ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಮತ್ತ್ವೆ ’ಉ’ ’ಊ’ :)

January 23, 2008 - 12:51pm — shreekant.mishrikoti

http://sampada.net/forum/3067 ಮತ್ತು
http://sampada.net/blog/%E0%B2%B5%E0%B3%88%E0%B2%AD%E0%B2%B5/21/12/2007/...
( ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ)
ಇಲ್ಲಿ ’ಊ’ ಮತ್ತು ’ಉಲ್ಲಿ’ ಕುರಿತ ಚರ್ಚೆ ಶುರುವಾಗಿ ಎಲ್ಲೆಲ್ಲೋ ಹೋಗಿತ್ತು .
ಸುನೀಲ ಜಯಪ್ರಕಾಶರು ’ಉ/ಊ’ದಿಂದ ಸಿದ್ಧ ಮಾಡಿದ ಪದವೊಂದನ್ನು ರ್ಯಾಂಡಂ ಗೆ ಬಳಸಬಹುದು ಎಂದು ಸೂಚಿಸಿದ್ದರು .
ಅವರು ಸೂಚಿಸಿದ ಉದಿತ - ಉದಯಿಸಿದ ಎಂಬರ್ಥದ ಶಬ್ದಕ್ಕೂ ಗೊಂದಲ ಉಂಟಾಯಿತು .. ಮತ್ತೆ ಈ ಉದು - ನಮ್ಮ ಕ್ರಿಯಾಪದಗಳಲ್ಲಿದೆ ಎಂಬ ಗ್ರಹಿಕೆಯೂ ನನಗೆ ಯಾಕೋ ಸರಿ ಕಾಣ್ತಿಲ್ಲ .

(ಈ ಮಾತು ಹೇಳುವಾಗ ನಾನು ವ್ಯಾಕರಣವನ್ನು ತಿಳಿದಿಲ್ಲ ಎಂಬುದನ್ನು ದಯವಿಟ್ಟು ಮರೆಯಬೇಡಿ. ನಾನು ಭಾಶೆಯನ್ನ ಬಳಕೆಯಿಂದಷ್ಟೇ ಬಲ್ಲೆ . ಅಧ್ಯಯನದಿಂದ ಅಲ್ಲ )

ಈಗ ನಾನು ಓದುತ್ತಿರುವ ’A Grammar of the Ancient Dialect of the Kannada Language - ಹಳಗನ್ನಡ ವ್ಯಾಕರಣ ಸೂತ್ರಗಳು’ ಎಂಬ ಹೆಸರಿನ ಕನ್ನಡ ಪುಸ್ತಕದಲ್ಲಿ ’ಊ’ ಕುರಿತಾದ ವಿಚಾರಕ್ಕೆ ಇಂಬು ಕೊಡುವ ಕೆಲವು ಶಬ್ದ
ಅವು, ಇವು , ಉವು
ಅವರು , ಇವರು , ಉವರು
ಅತ್ತ , ಇತ್ತ , ಉತ್ತ ,
ಅಂದು, ಇಂದು, ಎಂದು , ಉಂದು ,
ಅಂತಹ , ಇಂತಹ , ಉಂತಹ , ಎಂತಹ
ಅಂತಪ್ಪ , ಇಂತಪ್ಪ , ಉಂತಪ್ಪ , ಎಂತಪ್ಪ

ಇಂತಪ್ಪ ಉ/ಊ ಅನ್ನ ಮತ್ತೆಲ್ಲೆಲ್ಲಿ ಬಳಸಬಹುದೋ ನೋಡಿ .

  • ಕನ್ನಡ
  • ರ್ಯಾಂಡಂ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 377 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 23, 2008 - 1:06pm — mahesha

ಉ: ಮತ್ತ್ವೆ ’ಉ’ ’ಊ’ :)

mahesha's picture

ಈ ಸಂಗತಿಯಲ್ಲಿ ಕನ್ನಡ(ತಮಿಳೂ/ತೆಲುಗು ಕೂಡ) ಇಂಗಲೀಸಿಗೆ ಸಮ

ನಾಲ್ಕು ಅಕ್ಕರಗಳು...

ಆ ಈ ಊ ಏ

ಆ = that
ಈ = this
ಊ = something, someone...
ಏ = which, whoo...

ಇವು ಪದಗಳಲ್ಲಿ ಗಿಡ್ಡಸ್ವರವಾಗುವುದು

ಅ/ಇ/ಉ/ಎ-ವನು
ಅ/ಇ/ಉ/ಎದು ( ಎದು = ಯಾವುದು )
ಅ/ಇ/ಉ/ಎ-೦ತಪ್ಪ

ಶಂಕರ ಬಟ್ರ ನಿಜವಾಗಲು ಹಳಗನ್ನಡ ವ್ಯಾಕರಣ ಎಂತಹದ್ದು ಓದಿ.!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 23, 2008 - 2:23pm — Sunil Jayaprakash

ಉ: ಮತ್ತ್ವೆ ’ಉ’ ’ಊ’ :)

Sunil Jayaprakash's picture

ಈ ಉ, ಊ ವಿಚಾರವಾಗಿ ಹಂಚಿಕೊಳ್ಳಲು ಅನೇಕ ವಿಷಯಗಳು ನನ್ನಲ್ಲಿ ತುಂಬಾ ಹಿಂದೆಯೇ ಇತ್ತು. ಆದರೆ ಆ ಕವಿರಾಜಮಾರ್ಗ ಮತ್ತು ಕನ್ನಡ ವಿಕಿಪೀಡಿಯ ಎಳೆಯಲ್ಲಿ ತುಂಬಾ ತುಂಬಾ ಬೇಸರವಾಗಿ ಹೊರನಡೆದಿದ್ದೆ. ಆ ಎಳೆಯನ್ನು ಮತ್ತೆ ತೆಗೆದು ನನ್ನ ಆಲೋಚನೆಗಳಿಗೆ ಕಿಚ್ಚು ಹಚ್ಚಿದಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 24, 2008 - 12:33pm — Sunil Jayaprakash

ಉ: ಮತ್ತ್ವೆ ’ಉ’ ’ಊ’ :)

Sunil Jayaprakash's picture

ಮತ್ತೆ ಈ ಉದು - ನಮ್ಮ ಕ್ರಿಯಾಪದಗಳಲ್ಲಿದೆ ಎಂಬ ಗ್ರಹಿಕೆಯೂ ನನಗೆ ಯಾಕೋ ಸರಿ ಕಾಣ್ತಿಲ್ಲ .

ನಿಮ್ಮ ಗ್ರಹಿಕೆ ನಿಜ. ಉದು, ಉಲ್ಲಿ, ಉವನು, ಉವರು, ಉತ್ತ, ಉಂತಹ, ಉಂತಪ್ಪ, ಉನಿತ್ತು ಇವುಗಳು ಕ್ರಿಯಾ ಪ್ರತ್ಯಯಗಳಲ್ಲ ಅವು ಸರ್ವನಾಮಗಳು+. ಇವುಗಳಿಗೆ ಸ್ವತಂತ್ರ existence(ಇರುವಿಕೆ) ಇದೆ.

"ಊ" ಎಂಬುದು ಉದು, ಉಲ್ಲಿ, ಉವನು, ಉವರು, ಉತ್ತ, ಉಂತಹ, ಉಂತಪ್ಪ ಪದಗಳಿಗೆ ಸರ್ವನಾಮ. ಈ ವಿಚಾರವನ್ನು ಸ್ಪಷ್ಟವಾಗಿ ತಿಳಿಯಬೇಕಿದ್ದರೆ. ಕೆಳಗಿನ ಉದಾಹರಣೆ ನೋಡಿ.

ಯಾವುದಾದರೂ = ಯಾವ + ಉದು + ಆದರೆ + ಊ

ಉದು - ಯಾವುದೋ ವಸ್ತುವತ್ತೆ ಬೊಟ್ಟು ಮಾಡುತ್ತಿರುವ ಪದ.
ಊ - ಹಿಂದೆ ಬಳಕೆಯಾದ "ಉದು" ಬದದ ಬದಲು ಬಂದಿರುವ ಸರ್ವನಾಮ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 24, 2008 - 1:44pm — mahesha

ಉ: ಮತ್ತ್ವೆ ’ಉ’ ’ಊ’ :)

mahesha's picture

"ಉದು - ಯಾವುದೋ ವಸ್ತುವತ್ತೆ ಬೊಟ್ಟು ಮಾಡುತ್ತಿರುವ ಪದ."
ಈ ಸಾಲನ್ನು ಮತ್ತೆ ಓದು...

ಉದು = ಏ/ಯಾವ ಸರಕಿನೆಡಗೂ ಬೆಟ್ಟು ಮಾಡದೇ, ಯಾವುದಾದರೂ, ಯಾವುದೋ ಒಂದು ಎಂಬ ಬಗೆ.

ಯಾವುದಾದರೂ = ಉದಾದರೂ
ಯಾವನಾದರೂ = ಉವನಾದರೂ

ಯಾವ ತಂದೆಯೂ ತನ್ನ ಯಾವ ಮಕ್ಕಳಿಗೂ ಎಂದು ಕೇಡುಬಯಸನು = ಊ ತಂದೆಯೂ ತನ್ನ ಊ ಮಕ್ಕಳಿಗೂ ಉಂದೂ ಕೇಡುಬಯಸನು

ಯಾವಾಗಲೂ ದಿಟವನ್ನಾಡಬೇಕು = ಊಗಲೂ ದಿಟವನ್ನಾಡಬೇಕು

ಎಲ್ಲೋ ಇದ್ದವರು ಏನೋ ಮಾಡಿದರು = ಉಲ್ಲೋ ಇದ್ದವರು ಉದನ್ನೋ ಮಾಡಿದರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 24, 2008 - 1:50pm — Sunil Jayaprakash

ಉ: ಮತ್ತ್ವೆ ’ಉ’ ’ಊ’ :)

Sunil Jayaprakash's picture

"ಯಾವ ತಂದೆಯೂ(ಊ) ತನ್ನ ಯಾವ ಮಕ್ಕಳಿಗೂ(ಊ) ಎಂದೂ(ಊ) ಕೇಡುಬಯಸನು". ತುಂಬಾ ತುಂಬಾ ಒಳ್ಳೆಯ ಉದಾಹರಣೆ. ನನ್ನಿ, ಮಹೇಶ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 7, 2008 - 10:15am — kannadakanda

ಉ: ಮತ್ತ್ವೆ ’ಉ’ ’ಊ’ :)

kannadakanda's picture

ಕಿಟ್ಟೆಲ್‍ ನಿಘ್ಹಂಟು ಗಮನಿಸಿ. ಅದು=ದೂರದಲ್ಲಿರುವ ವಸ್ತು. ಇದು=ಹತ್ತಿರದಲ್ಲಿರುವ ವಸ್ತುವನ್ನು ಸೂಚಿಸುತ್ತದೆ. ಉದು=ಇವೆರಡಱ ನಡುವಿನ ವಸ್ತುವನ್ನು ಸೂಚಿಸುತ್ತದೆ. ಕಿಟ್ಟೆಲ್‍ ಅವರು ಅಷ್ಟಕ್ಕೆ ನಿಲ್ಲದೆ ಅದು ಇದುವಿನ ದೂರ ಉದು ಇದುವಿನ ದೂರಕ್ಕಿಂತ ಹೆಚ್ಚಿರಬೇಕೆನ್ನುತ್ತಾರೆ. ಅಂದರೆ ಉದು ಅದು ಮತ್ತು ಇದುಗಳ ನಡುವೆ ಇರಬೇಕೆನ್ನುತ್ತಾರೆ. ಇದನ್ನೇ ಅವನು, ಇವನು, ಉವನು, ಅವಳು, ಇವಳು, ಉವಳು ಹಾಗೆ ಈ ಎಲ್ಲಾ ತೆಱದ ಆ ಈ ಊ ಗಳಿಗೆ ಅನ್ವಯಿಸಬೇಕೆನ್ನುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 7, 2008 - 1:07pm — Sunil Jayaprakash

ಉ: ಮತ್ತ್ವೆ ’ಉ’ ’ಊ’ :)

Sunil Jayaprakash's picture

ಕಿಟ್ಟೆಲ್ ಕನ್ನಡದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದ್ದಾರಾದರೂ, ಕನ್ನಡ ಅಲ್ಲಿಗೇ ನಿಲ್ಲಬೇಕಿಲ್ಲ ಅಲ್ಲವೇ ?

ಕನ್ನಡಕಂದರೆ, ಅತ್ಯಂತ ಸರಳ ಉದಾಹರಣೆಯ ಮೂಲಕ, ಈ ಉ, ಊ ಗೊಂದಲವನ್ನು ಮರೆತುಹೋಗುವ ಮುಂಚೆ ಒಂದು ಸಣ್ಣ ಚರ್ಚೆ ಎಳೆಯಲ್ಲಿ ಬಿಡಿಸಿದ್ದೇನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 7, 2008 - 2:57pm — ವೈಭವ

ಉ: ಮತ್ತ್ವೆ ’ಉ’ ’ಊ’ :)

ವೈಭವ's picture

ಕನ್ನಡಕಂದ, ಸುನಿಲ,

ಕಿಟ್ತೆಲ್ ಕೂಡ ಇನ್ನಿತರಂತೆ ಸಕ್ಕದ/ಇಂಗಳೀಸ್ ವ್ಯಾಕರಣ ಕಟ್ಟಳೆಗಳ ಮೇಲೆ ಕನ್ನಡದ ವ್ಯಾಕರಣವನ್ನು ಬರೆಯಲ್ಲು ಮೊಗಸಿದ್ದಾರೆ ಅಂತ ಶಂಕರಬಟ್ಟರು ತಮ್ಮ ಹೊತ್ತಿಗೆಗಳಲ್ಲಿ ಹೇಳಿದ್ದಾರೆ. ಅವುಗಳಿಗೆ ಮಾದರಿಗಳನ್ನು ಕೊಟ್ಟಿದ್ದಾರೆ. ಹುರುಪಿದ್ದರೆ ಶಂಕರಬಟ್ಟರ ಹೊತ್ತಿಗೆ ಓದಿ.
ನಾನು ಸುನಿಲ ಕೊಟ್ಟಿರುವ ಓಸುಗರಗಳಿಂದ ಅವನ ವಾದವನ್ನ ಒಪ್ಪುತೇನೆ.

ಉದು ,ಊ randomness ಸೂಚಿಸುವ ಕನ್ನಡ ಪದಗಳು. ಎರಡನೇ ಮಾತೇ ಇಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 7, 2008 - 1:15pm — Sunil Jayaprakash

ಉ: ಮತ್ತ್ವೆ ’ಉ’ ’ಊ’ :)

Sunil Jayaprakash's picture

ಕನ್ನಡ ಕಂದರೆ, ಈ ಪದವನ್ನು ಇಲ್ಲಿಯಾದರೂ ಬಿಡಿಸಿ, ಅಥವಾ ಮರೆತುಹೋಗುವ ಮುಂಚೆ ಎಳೆಯಲ್ಲಿಯಾದರೂ ಬಿಡಿಸಿ. ಈಗ ನೋಡಿ, ನಾವು ಎಲ್ಲರೂ ಒಂದು ಪದ ಬಳಸ್ತೀವಿ. "ಯಾವುದಾದರೂ",

ಯಾವುದಾದರೂ = ರೂಢ್ಯರ್ಥದಲ್ಲಿ = ಯಾವುದೋ ಒಂದು = random

ಈಗ ಗಮನಿಸಿ, ಯಾವುದಾದರೂ = "ಯಾವ ಉದು ಆದರೆ ಆ ಊ". ನಾಲ್ಕು ಲೋಪ ಸಂಧಿಗಳು ಇವೆ. ಇಲ್ಲಿ "ಉದು" ಮತ್ತು "ಊ"ಗಳು ಇರುವುದರಿಂದಲೇ, "ಯಾವುದಾದರೂ" ಪದಕ್ಕೆ randomness ಸೂಚಿಸುವ ಅರ್ಥ ಬಂದಿರುವದು. ಹಾಗಾಗಿ, ಉದು, ಉವನು, ಉಲ್ಲಿ, ಊಗಳು "ನಡುವಿನದ್ದು" ಎಂಬ ಅರ್ಥ ಸರಿಹೊಂದುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಸ್ಕೃತದಲ್ಲಿ ಕನ್ನಡದ (?) ’ಇದು’ ಮತ್ತು ’ಅದು’
  • ಆ ಈ ಊ ಏ
  • ಉಲ್ಲಿ, ಊ ಇವುಗಳ ಬಳಕೆ ಹೇಗೆ? - ಕವಿರಾಜಮಾರ್ಗ ಮಾದರಿ
  • ಕನ್ನಡದಲ್ಲಿನ ಒತ್ತಕ್ಷರಗಳು - ಭಾಗ ಎರಡು (೨)
  • ಮರೆತುಹೋಗುವ ಮುಂಚೆ ಒಂದು ಸಣ್ಣ ಚರ್ಚೆ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
  • ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
  • ಡೈರಿಯ ಕೆಲವು ಹಾಳೆಗಳು - ಭಾಗ ೯
  • ಅವಮಾನ್ ಅಂದರೆ ಯಾರು ? He man :-)
  • ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
  • ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
  • ಶಿವಮಣಿ ಎಂಬ ಅದ್ಭುತ ಪ್ರತಿಭೆ
  • ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:58pm
  • Rasikara Rajya
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 11:56pm
  • hpn
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 10, 2008 - 11:52pm
  • hamsanandi
    ಉ: ಸಂಗೀತ ನವರಾತ್ರಿ - ವಿಜಯ ದಶಮಿ
    October 10, 2008 - 11:17pm
  • hpn
    ಉ: ಪತನದ ಕತೆ
    October 10, 2008 - 10:16pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೯
    October 10, 2008 - 10:10pm
  • hpn
    ಉ: ಪತನದ ಕತೆ
    October 10, 2008 - 10:07pm
  • hamsanandi
    ಉ: ಪತನದ ಕತೆ
    October 10, 2008 - 9:52pm
  • omshivaprakash
    ಉ: ಲಿನಕ್ಸಾಯಣ - ೨೨ - ಗ್ನೋಮ್ ಸಬ್ ಟೈಟಲ್ಸ್ - ದೃಶ್ಯಾವಳಿಯಲ್ಲಿ ಕನ್ನಡ
    October 10, 2008 - 9:30pm
  • hamsanandi
    ಉ: ವಿಜಯದಶಮಿ: ಇಂದು ರಸಿಕರ ರಾಜ್ಯದ ಸ್ಥಾಪನೆ
    October 10, 2008 - 9:27pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 63 ಅತಿಥಿಗಳು ಆನ್ಲೈನ್ ಇರುವರು.


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator