪಗಳನ್ನು ಅಂದರೆ ಏಷ:, ಏಷಾ, ಏತತ್ ಇತ್ಯಾದಿ ದೂರವಿದ್ದರೆ ’ಅದಸ್’ ಶಬ್ದದ ರೂಪಗಳನ್ನು ಅಂದರೆ ಅಸೌ, ಅದಃ ಇತ್ಯಾದಿ ರೂಪಗಳನ್ನು ಪರೋಕ್ಷೇ ಅಂದರೆ ಕಾಣದಷ್ಟು ದೂರ ಇರುವ ಅಥವಾ ಮಾತಾಡುವಾಗ ಎದುರಿಗಿಲ್ಲದ ವಸ್ತುಗಳನ್ನು ಕುಱಿತು ಮಾತಾಡುತ್ತಿದ್ದರೆ ’ತದ್’ ಶಬ್ದದ ರೂಪಗಳನ್ನು ಅಂದರೆ ಸಃ, ಸಾ, ತತ್ ಇತ್ಯಾದಿ ರೂಪಗಳನ್ನು ಬೞಸಬೇಕೆನ್ನುತ್ತಾರೆ ಸಂಸ್ಕೃತದಲ್ಲಿ.
ಉ: ಸಂಸ್ಕೃತದಲ್ಲಿ ಕನ್ನಡದ (?) ’ಇದು’ ಮತ್ತು ’ಅದು’
ಇದನ್ನಿಮಿತ್ತ. ಅದಃಪುತ್ರ ಹೀಗೆ ಪೂರ್ಣವಾಗಿ ಸಂಸ್ಕೃತ ಶಬ್ದಗಳ ಜೊತೆಗೆ ಕನ್ನಡದಲ್ಲಿ ಬೞಸುವ ಶಬ್ದಗಳು. ಆದರೆ ಇದಂ ನೆಪ. ಅದಃ ಮಗಂ ಇವು ಶುದ್ಧ ತಪ್ಪುಗಳು. ಸಂಸ್ಕೃತದ ಪದಗುಚ್ಛಗಳನ್ನು ಹಾಗೆಯೇ ಬೞಸಬೇಕು. ಕನ್ನಡ ಶಬ್ದಗಳ ಜೊತೆ ಬೞಸಬಾರದು. ಇದು ತಪ್ಪು.